ಜಿಲ್ಲೆಗೂ ಕಾಲಿಟ್ಟ ರೇಷ್ಮೆ ನೂಲು ಉದ್ಯಮ

ಮತ್ತೀಕೆರೆ ಜಯರಾಮ್
ಅಪ್ಪಟ ಕೃಷಿ ಜಿಲ್ಲೆ ಮಂಡ್ಯದಲ್ಲೂ ರೇಷ್ಮೆ ನೂಲು ತೆಗೆಯುವ ಉದ್ಯಮ ಕಾಲೂರುತ್ತಿದೆ. ಸರಕಾರದ ಉತ್ತೇಜನದ ಲಾಭ ಪಡೆದು, ಜಿಲ್ಲೆಯ ೩೦ಕ್ಕೂ ಹೆಚ್ಚು ಮಂದಿ ಈ ಉದ್ಯಮದಲ್ಲಿ ತೊಡಗಿಸಿಕೊಂಡು ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ. 
ಮುಚ್ಚಿರುವ ಆಲೆಮನೆಗಳನ್ನೇ ಮಾರ್ಪಡಿಸಿಕೊಂಡು ರೇಷ್ಮೆ ನೂಲು ತೆಗೆಯುವ ಉದ್ಯಮಕ್ಕೆ ತೊಡಗಿದವರು ಹಲವರಿದ್ದಾರೆ. ಇನ್ನೂ ಕೆಲವರು ಹೊಸದಾಗಿ ಶೆಡ್ ನಿರ್ಮಿಸಿ, ಈ ಗುಡಿ ಕೈಗಾರಿಕೆಯೊಂದಿಗೆ ಉದ್ದಿಮೆದಾರರಾಗಿದ್ದಾರೆ. 
ಇಂಥದ್ದೊಂದು ಗುಡಿ ಕೈಗಾರಿಕೆ ಮಂಡ್ಯ ಸಮೀಪದ ಮರಲಿಂಗನದೊಡ್ಡಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಿದೆ. ಗ್ರಾಮದ ಯೋಗೇಶ್ ತಮ್ಮ ಆಲೆಮನೆಯನ್ನೇ ರೇಷ್ಮೆ ಪಿಲ್ಲಿಂಗ್(ನೂಲು ತೆಗೆಯುವ) ಕೇಂದ್ರ ಮಾಡಿಕೊಂಡಿದ್ದಾರೆ. ಅದರಿಂದ ಕಟ್ಟಡಕ್ಕೆ ತಗಲುವ ವೆಚ್ಚ ಉಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