ಸುದ್ದಿ ಓದಿದ್ರಾ ಸಾರ್, ಯುಜಿ 4 ವರ್ಷವಂತೆ, ಪಿಜಿ 1 ವರ್ಷವಂತೆ,ಪದವಿ ಕೋರ್ಸ್ ಗಳನ್ನು ಮರು ವಿನ್ಯಾಸಗೊಳಿಸಲು ಕುಲಪತಿ ಚಿಂತನೆ ನಡೆಸಿದ್ದಾರಂತೆ ಎಂಬ ಸುದ್ದಿಯ ಸಾಲು ಹಿಡಿದುಕೊಂಡೇ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ , ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದರು.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರದ ಬಳಿಕ ಸೈನೆಡ್ ನೀಡಿ ಹತ್ಯೆ ಮಾಡುತ್ತಿದ್ದ ಮೋಹನ್ ಕುಮಾರ್ ಅಲಿಯಾಸ್ ಆನಂದ್ ಹೀನಕೃತ್ಯಕ್ಕೆ ನಗರದ ಹೋಟೆಲ್, ಬಸ್ ನಿಲ್ದಾಣವೂ ಸಾಕ್ಷಿ ಎಂಬ ಅಂಶದ ಮೇರೆಗೆ ಸ್ಥಳ ಪರಿಶೀಲನೆ ಆರಂಭಗೊಂಡಿದೆ.
ಬಿಟ್ಟಂಗಾಲದ ಕುಪ್ಪಂಡ ಕುಟುಂಬಸ್ಥರ ಶುಂಠಿ ಗದ್ದೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುಕ್ತ ನಾಲ್ಕು ಚಕ್ರದ ಆಟೋ ಕ್ರಾಸ್ ರಾಲಿಯಲ್ಲಿ ಎದೆ ನಡುಗಿಸುವ ಮಾರ್ಗವನ್ನು ಕಂಡು ಸ್ಪರ್ಧಿಗಳು ಭಯಭೀತರಾಗಿ ಹಿಂದೆ ಸರಿದರು. ಅಳಿದುಳಿದ ನಾಲ್ವರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದವರು ಕೇವಲ ಮೂರೇ ಮಂದಿ.
ನಗರದಲ್ಲಿ ಭಾನುವಾರ ಮುಂಜಾನೆಯಿಂದಲೇ ರಸ್ತೆ ಹಾಗೂ ಕಟ್ಟಡ ಮುಂಭಾಗ ಮಾಡಿಕೊಂಡಿದ್ದ ಒತ್ತುವರಿಯನ್ನು ಮುಡಾ ಆಯುಕ್ತ, ನಗರ ಪೊಲೀಸ್ ಆಯುಕ್ತ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತೆರವುಗೊಳಿಸಲಾಯಿತು.
ನಾಟಕ ಕರ್ನಾಟಕ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಬಿ.ಜಯಶ್ರೀ ರಾಜೀನಾಮೆ ನೀಡಿದ್ದಾರೆ. ಆ ಮೂಲಕ 3 ತಿಂಗಳಿಂದ ರಂಗಾಯಣದ ಅಂಗಳದಲ್ಲಿ ನಡೆದ 'ಕದನ ಕುತೂಹಲಭರಿತ ನಾಟಕ'ಕ್ಕೆ ತಾವೇ ಮುಂದಾಗಿ ತಾತ್ಕಲಿಕ ತೆರೆ ಎಳೆದಿದ್ದಾರೆ.
ಅನಿಯಮಿತ ವಿದ್ಯುತ್ ಪೂರೈಕೆಯಿಂದಾಗಿ ಸಾರ್ವಜನಿಕರು ರೋಸಿ ಹೋಗಿದ್ದಾರೆ. ತಮ್ಮ ನಿತ್ಯದ ಕೆಲಸ, ಕಾರ್ಯಗಳಿಗೆ ತೊಂದರೆಯಾಗುತ್ತಿದ್ದು, ಸರಕಾರ ಹಾಗೂ ಸೆಸ್ಕ್ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಮೊನ್ನೇ ತಾನೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದರು. ಈಗ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಸರದಿ. ಇಲ್ಲಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳನ್ನು ಕಂಡು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಮೈಸೂರಿನ ಬಾರುಗಳಲ್ಲಿ ಎಂಆರ್ ಪಿಗಿಂತ ಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ. ಕಾರಣ ಕೇಳಿದರೆ 'ನೆರೆ' ಹಾವಳಿ ಎನ್ನುತ್ತಾರೆ. ಮದ್ಯ ದರ ಹೆಚ್ಚಾಗಲು, ನೆರೆ ಹಾವಳಿಗೂ ಎತ್ತಿಂದೆತ್ತ ಸಂಬಂಧವಯ್ಯ?
ಮಂಗಳವಾದ್ಯ ಮೊಳಗಬೇಕಾದ ಮನೆಯಲ್ಲೀಗ ಮರಣ ಮೃದಂಗ ಮೊಳಗುತ್ತಿದೆ. ತನ್ನ ಅಣ್ಣನ ಮದುವೆ ಆಮಂತ್ರಣ ಪತ್ರಿಕೆ ನೀಡಲು ದೊಡ್ಡಮ್ಮ ಹಾಗೂ ಸ್ನೇಹಿತನ ಜತೆ ತೆರಳಿದ್ದವರು ಶುಕ್ರವಾರ ರಾಘವಾರಪುರದ ಚಿಕ್ಕಹುಂಡಿ ಗೇಟ್ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮದುವೆಯ ಸಂಭ್ರಮದಲ್ಲಿರಬೇಕಾದ ಇವರ ಕುಟುಂಬದವರು ಶೋಕದ ಮಡುವಿನಲ್ಲಿರುವಂತಾಗಿದೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಸ್ಪರ್ಧಿಸಲು ಎಲ್ಲ ಪಕ್ಷಗಳಲ್ಲೂ ಆಕಾಂಕ್ಷಿಗಳು ತಮ್ಮ ಬಯೋಡೆಟಾ ಹಿಡಿದು 'ಗಾಡ್ ಫಾದರ್'ಗಳ ಮನೆಗಳಿಗೆ ಸುತ್ತಾಟ ಆರಂಭಿಸಿದ್ದಾರೆ.
ಮಂಗಳೂರಿನಲ್ಲಿ ಬಂಧನಕ್ಕೊಳಗಾಗಿರುವ ಸರಣಿ ಹಂತಕ ಮೋಹನ್ ಕುಮಾರ್ ನಿಂದ ಮೂವರು ಮಹಿಳೆಯರು ಮಡಿಕೇರಿ ಬಸ್ ನಿಲ್ದಾಣದಲ್ಲಿ ಹತ್ಯೆಗೀಡಾಗಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಹಾಗೆಯೇ ಮೈಸೂರಿನಲ್ಲಿಯೂ ಅಪರಿಚಿತ ಶವ ಪತ್ತೆಯಾಗುತ್ತಿದ್ದು, ಅವುಗಳ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.
ರಾಜ್ಯೋತ್ಸವ ಮಾಸ ನವೆಂಬರ್ ಕೊನೆ ವಾರ ಮಾನಸಗಂಗೋತ್ರಿಯಲ್ಲಿ 'ಸಿಲ್ವರ್ ಯೂನಿಫೆಸ್ಟ್-2009'ಸಾಂಸ್ಕ್ರತಿಕ ನಗರದ ಜನತೆಗೆ ಭರಪೂರ ಸಂಭ್ರಮ ಉಣಬಡಿಸಲಿದೆ.
ಆಧುನಿಕ ತಂತ್ರಜ್ಞಾನ ಬಿಟ್ಟರೂ ಬಿಡದಿ ಮಾಯೆ. ಅದರೊಂದಿಗೆ ಸಾಗಬೇಕಾದರೆ ಇಂಗ್ಲಿಷ್ ಜ್ಞಾನವೂ ಅವಶ್ಯ. ಗ್ರಾಮೀಣ ಪ್ರದೇಶದವರಿಗೆ ಈ ಭಾಷೆ ತುಸು ಕಷ್ಟವೇ. ಇದರ ಪರಿಹಾರಕ್ಕೇ ಕಾರ್ಯಪ್ಪ ಕಾಲೇಜು ಕಂಡುಕೊಂಡಿದ್ದು ಭಾಷಾ ಪ್ರಯೋಗಾಲಯ ಎಂಬ ಸೂತ್ರವನ್ನ.
ನಗರ ಸಿಸಿಬಿ ಪೊಲೀಸರು ಬಂಧಿಸಿರುವ ಕಾರುಗಳ್ಳರ ಹಿಂದೆ ಅಂತಾರಾಜ್ಯ ಕಳ್ಳರ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಅಗರವಾಲ್ ತಿಳಿಸಿದ್ದಾರೆ. ಬಂಧಿತರಿಂದ 80 ಲಕ್ಷ ರೂ. ಮೌಲ್ಯದ 12 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಾರಿ ನಗರದ ಜನತೆ ಬೇಕಾಬಿಟ್ಟಿ ಪಟಾಕಿ ಸುಡದೆ ಮಾನವೀಯತೆ ಮೆರೆದಿದ್ದಾರೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪಟಾಕಿ ಮಾರಾಟ ಕ್ಷೀಣಿಸಿದೆ. ಚಿಣ್ಣರು ಮಾತ್ರ ನಕ್ಷತ್ರ ಕಡ್ಡಿ, ನೆಲ ಚಕ್ರ ಇತ್ಯಾದಿ ಹಚ್ಚಿ ಸಂತಸಪಟ್ಟಿದ್ದಾರೆ.
