ಜೂನ್ ನಲ್ಲೇ ೧೦೦ರ ಗಡಿ ದಾಟಿದ ಜಲಾಶಯ

ನವೀನ್ ಮಂಡ್ಯ
ಮುಂಗಾರು ಚೇತರಿಕೆ ಪರಿಣಾಮ ಮಂಡ್ಯ ಮತ್ತು ಮೈಸೂರು ಜಿಲ್ಲೆಯ `ಜೀವನಾಡಿ' ಕೆಆರ್‌ಎಸ್ ಜಲಾಶಯ ಐದು ವರ್ಷ ಗಳ ಬಳಿಕ ಜೂನ್‌ನಲ್ಲೇ ೧೦೦ ಅಡಿ ಗಡಿ ಮುಟ್ಟಿದೆ. ಇದು ಈ ಬಾರಿ ಜಲಾಶಯ ಬೇಗ ಭರ್ತಿಯಾಗುವ ಸೂಚನೆ ನೀಡಿದೆ.
ಗರಿಷ್ಠ ೧೨೪.೮೦ ಅಡಿ ಮಟ್ಟದ ಕನ್ನಂಬಾಡಿ ಕಟ್ಟೆಯು ೨೦೦೬ ಜೂ.೨೯ರಂದು ನೂರು ಅಡಿ ಮುಟ್ಟಿತ್ತು. ಇದೀಗ ೨೦೧೧ ಜೂ.೨೮ರಂದು ಐದು ವರ್ಷಗಳ ಹಿಂದಿನ ಮಟ್ಟವನ್ನು ಕಾಯ್ದುಕೊಂಡಿದೆ. ಅದೂ  ಒಂದು ದಿನ ಮುಂಚಿತವಾಗಿ.
ಜೂನ್ ತಿಂಗಳಲ್ಲಿ  ಕೊಡಗು, ಹಾಸನ ಭಾಗದಲ್ಲಿ ಉತ್ತಮ ಮಳೆಯಾಗಿರುವ ಪರಿಣಾಮ ಕಾವೇರಿ ಕೊಳ್ಳದ ಕೆಆರ್‌ಎಸ್ ಜಲಾಶಯಕ್ಕೆ ಜೂನ್‌ನಲ್ಲೇ ಜೀವ ಕಳೆ ಬಂದಿದೆ. ಕೊಡಗಿನಲ್ಲಿ ಕಳೆದ ವರ್ಷ ಕಡಿಮೆ ಪ್ರಮಾಣದಲ್ಲಿದ್ದ ಮುಂಗಾರು ಈ ವರ್ಷ ಚೇತರಿಸಿಕೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