ವಿಕ ವರದಿ ಫಲಶ್ರುತಿ


ಪ್ರವಾಸಿ ತಾಣ ಬಲಮುರಿಯಲ್ಲಿ ಅಕ್ರಮ ಹಣ ಸುಲಿಗೆ ಹಾಗೂ ಮದ್ಯ ಮಾರಾಟ ಕುರಿತು ವಿಕ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಆಡಳಿತ ಯಂತ್ರ ಕಡಿವಾಣಕ್ಕೆ ಮುಂದಾಗಿದೆ.

ವರುಣನ ಅಬ್ಬರಕ್ಕೆ ನೆಲಕಚ್ಚಿದ ಕಾಫಿ


ಜುಲೈನ ಪ್ರಥಮ ಎರಡು ವಾರದಲ್ಲಿ ಕೊಡಗಿನಲ್ಲಿ ಸುರಿದ ಧಾರಾಕಾರ ಮಳೆಗೆ ಕಾಫಿ ಬೆಳೆಗಾರರು ತೀವ್ರ ನಷ್ಟಕ್ಕೆ ತುತ್ತಾಗಿದ್ದಾರೆ. ವರುಣನ ಅಬ್ಬರಕ್ಕೆ ಕಾಫಿ ಬೆಳೆ ನೆಲಕಚ್ಚಿದೆ.

ಮಂಡ್ಯ ಜಿಲ್ಲೆಯಲ್ಲಿ ವರುಣನ ಜೂಜಾಟ


ಕೆಆರ್ಎಸ್ ಮತ್ತು ಹೇಮಾವತಿ ಜಲಾಶಯಗಳು ಭರ್ತಿಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನೀರಾವರಿ ಪ್ರದೇಶದಲ್ಲಿ ಮುಂಗಾರು ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಆದರೆ ಖುಷ್ಕಿ ಪ್ರದೇಶದಲ್ಲಿ ಮಳೆ ಕೊರತೆಯಿಂದ ಚಿಂತೆಯ ಕಾರ್ಮೋಡ ಕವಿದಿದೆ.

ಮರಗಳ್ಳತನ ಅವ್ಯಾಹತ: ಕೈಚೆಲ್ಲಿ ಕುಳಿತ ಅರಣ್ಯ ಇಲಾಖೆ


ವೀರಾಜಪೇಟೆಯ ಕರ್ನಾಟಕ-ಕೇರಳ ಗಡಿಭಾಗ ಮಾಕುಟ್ಟ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮರಕಳ್ಳಸಾಗಣೆ, ಅಕ್ರಮ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಅರಣ್ಯ ಇಲಾಖೆಗೆ ಈ ವಿಷಯ ಗೊತ್ತಿದ್ದರೂ ಕೈ ಕಟ್ಟಿ ಕುಳಿತಿದೆ.

ಅಗಲಿದ ಗಾನ ಗಂಗೆಗೆ ನುಡಿ ನಮನ


ಗಾನ ವಿದುಷಿ, ಪದ್ಮವಿಭೂಷಣ, ಪದ್ಮಭೂಷಣ ಗಂಗೂಬಾಯಿ ಹಾನಗಲ್ಲು ಅವರು ನಮ್ಮನ್ನಗಲಿದ್ದಾರೆ. ಅವರಿಗೆ ಸಂಗೀತ ವಿದ್ವಾಂಸರು, ಭಾಷಾ ತಜ್ಞರು, ಸಾಹಿತಿಗಳು, ಸಂಗೀತಾಸಕ್ತರು ನುಡಿನಮನ ಸಲ್ಲಿಸಿದ್ದಾರೆ.

