ವಿದೇಶಿಗರಿಗೆ ದಸರೆಯ ದರ್ಶನ: ವಿಶೇಷ ಪ್ಯಾಕೇಜ್‌ಗೆ ಚಿಂತನೆ

ವಿಕ ವಿಶೇಷ ಮೈಸೂರು
ಮೈಸೂರು ದಸರೆಯ ಸಾಂಪ್ರದಾಯಿಕ ಮುಖವನ್ನು ವಿದೇಶಿ ಪ್ರವಾಸಿಗರಿಗೆ  ಪರಿಚಯಿಸುವ ದೃಷ್ಟಿಯಿಂದ ವಿಶೇಷ ಪ್ಯಾಕೇಜ್ ರೂಪಿಸುವ ನಿಟ್ಟಿನಲ್ಲಿ ದಸರಾ ಸಮಿತಿ ಚಿಂತನೆ ನಡೆಸಿದೆ.
ಮನೆ ಮನೆಗಳಲ್ಲಿ ಬೊಂಬೆ ಕೂರಿಸಿ ಸಂಭ್ರಮಿಸು ವುದೂ ಸೇರಿ ಹಲವು ಸಾಂಪ್ರದಾಯಿಕ,ಸಾಂಸ್ಕೃತಿಕ ಆಚರಣೆಗಳು ದಸರೆಯನ್ನು ಶ್ರೀಮಂತಗೊಳಿಸುತ್ತವೆ. ದಸರೆ ಎಂದರೆ  ಅರಮನೆ ಸಂಗೀತ, ಜಂಬೂ ಸವಾರಿ ಎಂದಷ್ಟೆ  ತಿಳಿದ ಪ್ರವಾಸಿಗರಿಗೆ  ಇನ್ನಷ್ಟು ವೈವಿಧ್ಯಗಳ ದರ್ಶನ ಮಾಡಿಸುವುದು ಪ್ಯಾಕೇಜ್ ಉದ್ದೇಶ.
ಮೈಸೂರು ವಿಜಯ ಕರ್ನಾಟಕ ಕಚೇರಿಯಲ್ಲಿ ಶುಕ್ರವಾರ ನಡೆದ  `ಫೋನ್-ಇನ್ ಕಾರ್ಯಕ್ರಮ'ದಲ್ಲಿ ಭಾಗವಹಿಸಿದ್ದ  ದಸರಾ ವಿಶೇಷಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಈ ವಿಷಯ ತಿಳಿಸಿದರು.
`ದಸರಾ ಮಹೋತ್ಸವ ೨೦೧೧'ರ ಸಿದ್ಧತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಸ್ತ್ರದ್ ಅವರಿಗೆ ದಸರೆ ಹೊಸದಲ್ಲ. ಎರಡು ದಶಕದ ಹಿಂದೆ ನಡೆದ ದಸರೆಯಲ್ಲಿ ಕೆಲಸ ಮಾಡಿದ್ದಾರೆ.   
ಫೋನ್-ಇನ್‌ನಲ್ಲಿ  ಓದುಗರ ಪ್ರಶ್ನೆ-ಸಲಹೆಗಳಿಗೆ ಸ್ಪಂದಿಸಿದ ವಸ್ತ್ರದ್, ` ಈ ಬಾರಿ ಅನವಶ್ಯಕ ಖರ್ಚುಗಳಿಗೆ  ತಡೆ ಹಾಕುವುದು ನಿಶ್ಚಿತ. ಹಾಗೆಂದು ಕಾರ್ಯಕ್ರಮಗಳ ಗುಣಾತ್ಮಕತೆಯನ್ನು ನಿರ್ಲಕ್ಷಿಸುವುದಿಲ್ಲ.ಆಕರ್ಷಕ, ಗುಣಾತ್ಮಕ ಉತ್ಸವಕ್ಕೆ ಒತ್ತು ನೀಡಲಾಗುವುದು' ಎಂದರು.

