ಸಿಂಡಿಕೇಟ್ ಸದಸ್ಯರ ರಾಜಕೀಯ ಫಲ

ವಿಕ ವಿಶೇಷ  ಮೈಸೂರು
ವಿಶ್ವವಿದ್ಯಾನಿಲಯಗಳ  ನೀತಿ  ನಿರೂಪಿಸುವ ಸಿಂಡಿಕೇಟ್‌ನಂಥ ಸಂಸ್ಥೆಗಳಿಗೆ ರಾಜಕೀಯ ಹಿನ್ನೆಲೆಯ ವ್ಯಕ್ತಿಗಳು ಬಂದ್ರೆ ಏನಾಗುತ್ತದೆ ?
ವಿವಿ ಕೈಗೊಳ್ಳುವ ಕ್ರಮ ಕೂಡ ದಿಕ್ಕು ತಪ್ಪುತ್ತದೆ.  ಮಾಹಿತಿ ಹಕ್ಕು ಕಾಯಿದೆ  ಇದಕ್ಕೊಂದು ಪುರಾವೆ ಒದಗಿಸಿದೆ.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಒಂದೇ ರೀತಿಯ ಎರಡು ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ವಿವಿ ಒಂದೇ ರೀತಿಯ ಕ್ರಮ ಜರುಗಿಸಿಲ್ಲ.  ಗಂಭೀರ ಸ್ವರೂಪದ ತಪ್ಪು ಮಾಡಿರುವ ಒಬ್ಬ ನೌಕರನ ವಿರುದ್ಧ  ಕ್ರಿಮಿನಲ್ ಮೊಕದ್ದಮೆ ಹೂಡಿ ಅಮಾನತುಗೊಳಿಸಿರುವ ವಿವಿ, ಅದೇ ಮಾದರಿಯ ತಪ್ಪು ಎಸಗಿದ ಇನ್ನೊಬ್ಬ ನೌಕರನಿಗೆ ಹಿಂಬಡ್ತಿ ಶಿಕ್ಷೆಯನ್ನಷ್ಟೇ ನೀಡಿದೆ.  ಒಂದು ಕಣ್ಣಿಗೆ ಬೆಣ್ಣೆ,  ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಕಾಣುವ ಈ ನೀತಿಗೆ ವಿವಿಯ ಅಧಿಕಾರಿಗಳಾಗಲಿ, ಪ್ರಾಧ್ಯಾಪಕರಾಗಲಿ ಕಾರಣವಲ್ಲ. ಬದಲಿಗೆ ರಾಜಕೀಯ ಹಿನ್ನೆಲೆಯ  ಸಿಂಡಿಕೇಟ್ ಸದಸ್ಯರು, ವಿವಿ ಅಧಿಕಾರಿಗಳ ಮೇಲೆ ಒತ್ತಡ ತಂದು ಇಬ್ಬಂದಿ ನೀತಿ ತುಳಿಯುವಂತೆ ಮಾಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