ಅಭ್ಯರ್ಥಿಗಳೇ ಕಾಯಿ; ಆಟಗಾರರು 'ಹಣ್ಣು'


ಯಾವ ಅಭ್ಯರ್ಥಿ ಗೆದ್ದರೆ ನಮಗೇನು ಎಂಬ ಭಾವನೆಯಲ್ಲಿ ಮತದಾರರಿದ್ದಾರೆ. ಇದರ ನಡುವೆಯೂ ಯಾವುದೋ ಒಂದು ಪಕ್ಷದ ಕಡೆಗೆ ಮತದಾರ ಆಂತರಿಕವಾಗಿ ಒಲವು ಹೊಂದಿದ್ದಾನೆ.(ಕಣದಲ್ಲಿ ಕೊನೆಯ ಸುತ್ತು)

ಕುಡಿಯೋಕೆ ನೀರು ಕೊಟ್ರೆ ಸಾಕು...


ರಾಜಕಾರಣಿಗಳು ಚುನಾವಣೆ ಮೂಡ್ನಲ್ಲಿದ್ದರೆ ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿಯಲ್ಲಿ ಮಧ್ಯರಾತ್ರಿಯಲ್ಲೂ ನೀರು ಹಿಡಿಯುವುದರಲ್ಲಿ ತಲ್ಲೀನರಾಗಿದ್ದರು.(ಕಣದಲ್ಲಿ ರಾತ್ರಿ ಸುತ್ತು)

ಹಳ್ಳಿಗಳಲ್ಲೂ ಕೂಲ್ ಕೂಲ್...


ವಿಜಯ ಕರ್ನಾಟಕ ಮೈಸೂರು ಆವೃತ್ತಿಯ ಹಲವು ವಿಶೇಷಗಳಲ್ಲಿ 'ಕಣದಲ್ಲಿ ರಾತ್ರಿಸುತ್ತು' ಒಂದು. ಹಳ್ಳಿಯ ಜನತೆ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳದೇ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ.

ಅಲ್ಲಿಂದ ಇಲ್ಲಿಗೆ ಸ್ಥಳಾಂತರ ಅಷ್ಟೇ !


ಇಂದಿನ 'ಕ್ಷೇತ್ರದಲ್ಲೊಂದು ಸುತ್ತು'ವಿನಲ್ಲಿ ಮಡಿಕೇರಿ, ವೀರಾಜಪೇಟೆ ಕ್ಷೇತ್ರ ದರ್ಶನ.ರಣಬೇಸಿಗೆಯಲ್ಲಿ ಚುನಾವಣೆ ಬಂದರೂ ಕೊಡಗಿನ ಹವಮಾನವೇನೂ ಏರುಪೇರಾಗಿಲ್ಲ. ತಣ್ಣಗಿದೆ. ಎಲ್ಲವೂ ಕೂಲ್ ಕೂಲ್.

ತಪಾಸಣೆಗೆ ನಿಲ್ಲದೆ ಸಿದ್ದು ವಾಹನ ಪರಾರಿ


ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದ ವಾಹನ ಚುನಾವಣೆ ಸಿಬ್ಬಂದಿ ತಪಾಸಣೆಗೂ ನಿಲ್ಲದೆ ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ತಪಾಸಣೆಗೆ ನಿಲ್ಲದೆ ಸಿದ್ದು ವಾಹನ ಪರಾರಿ


ಸಿದ್ದ ವಾಹನ ಪರಾರಿ ಸುದ್ದಿಯ ಮೊದಲ ಪುಟದ ಮುಂದುವರಿದ ಭಾಗ.

ಸೌಲಭ್ಯ ಕಲ್ಪಿಸೋರ್ಗೆ ನಮ್ಮೋಟು


ಇಂದಿನ 'ಕ್ಷೇತ್ರದಲ್ಲೊಂದು ಸುತ್ತು'ವಿನಲ್ಲಿ ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ಕ್ಷೇತ್ರಗಳು.

