ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಮಳೆ ಬಂದು ಬಣ್ಣ ಬಯಲಾಯ್ತು !
ಕುಂದೂರು ಉಮೇಶ ಭಟ್ಟ ಮೈಸೂರು
ಮಳೆ ಬಂದರೆ ಉತ್ತರ ಕರ್ನಾಟಕದ ಹಳ್ಳಿಗಳಿರಲಿ ಸುರಕ್ಷಿತ ಮೈಸೂರು ಒಂದು ರೀತಿಯಲ್ಲಿ ಆತಂಕದ ಕ್ಷಣ ಎದುರಿಸುತ್ತದೆ. ಮನೆಗೆ ನೀರು ನುಗ್ಗುವುದು ಒಂದು ಕಡೆಯಿದ್ದರೆ ಸಂಚಾರಕ್ಕೆ ದೊಡ್ಡ ಅಡಚಣೆ ಎದುರಿಸಬೇಕಾಗುತ್ತದೆ...
ವಾರದ ಹಿಂದೆಯಷ್ಟೇ ಸುರಿದ ಮೊದಲ ಭಾರೀ ಮಳೆ ಮೈಸೂರಿನ ಪ್ರಮುಖ ರಸ್ತೆ, ಕೆಲವು ಬಡಾವಣೆ ಗಳನ್ನು ದ್ವೀಪವನ್ನಾಗಿಸಿತ್ತು. ಅದರಲ್ಲೂ ನಗರದ ಹೃದಯ ಭಾಗ ಕೆ.ಆರ್.ವೃತ್ತವೇ ಜಲಾವೃತ. ಒಂದು ತಾಸು ಸತತ ಮಳೆ ಬಿದ್ದರೆ ಸಾಕು ಮೈಸೂರಿನ ಹಾದಿ ಬೀದಿಗಳು ಕೊಳ್ಳಗಳಾಗಿ ಮಾರ್ಪಡುತ್ತವೆ. ಇದನ್ನು ಗಮನಿಸುವ ಪಾಲಿಕೆ, ತಕ್ಷಣದ ಪರಿಹಾರ ಕಂಡುಕೊಂಡು ದೀರ್ಘ ಪರಿ ಹಾರದ ಯೋಚನೆಯನ್ನೇ ಕೈಬಿಟ್ಟಂತೆ ಕಾಣುತ್ತಿದೆ. ಇದರಿಂದ ಪ್ರತಿ ಮಳೆಯೂ ಪಾಲಿಕೆಗೆ ಒಂದೊಂದು ಪಾಠವೆ ನಿಸಿದರೆ, ಸಾರ್ವಜನಿಕರಿಗೆ ಪ್ರಾಣ ಸಂಕಟ. ಇದೇ ಕಾರಣಕ್ಕೆ ಮಳೆ ನೀರು ಹರಿಯಲೆಂದೇ ರೂಪಿಸಿದ ದೊಡ್ಡ ಚರಂಡಿ ಯೋಜನೆ ಪೂರ್ಣ ಗೊಳ್ಳುತ್ತಿಲ್ಲ. ಇದಾಗದೇ ಮಳೆ ಬಂದಾಗ ಎದುರಿ ಸುವ ಸಮಸ್ಯೆ ಬಗೆಹರಿಯೋಲ್ಲ...

ಮೈಸೂರು ವಿವಿ ದೂರ ಶಿಕ್ಷಣ: ಪರಿಷತ್ ಅಡ್ಡಿ
ವಿಕ ವಿಶೇಷ ಮೈಸೂರು
ಅಂಚೆ ಮತ್ತು ತೆರಪಿನ ಶಿಕ್ಷಣ ಪದ್ಧತಿ ಮೂಲಕ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ತಲುಪಿಸಬೇಕೆಂಬ ಮೈಸೂರು ವಿಶ್ವವಿದ್ಯಾನಿಲಯದ ಮಹದಾಸೆಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ತಣ್ಣೀರೆರಚಿದೆ.
ಅಂಚೆ -ತೆರಪಿನ ಶಿಕ್ಷಣ ಹಾಗೂ ದೂರ ಶಿಕ್ಷಣ ನೀಡಲೆಂದೇ ಪ್ರತ್ಯೇಕವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇರುವಾಗ, ಬೇರೆ ಸಾಂಪ್ರದಾಯಿಕ ವಿವಿಗಳು ಇದೇ ಮಾದರಿಯಲ್ಲಿ ಶಿಕ್ಷಣ ನೀಡುವುದು ಸರಿಯಲ್ಲ ಎಂದೇ ಉನ್ನತ ಶಿಕ್ಷಣ ಇಲಾಖೆ ಪಟ್ಟು ಹಿಡಿದು ಕುಳಿತಿದೆ.

ಇದೇನಾ ರಾಜಪಥ ?!
ವಿಕ ಸುದ್ದಿಲೋಕ ಮೈಸೂರು
ಬಹುನಿರೀಕ್ಷೆಯ `ರಾಜಪಥ' ಈ ದಸರೆಗೂ ಸಿದ್ಧವಾಗುವ ಲಕ್ಷಣಗಳಿಲ್ಲ.
`ಈ ದಸರೆ ಹೊತ್ತಿಗೆ ರಾಜಮಾರ್ಗ ಸಿದ್ಧವಾಗಲಿದೆ' -ಹೀಗೆಂದು ಹೇಳಿ ವರ್ಷ ಕಳೆದಿದೆ. ಕಳೆದ ವರ್ಷ ಹಾಗೆಂದು ಹೇಳಿದಾಗ ದಸರೆ ಸಿದ್ಧತೆಗಳು ನಡೆದಿದ್ದವು. ಜಂಬೂ ಸವಾರಿಗೆ ಇನ್ನೂ ೨-೩ ತಿಂಗಳು ಕಾಲಾವಕಾಶ ವಿದ್ದುದ್ದರಿಂದ ರಾಜಪಥ ಆಗಬಹು ದೆಂದು ನಿರೀಕ್ಷಿಸಲಾಗಿತ್ತಾದರೂ ಆಗಲೇ ಇಲ್ಲ. ಈಗ ಮತ್ತೊಂದು ದಸರೆ ಆಗಮಿಸುತ್ತಿದ್ದರೂ ಪೂರ್ಣವಾಗುವಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿಗಳ ೧೦೦ ಕೋಟಿ ರೂ. ವಿಶೇಷ ಅನುದಾನದಡಿ `ರಾಜಪಥ' ಕಾಮಗಾರಿ ರಾಜಮಾರ್ಗದ ಬನ್ನಿ ಮಂಟಪದ ತುದಿಯಲ್ಲಿ ಹುರುಪಿನಿಂದ ಆರಂಭಗೊಂಡರೂ ಅದೇ ವೇಗದಲ್ಲಿ ಮುಂದುವರಿಯಲಿಲ್ಲ. ಫಲವಾಗಿ ರಾಜಮಾರ್ಗದ ಭಗ್ನಾವಶೇಷಗಳಂತೆ ಅರ್ಧಕ್ಕೆ ನಿಂತಿವೆ.

