ಚುನಾವಣೆ : ಮೈಸೂರಿನಲ್ಲಿ ಬಿಗಿ ಬಂದೋಬಸ್ತ್ ಶುರು

ವಿಕ ಸುದ್ದಿಲೋಕ
ಮೈಸೂರು:ಲೋಕಸಭಾ ಚುನಾವಣೆ ಕಾರ್ಯಚಟುವಟಿಕೆ ಮೇಲೆ ಕಣ್ಗಾವಲು ಇಡಲು ಬೆಂಗಳೂರು-ಮೈಸೂರು ರಸ್ತೆ ಸೇರಿ ಐದು ಕಡೆ 24 ಗಂಟೆ ತಪಾಸಣೆ ಸೋಮವಾರದಿಂದ ಆರಂಭವಾಗುತ್ತಿದೆ.

ಅದೂ ರಾತ್ರಿ ವೇಳೆಯೇ ರಾಜಕಾರಣಿಗಳು ತಮ್ಮ ಚಟುವಟಿಕೆ ಚುರುಕು
ಗೊಳಿಸುವುದರಿಂದ ರಸ್ತೆಗಳಲ್ಲಿ ಹೆಚ್ಚು ಸಿಬ್ಬಂದಿ ಎಲ್ಲಾ ರೀತಿಯ ವಾಹನ
ಗಳನ್ನು ಜಾಲಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಮಣಿವಣ್ಣನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು ರಸ್ತೆಯಲ್ಲಿ ಐದು ಪಾಯಿಂಟ್ಗಳನ್ನು ರಚಿಸಲಾಗುತ್ತಿದೆ. ದ್ವಿಚಕ್ರ, ಲಘು ಹಾಗೂ ಭಾರೀ ವಾಹನಗಳನ್ನು ಪ್ರತ್ಯೇಕವಾಗಿ ತಪಾಸಣೆ ಮಾಡುವ ಮೂಲಕ ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ಇದಲ್ಲದೇ ಊಟಿ ರಸ್ತೆ, ಮಡಿಕೇರಿ ರಸ್ತೆ ಸೇರಿ ಎಲ್ಲಾ ಹೊರ ವರ್ತುಲ ರಸ್ತೆಯಲ್ಲಿ ಪೊಲೀಸರ ಜತೆಗೆ ಇತರೆ ಸಿಬ್ಬಂದಿಯೂ ನಾಕಾಬಂದಿ ನಡೆಸಲಿದ್ದಾರೆ ಎಂದು ವಿವರಿಸಿದರು.

ಸೆಕ್ಟ್ರಲ್ ಮ್ಯಾಜಿಸ್ಟ್ರೇಟ್:

ಬಾರಿ 120 ಮಂದಿ ಸೆಕ್ಟ್ರಲ್ ಮ್ಯಾಜಿಸ್ಟ್ರೇಟ್ಗಳನ್ನು ಚುನಾವಣೆ ಕಾರ್ಯಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ 74 ಮಂದಿಯನ್ನು ಈಗಾಗಲೇ ನಿಯೋಜಿಸಲಾಗಿದೆ. ಉಳಿಕೆ 46 ಸೆಕ್ಟರಲ್ ಮ್ಯಾಜಿಸ್ಟ್ರೇಟ್ಗಳನ್ನು ಸದ್ಯವೇ ನಿಯೋಜಿಸಿ ಎಲ್ಲರಿಗೂ ಚುನಾವಣೆ ಕುರಿತು ತರಬೇತಿ, ಕಿರು ಟಿಪ್ಪಣಿ ನೀಡಲಾಗುವುದು ಎಂದರು.

ಬಾರ್ ಮುಚ್ಚಿ:

ಬಾರ್ ಹಾಗೂ ರೆಸ್ಟೋರೆಂಟ್ ಅನ್ನು ಬಾರಿ ಏಕಕಾಲಕ್ಕೆ ಮುಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ರಾತ್ರಿ ೧೧ರ ಹೊತ್ತಿಗೆ ವಹಿವಾಟು ಬಂದ್ ಮಾಡಬೇಕು. ಆನಂತರವೂ ಅನ್ಯ ಮಾರ್ಗಗಳಲ್ಲಿ ಮದ್ಯ ಸರಬರಾಜು ಮಾಡಿದರೆ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿರುವ ಸರಕಾರದ ಹೋರ್ಡಿಂಗ್ಗಳನ್ನು ತೆಗೆದು ಹಾಕುವಂತೆ ವಾರ್ತಾ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