ಶುಚಿತ್ವವಿಲ್ಲದೆ ಹೆಚ್ಚುತ್ತಿದೆ ಚಿಕೂನ್ ಗುನ್ಯಾ


ದೇಶದೆಲ್ಲೆಡೆ ಹಂದಿಜ್ವರದ ಭೀತಿ ಕಾಡುತ್ತಿದ್ದರೆ ಇತ್ತ ಹಿಂದುಳಿದ ಯಳಂದೂರು ತಾಲೂಕಿನಲ್ಲಿ ಚಿಕೂನ್ ಗುನ್ಯಾ ಜ್ವರದ ತಾಪ ಜನರನ್ನು ಬಾಧಿಸುತ್ತಿದೆ.

ದಸರಾ ಭದ್ರತೆಗೆ ಆರ್ಎಎಫ್, ಸಿಐಎಸ್ಎಫ್ ಯೋಧರು


ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸೂಕ್ತ ರಕ್ಷಣೆ ಹಾಗೂ ಬಿಗಿಭದ್ರತೆ ನೀಡುವ ಸಂಬಂಧ ಕ್ಷಿಪ್ರ ಪಡೆಯ ಜತೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ನೆರವು ಪಡೆಯಲು ಸರಕಾರ ಚಿಂತನೆ ನಡೆಸಿದೆ.

ಅಲೆದಾಟ ತಪ್ಪಿಸಲು ಹಳೆ ಕಟ್ಟಡದಲ್ಲೇ ಪಾಠ


ಇಲ್ಲಿ ಇರೋದು ಒಂದೇ ಶಾಲೆ.ಆದರೆ ಕೊಠಡಿಗಳು ಮಾತ್ರ ಬೇರೆ ಬೇರೆ.ಮಕ್ಕಳಿಗೆ ಊಟ ಒಂದು ಕಡೆ, ಪಾಠ ಮತ್ತೊಂದು ಕಡೆ. ಈ ಅಲೆದಾಟ ತಪ್ಪಿಸಲು ಇಕ್ಕಟ್ಟಾದ ಹಳೇ ಕಟ್ಟಡದಲ್ಲೇ ಪಾಠ !

ಅಪಾಯದಲ್ಲಿ ಪೊನ್ನಂಪೇಟೆ ಸರಕಾರಿ ಪ್ರೌಢಶಾಲೆ ಕಟ್ಟಡ


ಸುರಿದ ಭಾರಿ ಮಳೆ, ರಭಸ ಗಾಳಿಯ ಅಬ್ಬರಕ್ಕೆ ಪೊನ್ನಂಪೇಟೆ ಸರಕಾರಿ ಪ್ರೌಢಶಾಲೆಯ ನಾಲ್ಕು ಕೊಠಡಿಗಳ ಮೇಲ್ಚಾವಣಿ ಹಾರಿಹೋಗಿದ್ದು, ಕಟ್ಟಡ ಕುಸಿಯುವ ಹಂತಕ್ಕೆ ತಲುಪಿದೆ.

ರಾಮಾಪುರ ಹೋಳು, ತಪ್ಪದ ಗೋಳು !


ಹೆಸರಿಗೆ ಒಂದೇ ಗ್ರಾಮ. ಆದರೆ ಗ್ರಾಮಪಂಚಾಯಿತಿಗಳು ಎರಡು. ಅಷ್ಟೆ ಅಲ್ಲ, ತಾಲೂಕುಗಳೂ ಎರಡು.ಹೀಗೆ ಆಡಳಿತಾತ್ಮಕವಾಗಿ ಎರಡು ಹೋಳಾಗಿರುವ ಈ ಗ್ರಾಮದ ಅಭಿವೃದ್ಧಿ ಮಾತ್ರ ಮರೀಚಿಕೆ !

ರಸ್ತೆಗಳ ದುರವಸ್ಥೆಗೂ ಭವ್ಯ ಪರಂಪರೆ


ಪಾಲಿಕೆಯೆಂಬ, ಪಾಲಿಕೆ ಸದಸ್ಯರೆಂಬ, ಶಾಸಕರೆಂಬ, ಜಿಲ್ಲಾ ಉಸ್ತುವಾರಿ ಸಚಿವರೆಂಬ ಬೆಕ್ಕುಗಳಿಗೆ ನಾಗರೀಕರೆ ಗಂಟೆ ಕಟ್ಟುವ ಕಾಲ ಬಂದಿದೆ. ದಸರಾ ಎಂಬ ಉತ್ಸವದಲ್ಲಿ ಬಂದವರ ಎದುರು ಮರ್ಯಾದೆ ಹೋಗುವ ಬದಲು ಗಂಟೆ ಕಟ್ಟದಿದ್ದರೆ ಆತಿಥೇಯರಾದ ನಮ್ಮೆಲ್ಲರ ಮಾನ ಹರಾಜಾಗುವುದು ಖಂಡಿತ.