ಇದು `ಕತ್ತಿ ವೀರ' ಅಲೆಮಾರಿಗಳ ಜನಪದ

 ವಿಕ ವಿಶೇಷ ಮೈಸೂರು
`ಮನುಷ್ಯನ ತಲೆ ಮೇಲೆ ಇಟ್ಟಿರುವ ಈರುಳ್ಳಿಯನ್ನು, ನಮ್ಮ ಹುಡುಗರು ಕುಣಿಯುತ್ತಾ ಕತ್ತಿ ಬೀಸಿ,  ಕ್ಷಣ ಮಾತ್ರದಲ್ಲಿ ತುಂಡು ಮಾಡುತ್ತಾರೆ. ಹೊಟ್ಟೆಯ ಮೇಲೆ ನಿಂಬೆ ಹಣ್ಣು ಇಟ್ಟು, ಅದನ್ನೂ ಡಾಲು ಕತ್ತಿಯಿಂದ ಕತ್ತರಿಸಬಲ್ಲರು.  ನಮ್ಮ  ಈ ಕಲೆಯನ್ನು ಮೈಸೂರು ದಸರಾಗೆ ಪರಿಚಯಿಸಬೇಕೆಂಬ ಇರಾದೆ ಸ್ವಾಮಿ. ಅವಕಾಶ ನೀಡುವಿರಾ ?' 
- ಉತ್ತರ ಕರ್ನಾಟಕ ಸೀಮೆಯ ಅಲೆಮಾರಿ ಜನಾಂಗಕ್ಕೆ ಸೇರಿದ ದಾಲಪಟಾ ಕಲಾವಿದರು  ಮೈಸೂರು ಜಿಲ್ಲಾಧಿಕಾರಿ  ಮುಂದಿಟ್ಟರುವ ಮನವಿ ಇದು. ದಸರಾ ಸಮೀಪಿಸಿತು ಅಂದ್ರೆ ಬಗೆಬಗೆಯ ಜನಪದ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಪ್ರಭಾವ ಬೀರಿ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವುದು ಸಾಮಾನ್ಯ. 
ಆದರೆ, ಗುರುವಾರ  ಜಿಲ್ಲಾಧಿಕಾರಿ ಪಿ. ಎಸ್. ವಸ್ತ್ರದ್ ಅವರನ್ನು ಕಾಣಲು ಬಂದಿದ್ದ ಕಲಾವಿದರು ಮಾತ್ರ ಮೈಸೂರು ದಸರೆಗೆ ಹೊಸಬರು.
ಹಳ್ಳಿ-ಹಳ್ಳಿಗೆ ತೆರಳಿ ಹೆಂಗಸರ ಕೂದಲು ಪಡೆದು, ಬಳೆ, ಕ್ಲಿಪ್, ಮುತ್ತಿನ ಸರದಂತಹ ಹೆಣ್ಣು  ಮಕ್ಕಳ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ  ಈ ಮಂದಿ, ಮನರಂಜನೆಗಾಗಿ ರೂಢಿಸಿಕೊಂಡಿರುವ ಕಲೆಯ ಹೆಸರು ದಾಲಪಟಾ !

ಶತಮಾನೋತ್ಸವ ಸಂಭ್ರಮದ ಕೆಪಿಎ ಪ್ರಕಟಣೆಯತ್ತ ಹೆಜ್ಜೆ

ಕುಂದೂರು ಉಮೇಶಭಟ್ಟ ಮೈಸೂರು
ಶತಮಾನದ ಹೊಸ್ತಿಲಲ್ಲಿರುವ ಮೈಸೂರು ಕೇಂದ್ರಿತ ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ) ಪ್ರಕಟಣೆ ಕಾರ್‍ಯ ಆರಂಭಿಸಿದೆ. ಪೊಲೀಸ್ ತನಿಖೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯ ಪುಸ್ತಕಗಳ ಪ್ರಕಟಣೆ ದೇಶದ ಪೊಲೀಸ್ ಅಕಾಡೆಮಿಗಳಲ್ಲಿ ಇದೇ ಪ್ರಥಮ.
ಅಪರಾಧ ಪತ್ತೆಯ ಪ್ರಕರಣಗಳು, ಸಿಆರ್‌ಪಿಸಿ, ತನಿಖೆಯಲ್ಲಿ ಪೊಲೀಸರು ಹಾಗೂ ಕ್ರಿಮಿನಲ್ ನ್ಯಾಯಾಲಯದ ಪಾತ್ರ ಸೇರಿದಂತೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವ ಪುಸ್ತಕಗಳನ್ನು ಖಾಸಗಿ ಸಂಸ್ಥೆಗಳು ಅಲ್ಲಲ್ಲಿ ಹೊರ ತಂದಿದ್ದರೂ ಪೊಲೀಸ್ ಅಕಾಡೆಮಿ ಇಂಥ ಪ್ರಯತ್ನ ಮಾಡು ತ್ತಿರುವುದು ಮೊದಲು. ಅದೂ ತರಬೇತಿ ಹಂತದಲ್ಲಿರುವ ಅಧಿಕಾರಿಗಳಿಂದಲೇ ಪುಸ್ತಕ ಸಿದ್ಧ ಪಡಿಸುವ ಮೂಲಕ ಮುಂದೆ ತರಬೇತಿ ಪಡೆ ಯುವವರು, ವಿದ್ಯಾರ್ಥಿಗಳಿಗೆ ಉಪಯುಕ್ತವಾಗ ಬಲ್ಲ ಪುಸ್ತಕಗಳನ್ನು ಅಕಾಡೆಮಿ ಹೊರ ತರುತ್ತಿದೆ.