ನಗರಪಾಲಿಕೆ ಹೊಸ `ಹೊರೆ'
ಪಿ.ಓಂಕಾರ್ ಮೈಸೂರು
`ಕೆಲಸಕ್ಕಾದ್ರೆ ಕರೀಬೇಡಿ,ಊಟಕ್ಕೆ ಮಾತ್ರ ಮರೀ ಬೇಡಿ...'ಎನ್ನುವುದು ಶುದ್ಧ ಸೋಮಾರಿಗಳಿಗೆ ಹೇಳಿ ಮಾಡಿಸಿದ ಮಾತು.ಮೈಸೂರು ಮಹಾನಗರ ಪಾಲಿಕೆಗೆ ಇದನ್ನು ಅನ್ವಯಿಸುವುದಾದರೆ `ತೆರಿಗೆ ಕೊಡೋದು ಮರೀಬೇಡಿ,ಕೆಲಸ ಮಾತ್ರ ಕೇಳ್ಬೇಡಿ...'!
ಜನರ ಬೇಕು,ಬೇಡ,ಆಗುಹೋಗುಗಳಿಗೆ ಸ್ಪಂದಿಸ ಲೆಂದೇ ಇರುವ ನಗರ ಪಾಲಿಕೆ,ಆಡಳಿತ ಸೂತ್ರ ಹಿಡಿದ ಮಂದಿ ಸಾರ್ವಜನಿಕರಿಂದ `ವರಮಾನ' ಕೀಳಲು ತೋರುವ ಅತ್ಯುತ್ಸಾಹವನ್ನು, ಅದೇ ಜನರಿಗೆ ಸೌಲ ಭ್ಯಗಳ `ವರ' ನೀಡುವ ವಿಷಯದಲ್ಲಿ ತೋರುತ್ತಿಲ್ಲ. ಖಾಲಿ ನಿವೇಶನಗಳ `ಕಳೆ' ತೊಳೆಯುವ ವಿಷಯದಲ್ಲಿ ಹೇರುತ್ತಿರುವ ಹೊಸ ತೆರಿಗೆ ಇದಕ್ಕೆ ತಾಜಾ ನಿದರ್ಶನ.
ನಗರದಲ್ಲಿ ಸಾವಿರಾರು ನಿವೇಶನಗಳು ಕಳೆ,ಪೊದೆ ಮಯವಾಗಿದ್ದು,ಅಕ್ಕ ಪಕ್ಕದ ನಿವಾಸಿಗಳಿಗೆ ಕಿರಿಕಿರಿಯಾಗಿ ಪರಿಣಮಿಸಿವೆ.`ಸಂತ್ರಸ್ತ' ಜನರ ಅಳಲು,ಅಹವಾಲಿಗೆ ಸ್ಪಂದಿಸಿದ ನಗರಪಾಲಿಕೆ `ಸೈಟ್ ಮಾಲೀಕರು ಖಾಲಿ ನಿವೇಶನ ಸ್ವಚ್ಛ ಮಾಡಿಸ ದಿದ್ದರೆ,ಪಾಲಿಕೆಯೇ ಸ್ವಚ್ಛತಾ ಕ್ರಮ ಕೈಗೊಂಡು ವೆಚ್ಚ ವನ್ನ್ನು ಮಾಲೀಕರಿಂದ ವಸೂಲಿ ಮಾಡುತ್ತದೆ' ಎಂದು ಎರಡು ವರ್ಷದಿಂದ ಎಚ್ಚರಿಕೆ ನೀಡುತ್ತಲೇ ಇದೆ !

ದೈವಿವನಕ್ಕೆ ಸಿಎಂ ಬಲವೇ ಇಲ್ಲ !
ವಿಕ ವಿಶೇಷ ಮೈಸೂರು
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರವಾಸ, ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ಗೆ ಕಾರ್ಯಕ್ರಮ ಅನುಷ್ಠಾನದ್ದೇ ತ್ರಾಸ...
ಕಳೆದ ತಿಂಗಳು ಕೇರಳ, ಈಗ ಮಾರಿಷಸ್ ಪ್ರವಾಸ ಹೊರಟ ಮುಖ್ಯಮಂತ್ರಿಯಿಂದಾಗಿ ವಿಜಯಶಂಕರ್ ಒಂಬತ್ತು ತಿಂಗಳಿನಿಂದ ಹೇಳುತ್ತಲೇ ಇರುವ `ದೈವಿವನ ಯೋಜನೆ' ಚಾಲನೆಗೆ ಸಿಗುವ ಭಾಗ್ಯವೇ ಕಾಣುತ್ತಿಲ್ಲ !
ಮುಖ್ಯಮಂತ್ರಿಯಿಂದಲೇ ಯೋಜನೆಗೆ ಚಾಲನೆ ಕೊಡಿಸಬೇಕೆಂದು ಹಠಕ್ಕೆ ಬಿದ್ದಿರುವ ವಿಜಯಶಂಕರ್ ಎರಡು ಬಾರಿ ನಿಗದಿ ಮಾಡಿದ್ದ ಮುಹೂರ್ತ ಮತ್ತೆ ಮುಂದೆ ಹೋಗುವ ಲಕ್ಷಣ ಕಾಣುತ್ತಿವೆ. ದೈವಿವನ ನಿರ್ಮಾಣಕ್ಕೆ ಸಂಬಂಧಿಸಿ ಪೂರ್ವಭಾವಿ ಸಭೆ ನಡೆಸಿ ಜುಲೈ ೨೩ರಂದು ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸುವರು ಎಂದು ಸಚಿವರು ೧೫ ದಿನದ ಹಿಂದೆಯೇ ಹೇಳಿಕೆ ನೀಡಿದ್ದರು. ಈಗ ಮುಖ್ಯಮಂತ್ರಿಗಳು ಕುಟುಂಬದ ಸಹಿತ ಮಾರಿಷಸ್ ಪ್ರವಾಸಕ್ಕೆ ತೆರಳಿರುವುದರಿಂದ ಅಂದು ನಡೆಯಬೇಕಾಗಿದ್ದ ಕಾರ್ಯಕ್ರಮದ ಸಾಧ್ಯತೆ ಕ್ಷೀಣಿಸಿದೆ.

