ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಮೈಸೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗ್ರಾಮೀಣ ಪ್ರದೇಶದಲ್ಲೂ ಹೆಚ್ಚುತ್ತಿದೆ ಶಿಕ್ಷಣದ ಖಾಸಗೀಕರಣ!
ಚೀ. ಜ. ರಾಜೀವ ಮೈಸೂರು
ಹಳ್ಳಿಯಲ್ಲಿರುವ ಸ್ಥಿತಿವಂತ ಕುಟುಂಬಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಲು ತುದಿಗಾಲಲ್ಲಿ ನಿಂತಿವೆಯೇ? ಗ್ರಾಮೀಣ ಪ್ರದೇಶದ ಸರಕಾರಿ ಶಾಲೆ ಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗು ತ್ತಿದೆಯೇ ?
ಕರ್ನಾಟಕ ರಾಜ್ಯ(ಗ್ರಾಮೀಣ) ಶೈಕ್ಷಣಿಕ ಸ್ಥಿತಿಗತಿಗಳ ವಾರ್ಷಿಕ ವರದಿ-ಆಸರ್(ಆನುಯಲ್ ಸ್ಟೇಟಸ್ ಆಫ್ ಎಜುಕೇಶನ್ ರಿಪೋರ್ಟ್) ಮೇಲೆ ಕಣ್ಣಾಡಿಸಿದರೆ, ಇಂಥದ್ದೊಂದು ಅನುಮಾನ ಕಾಡುತ್ತದೆ.

ಪ್ರವಾಸಿ ತಾಣಗಳಲ್ಲಿ ಜನ ಪ್ರವಾಹ
ವಿಕ ಸುದ್ದಿಲೋಕ ಮೈಸೂರು
ಮೈಸೂರಿನ ಪ್ರವಾಸಿ ತಾಣಗಳಲ್ಲಿ ಭಾನುವಾರ ಜನವೋ ಜನ. ನಾಡ ಹಬ್ಬ ದಸರಾ ಮಹೋತ್ಸವಕ್ಕೂ ಮುನ್ನವೇ ದಸರೆಯ ದಿನಗಳನ್ನು ನೆನಪಿಸುವಂಥ ಜನಜಂಗುಳಿ. ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ವಾಹನಗಳ ಸಾಲು ಸಾಲು.
ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಬಹುತೇಕರು ಪ್ರವಾಸಿ ತಾಣಗಳು, ದೇವಾಲಯಗಳಿಗೆ ಭೇಟಿ ನೀಡಿ ರಜೆಯನ್ನು ಸದುಪಯೋಗಪಡಿಸಿಕೊಂಡರು. ಮನೆ ಯಲ್ಲೇ ಶುಕ್ರವಾರ ರಂಜಾನ್, ಶನಿವಾರ ಗಣೇಶ ಚತುರ್ಥಿ ಸಂಭ್ರಮವನ್ನು ಆಚರಿಸಿದ ನಾಗರಿಕರು ವಾರಾಂತ್ಯ ದಿನವಾದ ಭಾನುವಾರ ಪ್ರವಾಸಿ ತಾಣ ಗಳತ್ತ, ವೀಕ್ಷಣಾ ಸ್ಥಳಗಳತ್ತ ಮುಖ ಮಾಡಿದ್ದರು.
ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ, ಜಗನ್ಮೋಹನ ಕಲಾ ಗ್ಯಾಲರಿ ಮತ್ತಿತರೆಡೆ ಜನಸಂದಣಿ ಕಂಡು ಬಂದಿತು. ದುಡಿಯುವ ವರ್ಗಕ್ಕೆ ಶುಕ್ರವಾರ ರಂಜಾನ್, ಶನಿವಾರ ಗಣೇಶ ಚತುರ್ಥಿ, ಭಾನುವಾರ ವಾರಾಂತ್ಯ ಒಟ್ಟಿಗೆ ಮೂರು ದಿನಗಳು ರಜೆ ಲಭಿಸಿದ ಪರಿಣಾಮವಿದು. ದಸರಾ ವಸ್ತು ಪ್ರದರ್ಶನದ ಮೈದಾನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾರು, ದ್ವಿಚಕ್ರವಾಹನಗಳು ನಿಂತಿದ್ದವು.
ಅರಮನೆ ವೀಕ್ಷಣೆಗೆ ಸ್ಥಳೀಯರು ಸೇರಿದಂತೆ ಪ್ರವಾಸಿಗಳು ತಂಡೋಪತಂಡವಾಗಿ ಆಗಮಿಸಿ ದ್ದರು. ಅಂಬಾವಿಲಾಸ ಅರಮನೆಯ ವೈಭವವನ್ನು ಕಣ್ತುಂಬಿಸಿಕೊಳ್ಳಲು ಪ್ರವೇಶಕ್ಕಾಗಿ ಜನರು ಸಾಲು ಗಟ್ಟಿ ನಿಂತಿದ್ದರು. ವಿದೇಶಿ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡುಬಂದಿತು. ಎಂದಿನಂತೆ ಪೊಲೀಸ್ ಭದ್ರತೆಯಲ್ಲಿ ಪ್ರವೇಶ ನೀಡಲಾಗುತ್ತಿತ್ತು. ಅರಮನೆ ಆವರಣದ ವಾಹನ ನಿಲ್ದಾಣದಲ್ಲಿ ವಾಹನಗಳು ಭರ್ತಿಯಾದ ಹಿನ್ನೆಲೆ ಯಲ್ಲಿ ರಸ್ತೆಯ ಅಲ್ಲಲ್ಲಿ ವಾಹನಗಳು ಸಾಲಾಗಿ ನಿಂತಿ ದ್ದವು. ಕೆಲವರು ದಸರಾ ವಸ್ತುಪ್ರದರ್ಶನದ ಎದುರಿನ ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸಿದ್ದರು.
