ಪೊನ್ನಂಪೇಟೆ: ಶತದಿನ ಕಂಡ ಹೋರಾಟ

ವಿಕ ಸುದ್ದಿಲೋಕ ಗೋಣಿಕೊಪ್ಪಲು
ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ವಿದ್ಯಾರ್ಥಿಗಳ ಹೋರಾಠೆ ದೊರೆಯದೆ ವಿದ್ಯಾರ್ಥಿಗಳ ಕೂಗು ಅರಣ್ಯ ರೋದನವಾಗಿದೆ.
ಅರಣ್ಯ ಇಲಾಖೆಯ ಆರ್‌ಎಫ್‌ಒ, ಎಸಿಎಫ್ ಹುದ್ದೆಗಳಿಗೆ ನಡೆಯುವ ನೇರ ನೇಮಕಾತಿಯಲ್ಲಿ ಅರಣ್ಯ ಪದವಿಯನ್ನು ಕನಿಷ್ಠ ವಿದ್ಯಾರ್ಹತೆಯೆಂದು ಪರಿಗಣಿಸಿ ಶೇ.೧೦೦ ರಷ್ಟು ಮೀಸಲು ಕಲ್ಪಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಮುಷ್ಕರ ನಡೆಸು       ತ್ತಿದ್ದಾರೆ. ಪ್ರಸ್ತುತ ಸರಕಾರ ವಿವಿಧ ವಿಷಯಗಳಲ್ಲಿ ಪದವಿ ಪಡೆದುಕೊಂಡವರನ್ನು ಕೂಡ ಅರಣ್ಯಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳುತ್ತಿದೆ. ಇದರಿಂದ ಅರಣ್ಯ   ಪದವಿ ಪಡೆದವರು ಅತಂತ್ರರಾಗಿದ್ದಾರೆಂಬುದು ವಿದ್ಯಾರ್ಥಿಗಳ ಅಳಲು.
ಕಳೆದ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳು ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸಿ ಕೊಂಡು ಬರುತ್ತಿದ್ದಾರೆ. ಆದರೆ ಸರಕಾರ ಕಣ್ಣೊರೆಸುವ ತಂತ್ರ ಮಾತ್ರ ಮಾಡುತ್ತಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರಸಕ್ತ ವರ್ಷ ಹೋರಾಟವನ್ನು ತೀವ್ರ ಸ್ವರೂಪಗೊಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