ಜಿಲ್ಲೆಯ ಕೈ ತಪ್ಪಿದ ಆಕಾಂಕ್ಷಿತ ಜವಳಿ ಪಾರ್ಕ್

ಆರ್.ಕೃಷ್ಣ ಮೈಸೂರು
ಉದ್ದೇಶಿತ ‘ಜವಳಿ ಪಾರ್ಕ್’ ಈಗ ಜಿಲ್ಲೆಯಿಂದ ಕೊನೆಗೂ ಕಾಲ್ಕಿತಿದ್ದು, ‘ಕೈಗಾರಿಕಾ ಶಾಪಗ್ರಸ್ತ ನಗರ’ ಎಂಬ ಅಪಕೀರ್ತಿ ಮೈಸೂರಿಗೆ ಅಂಟಿಕೊಂಡಿದೆ.
ವೈಭವದ ಕೈಗಾರಿಕೆಗಳನ್ನು ಕಂಡಿದ್ದ ಮೈಸೂರಿಗೆ ಶಾಪ ವಿಮೋಚನೆ ಆದಂತಿಲ್ಲ ಎನ್ನುವುದಕ್ಕೆ ಈ ಯೋಜನೆಯನ್ನು ಕೈಬಿಟ್ಟಿರುವುದೇ ಸಾಕ್ಷಿ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಎಲ್ಲ ಕೈಗಾರಿಕಾ ಯೋಜನೆಗಳೂ ಮೈಸೂರಿನಿಂದ ಹೊರಡುತ್ತಿವೆ.
ಈ ಹಿಂದೆ ಮೈಸೂರಿನಲ್ಲಿ ಸ್ಥಾಪನೆ ಗೊಳ್ಳಬೇಕಿದ್ದ ‘ಹಾರ್ಡ್‌ವೇರ್ ಪಾರ್ಕ್’ ಆಂಧ್ರ ಪ್ರದೇಶದ ಪಾಲಾದರೆ, ನಂಜನಗೂಡು ತಾಲೂಕು ತಾಂಡವ ಪುರದ ಬಳಿ ತಲೆ ಎತ್ತಬೇಕಿದ್ದ ‘ಜವಳಿ ಪಾರ್ಕ್’ ಹುಟ್ಟುವ ಮುನ್ನವೇ ಮರೆಯಾಗಿದೆ.
ಮೈಸೂರು, ಚಾಮರಾಜನಗರ ಜಿಲ್ಲೆ ಸೇರಿ ದಂತೆ ಹಲವೆಡೆ ಹತ್ತಿ ಬೆಳೆಯುತ್ತಿದ್ದು, ಇದಕ್ಕೆ ಪೂರಕವಾಗಿ ಜವಳಿ ಪಾರ್ಕ್ ನಿರ್ಮಿಸಲು ತಾಂಡವಪುರ, ಹಿಮ್ಮಾವಿನ ಬಳಿ ಸುಮಾರು ೫೦೦ ಎಕರೆ ಜಮೀನು ಕಾಯ್ದಿರಿಸಲಾಗಿತ್ತು. ಜವಳಿ ಸಂಬಂಧಿ ಕೈಗಾರಿಕೆಗಳನ್ನು ಆರಂಭಿಸಲು ಮೂರು ಬಾರಿ ಟೆಂಡರ್ ಆಹ್ವಾನಿಸಿದ ಸರಕಾರ, ಉದ್ದಿಮೆ ದಾರರನ್ನು ಆಕರ್ಷಿಸುವ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ಟೆಂಡರ್‌ಗೆ ಸ್ಪಂದಿಸಿ ಮುಂಬಯಿ ಹಾಗೂ ಚೆನ್ನೈ ಮೂಲದ ನಾಲ್ಕೈದು ಮಂದಿ ಬಂದರು.
ಈ ಪಾರ್ಕ್‌ನಲ್ಲಿ ಕನಿಷ್ಠ ೧೫೦ರಿಂದ ೨೦೦ ಕೋಟಿ ರೂ. ಬಂಡವಾಳ ಹೂಡಬೇಕು, ಉದ್ಯಮಕ್ಕೆ ಬೇಕಾದ ಪೂರಕ ಕೈಗಾರಿಕೆಗಳನ್ನು ಇದೇ ವಸಾಹತಿನಲ್ಲಿ ಹೊಂದಿರಬೇಕು, ಪಾರ್ಕ್ ಅಭಿವೃದ್ಧಿಗೆ ಸಹಕಾರ ನೀಡಬೇಕಲ್ಲದೇ, ರೈತರಿಂದ ಸರಕಾರ ಖರೀದಿಸುವ ಬೆಲೆಯಲ್ಲಿ ಜಮೀನು ಕೊಂಡುಕೊಳ್ಳಬೇಕು ಎಂದು ಸರಕಾರ ಸೂಚಿಸಿತ್ತು. ಈ ನಿಯಮಗಳು ಅವರಿಗೆ ರುಚಿಸಲಿಲ್ಲ.
