ಕೃಷ್ಣ ಮೃಗ ಉಳಿವು: ಸಮುದಾಯಕ್ಕೆ ಅರಿವು

ವಿಕ ವಿಶೇಷ ಮೈಸೂರು
ಅಳಿವಿನಂಚಿನಲ್ಲಿರುವ ಕೃಷ್ಣ ಮೃಗ ಸಂತತಿ ಉಳಿವಿ ಗಾಗಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಸಣ್ಣ ಮಟ್ಟದಲ್ಲಿ ಆರಂಭವಾಗಿದೆ.
ಸಂತತಿ ಹೆಚ್ಚಿರುವ ಪ್ರದೇಶದ ಶಾಲಾ ಮಕ್ಕಳ ಮೂಲಕ  ಸಮುದಾಯವನ್ನು ತಲುಪುವ ಆಶಯದ `ಕೃಷ್ಣ ಮೃಗ ಉಳಿಸಿ' ಶಿಬಿರ  ಐದು ಜಿಲ್ಲೆಗಳ ೧೦ ಶಾಲೆಗಳಲ್ಲಿ ನಡೆದಿದೆ. ಭವಿಷ್ಯದಲ್ಲಿ ರಾಜ್ಯಾದ್ಯಂತ  ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ಸಮಾನ ಆಸಕ್ತ ಸ್ವಯಂ ಸೇವಾ ಸಂಘಟನೆಗಳು ನಿರ್ಧರಿಸಿವೆ.
ಆರಂಭಿಕವಾಗಿ ಒಂದು ಸಾವಿರ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದ ಶಿಬಿರವನ್ನು ಬೆಂಗಳೂರಿನ  ಏಟ್ರಿ(ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕೋಲಜಿ ಅಂಡ್ ದ  ಎನ್ವಿರಾನಮೆಂಟ್)ಸಂಸ್ಥೆ  ಸಹಯೋಗದಲ್ಲಿ ಆಯೋಜಿಸಿದವರು ಮೈಸೂರಿನ  ವನ್ಯಜೀವಿ ಪ್ರೇಮಿ ಯುವಕರಾದ ಆರ್.ಕುಮಾರ್ ಮತ್ತು ಸಿ.ಮಹೇಶ್. `ಮ್ಯಾನ್' ಸಂಸ್ಥೆಯ ಕೆ.ಮನು,ಹೇಮಂತ್, ಗುರುಪ್ರಸಾದ್ ಸಂಪನ್ಮೂಲ ವ್ಯಕ್ತಿಗಳಾಗಿ ಸಾಥ್ ನೀಡಿದರು.

1 ಕಾಮೆಂಟ್‌:

  1. ಕೃಷ್ಣ ಮೃಗದ ಉಳಿವು: ಸಮುದಾಯಕ್ಕೆ ಅರಿವು ವಿಶೇಷ ವರದಿ ಅತ್ಯುತ್ತಮವಾಗಿದೆ. ಕೃಷ್ಣ ಮೃಗದ ಸಂಪೂರ್ಣ ಮಾಹಿತಿ ಹಾಗೂ ಅವುಗಳ ಪ್ರಸ್ತುತ ಸ್ಥಿತಿಗತಿ, ಅವುಗಳ ಉಳಿವಿಗೆ ಕೈಗೊಂಡಿರುವ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ನೀಡಿರುವುದು ಸ್ಟೋರಿಯ ಪ್ಲಸ್ ಪಾಯಿಂಟ್. ಕೃಷ್ಣ ಮೃಗದ ಕುರಿತು ವಿಶೇಷ ವರದಿ ಸಿದ್ಧ ಪಡಿಸಿದವರಿಗೆ ತನ್ನ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