ತಂಬಾಕಿಗೆ ಬಂಪರ್ ಬೆಲೆ !



ನಮ್ಮ ವಿಶೇಷ ವರದಿಗಳನ್ನು ಓದಿ, ನೋಡಿ ಅಭಿಪ್ರಾಯ ತಿಳಿಸಿ.

ಮೈಸೂರು : "ವಿ"ಜಯ ಯಾತ್ರೆಗೆ ಮೂವರು !


ಮೈಸೂರು ಲೋಕಸಭಾ ಕ್ಷೇತ್ರದ ಕುತೂಹಲವಿದು. ವಿಜಯಕ್ಕಾಗಿ ಪರಸ್ಪರ ಮುಖಾಮುಖಿಯಾಗುತ್ತಿರುವ ಮೂವರಲ್ಲೂ "ವಿ" ಇದ್ದೇ ಇದೆ. ಹಾಗಾಗಿ ಎಲ್ಲರೂ ನಾವೇ ಗೆಲ್ಲುತ್ತೇವೆ ಎನ್ನುವುದು ಸಹಜವೇ.

ವಿಕ ಛಾಯಾಗ್ರಾಹಕರ ಆಲ್ಬಂ

ನಮ್ಮ ಸಂಚಿಕೆಗೆ ಹೊಸದಾಗಿ ಸೇರಿರುವುದು "ವಿಕ ಛಾಯಾಗ್ರಾಹಕರ ಆಲ್ಬಂ". ಇದು ನಮ್ಮ ಪತ್ರಿಕೆಯ ವಿವಿಧ ಆವೃತ್ತಿಗಳಲ್ಲಿರುವ ಛಾಯಾಗ್ರಾಹಕರು ತೆಗೆದ ಮಾನವಾಸಕ್ತಿ ಛಾಯಾಚಿತ್ರಗಳ ವೇದಿಕೆ.
ನಮ್ಮ ಪತ್ರಿಕೆಯ ಹತ್ತು ಆವೃತ್ತಿಯಲ್ಲಿರುವ ಛಾಯಾಗ್ರಾಹಕರು ಸದಾ ಸುದ್ದಿಯೊಡನೆ ಇರುವವರೇ. ಆದರೆ ಅದರ ಮಧ್ಯೆಯೂ ಒಂದಿಷ್ಟು ಬಿಡುವು ಮಾಡಿಕೊಂಡು ತಮ್ಮಿಚ್ಛೆಯ ಫೋಟೋಗಳನ್ನು ತೆಗೆಯುವುದು ಒಂದು ಬಗೆಯಲ್ಲಿ "ತಮ್ಮ ಸ್ಪೇಸ್' ಹುಡುಕಿಕೊಳ್ಳುವ ಬಗೆ. ಹೊಸ ಬಗೆಯಲ್ಲಿ, ಮನಸ್ಸಿಗೆ ಖುಷಿ ತರುವ ಛಾಯಾಚಿತ್ರಗಳನ್ನು ತೆಗೆಯುತ್ತಾರೆ. ಹಾಗೆ ತೆಗೆದ ಎಲ್ಲದಕ್ಕೂ ಪತ್ರಿಕೆಯಲ್ಲಿ ಅವಕಾಶ ಸಿಗದು. ಅಂಥ ಸಂದರ್ಭದಲ್ಲಿ ತಮ್ಮ ಫೋಲ್ಡರ್ ನಲ್ಲೇ ಸ್ಥಾನ ನೀಡಿರುತ್ತಾರೆ. ನಮ್ಮ ವಿಕ ಆಲ್ಬಂ ಅಂಥ ಛಾಯಾಚಿತ್ರಗಳಿಗೆ ವೇದಿಕೆ.
ಆರಂಭಕ್ಕೆ ಮಂಗಳೂರು ಆವೃತ್ತಿಯ ಜಿ. ಕೆ. ಹೆಗಡೆ ಅವರು ತೆಗೆದ ಛಾಯಾಚಿತ್ರಗಳನ್ನು ನೀಡಲಾಗಿದೆ. ನೋಡಿ ಅಭಿಪ್ರಾಯ ತಿಳಿಸಿ.

ಹುಳಿ ಮಾವಿಗೆ ಸವಿಯ ಕಸಿ !