ಮೈಸೂರಿನಲ್ಲಿ ಮಹಿಳಾ ಸಾಮ್ರಾಜ್ಯ


ಮಂಡ್ಯ ಜಿಲ್ಲೆಯ ಐದು ತಾಲೂಕಿನಲ್ಲಿ ಮಹಿಳಾ ತಹಸೀಲ್ದಾರ್, ಇಬ್ಬರು ಉಪ ವಿಭಾಗಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಈಗ ಮೈಸೂರಿನಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳು ಬಂದಿದ್ದಾರೆ. ಆ ಮೂಲಕ ಮಹಿಳಾ ಸಾಮ್ರಾಜ್ಯವೇ ನಿರ್ಮಾಣವಾಗಿದೆ.

ನಿರ್ವಹಣೆ ಇಲ್ಲದೆ ಬಡವಾದ ಗೋಡಂಬಿ ತೋಟ


ಗೋಡಂಬಿ ಅಭಿವೃದ್ಧಿ ತೋಟಕ್ಕೆ ನೀರಿನ ಅಭಾವ, ಸಿಬ್ಬಂದಿ ಕೊರತೆ, ನಿರ್ವಹಣೆ ಇಲ್ಲದೇ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ.

ಸ್ವಾಮೀಜಿಗಳ ಸಾಹಸ ಜಲಕ್ರೀಡೆ


ಮಠ-ಗುರುಪೀಠದಲ್ಲಿನ ನಿರ್ಬಂಧಿತ ಕಟ್ಟುಪಾಡಿನ ದಿನಚರಿಗಳನ್ನು ಬದಿಗಿಟ್ಟು ಸ್ವಾಮೀಜಿಗಳು ಗುರುವಾರ ಕೊಡಗಿನ ಬರಪೊಳೆಯ ನದಿಯಲ್ಲಿ ಸಾಹಸ ಜಲಕ್ರೀಡೆಯಲ್ಲಿ ತೊಡಗಿದ್ದದು ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿತು.

ಬಸವಾಪುರ ಅನೈರ್ಮಲ್ಯಕ್ಕೆ ಬಸವಳಿದ ಗ್ರಾಮಸ್ಥರು


ತಾಲೂಕು ಕೇಂದ್ರದಿಂದ ಕೆಲವೇ ಮೈಲಿಗಳ ಅಂತರದಲ್ಲಿರುವ ಬಸವಾಪುರ ಗ್ರಾಮ ಅನೈರ್ಮಲ್ಯ ಪೀಡಿತವಾಗಿದೆ. ಇಲ್ಲಿ ಸ್ವಚ್ಚತೆಯನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.

ಹನಗೋಡು ಅಣೆಕಟ್ಟೆ ನಾಲೆಗಳ ಸುತ್ತ ಸಮಸ್ಯೆಗಳ ಹುತ್ತ


ಹನಗೋಡು ಅಣೆಕಟ್ಟೆಗೆ ಸೇರಿದ ಹನುಮಂತಪುರ ಮುಖ್ಯ ನಾಲೆಗೆ ಸೇರಿದ ಕಲ್ಲುಗಾಲುವೆಯಲ್ಲಿ ಅನೇಕ ಸಮಸ್ಯೆಗಳು ತಲೆದೋರಿದ್ದು, ದುರಸ್ತಿಗೆ ಯಾರೂ ಕ್ರಮಕೈಗೊಂಡಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಬುದ್ಧಿಮಾಂದ್ಯ ಮಕ್ಕಳಿಗೆ ಅಮಾನವೀಯ 'ಆರೈಕೆ'


ಮೂವರು ಬುದ್ಧಿಮಾಂದ್ಯ ಮಕ್ಕಳನ್ನು ನಿರ್ಲಕ್ಷಿಸಿ ಅಮಾನವೀಯ ಸ್ಥಿತಿಯಲ್ಲಿಟ್ಟ ಘಟನೆ ಮಂಡ್ಯದ ಬುದ್ಧಿಮಾಂದ್ಯ ಮತ್ತು ಅಂಗವಿಕಲರ ವಸತಿಗೃಹದಲ್ಲಿ ನಡೆದಿದೆ.

