ಆಗ ಅಪ್ಪಿದರು; ಈಗ ತಿರುಗಿ ಬಿದ್ದರು



ಮೈಸೂರು ನಗರದ ಜನತೆಗೆ 'ನೀರು ಕುಡಿಸುತ್ತಿರುವ' ಜಸ್ಕೋ ವಿರುದ್ಧ ಕಿಡಿಕಾರಿದ ನಗರ ಪಾಲಿಕೆ ಸದಸ್ಯರು, ತಾವು ಹಿಂದೆ ಕೈಗೊಂಡ ನಿರ್ಧಾರಕ್ಕೆ ಪಶ್ಚಾತ್ತಾಪ ಪಡುವಂತಾಗಿದೆ.

ಸಾಗರದಾಚೆಯೂ ಗೋಕಾಕರ ಪ್ರಭಾವ



ಕನ್ನಡ ಮತ್ತು ಭಾರತೀಯ ಇಂಗ್ಲಿಷ್ ಸಾಹಿತ್ಯದಲ್ಲಿ ಕೃಷಿ ಮಾಡಿದ್ದ ವಿನಾಯಕ ಕೃಷ್ಣ ಗೋಕಾಕರ ಪ್ರಭಾವ ಸಾಗರದಾಚೆಗೂ ಹಬ್ಬಿತ್ತು ಎಂದು ಸಾಹಿತಿ ಪ್ರೊ.ಹಂಪ ನಾಗರಾಜಯ್ಯ ಹೇಳಿದರು.

ಉದ್ಯೋಗ ಸಿಕ್ರೆ ಓಕೆ; ಇಲ್ದೆ ಇದ್ರೆ ಯಾಕೆ ?


ಸುದ್ದಿ ಓದಿದ್ರಾ ಸಾರ್, ಯುಜಿ 4 ವರ್ಷವಂತೆ, ಪಿಜಿ 1 ವರ್ಷವಂತೆ,ಪದವಿ ಕೋರ್ಸ್ ಗಳನ್ನು ಮರು ವಿನ್ಯಾಸಗೊಳಿಸಲು ಕುಲಪತಿ ಚಿಂತನೆ ನಡೆಸಿದ್ದಾರಂತೆ ಎಂಬ ಸುದ್ದಿಯ ಸಾಲು ಹಿಡಿದುಕೊಂಡೇ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ , ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದರು.

ತುಕ್ಕು ತಿನ್ನುತ್ತಿರುವ ಗಿರಿಜನ ಸವಲತ್ತು


ಫಲಾನುಭವಿಗಳಿಗೆ ಸಲ್ಲಬೇಕಾದ ಸವಲತ್ತು ಸದ್ಬಳಕೆ ಆಗದೆ, ವಾಪಸ್ ಕೂಡ ಹೋಗದೆ 'ಅರ್ಧ ದಾರಿ'ಯಲ್ಲೇ 'ತುಕ್ಕು' ತಿನ್ನುತ್ತಿದೆ.

ನಗರ ಬಸ್ ನಿಲ್ದಾಣ ಸಮರ್ಪಣೆ


ನರ್ಮ್ ಯೋಜನೆಯಡಿ ಆಧುನೀಕರಣಗೊಳಿಸಿರುವ ನಗರ ಸಾರಿಗೆ ಬಸ್ ನಿಲ್ದಾಣವನ್ನು ಬುಧವಾರ ಉದ್ಘಾಟಿಸಲಾಯಿತು.

ಮೃಗರಾಜನ 'ಭೇಟೆ'


ಬಂಡೀಪುರ ಅಭಯಾರಣ್ಯದ ತಾವರೆಕಟ್ಟೆ ಪ್ರದೇಶದಲ್ಲಿ ಬುಧವಾರ ಮೃಗರಾಜನ 'ಡೇ ಔಟ್'.

ಮೋಹನ ಲೀಲೆಗೆ ಮೈಸೂರಲ್ಲಿ ೯ ಯುವತಿಯರ ಬಲಿ



ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರದ ಬಳಿಕ ಸೈನೆಡ್ ನೀಡಿ ಹತ್ಯೆ ಮಾಡುತ್ತಿದ್ದ ಮೋಹನ್ ಕುಮಾರ್ ಅಲಿಯಾಸ್ ಆನಂದ್ ಹೀನಕೃತ್ಯಕ್ಕೆ ನಗರದ ಹೋಟೆಲ್, ಬಸ್ ನಿಲ್ದಾಣವೂ ಸಾಕ್ಷಿ ಎಂಬ ಅಂಶದ ಮೇರೆಗೆ ಸ್ಥಳ ಪರಿಶೀಲನೆ ಆರಂಭಗೊಂಡಿದೆ.

