ಕಲಿಕೆ ಸಮಯದಲ್ಲಿ ಗಳಿಕೆ!


ಚೀ. ಜ. ರಾಜೀವ ಮೈಸೂರು
‘ನೀ ಕಲಿಯುವ ಸಮಯದಲ್ಲಿಯೇ ಒಂದಿಷ್ಟು ಗಳಿಸು... !’
'ಅರ್ನ್ ವೈಲ್ ಯು ಲರ್ನ್' ಎಂಬ ಈ ನೀತಿ ಪಶ್ಚಿಮ ರಾಷ್ಟ್ರಗಳ ಶೈಕ್ಷಣಿಕ ವಲಯದಲ್ಲಿ ತೀರಾ ಸಾಮಾನ್ಯ ಸಂಗತಿಯಾದರೂ, ನಮಗೆ ಹೊಸದೇ. ವಿದ್ಯಾರ್ಥಿ ಜೀವನವೆಂದರೆ ಬಂಗಾರ ದಂಥ ಜೀವನ (ಸ್ಟುಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್) ಎಂಬ ಮಾತನ್ನು ನಮಗಿಷ್ಟ ಬಂದಂತೆ ಅರ್ಥೈಸಿ ಕೊಂಡು ವಿದ್ಯಾರ್ಜನೆಯ  ೧೫-೨೦ ವರ್ಷಗಳ ಅವಧಿಯನ್ನು ಸುಖಾಸುಮ್ಮನೇ ಕಳೆ ಯುವವರೇ ನಮ್ಮಲ್ಲಿ ಹೆಚ್ಚು. ಓದು ವುದಷ್ಟೇ ವಿದ್ಯಾರ್ಥಿಯ, ವಿದ್ಯಾರ್ಥಿನಿಯ  ಕರ್ತವ್ಯ ಎಂಬುದು ಸಮಾಜದ ಮಧ್ಯಮ ವರ್ಗದ ಗ್ರಹಿಕೆ.
ಇಂಥ ಹೊತ್ತಲ್ಲಿ ಮೈಸೂರು ವಿಶ್ವವಿದ್ಯಾ ನಿಲಯ ಕಲಿಕೆ ಸಮಯದಲ್ಲಿ ಗಳಿಕೆ ಯೋಜನೆ ಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. ಇದು ಬಡ ಕುಟುಂಬದ ವಿದ್ಯಾರ್ಥಿ ಗಳಿಗೆ ಖುಷಿ ತಂದಿದೆ. ಆದರೆ, ಕಲಿಕೆ ಸಮಯ ದಲ್ಲಿ ಗಳಿಕೆ ಯೋಜನೆಯ ಶಕ್ತಿ ಸಾಮರ್ಥ್ಯ ಕೇವಲ ‘ಆರ್ಥಿಕ ಸಹಾಯ’ ಎಂಬುದಕ್ಕೇ ಸೀಮಿತವಾಗಿಲ್ಲ. ಇದನ್ನು ಮೀರಿ, ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆಯ ಮನೋ ಭಾವ, ಸಂವಹನ ಕೌಶಲ್ಯ ವೃದ್ಧಿ, ವೃತ್ತಿಪರತೆಯ ಅರಿವು, ಭವಿಷ್ಯದ ಬದುಕಿನ ಬಗ್ಗೆ  ಧೈರ್ಯ ಮೂಡಿಸುವುದು ಸೇರಿದಂತೆ ನಾನಾ ರೀತಿಯ ಗಳಿಕೆಗಳು ಯೋಜನೆಯಲ್ಲಿ ಅಡಗಿವೆ.