ದಾರಿ ತೋರೋದು ನೆಪ; ಜಾಹೀರಾತು ಲಾಭವೇ 'ಜಪ'


ಜಾಹೀರಾತು ಸಂಸ್ಥೆಯೊಂದು ಮೈಸೂರು ನಗರದ ವಿವಿಧೆಡೆ ಅಳವಡಿಸುತ್ತಿರುವ 'ಎಲ್' ಮಾದರಿ ಮಾರ್ಗಸೂಚಿ ಫಲಕಗಳು ಸಾಲು ಮರಗಳಿಗೆ, ನಗರದ ಸೌಂದರ್ಯಕ್ಕೆ ಕಂಟಕವಾಗುವ ಆತಂಕ ಎದುರಾಗಿದೆ.

ಕಾವೇರಿ ಆಳದೊಂದಿಗೆ ಪ್ರವಾಸಿಗರ ಚೆಲ್ಲಾಟ


ಸ್ವಚ್ಛಂದವಾಗಿ ಹರಿಯುವ ಕಾವೇರಿ ಮಡಿಲಿನಲ್ಲಿ ಆಳದ ಅರಿವು ಇಲ್ಲದೇ ಆಟೋಟ, ಬೈಕ್ ಸವಾರಿ ಮಾಡುವ ಮೂಲಕ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.

ಮೈಸೂರು: ಫೋನ್-ಇನ್ ಕಾರ್ಯಕ್ರಮ


ವಿಕ ಮೈಸೂರು ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಸುನಿಲ್ ಅಗರವಾಲ್ ಪಾಲ್ಗೊಂಡಿದ್ದರು. ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಅನೇಕ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅತಿಸೂಕ್ಷ್ಮ ಠಾಣೆಗಳಿಗೆ ಹೆಚ್ಚು ಸಿಬ್ಬಂದಿ ಅಗತ್ಯ


ವಿಕ ಫೋನ್-ಇನ್ ಕಾರ್ಯಕ್ರಮದ ಮುಂದುವರಿದ ಭಾಗ

ಅಬ್ಬರದ ಬೈಕ್ ಸವಾರಿಗೆ ಬ್ರೇಕ್


ವಿಕ ಫೋನ್-ಇನ್ ನಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತರು. ಜನನಿಬಿಡ ರಸ್ತೆಗಳಲ್ಲಿ ಬೈಕ್ ಗಳನ್ನು ವೇಗವಾಗಿ ಓಡಿಸಿಕೊಂಡು ಹೋಗುವ ವಿದ್ಯಾರ್ಥಿಗಳಿಗೆ ಕಡಿವಾಣ ಹಾಕಲಾಗುವುದೆಂದು ಅವರು ತಿಳಿಸಿದ್ದಾರೆ.

ಅರಮನೆ ಅಂಗಳದಲ್ಲಿ 'ಮಳೆ ಕೊಯ್ಲು'


ವಿಶ್ವವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ ಬಿದ್ದ ಮಳೆ ನೀರು ಈಗ ಪೋಲಾಗುತ್ತಿಲ್ಲ. ಸಂಗ್ರಹ, ಸದ್ಬಳಕೆ ನಿಟ್ಟಿನಲ್ಲಿ ಅರಮನೆ ಮಂಡಳಿ ಮೊದಲ ಹೆಜ್ಜೆ ಇಟ್ಟಿದೆ. ಉದ್ದೇಶಿತ ಯೋಜನೆ ಪೂರ್ಣಗೊಂಡರೆ ಅಂಗಳದಲ್ಲಿ ಬಿದ್ದ ಹನಿ ನೀರು ಸದ್ಬಳಕೆಯಾಗಲಿದೆ.

ಧಾರಾಕಾರ ಮಳೆಗೆ ಮೈಸೂರು ಭಾಗ ತತ್ತರ


ಕೊಡಗು ಹಾಗೂ ಮೈಸೂರು ಭಾಗದಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಕೊಳವೆ ಬಾವಿಯನ್ನೇ ಕೊಳ್ಳೆ ಹೊಡೆದರು !