ಪರಿಷತ್ ಚುನಾವಣೆಗೆ ತೊಡೆ ತಟ್ಟಿದ ಕಾಂಗ್ರೆಸ್



ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಡಿಸೆಂಬರ್ ನಲ್ಲಿ ಗ್ರಾಮ ಪಂಚಾಯಿತಿಗಳಿಗೆ ಜನವರಿಯಲ್ಲಿ ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷ 'ಕಾರ್ಯ ಚಟುವಟಿಕೆ' ಆರಂಭಿಸಿದೆ.

'ಒತ್ತುವರಿ' ತೆರವಿಗೆ ಪಾಲಿಕೆ ಸದಸ್ಯರ ವಿರೋಧ



'ಆಪರೇಷನ್ ಒತ್ತುವರಿ'ಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಪಾಲಿಕೆ ಸದಸ್ಯರು, ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಹಾಡಿ ಹುಡುಗ, ಒಡನಾಡಿ ಹುಡುಗಿ ಮದುವೆ



ಮೈಸೂರು ನಗರದ ಒಡನಾಡಿ ಅಂಗಳದಲ್ಲಿ ಸೋಮವಾರ ನಾಡು-ಕಾಡಿನ ಸಮ್ಮಿಲನ. ಹಾಡಿಯ ಹುಡುಗ, ಒಡನಾಡಿಯ ಹುಡುಗಿ 'ಸಾಂಸ್ಕೃತಿಕ ಹಿಮ್ಮೇಳ'ದಲ್ಲಿ ಮದುವೆಯಾಗಿ ಸಮ್ಮಿಲನವನ್ನು ಅರ್ಥಪೂರ್ಣಗೊಳಿಸಿದರು.

ನಿರಾಸೆ ತಂದ ಆಟೋ ಕ್ರಾಸ್


ಬಿಟ್ಟಂಗಾಲದ ಕುಪ್ಪಂಡ ಕುಟುಂಬಸ್ಥರ ಶುಂಠಿ ಗದ್ದೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುಕ್ತ ನಾಲ್ಕು ಚಕ್ರದ ಆಟೋ ಕ್ರಾಸ್ ರಾಲಿಯಲ್ಲಿ ಎದೆ ನಡುಗಿಸುವ ಮಾರ್ಗವನ್ನು ಕಂಡು ಸ್ಪರ್ಧಿಗಳು ಭಯಭೀತರಾಗಿ ಹಿಂದೆ ಸರಿದರು. ಅಳಿದುಳಿದ ನಾಲ್ವರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದವರು ಕೇವಲ ಮೂರೇ ಮಂದಿ.

ಒತ್ತುವರಿಗೆ ಆಪರೇಷನ್


ನಗರದಲ್ಲಿ ಭಾನುವಾರ ಮುಂಜಾನೆಯಿಂದಲೇ ರಸ್ತೆ ಹಾಗೂ ಕಟ್ಟಡ ಮುಂಭಾಗ ಮಾಡಿಕೊಂಡಿದ್ದ ಒತ್ತುವರಿಯನ್ನು ಮುಡಾ ಆಯುಕ್ತ, ನಗರ ಪೊಲೀಸ್ ಆಯುಕ್ತ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತೆರವುಗೊಳಿಸಲಾಯಿತು.

ಮುಂದೈತೆ ಕಾರ್ಯಾಚರಣೆ


ಒತ್ತುವರಿಗೆ ಆಪರೇಷನ್ ನ ಮುಂದುವರಿದ ಭಾಗ.

ಕಲಾವಿದರ ದಶಾವತಾರಕ್ಕೆ ಜಯಶ್ರೀ 'ಶರಣಾರ್ಥಿ'


ನಾಟಕ ಕರ್ನಾಟಕ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಬಿ.ಜಯಶ್ರೀ ರಾಜೀನಾಮೆ ನೀಡಿದ್ದಾರೆ. ಆ ಮೂಲಕ 3 ತಿಂಗಳಿಂದ ರಂಗಾಯಣದ ಅಂಗಳದಲ್ಲಿ ನಡೆದ 'ಕದನ ಕುತೂಹಲಭರಿತ ನಾಟಕ'ಕ್ಕೆ ತಾವೇ ಮುಂದಾಗಿ ತಾತ್ಕಲಿಕ ತೆರೆ ಎಳೆದಿದ್ದಾರೆ.