ಮೈಸೂರು ಜಿಲ್ಲೆಯಲ್ಲಿ ಹುಳಿ ಮಾವಿಗೆ ಸವಿ ಬೆರೆಸುವ ಕೆಲಸ ನಡೆದಿದೆ. ತೋಟಗಾರಿಕೆ ಇಲಾಖೆ ಕೈಗೊಂಡಿರುವ "ಪುನರುಜ್ಜೀವನ" ಯೋಜನೆಗೆ ಚಾಲನೆ ನೀಡಲಾಗಿದೆ. ಅದರ ಕುರಿತ ವರದಿ.

ಆಲಿಕಲ್ಲು : ಬೆಳೆಗಾರರ ತಲೆ ಮೇಲೆ ಕಲ್ಲು !


ಆಲಿಕಲ್ಲು ಮಳೆಯಿಂದ ಕೊಡಗಿನಲ್ಲಿ ಬೆಳೆಗಾರರು ತತ್ತರಿಸಿದ್ದಾರೆ. ಆ ಕುರಿತ ವರದಿ.

ಕಲಾ ಗ್ಯಾಲರಿ, ಸಂಸ್ಕೃತಿ ಸಿಂಚನ ಗ್ಯಾಲರಿ ಆರಂಭ


ಓದುಗರಿಗೆ ಒಂದು ಖುಷಿಯ ಸುದ್ದಿಯೆಂದರೆ ಇನ್ನು ಮುಂದೆ ಮೈಸೂರಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಲಾ ಪ್ರದರ್ಶನಗಳ ಛಾಯಾಚಿತ್ರಗಳನ್ನು ನಮ್ಮ ಬ್ಲಾಗ್ ನಿಂದಲೇ ನೋಡಿ ಆನಂದಿಸಬಹುದು.
ಅದಕ್ಕಾಗಿ ನಾವು ಎರಡು ಗ್ಯಾಲರಿ ಆರಂಭಿಸಿದ್ದೇವೆ. ವಾರದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ್ದು "ಸಂಸ್ಕೃತಿ ಸಿಂಚನ" ಹಾಗೂ ಕಲಾಕೃತಿಗಳದ್ದು "ಭಿತ್ತಿ". ಈ ಮೂಲಕ ನಗರದ ಸಾಂಸ್ಕೃತಿಕ ಕಂಪು ಬೇರೆಡೆಗೂ ಹರಡಲಿ ಎಂಬುದು ನಮ್ಮ ಉದ್ದೇಶ.
ಈಗಾಗಲೇ ಕಲಾ ಗ್ಯಾಲರಿ "ಭಿತ್ತಿ" ಯಲ್ಲಿ ನಿನ್ನೆಯಷ್ಟೇ ಮುಗಿದ ಧಾರವಾಡದ ಕಲಾ ಶಾಲೆಯ ವಿದ್ಯಾರ್ಥಿಗಳ ಕಲಾಕೃತಿಗಳ ಚಿತ್ರಗಳನ್ನು ಹಾಕಲಾಗಿದೆ. ಇದು ಪ್ರತಿ ವಾರ ನೀವು ನೋಡಲೇಬೇಕಾದ ಗ್ಯಾಲರಿಗಳು. ನಮ್ಮ ಬಲಬದಿಯ ಅಂಕಣಗಳಲ್ಲಿ ಇವು ಲಭ್ಯ. ನೋಡಿ, ಪ್ರತಿಕ್ರಿಯಿಸಿ.

ಗುಡ್ಡೆಮಠದಲ್ಲಿ ದೇವಾಲಯ ಸ್ಥಳಾಂತರಕ್ಕೆ ಹುನ್ನಾರ




ಇದು ಭಾನುವಾರದ ಸಂಚಿಕೆಯ ಮಂಡ್ಯ ಮತ್ತು ಚಾಮರಾಜನಗರದ ಲೀಡ್ ಗಳು.

ಗಡಿ ನೆಲದಲ್ಲಿ ಭೂಮಿ ಬರಿದೂ, ಎಲ್ಲ ಬರಿದೂ



ನಮ್ಮ ಚಾಮರಾಜನಗರದ ಸಮಸ್ಯೆ ಕುರಿತ ಲೀಡ್ ಇದು.