‘ನಮ್ಮ ವಿವಿಗೆ ಪ್ರವೇಶ ಪಡೆಯುವ ಅನೇಕ ವಿದ್ಯಾರ್ಥಿಗಳು ಕಡು ಬಡತನದಿಂದ ಕೂಡಿರು ತ್ತಾರೆ. ಕಾಲಿಗೆ ಚಪ್ಪಲಿ ಹಾಕಿಕೊಳ್ಳದೇ ಬರುವ ವಿದ್ಯಾರ್ಥಿಗಳು ಇದ್ದಾರೆ. ಅಂಥವ ರಿಗೆ  ಸಹಾಯ ಮಾಡುವುದು ಯೋಜನೆಯ ಉದ್ದೇಶ. ಇದಕ್ಕಾಗಿ ಈ ವರ್ಷ ೬ ಲಕ್ಷ ರೂ.ಗಳನ್ನು ಬಜೆಟ್ ನಲ್ಲಿ ನೀಡಲಾಗಿದೆ. ಶೀಘ್ರವೇ ಜಾರಿಗೆ ಬರಲಿದೆ’ ಎಂದು ಕುಲಪತಿ ಪ್ರೊ.ವಿ.ಜಿ. ತಳವಾರ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.
ಎಲ್ಲೆಲ್ಲಿ ಅವಕಾಶ: ಸಾಮಾನ್ಯವಾಗಿ ಪಶ್ಚಿಮದ ರಾಷ್ಟ್ರಗಳಲ್ಲಿ  ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಬಿಪಿಒ, ಮಾರ್ಕೆಟಿಂಗ್, ಡಾಟಾ ಎಂಟ್ರಿ, ಪ್ರೊಜೆಕ್ಟ್ ವರ್ಕ್ಸ್, ಹೋಟೆಲ್‌ನಂಥ ವಲಯಗಳಲ್ಲಿ ಅರೆಕಾಲಿಕ ಕೆಲಸ ಮಾಡುತ್ತಾ, ದುಡಿಮೆಯಲ್ಲಿ ನಿರತರಾಗಿರುತ್ತಾರೆ. ಬಡವರಷ್ಟೇ ಅಲ್ಲ, ಅನು ಕೂಲಕರ ಕುಟುಂಬದಿಂದ ಬಂದವರೂ ಈ ನೀತಿಯನ್ನು ಅಳವಡಿಸಿಕೊಂಡಿರುತ್ತಾರೆ. ನಮ್ಮಲ್ಲಿ ಇಂಥ ವಾತಾವರಣ ಸೃಷ್ಟಿಗೆ ಪೂರಕವಾದ ನೀತಿಗಳೂ ಇಲ್ಲ, ಮನೋಧರ್ಮವೂ ಇಲ್ಲ. ಹಾಗಾಗಿ ಆರಂಭಿಕ ಹಂತದಲ್ಲಿ ಕಡು ಬಡತನದಿಂದ ಬಂದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ವಿವಿ ಯೋಜನೆಯನ್ನು ರೂಪಿಸಿದೆ.
ಮೈಸೂರು ವಿವಿ ಹಿಂದೊಮ್ಮೆ ಇದೇ ಮಾದರಿಯ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ, ನಾನಾ ಕಾರಣಗಳಿಂದ ಯಶಸ್ವಿಯಾಗಲಿಲ್ಲ. ಈಗ ಅದೇ ಯೋಜನೆಯನ್ನು ಕಾಲಕ್ಕೆ ತಕ್ಕಂತೆ ಬದಲಿಸಿದೆ. ವಿಶ್ವವಿದ್ಯಾನಿಲಯದ  ಗ್ರಂಥಾಲಯ, ಪ್ರಯೋಗ ಶಾಲೆಗಳು, ತೋಟ ಗಾರಿಕೆ ವಿಭಾಗ ಸೇರಿದಂತೆ ಬಹಳಷ್ಟು ಕಡೆ ಅಗತ್ಯ ಸಿಬ್ಬಂದಿ ಇಲ್ಲ. ಇಂಥ ಕಡೆ ಒಂದಿಷ್ಟು ಉದ್ಯೋಗಗಳನ್ನು ಸೃಷ್ಟಿಸಿ, ವಿದ್ಯಾರ್ಥಿಗಳನ್ನು ಜೋಡಿಸಲು ವಿವಿ ನಿರ್ಧರಿಸಿದೆ.
‘ಒಂದು ಸಾವಿರ ಪುಸ್ತಕಗಳಿರುವ ಗ್ರಂಥಾಲಯ ವನ್ನು ಎಷ್ಟು  ಜನ ಸಿಬ್ಬಂದಿ ನಿರ್ವಹಿಸಬೇಕು ?, ಅವರಿಗೆ ಎಂಥ ತರಬೇತಿ ಇರಬೇಕು ?- ಎಂಬು ದರ ಕುರಿತು ರಾಷ್ಟ್ರೀಯ ನೀತಿ-ನಿಯಮಾವಳಿ ಗಳನ್ನು ರೂಪಿಸಲಾಗಿದೆ. ನಾನು ಮಂಗಳೂರು ವಿವಿಯ ಗ್ರಂಥಾಲಯದಲ್ಲಿ  ಕೆಲಸ ಮಾಡುತ್ತಿದ್ದಾಗ ನಿಯಮಾವಳಿ ಪ್ರಕಾರವೇ  ಸಿಬ್ಬಂದಿ ಇದ್ದರು. ಅಂದರೆ,  ೮೦ ಸಾವಿರ ಪುಸ್ತಕಗಳು, ೮೦೦ ಓದುಗರನ್ನು  ಒಳಗೊಂಡ ಗ್ರಂಥಾಲಯವನ್ನು ೨೫ಕ್ಕೂ ಹೆಚ್ಚು ಮಂದಿ ನಿರ್ವಹಿಸುತ್ತಿದ್ದರು. ೬ ಲಕ್ಷಕ್ಕೂ ಹೆಚ್ಚು ಪುಸ್ತಕಗಳು, ೩೦೦೦ಕ್ಕೂ ಹೆಚ್ಚು  ವಿದ್ಯಾರ್ಥಿಗಳು/ಅಧ್ಯಾಪಕರನ್ನು  ಒಳಗೊಂಡ ನಮ್ಮ ವಿವಿಯ ಗ್ರಂಥಾಲಯದಲ್ಲಿ ಎಲ್ಲ ಸ್ತರದ ಸಿಬ್ಬಂದಿಯನ್ನು ಲೆಕ್ಕ ಹಾಕಿದರೂ ೭೦ ದಾಟದು. ಇಲ್ಲಿನ ಸಿಬ್ಬಂದಿಗೂ ತರಬೇತಿ ಇಲ್ಲ. ಇಂಥ ಕಡೆ ಅರ್ಹ ವಿದ್ಯಾರ್ಥಿಗಳನ್ನು ನಿಯೋಜಿಸುತ್ತೇವೆ’  ಎಂಬುದು ತಳವಾರ್‌ರ ವಿವರಣೆ. ಆರಂಭಿಕ ಹಂತದಲ್ಲಿ  ಈ ಯೋಜನೆ ಸ್ನಾತಕೋತ್ತರ ಕೇಂದ್ರಗಳಿಗೆ ಮಾತ್ರ ಸೀಮಿತ. ಆಯ್ಕೆಯಾಗುವ ವಿದ್ಯಾರ್ಥಿಗಳನ್ನು ಗಂಟೆಗಳ  ಲೆಕ್ಕದಲ್ಲಿ ದುಡಿಸಿಕೊಂಡು, ಪ್ರತಿನಿತ್ಯ ಭತ್ಯೆ ನೀಡಲು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.
ವಿದ್ಯಾರ್ಥಿಗಳ ದಸರಾ ಸಂಪಾದನೆ: ಜಿಲ್ಲಾಧಿಕಾರಿ ಪಿ.ಮಣಿವಣ್ಣನ್ ದಸರಾ ವಿಶೇಷಾಧಿಕಾರಿಯಾದ ಬಳಿಕ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂದರ್ಭ ದಲ್ಲಿ ವಿವಿಯ ವಿದ್ಯಾರ್ಥಿಗಳನ್ನು ದುಡಿಸಿ ಕೊಳ್ಳುವ  ಪದ್ಧತಿ ಶುರುವಾಗಿದೆ. ಇದು ಒಂದು ರೀತಿಯಲ್ಲಿ ಗಳಿಕೆ-ಕಲಿಕೆಗೆ ಉತ್ತಮ ಮಾದರಿ. ಉತ್ಸವ ನಡೆಯುವ ೧೧ ದಿವಸ ಸೇರಿದಂತೆ ಕೆಲವು ದಿವಸಗಳ ಮಟ್ಟಿಗೆ ಪದವಿ ವಿದ್ಯಾರ್ಥಿ ಗಳು ದಸರಾ ಸ್ವಯಂ ಸೇವಕ ರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮೈಸೂರು ಪ್ರವಾಸಿ ತಾಣಗಳ ಕುರಿತು ತರಬೇತಿ ನೀಡುವುದು. ಬಳಿಕ  ಅವರನ್ನು ಪ್ರವಾಸಿ ಸ್ವಾಗತಕಾರರನ್ನಾಗಿ ನೇಮಿಸಿ, ಕೆಲಸ ತೆಗೆಸಿಕೊಳ್ಳುವುದು. ಈ ಕಾರ‍್ಯಕ್ಕೆ  ಸುಂದರವಾದ  ಎರಡು ಜತೆ ಅತ್ಯುತ್ತಮ ಬಟ್ಟೆ  ಹಾಗೂ ಕೈ ತುಂಬಾ ಹಣ ನೀಡಿತ್ತು !.
