ಎತ್ತಿನಗಾಡಿ ಓಟ, ಯುವಜನೋತ್ಸವ

ಚಾಮುಂಡಿಬೆಟ್ಟದಲ್ಲಿ ರಾತ್ರಿ ಸಂಚಾರ ಬಂದ್


ಅಕ್ರಮಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿರುವ ಚಾಮುಂಡಿಬೆಟ್ಟದಲ್ಲಿ ರಾತ್ರಿ ಸಂಚಾರ ಬಂದ್ ಮಾಡುವ ಕುರಿತು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಇದರಿಂದ ಅಲ್ಲಿ ನೆಲೆಸಿರುವ ಪ್ರಾಣಿ ಸಂಕುಲಗಳಿಗೂ ನಿರಾಳತೆ ಜತೆಗೆ ಅಕ್ರಮ ಚಟುವಟಿಕೆಗಳಿಗೂ ಕಡಿವಾಣ ಹಾಕುವುದು ಯೋಜನೆ ಉದ್ದೇಶ.

ಪ್ರವಾಸಿ ಪ್ರಯಾಸಕ್ಕೆ ಮುಕ್ತಿ ಪ್ರಯತ್ನ...


ಕೊನೆಗೂ ಪ್ರವಾಸೋದ್ಯಮ ಇಲಾಖೆ ಸ್ವಂತ ಕಟ್ಟಡ ಹೊಂದಲಿದೆ. ಹಲವು ಕಾಲದಿಂದ ಕಿಷ್ಕಿಂಧೆಯಂಥ ಜಾಗದಲ್ಲಿ ಕಾರ್ಯನಿರತವಾಗಿದ್ದ ಪ್ರವಾಸೋದ್ಯಮ ಇಲಾಖೆ ವಿಶಾಲ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಕಾಲ ಕೂಡಿ ಬಂದಿದೆ.

ಒಂದು ಮತಕ್ಕೆ ೧೦ ಸಾವಿರ ಹರಾ ಹರಾ ಹೇ ಸದಸ್ಯರ...



ಮೇಲ್ಮನೆ ಮೇಲಾಟದಲ್ಲಿ ಹಣದ ಹಾರಾಟ

ರಾಷ್ಟ್ರಮಟ್ಟದ ಮ್ಯಾರಥಾನ್ ನಲ್ಲಿ ಗುರುನಾಥ್ ಕಲ್ಯಾಣಿ ಪ್ರಥಮ



ಬಡತನ ಮೆಟ್ಟಿ ನಿಂತ ಧಾರವಾಡದ ಯುವ ಪ್ರತಿಭೆ ಗುರುನಾಥ್ ಕಲ್ಯಾಣಿ ಕೊಡಗಿನಲ್ಲಿ ನಡೆದ ರಾಷ್ಟ್ರಮಟ್ಟದ ಮ್ಯಾರಥಾನ್ ನಲ್ಲಿ ಪ್ರಥಮ ಸ್ಥಾನ ಗಳಿಸಿ 50 ಸಾವಿರ ರೂ. ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ಅಂದವಾಗಿ ಹೋದರು ಅವಧಿ ಮುಗಿಸಿ ಬಂದರು !



ವಿಧಾನ ಪರಿಷತ್ ಎನ್ನುವ ಚಿಂತಕರ ಚಾವಡಿಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಮೈಸೂರು-ಚಾಮರಾಜನಗರ ದ್ವಿಸದಸ್ಯ, ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಪ್ರತಿನಿಧಿಗಳು ಆರು ವರ್ಷದಲ್ಲಿ ಮಾಡಿದ್ದೇನು?