ಇಂಥ ಷರತ್ತುಗಳನ್ನು ಪೂರೈಸಲು ದೊಡ್ಡ ಉದ್ಯಮಿಗಳು ಶಕ್ತರು. ಇಂಥವರು ಕೋಲ್ಕೊತಾ, ಮುಂಬಯಿ, ಚೆನ್ನೈನತ್ತ ಆಸಕ್ತಿ ವಹಿಸುತ್ತಾರೆ. ಸ್ಥಳೀಯರಿಗೆ ಇಷ್ಟು ಬಂಡವಾಳ ಹೂಡಿ, ಷರತ್ತು ಪೂರೈಸಲಾಗದು. ಹಾಗಾಗಿ ಇಡೀ ಯೋಜನೆಯೇ ಕಮರಿದೆ ಎನ್ನುತ್ತವೆ ಕೈಗಾರಿಕೆ ವಲಯದ ಮೂಲಗಳು.
ಮರೆಯಾದ ಗತ ವೈಭವ: ರಾಜರ ಆಳ್ವಿಕೆಯಲ್ಲೇ ಕರಕುಶಲ ಕಲೆ, ಶ್ರೀಗಂಧದೆಣ್ಣೆ, ರೇಷ್ಮೆ ಸೇರಿದಂತೆ ಹಲವು ಕೈಗಾರಿಕೆಗಳಿದ್ದವು. ಪ್ರಸ್ತುತ ಹೆಸರಾಂತ ಕೆ.ಆರ್.ಮಿಲ್, ಜಾವಾ, ಜೇಬೇರಿಂಗ್ ಸೇರಿ ದಂತೆ ಹಲವು ದೊಡ್ಡ ಕೈಗಾರಿಕೆಗಳು ಮರೆಯಾಗಿ ದ್ದರೆ, ಮುಚ್ಚಿರುವ ಸಣ್ಣ ಕೈಗಾರಿಕೆಗಳಿಗೆ ಲೆಕ್ಕವಿಲ್ಲ. ಆದ ಕಾರಣ ಉದ್ದಿಮೆದಾರರು ಮೈಸೂರಿಗೆ ಬರುತ್ತಿಲ್ಲ. ‘ಮೈಸೂರಿನಲ್ಲಿ ಸ್ಥಾಪನೆಯಾಗಿರುವ ಕೈಗಾರಿಕಾ ಪ್ರದೇಶದ ವಾಸ್ತು ಸರಿ ಇಲ್ಲ. ಪ್ರದೇಶವನ್ನು ಬೇರೆಡೆಗೆ ಸ್ಥಳಾಂತರಿಸಿ’ ಎಂಬುದು ಉದ್ಯಮಿಗಳ ಆಗ್ರಹ.
ಮಂಡಕಳ್ಳಿಯಲ್ಲಿ ವಿಮಾನ ನಿಲ್ದಾಣ, ಬೆಂಗ ಳೂರು -ಮೈಸೂರು ನಡುವೆ ಎಕ್ಸ್‌ಪ್ರೆಸ್ ಕಾರಿಡಾರ್ ಹೆದ್ದಾರಿ ನಿರ್ಮಾಣ ಕಾರ‍್ಯ, ಬೆಂಗಳೂರು- ಮೈಸೂರು ಮಧ್ಯೆ ಜೋಡಿ ರೈಲ್ವೆ ಹಳಿ ನಿರ್ಮಿಸುವುದಾಗಿ ಸರಕಾರ ಹೇಳುತ್ತಲೇ ಇದೆ. ಆದರೆ ವಿಮಾನ ನಿಲ್ದಾಣ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ, ಜೋಡಿ ಹಳಿ ಮಾರ್ಗ ಚಾಲನೆಗೊಂಡಿದ್ದರೂ ಮುಗಿ ಯುವ ಲಕ್ಷಣ ತೋರುತ್ತಿಲ್ಲ. ಮಾಜಿ ಪ್ರಧಾನಿ ದೇವೇಗೌಡ, ಅಶೋಕ್‌ಖೇಣಿ, ಸರಕಾರದ ನಡುವಿನ ಗೊಂದಲದಿಂದ ‘ನೈಸ್   ಎಕ್ಸ್‌ಪ್ರೆಸ್ ಕಾರಿಡಾರ್’ ಕಥೆಯೂ ನಿಂತಿದೆ. ಬೆಂಗಳೂರು ಬಳಿಕ ‘ಮೈಸೂರು’ ಎಂದು ಬಿಂಬಿತ ವಾಗುತ್ತಿರುವ ನಗರಕ್ಕೆ ಸದ್ಯವೇ ನಡೆಯಲಿರುವ ವಿಶ್ವ ಬಂಡ ವಾಳ ಹೂಡಿಕೆದಾರರ ಸಮಾವೇಶದಲ್ಲಿ ಉದ್ದಿಮೆ ದಾರರನ್ನು ಸೆಳೆಯಲು ಸರಕಾರ ಮುಂದಾಗಬೇಕಿದೆ.
ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ದೇಶ, ವಿದೇಶ ದಲ್ಲಿ ಸಂಚರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಿ ನಿಯಮಗಳನ್ನು ರೂಪಿಸುವ ಅಗತ್ಯವಿದೆ. ಕ್ಲಿಷ್ಟಕರ ನಿಯಮಗಳನ್ನು ರೂಪಿಸಿದರೆ ಉದ್ದಿಮೆ ಸ್ಥಾಪಿಸಲು ಯಾರು ತಾನೇ ಮುಂದೆ ಬರುತ್ತಾರೆ. -ಸುರೇಶ್‌ಕುಮಾರ್ ಜೈನ್, ಲಘು ಉದ್ಯೋಗ ಭಾರತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