ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಮೈಸೂರು : "ವಿ"ಜಯ ಯಾತ್ರೆಗೆ ಮೂವರು !
ವಿಕ ಛಾಯಾಗ್ರಾಹಕರ ಆಲ್ಬಂ
ನಮ್ಮ ಸಂಚಿಕೆಗೆ ಹೊಸದಾಗಿ ಸೇರಿರುವುದು "ವಿಕ ಛಾಯಾಗ್ರಾಹಕರ ಆಲ್ಬಂ". ಇದು ನಮ್ಮ ಪತ್ರಿಕೆಯ ವಿವಿಧ ಆವೃತ್ತಿಗಳಲ್ಲಿರುವ ಛಾಯಾಗ್ರಾಹಕರು ತೆಗೆದ ಮಾನವಾಸಕ್ತಿ ಛಾಯಾಚಿತ್ರಗಳ ವೇದಿಕೆ.
ನಮ್ಮ ಪತ್ರಿಕೆಯ ಹತ್ತು ಆವೃತ್ತಿಯಲ್ಲಿರುವ ಛಾಯಾಗ್ರಾಹಕರು ಸದಾ ಸುದ್ದಿಯೊಡನೆ ಇರುವವರೇ. ಆದರೆ ಅದರ ಮಧ್ಯೆಯೂ ಒಂದಿಷ್ಟು ಬಿಡುವು ಮಾಡಿಕೊಂಡು ತಮ್ಮಿಚ್ಛೆಯ ಫೋಟೋಗಳನ್ನು ತೆಗೆಯುವುದು ಒಂದು ಬಗೆಯಲ್ಲಿ "ತಮ್ಮ ಸ್ಪೇಸ್' ಹುಡುಕಿಕೊಳ್ಳುವ ಬಗೆ. ಹೊಸ ಬಗೆಯಲ್ಲಿ, ಮನಸ್ಸಿಗೆ ಖುಷಿ ತರುವ ಛಾಯಾಚಿತ್ರಗಳನ್ನು ತೆಗೆಯುತ್ತಾರೆ. ಹಾಗೆ ತೆಗೆದ ಎಲ್ಲದಕ್ಕೂ ಪತ್ರಿಕೆಯಲ್ಲಿ ಅವಕಾಶ ಸಿಗದು. ಅಂಥ ಸಂದರ್ಭದಲ್ಲಿ ತಮ್ಮ ಫೋಲ್ಡರ್ ನಲ್ಲೇ ಸ್ಥಾನ ನೀಡಿರುತ್ತಾರೆ. ನಮ್ಮ ವಿಕ ಆಲ್ಬಂ ಅಂಥ ಛಾಯಾಚಿತ್ರಗಳಿಗೆ ವೇದಿಕೆ.
ಆರಂಭಕ್ಕೆ ಮಂಗಳೂರು ಆವೃತ್ತಿಯ ಜಿ. ಕೆ. ಹೆಗಡೆ ಅವರು ತೆಗೆದ ಛಾಯಾಚಿತ್ರಗಳನ್ನು ನೀಡಲಾಗಿದೆ. ನೋಡಿ ಅಭಿಪ್ರಾಯ ತಿಳಿಸಿ.

ಲೇಬಲ್ಗಳು:
ಜಿ. ಕೆ. ಹೆಗಡೆ,
ವಿಕ ಫೋಟೋಗ್ರಾಫರ್ಸ್
ಹುಳಿ ಮಾವಿಗೆ ಸವಿಯ ಕಸಿ !
ಕಲಾ ಗ್ಯಾಲರಿ, ಸಂಸ್ಕೃತಿ ಸಿಂಚನ ಗ್ಯಾಲರಿ ಆರಂಭ

ಓದುಗರಿಗೆ ಒಂದು ಖುಷಿಯ ಸುದ್ದಿಯೆಂದರೆ ಇನ್ನು ಮುಂದೆ ಮೈಸೂರಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಲಾ ಪ್ರದರ್ಶನಗಳ ಛಾಯಾಚಿತ್ರಗಳನ್ನು ನಮ್ಮ ಬ್ಲಾಗ್ ನಿಂದಲೇ ನೋಡಿ ಆನಂದಿಸಬಹುದು.
ಅದಕ್ಕಾಗಿ ನಾವು ಎರಡು ಗ್ಯಾಲರಿ ಆರಂಭಿಸಿದ್ದೇವೆ. ವಾರದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ್ದು "ಸಂಸ್ಕೃತಿ ಸಿಂಚನ" ಹಾಗೂ ಕಲಾಕೃತಿಗಳದ್ದು "ಭಿತ್ತಿ". ಈ ಮೂಲಕ ನಗರದ ಸಾಂಸ್ಕೃತಿಕ ಕಂಪು ಬೇರೆಡೆಗೂ ಹರಡಲಿ ಎಂಬುದು ನಮ್ಮ ಉದ್ದೇಶ.
ಈಗಾಗಲೇ ಕಲಾ ಗ್ಯಾಲರಿ "ಭಿತ್ತಿ" ಯಲ್ಲಿ ನಿನ್ನೆಯಷ್ಟೇ ಮುಗಿದ ಧಾರವಾಡದ ಕಲಾ ಶಾಲೆಯ ವಿದ್ಯಾರ್ಥಿಗಳ ಕಲಾಕೃತಿಗಳ ಚಿತ್ರಗಳನ್ನು ಹಾಕಲಾಗಿದೆ. ಇದು ಪ್ರತಿ ವಾರ ನೀವು ನೋಡಲೇಬೇಕಾದ ಗ್ಯಾಲರಿಗಳು. ನಮ್ಮ ಬಲಬದಿಯ ಅಂಕಣಗಳಲ್ಲಿ ಇವು ಲಭ್ಯ. ನೋಡಿ, ಪ್ರತಿಕ್ರಿಯಿಸಿ.
ಲೇಬಲ್ಗಳು:
ಕಲಾ ಗ್ಯಾಲರಿ,
ಧಾರವಾಡ ಕಲಾ ಶಾಲೆ.,
ಸಂಸ್ಕತಿ ಸಿಂಚನ
ಮೈಸೂರು ವಿವಿ ಯಲ್ಲಿ ಗಾಂಧಿ ಭವನ

ಮೈಸೂರು ವಿವಿ ಯಲ್ಲಿ ಗಾಂಧಿ ಭವನವಿದೆ. ಜತೆಗೆ ಗಾಂಧಿ ಆಶ್ರಮ ಆರಂಭಿಸಲು ಹೊರಟಿದೆ. ಆ ಕುರಿತು ಚೀ. ಜ. ರಾಜೀವ ಬರೆದ ಸುದ್ದಿ.
ಲೇಬಲ್ಗಳು:
ಗಾಂಧೀಜಿ,
ಮೈಸೂರು ವಿಶ್ವವಿದ್ಯಾಲಯ
ಅಡಿಗಡಿಗೂ ಗುಂಡಿ : ಸಂಚಾರ ದುಸ್ತರ

ಇದು ನಮ್ಮ ಕೊಡಗಿನ ಪ್ರಮುಖ ಸುದ್ದಿ. ಹಾಳಾದ ರಸ್ತೆಯ ಕುರಿತು ಗಮನಸೆಳೆಯುವ ಪ್ರಯತ್ನ

ಮೈಸೂರು ನಗರದ ಹಳೆಯ ಕೆರೆ ದೇವನೂರು ಕೆರೆ ಕರಗುತ್ತಿದೆ. ಅದರ ಕುರಿತು ನಗರದ ಎರಡನೇ ಪುಟದ ಸುದ್ದಿ.

ಚಾಮರಾಜನಗರದ ಚಂದಕವಾಡಿ ಚಂದದ ಸೇತುವೆಯೇನೋ ನಿಜ.ಆದರೆ ಇತಿಹಾಸ ಸೇರುತ್ತಿದೆ. ಆ ಕುರಿತ ವರದಿ.
ಸೇತುವೆ ಕುಸಿದರೂ ಕೇಳುವವರೇ ಇಲ್ಲ ...!

ಲೇಬಲ್ಗಳು:
ಮಂಡ್ಯ,
ಸುತ್ತೂರು ದೇಸಿ ಸಮ್ಮೇಳನ

ಲೇಬಲ್ಗಳು:
ಕೊಡಗು,
ಮೃಗಾಲಯ,
ಮೈಸೂರು ನಗರ
ಮತ್ತೆ ತ್ಯಾಗಕ್ಕೆ ಮಹಾದೇವು ಸಿದ್ಶ
ಇವು ನಮ್ಮ ವಿಶೇಷ

ಇದು ನಮ್ಮ ಮೂರು ಪುಟಗಳ ಲೀಡ್ ನ ವಿನ್ಯಾಸ. ಮೊದಲಿನದು ಐದನೇ ಪುಟದಲ್ಲಿ ಸೋಮವಾರಪೇಟೆ ಗ್ರಾ. ಪಂ. ಅವ್ಯವಹಾರ ಕುರಿತಾದದ್ದು. ಎರಡನೆಯದು ಮಂಡ್ಯ ಜಿಲ್ಲೆಯ ನಾಗರಿಕರ ಸಮಸ್ಯೆ. ಮೂರನೆಯದು ರೈತರ ಪ್ರತಿಭಟನೆ
ಲೇಬಲ್ಗಳು:
ಪ್ರತಿಭಟನೆ,
ಮಂಡ್ಯ,
ಸೋಮವಾರಪೇಟೆ
ನಮ್ಮ ಮತ್ತೊಂದು ವಿಶೇಷ ಪುಟ "ಕಾಗದ ದೋಣಿ"
ಚುನಾವಣೆ : ಮೈಸೂರಿನಲ್ಲಿ ಬಿಗಿ ಬಂದೋಬಸ್ತ್ ಶುರು
ವಿಕ ಸುದ್ದಿಲೋಕ
ಮೈಸೂರು:ಲೋಕಸಭಾ ಚುನಾವಣೆ ಕಾರ್ಯಚಟುವಟಿಕೆ ಮೇಲೆ ಕಣ್ಗಾವಲು ಇಡಲು ಬೆಂಗಳೂರು-ಮೈಸೂರು ರಸ್ತೆ ಸೇರಿ ಐದು ಕಡೆ 24 ಗಂಟೆ ತಪಾಸಣೆ ಸೋಮವಾರದಿಂದ ಆರಂಭವಾಗುತ್ತಿದೆ.
ಅದೂ ರಾತ್ರಿ ವೇಳೆಯೇ ರಾಜಕಾರಣಿಗಳು ತಮ್ಮ ಚಟುವಟಿಕೆ ಚುರುಕುಗೊಳಿಸುವುದರಿಂದ ರಸ್ತೆಗಳಲ್ಲಿ ಹೆಚ್ಚು ಸಿಬ್ಬಂದಿ ಎಲ್ಲಾ ರೀತಿಯ ವಾಹನಗಳನ್ನು ಜಾಲಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಮಣಿವಣ್ಣನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು ರಸ್ತೆಯಲ್ಲಿ ಐದು ಪಾಯಿಂಟ್ಗಳನ್ನು ರಚಿಸಲಾಗುತ್ತಿದೆ. ದ್ವಿಚಕ್ರ, ಲಘು ಹಾಗೂ ಭಾರೀ ವಾಹನಗಳನ್ನು ಪ್ರತ್ಯೇಕವಾಗಿ ತಪಾಸಣೆ ಮಾಡುವ ಮೂಲಕ ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ಇದಲ್ಲದೇ ಊಟಿ ರಸ್ತೆ, ಮಡಿಕೇರಿ ರಸ್ತೆ ಸೇರಿ ಎಲ್ಲಾ ಹೊರ ವರ್ತುಲ ರಸ್ತೆಯಲ್ಲಿ ಪೊಲೀಸರ ಜತೆಗೆ ಇತರೆ ಸಿಬ್ಬಂದಿಯೂ ನಾಕಾಬಂದಿ ನಡೆಸಲಿದ್ದಾರೆ ಎಂದು ವಿವರಿಸಿದರು.
ಸೆಕ್ಟ್ರಲ್ ಮ್ಯಾಜಿಸ್ಟ್ರೇಟ್:
ಈ ಬಾರಿ 120 ಮಂದಿ ಸೆಕ್ಟ್ರಲ್ ಮ್ಯಾಜಿಸ್ಟ್ರೇಟ್ಗಳನ್ನು ಚುನಾವಣೆ ಕಾರ್ಯಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ 74 ಮಂದಿಯನ್ನು ಈಗಾಗಲೇ ನಿಯೋಜಿಸಲಾಗಿದೆ. ಉಳಿಕೆ 46 ಸೆಕ್ಟರಲ್ ಮ್ಯಾಜಿಸ್ಟ್ರೇಟ್ಗಳನ್ನು ಸದ್ಯವೇ ನಿಯೋಜಿಸಿ ಎಲ್ಲರಿಗೂ ಚುನಾವಣೆ ಕುರಿತು ತರಬೇತಿ, ಕಿರು ಟಿಪ್ಪಣಿ ನೀಡಲಾಗುವುದು ಎಂದರು.
ಬಾರ್ ಮುಚ್ಚಿ:
ಬಾರ್ ಹಾಗೂ ರೆಸ್ಟೋರೆಂಟ್ ಅನ್ನು ಈ ಬಾರಿ ಏಕಕಾಲಕ್ಕೆ ಮುಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ರಾತ್ರಿ ೧೧ರ ಹೊತ್ತಿಗೆ ವಹಿವಾಟು ಬಂದ್ ಮಾಡಬೇಕು. ಆನಂತರವೂ ಅನ್ಯ ಮಾರ್ಗಗಳಲ್ಲಿ ಮದ್ಯ ಸರಬರಾಜು ಮಾಡಿದರೆ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿರುವ ಸರಕಾರದ ಹೋರ್ಡಿಂಗ್ಗಳನ್ನು ತೆಗೆದು ಹಾಕುವಂತೆ ವಾರ್ತಾ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)