ವಿದ್ಯುತ್ ಉಳಿತಾಯ: ಸುಧಾರಣೆಗೆ ಸೆಸ್ಕ್ ಉಪಾಯ
ವಿಕ ಸುದ್ದಿಲೋಕ ಮೈಸೂರು
ಅತ್ಯಾಧುನಿಕ ಸ್ಮಾರ್ಟ್ ವಿದ್ಯುತ್ ಮೀಟರ್, ಹೆಚ್ಚು ಬೆಳಕು ನೀಡಿ ಕಡಿಮೆ ಬಿಲ್ ನೀಡುವ ಸಿಎಫ್ಎಲ್ ಬಲ್ಬ್ ಇನ್ನೇನು ನಿಮ್ಮ ಮನೆಗೆ ಬರಬಹುದು. ಅದೂ ಪುಕ್ಕಟೆ ಮೀಟರ್, ಕಡಿಮೆ ಬೆಲೆಯಲ್ಲಿ ಬಲ್ಬ್...
ಮೈಸೂರು ಭಾಗದ ಐದು ಜಿಲ್ಲೆಗಳ ವ್ಯಾಪಿಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್ ) ವಿದ್ಯುತ್ ನಷ್ಟ ತಗ್ಗಿಸಲು ನಾನಾ ಕ್ರಮಕ್ಕೆ ಮುಂದಾಗಿದೆ. ಸದ್ಯ ನಷ್ಟದ ಪ್ರಮಾಣ ಶೇ.೧೫.೪೮ ರಷ್ಟಿದೆ. ಇದನ್ನು ಸಾಧ್ಯವಾದ ಮಟ್ಟಿಗೆ ತಗ್ಗಿಸುವ ಕೆಲಸ ಶುರುವಾಗಿದೆ. ಇದರ ಭಾಗವೇ ಮನೆ ದೀಪ, ಮೀಟರ್ಗಳ ಅಳವಡಿಕೆ, ಅತ್ಯಾಧುನಿಕ ಟ್ರಾನ್ಸ್ ಫಾರ್ಮರ್ಗಳ ಅಳವಡಿಕೆ. ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ)ಯ ಹಲವಾರು ಕ್ರಮಗಳ ಫಲವಾಗಿ ಸೆಸ್ಕ್ ತನ್ನ ಗ್ರಾಹಕರಿಗೆ ಒದಗಿಸುತ್ತಿರುವ ಸೇವೆಗಳಿವು.

ಪೌರ ಪತ್ರಿಕೋದ್ಯಮ ವಿಕ ವಿಶೇಷ
ಮೈಸೂರು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕಿ ಎ.ವಿ.ವಿದ್ಯಾ ಅರಸ್ ಸ್ತ್ರೀ ಶಕ್ತಿ ಸಂಘಟನೆಗಳ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಓದಿದ್ದು ಪಿಯುಸಿ. ನಂತರ ಕಮರ್ಷಿಯಲ್ ಆರ್ಟ್ಸ್ನಲ್ಲಿ ಡಿಪ್ಲೊಮಾ. ಇದೇ ಮೊದಲ ಬಾರಿಗೆ ೩ನೇ ವಾರ್ಡ್ನಿಂದ ಪಾಲಿಕೆಗೆ ಆಯ್ಕೆ. ಬಿಜೆಪಿಯ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆಯೂ ಹೌದು. ವಿಜಯ ಕರ್ನಾಟಕಕ್ಕಾಗಿ ಪೌರ ಪತ್ರಕರ್ತೆಯಾದ ವಿದ್ಯಾ ಮೈಸೂರು ಮೇಯರ್ ಪುಷ್ಪಲತಾ ಚಿಕ್ಕಣ್ಣ ಜತೆ ನಡೆಸಿದ ವಿನೂತನ ಸಂದರ್ಶನವಿದು.
ಕೃಷ್ಣ ಮೃಗ ಉಳಿವು: ಸಮುದಾಯಕ್ಕೆ ಅರಿವು
ವಿಕ ವಿಶೇಷ ಮೈಸೂರು
ಅಳಿವಿನಂಚಿನಲ್ಲಿರುವ ಕೃಷ್ಣ ಮೃಗ ಸಂತತಿ ಉಳಿವಿ ಗಾಗಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಸಣ್ಣ ಮಟ್ಟದಲ್ಲಿ ಆರಂಭವಾಗಿದೆ.
ಸಂತತಿ ಹೆಚ್ಚಿರುವ ಪ್ರದೇಶದ ಶಾಲಾ ಮಕ್ಕಳ ಮೂಲಕ ಸಮುದಾಯವನ್ನು ತಲುಪುವ ಆಶಯದ `ಕೃಷ್ಣ ಮೃಗ ಉಳಿಸಿ' ಶಿಬಿರ ಐದು ಜಿಲ್ಲೆಗಳ ೧೦ ಶಾಲೆಗಳಲ್ಲಿ ನಡೆದಿದೆ. ಭವಿಷ್ಯದಲ್ಲಿ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ಸಮಾನ ಆಸಕ್ತ ಸ್ವಯಂ ಸೇವಾ ಸಂಘಟನೆಗಳು ನಿರ್ಧರಿಸಿವೆ.
ಆರಂಭಿಕವಾಗಿ ಒಂದು ಸಾವಿರ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದ ಶಿಬಿರವನ್ನು ಬೆಂಗಳೂರಿನ ಏಟ್ರಿ(ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕೋಲಜಿ ಅಂಡ್ ದ ಎನ್ವಿರಾನಮೆಂಟ್)ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದವರು ಮೈಸೂರಿನ ವನ್ಯಜೀವಿ ಪ್ರೇಮಿ ಯುವಕರಾದ ಆರ್.ಕುಮಾರ್ ಮತ್ತು ಸಿ.ಮಹೇಶ್. `ಮ್ಯಾನ್' ಸಂಸ್ಥೆಯ ಕೆ.ಮನು,ಹೇಮಂತ್, ಗುರುಪ್ರಸಾದ್ ಸಂಪನ್ಮೂಲ ವ್ಯಕ್ತಿಗಳಾಗಿ ಸಾಥ್ ನೀಡಿದರು.

