ಶಾಲಾ ಮಕ್ಕಳ ಬಿಸಿಯೂಟದಲ್ಲಿ ರುಚಿ ತಪ್ಪಿದೆ. ಜಿಲ್ಲೆಯ 2300 ಶಾಲೆಗಳ ಸುಮಾರು 2.80 ಲಕ್ಷ ಮಕ್ಕಳು ತಮ್ಮ ಮಧ್ಯಾಹ್ನದ ಬಿಸಿಯೂಟದಲ್ಲಿ ತೊಗರಿ ಬೇಳೆ ಸಾರಿನ ರುಚಿಯಿಂದ ವಂಚಿತರಾಗಿದ್ದಾರೆ ! ತೊಗರಿ ಬೇಳೆ ಕೆ.ಜಿ.80 ರೂ. ಆಗಿರುವುದೇ ಇದಕ್ಕೆ ಕಾರಣ.
ಏಳಿ ಎದ್ದೇಳಿ ಎಂದಿದ್ದರು ಸ್ವಾಮಿ ವಿವೇಕಾನಂದರು. ಅವರ ಹೆಸರಿಗೆ ಅಪಚಾರ ಮಾಡುವಂತೆ ನಗರದ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಏಳಿ, ಎದ್ದು ಇಲ್ಲಿಂದ ಹೊರಡಿ ಎನ್ನುವ ಪ್ರಯತ್ನ ನಡೆಯುತ್ತಿದೆ.
'ದಕ್ಷಿಣ ಪ್ರಯಾಗ' ಎಂದೇ ಖ್ಯಾತಿ ಪಡೆದಿರುವ ತಿರುಮಕೂಡಲು ನರಸೀಪುರದ ಕುಂಭಮೇಳಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದ ತ್ರಿವೇಣಿ ಸಂಗಮದ ಮರಳು ರಾಶಿಯನ್ನು ಬಗೆದಿರುವುದರಿಂದ ಪ್ರಕೃತಿ ಸಮತೋಲನದ ಮೇಲೆ ದುಷ್ಪರಿಣಾಮ ಬೀರಿದೆ.
ಗಡಿ ಜಿಲ್ಲೆಯಲ್ಲಿ ಗಾಂಜಾ ಗಮ್ಮತ್ತು ಬಲು ಜೋರು. ಜೋಳ, ಅರಿಶಿಣ, ರಾಗಿ, ಫಸಲಿನ ಜತೆಯಲ್ಲಿ ಇದೀಗ ಗಾಂಜಾ ಕರಾಮತ್ತು ಹೆಚ್ಚಾಗ ತೊಡಗಿದೆ. ಒಂದು ಕೆ.ಜಿ.ಗಾಂಜಾಗೆ 10ರಿಂದ 20 ಸಾವಿರ ರೂ. ಇದಕ್ಕೆ ಆಕರ್ಷಿತರಾಗಿ ಕಳ್ಳ ದಂಧೆಗೆ ತೊಡಗಿಸಿಕೊಳ್ಳುವವರು ಹೆಚ್ಚಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂಸ್ಕ್ರತಿಕ ನಗರ ಮೈಸೂರು ಬೆಳೆಯುತ್ತಿದೆ. ಇದರೊಂದಿಗೆ ಅಪರಾಧವೂ ಏರಿಕೆಯಾಗುತ್ತಿದೆ. ಸರಗಳ್ಳತನದ ಕೇಂದ್ರವಾಗುತ್ತಿರುವ ನಗರದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಕರಣ ಹೆಚ್ಚುತ್ತಿದೆ. ಹೀಗಂತ ನಗರ ಪೊಲೀಸ್ ಆಯುಕ್ತ ಸುನೀಲ್ ಅಗರವಾಲ್ ಅವರೇ ಹೇಳಿದ ಮಾತಿದು.
