ಕಾಡಿದ ಸುಬ್ಬಣ್ಣರ ಹಾಡು, ರಮಣಿಯವರ ಕೊಳಲು ವಾದನ


ಮೈಸೂರಿನಲ್ಲಿ ಚುನಾವಣೆಯ ಕಾವು ಏರುತ್ತಿದ್ದರೂ ಈ ವಾರ ಸಾಂಸ್ಕೃತಿಕ ಸಂಭ್ರಮಕ್ಕೆ ಕಡಿಮೆ ಇರಲಿಲ್ಲ. ಸೆಕೆಯಿಂದ ತತ್ತರಿಸುತ್ತಿರುವ ಮನಸ್ಸಿಗೆ ಆಹ್ಲಾದ ನೀಡುವಂತೆ ಸಾಂಸ್ಕೃತಿಕ ಸಂಭ್ರಮದ ಮಂದ ಗಾಳಿ ತೀಡಿ ಬಂತು.

ಜಗನ್ಮೋಹನ ಅರಮನೆಯಲ್ಲಿ ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣರ ಸುಗಮ ಸಂಗೀತ ನಡೆದರೆ, ಬಿಡಾರಂ ಕೃಷ್ಣಪ್ಪ ರಾಮಮಂದಿರದ ಸಭಾಂಗಣದಲ್ಲಿ ರಾಮೋತ್ಸವ ಸಂಗೀತ ಕಾರ್ಯಕ್ರಮ ಆರಂಭವಾಗಿದೆ. ಹೆಸರಾಂತ ಕೊಳಲು ವಾದಕ ಡಾ. ಎನ್. ರಮಣಿ ಅವರಿಂದ ಕಾರ್ಯಕ್ರಮ ಆರಂಭವಾಯಿತು. ಹಾಗೆಯೇ ಸೂರ್ಯ ನಾರಾಯಣ್ ಅವರು ಕೂಚುಪುಡಿ ನೃತ್ಯ ಪ್ರದರ್ಶನವನ್ನು ನಡೆಸಿಕೊಟ್ಟರೆ, ಪ್ರಜ್ಞಾ ಹವ್ಯಾಸಿ ಯಕ್ಷವೃಂದದವರು "ಶ್ರೀ ರಾಮಾಂಜನೇಯ ಯುದ್ಧ' ಪ್ರಸಂಗವನ್ನು ಪ್ರಸ್ತುತ ಪಡಿಸಿದರು. ಯಕ್ಷಗಾನದ ಒಂದು ಛಾಯಾಚಿತ್ರವನ್ನು ನೀಡಲಾಗಿದೆ. ಉಳಿದ ಎಲ್ಲ ಛಾಯಾಚಿತ್ರಗಳನ್ನು ನಮ್ಮ ಸಂಸ್ಕೃತಿ ಸಿಂಚನ ಗ್ಯಾಲರಿಯಲ್ಲಿ ವೀಕ್ಷಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