ಡೆಕ್‌ನೊಂದಿಗೆ ಮುಕ್ತ ವಿವಿ ಸಂಘರ್ಷ

ಚೀ.ಜ.ರಾಜೀವ ಮೈಸೂರು
ದೂರ ಶಿಕ್ಷಣ ಪದ್ಧತಿಯಲ್ಲಿ ಎಂಜನಿಯರಿಂಗ್ ಪದವಿ ಆರಂಭಿಸುವ ತನ್ನ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಈ ವಿಷಯ ಕುರಿತು ತಕರಾರು ಎತ್ತಿರುವ  ದೂರ ಶಿಕ್ಷಣ ಮಂಡಳಿ(ಡಿಸ್ಟೆನ್ಸ್ ಎಜುಕೇಷನ್ ಕೌನ್ಸಿಲ್-ಡೆಕ್) ವಿರುದ್ಧ  ಕಾನೂನು ಸಂಘರ್ಷಕ್ಕೆ ಮುಂದಾಗಿದೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಅಂಗೀಕಾರ ಪಡೆಯದೇ ಬಿ.ಟೆಕ್,ಎಂ.ಟೆಕ್‌ನಂಥ ತಾಂತ್ರಿಕ  ಪದವಿ  ಶಿಕ್ಷಣ  ನೀಡುವ ಮುಕ್ತ ವಿವಿ ಕ್ರಮವನ್ನು ಪ್ರಶ್ನಿಸಿ ಡೆಕ್ ನೀಡಿರುವ  ಷೋಕಾಸ್ ನೋಟಿಸ್ ಹಾಗೂ ಜ್ಞಾಪನ ಪತ್ರಕ್ಕೆ ವಿವಿ ಕುಲಪತಿ ಪ್ರೊ. ಕೆ. ಎಸ್. ರಂಗಪ್ಪ  ಕಾರವಾದ ಪ್ರತಿಕ್ರಿಯೆ ಹೊಂದಿದ ಉತ್ತರವನ್ನು ರವಾನಿಸಿದ್ದಾರೆ.

ದಕ್ಷಿಣ ಪದವೀಧರರ ಕ್ಷೇತ್ರ: ಗರಿಗೆದರಿದ ರಾಜಕೀಯ

ಕುಂದೂರು ಉಮೇಶಭಟ್ಟ ಮೈಸೂರು
ಮೈಸೂರು ಕೇಂದ್ರಿತ ದಕ್ಷಿಣ ಶಿಕ್ಷಕರ  ಕ್ಷೇತ್ರಕ್ಕೆ ಮುಂದಿನ ಜೂನ್‌ನಲ್ಲಿ ಚುನಾವಣೆ ನಡೆಯಲಿದ್ದು, ಈಗಲೇ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.
ಅಕ್ಟೋಬರ್‌ನಲ್ಲಿ  ಅಧಿಸೂಚನೆ ಹೊರ ಬೀಳಲಿದ್ದು, ಆಗಿನಿಂದ ಮತದಾರರ ನೋಂದಣಿ ಆರಂಭವಾಗಲಿದೆ. ಈಗಲೇ ರಾಜಕೀಯ ಪಕ್ಷಗಳ ಮೂಲಕ ಟಿಕೆಟ್ ಪಡೆಯಲು ೨೦ಕ್ಕೂ ಹೆಚ್ಚು ಮಂದಿ ಲಾಬಿ ನಡೆಸಿದ್ದಾರೆ. ಚುನಾವಣೆಗೆ ಕಾವು ನೀಡುವಂತೆ  ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಸದಸ್ಯ ಮರಿತಿಬ್ಬೇಗೌಡರ ಹೆಸರು  ಪ್ರಕಟಿಸಲಾಗಿದೆ. ಇದರಿಂದ ಚಟುವಟಿಕೆಗಳು ಸದ್ದಿಲ್ಲದೇ ಗರಿಗೆದರಲಿವೆ.