ಗರಿಷ್ಠ ಪ್ರಯೋಜನದ ಫಲ ! ಗಳಿಕೆ ಎಂದರೆ ಕೇವಲ ಹಣ ಮಾತ್ರವಲ್ಲ. ಕೆಲಸ ಮಾಡುವ ವಾತಾವರಣವನ್ನು,ಪರಿಸ್ಥಿತಿಯನ್ನು ಸಮಯೋಚಿತವಾಗಿ ದುಡಿಸಿಕೊಂಡರೆ, ಗಳಿಕೆಯ ವ್ಯಾಪ್ತಿ ಹಿಗ್ಗುತ್ತದೆ. ಅದು ಸುಂದರ ಭವಿಷ್ಯ ರೂಪಿಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ಇದಕ್ಕೆ ಸಮರ್ಥನೆ ನೀಡುವ ಯಶೋಗಾಥೆಯೊಂದನ್ನು ಕುಲಪತಿ ತಳವಾರ್ ಪತ್ರಿಕೆಗೆ ವಿವರಿಸಿದರು.
ಕೆಲ ವರ್ಷಗಳ ಹಿಂದೆ ಯುವತಿಯೊಬ್ಬಳು ಮೈಸೂರು ವಿವಿಯ ಗ್ರಂಥಾಲಯದ ಬೆರಳಚ್ಚು ಗಾರ್ತಿಯಾಗಿ ಕೆಲಸಕ್ಕೆ ಸೇರಿಕೊಂಡರು. ತಮ್ಮ ಕೆಲಸ ಮಾಡುತ್ತಲೇ ಗ್ರಂಥಾಲಯದಲ್ಲಿದ್ದ  ಪುಸ್ತಕಗಳನ್ನು ಓದಲು ಆರಂಭಿಸಿದರು. ಅದರ ನಿರ್ವಹಣೆಯನ್ನು  ಕಲಿತರು. ಮುಂದೊಂದು ದಿನ ದೂರ ಶಿಕ್ಷಣ ವ್ಯವಸ್ಥೆಯಲ್ಲಿ ಬಿ.ಲಿಬ್, ಎಂ.ಲಿಬ್ ವ್ಯಾಸಂಗವನ್ನೂ ಪೂರ್ಣಗೊಳಿಸಿ ದರು. ಈಗ ಗ್ರಂಥಾಲಯ ವಿಜ್ಞಾನ ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ಇದು ಪೂರ್ಣ ಗೊಂಡರೆ  ಯಾವುದಾದರೊಂದು ಪದವಿ ಕಾಲೇಜಿನ ಪ್ರಾಧ್ಯಾಪಕಿ ಆಗಬಹುದು. ಕಲಿಕೆ- ಗಳಿಕೆ ಯೋಜನೆಯ ಗರಿಷ್ಠ ಪ್ರಯೋಜನವಿದು. ಗ್ರಂಥಾಲಯ, ತೋಟಗಾರಿಕೆ, ಪ್ರಯೋಗ ಶಾಲೆ ಸೇರಿದಂತೆ ಎಲ್ಲ ವಿಭಾಗದಲ್ಲೂ  ಇಂಥ ಲಾಭಗಳು ಇರುತ್ತದೆ. ದುಡಿಸಿಕೊಳ್ಳಬೇಕಷ್ಟೆ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