ಬಿಳಿಗಿರಿರಂಗನಬೆಟ್ಟದಲ್ಲಿ ಉಪಾಹಾರ ಗೃಹ ಕಟ್ಟಡ ಅನಾಥ

ಡಿ.ಪಿ.ಶಂಕರ್ ಯಳಂದೂರು
ಅಧಿಕಾರಿ ವರ್ಗದ ನಿರ್ಲಕ್ಷ್ಯ ಹಾಗೂ ಜಾಗದ ವಿವಾದದಿಂದಾಗಿ ಪ್ರವಾ ಸೋದ್ಯಮ ಅಭಿವೃದ್ಧಿ ಉದ್ದೇಶವಿಟ್ಟು ಕೊಂಡು ಬಿಳಿಗಿರಿ ರಂಗನಬೆಟ್ಟದಲ್ಲಿ  ನಿರ್ಮಿಸಿದ ಉಪಾಹಾರ ಗೃಹದ ಕಟ್ಟಡ  ಅನಾಥವಾಗಿದೆ. 
ಸರಕಾರಿ ಕೆಲಸವೆಂದರೆ ಎಷ್ಟು ನಿರ್ಲಕ್ಷ್ಯ, ಹೊಣೆಗೇಡಿತನ ಇರುತ್ತದೆ ಎನ್ನುವುದಕ್ಕೆ ಈ ಕಟ್ಟಡದ ಸ್ಥಿತಿಯೇ ಉತ್ತಮ ನಿದರ್ಶನ. ಕಾಮಗಾರಿ ಶುರು ಮಾಡುವ  ಮುನ್ನ ಕಟ್ಟಡ  ನಿರ್ಮಾಣ ಗೊಳ್ಳುವ ಜಾಗ ಯಾವುದು? ಇದು ಯಾರ ಒಡೆತನದಲ್ಲಿದೆ ಎಂಬುದನ್ನು ಪರಿಶೀಲಿಸದೇ ನಿರ್ಲಕ್ಷ್ಯ ಮಾಡಿದ ಪರಿಣಾಮ ಸುಮಾರು ೧೨ ವರ್ಷದಿಂದ ಬೆಟ್ಟದಲ್ಲಿನ ಉಪಾಹಾರ ಗೃಹದ ಕಟ್ಟಡ ಪಾಳು ಬಿದ್ದಿದೆ.
ಪರಿಶೀಲಿಸಲೇ ಇಲ್ಲ: ೧೯೯೮ರಲ್ಲಿ ಪ್ರವಾ ಸೋದ್ಯಮ ಇಲಾಖೆ ವತಿಯಿಂದ ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿರಂಗನಬೆಟ್ಟದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಉಪಾ ಹಾರ ಗೃಹಕ್ಕಾಗಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಯಿತು. ಇದಕ್ಕಾಗಿ ಮೂರೂವರೆ ಲಕ್ಷ ರೂ. ಮಂಜೂರು ಮಾಡಲಾಯಿತು.
ಲೋಕೋಪಯೋಗಿ ಇಲಾಖೆಗೆ ಪ್ರಥಮ ಹಂತವಾಗಿ ೨.೮೫ ಲಕ್ಷ ರೂ. ಅನ್ನು ಬಿಡುಗಡೆ ಮಾಡಿ ಕಟ್ಟಡ  ನಿರ್ಮಾಣದ ನಿರ್ವಹಣೆಯನ್ನು ವಹಿಸ ಲಾಯಿತು. ಆದರೆ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಸ್ಥಳದ ಒಡೆತನದ ಬಗ್ಗೆ ಪರಿಶೀಲಿಸುವ ಗೋಜಿಗೆ ಹೋಗದೇ ಕಾಮಗಾರಿ ಶುರು ಮಾಡಿ ದರು. ಇತ್ತ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೂ ಇದು ನಮ್ಮ ಜಾಗವೇ ಎಂಬುದನ್ನು ಖಾತರಿ ಮಾಡಿಕೊಳ್ಳಲಿಲ್ಲ. ಇವರಿಬ್ಬರ ನಿರ್ಲಕ್ಷ್ಯದ ನಡುವೆಯೂ ಕಾಮಗಾರಿಯೂ ಪೂರ್ಣಗೊಂಡಿತು. ಆದರೆ ಆ ಸಂದರ್ಭದಲ್ಲಿ ರಾಜ್ಯ ರಸ್ತೆ ಸಾರಿಗೆ  ಸಂಸ್ಥೆ (ಕೆಎಸ್‌ಆರ್‌ಟಿಸಿ) ವತಿ ಯಿಂದ ಕಾಮಗಾರಿಗೆ ಕೊಕ್ಕೆ ಹಾಕ ಲಾಯಿತು. ಏಕೆಂದರೆ ಕಟ್ಟಡ ನಿರ್ಮಾಣ ಗೊಂಡಿದ್ದ  ನಿವೇಶನ ಕೆಎಸ್‌ಆರ್‌ಟಿಸಿ ಸೇರಿದ್ದು !
ಸರ್ವೇ ಸಂಖ್ಯೆ ಗೊಂದಲ: ಬೆಟ್ಟದಲ್ಲಿನ ಸರ್ವೇ ನಂ. ೪ರಲ್ಲಿ  ಕೆಎಸ್‌ಆರ್‌ಟಿಸಿ ಸೇರಿದ ೧.೩ ಎಕರೆ  ಜಾಗವಿದೆ. ಇದು ಒಂದೇ ಜಾಗದಲ್ಲಿ ಸಮಾನವಾಗಿಲ್ಲ. ಚದುರಿಕೊಂಡಿದೆ. ಆದರೆ ಇದು ಉಪಾ ಹಾರ ಗೃಹ ಕಟ್ಟಡ ನಿರ್ಮಿಸಲು ಹೊರಟ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ತಿಳಿಯಲಿಲ್ಲ.