ಮೈಸೂರಲ್ಲಿ ಗ್ರೇಟ್ ಗ್ರ್ಯಾಂಡ್ ಸನ್ 'ರೈಸ್'



ಎಷ್ಟೋ ವರ್ಷಗಳ ನಂತರ, ಅಜ್ಜ, ಮುತ್ತಜ್ಜ ಮೂಡಿಸಿದ 'ಹೆಜ್ಜೆ'ಯನ್ನು ಹರಸುತ್ತಾ ಬಂದಿದ್ದಾರೆ ದಕ್ಷಿಣ ಇಂಗ್ಲೆಂಡ್ ನ ದೇವನ್ ನಿವಾಸಿ ಡಗ್ಲಾಸ್ ರೈಸ್. 67ರ ಹರೆಯದ ರೈಸ್ ನಿವೃತ್ತ ಇಂಗ್ಲಿಷ್ ಮೇಷ್ಟ್ರು. ಎಚ್.ಡಿ.ರೈಸ್ ಮೊಮ್ಮಗ. ಬಿ.ಎಲ್.ರೈಸ್ ಗೆ 'ಮರಿ ಮರಿ' ಮೊಮ್ಮಗ.

ಬಿಳಿಯಾನೆಗಳಿಗೆ ದಯಾ ಮರಣ


ನಗರಾಭಿವೃದ್ಧಿಗೆಂದು ಮೂಡಿಬಂದ ಕಲ್ಪನೆ ನಗರಾಭಿವೃದ್ಧಿ ಪ್ರಾಧಿಕಾರಗಳು. ಆಡಳಿತ ಪಕ್ಷಗಳಿಗೆ ಇದೊಂದು ಪುನರ್ವಸತಿ ಶಿಬಿರ. ಜನರಿಗೆ ಮೂಲ ಸೌಲಭ್ಯ ಕಲ್ಪಿಸಲೆಂದು ಈ ಪ್ರಾಧಿಕಾರಗಳು ರಚನೆಯಾಗಿವೆ. ಆದರೆ ಅದಕ್ಕೆ ನೇಮಿಸುವ ಅಧ್ಯಕ್ಷರಂತೂ ಬಿಳಿಯಾನೆಗಳು. ಪ್ರಾಧಿಕಾರವಂತೂ ಜನೋಪಯೋಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಕಡಿಮೆ.

ಸಿಇಟಿ: ಭರವಸೆ ಸಾಕು, ಜಾರಿಯಾಗಬೇಕು


ಈ ಬಾರಿ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುವುದಾಗಿ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಈ ಕುರಿತು ಅಧ್ಯಾಪಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವಿದ್ಯಾರ್ಥಿ ವಿಶೇಷ (ಮೈಸೂರು)ದಲ್ಲಿ ಹಂಚಿಕೊಂಡಿದ್ದಾರೆ.

ರಂಗಾಯಣದಲ್ಲಿ ಮತ್ತೆ ಹೊಸ ನಾಟಕ


ರಂಗಾಯಣದ ನೂತನ ನಿದೇರ್ಶಕ ಲಿಂಗದೇವರು ಹಳೆಮನೆ ಭಾರತೀಯ ಭಾಷಾ ಸಂಸ್ಥಾನದಲ್ಲಿದ್ದವರು, ಒಂದೆರಡು ನಾಟಕ ನಿರ್ದೇಶಿಸಿದವರು. ಜತೆಗೆ ನಾಟಕಕಾರರೊಬ್ಬರು ನಿರ್ದೇಶಕರಾಗುತ್ತಿರುವುದು ಇದೇ ಮೊದಲು.

ಕಾಡಾನೆ ಕಾಟ ತಪ್ಪಿಸಲು ಸಹಾಯವಾಣಿ


ಮನುಷ್ಯನ ಬೇಡಿಕೆಗಳಿಗೆ ಉಪಯೋಗವಾಗುತ್ತಿದ್ದ ಸಹಾಯವಾಣಿ ಈಗ ಕಾಡಾನೆಗಳ ಕಾಟ ತಪ್ಪಿಸಲೂ ಬಳಕೆಯಾಗುವಂತಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಇಂಥ ವ್ಯವಸ್ಥೆ ಜಾರಿಗೆ ಬರಲಿದೆ.

