ಚೀ.ಜ.ರಾಜೀವ ಮೈಸೂರು
ನೀವೇನಾದರೂ, ನಿಮ್ಮ ಮನೆಯ ಮೇಲಿನ ಪ್ರದೇಶವನ್ನು ಖಾಸಗಿ ಮೊಬೈಲ್ ಕಂಪನಿಯ ಟವರ್ ನಿರ್ಮಾಣಕ್ಕೆ ಬಾಡಿಗೆಗೆಂದು ನೀಡುತ್ತಿರುವಿರಾ?, ಒಂದು ಕ್ಷಣ ಯೋಚಿಸಿ. ಮೊಬೈಲ್ ಕಂಪನಿ ನಿಮಗೆ ತಿಂಗಳಿಗೆ ೧೦-೧೫ ಸಾವಿರ ರೂ. ಇಲ್ಲವೇ ವರ್ಷಕ್ಕಿಷ್ಟು ಎಂದು ಕೈ ತುಂಬ ಹಣ ನೀಡುತ್ತಿರಬಹುದು. ಈ ಬಗ್ಗೆ ಪತ್ರ ವ್ಯವಹಾರವೂ ಆಗಿರಬಹುದು. ಆದರೆ, ಆ ಕಂಪನಿ ಪತ್ರ ವ್ಯವಹಾರದಲ್ಲಿ ಕಾಣಿಸದ ಸಂಗತಿಯೊಂದಿದೆ. ಕಂಪನಿ ಪ್ರತಿಷ್ಠಾಪಿಸಿರುವ ಸೆಲ್ ಟವರ್ - ನಿಮ್ಮ ಮನೆಯವರಿಗೆ, ಸುತ್ತಮುತ್ತಲಿನವರಿಗೆ ಉಚಿತವಾಗಿ ಅಪಾಯಕಾರಿ ರೋಗ-ರುಜಿನಗಳನ್ನು ನೀಡುತ್ತಿದೆ. ಅದು ಪತ್ರದಲ್ಲಿ ಇರುವುದಿಲ್ಲ, ಮಾಸಿಕ ಶುಲ್ಕದಂತೆ ಕಣ್ಣಿಗೆ ಕಾಣುವುದಿಲ್ಲ. ಆದರೆ, ಸದ್ದಿಲ್ಲದೇ ಮಾನವ ದೇಹವನ್ನು ಪ್ರವೇಶಿಸಿ, ಭವಿಷ್ಯದಲ್ಲಿ ಸ್ಫೋಟಗೊಳ್ಳುತ್ತದೆ !
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಪ್ರಯಾಣಿಕರ ಜೀವರಕ್ಷಕ ಈ ಚಾಲಕ
ಜೆ.ಶಿವಣ್ಣ, ಮೈಸೂರು
ಕ್ಷಣಾರ್ಧದಲ್ಲಿ ಅವಘಡ ಸಂಭವಿಸಿತ್ತು. ಆದರೆ ಕೂದಲೆಳೆಯ ಅಂತರ ದಲ್ಲಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಒಂದರೆಗಳಿಗೆ ಎಚ್ಚರ ತಪ್ಪಿದ್ದರೂ ಅಪಾಯ ಕಟ್ಟಿಟ್ಟಬುತ್ತಿ !
ಅದಕ್ಕೆ ಕಾರಣ ಚಾಲಕನ ಚಾಕಚಕ್ಯತೆ, ಮಿಂಚಿನ ಆಲೋಚನೆ, ಆ ಕ್ಷಣದಲ್ಲಿ ತೋರಿದ ಜಾಣ್ಮೆ, ಕೈಗೊಂಡ ನಿರ್ಧಾರ. ಪರಿಣಾಮ-ಬಂದರೆಗಬಹುದಾಗಿದ್ದ ಆಕಸ್ಮಿಕ ಅಪಾಯದಿಂದ ಪಾರು. ಬಸ್ಸಿನೊಳಗಿದ್ದ ಜೀವಗಳು ನಿಟ್ಟುಸಿರುಬಿಟ್ಟವು. ಚಾಲಕ ಅಮೂಲ್ಯ ಜೀವಗಳನ್ನು ಉಳಿಸಿದ್ದ. ಕಾಣದ ದೇವರಿಗೆ ಹಂಬಲಿಸುವ ಮನಗಳು ಎದುರಿಗಿದ್ದ ಚಾಲಕನೆಂಬೋ ಸಾರಥಿಗೆ ನಮಿಸಿದ್ದು ಸುಳ್ಳಲ್ಲ.
