ರೈತರಿಗೆ ವರದಾನ ತೋಟಗಾರಿಕೆ ಮಿಷನ್ ಯೋಜನೆ

ಫಾಲಲೋಚನ ಆರಾಧ್ಯ ಚಾಮರಾಜನಗರ
ಪ್ರಸಕ್ತ ಸಾಲಿನಲ್ಲಿ ಮಾವು, ಪಪ್ಪಾಯ, ಬಿಡಿ ಹೂವು ಹಾಗೂ ಸುಗಂಧ ದ್ರವ್ಯ ಬೆಳೆಗಳ ಪ್ರದೇಶವನ್ನು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ವಿಸ್ತರಣೆ ಮಾಡುವ ಗುರಿ ಹೊಂದಲಾಗಿದ್ದು, ಇದು ರೈತ ಸಮುದಾಯಕ್ಕೆ ವರದಾನವಾಗಿದೆ.
ಯೋಜನೆಯಿಂದ ರೈತರಿಗೆ ಆಗುವ ಅನುಕೂಲ ಬಹಳ. ತೋಟಗಾರಿಕೆ ಬೆಳೆಗಳು ಸಾಕಷ್ಟಿದ್ದು, ಜಿಲ್ಲೆಯಲ್ಲಿ ಎಲ್ಲ ಬೆಳೆಗಳಿಗೂ ಈ ಉತ್ತೇಜನ ಸೌಲಭ್ಯ ದೊರೆಯಲ್ಲ. ಈಗಾಗಲೇ ಅರಿಶಿನ, ಬಾಳೆ ಹಾಗೂ ಚೆಂಡು ಹೂವನ್ನು ಯೋಜನೆ ವ್ಯಾಪ್ತಿಯಿಂದ ಕೈ ಬಿಡಲಾಗಿದೆ. ಈಗೇನಿದ್ದರೂ ಸುಗಂಧ ದ್ರವ್ಯ ಬೆಳೆಯುವವರಿಗೆ ಸುಗ್ಗಿ ಕಾಲ. 
ಈ ಬೆಳೆ ಬೆಳೆಯುವವರಿಗೆ ಯೋಜನೆಯಡಿ ಸಹಾಯಧನದ ರೂಪದಲ್ಲಿ ಉತ್ತೇಜನ ದೊರೆಯಲಿದೆ. ಆದರೆ ಆರಂಭದಂತೆ ಈಗ ಮುಕ್ತ ನೀತಿ ಇಲ್ಲ. ಎಷ್ಟೇ ಎಕರೆ ಬೆಳೆದರೂ ಸಹಾಯಧನ ಸಿಗೋಲ್ಲ. ಕೆಲ ನಿರ್ಬಂಧ ಹಾಗೂ ಇಲಾಖೆಯ ಮಾರ್ಗ ಸೂಚಿಯಂತೆ ಸಹಾಯಧನ ದೊರೆಯಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