ಚಿತ್ರದಲ್ಲಿ ಮೂಡಿದ ಪಾರಂಪರಿಕ ಕಟ್ಟಡಗಳು

ವಿಕ ಸುದ್ದಿಲೋಕ ಮೈಸೂರು
ಮೈಸೂರನ್ನು ಪಾರಂಪರಿಕ ನಗರವೆಂದು ಯುನೆಸ್ಕೋ ಘೋಷಿಸಿದೆ ಎಂದು ಪರಂಪರೆ ಇಲಾಖೆ ಆಯುಕ್ತರಾದ ನೀಲಾ ಮಂಜುನಾಥ್ ತಿಳಿಸಿದರು.
ನಗರದ ರಾಮ್‌ಸನ್ಸ್ ಕಲಾ ಪ್ರತಿಷ್ಠಾನ ಹಾಗೂ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್‌ನಿಂದ ಪ್ರತಿಭಾ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿರುವ ಕಲಾವಿದ ಎಚ್. ಶಿವಕುಮಾರ್ ದೊಡ್ಡ ಅರಸಿನಕೆರೆ ಅವರ ‘ಪರಂಪರೆ’ ಏಕವ್ಯಕ್ತಿ ನಿಸರ್ಗ ಚಿತ್ರಕಲಾ ಪ್ರದರ್ಶನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಪರಂಪರೆ ಎಂದರೆ ತಟ್ಟನೆ ನೆನ ಪಾಗುವುದು ಮೈಸೂರು. ಇಲ್ಲಿರುವಷ್ಟು ಭವ್ಯ ವಾದ ಪಾರಂಪರಿಕ ಕಟ್ಟಡಗಳು ರಾಜ್ಯದಲ್ಲಿ ಎಲ್ಲೂ ಇಲ್ಲ ಎಂದರು.
ಕರ್ನಾಟಕದಲ್ಲಿ ಪ್ರಾಕೃತಿಕ ಸ್ಥಳಗಳು, ಮಾನವ ನಿರ್ಮಿತ ಅನೇಕ ಪಾರಂಪರಿಕ ಕಟ್ಟಡಗಳಿವೆ. ಕಿತ್ತೂರು, ಗುಲ್ಬರ್ಗಾದಲ್ಲೂ ಕೋಟೆ, ಕಟ್ಟಡಗಳಿವೆಯಾದರೂ  ಮೈಸೂರಿನಲ್ಲಿ ರುವಷ್ಟು ಸದೃಢ ಮತ್ತು ಸುಂದರವಾಗಿಲ್ಲ. ಇಂಡೋಸಾರ್ಸನಿಕ್ ಶೈಲಿಯ ಕಟ್ಟಡಗಳು ಹೇರಳವಾಗಿವೆ. ಇವುಗಳ ವಿನ್ಯಾಸ ವಿಶಿಷ್ಟ ಎಂದು ಪ್ರಶಂಸಿಸಿದರು.
ಕಾರ‍್ಯಕ್ರಮದಲ್ಲಿ  ಅತಿಥಿಗಳಾಗಿ ಪ್ರಜಾವಾಣಿ ಪತ್ರಿಕೆ ಬ್ಯೂರೋ ಮುಖ್ಯಸ್ಥ ರವೀಂದ್ರಭಟ್, ನಿವೃತ್ತ ಎಂಜಿನಿಯರ್ ಪಿ.ಶ್ರೀನಿವಾಸರಾವ್, ಕಲಾನಿಕೇತನದ ಪ್ರಾಂಶುಪಾಲ ಕೆ.ಸಿ.ಮಹ ದೇವಶೆಟ್ಟಿ, ರಾಮ್ ಸನ್ಸ್ ಕಲಾ ಪ್ರತಿಷ್ಠಾನದ ಆರ್.ಜಿ.ಸಿಂಗ್, ಕಲಾವಿದ ಎಚ್.ಶಿವಕುಮಾರ್, ಜಯರಾಂ ಪಾಟೀಲ್ ಹಾಜರಿದ್ದರು.
ಇವು ಪ್ರದರ್ಶನಲ್ಲಿವೆ: ವಾಟರ್ ಕಲರ್‌ನಲ್ಲಿ ರಚಿಸಲಾಗಿರುವ ಪಾರಂಪ ರಿಕ ಕಟ್ಟಡಗಳಾದ ಮೈಸೂರು ಅರಮನೆ, ಚಾಮುಂಡಿಬೆಟ್ಟದ ಮೇಲಿನ ದೇವಸ್ಥಾನ, ಮಹಿಷನ ಪುತ್ಥಳಿ, ಕಲ್ಲಿನ ಬಸವ, ಲಲಿತ ಮಹಲ್, ವಸಂತ ಮಹಲ್, ಕುಕ್ಕರಹಳ್ಳಿ ಕೆರೆ ಪರಿಸರ, ಗೋಪುರ ಪಾರ್ಕ್, ಫೈರ್‌ಬ್ರಿಗೇಡ್ ಕಟ್ಟಡ, ಜಿಲ್ಲಾಧಿಕಾರಿ ಕಚೇರಿ, ಕೆ.ಆರ್.ವೃತ್ತ, ಚಿಕ್ಕಗಡಿ ಯಾರ, ದೊಡ್ಡ ಗಡಿಯಾರ, ಜತೆಗೆ ತಲಕಾಡು ನಾಡ ಹೆಂಚಿನ ಮನೆ, ಮರಳು ರಾಶಿಯೊಳಗಿನ ದೇವಾಲಯ... ಮೊದಲಾದವು ಮರದ ಚೌಕಟ್ಟಿನೊಳಗೆ ನೈಜತೆಗೆ ಕುಂದಾಗದಂತೆ ಜೀವತಳೆದಿವೆ.
