ಮಳೆ ಬಂದು ಬಣ್ಣ ಬಯಲಾಯ್ತು !

ಕುಂದೂರು ಉಮೇಶ ಭಟ್ಟ ಮೈಸೂರು
ಮಳೆ ಬಂದರೆ ಉತ್ತರ ಕರ್ನಾಟಕದ ಹಳ್ಳಿಗಳಿರಲಿ ಸುರಕ್ಷಿತ ಮೈಸೂರು ಒಂದು ರೀತಿಯಲ್ಲಿ ಆತಂಕದ ಕ್ಷಣ ಎದುರಿಸುತ್ತದೆ. ಮನೆಗೆ ನೀರು ನುಗ್ಗುವುದು ಒಂದು ಕಡೆಯಿದ್ದರೆ ಸಂಚಾರಕ್ಕೆ ದೊಡ್ಡ ಅಡಚಣೆ ಎದುರಿಸಬೇಕಾಗುತ್ತದೆ...
ವಾರದ ಹಿಂದೆಯಷ್ಟೇ ಸುರಿದ ಮೊದಲ ಭಾರೀ ಮಳೆ ಮೈಸೂರಿನ ಪ್ರಮುಖ ರಸ್ತೆ, ಕೆಲವು ಬಡಾವಣೆ ಗಳನ್ನು ದ್ವೀಪವನ್ನಾಗಿಸಿತ್ತು. ಅದರಲ್ಲೂ ನಗರದ ಹೃದಯ ಭಾಗ ಕೆ.ಆರ್.ವೃತ್ತವೇ ಜಲಾವೃತ. ಒಂದು ತಾಸು ಸತತ ಮಳೆ ಬಿದ್ದರೆ ಸಾಕು ಮೈಸೂರಿನ ಹಾದಿ ಬೀದಿಗಳು ಕೊಳ್ಳಗಳಾಗಿ ಮಾರ್ಪಡುತ್ತವೆ. ಇದನ್ನು ಗಮನಿಸುವ ಪಾಲಿಕೆ, ತಕ್ಷಣದ ಪರಿಹಾರ ಕಂಡುಕೊಂಡು ದೀರ್ಘ ಪರಿ ಹಾರದ ಯೋಚನೆಯನ್ನೇ ಕೈಬಿಟ್ಟಂತೆ ಕಾಣುತ್ತಿದೆ. ಇದರಿಂದ ಪ್ರತಿ ಮಳೆಯೂ ಪಾಲಿಕೆಗೆ ಒಂದೊಂದು ಪಾಠವೆ ನಿಸಿದರೆ, ಸಾರ್ವಜನಿಕರಿಗೆ ಪ್ರಾಣ ಸಂಕಟ. ಇದೇ ಕಾರಣಕ್ಕೆ ಮಳೆ ನೀರು ಹರಿಯಲೆಂದೇ ರೂಪಿಸಿದ ದೊಡ್ಡ ಚರಂಡಿ ಯೋಜನೆ ಪೂರ್ಣ ಗೊಳ್ಳುತ್ತಿಲ್ಲ. ಇದಾಗದೇ ಮಳೆ ಬಂದಾಗ ಎದುರಿ ಸುವ ಸಮಸ್ಯೆ ಬಗೆಹರಿಯೋಲ್ಲ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