ಸಾಕು ನಾಯಿಗೂ ತೆರಿಗೆ !

ಮೈಸೂರು ನಗರ
ನೀವು ನಾಯಿ ಸಾಕು ತ್ತಿದ್ದೀರಾ? ಅದರ ಮರಿಗಳನ್ನು ಮಾರಾಟ ಮಾಡುತ್ತೀದ್ದೀರಾ? ಹಾಗಾದರೆ ತೆರಿಗೆ ಕಟ್ಟಬೇಕಾಗಬಹುದು.
ಬೆಂಗಳೂರು ಆಯ್ತು, ಈಗ ಮೈಸೂರಿನಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಈ ಕುರಿತು ಮೈಸೂರು ಮಹಾನಗರ ಪಾಲಿಕೆ ಸಾಕು ನಾಯಿಗಳಿಗೂ ಪರವಾನಗಿ ನೀಡಿ ತೆರಿಗೆ ವಿಧಿಸಲು ಯೋಚಿಸುತ್ತಿದೆ. ಈ ಸಂಬಂಧ ಸಾಕು ಶ್ವಾನಗಳ ಪಟ್ಟಿ, ವ್ಯಾಪಾರದ ಹಿನ್ನೆಲೆ, ಅವುಗಳ ಆರೋಗ್ಯ ಬಗ್ಗೆ ಮಾಹಿತಿ ಕಲೆ ಹಾಕಲು ಆರೋಗ್ಯ ಹಾಗೂ ಸ್ವಚ್ಛತಾ ಸ್ಥಾಯಿ ಸಮಿತಿ ಮುಂದಾಗಿದೆ.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ವಿ.ಮಲ್ಲೇಶ್ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಸಿ, ಬೋಗಾದಿಯಲ್ಲಿ ನಡೆಯುತ್ತಿರುವ ಪೀಪಲ್ ಫಾರ್ ಅನಿಮಲ್ಸ್‌ನ (ಪಿಎಫ್‌ಎ) ಬೀದಿ ಬದಿ ಪ್ರಾಣಿಗಳ ಪುನರ್‌ವಸತಿ ಹಾಗೂ ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿತ್ತು. ಬೀದಿ ನಾಯಿಗಳಿಗೆ ಮಾಡುವ ಖರ್ಚನ್ನು ಸಾಕು ನಾಯಿಗಳ ಮೂಲಕ ಸರಿದೂಗಿಸುವ ಯೋಚನೆಯೂ ಈ ಹೊಸ ಚಿಂತನೆಯ ಹಿಂದೆ ಅಡಗಿದಂತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