ಮೈಸೂರು ವಿವಿ ಯಲ್ಲಿ ಗಾಂಧಿ ಭವನ



ಮೈಸೂರು ವಿವಿ ಯಲ್ಲಿ ಗಾಂಧಿ ಭವನವಿದೆ. ಜತೆಗೆ ಗಾಂಧಿ ಆಶ್ರಮ ಆರಂಭಿಸಲು ಹೊರಟಿದೆ. ಆ ಕುರಿತು ಚೀ. ಜ. ರಾಜೀವ ಬರೆದ ಸುದ್ದಿ.

ಒಲ್ಲೆ ಎಂದರೂ"ಧ್ರುವ" ಇಲ್ಲಿ "ತಾರೆ"

ಚಾಮರಾಜನಗರದ ರಾಜಕೀಯ ಬೆಳವಣಿಗೆ ಕುರಿತಾದ ಸುದ್ದಿಯಿದು. ನಮ್ಮ ಶನಿವಾರದ ಸಂಚಿಕೆಯ ಐದನೇ ಪುಟದಲ್ಲಿ ಪ್ರಕಟವಾಗಿದ್ದು.

ಅಡಿಗಡಿಗೂ ಗುಂಡಿ : ಸಂಚಾರ ದುಸ್ತರ

ಇದು ನಮ್ಮ ಕೊಡಗಿನ ಪ್ರಮುಖ ಸುದ್ದಿ. ಹಾಳಾದ ರಸ್ತೆಯ ಕುರಿತು ಗಮನಸೆಳೆಯುವ ಪ್ರಯತ್ನ 
ಮೈಸೂರು ನಗರದ ಹಳೆಯ ಕೆರೆ ದೇವನೂರು ಕೆರೆ ಕರಗುತ್ತಿದೆ. ಅದರ ಕುರಿತು ನಗರದ ಎರಡನೇ ಪುಟದ ಸುದ್ದಿ.
ಚಾಮರಾಜನಗರದ ಚಂದಕವಾಡಿ ಚಂದದ ಸೇತುವೆಯೇನೋ ನಿಜ.ಆದರೆ ಇತಿಹಾಸ ಸೇರುತ್ತಿದೆ. ಆ ಕುರಿತ ವರದಿ. 

ಮೇಲಿನದು ಕೊಡಗು ಜಿಲ್ಲೆಯ ಎಂ. ಬಾಡಗ ಗ್ರಾಮದಲ್ಲಿ ಸಿಡಿಲು ಬಡಿದು ಆರು ಮಂದಿ ಮೃತಪಟ್ಟ ಸುದ್ದಿಗೆ ಸಂಬಂಧಿಸಿದಂತೆ ವಿವಿದ ವರದಿಗಳು. 
ಇದು ನಮ್ಮ ಮೈಸೂರು ನಗರದ ಎರಡನೇ ಪುಟದ ಪ್ರಮುಖ ಸುದ್ದಿ. ಮೈಸೂರು ಮೃಗಾಲಯ ಲಾಭದಲ್ಲಿದೆಯಂತೆ. ಜತೆಗೆ ಹಾವುಗಳಿಗೆ ಹೊಸ ಮನೆಯನ್ನು ಕಟ್ಟಿಕೊಡುತ್ತಿದ್ದಾರಂತೆ. ಆ ಕುರಿತ ವರದಿ. 

ಮತ್ತೆ ತ್ಯಾಗಕ್ಕೆ ಮಹಾದೇವು ಸಿದ್ಶ


ನಮ್ಮ ಮಾ. 18 ರ ಸಂಚಿಕೆಯ ವಿಶೇಷ ಸುದ್ದಿ ಓದಿ ಅಭಿಪ್ರಾಯ ತಿಳಿಸಿ. ಮೊದಲನೆಯದು ರಾಜಕೀಯ ಚಟುವಟಿಕೆಯ ಸುದ್ದಿ 5 ರದ್ದು. ಎರಡನೆಯದು ಚಾಮರಾಜನಗರದ ಎರಡನೇ ಪುಟದ ಲೀಡ್ ಕೆರೆ ನಾಶವಾಗುತ್ತಿರುವ ಸುದ್ದಿ. 

