ಇದು ಧೈರ್ಯವಂತರಿಗೆ ಮಾತ್ರ !


ಸಾಮಾನ್ಯವಾಗಿ ಯುವ ಪೀಳಿಗೆಗಳಿಗೆ ಕ್ರೀಡೆ ಎಂದರೆ ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್ ಆಟಗಳೇ ಹೆಚ್ಚು ಇಷ್ಟ.ಕೆಲವೊಮ್ಮೆ ಸಾಹಸ ಕ್ರೀಡೆಗಳ ಬಗ್ಗೆ ಆಸಕ್ತಿ ಇದ್ದರೂ ಮನೆಯವರಿಂದ ಅಡ್ಡಿ ಸಹಜ. ರೀವರ್ ಕ್ರಾಸಿಂಗ್, ರಾಕ್ ಕ್ಲೈಂಬಿಂಗ್ ಮತ್ತಿತರ ಸಾಹಸ ಕ್ರೀಡೆಗಳ ತರಬೇತಿಯನ್ನು ನಿರುದ್ಯೋಗಿಗಳಿಗೆ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಮೈಸೂರು ಅಡ್ವೆಂಚರ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಸುತ್ತಿದೆ.

ಅಂಗವಿಕಲ ಪುನರ್ವಸತಿ ಕೇಂದ್ರ ಲೆಕ್ಕಕ್ಕುಂಟು, ಆಟಕ್ಕಿಲ್ಲ !


ನಂಜನಗೂಡು ತಾಲೂಕಿನ ಅಂಗವಿಕಲ ಪುನರ್ವಸತಿ ಕೇಂದ್ರ ಇದ್ದು ಇಲ್ಲದಂತಾಗಿದೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ವಿತರಣೆಯಾಗಬೇಕಿದ್ದ ಸವಲತ್ತುಗಳು ಗೋಡೌನ್ ನಲ್ಲೇ ತುಕ್ಕು ಹಿಡಿಯುತ್ತಿವೆ.ಇದರಿಂದ ವಿಕಲಚೇತನರು ತೊಂದರೆಯ ಸುಳಿಯಲ್ಲಿ ಸಿಲುಕಿದ್ದಾರೆ.

ದುಬಾರೆ ಅರಣ್ಯದಲ್ಲಿ ನಿಯಮ ಉಲ್ಲಂಘನೆ !


ದುಬಾರೆ ಮೀಸಲು ಅರಣ್ಯ ಪ್ರದೇಶದಲ್ಲಿ ರಾಜ್ಯ ಸರಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್ ಸಂಸ್ಥೆಯೇ ಶಾಶ್ವತ ಕಟ್ಟಡ ಕಾಮಗಾರಿಗೆ ಮುಂದಾಗಿರುವುದು ವಿವಾದಕ್ಕೆ ನಾಂದಿ ಹಾಡಿದೆ.

'ನೆನಪಿನ ಮರ'ಕ್ಕೆ ಬೊಗೆಸೆ ನೀರು


ರಂಗಾಯಣ ಕಲಾವಿದೆ ಶಶಿಕಲಾ ರಂಗಕರ್ಮಿಯೂ ಆದ ತನ್ನ ಪತಿ ಬಸವರಾಜ ಕೊಡಗೆ ನೆನಪನ್ನು ಹಸಿರಾಗಿಟ್ಟುಕೊಳ್ಳಲ ಕಳೆದ 7 ವರುಷದಿಂದ ರಂಗ ಚಟುವಟಿಕೆ ನಡೆಸುತ್ತಿದ್ದಾರೆ.

'ಕೌಟಿಲ್ಯ ಅರ್ಥಶಾಸ್ತ್ರ' ಪ್ರಕಾಶನಕ್ಕೆ ನೂರು ವರುಷ


'ಕೌಟಿಲ್ಯ ಅರ್ಥಶಾಸ್ತ್ರ' ಎಂಬ ದೇಶಾಡಳಿತ ಗ್ರಂಥ ಸಂಬಂಧಿ ತಾಳೆಗರಿ ಹಸ್ತಪ್ರತಿ ಸಂಪಾದನೆಗೊಂಡು ಜಗತ್ತಿಗೆ ತಿಳಿದದ್ದು ಇಂದಿಗೆ ನೂರು ವರುಷ ಹಿಂದೆ.

ಮಳವಳ್ಳಿ: ಮರಗಳ ಹನನ ನಿರಂತರ !


ಮಳವಳ್ಳಿ ತಾಲೂಕಿನ ಗಡಿ ಭಾಗದಲ್ಲಿರುವ ದಟ್ಟ ಅರಣ್ಯ ಪ್ರದೇಶಗಳಲ್ಲಿ ಮರಗಳ ಹನನ ಅವ್ಯಾಹತವಾಗಿ ನಡೆಯುತ್ತಿದೆ.