ಪರಿಣಾಮಕಾರಿಯಾಗದ ಸಂಹಿತೆ


ಚುನಾವಣೆ ನೀತಿ ಸಂಹಿತೆ ಪಾಲನೆಯಲ್ಲಿ ನೆರೆಯ ಮೈಸೂರು ಕ್ಷೇತ್ರಕ್ಕೆ ಹೋಲಿಸಿದರೆ ಮಂಡ್ಯದಲ್ಲಿ ಪರಿಣಾಮಕಾರಿಯಾಗಿಲ್ಲ.

ಅಭ್ಯರ್ಥಿಗಳಿಗಿಂತ ಆಯೋಗದ್ದೇ ಚರ್ಚೆ


ಇಂದಿನ 'ಕ್ಷೇತ್ರದಲ್ಲೊಂದು ಸುತ್ತು'ವಿನಲ್ಲಿ ಮೈಸೂರು ಲೋಕಸಭೆ ವ್ಯಾಪ್ತಿಗೆ ಬರುವ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ ಕ್ಷೇತ್ರಗಳ ಚಿತ್ರಣವಿದು.

ರಾಜಕೀಯದ ಮಧ್ಯೆ 'ಬಿಡುವು'


ಚುನಾವಣೆಯ ಬಿಸಿಯಲ್ಲಿ ಜನ ಬೇಯುತ್ತಿರುವಾಗಲೇ 'ವರುಣ'ನ ಕರುಣೆಯಾಗಿದ್ದು, ಧರೆಯನ್ನು ತಂಪಾಗಿಸಿದೆ.

ನಮ್ಮೂರಲ್ಲಿ ಹಂಗೇನಿಲ್ಲ; ಹಣ , ಹೆಂಡ ಬಂದೇ ಇಲ್ಲ


ಇಂದಿನ 'ಕ್ಷೇತ್ರದಲ್ಲೊಂದು ಸುತ್ತು'ವಿನಲ್ಲಿ ಚಾಮರಾಜನಗರ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ ಮೈಸೂರು ಜಿಲ್ಲೆಯ ನಾಲ್ಕು ಕ್ಷೇತ್ರ (ವರುಣ, ತಿ.ನರಸೀಪುರ, ನಂಜನಗೂಡು, ಎಚ್.ಡಿ.ಕೋಟೆ)ಗಳ ಚಿತ್ರಣವಿದು.

ಚುನಾವಣೆಯ ಬಿಸಿ: ಸ್ತ್ರೀಯರಿಗಿಲ್ಲ ಚರ್ಚೆಯ ಖುಷಿ


ಈಗ ಎಲ್ಲೆಡೆ ಚುನಾವಣೆ ಬಿಸಿ ತುಸು ಜೋರೇ. ಆದರೆ ಪ್ರಮೀಳೆಯರ 'ರಾಜ್ಯ'ದಲ್ಲಿ ತದ್ವಿರುದ್ಧ ಸ್ಥಿತಿ.ಸಾಮಾನ್ಯ ಗೃಹಿಣಿಯರು, ಉದ್ಯೋಗಸ್ಥರು, ಮಹಿಳಾಪರ ಹೋರಾಟಗಾರ್ತಿಯರು ಯಾವುದೇ ಗುಂಪಿನಲ್ಲಿ ರಾಜಕೀಯ ಚರ್ಚೆಯಲ್ಲಿ ತೊಡಗಿಲ್ಲ.

ಗೆಜ್ಜಗಳ್ಳಿಗೆ ಬಂತು ಮತಗಟ್ಟೆ


ಹಲವಾರು ದಶಕಗಳಿಂದ ಗೆಜ್ಜಗಳ್ಳಿಯಲ್ಲಿ ಮತಗಟ್ಟೆ ಸ್ಥಾಪಿಸಬೇಕೆಂಬ ಗ್ರಾಮಸ್ಥರ ಮನವಿ ಅಂತೂ ಈಡೇರಿದೆ. ಇದು ಅಂತಿಂಥ ಗ್ರಾಮವಲ್ಲ. ಮೈಸೂರು ರಾಜರ ಸೇವೆಗೆ ನಿರತವಾಗಿದ್ದ ಊರು. ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 3 ಬಾರಿ ಸಂಸದರಾಗಿದ್ದರೂ ಈ ಸಮಸ್ಯೆ ಬಗೆಹರಿಸಲಾಗಿರಲಿಲ್ಲ. ಈಗ ಈಡೇರಿದೆ.