ತಗ್ಗಿಗೆ ನುಗ್ಗಿದ ನೀರು: ಉಕ್ಕಿ ಹರಿದ ರಸ್ತೆಗಳು !
ಮೈಸೂರು ನಗರ
ಮುಂಗಾರು ಆರಂಭದ ನಂತರ ಮಳೆ ಕೊರತೆ ಎದು ರಿಸಿದ್ದ ನಗರದಲ್ಲಿ ಗುರುವಾರ ಧಾರಾಕಾರ ಮಳೆ.
ನಡು ಮಧ್ಯಾಹ್ನ ಮೋಡಕವಿದ ವಾತಾವರಣ. ೨ ಗಂಟೆ ನಂತರ ಧಾರಾಕಾರ ಮಳೆ. ಕೆಲ ನಿಮಿಷ ಬಿಡುವಿನ ಹೊರತು ನಿರಂತರ ಎರಡೂವರೆ ತಾಸು ಸುರಿಯಿತು. ನಂತರವೂ ರಾತ್ರಿವರೆಗೆ ಆಗಸ ಜಿಟಿಜಿಟಿ ಜಿನುಗುತ್ತಲೇ ಇತ್ತು.
ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಯಿತಾದರೂ,ಹೆಚ್ಚಿನ ಅನಾಹುತ ವರದಿಯಾಗಿಲ್ಲ. ಇನ್ನು ಕೆಲವೆಡೆ ಒಳ ಚರಂಡಿ, ಮಳೆ ನೀರು ಚರಂಡಿ ವ್ಯವಸ್ಥೆ ಹದಗೆಟ್ಟಿದ್ದ ರಿಂದ ರಸ್ತೆಗಳು ನದಿಗಳೋಪಾದಿ ಉಕ್ಕಿ ಹರಿದು ಸಂಚಾರ ಅಸ್ತವ್ಯಸ್ತವಾಗಿತ್ತು. ನಗರದ ಹೃದಯಭಾಗ ಕೆ.ಆರ್.ವೃತ್ತದಲ್ಲಿಯೇ ಮೊಣಕಾಲು ವರೆಗೆ ನೀರು ನಿಂತಿತ್ತು. ರಾಮಾನುಜ ರಸ್ತೆ ಮತ್ತಿತರ ಕಡೆಯೂ ಇದೇ ಸ್ಥಿತಿ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾ ರರು ಪರದಾಡಿದರು. ಸಂಜೆ ಶಾಲೆಯಿಂದ ಮನೆಗೆ ಹೊರಟ ಮಕ್ಕಳು ತೊಯ್ದು ತೊಪ್ಪೆಯಾದರು.
ಕುವೆಂಪು ನಗರ ಅಕ್ಷಯ ಭಂಡಾರ್ ಸಮೀಪ ರಸ್ತೆ ಪಕ್ಕ ಹೂತು ನಿಂತಿದ್ದ ಕಾರು ಮತ್ತು ಜೀಪ್ಗಳನ್ನು ನಗರ ಪಾಲಿಕೆಯ `ಧನುಷ್' ತಂಡ ಎತ್ತಿತು.
ಗ್ರಾಮಾಂತರದಲ್ಲಿ: ಹುಣಸೂರು, ಪಿರಿಯಾಪಟ್ಟಣ,ನಂಜನಗೂಡು,ತಿ.ನರಸೀಪುರ,ಎಚ್.ಡಿ.ಕೋಟೆ, ಕೆ.ಆರ್.ನಗರದಲ್ಲೂ ಮಳೆಯಾಗಿದೆ.

