ಸರಕಾರವೇ ನೀಡಿರುವ ವಾಹನ ಸುಸ್ಥಿತಿಯಲ್ಲಿದ್ದರೂ ಅದನ್ನು ಗೋದಾಮಿಗೆ ತಳ್ಳಿ, ಬಾಡಿಗೆ ಆಧಾರದಲ್ಲಿ ಪ್ರವಾಸ ಆರಂಭಿಸಿದ್ದಾರೆ ಮೈಸೂರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು. ಇದರಿಂದ ಸರಕಾರಿ ಚಾಲಕರಿಗೆ ಕೆಲಸವೂ ಇಲ್ಲ ಜತೆಗೆ ಸರಕಾರಕ್ಕೆ ತಿಂಗಳಿಗೆ ಸಾವಿರಾರು ರೂ. ನಷ್ಟವಾಗುತ್ತಿದೆ.
ಹೆಗ್ಗಡದೇವನಕೋಟೆ ಗಡಿ ಭಾಗದಲ್ಲಿರುವ ಗೊಲ್ಲನ ಬೀಡು ಗ್ರಾಮದ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಅವ್ಯವಸ್ಥೆಗಳದ್ದೆ ಆಟ. ಶಾಲಾ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳಬೇಕು. ಕೊಠಡಿಯಲ್ಲಿ ಕಿಟಕಿ, ಬಾಗಿಲು ಬೋರ್ಡ್ ಗಳಿಲ್ಲ. ಶಾಲೆ ಸುತ್ತ ದುರ್ವಾಸನೆಯದ್ದೆ ಕಾರುಬಾರು.
ಅಮೂಲ್ಯ ಜೀವ ಸಂಕುಲ ಹಾಗೂ ಹೇರಳ ವನ್ಯಸಂಪತ್ತನ್ನು ತನ್ನ ಒಡಲಲ್ಲಿಟ್ಟುಕೊಂಡ ಪಶ್ಚಿಮಘಟ್ಟ ಪ್ರದೇಶಕ್ಕೆ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ನೀಡಲು ಕೇಂದ್ರ ಸರಕಾರ ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಸಿದೆ.
ಬೆಂಗಳೂರಿನ ನಂತರ ಪ್ರಮುಖ ನಗರವಾಗಿ ಬೆಳೆಯುತ್ತಿರುವ ಮೈಸೂರು ಸಮಸ್ಯೆಗಳಲ್ಲೂ ಮುಂದಿದೆ. ನೂತನ ಪೊಲೀಸ್ ಆಯುಕ್ತರಾಗಿ ನಗರಕ್ಕೆ ಪರಿಚತರೇ ಆದ ಸುನೀಲ್ ಅಗರವಾಲ್ ನೇಮಕಗೊಂಡಿದ್ದಾರೆ. ಈಗ ಅವರ ಮುಂದೆ ಹತ್ತು ಹಲವು ಸವಾಲುಗಳಿವೆ.
ಕನ್ನಡ ಪತ್ರಿಕೆಗಳನ್ನು ನಡೆಸುವುದೇ ಕಷ್ಟ. ಅಂಥಹದರಲ್ಲಿ 40 ವರ್ಷದಿಂದ ಸಂಸ್ಕೃತ ಪತ್ರಿಕೆಯನ್ನು ಮೈಸೂರಿನಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. 'ಸುಧರ್ಮಾ' ಹುಟ್ಟಿಗೆ ಮೂಲ ಕಾರಣ ಕೆ.ಎನ್.ವರದರಾಜ ಅಯ್ಯಂಗಾರ್. ಇಂದು ಅವರಿಲ್ಲ. ಅವರ ಪುತ್ರ ಸಂಪತ್ ಕುಮಾರ್ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ. ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ರಷ್ಯಾ, ಲಂಡನ್ ಮತ್ತು ಅಮೆರಿಕದಲ್ಲೂ ಪತ್ರಿಕೆಗೆ ಚಂದಾದಾರರಿದ್ದಾರೆ.
ಕರ್ನಾಟಕ ನಾಟಕ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಹಿರಿಯ ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಅವರನ್ನು ನೇಮಿಸುವ ಮೂಲಕ ಒಂದೂವರೆ ವರ್ಷದ 'ನಾಟಕ'ಕ್ಕೆ ಸರಕಾರ ತೆರೆ ಎಳೆದ ಸರಕಾರ, ರಂಗ ಸಮಾಜಕ್ಕೆ ಹಳೆ ಸದಸ್ಯರನ್ನೇ ನೇಮಿಸಿ ಹೊಸ ವಿವಾದ ಸೃಷ್ಟಿಸಿದೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಿಧನರಾದ ತಮ್ಮ ಗುರು , ಜಗದ್ವಿಖ್ಯಾತ ಸರೋದ್ ವಾದಕ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರಿಗೆ ಪಂಡಿತ್ ರಾಜೀವ ತಾರಾನಾಥ್ ನುಡಿನಮನ ಸಲ್ಲಿಸಿದ್ದಾರೆ.
ಒಂದೂವರೆ ವರ್ಷದಿಂದ ಕಾಲಿ ಇದ್ದ ನಿರ್ದೇಶಕ ಸ್ಥಾನ ಕೊನೆಗೂ ಭರ್ತಿಯಾಗಿದೆ. ರಂಗಾಯಣಕ್ಕೆ ಹೊಸ ನೀರು ಹರಿದು ಹೊಸದಾಗಬೇಕು ಎಂಬ ಮಾತು ಕೇಳಿ ಬರುತ್ತಿರುವಾಗಲೇ ರಂಗಕರ್ಮಿ ಹಾಗೂ ಕಲಾವಿದೆ ಬಿ.ಜಯಶ್ರೀ ನಿರ್ದೇಶಕರಾಗಿ ಬರುತ್ತಿದ್ದಾರೆ.
ಮೂವರು ಸಂಸದರಿಗೆ ಪ್ರತ್ಯೇಕ ಕಚೇರಿ, ಸೌಲಭ್ಯ, ಸಿಬ್ಬಂದಿ. -ಇದು ಮೈಸೂರು ಜಿಲ್ಲಾಧಿಕಾರಿಗೆ ಎದುರಾಗಿರುವ ಹೊಸ ತಲೆನೋವು. ಮೈಸೂರು ಜಿಲ್ಲೆಗೆ ಮೂವರು ಸಂಸದರು. ಮತ ನೀಡಿದವರಿಗೆ ಸೌಲಭ್ಯ ಒದಗಿಸಲು ಕಚೇರಿ ಬೇಕು ಎನ್ನುವ ಬೇಡಿಕೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ತನ್ನ ಆಡಳಿತ ಕಚೇರಿಗಾಗಿ ಖರೀದಿಸಿದ್ದ 10 ಎಕರೆ ಭೂಮಿ ಈಗ ಹುಲ್ಲುಗಾವಲು. ಈ ಪ್ರದೇಶಕ್ಕೆ ಹೋಗಲು ಸರಿಯಾದ ರಸ್ತೆಗಳಿಲ್ಲ, ಯದ್ವಾತದ್ವವಿರುವ ಈ ಭೂಮಿಯಲ್ಲಿ ಕಟ್ಟಡ ಕಟ್ಟಲು ಸಾಧ್ಯವಿಲ್ಲ.
ನಗರದಲ್ಲಿ ಎಲ್ಲಿ ನೋಡಿದರೂ ಮನೆ, ನಿವೇಶನ, ವಾಹನಗಳೇ ಕಾಣುತ್ತವೆ. ಕೆಲವು ಬಡಾವಣೆಗಳಲ್ಲಿ ಕಾಣಸಿಗುವ ಅಲ್ಪಸ್ವಲ್ಪ ಮರಗಳನ್ನು ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ. ರಿಯಲ್ ಎಸ್ಟೇಟ್ ದಂಧೆಗಾಗಿ , ಮತ್ತೆ ಕೆಲವರು ರಸ್ತೆ 'ಅಭಿವೃದ್ಧಿ' ಎಂಬ ಕುಂಟು ನೆಪ ಹೇಳಿ ಅದಕ್ಕೂ ಕೊಡಲಿ ಏಟು ಹಾಕಲು ಸಿದ್ಧರಾಗಿದ್ದಾರೆ. ಇದು ಕೆಲವರ ಕಥೆಯಾದರೆ ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ವೆಲ್ಲಿಂಗಟನ್ ಹೌಸ್ ನಲ್ಲಿ 'ಉಲ್ಲಾಸಿತ ಬುಡಕಟ್ಟು ಜನಾಂಗ'ಕುರಿತ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.ಪ್ರತಿ ಛಾಯಾಚಿತ್ರದಲ್ಲೂ ಬುಡಕಟ್ಟು ಜನಾಂಗದ ಸಂತಸ ಹೊನಲಾಗಿ ಹೊಮ್ಮಿದೆ.
ದಿವಾಳಿ ಅಂಚಿನಲ್ಲಿರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್ಎಸ್ ಕೆ) ಅನ್ನು ಆರ್ಥಿಕ ಮುಗ್ಗಟ್ಟಿನಿಂದ ಮುಗ್ಗರಿಸಿರುವ ಸರಕಾರಿ ಸ್ವಾಮ್ಯದ ರೋಗಗ್ರಸ್ತ ಮೈಷುಗರ್ಸ್ ನೊಂದಿಗೆ ವಿಲೀನಗೊಳಿಸಲು ಸರಕಾರ ಚಿಂತನೆ ನಡೆಸಿದೆ. ಆದರೆ ಈ ಪ್ರಕ್ರಿಯೆಗೆ ರೈತ ಸಂಘ ವಿರೋಧ ವ್ಯಕ್ತಪಡಿಸಿದೆ.
ಸಾಮಾನ್ಯವಾಗಿ ಯುವ ಪೀಳಿಗೆಗಳಿಗೆ ಕ್ರೀಡೆ ಎಂದರೆ ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್ ಆಟಗಳೇ ಹೆಚ್ಚು ಇಷ್ಟ.ಕೆಲವೊಮ್ಮೆ ಸಾಹಸ ಕ್ರೀಡೆಗಳ ಬಗ್ಗೆ ಆಸಕ್ತಿ ಇದ್ದರೂ ಮನೆಯವರಿಂದ ಅಡ್ಡಿ ಸಹಜ. ರೀವರ್ ಕ್ರಾಸಿಂಗ್, ರಾಕ್ ಕ್ಲೈಂಬಿಂಗ್ ಮತ್ತಿತರ ಸಾಹಸ ಕ್ರೀಡೆಗಳ ತರಬೇತಿಯನ್ನು ನಿರುದ್ಯೋಗಿಗಳಿಗೆ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಮೈಸೂರು ಅಡ್ವೆಂಚರ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಸುತ್ತಿದೆ.
ನಂಜನಗೂಡು ತಾಲೂಕಿನ ಅಂಗವಿಕಲ ಪುನರ್ವಸತಿ ಕೇಂದ್ರ ಇದ್ದು ಇಲ್ಲದಂತಾಗಿದೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ವಿತರಣೆಯಾಗಬೇಕಿದ್ದ ಸವಲತ್ತುಗಳು ಗೋಡೌನ್ ನಲ್ಲೇ ತುಕ್ಕು ಹಿಡಿಯುತ್ತಿವೆ.ಇದರಿಂದ ವಿಕಲಚೇತನರು ತೊಂದರೆಯ ಸುಳಿಯಲ್ಲಿ ಸಿಲುಕಿದ್ದಾರೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿಗಳಲ್ಲಿ ಮಾಡಿರುವ ಮನವಿಯ ಹಿನ್ನೆಲೆ ಏನು ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.
ವನ್ಯಜೀವಿ ಹಾಗೂ ಮನುಷ್ಯನ ನಡುವಿನ ಕಾಡಿನೊಳಗಿನ ಸಂಘರ್ಶಕ್ಕೆ ಇತಿಶ್ರೀ ಹಾಡಲು ಕೇಂದ್ರ ಸರಕಾರ ರೂಪಿಸಿರುವ ಪ್ರಾಜೆಕ್ಟ್ ಟೈಗರ್ ಯೋಜನೆಯಡಿ ಪ್ರಥಮವಾಗಿ 4 ಕುಟುಂಬಗಳು ನಾಡಿಗೆ ಸ್ಥಳಾಂತರಗೊಂಡಿದೆ.
ಏನಾದರೂ ಮಾಡಬೇಕು ಎಂಬ ಕನಸಿನೊಂದಿಗೆ ಮೈಸೂರಿನ ಕನಸು ಕಣ್ಣುಗಳ ಯುವಕರ ಗುಂಪೊಂದು ಅತ್ಯಂತ ಕಡಿಮೆ ಬಜೆಟ್ (3-4 ಲಕ್ಷ ರೂ.)ನಲ್ಲಿ ರೂಪಿಸಿರುವ ಸಿನಿಮಾದ ಹೆಸರು 'ಜಾಗ ದೊರೆಯುತ್ತದೆ'. ಸಾರ್ವಜನಿಕ ಪ್ರದರ್ಶನ ಜೂ.6 ರಂದು.
ನರ್ಮ್ ಯೋಜನೆಯಡಿ ಮೈಸೂರು ನಗರಕ್ಕೆ ಕೋಟ್ಯಂತರ ರೂ. ಬರುತ್ತಿದ್ದರೂ ಸೌಂದರ್ಯದ ಭಾಗವಾಗಿರುವ ಕಾರಂಜಿ ವೃತ್ತಗಳು ಅಭಿವೃದ್ಧಿಯಾಗಿಲ್ಲ. ನಗರದಲ್ಲಿ 63 ಪಾರಂಪರಿಕ ಹಿನ್ನೆಲೆಯ ವೃತ್ತಗಳಿದೆ. ಆದರೆ ಅದರ ಸ್ಥಿತಿ ಹೇಳತೀರದು.
ಪ್ರಮುಖ ಹೋಬಳಿ ಕೇಂದ್ರವಾಗಿದ್ದ ಹುಲ್ಲಹಳ್ಳಿ ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಸುತ್ತಮುತ್ತ 70 ಹಳ್ಳಿಗಳ ವ್ಯಾಪ್ತಿ ಇದೆ. ಜತೆಗೆ ಕಪಿಲಾ ನದಿ, ಸರಕಾರಿ ಪದವಿ ಪೂರ್ವ ಕಾಲೇಜು, 19 ಎಕರೆ ಸರಕಾರಿ ಮತ್ತಿತರ ಸೌಲಭ್ಯಗಳನ್ನು ಹೊಂದಿದ್ದರೂ ತಾಲೂಕು ಪುನಾರಚನೆ ಪಟ್ಟಿಯಿಂದ ಕೈ ಬಿಟ್ಟಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದೆ.