ಮೈಸೂರು ವಿವಿ ದೂರ ಶಿಕ್ಷಣ: ಪರಿಷತ್ ಅಡ್ಡಿ

ವಿಕ ವಿಶೇಷ ಮೈಸೂರು
ಅಂಚೆ ಮತ್ತು ತೆರಪಿನ ಶಿಕ್ಷಣ ಪದ್ಧತಿ ಮೂಲಕ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ತಲುಪಿಸಬೇಕೆಂಬ ಮೈಸೂರು ವಿಶ್ವವಿದ್ಯಾನಿಲಯದ ಮಹದಾಸೆಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ತಣ್ಣೀರೆರಚಿದೆ.
ಅಂಚೆ -ತೆರಪಿನ ಶಿಕ್ಷಣ ಹಾಗೂ ದೂರ ಶಿಕ್ಷಣ ನೀಡಲೆಂದೇ ಪ್ರತ್ಯೇಕವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇರುವಾಗ, ಬೇರೆ ಸಾಂಪ್ರದಾಯಿಕ ವಿವಿಗಳು ಇದೇ ಮಾದರಿಯಲ್ಲಿ ಶಿಕ್ಷಣ ನೀಡುವುದು ಸರಿಯಲ್ಲ ಎಂದೇ ಉನ್ನತ ಶಿಕ್ಷಣ ಇಲಾಖೆ ಪಟ್ಟು ಹಿಡಿದು ಕುಳಿತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