ಸಾಕು ನಾಯಿಗೂ ತೆರಿಗೆ !
ಮೈಸೂರು ನಗರ
ನೀವು ನಾಯಿ ಸಾಕು ತ್ತಿದ್ದೀರಾ? ಅದರ ಮರಿಗಳನ್ನು ಮಾರಾಟ ಮಾಡುತ್ತೀದ್ದೀರಾ? ಹಾಗಾದರೆ ತೆರಿಗೆ ಕಟ್ಟಬೇಕಾಗಬಹುದು.
ಬೆಂಗಳೂರು ಆಯ್ತು, ಈಗ ಮೈಸೂರಿನಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಈ ಕುರಿತು ಮೈಸೂರು ಮಹಾನಗರ ಪಾಲಿಕೆ ಸಾಕು ನಾಯಿಗಳಿಗೂ ಪರವಾನಗಿ ನೀಡಿ ತೆರಿಗೆ ವಿಧಿಸಲು ಯೋಚಿಸುತ್ತಿದೆ. ಈ ಸಂಬಂಧ ಸಾಕು ಶ್ವಾನಗಳ ಪಟ್ಟಿ, ವ್ಯಾಪಾರದ ಹಿನ್ನೆಲೆ, ಅವುಗಳ ಆರೋಗ್ಯ ಬಗ್ಗೆ ಮಾಹಿತಿ ಕಲೆ ಹಾಕಲು ಆರೋಗ್ಯ ಹಾಗೂ ಸ್ವಚ್ಛತಾ ಸ್ಥಾಯಿ ಸಮಿತಿ ಮುಂದಾಗಿದೆ.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ವಿ.ಮಲ್ಲೇಶ್ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಸಿ, ಬೋಗಾದಿಯಲ್ಲಿ ನಡೆಯುತ್ತಿರುವ ಪೀಪಲ್ ಫಾರ್ ಅನಿಮಲ್ಸ್ನ (ಪಿಎಫ್ಎ) ಬೀದಿ ಬದಿ ಪ್ರಾಣಿಗಳ ಪುನರ್ವಸತಿ ಹಾಗೂ ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿತ್ತು. ಬೀದಿ ನಾಯಿಗಳಿಗೆ ಮಾಡುವ ಖರ್ಚನ್ನು ಸಾಕು ನಾಯಿಗಳ ಮೂಲಕ ಸರಿದೂಗಿಸುವ ಯೋಚನೆಯೂ ಈ ಹೊಸ ಚಿಂತನೆಯ ಹಿಂದೆ ಅಡಗಿದಂತಿದೆ.

ಆಸೆಯು ಈಡೇರಿತು, ಗಂಗೋತ್ರಿಗೆ ಬಂದಾಯಿತು
ಚೀ.ಜ.ರಾಜೀವ ಮೈಸೂರು
ಹದಿನೆಂಟು ವರ್ಷದ ಹಿಂದೆ ಪದವಿ ಕಲಿಯಲೆಂದು ಕಾಲೇಜು ಮೆಟ್ಟಿಲು ತುಳಿದ ಯುವತಿಗೆ ಮದುವೆ ಎಂಬ ವ್ಯವಸ್ಥೆ ಅವರ ಮುಂದಣ ಹೆಜ್ಜೆಯನ್ನು ಹಿಂದಕ್ಕೆ ತಳ್ಳಿತ್ತು. ಆದರೆ, ಈ ವರ್ಷ ಅವರ ಕನಸಿಗೆ ಗರಿ ಮೂಡಿದೆ.
ಯರಗನಹಳ್ಳಿ ಗೃಹಿಣಿ ಭಾಗ್ಯ ಅವರಿಗೆ ವಯಸ್ಸು ೪೦ ದಾಟಿದರೂ ಗಂಗೋತ್ರಿಗೆ ಹೋಗಿ ಏನನ್ನಾದರೂ ಕಲಿಯಬೇಕೆಂಬ ಆಸೆ ಈಗ ಕೈಗೂಡಿದೆ. ಮಾನಸ ಗಂಗೋತ್ರಿಯ ಅಂಗಳಕ್ಕೆ ಬಂದು, ಅಲ್ಲಿನ ಪ್ರಾಧ್ಯಾಪಕರ ನೆರವಿನೊಂದಿಗೆ ಕಲಿಯಲಾರಂಭಿಸಿದ್ದಾರೆ. ವ್ಯತ್ಯಾಸ ಅಂದ್ರೆ ಅವರು ಈಗ ಕಲಿಯುತ್ತಿರುವುದು ಪದವಿಯಲ್ಲ. ಬದಲಿಗೆ ಬದುಕಿಗೆ ಬೇಕಾದ ಕೌಶಲ್ಯ.

ಹಣದ ಮೋಹಕ್ಕೆ ಸಿಲುಕಿ ಕೊನೆಯುಸಿರೆಳೆದ
ಕುಂದೂರು ಉಮೇಶಭಟ್ಟ ಮೈಸೂರು
ಮಧ್ಯಮವರ್ಗದ ಯುವಕನೊಬ್ಬ ಐಷಾರಾಮಿ ಬದುಕಿಗೆ ಜೋತು ಬಿದ್ದು ಬಲಿಯಾದ ದುರಂತಗಾಥೆಯಿದು.
ನಾಲ್ಕು ವರ್ಷದ ಹಿಂದೆಯಷ್ಟೇ ಪರಿಚಯವಾದ ಸ್ನೇಹಿತನ ಸಹವಾಸದಿಂದ ನಾನೂ ಶ್ರೀಮಂತನಾಗಬಹುದು ಎಂದುಕೊಂಡು ಆತನ ಚಟುವಟಿಕೆಗಳಿಗೆ ಬೆನ್ನುಲಬಾಗಿ ನಿಂತು ಆತನಿಂದಲೇ ಅಮಾನುಷವಾಗಿ ಅಂತ್ಯ ಕಂಡಿದ್ದಾನೆ ಮದನಕುಮಾರ್.
ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಕಚೇರಿ ಸಿಬ್ಬಂದಿ ಕುರಿಮಂಡಿ ನಿವಾಸಿ ಪ್ರಭುಸ್ವಾಮಿ ಅವರ ಮೂವರು ಮಕ್ಕಳಲ್ಲಿ ಮದನಕುಮಾರ್ ಹಿರಿಯ. ರಾಜೇಂದ್ರನಗರ ಇನ್ಸ್ಟಿಟೂಟ್ ಆಫ್ ಎಜುಕೇಶನ್ನಲ್ಲಿ ಎಸ್ಎಸ್ಎಲ್ಸಿ ಮುಗಿಸಿದ. ಅಲ್ಲಿಂದ ಉತ್ತಮ ಶಿಕ್ಷಣ ಸಿಗಲೆಂದೇ ಸೇಂಟ್ಫಿಲೋಮಿನಾ ಕಾಲೇಜಿಗೆ ಸೇರಿಸಿದರು. ಅಲ್ಲಿಯೇ ಪಿಯುಸಿ ಮುಗಿಸಿ ಬಿಬಿಎಂಗೂ ಸೇರಿದ. ಆಗ ಪರಿಚಯ ವಾದವನು ಗದಗ ಮೂಲದ ಮಹಾಂತೇಶ್. ಈತನೂ ಇಲ್ಲಿಯೇ ಬಿಕಾಂ ವಿದ್ಯಾರ್ಥಿ. ಆಗಲೇ ಇವರ ಸ್ನೇಹ ಭಿನ್ನ ಮಾರ್ಗಗಳನ್ನು ತುಳಿದಿತ್ತು.

ಮೈಸೂರಿನಲ್ಲಿ ಅನಿಮೇಷನ್, ೩ಡಿ ಸಂಗ್ರಹಾಲಯ
ಕುಂದೂರು ಉಮೇಶಭಟ್ಟ ಮೈಸೂರು
ಮೈಸೂರಿನ ಪ್ರವಾಸಿ ತಾಣಗಳಿಗೆ ಮತ್ತೊಂದು ವಿಶಿಷ್ಟ ವಸ್ತು ಸಂಗ್ರಹಾಲಯ ಸೇರ್ಪಡೆಗೊಳ್ಳಲಿದೆ.
ಸಿದ್ಧಾರ್ಥ ಬಡಾವಣೆಯಲ್ಲಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯ (ಆರ್ಎಂಎನ್ಎಚ್) ರೂಪಿಸುತ್ತಿರುವ ಅನಿಮೇಷನ್ ಹಾಗೂ ೩ಡಿ ತಂತ್ರಜ್ಞಾನವನ್ನು ಬಳಸಿ ರೂಪಿಸುತ್ತಿರುವ ಸಂಗ್ರಹಾಲಯವಿದು.

ಪಟ ಪಟ ಗಾಳಿಪಟ ಬಾನಗಲ ಚಟಪಟ
ಮೈಸೂರಿನ ವಿದ್ಯಾರಣ್ಯಪುರಂ ಬೂತಾಳೆ ಪಿಚ್ನಲ್ಲಿ ಸೋಮವಾರ `ಗಾಳಿಪಟ'ಹಾರಿಸುವ ಸಂಭ್ರಮ. ನಳಂದ ಎಜುಕೇಷನ್ ಸಂಸ್ಥೆಯ ಪ್ರಾಥಮಿಕ, ಪ್ರೌಢಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಷಾಢದ ಗಾಳಿಯಲ್ಲಿ ಬಣ್ಣ ಬಣ್ಣದ ವೈವಿಧ್ಯಮಯ ಪಟಗಳನ್ನು ಹಾರಿಸಿ ಖುಷಿ ಪಟ್ಟರು. ಮಕ್ಕಳ ಖುಷಿಗಾಗಿ ಶಾಲೆಯ ಆಡಳಿತವೇ `ಪಟದ ಹಬ್ಬ'ವನ್ನು ಆಯೋಜಿಸಿತ್ತು. ಮಾಜಿ ಮೇಯರ್ ಮೋದಾಮಣಿ, ಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್, ಸಂಸ್ಥೆ ಕಾರ್ಯದರ್ಶಿ ಎಚ್.ಎಚ್. ಸಾವಿತ್ರಿ, ಮುಖ್ಯ ಶಿಕ್ಷಕ ನಟೇಶ್ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ನಾಗರಿಕರಾಗಿ ! ನಗರ ಸ್ವಚ್ಛತೆಗೆ ಮುಂದಾಗಿ
ನಗರ ಬಸ್ ನಿಲ್ದಾಣ ಎದುರು ಸಾರ್ವಜನಿಕರು ಬಾಳೆ ಹಣ್ಣು ಖರೀದಿಸಿ ಸಿಪ್ಪೆ ಅಲ್ಲೇ ಬಿಸಾಡುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗಿದೆ. ಕೆಲವೊಮ್ಮೆ ಸಿಪ್ಪೆ ಮೇಲೆ ಕಾಲಿಟ್ಟು ಜಾರಿ ಬಿದ್ದ ಪ್ರಸಂಗಗಳು ಹಲವಾರು. ನಮ್ಮಿಂದ ಇತರರಿಗೆ ತೊಂದರೆಯಾಗಬಾರದು ಎಂಬ ಸಣ್ಣ ಸಂಗತಿಯೂ ಅರಿವಾಗದಿದ್ದರೆ ಹೇಗೆ ?
ರಂಗಾಯಣಕ್ಕೆ `ನವ ವೃತ್ತಿಪರತೆ'ಯ ಸ್ಪ ರ್ಶ
ವಿಕ ವಿಶೇಷ ಮೈಸೂರು
`ವೃತ್ತಿಪರತೆಯಲ್ಲಿ ಹೆಗ್ಗಳಿಕೆ ಸಾಧಿಸಿದರಷ್ಟೆ ಹೆಚ್ಚು ಮನ್ನಣೆ' ಎಂಬ ಸ್ಪರ್ಧಾತ್ಮಕ ಜಗತ್ತಿನ ಸತ್ಯ ರಂಗಾಯಣ ವನ್ನು ಒಳಗೊಳ್ಳುವ ಕಾಲ ಸನ್ನಿಹಿತ.
ಶಿವಮೊಗ್ಗ ರಂಗಾಯಣದ `ಸ್ವರೂಪ' ರಚನಾ ಸಮಿತಿ ನೀಡಿದ ಶಿಫಾರಸನ್ನು ರಾಜ್ಯ ಸರಕಾರ ಒಪ್ಪಿದರೆ, ಭವಿಷ್ಯದಲ್ಲಿ ನಾಟಕವೊಂದರ `ತಯಾರಿ'ಗೆ ದೊರೆ ಯುವ ನೆರವು ಸಹಾಯಧನದ ರೂಪದಲ್ಲಿರಲಿದೆ. ಮಾತ್ರವಲ್ಲ, ಈ ಪ್ರಯೋಗದ `ಗಳಿಕೆ' ಮುಂದಿನ ನಾಟಕ ತಯಾರಿಯ ಸಹಾಯಧನವನ್ನು ನಿರ್ಧರಿಸಲಿದೆ.