ದಸರೆ ಗಜಪಯಣಕ್ಕೆ ಚಾಲನೆ

ವಿಕ ಸುದ್ದಿಲೋಕ  ವೀರನಹೊಸಳ್ಳಿ (ಹುಣಸೂರು ತಾಲೂಕು)
ವಿಶ್ವವಿಖ್ಯಾತ  ಮೈಸೂರು ದಸರೆಯ ಪ್ರಮುಖ ಆಕರ್ಷಣೆ  ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ `ಬಲರಾಮ' ನೇತೃತ್ವದ ಗಜಪಡೆಯ ಮೊದಲ ತಂಡ ಸೋಮವಾರ ಕಾಡಿನಿಂದ ನಾಡಿಗೆ  ಪಯಣ ಬೆಳೆಸಿತು.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನ ಗ್ರಾಮ ವೀರನಹೊಸಹಳ್ಳಿ ಗೇಟ್‌ನಲ್ಲಿ ಆಯೋಜಿಸಿದ್ದ ಕಾರ್‍ಯಕ್ರಮದಲ್ಲಿ,ಜಿಲ್ಲಾ ಉಸ್ತುವಾರಿ ಸಚಿವರಿಲ್ಲದ ಕಾರಣ ಗೃಹಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ  ಪುಷ್ಪಾರ್ಚನೆ ಮಾಡಿ `ಗಜಪಯಣ'ಕ್ಕೆ ಚಾಲನೆ ನೀಡಿದರು.

ದಸರಾ ಆನೆಗಳಿಗೆ ವಿಶೇಷ ಆರೈಕೆ

*ಹನಗೋಡು ನಟರಾಜ್ ಹುಣಸೂರು   
ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಬಲರಾಮ ಹಾಗೂ ಆತನ ಸಂಗಡಿಗರಿಗೆ ಈಗ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು ಆನೆ ಶಿಬಿರದಲ್ಲಿ ವಿಶೇಷ ಆರೈಕೆ.
ದಸರಾದಲ್ಲಿ ಪಾಲ್ಗೊಳ್ಳುವ ಅಭಿಮನ್ಯು ಸಹ ಇದೆ ಶಿಬಿರದಲ್ಲಿ ಇತರೆ ೧೪ ಆನೆ ಹಾಗೂ ೮ ತಿಂಗಳ ಮರಿಯೊಂದಿಗೆ ಆರೈಕೆ ಪಡೆಯುತ್ತಿದ್ದಾನೆ. ಒಟ್ಟು ೧೪ ಆನೆಗಳು ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು ಬಲರಾಮ, ಅಭಿಮನ್ಯು -ಮತ್ತಿಗೋಡು , ಅರ್ಜುನ, ಕೋಕಿಲ, ಗಂಗೆ- ಬಳ್ಳೆ, ಶ್ರೀರಾಮ, ಕಾಂತಿ, ಗಜೇಂದ್ರ- ಚಾಮರಾಜನಗರದ ಕೆ. ಗುಡಿ,  ಗೋಪಿ, ಕಾವೇರಿ- ದುಬಾರೆ ಕ್ಯಾಂಪಿನಲ್ಲಿ ಹಾಗೂ ಮೇರಿ, ಸರಳ ಸುಂಕದಕಟ್ಟ್ಟೆ ಶಿಬಿರಗಳಲ್ಲಿವೆ.
ಪ್ರತಿ ಬಾರಿಯೂ ಒಕ್ಕಣ್ಣ ಬಲರಾಮನಿಗೆ ಇದೇ ಕೊನೆ ದಸರಾ ಎಂದು ಹೇಳುತ್ತಿದ್ದರೂ ಪರ್‍ಯಾಯವಿಲ್ಲದೆ ಈ ಸಲವೂ ಆತನೇ ಮುಂದುವರೆಯಲಿದ್ದಾನೆ.

ಪಡಿತರ ಭ್ರಷ್ಟಾಚಾರ ಗಣಿಯಷ್ಟೇ ಘನಘೋರ !