ಮೈಸೂರು ವಿವಿ ಕುಲಪತಿಗಳಾದ ಬಹುತೇಕರು ಸತ್ಯ-ಧರ್ಮವನ್ನು ಎತ್ತಿ ಹಿಡಿದಿಲ್ಲ. ಅದೊಂದನ್ನು ಬಿಟ್ಟು ಎಲ್ಲವನ್ನೂ ಎಸಗಿದ ಅವ್ಯವಹಾರ, ಅಕ್ರಮಗಳ ಬಗ್ಗೆ ವಿಚಾರಣೆಗಳು ನಡೆದಿವೆ. ವರದಿಗಳು ಬಂದಿವೆ. ಆದರೆ ಅವರ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಮೈಸೂರು ಚಾಮರಾಜನಗರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಲಿಲ್ಲ ಎನ್ನುವ ಕಾರಣಕ್ಕೆ ಮಹಾದೇವು ಅವರನ್ನು ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನದಿಂದ ಮುಖ್ಯಮಂತ್ರಿ ಯಡಿಯೂರಪ್ಪ ವಜಾಗೊಳಿಸಿದ್ದು, ಇದಕ್ಕೆ ಆಕ್ರೋಶಗೊಂಡ 'ಬೆಂಕಿ' ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಇದು ಹೆಸರಿಗಷ್ಟೇ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ. ಮಾಡುವ ಕೆಲಸವೆಲ್ಲಾ ಮೈಸೂರು ದಸರಾಗೆ ಮಾತ್ರ ಸೀಮಿತ. ಹಾಗಾಗಿ ಬಹಳಷ್ಟು ಮಂದಿ ಇದನ್ನು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಎಂದೇ ಹೇಳುವುದು ಅದರ ಕಾರ್ಯ ವೈಖರಿಗೆ ಹಿಡಿದ ಕನ್ನಡಿ.
ಚಿತ್ರ ನಿರ್ಮಾಣದಲ್ಲಿ ಗೆಲ್ಲುತ್ತಲೇ ಇದ್ದ ಸಂದೇಶ್ ನಾಗರಾಜ್ ಗೆ ಚುನಾವಣೆ ಎಂಬ ಚಿತ್ರದಲ್ಲಿ ಇದು ಮೊದಲನೇ ಗೆಲುವು. ಮೊದಲ ಬಾರಿಗೆ ನಿರ್ಮಾಪಕ ಗೆಳೆಯ ಮುಂಗಾರು ಮಳೆಯ ಇ.ಕೃಷ್ಣಪ್ಪ (ಬೆಂಗಳೂರು ಗ್ರಾಮಾಂತರ) ಅವರೊಂದಿಗೆ ಸಂದೇಶ್ ಮೇಲ್ಮನೆ ಪ್ರವೇಶಿಸುತ್ತಿರುವುದು ವಿಶೇಷ.
ಅಭಿವೃದ್ಧಿಯ ರಂಗೋಲಿ ಕೆಳಗೆ ನಡೆಯುತ್ತಿರುವ ಭ್ರಷ್ಟತೆ ಬ್ರಹ್ಮಾಂಡ ಸ್ವರೂಪದ್ದು. ಪಾರದರ್ಶಕತೆ ನಿಯಮ ಕಡ್ಡಾಯ. ಟೆಂಡರ್ ಮೂಲಕ ನಿಯಮ ಪಾಲನೆ ಶಾಸ್ತ್ರ ನಡೆಯುತ್ತದೆ. ಆದರೆ 1 ಕೋಟಿ ರೂ. ಕಾಮಗಾರಿಯಲ್ಲಿ 'ಕೊಳ್ಳೆ'ಬಾಕರ ತಿಜೋರಿ ಸೇರುವ ಪಾಲೇ ಹೆಚ್ಚು.
ಲಕ್ಷಾಂತರ ಮಂದಿಗೆ ದೂರ ಶಿಕ್ಷಣ ನೀಡುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸಿಬ್ಬಂದಿ ನೇಮಕಕ್ಕೆ ಮುಕ್ತ ಮನಸೇ ಮಾಡುತ್ತಿಲ್ಲ. ಹಿಂದಿನ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಸ್ವಲ್ಪಮಟ್ಟಿಗೆ ಆಕಸ್ತಿ ತೋರಿದರೂ ನೇಮಕ ಪೂರ್ಣಗೊಳಿಸಲಿಲ್ಲ. ಈಗ ಉಳಿದಿರುವ ಪ್ರಕ್ರಿಯೆ ಸವಾಲು ನೂತನ ಕುಲಪತಿ ಡಾ.ಕೆ.ಎಸ್.ರಂಗಪ್ಪ ಅವರಿಗೆ ಎದುರಾಗಿದೆ.
ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ತೆಲಂಗಾಣ ಹೋರಾಟದ ನೈಜ ಶಕ್ತಿ ಯಾವುದೇ ಗೊತ್ತೆ? ಉಸ್ಮಾನಿಯ ವಿಶ್ವವಿದ್ಯಾನಿಲಯ, ಆಂಧ್ರ ವಿವಿ, ಮತ್ತು ಜವಾಹರಲಾಲ್ ನೆಹರು ತಾಂತ್ರಿಕ ವಿವಿಯ ಯುವಕರು. ಯಾವುದೇ ಚಳವಳಿಗೆ ಯುವ ಪಡೆ ಅವಶ್ಯವೋ ಇಲ್ಲವೋ ಎಂಬುದರ ಬಗ್ಗೆ ಈ ಬಾರಿ ವಿದ್ಯಾರ್ಥಿ ವಿಶೇಷ.