ಸಾಮಾನ್ಯ ಪ್ರವೇಶ ಪರೀಕ್ಷೆ: ೨ ಬೇಡ ೧ ಸಾಕು


ವೈದ್ಯ, ದಂತ ವೈದ್ಯ ಹಾಗೂ ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಎರಡು ಕಡೆ ಸಿಇಟಿ ಪರೀಕ್ಷೆ ಬರೆಯುವುದನ್ನು ತಪ್ಪಿಸಲು ಸರಕಾರ ಚಿಂತನೆ ನಡೆಸಿದೆ. ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವಿದ್ಯಾರ್ಥಿ ವಿಶೇಷದಲ್ಲಿ ಹಂಚಿಕೊಂಡಿದ್ದಾರೆ.

ರಂಗಾಯಣ: ಹಳೆಮನೆ ಹೊಸಪಾತ್ರ


ರಂಗಾಯಣದ ಮೇಲೆ ಆವರಿಸಿದ್ದ ಕಾರ್ಮೋಡ ರೂಪದ ತೆರೆ ಸರಿದಿದೆ. ಲಿಂಗದೇವರು ಹಳೆಮನೆ ಸದ್ಯವೇ ನಿರ್ದೇಶಕ ಹುದ್ದೆಯ ಹೊಸ ಪಾತ್ರ ವಹಿಸಲಿದ್ದಾರೆ. ಈ ಹಿಂದಿನ ನಿರ್ದೇಶಕಿ ಬಿ.ಜಯಶ್ರೀ ಅನೇಕ ವಿವಾದ, ಆರೋಪಗಳಿಂದ ಬೇಸತ್ತು ರಾಜೀನಾಮೆ ನೀಡಿದ್ದರು.

ಖಾತ್ರಿ ಕಳೆದುಕೊಂಡ ಉದ್ಯೋಗ ಖಾತರಿ


ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಿಲ್ಲೆಯ ಮಟ್ಟಿಗೆ ಖಾತರಿ ಕಳೆದುಕೊಂಡಿದೆ. ಉದ್ಯೋಗ ಅರಸಿ ವಲಸೆ ಹೋಗುವ ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳಲು ಯೋಜನೆ ಸಂಪೂರ್ಣ ವಿಫಲ.

ಈ ಮುಖ್ಯಮಂತ್ರಿಗೆ ಮೈಸೂರೇ 'ಮೋಹ'ದ ಊರು



ಮುಖ್ಯಮಂತ್ರಿಗೆ ಮೈಸೂರು ಮೋಹವೇಕೆ? ಈ ಹೊತ್ತಿನ ಪ್ರಶ್ನೆ ಇದಲ್ಲ. ನಿನ್ನೆ-ಮೊನ್ನೆಯವರೆಗೆ ಚಲಾವಣೆಯಲ್ಲಿದ್ದ ಈ ಪ್ರಶ್ನೆಯ ಸ್ಥಾನಕ್ಕೆ ಮುಖ್ಯಮಂತ್ರಿಗಳ ಮೈಸೂರು ಮೋಹ ಮುಂದೆಯೂ ಉಳಿಯುತ್ತದೆಯೇ? ಎಂಬ ಕುತೂಹಲ ಬಂದು ಕುಳಿತಿದೆ. ಆದರೂ ಮುಖ್ಯಮಂತ್ರಿಗೆ ಮೈಸೂರು ಮೇಲಿನ ಮೋಹ ಸುಮ್ಮನಲ್ಲ; ಹತ್ತು ಹಲವು ಕಾರಣಗಳಿವೆ.

ಪಂಚಲಿಂಗ ದರ್ಶನಕ್ಕೆ ಬಂದ 'ಮಹಾತ್ಮ'!

