ಮನಸೆಳೆಯುತ್ತಿರುವ `ಹೋಂ ಮೇಡ್' ವೈನ್

ಅಜ್ಜಮಾಡ ರಮೇಶ್ ಕುಟ್ಟಪ್ಪ
ಬ್ರಿಟಿಷ್ ಆಳ್ವಿಕೆ ಕಾಲದಿಂದಲೂ ಕೂರ್ಗ್‌ನಲ್ಲಿ  ಮನೆ- ಮನೆಗಳಲ್ಲಿಯೂ ವೈನ್ ಮೆರೆಯುತ್ತಿದೆ. ಮನೆಗಳಲ್ಲಿ ಮಾಡುವ ವೈವಿಧ್ಯಮಯ ವೈನ್‌ಗಳು ಮಹಿಳೆಯರು ಹಾಗೂ ಮಕ್ಕಳ ನೆಚ್ಚಿನ ಡ್ರಿಂಕ್. ಕೊಡಗಿನಲ್ಲಿ ನಡೆಯುವ ಬಹುತೇಕ ಶುಭ- ಅಶುಭ ಕಾರ್ಯಕ್ರಮಗಳಲ್ಲಿ  ವೈನ್ ಇದ್ದೇ ಇರುತ್ತದೆ. ನಾಲ್ಕೈದು ವರ್ಷಗಳ ಹಿಂದೆ ವೈನ್ ಮಾರುಕಟ್ಟೆ ರಂಗ ಪ್ರವೇಶಿಸಿದೆ.
ಧಾರಾಕಾರ ಸುರಿಯುವ ಮಳೆ, ಬೆಚ್ಚಗಿನ ಆಹ್ಲಾದಕರ ಹವಾಮಾನ, ಗಿರಿಕಂದರಗಳ ನಾಡಾದ ಕೊಡಗಿನಲ್ಲಿ `ಮದ್ಯ' ಸಂಸ್ಕೃತಿಯ ಭಾಗವಾಗಿ ಗುರುತಿಸಲ್ಪಟ್ಟಿದೆ. ಬಹುತೇಕರು ತಪ್ಪಾಗಿ ಅರ್ಥೈಸಿಕೊಂಡಿರುವಂತೆ `ಮದ್ಯ'  ಕೊಡಗಿನ ಸಂಪ್ರದಾಯವೂ ಅಲ್ಲ. ಸಂಸ್ಕೃತಿಯೂ ಅಲ್ಲ.
ಮದ್ಯ ಸೇವಿಸದವರು ವೈನ್ ಸೇವಿಸುವುದರ ಮೂಲಕ ಕಂಪನಿ ಕೊಡುತ್ತಾರೆ. ಕೂಲ್ ಡ್ರಿಂಕ್ಸ್ ಕುಡಿಯುವುದಕ್ಕಿಂತ ಒಂದಿಷ್ಟು ಹೆಚ್ಚಿನದ್ದನ್ನು ಕುಡಿಯಲು ಬಯಸುವವರು   ಗ್ಲಾಸ್‌ಗೆ ಒಂದಿಷ್ಟು ವೈನ್‌ಹಾಕಿಕೊಂಡು ಮದ್ಯ ಸೇವಿಸುವವರೊಂದಿಗೆ ಕಂಪನಿ ಕೊಡುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