ಹಿಂದೆ, ಮುಂದೆ ನೋಡದೇ ಕಾಮಗಾರಿ ಶುರು ಹಚ್ಚಿಕೊಂಡರು. ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಾಗ ಕಟ್ಟಡವನ್ನು ಮುಜರಾಯಿ ಇಲಾಖೆ ತನ್ನ ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಿತು. ಅಲ್ಲದೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದು, ಕಟ್ಟಡಕ್ಕೆ ಈಗ ಆಗಿರುವ ವೆಚ್ಚವನ್ನು ಭರಿಸುವುದಾಗಿ ಯೂ, ಕಟ್ಟಡವನ್ನು ನಮ್ಮ ಸುಪರ್ದಿಗೆ ವಹಿಸಿಕೊಡುವಂತೆಯೂ ಕೋರಿಕೆ ಸಲ್ಲಿಸಲಾಯಿತು.
ಉದ್ಘಾಟನೆಯೂ ಆಗಿತ್ತು: ಈ ಹಂತ ದಲ್ಲಿ ಅಂದಿನ ಶಾಸಕ ಎಸ್. ಬಾಲರಾಜು ಅವರಿಂದ ಕಟ್ಟಡದ ಉದ್ಘಾಟನೆಯೂ ನಡೆಯಿತು. ಮುಜರಾಯಿ ಇಲಾಖೆ ವತಿಯಿಂದ ಕಟ್ಟಡದ ಮೌಲ್ಯವನ್ನು ತಿಳಿಸುವಂತೆ ಪಿಡಬ್ಲ್ಯೂಡಿಗೆ ತಿಳಿಸ ಲಾಯಿತು. ಆಗಲೂ ಆ ಅಧಿಕಾರಿಗಳಿಗೆ ತಾವು ಮಾಡಿರುವ ಲೋಪದ ಅರಿವು ಆಗಿರಲಿಲ್ಲ.
ಕಟ್ಟಡದ ಮೌಲ್ಯ ತಿಳಿದು ಇನ್ನೇನು ಪ್ರವಾಸೋದ್ಯಮ ಇಲಾಖೆಯಿಂದ ಮುಜರಾಯಿ ಇಲಾಖೆಗೆ ಕಟ್ಟಡ ಹಸ್ತಾಂತರ ಗೊಳ್ಳಬೇಕು ಎಂಬಷ್ಟರಲ್ಲಿ  ನಿವೇಶನ ವಿವಾದ ಹುಟ್ಟಿಕೊಂಡಿತು. ಕಟ್ಟಡದ ನಿರ್ಮಾಣದ ಬಗ್ಗೆ ಕೆಎಸ್‌ಆರ್‌ಸಿ ತಗಾದೆ ತೆಗೆಯಿತು. ತನಗೆ ಸೇರಿದ ಜಾಗದಲ್ಲಿ ಕಟ್ಟಡ ನಿರ್ಮಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು.
ಹೀಗಾಗಿ ಕಟ್ಟಡ ಉದ್ಘಾಟನೆಗೊಂಡರೂ ಅದರಲ್ಲಿ ಒಂದು ದಿನವೂ ಹೋಟೆಲ್ ನಡೆಯಲಿಲ್ಲ. ಕ್ರಮೇಣ ಕಟ್ಟಡ ಪಾಳು ಬಿದ್ದಿತು. ಇದಾಗಿ ಬರೋ ಬರಿ ೧೦ ವರ್ಷಗಳು ಕಳೆದು ಹೋಗಿವೆ. ಆದರೂ ಗೊಂದಲ ನಿವಾರಣೆಯಾಗಿಲ್ಲ. ಕಟ್ಟಡ ಕ್ರಮೇಣ ಶಿಥಿಲಾವಸ್ಥೆ ತಲುಪು ತ್ತಿದ್ದು, ಭೂತ ಬಂಗಲೆಯಾಗಿ ಪರಿ ವರ್ತನೆಯಾಗುತ್ತಿದೆ. ಕಟ್ಟಡದ ಸುತ್ತ ಗಿಡಗಂಟಿಗಳು ಬೆಳೆದುಕೊಂಡಿದ್ದು, ಹಾವು, ಚೇಳುಗಳ ವಾಸ ಸ್ಥಾನವಾಗಿದೆ.
ಆರಂಭದಲ್ಲಿ ಉತ್ತಮ ಉದ್ದೇಶವಿಟ್ಟು ಕೊಂಡು ಶುರು ಮಾಡಿದ ಕಟ್ಟಡ ಇಂಥ ಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟವರ‍್ಯಾರು ತುರ್ತಾಗಿ ಸಮಸ್ಯೆ ಬಗೆಹರಿಸಲು ಕಾಳಜಿ ವಹಿಸುತ್ತಿಲ್ಲ. ಜನ ಪ್ರತಿನಿಧಿಗಳಂತೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಇವೆಲ್ಲದರ ಪರಿಣಾಮ ಸರಕಾರದ ಲಕ್ಷಾಂತರ ರೂ. ಹಣ ಮಣ್ಣು ಪಾಲಾಗುತ್ತಿದೆಯಷ್ಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