ಈ ದಿನ ೧೮,೬೫೦ ಮಂದಿ ಭೇಟಿ ನೀಡಿದ್ದರು. ರಜೆ ದಿನಗಳಲ್ಲಿ ಈ ಪ್ರಮಾಣದಲ್ಲಿ ಜನರ ಆಗಮನ ಸಾಮಾನ್ಯ.ಕೆಲ ದಿನಗಳಲ್ಲಿ ೨೩ ಸಾವಿರಕ್ಕೂ ಹೆಚ್ಚು ಮಂದಿ ಒಂದೇ ದಿನ ಭೇಟಿ ನೀಡಿದ ಉದಾಹರಣೆ ಗಳು ಉಂಟು ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಅವರಾದಿ ತಿಳಿಸಿದ್ದಾರೆ.
ಮೃಗಾಲಯಕ್ಕೆ ದಾಖಲೆ ಆದಾಯ: ಶ್ರೀ ಚಾಮ ರಾಜೇಂದ್ರ ಮೃಗಾಲಯ ವೀಕ್ಷಣೆಗೂ ಜನರು ಕಿಕ್ಕಿರಿದು ತುಂಬಿದ್ದರು. ಬೆಳಗಿನಿಂದ ಸಾಲುಗಟ್ಟಿ ನಿಂತಿದ್ದ ಪ್ರವಾಸಿಗರು ಪ್ರಾಣಿಗಳನ್ನು ವೀಕ್ಷಿಸಿ ಸಂತಸಪಟ್ಟರು. ಕಳೆದ ಮೂರು ದಿನಗಳಿಂದಲೂ ಅಪಾರ ಸಂಖ್ಯೆಯ ವೀಕ್ಷಕರು ಮೃಗಾಲಯಕ್ಕೆ ಆಗಮಿಸಿದ್ಧಾರೆ. ಆದರೆ ಭಾನುವಾರ ದಾಖಲೆ ಪ್ರಮಾಣದಲ್ಲಿ ಜನರು ಭೇಟಿ ನೀಡಿದ್ದರು. ಒಂದೇ ದಿನ ೩೦,೦೦೦ ಮಂದಿ ಆಗಮಿಸಿ, ೯.೩೭ ಲಕ್ಷ ರೂ. ಆದಾಯ ತಂದಿರುವುದು ಮೃಗಾಲಯದ ಇತಿಹಾಸದಲ್ಲೇ ದಾಖಲೆಯಾಗಿದೆ.
ಸೆ.೧೦ ರಂದು ೬,೪೦೦ ಮಂದಿ ಆಗಮಿಸಿದ್ದು, ಆದಾಯ ೨.೧೧ ಲಕ್ಷ ರೂ.ಗಳಾದರೆ, ಸೆ.೧೧ ರಂದು ೧೯,೦೦೦ ಮಂದಿ ೬ ಲಕ್ಷ ರೂ. ಹಾಗೂ ಭಾನುವಾರ (ಸೆ.೧೨) ದಂದು ೩೦,೦೦೦ ಮಂದಿ ವೀಕ್ಷಿಸಿದ್ದು, ೯,೩೭,೮೮೦ ರೂ. ಆದಾಯ ಬಂದಿದೆ. ಈ ಹಿಂದಿನ ೮.೫೭ ಲಕ್ಷ ರೂ. ಆದಾಯವೇ ಹೆಚ್ಚಿನದಾಗಿತ್ತು ಎಂದು ಮೃಗಾಲಯದ ಕಾರ‍್ಯ ನಿರ್ವಾಹಕ ನಿರ್ದೇಶಕ ವಿಜಯ ಕುಮಾರ್ ತಿಳಿಸಿದ್ದಾರೆ.

ನಗರದ ಕಸ ಗುಡಿಸಲು ಬರಲಿವೆ ಯಂತ್ರ
ವಿಕ ಸುದ್ದಿಲೋಕ ಮೈಸೂರು
ಇನ್ನೊಂದು ತಿಂಗಳಲ್ಲಿ ‘ಹಸಿರು ನಗರ ’ದ ಸ್ವಚ್ಛತೆಗೆ ಕಸಗುಡಿಸುವ ಯಂತ್ರಗಳು ಬರಲಿವೆ. ನಂತರ,ಪ್ರಮುಖ ರಸ್ತೆಗಳ ಸ್ವಚ್ಛತಾ ಕಾರ‍್ಯಾಚರಣೆ ರಾತ್ರಿ ವೇಳೆ ನಡೆಯಲಿದೆ.