ಅಲ್ಲಿಗೆ ಲಕ್ಷ, ಲಕ್ಷ, ಇಲ್ಲಿಗೆ ನಿರ್ಲಕ್ಷ್ಯ



ತಲಕಾಡು ಪಂಚಲಿಂಗ ದರ್ಶನಕ್ಕೆ ಕೋಟ್ಯಂತರ ರೂ. ವೆಚ್ಚ ಮಾಡುತ್ತಿರುವ ಸರಕಾರ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಬಳಿಯ ಪಂಚಲಿಂಗ ದರ್ಶನಕ್ಕೆ ಒಂದು ರೂ. ಕೂಡಾ ಬಿಡುಗಡೆ ಮಾಡದೆ ನಿರ್ಲಕ್ಷ್ಯ ವಹಿಸಿದೆ.

ಸಂಚಾರಿ ಸುವ್ಯವಸ್ಥೆಗೆ ಕೊನೆಗೂ ಮುಂದಾದ ಪೊಲೀಸರು

ಸ್ವಾಭಿಮಾನದ ಬದುಕು ಕರುಣಿಸು ತಂದೆ



ತಲಕಾಡಿನಲ್ಲಿ ಸೋಮವಾರ ಮಧ್ಯರಾತ್ರಿ ಆರಂಭವಾದ ಪಂಚಲಿಂಗದರ್ಶನ ಮಹೋತ್ಸವದಲ್ಲಿ ರಾಜಕೀಯ ಬಿಕ್ಕಟ್ಟು, ಗೊಂದಲ, ಜಂಜಡಗಳ ನಡುವೆಯೂ ಮುಖ್ಯಮಂತ್ರಿ ಯಡಿಯೂರಪ್ಪ ಶಾಂತಚಿತ್ತರಾಗಿ ಪಾಲ್ಗೊಂಡಿದ್ದರು.

ಯಜಮಾನನಿಲ್ಲದ ಮನೆಯಾದ ನಗರಸಭೆ



ಕೊಳ್ಳೇಗಾಲ ಪಟ್ಟಣದ ಪುರಸಭೆ ನಗರಸಭೆಯಾದಾಗಿನಿಂದ ಒಂದಲ್ಲಾ ಒಂದು ಸಮಸ್ಯೆ ಕಾಡುತ್ತಲೇ ಇದೆ. ಇದೀಗ ನಗರಸಭೆ ಯಜಮಾನನಿಲ್ಲದೆ ಭಣಗುಡುತ್ತಿದೆ.

ರಾಂಪುರ ಗ್ರಾ.ಪಂ.ನಲ್ಲಿ ಸಮಸ್ಯೆಗಳು ಬರಪೂರ



ನಂಜನಗೂಡು ತಾಲೂಕಿನ ರಾಂಪುರ ಗ್ರಾಮಪಂಚಾಯಿತಿಯಲ್ಲಿ 8 ವರ್ಷಗಳಿಂದ ಕಾಯಂ ಕಾರ್ಯದರ್ಶಿ ಇಲ್ಲದೆ ಅಭಿವೃದ್ದಿ ಕೆಲಸಗಳು ನೆಲಕಚ್ಚಿವೆ.

ಪಂಚಲಿಂಗ ದರ್ಶನ

ವಿನಾಶದ ಅಂಚಿನಲ್ಲಿ 'ಕೂರ್ಗ್ ಹನಿ'


ಭಾರಿ ಬೇಡಿಕೆಯೊಂದಿಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ 'ಕೂರ್ಗ್ ಹನಿ' ವಿನಾಶದ ಅಂಚಿನಲ್ಲಿದೆ. ಹಿಂದೆ ಮಾರಾಟವಾಗುತ್ತಿದ್ದದ್ದು ಇದೇನಾ ಎಂಬ ಅನುಮಾನ ಮೂಡುತ್ತಿದೆ. ಕಲಬೆರಕೆಯಿಂದ ಗುಣಮಟ್ಟ ಹಾಳಾಗಿದ್ದು, ಕ್ರಮೇಣ ಬೇಡಿಕೆ ಇಳಿಮುಖವಾಗುತ್ತಿದೆ.