ಕಬಿನಿ ಅಣೆಕಟ್ಟೆಯಿಂದ ನೀರು ಸೋರಿಕೆ


ಕಬಿನಿ ಜಲಾಶಯದ ಅಣೆಕಟ್ಟೆಯಿಂದ ಅತ್ಯಲ್ಪ ಪ್ರಮಾಣದಲ್ಲಿ ಎರಡರಿಂದ ಮೂರು ಕಡೆ ನೀರು ಸೋರಿಕೆಯಾಗುತ್ತಿದೆ. ನಿಲುಗಡೆಗೆ ಅಧಿಕಾರಿಗಳು ಇದುವರೆಗೂ ಯಾವ ಕ್ರಮವನ್ನು ಕೈಗೊಂಡಿಲ್ಲ.

ಆಶ್ರಯ ಮನೆಯಲ್ಲೇ ಪ್ರೌಢಶಾಲೆ !


ಗುಂಡ್ಲುಪೇಟೆಯ ಕೆಲಸೂರು ಗ್ರಾಮದಲ್ಲಿ ರೇಷ್ಮೆ ಚಾಕಿ ಕೇಂದ್ರ ಹಾಗೂ ಆಶ್ರಯ ಮನೆಯೇ ಪ್ರೌಢಶಾಲೆ !

ಹುರ-ಹುಲ್ಲಹಳ್ಳಿ ರಸ್ತೆ ಸ್ಥಿತಿ, ದೇವರಿಗೆ ಪ್ರೀತಿ


ಹೆಜ್ಜೆ ಹೆಜ್ಜೆಗೂ ಹಳ್ಳಕೊಳ್ಳ, ಸ್ವಲ್ಪ ಎಚ್ಚರ ತಪ್ಪಿದರೆ ಗಂಡಾಂತರ, ಮಳೆ ಬಂದರೆ ರಸ್ತೆ ಕೆಸರುಮಯ. ಇದು ಹುರ-ಹುಲ್ಲಹಳ್ಳಿ ರಸ್ತೆಯ ದುಸ್ಥಿತಿ.

ಆಗ ಶಿರಸ್ಸು; ಈಗ ಖಡ್ಗ


ಮೈಸೂರಿನಲ್ಲಿರುವ ಚಾಮರಾಜೇಂದ್ರ ಒಡೆಯರ್ ಪ್ರತಿಮೆ ಹಿಂದೆ ಅನೇಕ ರೋಚಕ ಘಟನೆಗಳೇ ಇದೆ.

ಹೊಸ ಶಾಸಕರಿಗೆ ಹಳೇ ಸಮಸ್ಯೆಗಳ ಸವಾಲು !


ಎರಡು ತಾಲೂಕು ಕೇಂದ್ರಗಳನ್ನೊಳಗೊಂಡ ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸಮಸ್ಯೆಗಳು ನೂತನ ಶಾಸಕ ಜಿ.ಎನ್.ನಂಜುಂಡಸ್ವಾಮಿಗೆ ಸವಾಲೇ ಸರಿ !

ಪತ್ರಕರ್ತರಾದರು ಕಲಾವಿದರು

೩೨ ಗಣಪತಿಯ ಒಡೆಯ ನಂಜುಂಡೇಶ್ವರ


ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ಪ್ರಾಕಾರದ ಮಗ್ಗುಲಲ್ಲಿ 32 ಮಂದಿ ಗಣೇಶ ಮಹನೀಯರಿರುವುದು ವಿಶೇಷ.

ಮಾಜಿ ಸ್ಪೀಕರ್ ದಿಢೀರ್ ಪ್ರತಿಭಟನೆ


ನ್ಯಾಯಾಲಯದಲ್ಲಿದ್ದ ವ್ಯಾಜ್ಯವೊಂದರ ದಾಖಲೆ ಪತ್ರಗಳನ್ನು ಕಳೆದು ಹಾಕಿರುವ ಲೋಕೋಪಯೋಗಿ ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ವಿಧಾನಸಭೆ ಮಾಜಿ ಸ್ಪೀಕರ್ ಕೃಷ್ಣ ಕೆ.ಆರ್.ಪೇಟೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಮರು ಚುನಾವಣೆ ಮತ ಎಣಿಕೆ ಇಂದು