*ವಿಕ ಸುದ್ದಿಲೋಕ ಮೈಸೂರು
`ಹದಿನಾಲ್ಕು ತಿಂಗಳ ಅವಧಿಯಲ್ಲಿ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟ ೧೮೨೭ ಕೋಟಿ ರೂಪಾಯಿ. ಆದರೆ  ರಾಜ್ಯದ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ನಡೆದಿರುವ  ಭ್ರಷ್ಟಾಚಾರ ಹಾಗೂ ಅಕ್ರಮದ  ಪರಿಣಾಮ ವಾರ್ಷಿಕ ೧೭೩೭.೬೦ ಕೋಟಿ ರೂ. ಸೋರಿಕೆಯಾಗಿದೆ. ಪರಿಣಾಮದಲ್ಲಿ ಯೋಚಿಸಿದಾಗ, ಗಣಿಗಾರಿಕೆ ಅಕ್ರಮಕ್ಕಿಂತ, ಪಡಿತರ ಅಕ್ರಮವೇ ಆತಂಕಕಾರಿ' ಎಂದು ಪಡಿತರ   ತನಿಖೆ ನಡೆಸಿರುವ ಡಾ.ಆರ್. ಬಾಲಸುಬ್ರಮಣ್ಯಂ ಹೇಳಿದ್ದಾರೆ.
ಗಣಿ ಹಗರಣದಲ್ಲಿ ಒಂದಿಷ್ಟು ಮಂದಿ ಸೇರಿಕೊಂಡು ಬೊಕ್ಕಸಕ್ಕೆ ಬರಬೇಕಿದ್ದ ಕೋಟ್ಯಂತರ ರೂ. ಹಣವನ್ನು ತಾವಷ್ಟೇ ನುಂಗಿ ಹಾಕಿದ್ದಾರೆ. ಆದರೆ, ಪಡಿತರ ಅಕ್ರಮದಲ್ಲಿ  ಸೋರಿಕೆಯಾಗಿರುವುದು ಸರಕಾರದ ಹಣ ಮಾತ್ರವಲ್ಲ.  ಲಕ್ಷಾಂತರ ಶ್ರೀ ಸಾಮಾನ್ಯರ ಹಣವನ್ನೂ ವ್ಯವಸ್ಥೆಯಲ್ಲಿರುವ ವಂಚಕರು ಸೇರಿಕೊಂಡು ಲೂಟಿ ಮಾಡಿದ್ದಾರೆ. ಪ್ರಮಾಣದಲ್ಲೂ  ಪಡಿತರ ಅಕ್ರಮ  ಗಣಿಗಾರಿಕೆಗಿಂತ  ೯೦ ಕೋಟಿ ರೂ. ಕಡಿಮೆಯಷ್ಟೆ. ಆದರೂ ಗಣಿ ಅಕ್ರಮದ ಅಬ್ಬರದಲ್ಲಿ , ಪಡಿತರದ ಅಕ್ರಮ ಸದ್ದು ಮಾಡಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಪ್ಪಚ್ಚುಗೆ ಈಗಲೂ ಮಂತ್ರಿ ಸ್ಥಾನ ಅನುಮಾನ ?

*ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ರಾಜ್ಯದ  ಮುಖ್ಯಮಂತ್ರಿಯಾಗಿ ಕೊಡಗಿನ ಅಳಿಯ ಡಿ.ವಿ. ಸದಾನಂದ ಗೌಡ ಅಧಿಕಾರ ವಹಿಸಿಕೊಂಡ ಬಳಿಕ ಆಡಳಿತಾರೂಢ ಬಿಜೆಪಿಯಲ್ಲಿ ಕೂಡುವ- ಕಳೆಯುವ ಲೆಕ್ಕಾಚಾರ ಪ್ರಾರಂಭವಾಗಿವೆ.
ಚಿರಪರಿಚಿತ ಡಿವಿ ಆಯ್ಕೆ ಕೊಡಗಿನಲ್ಲಿ ಹಲವರಿಗೆ ಸಿಹಿ, ಮತ್ತೆ ಕೆಲವರಿಗೆ ಕಹಿಯಾಗಿ ಪರಿಣಮಿಸಿದೆ. ಕೆಲವರು ಪರಿಸ್ಥಿತಿ ಲಾಭ ಪಡೆಯುವುದು ಹೇಗೆ ಎಂಬ ಹವಣಿಕೆಯಲ್ಲಿದ್ದಾರೆ.
೩ನೇ ಬಾರಿಗೆ ಶಾಸಕರಾಗಿರುವ ಮಡಿಕೇರಿ ಕ್ಷೇತ್ರದ ಎಂ.ಪಿ. ಅಪ್ಪಚ್ಚು ರಂಜನ್  ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಕಾಲಘಟ್ಟದಲ್ಲಿಯೇ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಸಚಿವ ಸಂಪುಟದ ಪ್ರಥಮ ವಿಸ್ತರಣೆ ಸಂದರ್ಭದಲ್ಲಿ ಇದ್ದ ಹೆಸರು ಅಂತಿಮ ಕ್ಷಣದಲ್ಲಿ  ನಡೆದ ಕಸರತ್ತಿನಿಂದ ತಪ್ಪಿಹೋಯಿತು. ಅನಂತರದ ವಿದ್ಯಮಾನದಲ್ಲಿ ಅಪ್ಪಚ್ಚು ಪರ ಲಾಬಿ ಮಾಡುವವರಿಗಿಂತ ಅಡ್ಡಗಾಲು ಹಾಕುವವರ ಪ್ರಭಾವವೇ ಹೆಚ್ಚಾಯಿತು. ಹೀಗಾಗಿ ಅವರ ಆಸೆ ಕೈಗೂಡಲೇ ಇಲ್ಲ.