ಇವು ನಮ್ಮ ವಿಶೇಷ


ಇದು ನಮ್ಮ ಮೂರು ಪುಟಗಳ ಲೀಡ್ ನ ವಿನ್ಯಾಸ. ಮೊದಲಿನದು ಐದನೇ ಪುಟದಲ್ಲಿ ಸೋಮವಾರಪೇಟೆ ಗ್ರಾ. ಪಂ. ಅವ್ಯವಹಾರ ಕುರಿತಾದದ್ದು. ಎರಡನೆಯದು ಮಂಡ್ಯ ಜಿಲ್ಲೆಯ ನಾಗರಿಕರ ಸಮಸ್ಯೆ. ಮೂರನೆಯದು ರೈತರ ಪ್ರತಿಭಟನೆ

ಕಲ್ಲು ಮಣ್ಣಿನ ರಸ್ತೆಯೇ ಇಲ್ಲಿ ರಾಜಮಾರ್ಗ !

ಇದು ಮಾ. ೧೫ ರ ಸಂಚಿಕೆಯ ವಿಶೇಷ ವರದಿ. ಮಂಡ್ಯ ಜಿಲ್ಲೆಯ ಮತ್ತೀತಾಳೇಶ್ವರ ಜಾತ್ರೆಯ ಕುರಿತಾದ ವರದಿ.
ಇದು ಕೊಡಗು ಜಿಲ್ಲೆಯ ಶನಿವಾರ ಸಂತೆಯ ಬವಣೆ. ರಸ್ತೆಯ ದುರವಸ್ಥೆ ಬಗ್ಗೆ ಈ ವರದಿ ವಿವರಿಸುತ್ತದೆ.


ನಾಡು ಕಾಯೋದು ಇರಲಿ ; ಕಾಡು ಕಾಯೋಕೋ ಇಲ್ಲ !

ಇದು ನಮ್ಮ ವಿಶೇಷ ವರದಿ ಐದನೇ ಪುಟದಲ್ಲಿ ಮಾ. ೧೪ ರಂದು ಪ್ರಕಟವಾದದ್ದು.

ನಮ್ಮ ವಿಶೇಷ ವರದಿಗಳು

ಮಾ. ೧೨ ರಂದು ನಮ್ಮ ಪತ್ರಿಕೆಯಲ್ಲಿ ಕೋಮು ಸೌಹಾರ್ದ ಕುರಿತು ಪ್ರಕಟವಾಗಿರುವ ವಿಶೇಷ ವರದಿ.
ನಮ್ಮ ಸ್ಥಳೀಯ ಆವೃತ್ತಿಯ ನಿತ್ಯದ ಲೀಡ್ ಇರುವುದೇ ಹೀಗೆ. ಇದು ಮಾ. ೧೨ ರ ಕೊಡಗಿನ ಪುಟದ ಲೀಡ್.

ನಮ್ಮ ಮತ್ತೊಂದು ವಿಶೇಷ ಪುಟ "ಕಾಗದ ದೋಣಿ"



ನಮ್ಮ ಆವೃತ್ತಿಯಲ್ಲಿ ಮಾಡಿದ ವಿಶೇಷ ಪ್ರಯತ್ನವಿದು. ಮಕ್ಕಳೊಂದಿಗೆ ಸಂವಾದವಷ್ಟೇ ಅಲ್ಲ ; ಮಕ್ಕಳೇ ರೂಪಿಸಿದ ಪುಟ. ಅವರೆದುರೇ ಪುಟ ವಿನ್ಯಾಸ, ಅದೇ ಅದರ ವಿಶೇಷ.

ನವಿರಾದ ಬರಹಗಳ ಗುಚ್ಛ ನಮ್ಮ "ರೂಪಕ" ಪುಟ

ಬದುಕಿನ 'ಬೆಂಕಿ'ಯಲ್ಲಿ ಅರಳಿದ ಮಂಜುಳಾ

ಚುನಾವಣೆ : ಮೈಸೂರಿನಲ್ಲಿ ಬಿಗಿ ಬಂದೋಬಸ್ತ್ ಶುರು

ವಿಕ ಸುದ್ದಿಲೋಕ
ಮೈಸೂರು:ಲೋಕಸಭಾ ಚುನಾವಣೆ ಕಾರ್ಯಚಟುವಟಿಕೆ ಮೇಲೆ ಕಣ್ಗಾವಲು ಇಡಲು ಬೆಂಗಳೂರು-ಮೈಸೂರು ರಸ್ತೆ ಸೇರಿ ಐದು ಕಡೆ 24 ಗಂಟೆ ತಪಾಸಣೆ ಸೋಮವಾರದಿಂದ ಆರಂಭವಾಗುತ್ತಿದೆ.