ಅಶೋಕ ರಸ್ತೆಯಲ್ಲಿ ಪಾದಚಾರಿಗಳ 'ಶೋಕ' ಗೀತೆ


ಅರಸರ ಕಾಲದ ರಾಜಮಾರ್ಗ ಅಶೋಕ ರಸ್ತೆ ಈಗ 'ಚಿನ್ನ-ಬೆಳ್ಳಿ' ಬೀದಿಯಾಗಿದ್ದರೂ ದುಸ್ಥಿತಿ ಮಾತ್ರ ಬದಲಾಗಿಲ್ಲ. ಬೆಂಗಳೂರು ಕಡೆಯಿಂದ ಸಾಂಸ್ಕ್ರತಿಕ ನಗರಿ ಪ್ರವೇಶಿಸುತ್ತಿದ್ದಂತೆ ಎದುರುಗೊಳ್ಳುವ ಈ ರಸ್ತೆ ಪ್ರತಿ ವರ್ಷ ಶೃಂಗಾರಗೊಂಡರು ಕಿತ್ತು ಬರುವುದು ನಿಂತಿಲ್ಲ.

ಈ ಬಾರಿ ಹುಲಿ ಲೆಕ್ಕಕ್ಕೆ ಉಪಗ್ರಹ ತಂತ್ರಜ್ಞಾನ


ಹುಲಿ ಗಣತಿ ಬದಲಿಗೆ ಅಂದಾಜು ತಯಾರಿ, ಗಣತಿಗೆ ಉಪಗ್ರಹ ಆಧರಿತ ಜಿಪಿಎಸ್ ತಂತ್ರಜ್ಞಾನ ಬಳಕೆ... 2010ರ ಜನವರಿಯಲ್ಲಿ ದೇಶದೆಲ್ಲೆಡೆ ಏಕಕಾಲಕ್ಕೆ ಆರಂಭವಾಗಲಿರುವ ಮೃಗರಾಜನ ಗಣತಿಗೆ ಅಧಿಕಾರಿಗಳು, ತಜ್ಞರು ಕೈಗೊಂಡ ನಿರ್ಣಯವಿದು.

ಹಸಿರು ಉಸಿರು


ರಸ್ತೆಯಲ್ಲಿರುವ ಮರದ ಬುಡಕ್ಕೆ ಹೊಂದಿಕೊಂಡಂತೆ ಡಾಂಬರೀಕರಣ ಮಾಡಲಾಗಿತ್ತು. ಈ ಬಗ್ಗೆ ವಿಕ ವಿಶೇಷ ವರದಿ ಪ್ರಕಟಿಸಿತ್ತು. ಈಗ ಅದನ್ನು ತೆರವುಗೊಳಿಸಿ ಮರಗಳಿಗೂ ಉಸಿರಾಡಲು ಅನುವು ಮಾಡಿಕೊಡಲಾಗಿದೆ.

ಹಾಡಿಗಳ ಹಾದಿಯಲ್ಲಿ ಓಲ್ಡ್ 'ಮಂಕ್'


'ಮದ್ಯ'ವರ್ತಿಗಳು ಗಿರಿಜನರ ಹಾಡಿಗಳನ್ನೂ ಬಿಟ್ಟಿಲ್ಲ. ದಿನವಿಡೀ ದುಡಿಯುವವರ ಶ್ರಮದ ಫಲ ರಾತ್ರಿ ಯಾರದೋ ಪಾಲು. ದಕ್ಕುವುದು ಕ್ಷಣಿಕ ಕಿಕ್ ಸುಖ.

ಪಂಚಲಿಂಗ ದರ್ಶನಕ್ಕೆ ತಲಕಾಡು ಸಜ್ಜು


ಜಗಮಗಿಸುವ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ತಲಕಾಡನ್ನೇ ಸಿಂಗರಿಸಿ ಕಂಗೊಳಿಸುತ್ತಿದೆ. ಲಕ್ಷಾಂತರ ಯಾತ್ರಾರ್ಥಿಗಳ ದರ್ಶನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇಲ್ಲಿನ ಕೆಲಸ ಕಾರ್ಯಗಳಿಗೂ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

ಮರಗಳ ಕೊಲೆಗೆ ಪಾಲಿಕೆ ಸುಪಾರಿ !