ಸೋಲ್ಡ್ ಔಟ್: ಕಲಾವಿದ ಎಚ್. ಶಿವಕುಮಾರ್ ಅವರು ರಚಿಸಿ ಪ್ರದರ್ಶನಕ್ಕಿಟ್ಟಿ ರುವ ಪರಂಪರೆ ಕುರಿತ ೩೦ ವರ್ಣಚಿತ್ರಗಳೂ ಮಾರಾಟವಾಗಿವೆ. ತಲಾ ೫ ಸಾವಿರ ರೂ. ಗಳಂತೆ ೧.೫ ಲಕ್ಷ ರೂ. ನೀಡಿ ಜಯರಾಂ ಪಾಟೀಲ್ ಎಂಬುವವರು ಖರೀದಿಸಿದ್ದಾರೆ. ಸತತ ಒಂದು ವರ್ಷ ಕಾಲಾವಧಿಯಲ್ಲಿ ಕಟ್ಟಡಗಳ ಮುಂದೆಯೇ ಕುಳಿತು ಚಿತ್ರಿಸಿ, ಬಣ್ಣ ತುಂಬಿ ಕಟ್ಟಡಗಳನ್ನು ಕ್ಯಾನ್ವಾಸ್‌ನಲ್ಲಿ ಯಥಾವತ್ ಇಳಿಸಿದ್ದು, ಅದಕ್ಕೆ ತಕ್ಕುದಾದ ಪ್ರತಿಫಲ ಲಭಿಸಿದಂತಾಗಿದೆ.
‘ನನಗೇನೂ ಗೊತ್ತಿಲ್ಲ, ಕೇಳಲೂಬೇಡಿ’
‘ನನಗೇನೂ ಗೊತ್ತಿಲ್ಲ. ನನ್ನನೇನೂ ಕೇಳಬೇಡಿ. ಯಾವುದೇ ಮಾಹಿತಿಗೆ ನಗರಪಾಲಿಕೆ ಆಯುಕ್ತರನ್ನು ಕೇಳಿ’
- ಇದು ಪರಂಪರೆ ಇಲಾಖೆ ಆಯುಕ್ತರಾಗಿ ಉನ್ನತ ಸ್ಥಾನದಲ್ಲಿ ರುವ ಲೀಲಾ ಮಂಜುನಾಥ್ ಅವರ ಸಿದ್ಧ ಉತ್ತರ.
 ಜೆಎನ್-ನರ್ಮ್ ಯೋಜನೆಯಡಿ ಪರಂಪರೆ ಇಲಾಖೆಯ ಕಾರ್ಯಕ್ರಮಗಳು ಯಾವ ಹಂತದಲ್ಲಿವೆ, ಡಿಪಿಆರ್ ವಾಪಸ್ ಬಂದಿವೆಯಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ ‘ಪಾರಂಪರಿಕ ಕಟ್ಟಡಗಳು ಪಾಲಿಕೆ ಸುಪರ್ದಿನಲ್ಲಿವೆ. ಹಾಗಾಗಿ ಮಾಹಿತಿಗೆ ಆಯುಕ್ತರನ್ನು ಸಂಪರ್ಕಿಸಿ. ಡಿಪಿಆರ್ ಸೇರಿದಂತೆ ಎಲ್ಲಾ ಜವಾಬ್ದಾರಿಯೂ ಅವರದೇ’ ಎಂದುತ್ತರಿಸಿದರು.
ಜೆಎನ್-ನರ್ಮ್ ಜಾರಿಯಾಗಿ ೪ ವರ್ಷಗಳಾದರೂ ಇಲಾಖೆ ಯೋಜನೆ ರೂಪಿಸುವಲ್ಲಿ ವಿಫಲವಾಗಿರುವ ಬಗ್ಗೆ  ಕೇಳಿದ ಪ್ರಶ್ನೆ ಗಳಿಗೆ ಉತ್ತರಿಸಲು ನಿರಾಕರಿಸಿದ ಅವರು, ‘ಮಾತನಾಡ ಬೇಕಾದರೆ ಬೆಂಗಳೂರಿಗೆ ಬನ್ನಿ’ ಎಂದು ಕಡ್ಡಿ ತುಂಡರಿಸಿದಂತೆ ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