ಕಬಿನಿ ಹಿನ್ನೀರಿನಲ್ಲಿ ಅನಾಮಧೇಯ ವ್ಯಕ್ತಿಗಳ ಕಾರ್ಯಾಚರಣೆ

ವಿಕ ಸುದ್ದಿಲೋಕ ಮೈಸೂರು
ಬಂಡೀಪುರದಲ್ಲಿ ವನ್ಯಜೀವಿಗಳ ಸಂರಕ್ಷಣೆಗಿಂತ ಬೇಟೆಯೇ ಸುಲಭವೇ?
ಹುಲಿಯೊಂದು ಬೇಟೆಗಾರರ ಉರುಳಿಗೆ ಬಲಿ ಯಾಗಿರುವ ನಡುವೆ ಕಬಿನಿ ಹಿನ್ನೀರಿನಲ್ಲಿ ಅನಾಮ ಧೇಯರು ಸ್ವಚ್ಛಂದವಾಗಿ ಸುಳಿದಾಡುತ್ತಿರುವುದು ಇಂಥ ಅನುಮಾನಗಳಿಗೆ ಕಾರಣವಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಎಚ್.ಡಿ.ಕೋಟೆ ತಾಲೂಕಿನ ಎನ್.ಬೇಗೂರು ವನ್ಯಜೀವಿ ವಲಯದಲ್ಲಿ ಹುಲಿ ಮೃತಪಟ್ಟಿದೆ. ಈ ವಲಯದ ವ್ಯಾಪ್ತಿಗೆ ಕಬಿನಿ ಹಿನ್ನೀರಿನ ಪ್ರದೇಶ ಬರಲಿದ್ದು, ಈ ಭಾಗದಲ್ಲಿ ಅನಾಮಧೇಯ ವ್ಯಕ್ತಿಗಳು ಸುಲಭವಾಗಿ ಚಟುವಟಿಕೆಯಲ್ಲಿ ತೊಡಗಿರುವುದು ಅನಾಹುತಗಳಿಗೆ ಕಾರಣವಾಗುತ್ತಿದೆ. ಇಲಾಖೆಯ ಕೆಲ ಅಧಿಕಾರಿಗಳೇ ಹಣದಾಸೆಗೆ ಹೊರ ರಾಜ್ಯದಿಂದ ಬರುವ ಪ್ರವಾಸಿಗರನ್ನು ಮೋಜು ಮೇಜುವಾನಿಗೆ ಕರೆ ತರುತ್ತಿರುವ ಪ್ರಕರಣಗಳೂ ನಡೆಯುತ್ತಿವೆ.
ಗುರುವಾರವೂ ಆಗಿದ್ದು ಹೀಗೆ. ಸಂಜೆ ೪ರ ಸಮಯ. ಎನ್.ಬೇಗೂರು ಸಮೀಪದ ಕಬಿನಿ ಹಿನ್ನೀರಿನಲ್ಲಿನಾಲ್ವರು ಸುಲಭವಾಗಿಯೇ ಒಳ ಪ್ರವೇಶಿಸಿದ್ದರು. ಅಲ್ಲದೇ ಆ ವ್ಯಾಪ್ತಿಯಲ್ಲಿ ನಡೆದು ಹೊರಟು ಏನೋ ಸಂಚನ್ನು ರೂಪಿಸುವಂತೆ ಕಾಣುತ್ತಿದ್ದರು. ಅವರೆಲ್ಲರ ಸಂಪರ್ಕ ಸಾಧನವಾಗಿದ್ದು ಮೊಬೈಲ್. ಮೊಬೈಲ್‌ನಲ್ಲಿ ಒಬ್ಬಾತ ಏನನ್ನೋ ಮಾತನಾಡುತ್ತಿದ್ದರೆ, ಉಳಿದ ಮೂವರು ಈತನ ಪಕ್ಕದಲ್ಲಿ ನಿಂತು ಹರಟೆಯಲ್ಲಿ ತೊಡಗಿದ್ದರು.
ಒಂದು ಕಡೆಯಿಂದ ಬಿಳಿಯ ಕಾರೊಂದು ಪ್ರವೇಶಿಸಿ ಕೆಲವರನ್ನು ಇಳಿಸಿದರೆ ಇನ್ನೊಂದು ಕಡೆಯಿಂದ ಬಂದಿದ್ದು ಜೀಪು. ಕಾರು ಹೊರಗಡೆ ಹೊರಟರೆ ಜೀಪು ನಾಲ್ವರು ಇದ್ದ ಕಡೆ ಬಂದಿತು. ಜೀಪಿನಲ್ಲಿದ್ದವರು ಇವರೊಂದಿಗೆ ಮಾತನಾಡಿ ಮತ್ತೊಂದು ಕಡೆ ಹೊರಟಿತು. ಇವರ ಹರಟೆ ಅಲ್ಲೇ ಮುಂದುವರಿಯಿತು. ಅದೇ ರಾತ್ರಿ ೧೦ ವರ್ಷದ ದಷ್ಟ ಪುಷ್ಟ ಹುಲಿ ಸತ್ತಿದೆ.
ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ವಾಹನ ಬಿಟ್ಟು ಅನುಮತಿ ಪಡೆದ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ. ಬೇರೆ ಯಾವ ವಾಹನ ಅನುಮತಿ ಇಲ್ಲದೇ ಒಳ ಪ್ರವೇಶಿಸುವುದು ಶಿಕ್ಷಾರ್ಹ ಅಪರಾಧ. ಕಳೆದ ವರ್ಷ ಕೆಎಎಸ್ ಅಧಿಕಾರಿಯೊಬ್ಬರು ಕಬಿನಿ ಹಿನ್ನೀರಿಗೆ ಅಕ್ರಮವಾಗಿ ಪ್ರವೇಶಿಸಿದ್ದರಿಂದ ೫೦ ಸಾವಿರ ರೂ.ವರೆಗೂ ದಂಡ ತೆತ್ತಿದ್ದರು. ಆದರೀಗ ಬಂಡೀಪುರದಲ್ಲಿ ಎಲ್ಲವೂ ಮುಕ್ತ ಮುಕ್ತ ಎನ್ನುವಂತಾ ಗಿದೆ. ಡಿಸಿಎಫ್ ಹನುಮಂತಪ್ಪ ಅವರ ಸೌಮ್ಯತನವನ್ನೇ ಇಲಾಖೆ ಸಿಬ್ಬಂದಿ ದುರುಪಯೋಗಪಡಿಸಿಕೊಳ್ಳು ತ್ತಿದ್ದಾರೆ ಎಂಬ ಆರೋಪಗಳೂ ವ್ಯಕ್ತವಾಗಿವೆ.

ಹುಲಿಯ ಮರಣೋತ್ತರ ಪರೀಕ್ಷೆ
ವಿಕ ಸುದ್ದಿಲೋಕ ಎಚ್.ಡಿ.ಕೋಟೆ
ಬಂಡೀಪುರ ರಾಷ್ಟ್ರೀಯ ಉದ್ಯಾನದ ಎನ್. ಬೇಗೂರು ವನ್ಯ ಜೀವಿ ವಲಯದ ಕಳಸೂರು ಬೀಟ್ ಕಾಟವಾಳು ಸಮೀಪ ಸಂಶಯಾಸ್ಪದವಾಗಿ ಮೃತಪಟ್ಟಿದ್ದ ಗಂಡು ಹುಲಿಯ ಮರಣೋತ್ತರ ಪರೀಕ್ಷೆ ಶನಿವಾರ ನಡೆಯಿತು.
ಸುಮಾರು ೧೦ ವಯಸ್ಸಿನ ಗಂಡು ಹುಲಿ, ಹಂದಿಗಳನ್ನು ಹಿಡಿಯಲು ಹಾಕಿದ್ದ ಉರುಳಿಗೆ ಸಿಕ್ಕಿ ಮೂರು ದಿನಗಳ ಹಿಂದೆ ಮೃತಪಟ್ಟಿದ್ದು, ನಾಲ್ಕು ಕಾಲಿನಲ್ಲಿ ಅನೇಕ ಉಗುರುಗಳನ್ನು ತೆಗೆಯಲಾಗಿತ್ತು. ನಿನ್ನೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯ ನೌಕರರ ಕಣ್ಣಿಗೆ ಬಿದ್ದಿತ್ತು.
ಶನಿವಾರ ರಾಜ್ಯದ ಮುಖ್ಯ ಅರಣ್ಯ ಪ್ರಧಾನ ಸಂರಕ್ಷಕ ಬಿ.ಕೆ. ಸಿಂಗ್, ಕ್ಷೇತ್ರ ಯೋಜನೆ ಹುಲಿ ನಿರ್ದೇಶಕ ಹೊಸಮಠ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಹನು ಮಂತಪ್ಪ, ಅರಣ್ಯಾಧಿಕಾರಿ ಆನಂದ್ ಭೇಟಿ ನೀಡಿದ್ದರು. ಇಲಾಖೆಯ ವೈದ್ಯ ಡಾ.ನಾಗರಾಜು, ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಹುಲಿಸಾವಿಗೆ ಕಾರಣ ರಾದವರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಪತ್ರಿಕೆಗೆ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