ಹುಚ್ಚು ಎಲೆಕ್ಷನ್ನಾಗೆ ಈಜೋಕೆ ಮನಸಿಲ್ಲ...


ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಆಯಾ ಕ್ಷೇತ್ರದ ಮತದಾರರ ಅಭಿಪ್ರಾಯ ಹಾಗೂ ಅಲ್ಲಿನ ರಾಜಕೀಯ ವಾತಾವರಣ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವಾಗಿ ಮೈಸೂರು ಆವೃತ್ತಿಯು 'ಕ್ಷೇತ್ರದಲ್ಲೊಂದು ಸುತ್ತು' ಎಂಬ ನೂತನ ಅಂಕಣ ಸಾದರಪಡಿಸುತ್ತಿದೆ.

ಸಕ್ಕರೆ ಜಿಲ್ಲೆಯಲ್ಲಿ ಅಭಿವೃದ್ಧಿ ರಾಜಕಾರಣದ 'ಸವಿ'


ವಿಜಯ ಕರ್ನಾಟಕ ಮೈಸೂರು ಕಚೇರಿಯಲ್ಲಿ ಸೋಮವಾರ ನಡೆದ ವಿಕ ಸಂವಾದದಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳಾದ ಕೆ.ಎಸ್.ಪುಟ್ಟಣ್ಣಯ್ಯ, ಎನ್.ಚಲುವರಾಯಸ್ವಾಮಿ, ಎಲ್.ಶಿವರಾಮೇಗೌಡ ಭಾಗವಹಿಸಿ,ಕ್ಷೇತ್ರದ ಅಭಿವೃದ್ಧಿ ಬಗ್ಗೆ ಬಿಚ್ಚು ಮನಸಿನಿಂದ ಮಾತನಾಡಿದರು.

ಜಿದ್ದಾಜಿದ್ದಿ ನೆಲದಲ್ಲಿ ಸೌಹಾರ್ದದ 'ಮಾತು-ಕತೆ'


ವಿಜಯ ಕರ್ನಾಟಕ ಮೈಸೂರು ಕಚೇರಿಯಲ್ಲಿ ಸೋಮವಾರ ನಡೆದ ವಿಕ ಸಂವಾದದಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳಾದ ಕೆ.ಎಸ್.ಪುಟ್ಟಣ್ಣಯ್ಯ, ಎನ್.ಚಲುವರಾಯಸ್ವಾಮಿ, ಎಲ್.ಶಿವರಾಮೇಗೌಡ ಭಾಗವಹಿಸಿ,ಕ್ಷೇತ್ರದ ಅಭಿವೃದ್ಧಿ ಬಗ್ಗೆ ಬಿಚ್ಚು ಮನಸಿನಿಂದ ಮಾತನಾಡಿದರು.

ಘಟಾನುಘಟಿ ಸಂಸದರಿದ್ದರೂ ಪ್ರಯೋಜನವಿಲ್ಲ


ಮಳವಳ್ಳಿ ಕ್ಷೇತ್ರದಲ್ಲಿ ನಿವೇಶನ ಹಂಚಲು ಜಮೀನು ಸ್ವಾಧೀನಪಡಿಸಿಕೊಂಡು 35 ವರುಷವಾದರೂ ಯೋಜನೆ ಇದುವರೆಗೂ ಮುಗಿದಿಲ್ಲ. ಇನ್ನು ಗುಂಡ್ಲುಪೇಟೆ ಕ್ಷೇತ್ರದಲ್ಲಿ ರಸ್ತೆಗಳ ಸ್ಥಿತಿಯಂತೂ ಹೇಳತೀರದು. (ಇದು ಚುನಾವಣೆ ವಿಷಯವಲ್ಲ)

ರೈತರ ಕೂಗು ಸಂಸದರಿಗೆ ಮುಟ್ಟಲೇ ಇಲ್ಲ !