ಈ ಪರಿ ಲೋಡ್ ಶೆಡ್ಡಿಂಗ್ ದುಬಾರಿ


ಅನಿಯಮಿತ ವಿದ್ಯುತ್ ಪೂರೈಕೆಯಿಂದಾಗಿ ಸಾರ್ವಜನಿಕರು ರೋಸಿ ಹೋಗಿದ್ದಾರೆ. ತಮ್ಮ ನಿತ್ಯದ ಕೆಲಸ, ಕಾರ್ಯಗಳಿಗೆ ತೊಂದರೆಯಾಗುತ್ತಿದ್ದು, ಸರಕಾರ ಹಾಗೂ ಸೆಸ್ಕ್ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಮೃಗಾಲಯದಲ್ಲಿ ದ್ರಾವಿಡ್ ವೀಕೆಂಡ್


ಮೊನ್ನೇ ತಾನೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದರು. ಈಗ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಸರದಿ. ಇಲ್ಲಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳನ್ನು ಕಂಡು ಕ್ಲೀನ್ ಬೋಲ್ಡ್ ಆಗಿದ್ದಾರೆ.

ವೈನ್ ಶಾಪ್ ಗಳಲ್ಲಿ ದರ ಸುಲಿಗೆ


ಮೈಸೂರಿನ ಬಾರುಗಳಲ್ಲಿ ಎಂಆರ್ ಪಿಗಿಂತ ಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ. ಕಾರಣ ಕೇಳಿದರೆ 'ನೆರೆ' ಹಾವಳಿ ಎನ್ನುತ್ತಾರೆ. ಮದ್ಯ ದರ ಹೆಚ್ಚಾಗಲು, ನೆರೆ ಹಾವಳಿಗೂ ಎತ್ತಿಂದೆತ್ತ ಸಂಬಂಧವಯ್ಯ?

ಅಲ್ಲಿನ ಮೌನಕ್ಕೆ ಜತೆಯಾದದ್ದು ಕಣ್ಣ ಹನಿ


ಮಂಗಳವಾದ್ಯ ಮೊಳಗಬೇಕಾದ ಮನೆಯಲ್ಲೀಗ ಮರಣ ಮೃದಂಗ ಮೊಳಗುತ್ತಿದೆ. ತನ್ನ ಅಣ್ಣನ ಮದುವೆ ಆಮಂತ್ರಣ ಪತ್ರಿಕೆ ನೀಡಲು ದೊಡ್ಡಮ್ಮ ಹಾಗೂ ಸ್ನೇಹಿತನ ಜತೆ ತೆರಳಿದ್ದವರು ಶುಕ್ರವಾರ ರಾಘವಾರಪುರದ ಚಿಕ್ಕಹುಂಡಿ ಗೇಟ್ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮದುವೆಯ ಸಂಭ್ರಮದಲ್ಲಿರಬೇಕಾದ ಇವರ ಕುಟುಂಬದವರು ಶೋಕದ ಮಡುವಿನಲ್ಲಿರುವಂತಾಗಿದೆ.

ಪೂರ್ಣಗೊಳ್ಳ ಗ್ರಾಮಾಂತರ ಬಸ್ ನಿಲ್ದಾಣ ಕಾಮಗಾರಿ


ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳದೇ ಪ್ರಯಾಣಿಕರು ಪರದಾಡುವಂತಾಗಿದೆ. ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದರಿಂದ ನಿತ್ಯ ಬವಣೆ ಪಡುವಂತಾಗಿದೆ.

ಬಡ ಕುಟುಂಬದ ದಾರುಣ ಕಥೆ...


ಧೈರ್ಯ, ಆತ್ಮವಿಶ್ವಾಸವೇ ಸತ್ತು ಹೋದ, ಕಷ್ಟದಿಂದ ಬೇಸತ್ತ ಬಡ ಕುಟುಂಬದ ದಾರುಣ ಕಥೆ ಇದು.