ಆ ಘಟನೆ ಒಡಹುಟ್ಟಿದವರ ಬಾಲ್ಯಕ್ಕೇ ಕೊಡಲಿ ಪೆಟ್ಟು

ಆರ್.ಕೃಷ್ಣ ಮೈಸೂರು
ನಕ್ಕು-ನಲಿದು ಶಾಲೆಗೆ ಹೋಗಬೇಕಾದ ಕಂದಮ್ಮಗಳಿಗೆ ಈಗ ಹಾಸಿಗೆಯೇ ಆಧಾರ.
ಬ್ಯಾಗು ಹೆಗಲಿಗೆ ಏರಿಸಿ ಉಲ್ಲಸಿತ ಮನಸ್ಸಿನಿಂದ ಹಾರಾಡಬೇಕಾದ ಮಕ್ಕಳು, ಒಂದು ಹೆಜ್ಜೆ ಇಡಲು ಇತರರನ್ನು ಆಶ್ರಯಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.
ಎಲ್ಲರಂತೆ ಓಡಾಡಿಕೊಂಡಿದ್ದ ಎಚ್.ಡಿ.ಕೋಟೆ ತಾಲೂಕು ಮಾದಾಪುರದ ಮೋಹನ್‌ರಾವ್ ಮಕ್ಕಳಾದ ಪವನ್ (೧೭), ಲಾವಣ್ಯ (೧೪) ಹಾಗೂ ವೇದಲಕ್ಷ್ಮಿ (೧೨) ಅವರು ಎಂಟು ತಿಂಗಳಿನಿಂದ ನಡೆಯಲಾಗದ ಅಸಹಾಯಕತೆಯಲ್ಲಿದ್ದಾರೆ. ಚಂದದ ನಗುವಿನ ಇವರ ಬಾಳನ್ನು ಅಪಘಾತ ನುಂಗಿ ಹಾಕಿದೆ.

ಕಾವೇರಿ ಕಣಿವೆಯಲ್ಲಿ ಗೌಡರ ಪ್ರಭಾವ ನಡೆದೀತೆ?

ಕೂಡ್ಲಿ ಗುರುರಾಜ ಮೈಸೂರು
ರಾಜ್ಯದ  ನೂತನ ಮುಖ್ಯಮಂತ್ರಿಯಾಗಲಿರುವ ಒಕ್ಕಲಿಗ ಸಮುದಾಯದ ಬಿಜೆಪಿಯ ಡಿ.ವಿ. ಸದಾನಂದ ಗೌಡರು ಕಾವೇರಿ ಕಣಿವೆ ಪ್ರದೇಶದಲ್ಲಿ ಒಕ್ಕಲಿಗ ಸಮಾಜವನ್ನು ಪಕ್ಷದ ಕಡೆಗೆ ಸೆಳೆಯಬಲ್ಲರೇ?
ಸದಾನಂದಗೌಡರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಚುನಾಯಿತರಾಗುತ್ತಿದ್ದಂತೆ ಇಂಥ ದ್ದೊಂದು ಪ್ರಶ್ನೆ ಕೇಳಿ ಬಂದಿದೆ. ಯಾಕೆಂದರೆ, ಈ ಭಾಗದಲ್ಲಿ ಬಿಜೆಪಿಗೆ ಒಕ್ಕಲಿಗ ಸಮಾಜದಲ್ಲಿ ಹೇಳಿ ಕೊಳ್ಳುವಂತ ನೆಲೆ ಇಲ್ಲ. ಆ ಸಮುದಾಯದ ಮೇಲೆ ರಾಜಕೀಯವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಂದಿ ರುವ ಪ್ರಾಬಲ್ಯ ಬಿಜೆಪಿಗೆ ಇಲ್ಲ. ಇಂತಹ ಸ್ಥಿತಿಯಲ್ಲಿ ಸದಾನಂದಗೌಡರ ನಾಯಕತ್ವ ಬಿಜೆಪಿ ಕಡೆಗೆ ಈ ಸಮುದಾಯ ಒಲಿಯುವಂತೆ ಮಾಡಬಲ್ಲದೇ ಎಂಬುದೇ ಪ್ರಶ್ನೆ.