ವರುಣ, ಚಾಮುಂಡೇಶ್ವರಿ, ನಾಗಮಂಗಲ ಹಾಗೂ ಪಿರಿಯಾಪಟ್ಟಣ ವಿಧಾನಸಭೆ ಕ್ಷೇತ್ರಗಳಲ್ಲಿ ಹೇಳಿಕೊಳ್ಳುವಂಥ ಉತ್ತಮ ಕೆಲಸಗಳೇನಾಗಿಲ್ಲ. ನಾಗಮಂಗಲ ಕ್ಷೇತ್ರದಲ್ಲಿ ಎರಡು ಜಲಾಶಯಗಳು ಹರಿದರೂ ಬೆಳೆಗಳಿಗೆ ನೀರೇ ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದಿನೇ ದಿನೆ ರೈತರು ಭೂ ಹೀನರಾಗುತ್ತಿದ್ದಾರೆ. ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಹೆಚ್ಚಾಗಿ ತಂಬಾಕನ್ನು ಬೆಳೆಯುತ್ತಾರೆ. ಆದರೆ ಬೆಳೆಗಾರರಿಗೆ ಉತ್ತಮ ಬೆಲೆ ಸಿಗದೇ ತೊಂದರೆಗೀಡಾಗಿದ್ದಾರೆ. (ಇದು ಚುನಾವಣಾ ವಿಷಯವಲ್ಲ)

ಅಭಿವೃದ್ಧಿಯೇ ಮಂತ್ರ


ವಿಜಯ ಕರ್ನಾಟಕದ ಮೈಸೂರು ಕಚೇರಿಯಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಭ್ಯಥಿಱಗಳ ರಸಮಯ ಕ್ಷಣ.

ಹಿಂದುಳಿದ ಮನೆಗೆ ಪ್ರಗತಿಯ ಹೂವ ತರುತ್ತಾರಂತೆ


ವಿಜಯ ಕರ್ನಾಟಕದ ಮೈಸೂರು ಕಚೇರಿಯಲ್ಲಿ ಶುಕ್ರವಾರ (ಏಪ್ರಿಲ್ 17) ಚಾಮರಾಜನಗರ ಲೋಕಸಭೆ ಕ್ಷೇತ್ರದ ಮೂವರು ಪ್ರಮುಖ ಅರ್ಭ್ಯರ್ಥಿಗಳ ಮುಖಾಮುಖಿ ಕಾರ್ಯಕ್ರಮವನ್ನು ವಿಕ ವೇದಿಕೆ ಏರ್ಪಡಿಸಿತ್ತು.

ಆಳುವವರಿಂದಲೇ ಅನುದಾನಕ್ಕೆ ಅಡ್ಡಿ


ಪ್ರಮುಖ ವಾಣಿಜ್ಯ ಕೇಂದ್ರವಾದ ಕೊಳ್ಳೇಗಾಲ ಹಾಗೂ ಭತ್ತದ ಕಣಜ ಎಂದೇ ಖ್ಯಾತಿಗಳಿಸಿರುವ ಕೃಷ್ಣರಾಜನಗರ ಕ್ಷೇತ್ರದಲ್ಲೂ ಸಮಸ್ಯೆಗಳದ್ದೆ ತಾಂಡವ.

ಮಲೆ ಮಾದಪ್ಪ ನೀನೇ ಕಾಪಾಡಪ್ಪ


ಈ ದಿನ ಶ್ರೀರಂಗಪಟ್ಟಣ ಕ್ಷೇತ್ರ (ಮಂಡ್ಯ ಲೋಕಸಭೆ) ಹಾಗೂ ಹನೂರು ಕ್ಷೇತ್ರ (ಚಾಮರಾಜನಗರ ಲೋಕಸಭೆ) ಸಮಸ್ಯೆಗಳ ಬಗ್ಗೆ ವರದಿ.

ದೇವರಿಗಲ್ಲ ; ಇಲ್ಲಿ ಸಂಸದರಿಗೆ ಕೈ ಮುಗಿಬೇಕು !


ಈ ಬಾರಿ ಮದ್ದೂರು, ಕೆ.ಆರ್.ಪೇಟೆ, ಎಚ್.ಡಿ.ಕೋಟೆ, ನಂಜನಗೂಡು ಕ್ಷೇತ್ರಗಳಲ್ಲಿ ಅಡ್ಡಾಡಿದಾಗ ಅಲ್ಲೂ ಕೂಡ ಸಮಸ್ಯೆಗಳದ್ದೆ ಕಾರುಬಾರು. (ಇದು ಚುನಾವಣೆ ವಿಷಯವಲ್ಲ).