ಯಾಂತ್ರಿಕ ಜೀವನದಿಂದ ತುಸು ರಿಲ್ಯಾಕ್ಸ್ ಪಡೆಯಲು ವಿಶಿಷ್ಟ ಸೈಕಲ್ ಯಾನ ಆರಂಭಗೊಂಡಿದೆ. ಆರು ದಿನ ಈ ಯಾನ ಬೆಂಗಳೂರಿನಿಂದ ಆರಂಭಗೊಂಡಿದ್ದು, ಮೊದಲ ದಿನ ಮೈಸೂರಿಗೆ ತಲುಪಿದೆ. ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಇದಕ್ಕೆ ಚಾಲನೆ ನೀಡಿದ್ದಾರೆ.
ಹಳಿಗಳ ಮೇಲೆ ವಿಜ್ಞಾನ ವಸ್ತು ಸಂಗ್ರಹಾಲಯ ಅದುವೇ ಸೈನ್ಸ್ ಎಕ್ಸ್ ಪ್ರೆಸ್ ಸಾಂಸ್ಕ್ರತಿಕ ನಗರಿ ಮೈಸೂರಿಗೆ ಬಂದಿಳಿದಿದೆ. ಈ ವಿಶೇಷ ರೈಲಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಗಳ ಪ್ರತಿ ವಿವರವೂ ಲಭ್ಯ.
ಮೈಸೂರು ಅರಮನೆ ಪಾರ್ಕಿಂಗ್ ಸ್ಥಳದಲ್ಲಿ ದುಬಾರಿ ಶುಲ್ಕ ನೀಡಿದರೂ ವಾಹನಕ್ಕೆ ರಕ್ಷಣೆ ಇಲ್ಲ. ಇದರ ಗುತ್ತಿಗೆ ವಹಿಸಿಕೊಂಡವರು ವಾಹನ ಹೊರಡುವಾಗ ಹಣ ಕೇಳಲಷ್ಟೇ ಬರುತ್ತಾರೆ. ಜತೆಗೆ ಚೀಟಿ (ಟೊಕನ್) ಕೂಡ ನೀಡುವುದಿಲ್ಲ.
ಸತ್ಯನ್ ಛಾಯಾಚಿತ್ರ ಪತ್ರಕರ್ತರಾಗಿ ಉತ್ತುಂಗದಲ್ಲಿದ್ದ ದಿನಗಳು. ಹೊಸದಿಲ್ಲಿಯಲ್ಲಿ ವಾಸ, ಪ್ರಭಾವಿ ವ್ಯಕ್ತಿಗಳ ಸಹವಾಸ. ದಿಲ್ಲಿ ಪತ್ರಕರ್ತರ ಸಂಘದ ಗೃಹ ನಿರ್ಮಾಣ ಸಹಕಾರ ಸಂಘದ ನೇತೃತ್ವವನ್ನೂ ವಹಿಸಿದ್ದರು.
ಹಾವಿನ ಹೆಸರಿನಲ್ಲಿ ವ್ಯಾಪಾರ ಕುದುರಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾವಿನ ದ್ವೇಷ 12 ವರುಷ ಎನ್ನುವ ಮಾತನ್ನು ಈಗ, ಹಾವಿನ ಸಂಗ ಲಕ್ಷ ಲಕ್ಷ ಆದಾಯಕ್ಕಿಲ್ಲ ಭಂಗ ಎನ್ನುವಂತಾಗಿದೆ.
ಇನ್ಮುಂದೆ ಪರೀಕ್ಷಾ ಮಂಡಳಿ ಪ್ರಕಟಿಸುವ ವೇಳಾಪಟ್ಟಿಗೆ ಕಾಯಬೇಕಿಲ್ಲ. ವಿದ್ಯಾರ್ಥಿಗಳು ಸಿದ್ಧರಾಗಿದ್ದರೆ ಸಾಕು ಯಾವಾಗ ಬೇಕಾದರೂ ಆನ್ ಲೈನ್ ಮೂಲಕ ಪರೀಕ್ಷೆ ಎದುರಿಸಬಹುದು. ಇದು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ (ಇಗ್ನೋ) ವಿಶೇಷ.