ಸಿಂಡಿಕೇಟ್ ಸದಸ್ಯರ ರಾಜಕೀಯ ಫಲ

ವಿಕ ವಿಶೇಷ  ಮೈಸೂರು
ವಿಶ್ವವಿದ್ಯಾನಿಲಯಗಳ  ನೀತಿ  ನಿರೂಪಿಸುವ ಸಿಂಡಿಕೇಟ್‌ನಂಥ ಸಂಸ್ಥೆಗಳಿಗೆ ರಾಜಕೀಯ ಹಿನ್ನೆಲೆಯ ವ್ಯಕ್ತಿಗಳು ಬಂದ್ರೆ ಏನಾಗುತ್ತದೆ ?
ವಿವಿ ಕೈಗೊಳ್ಳುವ ಕ್ರಮ ಕೂಡ ದಿಕ್ಕು ತಪ್ಪುತ್ತದೆ.  ಮಾಹಿತಿ ಹಕ್ಕು ಕಾಯಿದೆ  ಇದಕ್ಕೊಂದು ಪುರಾವೆ ಒದಗಿಸಿದೆ.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಒಂದೇ ರೀತಿಯ ಎರಡು ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ವಿವಿ ಒಂದೇ ರೀತಿಯ ಕ್ರಮ ಜರುಗಿಸಿಲ್ಲ.  ಗಂಭೀರ ಸ್ವರೂಪದ ತಪ್ಪು ಮಾಡಿರುವ ಒಬ್ಬ ನೌಕರನ ವಿರುದ್ಧ  ಕ್ರಿಮಿನಲ್ ಮೊಕದ್ದಮೆ ಹೂಡಿ ಅಮಾನತುಗೊಳಿಸಿರುವ ವಿವಿ, ಅದೇ ಮಾದರಿಯ ತಪ್ಪು ಎಸಗಿದ ಇನ್ನೊಬ್ಬ ನೌಕರನಿಗೆ ಹಿಂಬಡ್ತಿ ಶಿಕ್ಷೆಯನ್ನಷ್ಟೇ ನೀಡಿದೆ.  ಒಂದು ಕಣ್ಣಿಗೆ ಬೆಣ್ಣೆ,  ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಕಾಣುವ ಈ ನೀತಿಗೆ ವಿವಿಯ ಅಧಿಕಾರಿಗಳಾಗಲಿ, ಪ್ರಾಧ್ಯಾಪಕರಾಗಲಿ ಕಾರಣವಲ್ಲ. ಬದಲಿಗೆ ರಾಜಕೀಯ ಹಿನ್ನೆಲೆಯ  ಸಿಂಡಿಕೇಟ್ ಸದಸ್ಯರು, ವಿವಿ ಅಧಿಕಾರಿಗಳ ಮೇಲೆ ಒತ್ತಡ ತಂದು ಇಬ್ಬಂದಿ ನೀತಿ ತುಳಿಯುವಂತೆ ಮಾಡಿದ್ದಾರೆ.

ಜನಪ್ರತಿನಿಧಿಗಳಿಗೆ ಮುಡಾ ಮೇಲೆ ಆಸಕ್ತಿ, ನಗರಪಾಲಿಕೆ ಮೇಲೆ ನಿರಾಸಕ್ತಿ

ಕುಂದೂರು ಉಮೇಶ ಭಟ್ಟ  ಮೈಸೂರು
ಮಳೆಗಾಲ ಈಗಿನ್ನೂ ಶುರುವಾಗಿದೆ, ಈಗಲಾದರೂ ಪಾಲಿಕೆ ಆಡಳಿತ ಎಚ್ಚೆತ್ತುಕೊಳ್ಳಲಿ...
ಇದು ಕಳೆದ ಆರು ದಿನದಿಂದ ವಿಜಯಕರ್ನಾಟಕ ಪ್ರಕಟಿಸಿದ ಮಳೆ ಅಭಿಯಾನದ ಮೂಲಕ ಜನತೆ ಮಾಡಿಕೊಂಡ ಆಗ್ರಹ.
ಅಭಿವೃದ್ಧಿಯತ್ತ ಮುಖ ಮಾಡಿರುವ ಮೈಸೂರು ಸಮಸ್ಯೆಗಳನ್ನು ಎದುರಿಸಲು ಸಜ್ಜಾಗಿಲ್ಲ. ಮಳೆ ಬಂದರೆ ಮೈಸೂರು ದ್ವೀಪವಾಗಿ ಮಾರ್ಪಡುತ್ತದೆ. ಜನರ ತೊಂದರೆ ಹೇಳತೀರದು.