ಮೇಲ್ಮನೆ ಟಿಕೆಟ್ ಗೆ ನೂಕು ನುಗ್ಗಲು ಆರಂಭ


ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಸ್ಪರ್ಧಿಸಲು ಎಲ್ಲ ಪಕ್ಷಗಳಲ್ಲೂ ಆಕಾಂಕ್ಷಿಗಳು ತಮ್ಮ ಬಯೋಡೆಟಾ ಹಿಡಿದು 'ಗಾಡ್ ಫಾದರ್'ಗಳ ಮನೆಗಳಿಗೆ ಸುತ್ತಾಟ ಆರಂಭಿಸಿದ್ದಾರೆ.

ಮೋಹನ್ ಪ್ರಕರಣ: ನಗರದಲ್ಲಿ ಕಡತಗಳ ಶೋಧ


ಮಂಗಳೂರಿನಲ್ಲಿ ಬಂಧನಕ್ಕೊಳಗಾಗಿರುವ ಸರಣಿ ಹಂತಕ ಮೋಹನ್ ಕುಮಾರ್ ನಿಂದ ಮೂವರು ಮಹಿಳೆಯರು ಮಡಿಕೇರಿ ಬಸ್ ನಿಲ್ದಾಣದಲ್ಲಿ ಹತ್ಯೆಗೀಡಾಗಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಹಾಗೆಯೇ ಮೈಸೂರಿನಲ್ಲಿಯೂ ಅಪರಿಚಿತ ಶವ ಪತ್ತೆಯಾಗುತ್ತಿದ್ದು, ಅವುಗಳ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.

ಗಂಗೋತ್ರಿ: ನವೆಂಬರ್ ನಲ್ಲಿ ಸಿಲ್ವರ್ ಯೂನಿಫೆಸ್ಟ್


ರಾಜ್ಯೋತ್ಸವ ಮಾಸ ನವೆಂಬರ್ ಕೊನೆ ವಾರ ಮಾನಸಗಂಗೋತ್ರಿಯಲ್ಲಿ 'ಸಿಲ್ವರ್ ಯೂನಿಫೆಸ್ಟ್-2009'ಸಾಂಸ್ಕ್ರತಿಕ ನಗರದ ಜನತೆಗೆ ಭರಪೂರ ಸಂಭ್ರಮ ಉಣಬಡಿಸಲಿದೆ.

ಆಧುನಿಕ ತಂತ್ರಜ್ಞಾನ ಬಿಟ್ಟರೂ ಬಿಡದಿ ಮಾಯೆ. ಅದರೊಂದಿಗೆ ಸಾಗಬೇಕಾದರೆ ಇಂಗ್ಲಿಷ್ ಜ್ಞಾನವೂ ಅವಶ್ಯ. ಗ್ರಾಮೀಣ ಪ್ರದೇಶದವರಿಗೆ ಈ ಭಾಷೆ ತುಸು ಕಷ್ಟವೇ. ಇದರ ಪರಿಹಾರಕ್ಕೇ ಕಾರ್ಯಪ್ಪ ಕಾಲೇಜು ಕಂಡುಕೊಂಡಿದ್ದು ಭಾಷಾ ಪ್ರಯೋಗಾಲಯ ಎಂಬ ಸೂತ್ರವನ್ನ.

ಜಸ್ಕೋಗೆ ಶೋಕಾಸ್ ನೋಟಿಸ್


ನಗರಕ್ಕೆ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡದ ಜಸ್ಕೋಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲು ನರ್ಮ್ ಸಭೆ ನಿರ್ಧರಿಸಿದೆ.

ಕಾರುಗಳ್ಳರ ಹಿಂದೆ ಅಂತಾರಾಜ್ಯ 'ಜಾಲ'


ನಗರ ಸಿಸಿಬಿ ಪೊಲೀಸರು ಬಂಧಿಸಿರುವ ಕಾರುಗಳ್ಳರ ಹಿಂದೆ ಅಂತಾರಾಜ್ಯ ಕಳ್ಳರ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಅಗರವಾಲ್ ತಿಳಿಸಿದ್ದಾರೆ. ಬಂಧಿತರಿಂದ 80 ಲಕ್ಷ ರೂ. ಮೌಲ್ಯದ 12 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹತ್ತಿರದಲ್ಲಿದೆ ಆಪತ್ತು !



360 ಎಕರೆ ಪ್ರದೇಶ ಕಸದ ಘಟಕದಲ್ಲಿ 12 ಲಕ್ಷ ಟನ್ ತ್ಯಾಜ್ಯ ಸಂಗ್ರಹವಾಗಿದೆ. ನಿರ್ವಹಣೆ ಇಲ್ಲದೆ ಇದು ಸಂಪೂರ್ಣ ಕೊಳೆಯಲಾರಂಭಿಸಿದೆ.

ಗಡಿಯಂಚಿನ ಗ್ರಾಮದಲ್ಲಿ ಗಡಿಗೆಯಷ್ಟು ಸಮಸ್ಯೆ



ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳ ಕೊರತೆ ದೊಡ್ಡ ಸಮಸ್ಯೆಯಾಗಿದೆ.

ಮುಷ್ಕರದ ಬಿಸಿ: ಮಧುರ ಮಂಡ್ಯದಲ್ಲಿ ಕಸದ ರಾಶಿ



ಗುತ್ತಿಗೆ ಪೌರ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ಹೂಡಿರುವ ಹಿನ್ನೆಲೆಯಲ್ಲಿ ನಗರದಲ್ಲೆಡೆ ಈಗ ಅಶುಚಿತ್ವ ತಾಂಡವ.

ಪಂಚಲಿಂಗ ದರ್ಶನಕ್ಕೆ ರೂಪುರೇಷೆ ಸಿದ್ಧ



ಇತಿಹಾಸ ಪ್ರಸಿದ್ಧ ತಲಕಾಡು ಪಂಚಲಿಂಗ ದರ್ಶನ ಮಹೋತ್ಸವವನ್ನು ಸುಸಜ್ಜಿತವಾಗಿ ನಡೆಸಲು ತಾಲೂಕು ಆಡಳಿತ ಸಿದ್ಧತೆ ಆರಂಭಿಸಿದೆ.

ಗ್ರೀನ್ ಆಟೋಗೆ ಚಾಲಕರ ರೆಡ್ ಸಿಗ್ನಲ್


ಆಟೋರಿಕ್ಷಾಗಳಿಗೆ 'ಹಸಿರು' ಹಚ್ಚಲು ಮೈಸೂರಿನಲ್ಲಿ ರಿಕ್ಷಾ ಚಾಲಕರ 'ಗ್ರೀನ್ ಸಿಗ್ನಲ್' ಇಲ್ಲ!

ಪರಿಸರ ದಿವಾಳಿಯಾಗಲಿಲ್ಲ ಈ ಬಾರಿ


ಈ ಬಾರಿ ನಗರದ ಜನತೆ ಬೇಕಾಬಿಟ್ಟಿ ಪಟಾಕಿ ಸುಡದೆ ಮಾನವೀಯತೆ ಮೆರೆದಿದ್ದಾರೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪಟಾಕಿ ಮಾರಾಟ ಕ್ಷೀಣಿಸಿದೆ. ಚಿಣ್ಣರು ಮಾತ್ರ ನಕ್ಷತ್ರ ಕಡ್ಡಿ, ನೆಲ ಚಕ್ರ ಇತ್ಯಾದಿ ಹಚ್ಚಿ ಸಂತಸಪಟ್ಟಿದ್ದಾರೆ.

ಎಪಿಎಂಸಿ ತರಕಾರಿ ಮಾರುಕಟ್ಟೆ ಸ್ಥಳಾಂತರ


ಕಿಷ್ಕಿಂದೆಯಾಗಿರುವ ನಗರದ ತರಕಾರಿ ಮಾರುಕಟ್ಟೆ (ಆರ್ಎಂಸಿ) ಇನ್ನಾರು ತಿಂಗಳಲ್ಲಿ ನಂಜನಗೂಡು ರಸ್ತೆಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಳ್ಳಲಿದೆ.

ಕಾವೇರಿ ತೀರ್ಥೋದ್ಭವ, ದೀಪಾವಳಿ ಸಂಭ್ರಮ

ಸರ್ವೆ ಕಾರ್ಯಕ್ಕಿಳಿದ ನ್ಯಾಯಾಧೀಶರು !