ಒಂದು ಟ್ರಕ್ ಮೌಂಟೆಡ್ ಸ್ವಚ್ಛತಾ ಯಂತ್ರ ,೨ ಪಾದಚಾರಿ ಮಾರ್ಗ ಸ್ವಚ್ಛತಾ ಯಂತ್ರಗಳ ಖರೀದಿಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು,ಅಂತಿಮ ಹಂತದ ಪ್ರಕ್ರಿಯೆ ಗಳಷ್ಟೇ ಬಾಕಿ. ಒಂದು-ಒಂದೂವರೆ ತಿಂಗಳಲ್ಲಿ ಯಂತ್ರ ಕಾರ‍್ಯಾಚರಣೆ ಆರಂಭವಾಗ ಲಿದೆ ಎಂದು ಮೇಯರ್ ಸಂದೇಶ್ ಸ್ವಾಮಿ ಹೇಳಿದ್ದಾರೆ.
ಜಿಲ್ಲಾ ಪತ್ರಕರ್ತರ ಸಂಘ ಗುರುವಾರ ಆಯೋಜಿಸಿದ್ದ ‘ಮಾಧ್ಯಮ ಸಂವಾದ’ದಲ್ಲಿ ಪಾಲ್ಗೊಂಡ ಅವರು, ಈ ಯಂತ್ರಗಳು ಗಂಟೆಗೆ ೫ ರಿಂದ ೭ ಕಿ.ಮೀ. ವರೆಗೆ ಕಸ ಗುಡಿಸುತ್ತವೆ. ರಸ್ತೆ ವಿಭಜಕ ಇದ್ದರೆ ಎರಡೂ ಕಡೆ ಪ್ರತ್ಯೇಕ ಕಾರ‍್ಯಾಚರಣೆ ಅಗತ್ಯವಾದ್ದರಿಂದ ೨ರಿಂದ ೩ ಕಿ.ಮೀ. ಸ್ವಚ್ಛತೆ ಸಾಧ್ಯ ಎಂದರು.
೧೨ ತಾಸು ಕಾರ‍್ಯ ನಿರ್ವಹಣೆ: ರಾತ್ರಿ ೯ ರಿಂದ ಶುರುವಾಗಿ ೧೨ ತಾಸು ಯಂತ್ರಗಳು ಕಾರ‍್ಯನಿರ್ವಹಿಸಲಿದ್ದು, ನಿರ್ವಹಣೆ ಹೊಣೆಯನ್ನು ಮಾಸಿಕ ಸುಮಾರು ೩ ಲಕ್ಷ ರೂ.ಗೆ ಯಂತ್ರ ನಿರ್ಮಾಣ ಕಂಪನಿಗೇ ವಹಿಸಲಾಗುತ್ತದೆ. ನಗರದ ಹೃದಯ ಭಾಗದ ಮುಖ್ಯ ರಸ್ತೆಗಳ ಜತೆಗೆ ಪ್ರಮುಖ ಬಡಾವಣೆಗಳ ಕೆಲ ವಿಶಾಲ ರಸ್ತೆಗಳೂ ಯಂತ್ರ ಸ್ವಚ್ಛತೆಗೆ ಒಳಗೊಳ್ಳಲಿವೆ ಎಂದು ವಿವರಿಸಿದರು.
ಮುಡಾ ಹೇರಿದ ಹೊರೆ: ಪಾಲಿಕೆಯಲ್ಲಿ ಬೇಕಾದಷ್ಟು ಸಮಸ್ಯೆಗಳಿದ್ದರೂ ಕುಡಿಯುವ ನೀರು,ರಸ್ತೆ ದುರಸ್ತಿ, ಬೀದಿ ದೀಪಗಳ ನಿರ್ವಹಣೆ ಮತ್ತು ಸ್ವಚ್ಛತೆ,ಕಸ ವಿಲೇವಾರಿಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಆದರೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅವೈಜ್ಞಾನಿಕ ಕ್ರಮಗಳಿಂದ ರೆವಿನ್ಯೂ ಬಡಾವಣೆಗಳ ಸಂಖ್ಯೆ ಹೆಚ್ಚುತ್ತಿರುವುದು ‘ಹೊರೆ’ಯಾಗಿ ಪರಿಣಮಿಸಿದೆ ಎಂದು ಆಕ್ಷೇಪಿಸಿದರು.
ಖಾಸಗಿ ಡೆವಲಪರ್‌ಗಳು ಬಡಾವಣೆಯನ್ನು ನಕ್ಷೆಯಂತೆ ಸಕಲ ಮೂಲಸೌಲಭ್ಯಗಳೊಂದಿಗೆ ರೂಪಿಸ ದಿದ್ದರೂ ಮುಡಾ ಶೇ.೬೦ರಷ್ಟು ನಿವೇಶನ ಹಂಚಿಕೆಗೆ ಅವಕಾಶ ನೀಡುತ್ತಿರುವುದು ಸಮಸ್ಯೆಗೆ ಕಾರಣ. ಪಾಲಿಕೆಗೆ ಹಸ್ತಾಂತರ ಆಗದಿದ್ದರೂ, ಅಲ್ಲಿಂದ ನಿರೀಕ್ಷಿತ ತೆರಿಗೆ ಬರದಿದ್ದರೂ ಮನೆ ನಿರ್ಮಿಸಿಕೊಂಡವರಿಗೆ ಮಾನವೀಯ ದೃಷ್ಟಿಯಿಂದ ನೀರು, ಯುಜಿಡಿ ಮತ್ತಿತರ ಮೂಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಮುಡಾ ಅಧಿಕಾರಿಗಳ ತಪ್ಪಿನಿಂದ ಪಾಲಿಕೆ ಕೋಟಿಗಟ್ಟಲೆ ಬೆಲೆ ತೆರಬೇಕು ಎಂದು ದೂರಿದರು.
ಮುಂದಿನ ದಿನಗಳಲ್ಲಿ ಈ ಸಂಬಂಧ ಪಾಲಿಕೆ ಕಠಿಣವಾಗಿ ವರ್ತಿಸುವುದು ಅನಿವಾರ‍್ಯ. ರೆವಿನ್ಯೂ ಬಡವಾಣೆಗಳಲ್ಲಿ ಸುಮಾರು ೨ ಲಕ್ಷ ಆಸ್ತಿಗಳನ್ನು ಗುರುತಿಸಿದ್ದು, ಕಟ್ಟುನಿಟ್ಟಾಗಿ ದುಪ್ಪಟ್ಟು ತೆರಿಗೆ ಸಂಗ್ರಹ ವಸೂಲಿ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹಸುರೀಕರಣ: ‘ನಗರ ಹಸುರೀಕರಣ’ ಆಶಯದೊಂದಿಗೆ ೬೦ ಸಾವಿರ ಸಸಿಗಳನ್ನು ಬೆಳೆಸಿದ್ದು,ನಗರದ ವಿವಿಧೆಡೆ ಸಾರ್ವ ಜನಿಕ ಸ್ಥಳ, ರಸ್ತೆ ಬದಿ ನೆಡುವ ಪ್ರಕ್ರಿಯೆ ಆರಂಭವಾಗಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ಭವಿಷ್ಯದಲ್ಲಿ ರಸ್ತೆ ಅಗಲೀಕರಣಕ್ಕೆ ಮರಗಳನ್ನು ಕಡಿಯುವುದು ಅನಿವಾರ‍್ಯವಾದರೆ ಈಗ್ಯಾಕೆ ಸಸಿ ನೆಡುವ ಶ್ರಮ ತೆಗೆದುಕೊಳ್ಳುತ್ತೀರಿ ಎಂಬ ಮಾರ್ಮಿಕ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಭವಿಷ್ಯದಲ್ಲಿ ರಸ್ತೆ ವಿಸ್ತರಣೆಗೆ ಬಾಧಕವಾಗದಂತೆ ಸಸಿ ನೆಡಲಾಗುವುದು ಎಂದು ‘ಅಭಯ’ ನೀಡಿದರು. ಸಾಲು ಮರ ಕಡಿದು ಲಲಿತ ಮಹಲ್ ರಸ್ತೆ ಅಗಲೀಕರಣ ಮಾಡುವ ವಿಷಯ ‘ಮರ ನ್ಯಾಯಾಲಯ’ದ ಮುಂದಿದ್ದು, ಸಾರ್ವಜನಿಕರು,ಪರಿಸರ ಪ್ರೇಮಿಗಳ ಅಭಿಪ್ರಾಯ ಪಡೆದು ಮುಂದಡಿ ಇಡಲಾಗುವುದು ಎಂದು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ನೆಲಮಾಳಿಗೆ ಪಾರ್ಕಿಂಗ್: ನಗರ ವಾಣಿಜ್ಯಕಟ್ಟಡಗಳ ನೆಲಮಾಳಿಗೆಗಳನ್ನು ಕಡ್ಡಾಯ ವಾಗಿ ಪಾರ್ಕಿಂಗ್‌ಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಅವರು ಹೇಳಿದರು.
ಕಡ್ಡಾಯಗೊಳಿಸುವ ಹಿಂದಿನ ಪ್ರಸ್ತಾಪ ಜಾರಿಯಾಗಿಲ್ಲ. ನೆಲಮಾಳಿಗೆಗಳನ್ನು ಗೋದಾಮು ಆಗಿ ಬಳಸಿಕೊಳ್ಳಲು ಕೆಲವರಿಗೆ ಪಾಲಿಕೆಯೇ ಅನುಮತಿ ನೀಡಿರುವುದು ಸಮಸ್ಯೆಯಾಗಿದೆ. ಆ ಅನುಮತಿಗಳನ್ನು ವಾಪಸ್ ಪಡೆಯುವ ಕುರಿತಂತೆ ಸಮಿತಿ ಚರ್ಚಿಸಿ ತೀರ್ಮಾನಿಸಲಿದೆ. ಅದಕ್ಕೆ ಮೊದಲು ನೆಲಮಾಳಿಗೆ ಹೊಂದಿದ ವಾಣಿಜ್ಯ ಕಟ್ಟಡಗಳ ಪಟ್ಟಿಯನ್ನು ತಯಾರಿಸಲಾಗುವುದು ಎಂದರು. ಸಂಘದ ಅಧ್ಯಕ್ಷ ಕೆ.ಶಿವಕುಮಾರ್, ಪ್ರಧಾನ ಕಾರ‍್ಯದಾರ್ಶಿ ಬಿ.ಎಸ್.ಪ್ರಭುರಾಜನ್ ಹಾಜರಿದ್ದರು.

‘ಕರ್ಣ ಕಠೋರ’ ವಾಹನಗಳಿಗೆ ದಂಡ
ವಿಕ ಸುದ್ದಿಲೋಕ ಮೈಸೂರು
ಕರ್ಣ ಕಠೋರ ಹಾರ್ನ್‌ನೊಂದಿಗೆ ವಾಹನ ಓಡಿಸುವವರಿಗೆ ಸಾರಿಗೆ ಇಲಾಖೆ ಬ್ರಹ್ಮಾಸ್ತ್ರ ಬೀರಿದೆ.