ಪ್ರಕಾಶಕ ಶ್ರೇಷ್ಠ ಡಿವಿಕೆ ಮೂರ್ತಿ (83) ನಗರದಲ್ಲಿ ಬುಧವಾರ ನಿಧನರಾದರು. ನಾಡು ಕಂಡ ಅತ್ಯುತ್ತಮ ಪ್ರಕಾಶಕರಾಗಿದ್ದ ಅವರು, ಹೆಸರಾಂತ ಸಾಹಿತಿಗಳ ಪುಸ್ತಕ ಪ್ರಕಟಿಸಿ ಕೊನೆಕಾಲದವರೆಗೂ ಪುಸ್ತಕ ಪ್ರೀತಿ ಮೆರೆದಿದ್ದರು.
ಹಣದಾಸೆಗೆ ಬಿದ್ದು ಪಕ್ಷಾಂತರ ಮಾಡಿದ್ದ ಮಂಡ್ಯ ನಗರಸಭೆಯ 13 ಪುರಪಿತೃಗಳ ಸದಸ್ಯತ್ವ ಅನೂರ್ಜಿತಗೊಳಿಸಿ ಜಿಲ್ಲಾಧಿಕಾರಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಸದಸ್ಯತ್ವ ಕಳೆದುಕೊಂಡ ಪುರಪಿತೃಗಳು ಅತಂತ್ರರಾಗಿದ್ದಾರೆ.
ಬ್ಯಾಲೆಟ್ ಪೇಪರಿನಲ್ಲಿ ರಾಜಕೀಯ ಪಕ್ಷಗಳ ಚಿಹ್ನೆ ಇರುವುದಿಲ್ಲ; ಮತದಾನ ಪ್ರಕ್ರಿಯೆಗೆ ಅಳಿಸಲಾಗದ ಶಾಯಿ ಬೇಕಿಲ್ಲ. ಅನಕ್ಷರಸ್ಥ ಎಂದು ಘೋಷಿಸಿಕೊಂಡರೆ ಮತದಾನ ಮಾಡಲು ಸಹಾಯಕನನ್ನೂ ಕರೆದೊಯ್ಯಬಹುದು. - ಇದು ಮೇಲ್ಮನೆ ಚುನಾವಣೆಯ ವಿಶೇಷ.
ಜಾ.ದಳದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೂ ದೇವೇಗೌಡ ಬಗೆಗಿನ ತಮ್ಮ ಅಭಿಪ್ರಾಯ ಬದಲೇಕೆ ಮಾಡಿಕೊಳ್ಳಬೇಕು? ಹೀಗೆಂದು ಕೊಂಚ ಅಸಹನೆಯಿಂದಲೇ ಪ್ರಶ್ನಿಸಿದವರು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಅವರು ವಿಕ ದೊಂದಿಗೆ ಮಾತನಾಡುತ್ತಾ ಈ ವಿಷಯ ಬಹಿರಂಗಪಡಿಸಿದರು.
ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ಬಾಂಗ್ಲಾಗಡಿಯಲ್ಲಿ ಬಂಧಿತನಾಗಿರುವ ಉಗ್ರಗಾಮಿ ನಜೀರ್ ಕೊಡಗು ಜಿಲ್ಲೆಯ ಗರಗಂದೂರಿನಲ್ಲಿ ಹೈಟೆಕ್ ಶೆಡ್ ನಿರ್ಮಾಣ ಮಾಡಿಕೊಂಡು ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.
ರಾಜಕೀಯ ಅಖಾಡದಲ್ಲಿ ಸೋಲಿಲ್ಲದ ಸರದಾರರಿದ್ದಾರೆ. ಅದೇ ಮೈಸೂರು ಉದ್ಯಮಿ, ರಾಜಕಾರಣಿ ಸಂದೇಶ್ ನಾಗರಾಜ್ ಮಾತ್ರ ಗೆಲುವೇ ಕಾಣದವರು. ಇವರು ಎರಡು ದಶಕದಿಂದ ರಾಜಕೀಯದಲ್ಲಿದ್ದರೂ ಗೆಲುವೇ ಕಂಡಿಲ್ಲ.
ನಗರದಲ್ಲಿ ಸತತ ಏಳನೇ ದಿನವೂ ಸರಗಳ್ಳತನ ನಡೆದಿದೆ. ಈ ವರ್ಷ (11 ತಿಂಗಳು)ದಲ್ಲಿ ಒಟ್ಟು 60 ಲಕ್ಷ ರೂ. ಮೌಲ್ಯದ ಚಿನ್ನವನ್ನು ಸರಗಳ್ಳರು ದೋಚಿಸಿದ್ದಾರೆ. ಆದರೂ ಪೊಲೀಸರು ಪ್ರಕರಣವನ್ನು ಬೇಧಿಸಲು ವಿಫಲರಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.