ಮಳವಳ್ಳಿ ಪುರಸಭೆಯ ಉಗ್ರಾಂಪುರದೊಡ್ಡಿ ಬಡಾವಣೆಗೆ ಕುಡಿಯುವ ನೀರು ಪೂರೈಸಲು ತೆಗೆಸಿರುವ ಕೊಳವೆ ಬಾವಿಯನ್ನು ಖಾಸಗಿಯವರು ಅಕ್ರಮವಾಗಿ ಬಳಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅಧಿಕಾರ ಸ್ವೀಕಾರಕ್ಕೆ ಮುನ್ನವೇ ಕಡ್ಡಾಯ ರಜೆ


11 ದಿನದ ಹಿಂದೆಯಷ್ಟೇ ಹುಣಸೂರು ವನ್ಯಜೀವಿ ವಿಭಾಗದ (ನಾಗರಹೊಳೆ ಅಭಯಾರಣ್ಯ)ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ವಿಜಯ ಮೋಹನ್ ರಾಜ್ ಅವರನ್ನು ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.

ಚೀರನಹಳ್ಳಿಯಲ್ಲಿ ದಂಗೆ ಎದ್ದ ಡೆಂಗೆ


ಮಂಡ್ಯ ಸಮೀಪದ ಚೀರನಹಳ್ಳಿಯಲ್ಲಿ ಡೆಂಗೆ ದಂಗೆ ಎದ್ದಿದ್ದು, ಮೂವರನ್ನು ಬಲಿ ತೆಗೆದುಕೊಂಡಿದೆ. ಇದಕ್ಕೆಲ್ಲ ಕಾರಣ ಗ್ರಾಮದಲ್ಲಿನ ಅನೈರ್ಮಲ್ಯ, ಅಶುಚಿತ್ವವೇ ಕಾರಣ.

ಯೂತ್ ಹಾಸ್ಟೆಲ್ ಆಫ್ ಇಂಡಿಯಾಗೆ ವಜ್ರ ಸಂಭ್ರಮ


ಆರು ದಶಕಗಳ ಹಿಂದೆ ಮೈಸೂರಿನಲ್ಲಿ ಆರಂಭವಾದ 'ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ'ಸಂಸ್ಥೆಗೆ ವಜ್ರ ಮಹೋತ್ಸವ ಸಂಭ್ರಮ.

ಮೂಡಲಕೊಪ್ಪಲಿನಲ್ಲಿ ಸೌಲಭ್ಯ ಮೂಡಲಿಲ್ಲ


ಸರಕಾರಗಳು ಗ್ರಾಮೀಣಾಭಿವೃದ್ಧಿಗೆ ಕೋಟ್ಯಂತರ ರೂ. ವ್ಯಯಿಸುತ್ತಿದ್ದರೂ ಮೂಲ ಸೌಕರ್ಯದಿಂದ ವಂಚಿತವಾದ ಅನೇಕ ಗ್ರಾಮಗಳಿವೆ ಎಂಬುದಕ್ಕೆ ಪಿರಿಯಾಪಟ್ಟಣದ ರಾಜನ ಬೆಳಗುಲಿ ಮೂಡಲಕೊಪ್ಪಲು ಗ್ರಾಮ ನಿದರ್ಶನ.

ಶಿಕ್ಷಣ ಇಲಾಖೆಯಲ್ಲಿ ಗೋಲ್ ಮಾಲ್ !


ತರಬೇತಿಯಲ್ಲಿ ಶಿಕ್ಷಕರಿಗೆ ಟಿಎ ಹಾಗೂ ಡಿಎ ನೀಡದಿದ್ದರೂ ಹಣ ನೀಡಿರುವುದಾಗಿ 'ಗೋಲ್ ಮಾಲ್' ನಡೆಸಿರುವ ಪ್ರಕರಣ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ.