ಕೊಳ್ಳೇಗಾಲ ಕ್ಷೇತ್ರ ಮರುಚುನಾವಣೆಯ ಮತ ಎಣಿಕೆ ಕಾರ್ಯ ಶುಕ್ರವಾರ ನಡೆಯಲಿದೆ. ಇದರೊಂದಿಗೆ ತೀವ್ರ ಕುತೂಹಲ ಕೆರಳಿಸಿದ್ದ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಣದಲ್ಲಿದ್ದ 12 ಮಂದಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಮಂಡ್ಯದವರು ಸಿಎಂ ಆದಾಗಲೇ ದ್ರೋಹ


ಕಾವೇರಿ ಕಣಿವೆಯವರೇ ಆದ ಮುಖ್ಯಮಂತ್ರಿಗಳು (ಎಸ್.ಎಂ.ಕೃಷ್ಣ, ಎಚ್.ಡಿ.ದೇವೇಗೌಡ, ಈಗ ಯಡಿಯೂರಪ್ಪ) ರಾಜ್ಯದ ಜನತೆಯ ವಿರೋಧವನ್ನು ಲೆಕ್ಕಿಸದೇ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ.

ಸುದ್ದಿಜೀವಿಗಳ 'ಸಂಕ್ರಾಂತಿ' ಪ್ರದರ್ಶನ


ಸುದ್ದಿಮನೆಯ ಸದಸ್ಯರು ಬುಧವಾರ ಸಂಜೆ ಸಾದರಪಡಿಸಿದ ಪಿ.ಲಂಕೇಶರ 'ಸಂಕ್ರಾಂತಿ' ನಾಟಕಕ್ಕೆ ಕಲಾಮಂದಿರ 'ಹೌಸ್ ಫುಲ್'.

ಇಂದು ಮಾಜಿ ಮುಖ್ಯಮಂತ್ರಿ ಅರಸು ಹುಟ್ಟುಹಬ್ಬ


ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಹುಟ್ಟೂರು ಹುಣಸೂರಿನ ಕಲ್ಲಹಳ್ಳಿಯನ್ನು ಸರಕಾರ 2.61 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದ್ದರೂ ಮತ್ತಷ್ಟು ಕೆಲಸಗಳು ನನೆಗುದಿಗೆ ಬಿದ್ದಿವೆ.

ಪತ್ರಕರ್ತರು ಬಯಲಾದರು !


ನಟ, ರಂಗ ನಿರ್ದೇಶಕ ಮಂಡ್ಯ ರಮೇಶ್ ಪತ್ರಕರ್ತರಿಂದ ನಾಟಕ ಮಾಡಿಸುತ್ತಿದ್ದಾರೆ. ಬುಧವಾರ ಮೈಸೂರಿನ ಕಲಾಮಂದಿರದಲ್ಲಿ 'ಸಂಕ್ರಾಂತಿ' ಪ್ರದರ್ಶನಗೊಳ್ಳುತ್ತಿರುವ ಸಂದರ್ಭದಲ್ಲಿ ಅವರ ಅನುಭವ.

ಕೊಳ್ಳೇಗಾಲ ಕ್ಷೇತ್ರ: ಮರು ಚುನಾವಣೆ


ಮಂಗಳವಾರ ನಡೆದ ಕೊಳ್ಳೇಗಾಲ ಕ್ಷೇತ್ರದ ಮರು ಚುನಾವಣೆ ಹಲವು ಗೊಂದಲಗಳ ನಡುವೆ ಕಳೆದ ಬಾರಿಗಿಂತ ಈ ಸಾರಿ ಉತ್ತಮ ಮತದಾನ ಶಾಂತಿಯುವಾಗಿ ನಡೆದಿದೆ.

ಗಜಪಯಣಕ್ಕೆ ವೀರನಹೊಸಹಳ್ಳಿಯಲ್ಲಿ ಅದ್ಧೂರಿ ಚಾಲನೆ

ಸೌಲಭ್ಯಗಳಿಲ್ಲದ ಶಾಲೆಗಳಲ್ಲಿ ಭವಿಷ್ಯದ ಹುಡುಕಾಟ


ಮದ್ದೂರು ತಾಲೂಕಿನ ಕ್ಯಾತಘಟ್ಟದ ಸರಕಾರಿ ಪ್ರೌಢಶಾಲೆಗೆ ಕಾಂಪೌಂಡ್ ಸೇರಿದಂತೆ ಮೂಲ ಸೌಲಭ್ಯವಿಲ್ಲದೇ ಹತ್ತು ಹಲವು ಸಮಸ್ಯೆಗಳ ನಡುವೆ ವಿದ್ಯಾರ್ಥಿಗಳು ಭವಿಷ್ಯ ಹುಡುಕುತ್ತಿದ್ದಾರೆ.