ಇದು ಚಿತ್ರಕಥೆಯಲ್ಲ...ಸತ್ಯ ಕಥೆ

ಆರ್. ಕೃಷ್ಣ ಮೈಸೂರು
ಇದು `ಚಲುವಿನ ಚಿತ್ತಾರ' ಚಿತ್ರದ್ದೇ ತದ್ರೂಪ ಕಥೆ!
ಆಶ್ಚರ್‍ಯ ಎಂದರೆ ಈ ಚಿತ್ರ, ಚಿತ್ರೀಕರಣಗೊಂಡ ತಿ.ನರಸೀಪುರದ ನೆಲದಲ್ಲಿಯೇ ನಡೆದ ಸತ್ಯ ಘಟನೆ. ಆದರೆ ಇಲ್ಲಿ ಪ್ರೇಮಿಗಳು ಒಂದಾಗಿ ಸುಖ ಜೀವನಕ್ಕೆ ನಾಂದಿ ಹಾಡಿದ್ದಾರೆ. ಅಪ್ರಾಪ್ತ ವಯಸ್ಸಿ ನಲ್ಲಿಯೇ ಚಿಗುರಿದ ಪ್ರೀತಿಗೆ ಜಾತಿ, ಅಂತಸ್ತು ಅಡ್ಡ ಬಂದರೂ, ಅದನ್ನು ಲೆಕ್ಕಿಸದೆ ಪ್ರೇಮಿಗಳು ಒಂದಾಗಿದ್ದಾರೆ.
ಪ್ರೇಮ ಪಾಶಕ್ಕೆ ಸಿಲುಕಿದ್ದ ಹುಡುಗಿ, ಮನೆ ಯವರ ಬಲವಂತಕ್ಕೆ ಬೇರೊಬ್ಬನನ್ನು ಮದುವೆ ಆದರೂ, ನಾಲ್ಕೇ ದಿನದಲ್ಲಿ ಗಂಡನನ್ನು ತೊರೆದು ಪ್ರೇಮಿಯನ್ನು ಕೂಡಿಕೊಂಡಿದ್ದಾಳೆ. ತಿ.ನರಸೀಪುರದ ಮಹಾದೇವಸ್ವಾಮಿ (೨೪) ಹಾಗೂ ಹೇಮಲತಾ (೧೯) ಒಂದಾದ ಪ್ರೇಮಿಗಳು.

ಮನೆ ಬಾಗಿಲಲ್ಲೇ ರೋಗ !

ಜೆ.ಶಿವಣ್ಣ  ಮೈಸೂರು
ಎಚ್ಚರ, ಮಳೆಗಾಲ ಬಂತೆಂದರೆ ಸಾಂಕ್ರಾಮಿಕ ರೋಗಗಳೂ ಮೈಮುರಿದು ಏಳುತ್ತವೆ !
ಮಾನ್ಸೂನ್ ಪೂರ್ವ ಮತ್ತು ಮಾನ್ಸೂನ್ ಬಳಿಕ  ಸಾಂಕ್ರಾಮಿಕ ರೋಗಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಸ್ವಲ್ಪವೇ ಅಲಕ್ಷ್ಯವಹಿಸಿದರೂ ಅಮರಿಕೊಳ್ಳುತ್ತವೆ. ಇಲ್ಲದ ಕಾಯಿಲೆಗಳನ್ನು ತಂದೊಡ್ಡುತ್ತವೆ. ಮಳೆ ಎಂದರೆ ರೋಗ ವಾಹಕಗಳಿಗೆ ಹಬ್ಬ. ಎಲ್ಲೆಂದರಲ್ಲಿ ನಿಲ್ಲುವ ಮಳೆ ನೀರು ರೋಗ ವಾಹಕಗಳಿಗೆ ಆಶ್ರಯ ತಾಣ.
ಸೊಳ್ಳೆಗಳು ಆ ರೋಗ ವಾಹಕಗಳು. ಮಳೆಗಾಲದಲ್ಲಿ ಸಾಮಾನ್ಯವಾಗಿ ಮಲೇರಿಯ, ಮೆದುಳು ಜ್ವರ, ಡೆಂಗೆ ಜ್ವರ, ಚಿಕೂನ್ ಗುನ್ಯಾ, ಜ್ವರ, ಕೆಮ್ಮು, ಶೀತ, ನೆಗಡಿ,ತಲೆನೋವು, ಗಂಟಲು, ಮೈ-ಕೈ ನೋವು, ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳುತ್ತದೆ.