ಬಯಲೇ ಎಲ್ಲಾ ; ಮೈದಾನವೂ ಇಲ್ಲ


ಗುಂಡ್ಲುಪೇಟೆ ತಾಲೂಕು ಕೇಂದ್ರದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ 49 ಮಕ್ಕಳಿಗೆ ಇರುವುದೊಂದೇ ಕೊಠಡಿ. ಅದು ಶಿಥಿಲಾವಸ್ಥೆಯಲ್ಲಿ. ಜತೆಗೆ ಶೌಚಾಲಯ, ಕುಡಿಯುವ ನೀರು ಹಾಗೂ ಆಟದ ಮೈದಾನವೂ ಇಲ್ಲದೇ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

ಈ ವಾರದ ಸ್ಲೈಡ್ ಶೋ

ಟೀಕೆ ಸಾಕು; ಚಿಕಿತ್ಸಕ ದೃಷ್ಟಿ ಬೇಕು


ಮೈಸೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಕೋಮು ಗಲಭೆಗೆ ಕಾರಣ, ರಾಜಕೀಯ ಶಕ್ತಿಗಳ ಹುನ್ನಾರ ಮತ್ತಿತರ ವಿಷಯಗಳ ಕುರಿತು ತಜ್ಞರ ಅಭಿಮತ.

ಕಪಿಲಾ ಸೇತುವೆಯಲ್ಲಿ ಭಾರಿ ಬಿರುಕು


ರಾಷ್ಟ್ರೀಯ ಹೆದ್ದಾರಿ 212ರ ಕಪಿಲಾ ನದಿ ಸೇತುವೆ ಕುಸಿಯುತ್ತಿದೆ. ಇದರ ಮಧ್ಯಭಾಗದಲ್ಲಿ ಕಾಂಕ್ರಿಟ್ ಕುಸಿದು ಹೊಂಡ ನಿರ್ಮಾಣವಾಗಿದೆ. ವಾಹನ ಸಂಚರಿಸಿದರೆ ಸೇತುವೆಯೇ ಅಲುಗಾಡುವಂತಾಗಿದೆ.

ಮೈಸೂರು ಮೃಗಾಲಯಕ್ಕೆ 'ಹೊಸ ಅತಿಥಿ'ಗಳು


ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ವನ್ಯಜೀವಿ ಸಮೂಹದ ಅಪರೂಪದ ಪ್ರಾಣಿಗಳಾದ ಏಷ್ಯಾ ಕಪ್ಪು ಕರಡಿ, ಪಟ್ಟೆ ಕತ್ತೆಕಿರುಬ, ಕಾಡು ಬೆಕ್ಕುಗಳು ಹೊಸ ಅತಿಥಿಗಳಾಗಿ ಆಗಮಿಸಿವೆ.

ಗಗನಚುಕ್ಕಿ, ಭರಚುಕ್ಕಿ ಭಣಭಣ


ರಾಜ್ಯದೆಲ್ಲೆಡೆ ಜೋರು ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗುತ್ತಿವೆ. ಆದರೆ ಪ್ರಸಿದ್ಧ ಗಗನಚುಕ್ಕಿ, ಭರಚುಕ್ಕಿ ಜಲಪಾತಗಳಲ್ಲಿ ನೀರೇ ಇಲ್ಲ. ಚಾಮರಾಜನಗರ ಜಿಲ್ಲಾದ್ಯಂತ ಈ ಬಾರಿ ಅಷ್ಟು ಮಳೆಯಾಗದಿರುವುದೇ ಇದಕ್ಕೆ ಕಾರಣ.

ತಪ್ಪು ಯಾರದ್ದೇ ಆದರೂ ಆತಂಕ ಮಾತ್ರ ಸಾರ್ವಜನಿಕರಿಗೇ !