ಕೆಎಚ್ಬಿ ಕಾಲೋನಿಯಲ್ಲಿ ಸಮಸ್ಯೆಗಳೇ ಹೆಚ್ಚು !


ಕರ್ನಾಟಕ ಗೃಹ ಮಂಡಳಿ ಕಾಲೋನಿ ಸಮಸ್ಯೆಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಕಟ್ಟಡಗಳೇನೋ ಆಕರ್ಷಕವಾಗಿ ತಲೆ ಎತ್ತುತ್ತಿವೆ ಆದರೆ ಮೂಲ ಸೌಕರ್ಯಗಳಿಲ್ಲದೆ ನಿವಾಸಿಗಳು ಪರದಾಡುತ್ತಿದ್ದಾರೆ.

ಅವರು ದಯೆ ತೋರಿದ್ದರೆ ಇವರು ಬಾಳುತ್ತಿದ್ದರು !


ತಂದೆ-ತಾಯಿ, ಸಹೋದರಿಯರ ಕಿರುಕುಳ ತಾಳಲಾರದೆ ಕೊಡಗಿ ಕಾಫಿ ಬೆಳೆಗಾರ ನಿತ್ಯ ಭೀಮಯ್ಯ ಹಾಗೂ ಆತನ ಕುಟುಂಬದ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರವಾಸೋದ್ಯಮಕ್ಕೂ ತಟ್ಟಿದ ಹಂದಿಜ್ವರದ ಬಿಸಿ



ದೇಶದೆಲ್ಲೆಡೆ ಹಂದಿಜ್ವರದ ಭೀತಿ ಆವರಿಸಿದ್ದು ಪ್ರವಾಸೋದ್ಯಮಕ್ಕೂ ಆ ಬಿಸಿ ತಟ್ಟಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಸ್ಥಳಗಳಾದ ಅರಮನೆ, ಬೃಂದಾವನ, ಚಾಮುಂಡಿಬೆಟ್ಟ ಮುಂತಾದ ಕಡೆ ಪ್ರವಾಸಿಗರ ಸಂಖ್ಯೆ ಗಣನೀಯ ಕಡಿಮೆಯಾಗಿದೆ.

ಗಜಪಡೆಗೆ ಅರಮನೆ ಆವರಣದಲ್ಲಿ ಅದ್ದೂರಿ ಸ್ವಾಗತ



ನಾಡಹಬ್ಬಕ್ಕೆ ಆಗಮಿಸಿರುವ ಬಲರಾಮ ನೇತೃತ್ವದ ಗಜಪಡೆಯನ್ನು ಅರಮನೆ ಆವರಣಕ್ಕೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಮೈಸೂರು: 63ನೇ ಸ್ವಾತಂತ್ರ್ಯೋತ್ಸವ ಸಂಭ್ರಮ



63ನೇ ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಕಂಡ ದೇಶಭಕ್ತಿಯ ಸುಮಧುರ ನೋಟ.

ಸಾಕಾನೆಗಳಿಂದ 'ಧ್ವಜವಂದನೆ'



63ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ದುಬಾರೆ ಅರಣ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಕಾನೆಗಳು ಧ್ವಜ ವಂದನೆ ಸಲ್ಲಿಸಿದವು.

ದಸರೆ ಗಜಪಯಣಕ್ಕೆ ಅದ್ಧೂರಿ ಚಾಲನೆ


ವಿಶ್ವವಿಖ್ಯಾತ ಮೈಸೂರು ದಸರೆಯ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ 'ಬಲರಾಮ'ನೇತೃತ್ವದ ಗಜಪಡೆ ಗುರುವಾರ ಹುಣಸೂರು ತಾಲೂಕಿನ ಕಾಡಂಚಿನ ಗ್ರಾಮ ವೀರನಹೊಸಹಳ್ಳಿಯಿಂದ ನಾಡಿಗೆ ಪ್ರಯಾಣ ಬೆಳೆಸಿತು. ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಪುಷ್ಪಾರ್ಚನೆ ಮಾಡಿ 'ಗಜಪಯಣ'ಕ್ಕೆ ಚಾಲನೆ ನೀಡಿದರು.