ಮರಗಳನ್ನು ನಿಧಾನವಾಗಿ ಕೊಲ್ಲೋದು ಹೇಗೆ ಎಂಬುದನ್ನು ಪಾಲಿಕೆಯವರಿಂದ ಕಲಿಯಬೇಕು. ರಸ್ತೆಯಲ್ಲಿರುವ ಮರಗಳ ಬುಡಕ್ಕೆ ಹೊಂದಿಕೊಂಡಂತೆ ಡಾಂಬರೀಕರಣ ಮಾಡಿದರೆ ತಂತಾನೇ ಮರ ತನ್ನ ಸತ್ವ , ಶಕ್ತಿ ಕಳೆದುಕೊಂಡು ಮುಂದೊಂದು ದಿನ ಧರೆಗುರುಳುತ್ತದೆ. ಇಂಥ ಕೃತ್ಯಕ್ಕೆ ಪಾಲಿಕೆ ಕೈಗೊಂಡಿರುವುದು ದುರದೃಷ್ಟಕರ.

ವಿಶ್ವಕಪ್ ಓಕೆ; ಪೋಷಕರಿಗೆ ಜ್ವರ ಏಕೆ ?


2011ರಲ್ಲಿ ನಡೆಯುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಅದೇ ಸಮಯದಲ್ಲೇ ಎಸ್ಎಸ್ಎಲ್ ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳು ನಡೆಯುತ್ತವೆ. ಹಾಗಾಗಿ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಕೆಲವು ವಿದ್ಯಾರ್ಥಿಗಳು ಇತ್ತ ಪರೀಕ್ಷೆನೋ, ಅತ್ತ ಕ್ರಿಕೆಟ್ಟೋ ಎಂದು ತಲೆಕೆಡಿಸಿಕೊಂಡಿದ್ದಾರೆ.

ಉಸ್ತುವಾರಿಗಳೆಂಬ ಭಜನಾ ಮಂಡಳಿ ಸದಸ್ಯರು...


ಹರತಾಳು ಹಾಲಪ್ಪ, ಜೆ.ಕೃಷ್ಣಪಾಲೇಮಾರ್, ರಾಮಚಂದ್ರಗೌಡ ಇವರು ಒಂದು ರೀತಿಯಲ್ಲಿ ಭಜನಾ ಮಂಡಳಿ ಸದಸ್ಯರೇ. ಇವರು ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಗಳಲ್ಲಿ ಏನ್ ಕಡಿದು ಕಟ್ಟೆ ಹಾಕಿದ್ದಾರೆ ಎಂಬುದನ್ನು ಅಲ್ಲಿಗೆ ಹೋಗಿ ನೋಡಬೇಕು. ಅಷ್ಟರಮಟ್ಟಿಗೆ ಮೈಗಳ್ಳರಾಗಿದ್ದಾರೆ.

ಮುಡಾ ಬರೀ ದಂಡ


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಮತ್ತೆ ಮುಂದೂಡಲಾಗಿದೆ. ಮೊದಲೇ ಮುಡಾ ಗಾಢ ನಿದ್ರೆಯಲ್ಲಿದೆ ಎಂದು ಆಡಿಕೊಳ್ಳುತ್ತಿದ್ದವರಿಗೆ ಮತ್ತೊಂದು ವಿಷಯ ಸಿಕ್ಕಂತಾಯಿತು. ಅಕ್ಟೋಬರ್ 26 ರಂದು ನಡೆದ ಸಭೆ ಬಿಟ್ಟರೆ ಇದೂವರೆಗೂ ಮತ್ತೊಂದು ಸಭೆ ನಡೆದಿಲ್ಲ.