ಪಡಿತರ ಕಾರ್ಡ್ ಯೋಜನೆ ಲೋಪ ಕುರಿತು ರಾಜ್ಯಾದ್ಯಂತ ಕೇಳಿಬಂದ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ, ರಾಜ್ಯ ಹೈಕೋರ್ಟ್, ಮಾನವ ಹಕ್ಕು ಆಯೋಗ ಜಂಟಿಯಾಗಿ ಸಮೀಕ್ಷೆ ನಡೆಸಲು ಮುಂದಾಗಿದೆ.
ಈಗಾಗಲೇ ಎರಡು ಬಾರಿ ಉದ್ಘಾಟನಾ ಕಾರ್ಯ ಮುಂದೂಡಲ್ಪಟ್ಟ ಖ್ಯಾತಿಗೆ ಒಳಗಾಗಿರುವ ಸಿಟಿ ಬಸ್ ನಿಲ್ದಾಣ ನಾಡಹಬ್ಬ ದಸರೆ ಹೊತ್ತಿಗೆ ಬಸ್ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎನ್ನುವುದು ಸುಳ್ಳಾಯಿತು. ಕೊನೆ ಪಕ್ಷ ನವೆಂಬರ್ 1 ರಂದಾದರೂ ಆಗುವ ನಿರೀಕ್ಷೆಯು ಹುಸಿಯಾಗಿದೆ.
ಬೆಂಗಳೂರು ಮಾದರಿಯಲ್ಲಿಯೇ ಪ್ರಯಾಣಿಕರು ನೇರವಾಗಿ ಫ್ಲಾಟ್ ಫಾರಂಗೆ ಬಂದು ಹೋಗಲು ಸಹಕಾರಿಯಾಗುವ ಸಬ್ ವೇ ಅನ್ನು ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಸಬ್ ವೇಗಳನ್ನು ನಿರ್ಮಿಸಲಾಗುತ್ತಿದೆ.
ಉತ್ತರ ಕರ್ನಾಟಕದ ನೆರೆ ಸಂತ್ರಸ್ತ ಜನರ ಬದುಕು ಕಟ್ಟುವ ರಾಜ್ಯ ಸರಕಾರದ ಕೈಂಕರ್ಯಕ್ಕೆ ರಾಜ್ಯದ ಸಂಸದರ ನಿಧಿ ನಿಯಮ ಸಡಿಲಿಸಬೇಕೆಂದು ಲೋಕಸಭೆ ಸ್ಪೀಕರ್ ಗೆ ಪತ್ರ ಬರೆದಿರುವುದಾಗಿ ಸಂಸದ ವಿಶ್ವನಾಥ್ ತಿಳಿಸಿದ್ದಾರೆ.
ಎಲ್ಲವೂ ಸರಿಯಾಗಿದ್ದರೆ ಡಿಸೆಂಬರ್ 18,19,20 ರಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕಿತ್ತು. ಆದರೆ ಆತಿಥ್ಯ ವಹಿಸಿದ್ದ ಗದಗ ಜಿಲ್ಲೆಯನ್ನೂ ನೆರೆ ಸಂಕಷ್ಟ ಬಿಟ್ಟಿಲ್ಲ. ಆದುದರಿಂದ ಇಂಥ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ಸೂಕ್ತವಲ್ಲ ಎಂಬುದು ಹಲವರ ಅಭಿಪ್ರಾಯ.
ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಶತಾಯಗತಾಯ ಪಡೆಯಲೇ ಬೇಕು ಎಂಬ ಛಲದಿಂದ ಗಣ್ಯರು ಹಾಗೂ ಸಾಧಕರು ಅವರಿವರಿಂದ ಶಿಫಾರಸು ಮಾಡಿಸಿ ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿದ್ದರು. ಆದರೆ ನೆರೆಯಿಂದಾಗಿ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಬಾರದೆಂದು ಸರಕಾರ ಘೋಷಿಸುತ್ತಿದ್ದಂತೆ ಇವರ ಶ್ರಮ ಹೊಳೆಯಲ್ಲಿ ಹುಣಸೆಹಣ್ಣು ತೇಯ್ದಂತಾಗಿದೆ.
ಆಶ್ರಯ ಬಡಾವಣೆ ಅಭಿವೃದ್ಧಿಗೆಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮೀಸಲಿಟ್ಟ ಹಣ ಬಿಡುಗಡೆಯಾದರೂ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. 7 ತಿಂಗಳ ಹಿಂದೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಕಾಮಗಾರಿ ಚಾಲನೆ ನೀಡಿದ್ದು ಬಿಟ್ಟರೆ ಉಳಿದದ್ದೇನು ಆಗಿಲ್ಲ.