ಆಟೋ ರಿಕ್ಷಾ ಇಲ್ಲವೇ ದ್ವಿಚಕ್ರವಾಹನ ಓಡಿಸು ವವರು ಮಿತಿ ಮೀರಿದ ಶಬ್ದ ಮಾಡುತ್ತಾ ಹೋದರೆ ದಂಡ ಖಚಿತ.
ನಗರದಾದ್ಯಂತ ವಿವಿಧ ವರ್ಗದ ವಾಹನ ಮಾಲೀಕರು ಹಾಗೂ ವಾಹನ ಚಾಲಕರು ಎಸಗು ತ್ತಿರುವ ವಿವಿಧ ಅಪರಾಧಗಳನ್ನು ಪತ್ತೆ ಹೆಚ್ಚಿ ತಡೆಗಟ್ಟುವ ಹಾಗೂ ವಿವಿಧ ವಾಹನಗಳು, ಸಾರ್ವಜನಿಕರ ರಸ್ತೆ ಸುರಕ್ಷತೆ ಬಗ್ಗೆ ಗಮನಹರಿಸಲು ಸಾರಿಗೆ ಇಲಾಖೆ ವಿಶೇಷ ತಪಾಸಣೆಯನ್ನು ಒಂದು ತಿಂಗಳಿನಿಂದ ಚುರುಕುಗೊಳಿಸಿದೆ.
ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಸಂಚಾರ ಅವಘಡಗಳು ಹೆಚ್ಚಾಗುತ್ತಿದೆ. ಇದರಿಂದ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಪರಿಶೀಲನೆ ಭಾಗವಾಗಿ ವಾಹನಗಳ ಶಬ್ದಮಾಲಿನ ಪ್ರಮಾಣವನ್ನೂ ಪ್ರಮುಖವಾಗಿ ತಪಾಸಣೆ ಮಾಡ ಲಾಗುತ್ತಿದೆ. ಸಾರ್ವಜನಿಕ ಸಾಗಣೆ ವಾಹನಗಳಲ್ಲಿ ಆಟೋರಿಕ್ಷಾ, ಖಾಸಗಿ ಬಸ್ ಇಲ್ಲವೇ ಕಾರುಗಳಲ್ಲಿ ಮಿತಿ ಮೀರಿದ ಶಬ್ದ ಹೊರ ಹಾಕುವ ಸ್ಟಿರಿಯೋ ಬಳಸುವ ಹಾಗಿಲ್ಲ. ಅದೇ ರೀತಿ ದ್ವಿಚಕ್ರವಾಹನಗಳು ೯೦ ಡೆಸಿಬಲ್‌ಗೂ ಕಡಿಮೆ ಇರುವ ಹಾರ್ನ್ ಬಳಸಬೇಕು ಇದನ್ನು ಮೀರಿದ ಹಾರ್ನ್ ಇದ್ದರೆ ದಂಡ ಕಟ್ಟಿಸಿಕೊಳ್ಳುವ ಜತೆಗೆ ಹಾರ್ನ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಹೀಗೊಂದು ವಿಲಾಸಿ ಆಟೋ ರಿಕ್ಷಾ: ಇದು ಹಠವಾದಿಯೊಬ್ಬ ಕಲಾವಿದ ರೀತಿಯಲ್ಲಿ ಆಟೋ ರಿಕ್ಷಾ ಅಣಿಪಡಿಸಿಕೊಂಡು ರಸ್ತೆಗೆ ಇಳಿಸಿದಾಗ ಸಾರಿಗೆ ಇಲಾಖೆ ಅಧಿಕಾರಿಗೆ ಸಿಕ್ಕಿಬಿದ್ದಿದ್ದಾನೆ.
ಜೋರಾಗಿ ಆಡಿಯೋ ಹಾಕಿಕೊಂಡು ಹೊರಟಿದ್ದ ಆಟೋ ರಿಕ್ಷಾವನ್ನು ಗಮನಿಸಿದ ಸಾರಿಗೆ ಉಪ ಆಯುಕ್ತ ಸಿ.ಪಿ.ನಾರಾಯಣಸ್ವಾಮಿ ಅವರು ರಸ್ತೆಮಧ್ಯೆಯೇ ನಿಲ್ಲಿಸಿದ್ದಾರೆ. ಅದರಲ್ಲಿ ದೊಡ್ಡ ಸ್ಟೀರಿಯೋ, ಸೈಡ್‌ಬಾರ್ ಬದಲು ಚೈನ್ ಅನ್ನು ಅಳವಡಿಸಿರುವುದು ಪತ್ತೆಯಾಗಿದೆ. ಮುಂಭಾಗದ ಗ್ಲಾಸ್‌ನಲ್ಲಿ ದೊಡ್ಡ ಸ್ಟಿಕ್ಕರ್‌ಗಳು. ಹಾರ್ನ್ ಪಕ್ಕದಲ್ಲಿದ್ದ ವೈರ್. ಹೀಗೆ ಸಾರಿಗೆ ನಿಯಮವನ್ನು ಉಲ್ಲಂಘಿಸಿದ ಆಟೋರಿಕ್ಷಾವನ್ನು ಅವರು ವಶಪಡಿಸಿಕೊಂಡು ತಮ್ಮ ಕಚೇರಿಗೆ ತಂದರು. ರಿಕ್ಷಾ ಚಾಲಕನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಹೆಚ್ಚುವರಿಯಾಗಿ ಅಳವಡಿಸಿದ್ದ ವಸ್ತುಗಳನ್ನು ಸಾರಿಗೆ ಇನ್ಸ್‌ಪೆಕ್ಟರ್ ಚಾರ್ಲ್ಸ್ ವಶಪಡಿಸಿಕೊಂಡಿದ್ದಾರೆ.
ಚುರುಕುಗೊಂಡ ತನಿಖೆ: ನಗರದ ಪೂರ್ವ ಹಾಗೂ ಪಶ್ಚಿಮ ವಲಯ ಸಾರಿಗೆ ಅಧಿಕಾರಿಗಳು ಉಪ ಆಯುಕ್ತರ ಮಾರ್ಗದರ್ಶನದಲ್ಲಿ ದಾಳಿ ಚುರುಕು ಗೊಳಿಸಿದ್ದಾರೆ. ಎರಡೂ ಕಡೆಯಲ್ಲಿ ಮಿತಿಗಿಂತ ಜೋರಾಗಿ ಚಲಾಯಿಸಿದ ೨೫೯ ವಾಹನಗಳಿಂದ ೨,೧೩,೩೫೮ ರೂ. ದಂಡ ವಶಪಡಿಸಿಕೊಂಡಿದ್ದಾರೆ. ಕಳೆದ ತಿಂಗಳಲ್ಲಿ ಒಂದು ವಾರ ತಪಾಸಣೆ ನಡೆಸಿ ೧೨೫೮ ಮೊಕದ್ದಮೆ ದಾಖಲಿಸಿ ೨,೬೩,೬೩೭ ರೂ. ದಂಡ ಸಂಗ್ರಹ ಮಾಡಲಾಗಿದೆ.
ಡಿಎಲ್, ಹೆಲ್ಮೆಟ್, ವಾಹನದ ದಾಖಲೆ, ವಿಮೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಯಾಣಿಕರ ಸಾಗಣೆ, ದೋಷಪೂರಿತ ನಾಮಫಲಕ, ವಾಯು ಮಾಲಿನ್ಯ ಪ್ರಮಾಣ ಪತ್ರಗಳನ್ನು ತಪಾಸಣೆ ವೇಳೆ ಪರೀಕ್ಷಿಸಲಾಗುತ್ತಿದೆ.

ಪರಿಷತ್ ಚುನಾವಣೆ: ಶೇ.೫೩.೦೬ಮತದಾನ
ವಿಕ ಸುದ್ದಿಲೋಕ ಮೈಸೂರು
ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಬುಧವಾರ ನಡೆದ ಚುನಾವಣೆ ಯಲ್ಲಿ ಶೇ.೫೩.೦೬ ಮತದಾನ ನಡೆದಿದೆ.
ಪಟ್ಟಿಯಲ್ಲಿ ಹೆಸರಿಲ್ಲ ಎಂದು ನಗರದ ಶ್ರೀರಾಂಪುರ ಮತಗಟ್ಟೆಯಲ್ಲಿ,ಮುಖ್ಯ ಮಂತ್ರಿ‘ಕೈ ಮುಗಿಯುವ ಚಿತ್ರ’ ಇರುವ ಜಾಹೀರು ಫಲಕ ಮುಚ್ಚಲು ಆಗ್ರಹಿಸಿ ಕೆ.ಆರ್.ನಗರ ಮತಗಟ್ಟೆ ಎದುರು ಪ್ರತಿಭಟನೆ, ಮಾತಿನ ಚಕಮಕಿ ನಡೆ ದಿದ್ದರ ಹೊರತು ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು.
ಮೈಸೂರು, ಮಂಡ್ಯ, ಚಾಮರಾಜ ನಗರ ಹಾಗೂ ಹಾಸನ ಜಿಲ್ಲೆಯನ್ನೊಳ ಗೊಂಡ ಕ್ಷೇತ್ರದ ಒಟ್ಟು ೮೮,೨೮೩ ಮತ ದಾರ ಪೈಕಿ ೪೬,೮೪೭ಮಂದಿ ಹಕ್ಕು ಚಲಾ ಯಿಸಿದ್ದಾರೆ. ಶೇ.೪೬ರಷ್ಟು ಪ್ರಜ್ಞಾವಂತ ಮತದಾರರು ಜವಾಬ್ದಾರಿ ಮರೆತು ಮನೆಯಲ್ಲೇ ಕುಳಿತಿದ್ದರು. ಈ ಪೈಕಿ ಹಲವರು ಸರಕಾರ ನೀಡಿದ ‘ಸಾಂದರ್ಭಿಕ ರಜೆ’ ಸೌಲಭ್ಯವನ್ನು ಸದ್ಬಳಕೆ ಮಾಡಿ ಕೊಂಡಿದ್ದಾರೆ ಎನ್ನುವುದು ವಿಪರ್ಯಾಸ.
ಚಾ.ನಗರ ಹೆಚ್ಚು: ಚಾಮರಾಜನಗರ ದಲ್ಲಿ ಅತಿ ಹೆಚ್ಚು ಶೇ. ೬೧.೬೨ರಷ್ಟು ಮಂದಿ (ಒಟ್ಟು:೫,೮೪೫, ಚಲಾಯಿಸಿದ ವರು: ೩,೬೦೨)ಹಕ್ಕು ಚಲಾಯಿಸಿದ್ದಾರೆ. ಅತಿ ಹೆಚ್ಚು ಮತದಾರರನ್ನು ಹೊಂದಿ ರುವ ಮೈಸೂರು ಜಿಲ್ಲೆಯಲ್ಲಿ (೪೩,೭೮೪ ) ಅತಿ ಕಡಿಮೆ ಶೇ.೪೭.೯೯ರಷ್ಟು (೨೧,೦೧೭) ಮತದಾನವಾಗಿದೆ.
ಮಂಡ್ಯ ಜಿಲ್ಲೆಯ ೨೧,೧೦೬ ಮತ ದಾರ ಪೈಕಿ ೧೨,೧೪೨ ಮಂದಿ (ಶೇ.೫೭.೦೫) ಹಕ್ಕು ಚಲಾಯಿಸಿದ್ದಾರೆ. ಹಾಸನ ಜಿಲ್ಲೆಯ ೧೭,೫೪೮ ಮತದಾರರ ಪೈಕಿ ೧೦,೦೮೬ ಮಂದಿ ಮತದಾನ (ಶೇ.೫೭.೪೭ರಷ್ಟು ) ಮಾಡಿದ್ದಾರೆ.
ಆಕ್ಷೇಪ, ಪ್ರತಿಭಟನೆ: ಮತಪಟ್ಟಿ ಕುರಿತಂತೆ ನಾಲ್ಕು ಜಿಲ್ಲೆಯ ಬಹುತೇಕ ಎಲ್ಲಾ ಮತಗಟ್ಟೆಗಳ ಮುಂದೆ ತೀವ್ರ ಆಕ್ಷೇಪ ಸಾಮಾನ್ಯವಾಗಿತ್ತು. ವಿವಿಧೆಡೆ ಪ್ರತಿಭಟನೆಯೂ ನಡೆಯಿತು. ಮತ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿದೆ, ಬದುಕಿರುವ ಮತದಾರರ ಹೆಸರಿನ ಮುಂದೆ ‘ನಿಧನ’ವನ್ನು ನಮೂದಿಸ ಲಾಗಿದೆ ಎಂಬಿತ್ಯಾದಿ ಆರೋಪ, ಸ್ವಂತ ಮನೆಯಲ್ಲಿದ್ದರೂ ಪಟ್ಟಿಯ ಪ್ರಕಾರ ‘ಮನೆ ಖಾಲಿ’ಮಾಡಿಸಿದ ನೂರಾರು ನಿದರ್ಶನಗಳು ವರದಿಯಾಗಿವೆ. ಇದೇ ಕಾರಣಕ್ಕೆ ಹಕ್ಕು ವಂಚಿತರಾದವರ ಸಂಖ್ಯೆ ದೊಡ್ಡದಿತ್ತು.
ಹೊರಗೆ ಕಾವು: ಉಳಿದಂತೆ, ಎಲ್ಲಾ ಮತಗಟ್ಟೆಗಳ ಮುಂದೆ ಮತದಾರರಲ್ಲದ ರಾಜಕಾರಣಿಗಳ ಜಾತ್ರೆಯೇ ನೆರೆದಿತ್ತು. ಅಭ್ಯರ್ಥಿಗಳ ಕಟ್ಟಾ ಬೆಂಬಲಿಗರು, ಪಕ್ಷ ನಿಷ್ಠ ಕಾರ‍್ಯಕರ್ತರು ಕೊನೆಯ ಹಂತದ ಮನವೊಲಿಕೆ ಪ್ರಯತ್ನ ನಿರತರಾಗಿದ್ದರು. ಕೆಲವೆಡೆ ಜನಪ್ರತಿನಿಧಿಗಳು,ಮುಂಚೂಣಿ ಮುಖಂಡರೇ ‘ಚೀಟಿ ಹಂಚುವ’ ಚಪ್ಪರ ಗಳಡಿ ನಿಂತು ಸ್ಪರ್ಧೆಗೆ ಕಾವು ನೀಡಿ ದರು. ಕೆಲವೆಡೆ ಬೆಳಗ್ಗೆ ಸ್ವಲ್ಪ ಹೊತ್ತು ಮಳೆ ಸಿಂಚನವಾಯಿತಾದರೂ ಮತದಾನದ ಉತ್ಸಾಹವನ್ನು ಕುಂದಿಸಲಿಲ್ಲ.
ಜು.೩ಕ್ಕೆ ಎಣಿಕೆ: ಪ್ರಮುಖ ಪಕ್ಷಗಳ ನಾಲ್ವರು, ಕಠಿಣ ಸ್ಪರ್ಧೆ ನೀಡಿದ ಕೆಲವು ಪಕ್ಷೇತರರು ಸೇರಿದಂತೆ ೨೫ ಅಭ್ಯರ್ಥಿಗಳ ಹಣೆ ಬರಹ ಮತಪೆಟ್ಟಿಗೆಯಲ್ಲಿ ಅಡ ಗಿದ್ದು, ಜು.೩ರಂದು ಪ್ರಕಟವಾಗಲಿದೆ. ಅಂದು ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನಲ್ಲಿ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ನಕಲಿ ಔಷಧ ಪಿಡುಗು ತಡೆಗೆ ಕಲಾಂ ಕರೆ
ವಿಕ ಸುದ್ದಿಲೋಕ ಮೈಸೂರು
ದೇಶದಲ್ಲಿ ನಕಲಿ ಔಷಧ ಹಾವಳಿ ಹೆಚ್ಚಿದ್ದು,ಅಕ್ರಮ ತಡೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಕರೆ ನೀಡಿದ್ದಾರೆ.