ಹೌದು, ಭರ್ತಿಯಾಗಿದ್ದ ಬಸ್ ಇಕ್ಕಟ್ಟಿನ, ಅಂಕುಡೊಂಕಿನ ರಸ್ತೆಯಲ್ಲಿ ಭರ್ರನೆ ಹೊರಟಿತ್ತು. ಮಾರ್ಗ ಮಧ್ಯೆ ಒಣಗಿದ ತುಸು ದೊಡ್ಡದೇ ಆದ ಮರವೊಂದು ರಸ್ತೆಯತ್ತ ಉರುಳಿತು. ಅದ್ಯಾವ ಕ್ಷಣದಲ್ಲಿ ಅದನ್ನು ಚಾಲಕ ಗಮನಿಸಿದನೋ ಥಟ್ಟನೇ ಬಲಬಿಟ್ಟು ಬ್ರೇಕ್ ಅದುಮಿದ. ನುಣುಪಾದ ರಸ್ತೆಯಲ್ಲಿ ಬಸ್ಸಿನ ಟೈರ್ ಉಜ್ಜಿ ಕೊಂಡು ತುಸು ದೂರ ಸಾಗಿತ್ತು. ಅದೇ ಕ್ಷಣದಲ್ಲಿ ಬುಡ ಸಮೇತ ಮರ ಬಸ್ ನ ಮುಂಭಾಗಕ್ಕೆ ಅಪ್ಪಳಿಸಿತು !
ಮರ ಬಿದ್ದ ರಭಸಕ್ಕೆ ವಾಹನದ ಮುಂಭಾಗದಲ್ಲಿ ಎಡಬದಿಯಲ್ಲಿದ್ದ ಬಾಗಿಲು ಪೂರ್ಣವಾಗಿ ನಜ್ಜುಗುಜ್ಜಾಗಿ ಮುಚ್ಚಿ ಹೋಯಿತು. ಒಂದು ವೇಳೆ ಬಸ್ ನ ಮಧ್ಯಕ್ಕೆ ಬಿದ್ದಿದ್ದರೆ ಜೀವಕ್ಕೆ ಎರವಾಗುತ್ತಿದ್ದರಲ್ಲಿ ಸಂಶಯ ವಿರಲಿಲ್ಲ. ಆದರೆ ಅಚ್ಚರಿಯ ರೀತಿಯಲ್ಲಿ ಎಲ್ಲರೂ ಯಾವುದೇ ತೊಂದರೆ ಇಲ್ಲದೇ ಪಾರಾಗಿದ್ದರು. ನಿರ್ವಾಹಕ ಕೂಡ ಬಚಾವ್. ಬಾಗಿಲ ಬಳಿ ನಿಂತಿದ್ದರೆ ನಜ್ಜು ಗುಜ್ಜಾದ ಬಾಗಿಲಿನಲ್ಲಿ ಸಿಲುಕುತ್ತಿದ್ದರು.
ಮತ್ತೂ ಒಂದು. ಮರ ಬೀಳುವಾಗ ಸನಿಹ ದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಹರಿಯುತ್ತಿದ್ದ ತಂತಿಯನ್ನು ತುಂಡಾಗಿಸಿತ್ತು. ಬಸ್ ಮುಂದೆ ಸಾಗಿದ್ದರೆ ತುಂಡಾದ ತಂತಿಗೆ ವಾಹನ ಸಿಲುಕುವ ಸಾಧ್ಯತೆಗಳೂ ಇತ್ತು. ಚಾಲಕ ಎಚ್ಚರ ತಪ್ಪಿದ್ದರೆ ಮರ ಬಿದ್ದು ಇಲ್ಲವೇ, ಕರೆಂಟು ಹರಿದು ಸಾವಿನ ಮನೆಯ ಕದ ತಟ್ಟುವಂತಾಗುತ್ತಿತ್ತು ! ಚಾಲಕ ಆಪ್ತರಕ್ಷಕನಾಗಿದ್ದ, ಆಪದ್ಭಾಂದವನಾಗಿದ್ದ. ಆ ಚಾಲಕ ಎಸ್.ಕೆ. ಲೋಕೇಶ್.
ಇದ್ಯಾವುದೋ ಸಿನಿಮೀಯ ಘಟನೆ ಅಲ್ಲ. ನಿಜ ಘಟನೆ. ನಡೆದದ್ದು ಮಡಿಕೇರಿ-ಊಟಿ ಮಾರ್ಗದಲ್ಲಿ.
ಅದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್. ಬುಧವಾರ (ನ.೨೪) ಮಧ್ಯಾಹ್ನ ೩.೪೫- ೪ ಗಂಟೆಯ ಸಮಯ. ಮಕ್ಕಳು, ಮಹಿಳೆಯರು ಸೇರಿದಂತೆ ೫೦ಕ್ಕೂ ಹೆಚ್ಚು ಮಂದಿ ಆ ಬಸ್ ನಲ್ಲಿದ್ದರು. ಮಡಿಕೇರಿಯಿಂದ ಊಟಿಗೆ ಹೊರಟಿದ್ದ ಬಸ್ ನ ನಿರ್ವಾಹಕ ಶ್ರೀನಿವಾಸ್. ಸಾರಥಿ -ಚಾಲಕ- ಲೋಕೇಶ್ (ಬ್ಯಾಡ್ಜ್ ನಂ.೭೫೪) ಚಾಲನೆ ಮಾಡುತ್ತಿದ್ದರು. ಲೋಕೇಶ್ ಎಂದಿನಂತೆ ಪರಿಚಿತವಾದ ಮಾರ್ಗದಲ್ಲಿ ಎಚ್ಚರಿಕೆಯಿಂದ ಚಾಲನೆ ಮಾಡುತ್ತಿದ್ದರು.
ಇನ್ನು ಅವರ ಮಾತುಗಳಲ್ಲೇ ಕೇಳಿ: ಮಡಿಕೇರಿಯಿಂದ ಊಟಿಗೆ ಹೊರಟಿದ್ದ ?? (ಕೆಎ ೧೯ ಎಫ್ ೨೬೪೩) ಟಿ.ಆರ್.ಬಜಾರ್ ದಾಟಿ ಹನುಮಂತಪುರ ಹತ್ತಿರವಾಗುತ್ತಿತ್ತು. ಅಲ್ಲಿ ರಸ್ತೆ ಹಳ್ಳಕೊಳ್ಳದ ಜತೆಗೆ ಅಂಕುಡೊಂಕಾಗಿದೆಯಲ್ಲದೇ, ತೀವ್ರ ತಿರುವು ಇತ್ತು. ಹಾಗಾಗಿ ಚಾಲನೆಯನ್ನು ನಿಧಾನಗೊಳಿಸಿದೆ. ಅದೇ ಕ್ಷಣ ಎತ್ತರದಲ್ಲಿದ್ದ ಮರವೊಂದು ಗಾಳಿಗೆ ಹೊಯ್ದಾಡುತ್ತಾ ಬೀಳುವುದು ಕಣ್ಣಿಗೆ ಬಿತ್ತು. ತಕ್ಷಣವೇ ಎಚ್ಚೆತ್ತು ತಕ್ಷಣ ಬ್ರೇಕ್ ಹಾಕಿದೆ. ಮುಂದಿದ್ದ ಪ್ರಯಾಣಿಕರು ಹಿಂದೆ ಸರಿಯುವಂತೆ ಕೂಗಿಕೊಂಡೆ.
ಚಕ್ರ ಉಜ್ಜಿಕೊಂಡು ಮುಂದೆ ಹೋಯಿತು. ಒಣಗಿದ ಹಳೇ ಮರ ಬಸ್ ಮುಂಭಾಗಕ್ಕೆ ಅಪ್ಪಳಿಸಿತು. ಜಂಘಾಬಲವೇ ಉಡುಗಿ ಹೋಯಿತು. ದೈವವಶಾತ್ ಯಾವುದೇ ಹಾನಿಯಿಲ್ಲದೇ, ಬಚಾವ್ ಆದೆವು. ಮುಂಭಾಗದಲ್ಲಿದ್ದ ಬಾಗಿಲಿಗೆ ಮರ ಸಿಲುಕಿದ್ದರಿಂದ ತಕ್ಷಣವೇ ಎಲ್ಲಾ ಪ್ರಯಾಣಿಕರನ್ನು ತುರ್ತು ಬಾಗಿಲುಗಳ ಮೂಲಕ ಸುರಕ್ಷಿತವಾಗಿ ಇಳಿಸಲಾಯಿತು. ಒಂದು ಗಳಿಗೆ ಮೈಮರೆತಿ ದ್ದರೆ ಮರ ಇಲ್ಲವೇ ವಿದ್ಯುತ್ ಗೆ ಸಿಲುಕುವ ಸಾಧ್ಯತೆಯಿತ್ತು. ನೆನಪಿಸಿಕೊಂಡರೆ ಶರೀರ ಥರಥರ ಕಂಪಿಸುತ್ತದೆ. ಬಹು ಹೊತ್ತಿನ ವರೆಗೂ ನನ್ನ ಶರೀರ ನಿಯಂತ್ರಣದಲ್ಲಿರಲಿಲ್ಲ, ನಡುಕ ನಿಂತಿರಲಿಲ್ಲ. ?ಚಾ? ಆದ ಪ್ರಯಾಣಿಕರು ಹತ್ತಿರ ಬಂದು ನನ್ನನ್ನು ಹೊಗಳು ತ್ತಿದ್ದರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ೧೮ ವರ್ಷಗಳಿಂದ ಈ ಮಾರ್ಗ ದಲ್ಲಿ ಬಸ್ ಚಲಾಯಿಸುತ್ತಿದ್ದೇನೆ. ಇದೇ ಮೊದಲು ಹೀಗಾಗಿದ್ದು.
೨೩ ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಲೋಕೇಶ್ ಮಡಿಕೇರಿಯ ಬೋಯಿಕೆರೆ ಗ್ರಾಮದವರು. ತಂದೆ, ಪತ್ನಿ, ಪುತ್ರಿ, ಇಬ್ಬರು ಪುತ್ರರಿರುವ ಪುಟ್ಟ ಸಂಸಾರ. ಮೊದಲಿಗೆ ಮೈಸೂರಿನಲ್ಲಿ ವೃತ್ತಿ ಆರಂಭಿಸಿದ ಅವರು ಮಂಗಳೂರು ಸಾರಿಗೆ ವಿಭಾಗದಲ್ಲಿದ್ದು, ವರ್ಷದಿಂದ ಮೈಸೂರು ವಿಭಾಗದ ಮಡಿಕೇರಿ ಡಿಪೋನಲ್ಲಿ ಸೇವೆಯಲ್ಲಿದ್ದಾರೆ. ನಿರ್ವಾಹಕ ಶ್ರೀನಿವಾಸ್ ಅವರೊಡನೆ ೩-೪ ವರ್ಷಗಳಿಂದ ಜತೆಯಾಗಿದ್ದಾರೆ. ಚಾಲಕನಿಗೆ ಮೈಯಲ್ಲಾ ಕಣ್ಣಾಗಿರಬೇಕು ಎನ್ನುವುದಕ್ಕೆ ಈ ಘಟನೆ ಜೀವಂತ ಉದಾಹರಣೆ.

'ಬಣ'(ಣ್ಣ) ಬದಲಿಸಿದ ರಾಮದಾಸ್?
ವಿಕ ಸುದ್ದಿಲೋಕ ಮೈಸೂರು
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅವರು ಸಂಕಷ್ಟ ಕಾಲದಲ್ಲಿ ಪ್ರದರ್ಶಿಸಿದ ರಾಜಕೀಯ ನಡೆ ಕುತೂಹಲ ಕೆರಳಿಸಿದೆ.
ಈ ಬಗ್ಗೆ ಜಿಲ್ಲೆಯ ಬಿಜೆಪಿ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಯಡಿಯೂರಪ್ಪ ಅವರ ಮುಖ್ಯಮಂತ್ರಿಗಾದಿ ಅಲುಗಾಡಿದ ಸಂದರ್ಭ ದಲ್ಲಿ, ಸಚಿವ ರಾಮದಾಸ್ ವಹಿಸಿದ ಪಾತ್ರ, ಅವರೆಡೆಗೆ ತೋರಿದ ವಿಪರೀತ ಸ್ವಾಮಿ ನಿಷ್ಠೆ- ಎರಡೂ ಸಹಜವಾಗಿಯೇ ಕೆಲ ಪ್ರಶ್ನೆಗಳನ್ನು ಸೃಷ್ಟಿಸಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದಿಲ್ಲಿಯಾತ್ರೆಯ ಸಂದರ್ಭದಲ್ಲಿ ರಾಮದಾಸ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಯಡಿಯೂರಪ್ಪ ಅವರೇ ನಮ್ಮ ನಾಯಕ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದು ಹಲವರ ಹುಬ್ಬೇರಿಸಿದೆ.
ಶೋಭಾ ಕರಂದ್ಲಾಜೆ, ಸಿ.ಎಚ್. ವಿಜಯಶಂಕರ್ ಅವರಂಥ ಯಡಿಯೂರಪ್ಪ ಪರಮಾಪ್ತರೇ ರಾಜ್ಯ ದಲ್ಲಿ ಉಳಿದು, ಏನೂ ಆಗಿಲ್ಲ ಎಂಬಂತೆ ಇಲಾಖೆಯ ಚಟುವಟಿಕೆಗಳಲ್ಲಿ ಮುಳುಗಿದ್ದಾಗ ರಾಮದಾಸ್ ಅವರೇಕೆ ಇಷ್ಟೊಂದು ಮುತುವರ್ಜಿ ವಹಿಸಿದರು? ಎಂಬುದು ಕಾರ್ಯಕರ್ತರ ತಲೆ ಕೆಡಿಸಿದೆ.

ಸಮ್ಮಿಶ್ರಭಾವ ಸ್ಫುರಿಸಿದ ಜೋಕುಮಾರಸ್ವಾಮಿ...
ಹೊಸ ಹುಡುಗರು
ಭವಿಷ್ಯದಲ್ಲಿ ಇನ್ನಷ್ಟು
ಪಳಗುತ್ತಾರೆ,
`ಜೋಕುಮಾರಸ್ವಾಮಿ'ಯನ್ನು ಇನ್ನಷ್ಟು ಸುಂದರವಾಗಿ
ಬೆಳಗುತ್ತಾರೆ ಎನ್ನುವ ವಿಶ್ವಾಸದೊಂದಿಗೆ
ಲೋಪವನ್ನು ಮುಚ್ಚಿ ,
ಒಟ್ಟು ಪ್ರಯತ್ನವನ್ನು ಮೆಚ್ಚಬಹುದು.
ಭವಿಷ್ಯದಲ್ಲಿ ಇನ್ನಷ್ಟು
ಪಳಗುತ್ತಾರೆ,
`ಜೋಕುಮಾರಸ್ವಾಮಿ'ಯನ್ನು ಇನ್ನಷ್ಟು ಸುಂದರವಾಗಿ
ಬೆಳಗುತ್ತಾರೆ ಎನ್ನುವ ವಿಶ್ವಾಸದೊಂದಿಗೆ
ಲೋಪವನ್ನು ಮುಚ್ಚಿ ,
ಒಟ್ಟು ಪ್ರಯತ್ನವನ್ನು ಮೆಚ್ಚಬಹುದು.
ನಿವೇಶನ ಖಾಲಿ: ಕಿರಿಕಿರಿ `ಭರ್ತಿ'!
ವಿಕ ಸುದ್ದಿಲೋಕ ಮೈಸೂರು
ರಾತ್ರಿ ಸರಿಯಾಗಿ ನಿದ್ದೆ ಬರಲ್ಲ. ಸ್ವಲ್ಪ ಸದ್ದಾದರೂ ಏನೋ ಆತಂಕ. ಕಳ್ಳರ ಭಯ. ಹಾವು, ಚೇಳು, ಹುಳು ಹುಪ್ಪಟೆಗಳ ಭೀತಿ. ಒಟ್ಟಿನಲ್ಲಿ ನೆಮ್ಮದಿ ಎಂಬುದೇ ಇಲ್ಲ !
-ನಿವೇದಿತ ನಗರದ ನಿವಾಸಿಯೊಬ್ಬರ ಆತಂಕ ಅವರದಷ್ಟೆ ಅಲ್ಲ. ನಗರದ ವಿವಿಧ ಬಡಾವಣೆಯ ಸಾವಿರಾರು ಜನರದ್ದು. ಕಾರಣ ಒಂದೇ. ಖಾಲಿ ನಿವೇಶನಗಳು.
ಮನೆ ಪಕ್ಕ, ಎದುರು,ಹಿಂಭಾಗ, ಕೆಲವೆಡೆ ಅಕ್ಕ ಪಕ್ಕ-ಹಿಂದೆ ಮುಂದೆ ಎರಡು-ಮೂರು ಕಡೆಯ ಖಾಲಿ ನಿವೇಶನಗಳಲ್ಲಿ `ದಟ್ಟ ಅಡವಿ' ಯಂತೆ ಪೊದೆ ಬೆಳೆದು ನಿಂತಿದ್ದರೆ, ಅಲ್ಲಿಂದ ಆಗಾಗ ಹಾವು, ಚೇಳು, ಹುಳು ಹುಪ್ಪಟೆಗಳು ದರ್ಶನ ನೀಡುತ್ತಿದ್ದರೆ ಯಾರಿಗೆ ನೆಮ್ಮದಿ ಇದ್ದೀತು?
ಕಸ, ಕಳೆಮಯ: ಜೆ.ಪಿ.ನಗರ,ವಿಜಯನಗರದ ವಿವಿಧ ಹಂತ, ಕುವೆಂಪು ನಗರ, ವಿವೇಕಾನಂದ ನಗರ, ರಾಮಕೃಷ್ಣ ನಗರ, ನಿಮಿಷಾಂಬ ಬಡಾವಣೆ, ಶ್ರೀರಾಂಪುರ, ಅರವಿಂದನಗರ,ಶಾರದಾದೇವಿ ನಗರ ಮತ್ತಿತರ ಕಡೆ ಮುಖ್ಯರಸ್ತೆ, ಅಡ್ಡರಸ್ತೆ ಎಂಬ ಭೇದವಿಲ್ಲದೆ ಖಾಲಿ ನಿವೇಶನಗಳು `ಕಸ ಕಳೆ ಪೊದೆ ಮಯ'ವಾಗಿವೆ. ಕಳ್ಳ ಹೊಕ್ಕು ಕುಳಿತರೂ ಗೊತ್ತಾಗದಷ್ಟು ದಟ್ಟ ಪೊದೆ. ಹಲವು ನಿವೇಶನಗಳಂತೂ ಸಾರ್ವಜನಿಕ ಶೌಚಾಲಯ ಮತ್ತು ಕಸದ ತೊಟ್ಟಿಗಳಾಗಿ `ರೂಪಾಂತರ'ಗೊಳ್ಳುವ ಮೂಲಕ ಒಟ್ಟು ಪರಿಸರವನ್ನೇ ಅಸಹನೀಯಗೊಳಿಸಿವೆ. ಜಯನಗರದ ಕೆಲವೆಡೆಯೂ ಇದೇ ಸ್ಥಿತಿ.