`ಸ್ವಾಮಿ ಸೊತ್ತು ಕುಲ ನಾಶ' ನಂಬಿಕೆಯೇ ಸಂಪತ್ತಿಗೆ ಶ್ರೀರಕ್ಷೆ
ಈಚನೂರು ಕುಮಾರ್ ಮೈಸೂರು
`ಸ್ವಾಮಿ ಸೊತ್ತು ಕುಲ ನಾಶ' ಎಂಬ ಪ್ರಬಲ ನಂಬಿಕೆಯೇ ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಾಲಯಕ್ಕೆ ಸೇರಿದ ಪ್ರಾಚೀನ ಸಂಪತ್ತು ರಕ್ಷಣೆಗೆ ಶ್ರೀರಕ್ಷೆಯಾಗಿದೆ.
ಅಭೂತಪೂರ್ವ ಸಂಪತ್ತಿನ ರಕ್ಷಣೆ ಮಾಡಿಕೊಂಡು ಬಂದ ರಾಜಮನೆತನದವರ ಮನೋಧರ್ಮ ಎಂಥದ್ದು ಎಂಬುದು ಇಂದಿನ ಅಚ್ಚರಿಯೂ ಆಗಿದೆ. ತಂತಮ್ಮ ಕಷ್ಟ ನಷ್ಟಗಳಿಗೆ ಅಥವಾ ದುಂದುಗಾರಿಕೆಗೆ ಎಂದೂ ಬಳಕೆ ಮಾಡದ ಈ ಕುಟುಂಬ ಸಂರಕ್ಷಿಸಿದ್ದು ಯಾವ ಬಲದಿಂದ ಎಂಬ ಪ್ರಶ್ನೆ ಹುಟ್ಟುವುದು ಸಹಜ.

ಜೂನ್ ನಲ್ಲೇ ೧೦೦ರ ಗಡಿ ದಾಟಿದ ಜಲಾಶಯ
ನವೀನ್ ಮಂಡ್ಯ
ಮುಂಗಾರು ಚೇತರಿಕೆ ಪರಿಣಾಮ ಮಂಡ್ಯ ಮತ್ತು ಮೈಸೂರು ಜಿಲ್ಲೆಯ `ಜೀವನಾಡಿ' ಕೆಆರ್ಎಸ್ ಜಲಾಶಯ ಐದು ವರ್ಷ ಗಳ ಬಳಿಕ ಜೂನ್ನಲ್ಲೇ ೧೦೦ ಅಡಿ ಗಡಿ ಮುಟ್ಟಿದೆ. ಇದು ಈ ಬಾರಿ ಜಲಾಶಯ ಬೇಗ ಭರ್ತಿಯಾಗುವ ಸೂಚನೆ ನೀಡಿದೆ.
ಗರಿಷ್ಠ ೧೨೪.೮೦ ಅಡಿ ಮಟ್ಟದ ಕನ್ನಂಬಾಡಿ ಕಟ್ಟೆಯು ೨೦೦೬ ಜೂ.೨೯ರಂದು ನೂರು ಅಡಿ ಮುಟ್ಟಿತ್ತು. ಇದೀಗ ೨೦೧೧ ಜೂ.೨೮ರಂದು ಐದು ವರ್ಷಗಳ ಹಿಂದಿನ ಮಟ್ಟವನ್ನು ಕಾಯ್ದುಕೊಂಡಿದೆ. ಅದೂ ಒಂದು ದಿನ ಮುಂಚಿತವಾಗಿ.
ಜೂನ್ ತಿಂಗಳಲ್ಲಿ ಕೊಡಗು, ಹಾಸನ ಭಾಗದಲ್ಲಿ ಉತ್ತಮ ಮಳೆಯಾಗಿರುವ ಪರಿಣಾಮ ಕಾವೇರಿ ಕೊಳ್ಳದ ಕೆಆರ್ಎಸ್ ಜಲಾಶಯಕ್ಕೆ ಜೂನ್ನಲ್ಲೇ ಜೀವ ಕಳೆ ಬಂದಿದೆ. ಕೊಡಗಿನಲ್ಲಿ ಕಳೆದ ವರ್ಷ ಕಡಿಮೆ ಪ್ರಮಾಣದಲ್ಲಿದ್ದ ಮುಂಗಾರು ಈ ವರ್ಷ ಚೇತರಿಸಿಕೊಂಡಿದೆ.

ಸಾಹಿತ್ಯ ಸಹವಾಸವೇ ದೀರ್ಘಾಯುಷ್ಯದ ಗುಟ್ಟು
ಚೀ.ಜ.ರಾಜೀವ ಮೈಸೂರು
`ಸಾಹಿತ್ಯದ ಸಹವಾಸದಿಂದ ಮನುಷ್ಯ ದೀರ್ಘಾಯುಷಿ ಆಗಬಲ್ಲ. ಸಾಹಿತ್ಯದ ಹಂಗಿಲ್ಲದವರು ಹೆಚ್ಚು ಕಾಲ ಬದುಕಬಹುದೇನೋ.ಆದರೆ,ಓದು-ಬರಹದೊಂದಿಗೆ ಒಡನಾಟ ಇಟ್ಟುಕೊಂಡವರು, ಉಳಿದವರಿಗಿಂತ ಹೆಚ್ಚು ಆನಂದದಿಂದ ನೆಮ್ಮದಿಯ ಬದುಕು ಸಾಗಿಸಬಹುದೇನೋ ಅನಿಸುತ್ತದೆ..!
ಹೀಗೆನ್ನುತ್ತಾರೆ ಕನ್ನಡದ ಹಿರಿಯ ಸಾಹಿತಿ ನಾಡೋಜ ದೇ. ಜವರೇಗೌಡ. ಅವರಿಗೆ ಬುಧವಾರಕ್ಕೆ ೯೫ ವರ್ಷ. ಈ ಇಳಿ ವಯಸ್ಸಿನಲ್ಲೂ ಸಾಹಿತ್ಯದ ಓದು-ಬರಹ, ಕನ್ನಡಕ್ಕಾಗಿ ಹೋರಾಟ, ಸಭೆ-ಸಮಾರಂಭಗಳಲ್ಲಿ ಭಾಷಣ, ದೇಶ-ವಿದೇಶ ಪ್ರವಾಸ ಎಂದು ಸದಾ ಬಿಜಿ.

