ಹುರುಳಿ ಬೆಳೆ ರೈತನ ಮುಖದಲ್ಲಿ ಕಳೆ

 ವಿಕ ವಿಶೇಷ, ಚಾಮರಾಜನಗರ
ಇದು ಹುರುಳಿ ಬೆಳೆಯ ಸುಗ್ಗಿಕಾಲ. ಚಾ.ನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಎಲ್ಲಿ ನೋಡಿದರೂ ಹುರುಳಿ ಕೊಯ್ಲು ಹಾಗೂ  ಒಕ್ಕಣೆ ಸಾಮಾನ್ಯ ದೃಶ್ಯ.
ಯಾವುದೇ ನಿರ್ವಹಣೆ ಇಲ್ಲದೆ, ಖರ್ಚು ಹೆಚ್ಚಿಲ್ಲದೆ ೩ ತಿಂಗಳಲ್ಲಿ ಇಳುವರಿ ಬರುವ ಹುರುಳಿ ರೈತನ ಮಿತ್ರ. ಕ್ವಿಂಟಾಲ್‌ಗೆ ಸದ್ಯ ೧೩೦೦ ರಿಂದ ೧೪೦೦ ರೂ.. ಹಾಗಾಗಿ ರೈತ ಫುಲ್ ಖುಷ್.
ಹುರುಳಿಗೆ ಹೆಚ್ಚು ನೀರು ಬೇಕಿಲ್ಲ. ಆರೈಕೆಯನ್ನೂ ಕೇಳುವುದಿಲ್ಲ. ಕಳೆ ಕೀಳುವಂತಿಲ್ಲ. ಔಷಧ ಹೊಡೆಯು ವಂತಿಲ್ಲ. ಖುಷ್ಕಿ ಭೂಮಿಯ ರೈತರಿಗೆ ಇದು ವರದಾನ. ಒಂದು ರೀತಿಯಲ್ಲಿ ಅಪತ್ಬಾಂಧವ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