ಮೈಸೂರಿನಲ್ಲಿ ಗುರುವಾರ ನಡೆದ ಪಿಎಫ್ಐ ಕಾರ್ಯಕರ್ತರ ಜೈಲ್ ಭರೋ ಘಟನೆಗೆ ಪೊಲೀಸ್, ಗುಪ್ತಚರ ಇಲಾಖೆ ಅಥವಾ ಇನ್ಯಾರದ್ದೇ ತಪ್ಪಾಗಿರಬಹುದು. ಆದರೆ ಅದರ ಪರಿಣಾಮ ಮಾತ್ರ ಸಾರ್ವಜನಿಕರೇ ಎದುರಿಸುವಂತಾಗಿದೆ.

ಅಪಾಯದ ಅಂಚಿನಲ್ಲಿ ರಾಷ್ಟ್ರೀಯ ಹೆದ್ದಾರಿ ಸೇತುವೆ !


ರಾಷ್ಟ್ರೀಯ ಹೆದ್ದಾರಿ ಮೈಸೂರು-ನಂಜನಗೂಡು ರಸ್ತೆಯ ಹುಲ್ಲಹಳ್ಳಿ ನಾಲೆ ಸೇತುವೆ ಶಿಥಿಲವಾಗಿದ್ದು, ಅಪಾಯದ ಅಂಚಿನಲ್ಲಿದೆ. ಈ ರಸ್ತೆಯಲ್ಲಿ ನಿತ್ಯ ರಾಜ್ಯ-ಹೊರ ರಾಜ್ಯಗಳಿಗೆ ಭಾರಿ ವಾಹನಗಳು ಸಂಚರಿಸುತ್ತಿದ್ದು, ಯಾವುದೇ ಸಂದರ್ಭದಲ್ಲೂ ಅಪಾಯ ಎದುರಾಗಬಹುದಾಗಿದೆ.

ವಾರಕ್ಕೊಂದು ಸ್ಲೈಡ್ ಶೋ

ವಿಜಯ ಕರ್ನಾಟಕ ಮೈಸೂರು ಆವೃತ್ತಿ ತನ್ನ ಬ್ಲಾಗ್ ನಲ್ಲಿ ವಾರಕ್ಕೊಮ್ಮೆ ಸ್ಲೈಡ್ ಶೋ ಆರಂಭಿಸಲಿದೆ.
ಇದು ವಿಶೇಷವೇ. ವಾರಕ್ಕೊಮ್ಮೆ ನಮ್ಮ ಆವೃತ್ತಿಯಲ್ಲಿ ಲಭ್ಯವಾಗುವ ಮಾನವಾಸಕ್ತಿ ವಿಷಯಗಳ ಛಾಯಾಚಿತ್ರ, ಸಾಂಸ್ಕೃತಿಕ ಕಾರ್ಯಕ್ರಮಗಳ ಛಾಯಾಚಿತ್ರಗಳ ಗುಚ್ಛವನ್ನು ಇಲ್ಲಿ ಪ್ರಸ್ತುತಪಡಿಸಲಾಗುವುದು.
ವಿಶೇಷವಾಗಿ ಕಣ್ಮನಕ್ಕೆ ತಲುಪಲೆಂದು ಈ ಪ್ರಯತ್ನ ಆರಂಭಿಸಲಾಗಿದೆ. ಪ್ರತಿ ಸೋಮವಾರ ಸ್ಲೈಡ್ ಶೋ ಪ್ರದರ್ಶನಗೊಳ್ಳಲಿದೆ. ಈ ವಾರ ಕೊಡಗು, ಮೈಸೂರು ಭಾಗದಲ್ಲಿ ಮಳೆಯ ಸನ್ನಿವೇಶಗಳನ್ನು "ಮುಂಗಾರು ಮಳೆ" ಶೋ ದಲ್ಲಿ ಬಿಂಬಿಸಲಾಗಿದೆ. ನೋಡಿ, ಅಭಿಪ್ರಾಯ ತಿಳಿಸಿ.

ಮುಂಗಾರು ಮಳೆ

ಸಾಂಸ್ಕ್ರತಿಕ ಗುತ್ತಿಗೆದಾರರ ಹಿಡಿತಕ್ಕೆ ರಂಗಾಯಣ !


