
ಓದುಗರಿಗೆ ಒಂದು ಖುಷಿಯ ಸುದ್ದಿಯೆಂದರೆ ಇನ್ನು ಮುಂದೆ ಮೈಸೂರಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಲಾ ಪ್ರದರ್ಶನಗಳ ಛಾಯಾಚಿತ್ರಗಳನ್ನು ನಮ್ಮ ಬ್ಲಾಗ್ ನಿಂದಲೇ ನೋಡಿ ಆನಂದಿಸಬಹುದು.
ಅದಕ್ಕಾಗಿ ನಾವು ಎರಡು ಗ್ಯಾಲರಿ ಆರಂಭಿಸಿದ್ದೇವೆ. ವಾರದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ್ದು "ಸಂಸ್ಕೃತಿ ಸಿಂಚನ" ಹಾಗೂ ಕಲಾಕೃತಿಗಳದ್ದು "ಭಿತ್ತಿ". ಈ ಮೂಲಕ ನಗರದ ಸಾಂಸ್ಕೃತಿಕ ಕಂಪು ಬೇರೆಡೆಗೂ ಹರಡಲಿ ಎಂಬುದು ನಮ್ಮ ಉದ್ದೇಶ.
ಈಗಾಗಲೇ ಕಲಾ ಗ್ಯಾಲರಿ "ಭಿತ್ತಿ" ಯಲ್ಲಿ ನಿನ್ನೆಯಷ್ಟೇ ಮುಗಿದ ಧಾರವಾಡದ ಕಲಾ ಶಾಲೆಯ ವಿದ್ಯಾರ್ಥಿಗಳ ಕಲಾಕೃತಿಗಳ ಚಿತ್ರಗಳನ್ನು ಹಾಕಲಾಗಿದೆ. ಇದು ಪ್ರತಿ ವಾರ ನೀವು ನೋಡಲೇಬೇಕಾದ ಗ್ಯಾಲರಿಗಳು. ನಮ್ಮ ಬಲಬದಿಯ ಅಂಕಣಗಳಲ್ಲಿ ಇವು ಲಭ್ಯ. ನೋಡಿ, ಪ್ರತಿಕ್ರಿಯಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