ಮಂಡ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಂಡ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ನೂರಾರು ಪಕ್ಷಿಗಳ ಮಾರಣಹೋಮ

ವಿಕ ಸುದ್ದಿಲೋಕ ಮಂಡ್ಯ
ತಾಲೂಕಿನ ವಿ.ಸಿ.ಫಾರಂ ಕೃಷಿ ವಿಶ್ವವಿದ್ಯಾನಿಲಯ ಆವರಣ ದಲ್ಲಿ ಸೋಮವಾರ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ ಬೃಹತ್ ಗಾತ್ರದ ಮರಗಳು ಧರೆಗುರುಳಿದ್ದು, ಮರಗಳಲ್ಲಿ ಆಶ್ರಯ ಪಡೆದಿದ್ದ ನೂರಾರು ಪಕ್ಷಿಗಳು ಮೃತಪಟ್ಟಿವೆ.
ಕೊಕ್ಕರೆ, ಗಿಳಿ, ಕಾಗೆಗಳ ಜಾತಿಯ ನೂರಾರು ಪಕ್ಷಿಗಳ ಪ್ರಾಣಪಕ್ಷಿಯೇ ಹಾರಿ ಹೋಗಿವೆ. ಮತ್ತೆ ಹಲವು ಪಕ್ಷಿಗಳ ರೆಕ್ಕೆ ಹಾಗೂ ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದು ನೋವು ಅನುಭವಿಸುತ್ತಿವೆ. ಇವು ಮೇಲೇಳಲಾಗದ ಸ್ಥಿತಿಯಲ್ಲಿವೆ.
ಕೃಷಿ ವಿವಿ ಆವರಣದಲ್ಲಿ ನೇರಳೆ, ನೀಲಗಿರಿ, ಸರ್ವೆ, ತೆಂಗು, ಬಾಗೆ ಸೇರಿದಂತೆ ವಿವಿಧ ಜಾತಿಯ ಹಲವು ಮರಗಳನ್ನು ಬೆಳೆಸಲಾಗಿತ್ತು. ಆದರೆ, ಸೋಮವಾರ ರಾತ್ರಿ ಬಿದ್ದ ಬಿರುಗಾಳಿ ಸಹಿತ ಮಳೆಯಿಂದಾಗಿ ಸುಮಾರು ೨೦ಕ್ಕೂ ಹೆಚ್ಚು ಮರಗಳು ಬುಡ ಸಮೇತ ಮುರಿದು ಬಿದ್ದಿವೆ.
ಮರಗಳು ನೆಲಕಚ್ಚುತ್ತಿದ್ದಂತೆ ಅವುಗಳಲ್ಲಿದ್ದ ಪಕ್ಷಿಗಳು ಅಪಾಯಕ್ಕೆ ಸಿಲುಕಿದವು. ಗೂಡುಗಳಲ್ಲಿ ಆಶ್ರಯ ಪಡೆದಿದ್ದ ಪಕ್ಷಿಗಳು ಗೂಡು ಸಹಿತ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಅಸುನೀಗಿದವು. ರಾತ್ರಿಯಿಡೀ ನೋವು ಅನುಭವಿಸಿದ ಕೆಲವು ಪಕ್ಷಿಗಳು ಮಂಗಳವಾರ ಬೆಳಗ್ಗೆ ಮೃತಪಟ್ಟವು.
ಮಂಗಳವಾರ ಬೆಳಗ್ಗೆ ನೋವಿನಿಂದ ಚೀರುತ್ತಾ ನರಳುತ್ತಿದ್ದ ಪಕ್ಷಿಗಳ ಆಕ್ರಂದನವನ್ನು ಕೇಳಿದ ಸ್ಥಳೀಯರು, ಸ್ಥಳಕ್ಕೆ ಆಗಮಿಸಿ ಕೆಲವು ಪಕ್ಷಿಗಳಿಗೆ ನೀರುಣಿಸಿ ಉಪಚರಿಸಿದ್ದಾರೆ. ಪಶು ವೈದ್ಯರು ಸಹ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದ್ದಾರೆ.