ಭರವಸೆ ಸಾರ್ ಭರವಸೆ


"ಇದು ಚುನಾವಣೆ ವಿಷಯವಲ್ಲ' ಮಾಲಿಕೆ ಮುಂದುವರಿದ ಭಾಗ. ಇದರಲ್ಲಿ ಚಾಮರಾಜನಗರ, ಮಂಡ್ಯ, ಮೈಸೂರು ಕ್ಷೇತ್ರದ ಪ್ರಮುಖ ಸಮಸ್ಯೆಗಳ ಪಟ್ಟಿ ಇದು.

ಓಟ್ ಕೇಳೋದಷ್ಟೆ ಇವ್ರ ಕೆಲ್ಸ


"ಇದು ಚುನಾವಣೆ ವಿಷಯವಲ್ಲ" ಕಂತಿನ ಎರಡನೆ ಮಾಲಿಕೆ ಇದು. ಇದರಲ್ಲಿ ಮೈಸೂರಿನ ಕೃಷ್ಷ್ಣರಾಜ, ಚಾಮರಾಜನಗರ, ಮಂಡ್ಯ, ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಇಲ್ಲಿ ಗುರುತಿಸಲಾಗಿದೆ.

ಬಂದ ಸಂಸದರಿಗೆ ಲೆಕ್ಕವಿಲ್ಲ, ಸಮಸ್ಯೆ ಕಾವು ಆರಲಿಲ್ಲ...


ಇದು ನಮ್ಮ ಹೊಸ ಪ್ರಯತ್ನ. ಲೋಕಸಭಾ ಚುನಾವಣೆ ಎಂದ ಕೂಡಲೇ ಬರೀ ಪಕ್ಷ ರಾಜಕೀಯದ ಬಗ್ಗೆ ಚರ್ಚಿಸುವುದು ಸಾಮಾನ್ಯ. ಆದರೆ, ಪ್ರತಿ ಲೋಕಸಭೆ ಕ್ಷೇತ್ರದೊಳಗಿನ ಪ್ರತಿ ವಿಧಾನಸಭಾ ಕ್ಷೇತ್ರದ ಹಳೆಯ ಸಮಸ್ಯೆಯನ್ನು ಬಿಂಬಿಸುವ ಪ್ರಯತ್ನ. ನಿರ್ಣಾಯಕ ಹಂತದ ಮತದಾರರನ್ನೂ ಕಡೆಗಣಿಸಿರುವ ಬಗ್ಗೆ ಗಮನಸೆಳೆಯುವ ಯತ್ನ "ಇದು ಚುನಾವಣೆ ವಿಷಯವಲ್ಲ". ಈ ಕಂತಿನಲ್ಲಿ ಮೊದಲಿನದು "ನರಸಿಂಹರಾಜ ಕ್ಷೇತ್ರ".

ಏನೇ ಇರಲಿ, ಗೆಲುವು ನಮ್ಮದಾಗಲಿ


ಮೈಸೂರು ಆವೃತ್ತಿ ವಿಜಯ ಕರ್ನಾಟಕವು ಶುಕ್ರವಾರ ಪತ್ರಿಕಾ ಕಚೇರಿಯಲ್ಲಿ ವಿಕ ವೇದಿಕೆ-ಅರ್ಭ್ಯರ್ಥಿಗಳ ಮುಖಾಮುಖಿ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಇದೊಂದು ವಿನೂತನ ಪ್ರಯತ್ನ.

