ದಸರೆ: 'ನೆನಪು'ಗಳ ಸವಾರಿ


ಹಂಪಿಯ ಮಹಾನವಮಿ ದಿಬ್ಬದಲ್ಲಿ ಆರಂಭವಾದ ದಸರೆ ಶ್ರೀರಂಗಪಟ್ಟಣದ ಗೌರಿ ಕಡುವೆಯಲ್ಲಿ ಜರುಗಿ 400 ವರ್ಷ. ಇದೇ ದಸರೆ ಮೈಸೂರಿನ ಬನ್ನಿಮಂಟಪಕ್ಕೆ ಆಗಮಿಸಿ 204 ವರ್ಷ. ಮುಮ್ಮಡಿಯವರು ದಸರೆಯನ್ನು ಪ್ರಜಾಪ್ರಭುತ್ವದತ್ತ ಅರಳಿಸಿ ಇಂಗ್ಲಿಷ್ ಶಿಕ್ಷಣ ಅಗತ್ಯ ಕಂಡುಕೊಂಡರು. ಚಾಮರಾಜೇಂದ್ರ ಒಡೆಯರು ಜತೆಗೆ ಮಹಿಳೆಯರಿಗೆ ಶಿಕ್ಷಣ ಕೊಟ್ಟರು. ನಾಲ್ವಡಿಯವರು ವಿಶ್ವವಿದ್ಯಾನಿಲಯ ಸ್ಥಾಪಿಸಿದರು. ಜಯಚಾಮರಾಜ ಒಡೆಯರು ಋಗ್ವೇದ ಸಂಹಿತೆಯನ್ನು, ಕನ್ನಡಕ್ಕೆ ಸಂಪುಟಗಳ ರಾಶಿಯನ್ನೇ ಕೊಟ್ಟು ದಸರೆಯನ್ನು ಜನರ ಕೈಗೆ ಕೊಟ್ಟರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