ಈಗಾಗಲೇ ಮೂವರು ಹಳೆ ಸದಸ್ಯ(ರಿಪೀಟರ್ಸ್)ರಿಂದಲೇ ತುಂಬಿರುವ ಮೈಸೂರಿನ ರಂಗಾಯಣದ ರಂಗ ಸಮಾಜಕ್ಕೆ ಮತ್ತೊಬ್ಬ ಹಳಬರನ್ನೇ ಸೇರಿಸುವ ಪ್ರಯತ್ನ ನಡೆದಿರುವುದು ರಂಗವಲಯದಲ್ಲಿ ವಿವಾದಕ್ಕೆ ಗುರಿಯಾಗಿದೆ.

ಕೊಡಗಿನಲ್ಲಿ ಕಾಡಾನೆಗಳ ಅಸ್ವಾಭಾವಿಕ ಸಾವು


ಆಹಾರ, ನೀರಿಗಾಗಿ ನಾಡಿಗೆ ನುಸುಳುತ್ತಿರುವ ಕಾಡಾನೆಗಳ ಅಸ್ವಾಭಾವಿಕ ಸಾವು ಕಳವಳ ತಂದಿದ್ದು, ಐದು ವರ್ಷದಲ್ಲಿ 46 ಆನೆಗಳು ಮೃತಪಟ್ಟಿವೆ.

ನಿವೇಶನಾಕಾಂಕ್ಷಿಗಳಿಗೆ ಸಿಹಿಸುದ್ದಿ !


ಚಾಮರಾಜನಗರ ಅಭಿವೃದ್ಧಿ ಪ್ರಾಧಿಕಾರ (ಚೂಡಾ) ರಚನೆಯಾಗಿ 11 ವರ್ಷದ ನಂತರ ಇದೇ ಪ್ರಥಮ ಬಾರಿಗೆ ನಗರದ ಸಾರ್ವಜನಿಕರಿಗೆ ನಿವೇಶನಗಳನ್ನು ವಿತರಿಸಲು ಸುಮಾರು 34 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ಜಾಗವನ್ನು ಗುರುತಿಸಲಾಗಿದೆ.

ಪ್ರವಾಸೋದ್ಯ, ಪಾರಂಪರಿಕ ಇಲಾಖೆ ಮೇಲೆ ಕೆಂಗಣ್ಣು


ಜವಹರ್ ಲಾಲ್ ನೆಹರು ರಾಷ್ಟ್ರೀಯ ನಗರ ಪುನರುಜ್ಜೀವನ ಯೋಜನೆ (ಜೆಎನ್-ನರ್ಮ್)ಲಾಭ ಪಡೆಯುವ ವಿಚಾರದಲ್ಲಿ ಪ್ರವಾಸೋದ್ಯಮ ಮತ್ತು ಪಾರಂಪರಿಕ ಇಲಾಖೆ ತೀರಾ ಹಿಂದೆ ಬಿದ್ದಿರುವುದು ಸರಕಾರ ಕಣ್ಣನ್ನ ಕೆಂಪಾಗಿಸಿದೆ.

'ಯಾತ್ರಿ ನಿವಾಸ್' ಅನಾಥ


ತಲಕಾಡಿಗೆ ಬರುವ ಪ್ರವಾಸಿಗರಿಗೆ ಸುಸಜ್ಜಿತ ವಸತಿ ಸೌಲಭ್ಯ ಒದಗಿಸಲು ಮುಡುಕುತೊರೆ ಕಾವೇರಿ ನದಿ ದಂಡೆಯಲ್ಲಿ ನಿರ್ಮಿಸಿರುವ 'ಯಾತ್ರಿ ನಿವಾಸ್'ಆರಂಭವಾಗದೇ ಮೂರು ವರ್ಷಗಳಿಂದ ಅನಾಥವಾಗಿದೆ. ಇದರಿಂದ ಪ್ರವಾಸಿಗರಿಗೆ ಅನನುಕೂಲ ಉಂಟಾಗುತ್ತಿದೆ.