ಅದೂ ರಾತ್ರಿ ವೇಳೆಯೇ ರಾಜಕಾರಣಿಗಳು ತಮ್ಮ ಚಟುವಟಿಕೆ ಚುರುಕು
ಗೊಳಿಸುವುದರಿಂದ ರಸ್ತೆಗಳಲ್ಲಿ ಹೆಚ್ಚು ಸಿಬ್ಬಂದಿ ಎಲ್ಲಾ ರೀತಿಯ ವಾಹನ
ಗಳನ್ನು ಜಾಲಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಮಣಿವಣ್ಣನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು ರಸ್ತೆಯಲ್ಲಿ ಐದು ಪಾಯಿಂಟ್ಗಳನ್ನು ರಚಿಸಲಾಗುತ್ತಿದೆ. ದ್ವಿಚಕ್ರ, ಲಘು ಹಾಗೂ ಭಾರೀ ವಾಹನಗಳನ್ನು ಪ್ರತ್ಯೇಕವಾಗಿ ತಪಾಸಣೆ ಮಾಡುವ ಮೂಲಕ ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ಇದಲ್ಲದೇ ಊಟಿ ರಸ್ತೆ, ಮಡಿಕೇರಿ ರಸ್ತೆ ಸೇರಿ ಎಲ್ಲಾ ಹೊರ ವರ್ತುಲ ರಸ್ತೆಯಲ್ಲಿ ಪೊಲೀಸರ ಜತೆಗೆ ಇತರೆ ಸಿಬ್ಬಂದಿಯೂ ನಾಕಾಬಂದಿ ನಡೆಸಲಿದ್ದಾರೆ ಎಂದು ವಿವರಿಸಿದರು.

ಸೆಕ್ಟ್ರಲ್ ಮ್ಯಾಜಿಸ್ಟ್ರೇಟ್:

ಬಾರಿ 120 ಮಂದಿ ಸೆಕ್ಟ್ರಲ್ ಮ್ಯಾಜಿಸ್ಟ್ರೇಟ್ಗಳನ್ನು ಚುನಾವಣೆ ಕಾರ್ಯಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ 74 ಮಂದಿಯನ್ನು ಈಗಾಗಲೇ ನಿಯೋಜಿಸಲಾಗಿದೆ. ಉಳಿಕೆ 46 ಸೆಕ್ಟರಲ್ ಮ್ಯಾಜಿಸ್ಟ್ರೇಟ್ಗಳನ್ನು ಸದ್ಯವೇ ನಿಯೋಜಿಸಿ ಎಲ್ಲರಿಗೂ ಚುನಾವಣೆ ಕುರಿತು ತರಬೇತಿ, ಕಿರು ಟಿಪ್ಪಣಿ ನೀಡಲಾಗುವುದು ಎಂದರು.

ಬಾರ್ ಮುಚ್ಚಿ:

ಬಾರ್ ಹಾಗೂ ರೆಸ್ಟೋರೆಂಟ್ ಅನ್ನು ಬಾರಿ ಏಕಕಾಲಕ್ಕೆ ಮುಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ರಾತ್ರಿ ೧೧ರ ಹೊತ್ತಿಗೆ ವಹಿವಾಟು ಬಂದ್ ಮಾಡಬೇಕು. ಆನಂತರವೂ ಅನ್ಯ ಮಾರ್ಗಗಳಲ್ಲಿ ಮದ್ಯ ಸರಬರಾಜು ಮಾಡಿದರೆ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿರುವ ಸರಕಾರದ ಹೋರ್ಡಿಂಗ್ಗಳನ್ನು ತೆಗೆದು ಹಾಕುವಂತೆ ವಾರ್ತಾ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.