ದಕ್ಕಿದರೆ "ವಿ"ಜಯದ ಹಾರ ; ಇದು ನಮ್ಮ ಲೆಕ್ಕಾಚಾರ


ಮೈಸೂರಿನ ವಿಜಯ ಕರ್ನಾಟಕ ಕಚೇರಿಯಲ್ಲಿ ಶುಕ್ರವಾರ ನಡೆದ ವಿಕ ವೇದಿಕೆ- ಅರ್ಭ್ಯರ್ಥಿಗಳ ಮುಖಾಮುಖಿ ಕಾರ್ಯಕ್ರಮದಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಅರ್ಭ್ಯರ್ಥಿಗಳಾದ ಬಿಜೆಪಿಯ ಸಿ.ಎಚ್. ವಿಜಯಶಂಕರ್, ಕಾಂಗ್ರೆಸ್ ನ ಎಚ್. ವಿಶ್ವನಾಥ್ ಹಾಗೂ ಜೆಡಿಎಸ್ ನ ಬಿ.ಎ. ಜೀವಿಜಯ ಭಾಗವಹಿಸಿ ಹಂಚಿಕೊಂಡ ತಮ್ಮ ಆಲೋಚನೆ-ಯೋಜನೆಯ ವಿವರವಿದು.

ಕಿಂಗ್ ಅಲ್ಲ, ಕಿಂಗ್ ಮೇಕರೂ ಅಲ್ಲ


ಇದು ಲೋಕಸಭೆ ಚುನಾವಣೆಗೆ ಸಂಬಂಧಿಸಿದ ವಿಚಾರ. ಇದರಲ್ಲಿ ಸಿದ್ದು ಯಶಸ್ಸು ಅಷ್ಟಕಷ್ಟೆ.

ಕಾಡಿದ ಸುಬ್ಬಣ್ಣರ ಹಾಡು, ರಮಣಿಯವರ ಕೊಳಲು ವಾದನ


ಮೈಸೂರಿನಲ್ಲಿ ಚುನಾವಣೆಯ ಕಾವು ಏರುತ್ತಿದ್ದರೂ ಈ ವಾರ ಸಾಂಸ್ಕೃತಿಕ ಸಂಭ್ರಮಕ್ಕೆ ಕಡಿಮೆ ಇರಲಿಲ್ಲ. ಸೆಕೆಯಿಂದ ತತ್ತರಿಸುತ್ತಿರುವ ಮನಸ್ಸಿಗೆ ಆಹ್ಲಾದ ನೀಡುವಂತೆ ಸಾಂಸ್ಕೃತಿಕ ಸಂಭ್ರಮದ ಮಂದ ಗಾಳಿ ತೀಡಿ ಬಂತು.

ಜಗನ್ಮೋಹನ ಅರಮನೆಯಲ್ಲಿ ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣರ ಸುಗಮ ಸಂಗೀತ ನಡೆದರೆ, ಬಿಡಾರಂ ಕೃಷ್ಣಪ್ಪ ರಾಮಮಂದಿರದ ಸಭಾಂಗಣದಲ್ಲಿ ರಾಮೋತ್ಸವ ಸಂಗೀತ ಕಾರ್ಯಕ್ರಮ ಆರಂಭವಾಗಿದೆ. ಹೆಸರಾಂತ ಕೊಳಲು ವಾದಕ ಡಾ. ಎನ್. ರಮಣಿ ಅವರಿಂದ ಕಾರ್ಯಕ್ರಮ ಆರಂಭವಾಯಿತು. ಹಾಗೆಯೇ ಸೂರ್ಯ ನಾರಾಯಣ್ ಅವರು ಕೂಚುಪುಡಿ ನೃತ್ಯ ಪ್ರದರ್ಶನವನ್ನು ನಡೆಸಿಕೊಟ್ಟರೆ, ಪ್ರಜ್ಞಾ ಹವ್ಯಾಸಿ ಯಕ್ಷವೃಂದದವರು "ಶ್ರೀ ರಾಮಾಂಜನೇಯ ಯುದ್ಧ' ಪ್ರಸಂಗವನ್ನು ಪ್ರಸ್ತುತ ಪಡಿಸಿದರು. ಯಕ್ಷಗಾನದ ಒಂದು ಛಾಯಾಚಿತ್ರವನ್ನು ನೀಡಲಾಗಿದೆ. ಉಳಿದ ಎಲ್ಲ ಛಾಯಾಚಿತ್ರಗಳನ್ನು ನಮ್ಮ ಸಂಸ್ಕೃತಿ ಸಿಂಚನ ಗ್ಯಾಲರಿಯಲ್ಲಿ ವೀಕ್ಷಿಸಿ.