ರಾಜ್ಯಪಾಲರಿಗೆ ಮಕ್ಮಲ್ ಟೋಪಿ, ಸಿಎಂಗೆ ಮೈಸೂರು ಪೇಟ


ಎಚ್.ಡಿ.ಕೋಟೆಯ ಕಾರಾಪುರ ಜಂಗಲ್ ರೆಸಾರ್ಟ್ ಗೆ ಬಂದ ಮುಖ್ಯಮಂತ್ರಿಯನ್ನು ಕುಡಿದ ನೀರು ತುಳುಕದಂತೆ ಅಧಿಕಾರಿಗಳು ನೋಡಿಕೊಂಡರು. ಆದರೆ ಇದೇ ರೆಸಾರ್ಟ್ ಗೆ ಅ.1 ರಂದು ರಾಜ್ಯಪಾಲರು ತೆರಳಬೇಕಾದರೆ ಹಣ್ಣುಗಾಯಿ ನೀರುಗಾಯಿ ಆದರು. ಕಾರಣ ಹದಗೆಟ್ಟ ರಸ್ತೆ. ಅವರಿಗೆ ಅಧಿಕಾರಿಗಳು ಸರಿಯಾದ ರಸ್ತೆ ಬಗ್ಗೆ ಗೈಡ್ ಮಾಡಿರಲಿಲ್ಲ.

ಕಲಾಕೃತಿಗಳ ಸಮಾಗಮ; ವರ್ಣಚಿತ್ರಗಳ ಸಂಗಮ


ನಾಡು ಕಂಡ ಅನೇಕ ಹಿರಿಯ ವರ್ಣಚಿತ್ರ ಕಲಾವಿದರ ಕುಂಚದಲ್ಲಿ ಅರಳಿದ ಕಲಾಕೃತಿಗಳ ಸಮಾಗಮ. ಮೈಸೂರು ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ವರ್ಣಚಿತ್ರಗಳ ಸಂಗಮ. ಇದರ ಪ್ರದರ್ಶನ ಮೈಸೂರಿನ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಆರಂಭವಾಗಿದೆ.

ಕಬ್ಬಹಳ್ಳಿಯಲ್ಲಿ ಕುಡಿಯುವ ನೀರೇ ಕಗ್ಗಂಟು


ಕಬ್ಬಹಳ್ಳಿ ಗ್ರಾಮದಲ್ಲಿ ಇಂದು ಕುಡಿಯುವ ನೀರಿಗೆ ಎಲ್ಲಿಲ್ಲದ ಬರಗಾಲ. ಒಂದು ತಾಲೂಕು ಕೇಂದ್ರದಲ್ಲಿರಬೇಕಾದ ಎಲ್ಲಾ ಸೌಲಭ್ಯಗಳು ಈ ಗ್ರಾಮದಲ್ಲಿದೆ. ಆದರೆ ಕುಡಿಯುವ ನೀರಿಗೆ ಮಾತ್ರ ತತ್ವಾರ.

ಹುಲಿ ಗಣತಿಗೆ ಬಂಡೀಪುರದಲ್ಲಿ ಪೂರ್ವ ತಾಲೀಮು


ಆರು ತಿಂಗಳಲ್ಲಿ ಏಳು ಹುಲಿಗಳು ಬಲಿಯಾದ ಬಂಡೀಪುರ (ನಾಗರಹೊಳೆಯೂ ಸೇರಿ)ದಲ್ಲಿ ಹುಲಿ ಗಣತಿಗೆ ಪೂರ್ವ ತಯಾರಿ ಆರಂಭವಾಗಿದೆ.

ಸರಗಳ್ಳರೇ ಹುಷಾರ್ ಅಂತಾರೆ ನಮ್ ಕಮೀಷ್ನರ್ !


ಮೈಸೂರಿನಲ್ಲಿ ಸರಗಳ್ಳತನಕ್ಕೆ ದಶಕದ ಇತಿಹಾಸ. ಆದರೂ ಪೊಲೀಸರು ಅದಕ್ಕೆ ಕಡಿವಾಣ ಹಾಕಲಾಗಲಿಲ್ಲ. ಸರಗಳ್ಳರು ಮಾತ್ರ ಕಾಲಕ್ಕೆ ತಕ್ಕಂತೆ ವಿವಿಧ ಬೈಕ್ ಗಳನ್ನು ಬದಲಾಯಿಸಿ ಕೃತ್ಯ ಎಸಗುತ್ತಿದ್ದಾರೆ. ಹೋಗಲೀ ಮಹಿಳೆಯರಾದರೂ ಎಚ್ಚೆತ್ತುಕೊಂಡಿದ್ದಾರಾ, ಅದೂ ಇಲ್ಲ. ರಸ್ತೆಯಲ್ಲಿ ತಮ್ಮ 'ಶ್ರೀಮಂತಿಕೆ' ಪ್ರದರ್ಶಿಸಿದರೆ ಕಳ್ಳರು ಬಿಟ್ಟಾರೆ !

ಆಶ್ರಯ ನೀಡದ ಆಶ್ರಯ ಯೋಜನೆ


ಆಶ್ರಯ ಮನೆ ಯೋಜನೆಯಡಿ ಮನೆ ಕಟ್ಟಿಕೊಂಡ ವಾರಾಣೆ ಗ್ರಾ.ಪಂ. ವ್ಯಾಪ್ತಿಯ ಬಾವಲಿ ಗ್ರಾಮದ ಹರಿಜನ ಕಾಲೋನಿ ನಿವಾಸಿಗಳು ಇದೀಗ ತಲೆ ಮೇಲೆ ಸಾಲದ ಹೊರೆ ಹೊತ್ತು ತಿರುಗುತ್ತಿದ್ದಾರೆ.

'ಕಾರಂಜಿ' ಕಲರವ

ಅಭದ್ರ ಶೌಚಾಲಯಗಳಿಗೆ ಅಗುಳಿ ಹಾಕಿ


ಸಾವಿನ ಮನೆ ಆಗುತ್ತಿವೆಯೇ ಸಾರ್ವಜನಿಕ ಶೌಚಾಲಯ ! ಇದು ಸುಳ್ಳಲ್ಲಾ ರೀ. ಸರಣಿ ಹಂತಕ ಮೋಹನ್ ಕುಮಾರ್ ಸಾಬೀತುಪಡಿಸಿರುವ ಹೊಸ ಸತ್ಯವಿದು. ನಮ್ಮ ವ್ಯವಸ್ಥೆಯೊಳಗಿನ ದೊಡ್ಡ ಲೋಪವನ್ನು ಎತ್ತಿ ತೋರಿಸಿರುವವನು ಈ ಹಂತಕ.

ಶೋಭಾಗೆ ಕೋಕ್; ಯಾರಿಗೆ ಮೈಸೂರು ಉಸ್ತುವಾರಿ ಲಕ್?


ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರ ರಾಜೀನಾಮೆ ಹಾಗೂ ಸಂಪುಟ ಬದಲಾವಣೆ ಮೂಲಕ ಶಾಸಕರಾದ ರಾಮದಾಸ್, ಶಂಕರಲೀಂಗೇಗೌಡ ಇವರಿಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

ವೀಣೆಶಾಮಣ್ಣ ಹೆಸರುಳಿಸಲು ಟೊಂಕ ಕಟ್ಟಿದ ಮರಿ ಮೊಮ್ಮಗ



ವೀಣೆ ಶಾಮಣ್ಣ ಅವರ ವಂಶಸ್ಥರು, ಮುಖ್ಯವಾಗಿ ಮರಿ ಮೊಮ್ಮಗ, ಉದ್ಯಮಿ ಬಾಲಸುಬ್ರಹ್ಮಣ್ಯಂ ಅವರು ಮುತ್ತಾತನ ಹೆಸರು ಮತ್ತು ವೈಣಿಕ ಸಾಧನೆಯನ್ನು ಸಾರಲು ಮುಂದಡಿ ಇಟ್ಟಿದ್ದಾರೆ. ಅದಕ್ಕಾಗಿಯೇ 'ವೀಣೆ ಶಾಮಣ್ಣ ಟ್ರಸ್ಟ್'.