ವೈದ್ಯರು ಹಾಗೂ ಸ್ಥಳೀಯರ ಆರೈಕೆಯಿಂದ ಚೇತರಿಸಿ ಕೊಂಡ ಕೆಲ ಪಕ್ಷಿಗಳು ಹಾರಾಟ ಆರಂಭಿಸಿ, ಆಹಾರ ಹುಡುಕಿ ಕೊಂಡು ಹೊರಟವು. ತೀವ್ರ ಪೆಟ್ಟು ಬಿದ್ದು ಅಸ್ವಸ್ಥಗೊಂಡಿದ್ದ ಪಕ್ಷಿಗಳು ಹಾರಲಾಗದೆ ಅಲ್ಲೇ ಉಳಿದಿದ್ದವು.
ಗಾಯಗೊಂಡಿದ್ದ ಪಕ್ಷಿಗಳನ್ನು ಪಶು ವೈದ್ಯರು ಸಮೀಪದ ಆಸ್ಪತ್ರೆ ಹಾಗೂ ಮನೆಗಳಿಗೆ ಕೊಂಡೊಯ್ದು ಚಿಕಿತ್ಸೆ ನೀಡಿ ಉಪಚಾರ ಮುಂದುವರಿಸಿದ್ದಾರೆ. ಪಕ್ಷಿಗಳ ಕಳೇಬರಗಳು ಬಿದ್ದಿದ್ದ ದೃಶ್ಯ ಮನಃಕಲಕುವಂತಿತ್ತು.
ನೆನಪು: ಕಳೆದ ತಿಂಗಳಷ್ಟೇ ಶ್ರೀರಂಗಪಟ್ಟಣದ ಶ್ರೀ ಕಾಳಿಕಾಂಬ ರಸ್ತೆಯಲ್ಲಿ ಭಾರಿ ಗಾತ್ರದ ಆಲಿಕಲ್ಲು ಬಿದ್ದು ನೂರಾರು ಗಿಳಿ ಮರಿಗಳು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಒಂದು ವರ್ಷದ ಹಿಂದೆ ಬಸರಾಳು ಗ್ರಾಮದಲ್ಲಿ ಹೂ ಮಾರಾಟಗಾರರ ಸ್ವಾರ್ಥಕ್ಕೆ ದೊಡ್ಡ ಮರವನ್ನು ಕಡಿದಿದ್ದರಿಂದ ಅಲ್ಲೂ  ಪಕ್ಷಿಗಳ ಮಾರಣ ಹೋಮವೇ ನಡೆದಿತ್ತು. ಈಗ ಇಂತಹುದೇ ದುರ್ಘಟನೆ ವಿ.ಸಿ.ಫಾರಂನಲ್ಲಿ ಸಂಭವಿಸಿದೆ.
ಹಾನಿ: ಬಿರುಗಾಳಿ ಮತ್ತು ಮಳೆಯಿಂದಾಗಿ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಕಚೇರಿಗಳು, ವಸತಿ ಗೃಹಗಳಿಗೂ ಹಾನಿಯಾಗಿದೆ. ಕಾರ್‌ಶೆಡ್, ಬ್ಯಾಂಕ್‌ನ ಕಚೇರಿಯ ಬಾಗಿಲು ಸಹ ಹಾನಿಗೆ ಒಳಗಾಗಿದೆ. ಕಾಲೇಜು ಆವರಣದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್, ಮಿನಿ ಬಸ್‌ಗಳು ಜಖಂಗೊಂಡಿವೆ.
ಕಚೇರಿಯಲ್ಲಿ ಸಂಗ್ರಹಿಸಿದ್ದ ಜೋಳ, ಬತ್ತ, ರಾಗಿಯ ಬಿತ್ತನೆ ಬೀಜಗಳು ಮಳೆ ನೀರಿನಿಂದ ನೆನೆದು ನಷ್ಟ ಸಂಭವಿಸಿದೆ. ರಸ್ತೆ ಯಲ್ಲೇ ಮರಗಳು ಬಿದ್ದಿದ್ದರಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಮರಗಳನ್ನು ರಸ್ತೆಯಿಂದ ತೆರವುಗೊಳಿಸಿದರು.