ಸಾವಿನ ಹಿಂದೆ ಸಾವಿರ ಅನುಮಾನ !


ಬಂಡೀಪುರ ರಾಷ್ಟ್ರೀಯ ಉದ್ಯಾನ ಎನ್.ಬೇಗೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಮೃತಪಟ್ಟಿರುವ ಹುಲಿಗಳ ಸಾವಿನ ಬಗ್ಗೆ ಹಲವಾರು ಸಂಶಯಗಳು ಉದ್ಭವಗೊಂಡಿವೆ.

ಸಂಪರ್ಕ ಸೇತುವೆಯೇ ಇಲ್ಲ !


ಹುಣಸೂರಿನ ಆಸ್ಪತ್ರೆ ಕಾವಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಗೊರವೆ ಮಾಳ ರಸ್ತೆಯಲ್ಲಿನ ದೊಡ್ಡ ಹಳ್ಳ ಹೆಬ್ಬಾಳಕ್ಕೆ ಸೇತುವೆ ನಿರ್ಮಿಸದಿರುವುದರಿಂದ ರೈತರು ಪರದಾಡುವಂತಾಗಿದೆ.

ಮೈಸೂರು ಸಂಸ್ಕೃತಿ ಸಿಂಚನ

ಬಂಡೀಪುರ: ಬೇಟೆಗಾರರಿಗೆ ಹುಲಿಗಳ ಬಲಿ ?


ಬಂಡೀಪುರ-ನಾಗರಹೊಳೆ ವ್ಯಾಪ್ತಿ ಹುಲಿಗಳಿಗೆ ಸುರಕ್ಷಿತವಾದ ತಾಣವಲ್ಲ ! ಇಂಥ ಒಂದು ಅನುಮಾನ ಇತ್ತೀಚೆಗೆ ದೃಢಪಡುತ್ತಿದೆ. ಏಕೆಂದರೆ ಈ ಎರಡು ರಾಷ್ಟ್ರೀಯ ಉದ್ಯಾನದಲ್ಲಿ ಆರು ತಿಂಗಳ ಅವಧಿಯಲ್ಲಿ ಐದು ಹುಲಿಗಳು ಪ್ರಾಣ ಕಳೆದುಕೊಂಡಿವೆ.

ಕೊಡಗಿನಲ್ಲಿ ಮುಂದುವರಿದ ಮಳೆ ಆರ್ಭಟ


ಕೊಡಗು ಜಿಲ್ಲೆಯಲ್ಲಿ ನೈಋತ್ಯ ಮುಂಗಾರು ಮಳೆ ಆರ್ಭಟ ಮುಂದುವರಿದಿದೆ.ತಲಕಾವೇರಿ, ಭಾಗಮಂಡಲ, ಮಡಿಕೇರಿ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ.

ಬೀರಂಬಳ್ಳಿ ಏತ ನೀರಾವರಿ ಯೋಜನೆ ಕಥೆ ಇದು !


ಈಗ ಉತ್ತಮ ಮಳೆಯಾಗುತ್ತಿದೆ. ಆದರೂ ಬೀರಂಬಳ್ಳಿ ಏತ ನೀರಾವರಿ ಯೋಜನೆ ಭಾಗದ ರೈತರಿಗೆ ಕುಡಿಯಲು ನೀರಿಲ್ಲ. ಕಾರಣ ಇಷ್ಟೇ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ.

ಇದು ಹುಲಿಯಮ್ಮ v/s ಹಲಿಮಾ


ಮೈಸೂರಿನ ಕ್ಯಾತಮಾರನಹಳ್ಳಿಗೆ ಹೊಂದಿಕೊಂಡಂತಿರುವ ಮದರಸಾ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಕೋಮಿನ ನಡುವೆ ಘರ್ಷಣೆ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ.