2006ರಲ್ಲಿ ನಡೆದ ಈ ಶತಮಾನದ ಮೊದಲ ಪಂಚಲಿಂಗ ದರ್ಶನ ಮಹೋತ್ಸವಕ್ಕಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ನಡೆದ ರಸ್ತೆ ಅಭಿವೃದ್ಧಿ ಮಣ್ಣುಪಾಲಾದ ಕುರಿತು ನಡೆದ ತನಿಖೆಯ ಅಂತಿಮ ವರದಿ ಸಹ ಇದುವರೆಗೂ ಬಹಿರಂಗವಾಗಿಲ್ಲ.
ಮೈಸೂರಿನ ಮಂಡಿಮೊಹಲ್ಲಾದ ಬಳಿ ಕರ್ನಾಟಕ ಕರಕುಶಲ ಕರ್ಮಿಗಳ ಕ್ಷೇಮಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡ ಮರ ಆಧರಿತ ಕುಶಲ ಕಲೆಯಲ್ಲಿ ನವೀನ ವಿನ್ಯಾಸ ಮತ್ತು ತಾಂತ್ರಿಕ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಹಿಳೆಯರು ಸೇರಿದಂತೆ ಮೂವತ್ತು ಮಂದಿ ತಮ್ಮ ಕೈಗಳನ್ನು ಸಾಣೆ ಹಿಡಿದಿದ್ದಾರೆ.
ಹುಣಸೂರು ರಸ್ತೆಯ ತಾಲೂಕು ಕಚೇರಿ ಎದುರಿನ ಹಸಿರುಮಯ ಹೋಟೆಲ್ಲೇ ಗ್ರೀನ್ಸ್. ಇದೊಂದು ಹೋಟೆಲ್ ಅಷ್ಟೇ ಅಲ್ಲ ಹಲವು ವಿಶಿಷ್ಟಗಳನ್ನು ಹೊಂದಿದೆ. ಇಲ್ಲಿ ಕಾಫಿ ತಯಾರಿಸುವವರು ವಿದೇಶಿಗರಲ್ಲ ಬದಲಿಗೆ ನಮ್ಮ ಅಂಗಳದ ಮಕ್ಕಳು.
ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು, ಧಗೆಯಾರಿದ ಹೃದಯದಲ್ಲಿ ಪುಟಿವೆದ್ದಿತು ಚೆಲುವು. ವರುಣ ಬರುವ ಹೊತ್ತಿನಲ್ಲಿ ನಮ್ಮ 'ತರುಣ' ರೈತರು ನೇಗಿಲು ಹಿಡಿದು ಸಿದ್ಧರಾಗಿದ್ದಾರೆ. ಈ ನಿಟ್ಟಿನಲ್ಲಿ ಮೈಸೂರು ಭಾಗದ ರೈತರು ಕೃಷಿ ಚಟುವಟಿಕೆ ಸಿದ್ಧತೆ ಬಗ್ಗೆ ಪೂರ್ಣ ಮಾಹಿತಿಯ ಪುಟ.
ಮೈಸೂರು ಲೋಕಸಭೆ ಕ್ಷೇತ್ರದ ನೂತನ ಸಂಸದ ಎಚ್.ವಿಶ್ವನಾಥ್ ಎದುರು ಹಲವಾರು ಸವಾಲುಗಳಿವೆ. ಕೇಂದ್ರ ಪುರಸ್ಕ್ರತ ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನದ ಹಾದಿ ಹಿಡಿಯಬೇಕಾದರೆ ಇವರ ಕಾಳಜಿ ಅಗತ್ಯ.
ದಶಕಗಳ ಹಿಂದೆ ನಿರ್ಮಿಸಿದ್ದ ಕಬ್ಬಣಿ-ಮುಕ್ಕೋಡ್ಲು ಗ್ರಾಮ ಸಂಪರ್ಕಿಸುವ ತೂಗು ಸೇತುವೆ ಕುಸಿದು ಬೀಳುವ ಹಂತದಲ್ಲಿದೆ. ಜನರು ಜೀವಭಯದಿಂದಲೇ ಇಲ್ಲಿ ಸಂಚರಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.
ಕಾವೇರಿ, ಕಪಿಲಾ ನದಿ ಪಾತ್ರದಲ್ಲಿ ಲಾಂಗು, ಮಚ್ಚುಗಳು ಝಳಪಿಸಲಾರಂಭಿಸಿವೆ. ಆ ಮೂಲಕ ಮರಳು ಮಾಫಿಯಾದ ಮತ್ತೊಂದು 'ಕರಾಳ ಮುಖ' ಅನಾವರಣಗೊಳ್ಳುತ್ತಿದೆ.
ತಮಿಳುನಾಡಿನ ಮೀಸಲು ಲೋಕಸಭೆ ಕ್ಷೇತ್ರಕ್ಕೆ ಬುಧವಾರ ಬಿರುಸಿನ ಮತದಾನ ನಡೆದಿದೆ. ಕ್ಷೇತ್ರದ ವಿಶೇಷವೆಂದರೆ, ಇಲ್ಲಿ ಕನ್ನಡಿಗ ಮತದಾರರ ಸಂಖ್ಯೆ ಗಣನೀಯವಾಗಿದೆ. ಜತೆಗೆ ಕನ್ನಡಿಗ ಅಭ್ಯರ್ಥಿ ಚಾ.ಗು.ನಾಗರಾಜು ಸ್ಪರ್ಧಾ ಕಣದಲ್ಲಿದ್ದಾರೆ.
ರಾಜಕೀಯವೇ ಉಸಿರಾಗಿರುವ ಮಂಡ್ಯ ಜಿಲ್ಲೆಯಲ್ಲಿ ಪ್ರತಿ ಚುನಾವಣೆಯಲ್ಲೂ ಬೆಟ್ಟಿಂಗ್ ಭರಾಟೆ ಇದ್ದೇ ಇರುತ್ತದೆ. ಈ ಬಾರಿ ಹೊಲ, ಗದ್ದೆ, ಜಾನುವಾರು, ಬೆಳೆ, ಕಾರು, ಬೈಕ್ ಅನ್ನು ಪಣಕ್ಕಿಟ್ಟಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ರಾಜ್ಯಾದ್ಯಂತ ಶೇ. 43.34 ರಷ್ಟು ಮಂದಿ ಪಾಸಾಗಿದ್ದಾರೆ. ಈ ಬಾರಿ ಮತ್ತೆ ವಿದ್ಯಾರ್ಥಿನಿಯರದೇ ಮೇಲುಗೈ. ಮೊದಲ ಬಾರಿ ಪರೀಕ್ಷೆ ಬರೆದವರ ಪೈಕಿ ಶೇ. 50.88 ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಮೊದಲನೇ ಸ್ಥಾನವನ್ನು ದಕ್ಷಿಣ ಕನ್ನಡ ಪಡೆದರೆ, ಎರಡನೇ ಸ್ಥಾನ ಉಡುಪಿಗೆ ದಕ್ಕಿದೆ. ಮೈಸೂರಿಗೆ ಒಂಬತ್ತನೇ ಸ್ಥಾನ ಲಭಿಸಿದ್ದು, ಚಾಮರಾಜನಗರ 12 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ತಕ್ಷಣವೇ ಫಲಿತಾಂಶಕ್ಕೆ ಇಲ್ಲಿ ಭೇಟಿ ಕೊಡಿ. ಪಿಯುಸಿ ಫಲಿತಾಂಶಕ್ಕೆ ಇಲ್ಲಿಗೆ ಭೇಟಿ ಕೊಡಿ. ಇಲ್ಲಿಯೂ ಫಲಿತಾಂಶ ಲಭ್ಯ. ಇಲ್ಲಿಯೂ ಪ್ರಯತ್ನಿಸಿ.