ಬೆಸಗರಹಳ್ಳಿ ಬಸ್ ನಿಲ್ದಾಣಕ್ಕೆ ಸಮಸ್ಯೆಗಳ ಬೆಸುಗೆ


ಕೊಪ್ಪ ಹೋಬಳಿಯ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಬೆಸಗರಹಳ್ಳಿ ಬಸ್ ನಿಲ್ದಾಣ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ಜಿಲ್ಲೆ ಆಗಿ ಅಮೃತವರ್ಷ


ಮಂಡ್ಯ ಜಿಲ್ಲೆ ರಚನೆಯಾಗಿ 70 ವರ್ಷ ತುಂಬಿದ ಸಂಭ್ರಮಕ್ಕೊಂದು ಉತ್ಸವ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಕಾಳಜಿ ವಹಿಸುತ್ತಿಲ್ಲ.ಜಿಲ್ಲೆ ರಚನೆಯಾದ ಬಳಿಕ ಒಮ್ಮೆಯಷ್ಟೆ ಉತ್ಸವ ನಡೆದಿದೆ.

ಬುದ್ಧಿಮಾಂದ್ಯ ಮಕ್ಕಳಿಗೆ ಅಮಾನವೀಯ 'ಆರೈಕೆ'


ಮೂವರು ಬುದ್ಧಿಮಾಂದ್ಯ ಮಕ್ಕಳನ್ನು ನಿರ್ಲಕ್ಷಿಸಿ ಅಮಾನವೀಯ ಸ್ಥಿತಿಯಲ್ಲಿಟ್ಟ ಘಟನೆ ಮಂಡ್ಯದ ಬುದ್ಧಿಮಾಂದ್ಯ ಮತ್ತು ಅಂಗವಿಕಲರ ವಸತಿಗೃಹದಲ್ಲಿ ನಡೆದಿದೆ.

ಮಂಡ್ಯದವರು ಸಿಎಂ ಆದಾಗಲೇ ದ್ರೋಹ


ಕಾವೇರಿ ಕಣಿವೆಯವರೇ ಆದ ಮುಖ್ಯಮಂತ್ರಿಗಳು (ಎಸ್.ಎಂ.ಕೃಷ್ಣ, ಎಚ್.ಡಿ.ದೇವೇಗೌಡ, ಈಗ ಯಡಿಯೂರಪ್ಪ) ರಾಜ್ಯದ ಜನತೆಯ ವಿರೋಧವನ್ನು ಲೆಕ್ಕಿಸದೇ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ.

ಗಗನಚುಕ್ಕಿ ಜಲಪಾತೋತ್ಸವ ಇಂದಿನಿಂದ


ವಿಶ್ವವಿಖ್ಯಾತ ಶಿವನಸಮುದ್ರದಲ್ಲಿ ಶನಿವಾರದಿಂದ ಎರಡು ದಿನ ನಡೆಯುವ ಗಗನಚುಕ್ಕಿ ಜಲಪಾತೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ಮಂಡ್ಯ ಜಿಲ್ಲೆಯಲ್ಲಿ ವರುಣನ ಜೂಜಾಟ


ಕೆಆರ್ಎಸ್ ಮತ್ತು ಹೇಮಾವತಿ ಜಲಾಶಯಗಳು ಭರ್ತಿಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನೀರಾವರಿ ಪ್ರದೇಶದಲ್ಲಿ ಮುಂಗಾರು ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಆದರೆ ಖುಷ್ಕಿ ಪ್ರದೇಶದಲ್ಲಿ ಮಳೆ ಕೊರತೆಯಿಂದ ಚಿಂತೆಯ ಕಾರ್ಮೋಡ ಕವಿದಿದೆ.

ಚೀರನಹಳ್ಳಿಯಲ್ಲಿ ದಂಗೆ ಎದ್ದ ಡೆಂಗೆ


ಮಂಡ್ಯ ಸಮೀಪದ ಚೀರನಹಳ್ಳಿಯಲ್ಲಿ ಡೆಂಗೆ ದಂಗೆ ಎದ್ದಿದ್ದು, ಮೂವರನ್ನು ಬಲಿ ತೆಗೆದುಕೊಂಡಿದೆ. ಇದಕ್ಕೆಲ್ಲ ಕಾರಣ ಗ್ರಾಮದಲ್ಲಿನ ಅನೈರ್ಮಲ್ಯ, ಅಶುಚಿತ್ವವೇ ಕಾರಣ.

ಮೈಷುಗರ್ಸ್ ನೊಂದಿಗೆ ಪಿಎಸ್ಎಸ್ಕೆ ವಿಲೀನಕ್ಕೆ ಸಿದ್ಧತೆ


ದಿವಾಳಿ ಅಂಚಿನಲ್ಲಿರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್ಎಸ್ ಕೆ) ಅನ್ನು ಆರ್ಥಿಕ ಮುಗ್ಗಟ್ಟಿನಿಂದ ಮುಗ್ಗರಿಸಿರುವ ಸರಕಾರಿ ಸ್ವಾಮ್ಯದ ರೋಗಗ್ರಸ್ತ ಮೈಷುಗರ್ಸ್ ನೊಂದಿಗೆ ವಿಲೀನಗೊಳಿಸಲು ಸರಕಾರ ಚಿಂತನೆ ನಡೆಸಿದೆ. ಆದರೆ ಈ ಪ್ರಕ್ರಿಯೆಗೆ ರೈತ ಸಂಘ ವಿರೋಧ ವ್ಯಕ್ತಪಡಿಸಿದೆ.

ಮಳವಳ್ಳಿ: ಮರಗಳ ಹನನ ನಿರಂತರ !