ತಂಗುದಾಣವಿಲ್ಲದೆ ಬಳಲುತ್ತಿರುವ ಪ್ರಯಾಣಿಕರು


ಚಾಮರಾಜ ಜಿಲ್ಲಾ ಕೇಂದ್ರದಲ್ಲೇ ಪ್ರಯಾಣಿಕರಿಗೆ ತಂಗುದಾಣವಿಲ್ಲ. ಬಸ್ ಬರುವವರೆಗೂ ಬಿಸಿಲಿನಲ್ಲೇ ಒಣಗುವ ಪರಿಸ್ಥಿತಿ ಅನೇಕ ಕಡೆ ನಿರ್ಮಾಣವಾಗಿದೆ.

ಅಂಬಿಗೆ ಅಸ್ತು



ಕೊನೆಗೂ ಅಂಬರೀಶ್ ಹಲವು ಬೇಡಿಕೆಗಳೊಂದಿಗೆ ಮಂಡ್ಯ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲು ಸಮ್ಮತ್ತಿಸಿದ್ದಾರೆ. ಇದಕ್ಕೆ ಅವರು ಹಲವು ಷರತ್ತುಗಳನ್ನು ಹಾಕಿದ್ದಾರೆ.

ಸಂಸಾರದಲ್ಲಿ ರಾಜಕೀಯ


ಮಾಜಿ ಸಚಿವ ಎಚ್.ಡಿ.ರೇವಣ್ಣ, ದೇವೇಗೌಡ ಮತ್ತು ಕುಟುಂಬದೊಂದಿಗೆ ಮುನಿಸಿಕೊಂಡಿದ್ದಾರೆ. ವಯಸ್ಸಿನಲ್ಲಿ ಹಿರಿಯವನಾಗಿದ್ದರೂ ಕುಮಾರಸ್ವಾಮಿಗೆ ಸಿಗುತ್ತಿರುವ ಮನ್ನಣೆ ನನಗೇಕಿಲ್ಲ ಎಂಬುದು ಅವರ ಕೋಪಕ್ಕೆ ಕಾರಣ.

ರೈಲು ಬಿಡೋ ಬದಲು ರಿಲ್ ಬಿಟ್ಟಿದ್ದೆ ಬಿಟ್ಟಿದ್ದು !



70ರ ದಶಕದಿಂದಲೂ ಚಾಮರಾಜನಗರ-ಮೆಟ್ಟುಪಾಳ್ಯಂ ರೈಲ್ವೆ ಯೋಜನೆ ಅನುಷ್ಠಾನಕ್ಕೆ ತರುತ್ತೇವೆಂದು ಪ್ರತಿ ಚುನಾವಣೆಯಲ್ಲೂ ಆಶ್ವಾಸನೆ ನೀಡುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಈಡೇರಿಲ್ಲ.

ಆನೆ ಬುದ್ಧಿಗೆ ಕಂದಕ ಇನ್ನು ಎಲ್ಲಿಯ ಅಡ್ಡಿ !


ಕಂದಕ ನಿಮಿಱಸಿದರೂ ಬುದ್ಧಿವಂತ ಆನೆಗಳು ಪರಸ್ಪರ ಸಹಕಾರದೊಂದಿಗೆ ಅದನ್ನೂ ದಾಟಲು ಕಲಿತಿರುವ ಕಥೆ.

ಹನಿ ಹನಿಗೂ ಹಾಹಾಕಾರ





ಚುನಾವಣೆ ಕಾವು ಏರುತ್ತಿದೆ. ಇದು ಎಷ್ಟನೇ ಚುನಾವಣೆಯೋ ? ಜನರ ಸಮಸ್ಯೆಯೇನೋ ಪರಿಹಾರವಾಗಿಲ್ಲ. ಅದಕ್ಕೆ ನಿದರ್ಶನವೆಂಬಂತೆ ಚಾಮರಾಜನಗರದ ಲೀಡ್ ಇದೆ. ಉಳಿದಂತೆ ರಾಜಕೀಯ ಬೆಳವಣಿಗೆಗಳ ಕುರಿತ ಸುದ್ದಿಗಳು.