ಪರಿಸರಸ್ನೇಹಿ ಸೋಲಾರ್ ಎಂಜಿನ್!
ಚೀ. ಜ. ರಾಜೀವ ಮೈಸೂರು
ಇತಿಹಾಸ ಪುನರಾವರ್ತನೆಯಾಗುತ್ತದೆ ಎಂಬುದು ಸಮಾಜ ವಿಜ್ಞಾನದ ನಂಬಿಕೆ. ಆದರೆ,ಇಂದಿನ ಸಂಶೋಧನೆಯನ್ನು ನಾಳೆಯ ವೇಳೆಗೆ `ಇತಿಹಾಸ ' ಮಾಡುವಷ್ಟು ವೇಗವರ್ಧಕ ಗುಣ ಹೊಂದಿರುವ ವಿಜ್ಞಾನದಲ್ಲಿ, ಅಂಥ ನಂಬಿಕೆಗಳಿಗೆ ಎಳ್ಳಷ್ಟು ಜಾಗವಿಲ್ಲ ಎನ್ನುತ್ತದೆ ವಿಜ್ಞಾನ. ಕೇವಲ ಸಂವಹನ ಮಾಡಲಷ್ಟೇ ಬಳಕೆಯಾಗುತ್ತಿದ್ದ ನಿನ್ನೆಯ ಲ್ಯಾಂಡ್ ಫೋನ್, ಇಂದು ಮೊಬೈಲ್ ಸೆಲ್ ಆಗಿ ಹತ್ತಾರು ರೀತಿಯ ಸೇವೆ ನೀಡುತ್ತಿದೆ. ನಾಳೆ ಇನ್ನೇನು ರೂಪ ಪಡೆಯುತ್ತದೆಯೋ ಬಲ್ಲವರಾರು ಎಂಬುದು ವಿಜ್ಞಾನ ಮುಂದಿಡುವ ಸರಳ ರೂಪಕ. ಹಾಗಾಗಿ ಚರ್ಚೆಗೆ ಇಲ್ಲಿ ಹೆಚ್ಚು ಅವಕಾಶವಿಲ್ಲ ಎಂಬುದು ಸಾಮಾನ್ಯರ ಗ್ರಹಿಕೆ.

ಭರಚುಕ್ಕಿ: ಎಚ್ಚರ ತಪ್ಪಿದರೆ ಸಾವು ನಿಕ್ಕಿ
ಫಾಲಲೋಚನ ಆರಾಧ್ಯ ಚಾಮರಾಜನಗರ/ ಎಂ. ಗುರುಸ್ವಾಮಿ ಕೊಳ್ಳೇಗಾಲ
ಭರಚುಕ್ಕಿ ಜಲಪಾತ ಮಳೆಗಾಲದಲ್ಲಿ ಪ್ರವಾಸಿಗರ ಆಕರ್ಷಣೆ ಕೇಂದ್ರವಷ್ಟೇ ಅಲ್ಲ, ಪ್ರವಾಸಿಗರ ಪ್ರಾಣಹಾನಿಯ ತಾಣವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ಈಜಲು ಹೋಗಿ ೪ ವರ್ಷಗಳಲ್ಲಿ ಮೃತಪಟ್ಟವರ ಸಂಖ್ಯೆ ಬರೋಬ್ಬರಿ ೪೩ !
ಕಳೆದ ಒಂದೂವರೆ ವರ್ಷದಲ್ಲೇ ೨೦ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಇಲ್ಲಿ ರಕ್ಷಣಾ ಸಿಬ್ಬಂದಿ ಇಲ್ಲ. ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ.

ವಿಕ ಫೋನ್ ಇನ್ನಲ್ಲಿ ಕೃಷಿ ಅಧಿಕಾರಿ
ವಿಕ ಸುದ್ದಿಲೋಕ ಮೈಸೂರು
`ಸೋಮವಾರದಿಂದಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಆರಂಭ. ಕೊನೆವರೆಗೆ ಕಾಯದೆ, ಕೂಡಲೇ ಖರೀದಿ ಮಾಡಿಟ್ಟುಕೊಳ್ಳಿ. ವಾರದೊಳಗೆ ಎಲ್ಲ ರಸಗೊಬ್ಬರ ಮಾರಾಟ ಕೇಂದ್ರಗಳ ಮುಂದೆ ದಾಸ್ತಾನು, ಎಂಆರ್ಪಿ ದರ ಸಹಿತ ಎಲ್ಲ ವಿವರದ ಪಟ್ಟಿಯನ್ನು ನಿಶ್ಚಿತವಾಗಿ ಪ್ರಕಟಿಸಲಾಗುವುದು...'
- ಇದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಆರ್.ಕೃಷ್ಣಯ್ಯ ಜಿಲ್ಲೆಯ ರೈತರಿಗೆ ನೀಡಿದ ಭರವಸೆ. `ಈ ವಿಷಯಲ್ಲಿ ವ್ಯತ್ಯಾಸ ಕಂಡು ಬಂದರೆ, ಕೃಷಿ ಇಲಾಖೆಯ ವಿಚಕ್ಷಣ ದಳ(ವಿಜಿಲೆನ್ಸ್ ಸ್ಕ್ವಾಡ್) ಇಲ್ಲವೇ ಜಿಲ್ಲಾ ಕಂಟ್ರೋಲ್ ರೂಂಗೆ ಕರೆ ಮಾಡಿದರೆ ಕೂಡಲೇ ಕ್ರಮಕೈಗೊಳ್ಳುತ್ತೇನೆ...'ಎಂದು ಅಭಯ ನೀಡಿದರು.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)