ಮಳವಳ್ಳಿ ತಾಲೂಕಿನ ಗಡಿ ಭಾಗದಲ್ಲಿರುವ ದಟ್ಟ ಅರಣ್ಯ ಪ್ರದೇಶಗಳಲ್ಲಿ ಮರಗಳ ಹನನ ಅವ್ಯಾಹತವಾಗಿ ನಡೆಯುತ್ತಿದೆ.

ಬರಲಿ ಮಕ್ಕಳು ಶಾಲೆಗೆ ಮೊದಲ ದಿನದಿಂದಲೇ


ಶಾಲೆಯಲ್ಲಿ ಮಕ್ಕಳ ಕಲರವ ಮತ್ತೆ ನಾಳೆಯಿಂದ (ಮೇ 29)ಆರಂಭಗೊಳ್ಳಲಿದೆ. ಬೇಸಿಗೆ ರಜಾ ಮಜಾ ಅನುಭವಿಸಿದ ಸಂಭ್ರಮದಲ್ಲಿರುವ ಚಿಣ್ಣರು ಶಾಲೆಯತ್ತ ಹೆಜ್ಜೆ ಹಾಕಲು ಸಿದ್ಧರಾಗಿದ್ದಾರೆ.

ಕ್ಷೇತ್ರವಾರು ಅಂಕಿ-ಅಂಶ


ಅಭ್ಯರ್ಥಿಗಳು ಕ್ಷೇತ್ರವಾರು ಪಡೆದ ಮತಗಳ ಪಟ್ಟಿ

ಮೈಸೂರು,ಚಾ.ನಗರದಲ್ಲಿ 'ಕೈ'; ಮಂಡ್ಯದಲ್ಲಿ ದಳ ಮೇಲುಗೈ


ಲೋಕಸಭೆ ಚುನಾವಣೆ ಫಲಿತಾಂಶದ ದಿನವಾದ ಶನಿವಾರ ಕಂಡ ಚಿತ್ರಣವಿದು.

ಗಗನಮುಖಿಯಾದ ಅಗತ್ಯ ವಸ್ತು ಬೆಲೆ


ಒಂದೆಡೆ ಬಿಸಿಲು ಏರತೊಡಗಿದರೆ ಮತ್ತೊಂದೆಡೆ ಅಗತ್ಯ ವಸ್ತುಗಳು ಮತ್ತು ತರಕಾರಿಗಳ ಬೆಲೆ ಗಗನದತ್ತ ಮುಖ ಮಾಡಿವೆ.

ಸವಾಲು ನಂದು, ಜವಾಬು ನಿಂದು


ರಾಜಕೀಯವೇ ಉಸಿರಾಗಿರುವ ಮಂಡ್ಯ ಜಿಲ್ಲೆಯಲ್ಲಿ ಪ್ರತಿ ಚುನಾವಣೆಯಲ್ಲೂ ಬೆಟ್ಟಿಂಗ್ ಭರಾಟೆ ಇದ್ದೇ ಇರುತ್ತದೆ. ಈ ಬಾರಿ ಹೊಲ, ಗದ್ದೆ, ಜಾನುವಾರು, ಬೆಳೆ, ಕಾರು, ಬೈಕ್ ಅನ್ನು ಪಣಕ್ಕಿಟ್ಟಿದ್ದಾರೆ.

ಹಣ್ಣುಗಳ ಭರಾಟೆ...


ಮಾರುಕಟ್ಟೆಯಲ್ಲೀಗ ಹಲಸು, ಮಾವಿನಹಣ್ಣು, ಕರ್ಬೂಜ, ವಾಲೆ ಕಾಯಿಗಳ ಮಾರಾಟ ಭರಾಟೆಯಿಂದ ಸಾಗಿದೆ.

ಮೈಸೂರು, ಮಂಡ್ಯ, ಚಾ.ನಗರ: ಶೇ. ೬೦ ಮತದಾನ


ಮೈಸೂರು, ಮಂಡ್ಯ, ಚಾಮರಾಜನಗರ ಲೋಕಸಭೆ ಕ್ಷೇತ್ರಗಳ ಮತದಾನದ ಸ್ಪಷ್ಟ ಚಿತ್ರಣ.

ಮತದಾರರು ಬರಲಿಲ್ಲ; ಮತಪೆಟ್ಟಿಗೆ ತುಂಬಲಿಲ್ಲ


ಮೈಸೂರು, ಮಂಡ್ಯ, ಚಾಮರಾಜನಗರ ಲೋಕಸಭೆ ಚುನಾವಣೆಯ ಸ್ವಾರಸ್ಯಕರ ಸಂಗತಿಗಳ ಚಿತ್ರಣ (ಪಕ್ಕನೋಟ).