ಸಾಗರದ ಬಳಿಯಲ್ಲೇ ಕುಡಿಯುವ ನೀರಿಗೆ ಬರ !


ಕೃಷ್ಣರಾಜಸಾಗರ ಸಮೀಪದ ಗ್ರಾಮಗಳಲ್ಲೇ ಕುಡಿಯುವ ನೀರಿಗೆ ಬರ. ಅದರಲ್ಲೂ ಬೇಬಿ ಗ್ರಾಮದಲ್ಲಿ ಈ ಸಮಸ್ಯೆ ಮತ್ತಷ್ಟು ತೀವ್ರ.

ಮೈಸೂರಿನಲ್ಲಿ ಕಟೆದು ನಿಂತ ವಚನ ಪುರುಷ


ಚೆನ್ನೈನಲ್ಲಿ ಗುರುವಾರ (ಆ.13)ಅನಾವರಣಗೊಳ್ಳಲಿರುವ ವಚನ ಪುರುಷನ ಪ್ರತಿಮೆ ಸಿದ್ಧಗೊಂಡಿದ್ದು ಮೈಸೂರಿನಲ್ಲಿ. ನಗರದ ಹೊರವಲಯದಲ್ಲಿರುವ 'ಸ್ಟುಡಿಯೋ ಪ್ರತಿಮಾ'ದ ಪ್ರಮೋದಿನಿ ಅವರೇ 9 ಅಡಿ ಎತ್ತರದ ಪ್ರತಿಮೆಯ ರೂವಾರಿ.

ಕಾಲೇಜಿಗೆ ಕೊಠಡಿಯದ್ದೇ ಸಮಸ್ಯೆ


ಕಾಲೇಜು ಆರಂಭವಾಗಿ ಎರಡು ವರ್ಷವಾದರೂ ತಿ.ನರಸೀಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಠಡಿಗಳೇ ಇಲ್ಲ. ಪರಿಣಾಮ ವಿದ್ಯಾರ್ಥಿಗಳು 'ಇಕ್ಕಟ್ಟಿ'ನಲ್ಲೇ ಕುಳಿತು ಪಾಠ ಕೇಳುವಂತಾಗಿದೆ.

ಮಾತ್ರೆ - ವಾರ್ಡ್ ಸಿದ್ಧ: ಮುಖಗವಚ ಅಲಭ್ಯ


ದೇಶಾದ್ಯಂತ ಆತಂಕ ಎಬ್ಬಿಸಿ ರಾಜ್ಯಕ್ಕೂ ಕಾಲಿಟ್ಟರುವ ಹಂದಿಜ್ವರ ಪರಿಸ್ಥಿತಿ ಎದುರಿಸಲು ಸಿದ್ಧತೆ ಆರಂಭವಾಗಿದೆ. ಕೊಡಗಿನಲ್ಲಿ ಸಿದ್ಧತೆ ಆರಂಭವಾಗಬೇಕು, ಮಂಡ್ಯದಲ್ಲಿ ಇದಕ್ಕಾಗಿ ಎರಡು ವಾರ್ಡ್ ಮೀಸಲಿರಿಸಲಾಗಿದೆ, ಮೈಸೂರಿನಲ್ಲಿ ಸಿದ್ಧತೆ ಸಮಾಧಾನದ ಸ್ಥಿತಿ, ಚಾಮರಾಜನಗರದಲ್ಲೂ ಪರವಾಗಿಲ್ಲ.

ಕೊಡಗಿನವರಿಗೆ ಗೊತ್ತೇ ಇಲ್ಲ; ಮಂಡ್ಯ, ಮೈಸೂರು ಚಾ.ನಗರ ಪರವಾಗಿಲ್ಲ


ದೇಶದಲ್ಲಿ ತಲ್ಲಣ ಮೂಡಿಸಿರುವ ಎಚ್1ಎನ್1 ರಾಜ್ಯಕ್ಕೂ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಮೈಸೂರು ಭಾಗದ ಸರಕಾರಿ ಆಸ್ಪತ್ರೆಗಳಲ್ಲಿ ಇರುವ ಸಿದ್ಧತೆ ಏನು? ಎಂಬುದರ ಸಾಕ್ಷಾತ್ ವರದಿಯಿದು.