ಹೊಸ್ತಿಲಲ್ಲಿ ಮುಗ್ಗರಿಸಿದ ಸಿದ್ದು ಪ್ರತಿಷ್ಠೆ

ಪಿ.ಓಂಕಾರ್ ಮೈಸೂರು
ಪ್ರತಿಪಕ್ಷ ನಾಯಕ ಸಿದ್ದ ರಾಮಯ್ಯ ತವರು ನೆಲದಲ್ಲಿ ಗೆದ್ದೂ ಸೋತಿದ್ದಾರೆ. `ತೆನೆ ಹೊತ್ತ ಮಹಿಳೆ'ಯನ್ನು ಮಿಂಚಿಸಿದ `ದಳ'ಪತಿಗಳಿಗೆ ಇಷ್ಟಾರ್ಥ ಈಡೇರಿದ ಖುಷಿ.`ಕಮಲ'ಅರಳದಿದ್ದರೂ ಸಿದ್ದು ವರ್ಚಸ್ಸನ್ನು ಕುಂದಿಸಿದ ಸಂತಸ ಬಿಜೆಪಿಗೆ.
-ಪಂಚಾಯಿತಿ ಚುನಾವಣಾ ಫಲಿತಾಂಶದ ನಂತರ ಮೈಸೂರು ಜಿಲ್ಲೆ ಯಲ್ಲಿ ಮೂರು ಪಕ್ಷಗಳ ಸ್ಥಿತಿ-ಗತಿಯ ಸ್ಥೂಲ ಚಿತ್ರಣವಿದು.
ಬಲಾಬಲ: ಒಟ್ಟು ೪೬ ಸಂಖ್ಯಾಬಲದ ಜಿ.ಪಂ.ಅತಂತ್ರ ಸ್ಥಿತಿಗೆ ಜಾರಿದೆ. ೨೧ ಸ್ಥಾನ ಗಿಟ್ಟಿಸಿದ ಕಾಂಗ್ರೆಸ್ ಸರಳ ಬಹು ಮತದ ಹೊಸ್ತಿಲಿನಲ್ಲಿ ಎಡವಿದ್ದು, ೧೬ ಸ್ಥಾನ ಪಡೆದ ಜಾ.ದಳ ಜತೆ `ಸಂಬಂಧ' ಕುದುರಿಸುವುದು ಅನಿವಾರ್‍ಯ.ಬಿಜೆಪಿ ೮ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