ನಗರಪಾಲಿಕೆ ಹೊಸ `ಹೊರೆ'

ಪಿ.ಓಂಕಾರ್ ಮೈಸೂರು
`ಕೆಲಸಕ್ಕಾದ್ರೆ ಕರೀಬೇಡಿ,ಊಟಕ್ಕೆ ಮಾತ್ರ ಮರೀ ಬೇಡಿ...'ಎನ್ನುವುದು ಶುದ್ಧ  ಸೋಮಾರಿಗಳಿಗೆ ಹೇಳಿ ಮಾಡಿಸಿದ ಮಾತು.ಮೈಸೂರು ಮಹಾನಗರ ಪಾಲಿಕೆಗೆ  ಇದನ್ನು ಅನ್ವಯಿಸುವುದಾದರೆ  `ತೆರಿಗೆ ಕೊಡೋದು ಮರೀಬೇಡಿ,ಕೆಲಸ ಮಾತ್ರ ಕೇಳ್ಬೇಡಿ...'!
ಜನರ ಬೇಕು,ಬೇಡ,ಆಗುಹೋಗುಗಳಿಗೆ  ಸ್ಪಂದಿಸ ಲೆಂದೇ ಇರುವ ನಗರ ಪಾಲಿಕೆ,ಆಡಳಿತ ಸೂತ್ರ ಹಿಡಿದ ಮಂದಿ ಸಾರ್ವಜನಿಕರಿಂದ `ವರಮಾನ' ಕೀಳಲು ತೋರುವ ಅತ್ಯುತ್ಸಾಹವನ್ನು, ಅದೇ  ಜನರಿಗೆ  ಸೌಲ ಭ್ಯಗಳ `ವರ' ನೀಡುವ ವಿಷಯದಲ್ಲಿ ತೋರುತ್ತಿಲ್ಲ. ಖಾಲಿ ನಿವೇಶನಗಳ `ಕಳೆ' ತೊಳೆಯುವ ವಿಷಯದಲ್ಲಿ ಹೇರುತ್ತಿರುವ  ಹೊಸ ತೆರಿಗೆ ಇದಕ್ಕೆ ತಾಜಾ ನಿದರ್ಶನ.
ನಗರದಲ್ಲಿ ಸಾವಿರಾರು ನಿವೇಶನಗಳು ಕಳೆ,ಪೊದೆ ಮಯವಾಗಿದ್ದು,ಅಕ್ಕ ಪಕ್ಕದ ನಿವಾಸಿಗಳಿಗೆ ಕಿರಿಕಿರಿಯಾಗಿ ಪರಿಣಮಿಸಿವೆ.`ಸಂತ್ರಸ್ತ' ಜನರ ಅಳಲು,ಅಹವಾಲಿಗೆ  ಸ್ಪಂದಿಸಿದ ನಗರಪಾಲಿಕೆ `ಸೈಟ್ ಮಾಲೀಕರು ಖಾಲಿ ನಿವೇಶನ  ಸ್ವಚ್ಛ ಮಾಡಿಸ ದಿದ್ದರೆ,ಪಾಲಿಕೆಯೇ ಸ್ವಚ್ಛತಾ ಕ್ರಮ ಕೈಗೊಂಡು ವೆಚ್ಚ  ವನ್ನ್ನು ಮಾಲೀಕರಿಂದ ವಸೂಲಿ ಮಾಡುತ್ತದೆ' ಎಂದು ಎರಡು ವರ್ಷದಿಂದ ಎಚ್ಚರಿಕೆ ನೀಡುತ್ತಲೇ ಇದೆ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