ಗಜಗಳ ಚಿನ್ನಾಟ
ವಿಕ ಸುದ್ದಿಲೋಕ ಗುಡ್ಡೆಹೊಸೂರು
ಮಾವುತ-ಕಾವಾಡಿಗಳು ಅಂಕುಶ ಹಿಡಿದು ಪಳಗಿಸಿದ ಸಾಕಾನೆಗಳು ಬುಧವಾರ ಪ್ರದರ್ಶನ ನೀಡಿದ ವಿವಿಧ ಕಸರತ್ತು ನೂರಾರು ಸಂಖ್ಯೆ ಯಲ್ಲಿ ಸೇರಿದ್ದ ಪ್ರೇಕ್ಷಕರನ್ನು ರಂಜಿಸಿತು.
ದುಬಾರೆ ಆನೆ ತರಬೇತಿ ಶಿಬಿರದಲ್ಲಿ ಅರಣ್ಯ ಇಲಾಖೆ ಮಡಿಕೇರಿ ವಿಭಾಗದಿಂದ ನಡೆದ `ಆನೆ ಹಬ್ಬ' ದಲ್ಲಿ ಸಾಕಾನೆಗಳ ಕಲಿಕೆ ಅನಾವರಣಗೊಂಡಿತು.
೫೬ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ದುಬಾರೆಯಲ್ಲಿ ಆನೆ ಹಬ್ಬ ಆಯೋಜಿಸಲಾಗಿತ್ತು. ಕಳೆದ ವರ್ಷ ಈ ಕಾರ್ಯಕ್ರಮಕ್ಕೆ ಪ್ರಪ್ರಥಮ ವಾಗಿ ಚಾಲನೆ ನೀಡಲಾಗಿತ್ತು. ಕ್ಯಾಂಪ್‌ನಲ್ಲಿರುವ ಸಾಕಾನೆಗಳನ್ನು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿ, ಪೂಜೆ ಸಲ್ಲಿಸಲಾಯಿತು. ಬಣ್ಣಗಳಿಂದ ಅಲಂಕರಿಸಲಾಗಿತ್ತು.
ಮುಕ್ಕಾಲು ಗಂಟೆ (೧೧ ರಿಂದ ೧೧.೪೫) ಗಳ ಕಾಲ ಸಾಕಾನೆಗಳು ತಮ್ಮ ಕಲಿಕೆ ಪ್ರದರ್ಶಿಸಿದವು. ೯ವರ್ಷದ ಶಿವಗಂಗೆ, ೧೨ ರ ರಂಜನ್ ಹಾಗೂ ೭ರ ಪರಶುರಾಮ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಮಿಂಚಿದವು. ಹಿರಿಯ ಮಾವುತ ಜೆ.ಕೆ.ಡೋಬಿ ಮುಂದಾಳತ್ವದಲ್ಲಿ ಮಾವುತ- ಕಾವಾಡಿಗಳ ನಿರ್ದೇಶನದಂತೆ ಸಾಕಾನೆಗಳು ಪ್ರದರ್ಶನ ನೀಡಿದವು.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)