ಪಡಿತರ ಕಾರ್ಡ್ ಯೋಜನೆ ಲೋಪ ಕುರಿತು ರಾಜ್ಯಾದ್ಯಂತ ಕೇಳಿಬಂದ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ, ರಾಜ್ಯ ಹೈಕೋರ್ಟ್, ಮಾನವ ಹಕ್ಕು ಆಯೋಗ ಜಂಟಿಯಾಗಿ ಸಮೀಕ್ಷೆ ನಡೆಸಲು ಮುಂದಾಗಿದೆ.

ಜಿಲ್ಲಾಧಿಕಾರಿ ನೋಟಿಸಿಗೂ ನೋಕೇರ್ !


ಈಗಾಗಲೇ ಎರಡು ಬಾರಿ ಉದ್ಘಾಟನಾ ಕಾರ್ಯ ಮುಂದೂಡಲ್ಪಟ್ಟ ಖ್ಯಾತಿಗೆ ಒಳಗಾಗಿರುವ ಸಿಟಿ ಬಸ್ ನಿಲ್ದಾಣ ನಾಡಹಬ್ಬ ದಸರೆ ಹೊತ್ತಿಗೆ ಬಸ್ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎನ್ನುವುದು ಸುಳ್ಳಾಯಿತು. ಕೊನೆ ಪಕ್ಷ ನವೆಂಬರ್ 1 ರಂದಾದರೂ ಆಗುವ ನಿರೀಕ್ಷೆಯು ಹುಸಿಯಾಗಿದೆ.

ಗುರುಕಾರ್ ಗುರಿ; ಲೋಕಕ್ಕೆ ಮಾದರಿ


'ತಮಸೋಮ ಜ್ಯೋತಿರ್ಗಮಯ' ಆಶಯದ, ದೀಪಗಳ ಹಬ್ಬ ದೀಪಾವಳಿ ಸಿಹಿ ಊಟ, ಹೊಸ ಬಟ್ಟೆ, ಪಟಾಕಿ ಸಿಡಿಸುವ ಸಂಭ್ರಮಕ್ಕೆ ಸೀಮಿತವಾಗಬೇಕು ಯಾಕೆ ? ಎಲ್ಲರೆದೆಯಲ್ಲಿ 'ಪ್ರಣತಿ'ಗಳು ಬೆಳಗಬಾರದೇಕೆ?

ಚಿನ್ನ ಕೊಳ್ಳೆ ಹೊಡೆದ 'ನೆರೆ' ಊರಿನ ತಿಪ್ಪವ್ವ


ಅಲ್ಲಿ ಪ್ರವಾಹ ಎಲ್ಲವನ್ನೂ ಕೊಳ್ಳೆ ಹೊಡೆದಿದೆ. ಇಲ್ಲಿ ಅದೇ ಊರಿನ ಯುವತಿ ದಾಖಲೆಯ ಸಾಧನೆಯೊಂದಿಗೆ ಚಿನ್ನ ಕೊಳ್ಳೆ ಹೊಡೆದಿದ್ದಾಳೆ.

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬರಲಿದೆ ಸಬ್ ವೇ


ಬೆಂಗಳೂರು ಮಾದರಿಯಲ್ಲಿಯೇ ಪ್ರಯಾಣಿಕರು ನೇರವಾಗಿ ಫ್ಲಾಟ್ ಫಾರಂಗೆ ಬಂದು ಹೋಗಲು ಸಹಕಾರಿಯಾಗುವ ಸಬ್ ವೇ ಅನ್ನು ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಸಬ್ ವೇಗಳನ್ನು ನಿರ್ಮಿಸಲಾಗುತ್ತಿದೆ.

ಸ್ಪೀಕರ್ ಗೆ ಸಂಸದ ವಿಶ್ವನಾಥ್ ಪತ್ರ


ಉತ್ತರ ಕರ್ನಾಟಕದ ನೆರೆ ಸಂತ್ರಸ್ತ ಜನರ ಬದುಕು ಕಟ್ಟುವ ರಾಜ್ಯ ಸರಕಾರದ ಕೈಂಕರ್ಯಕ್ಕೆ ರಾಜ್ಯದ ಸಂಸದರ ನಿಧಿ ನಿಯಮ ಸಡಿಲಿಸಬೇಕೆಂದು ಲೋಕಸಭೆ ಸ್ಪೀಕರ್ ಗೆ ಪತ್ರ ಬರೆದಿರುವುದಾಗಿ ಸಂಸದ ವಿಶ್ವನಾಥ್ ತಿಳಿಸಿದ್ದಾರೆ.

ಮುರಿದ ಮನಸ್ಸು ಬೆಸೆಯಲು ಪ್ರಯತ್ನ


ರಂಗಾಯಣದ ಮುರಿದ ಮನಸ್ಸುಗಳನ್ನು 'ಬೆಸೆಯುವ'ಪ್ರಯತ್ನಕ್ಕೆ ನಗರದ ಹವ್ಯಾಸಿ ರಂಗಕರ್ಮಿಗಳು, ನಾಟಕಕಾರರು ಮುಂದಾಗಿದ್ದು, ಬುಧವಾರ ನಿರ್ದೇಶಕಿ ಬಿ.ಜಯಶ್ರೀ ಜತೆ ಮಾತುಕತೆ ನಡೆಸಿದರು.

ಗದಗ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ?


ಎಲ್ಲವೂ ಸರಿಯಾಗಿದ್ದರೆ ಡಿಸೆಂಬರ್ 18,19,20 ರಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕಿತ್ತು. ಆದರೆ ಆತಿಥ್ಯ ವಹಿಸಿದ್ದ ಗದಗ ಜಿಲ್ಲೆಯನ್ನೂ ನೆರೆ ಸಂಕಷ್ಟ ಬಿಟ್ಟಿಲ್ಲ. ಆದುದರಿಂದ ಇಂಥ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ಸೂಕ್ತವಲ್ಲ ಎಂಬುದು ಹಲವರ ಅಭಿಪ್ರಾಯ.

ರಾಜ್ಯೋತ್ಸವ ಪ್ರಶಸ್ತಿಗೆ ಕೋಕ್


ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಶತಾಯಗತಾಯ ಪಡೆಯಲೇ ಬೇಕು ಎಂಬ ಛಲದಿಂದ ಗಣ್ಯರು ಹಾಗೂ ಸಾಧಕರು ಅವರಿವರಿಂದ ಶಿಫಾರಸು ಮಾಡಿಸಿ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿದ್ದರು. ಆದರೆ ನೆರೆಯಿಂದಾಗಿ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಬಾರದೆಂದು ಸರಕಾರ ಘೋಷಿಸುತ್ತಿದ್ದಂತೆ ಇವರ ಶ್ರಮ ಹೊಳೆಯಲ್ಲಿ ಹುಣಸೆಹಣ್ಣು ತೇಯ್ದಂತಾಗಿದೆ.

ಆಶ್ರಯ ಬಡಾವಣೆ ಅಭಿವೃದ್ಧಿ ಹಣ ಮಂಗಮಾಯ


ಆಶ್ರಯ ಬಡಾವಣೆ ಅಭಿವೃದ್ಧಿಗೆಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮೀಸಲಿಟ್ಟ ಹಣ ಬಿಡುಗಡೆಯಾದರೂ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. 7 ತಿಂಗಳ ಹಿಂದೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಕಾಮಗಾರಿ ಚಾಲನೆ ನೀಡಿದ್ದು ಬಿಟ್ಟರೆ ಉಳಿದದ್ದೇನು ಆಗಿಲ್ಲ.

ಅಪಘಾತದ ಸುತ್ತ ಅನುಮಾನದ ಹುತ್ತ


ಕೃಷ್ಣರಾಜನಗರದ ಭೇರ್ಯ ಸಮೀಪ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಂಪತಿ ಹಾಗೂ ಒಂದು ಪುಟ್ಟ ಬಾಲೆ ಮೃತಪಟ್ಟಿದ್ದರು. ಆದರೆ ಇದು ಅಪಘಾತವಲ್ಲ ಕೊಲೆಯೆಂಬ ಸಂಶಯ ಮೂಡಿದೆ.

ಬೊಮ್ಮಲಾಪುರದಲ್ಲಿ ಅಭಿವೃದ್ಧಿಯ ಬೆಳಕಿಲ್ಲ


ಗುಂಡ್ಲುಪೇಟೆಯ ಬೊಮ್ಮಲಾಪುರ ಗ್ರಾಮ ಸುವರ್ಣ ಗ್ರಾಮೋದಯ ಅಭಿವೃದ್ಧಿ ಯೋಜನೆಯಡಿ ಆಯ್ಕೆಯಾಗಿದ್ದರೂ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.