ಜೆಎಸ್‌ಎಸ್ ವಿಶ್ವವಿದ್ಯಾನಿಲಯ ಮಂಗಳವಾರ ಆಯೋಜಿಸಿದ್ದ ಪ್ರಥಮ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ದೇಶದಲ್ಲಿ ಮಾರಾಟವಾಗುತ್ತಿರುವ ಶೇ.೪೦ ರಷ್ಟು ಔಷಧಗಳ ಗುಣಮಟ್ಟ, ನೈಜತೆಯ ಬಗ್ಗೆ ಅನುಮಾನಗಳಿವೆ. ತತ್ವರಹಿತ ಜನರು ನಕಲಿ ಔಷಧಗಳನ್ನು ವಾಮಮಾರ್ಗದಲ್ಲಿ ಪೂರೈಸುವ ಕಳ್ಳದಂಧೆ ನಡೆಸಿದ್ದಾರೆ ಎಂದು ಆಕ್ಷೇಪಿಸಿದರು.
ತಡೆ ಪ್ರತಿಜ್ಞೆ: ಔಷಧ, ಸೌಂದರ್ಯವರ್ಧಕ ಕಾಯಿದೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮರ್ಥವಾಗಿ ಜಾರಿಗೊಳಿಸಿ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು. ಮಾರಾಟಗಾರರೂ ಆಗಾಗ ಔಷಧಗಳ ಮೂಲವನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು. ಅಕ್ರಮ ತಡೆ ರೀತಿ ನೀತಿಗಳ ಕುರಿತು ಫಾರ್ಮಸಿ ವಿದ್ಯಾರ್ಥಿಗಳಿಗೆ ಅರಿವು ಮಾಡಿಸುವಂತ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಸಲಹೆ ನೀಡಿದರು. ‘ನಕಲಿ ಔಷಧ ಹಾವಳಿ ತಡೆಯಲು ಪ್ರಯತ್ನಿಸುತ್ತೇನೆ ’ ಎಂದು ನೂತನ ಪದವೀಧರರಿಂದ ಪ್ರತಿಜ್ಞೆಯನ್ನೂ ಮಾಡಿಸಿದರು.
ಭಾರತ ನಾಯಕನಾಗಲಿ: ಜಗತ್ತಿನ ಔಷಧ ಉದ್ಯಮದ ಒಟ್ಟು ವಹಿವಾಟು ೭೭೩ ಬಿಲಿಯನ್ ಡಾಲರ್. ಇದರಲ್ಲಿ ಭಾರತದ ಪಾಲು ೧೭ ಬಿಲಿಯನ್ ಡಾಲರ್ ಮಾತ್ರ. ೨೦೨೦ ರ ವೇಳೆಗೆ ೨೫ ಬಿಲಿಯನ್ ಯುಎಸ್ ಡಾಲರ್‌ಗೆ ಏರಿಸುವ ಗುರಿ ಇದೆ. ಈ ಪೈಕಿ ಶೇ. ೬೦ರಷ್ಟು ರಪ್ತು ಸಂಬಂಧಿ. ಈಗಲೂ, ಅಮೆರಿಕ ಉಪಯೋಗಿಸುವ ಸಸ್ಯಜನ್ಯ ಔಷಧದ ಶೇ.೪೦ ಭಾಗ ಭಾರತ ಮೂಲದ್ದು ಎಂದು ವಿವರಿಸಿದರು.
ಹತ್ತು ವರ್ಷದಲ್ಲಿ ದೇಶದ ಔಷಧ ಉದ್ಯಮದ ವಹಿವಾಟನ್ನು ನೂರು ಬಿಲಿಯನ್ ಡಾಲರ್‌ಗೆ ಏರಿಸಬೇಕು. ಪ್ರಪಂಚದ ಶೇ.೨೦ರಷ್ಟು ಉತ್ಪಾದನೆ ದೇಶದಲ್ಲಾಗುವಂತೆ ಗುರಿ ನಿಗದಿಪಡಿಸಬೇಕು.ಆ ಮೂಲಕ ಔಷಧ ಕ್ಷೇತ್ರದಲ್ಲಿ ಭಾರತ ನಾಯಕನಾಗಬೇಕು ಎಂದು ಆಶಿಸಿದರು. ಅಂಥ ಸಾಮರ್ಥ್ಯ ದೇಶಕ್ಕಿದೆ. ಕ್ಷೇತ್ರದಲ್ಲಿ ತೊಡಗಿಸಿಕೊಂಡ ಎಲ್ಲರೂ ಗುರಿ ಸಾಧನೆಗೆ ದುಡಿಯಬೇಕು. ಅಡ್ಡ ಪರಿಣಾಮ ಬೀರದ ಔಷಧ ತಯಾರಿಕೆಯತ್ತಲೂ ಗಂಭೀರ ಚಿಂತನೆ ಅಗತ್ಯ ಎಂದು ಕಿವಿಮಾತು ಹೇಳಿದರು.
ಫಾರ್ಮಸಿ ವಿಷನ್: ಕಲಾಂ ಅವರ ‘ಫಾರ್ಮಸಿ ವಿಷನ್ -೨೦೨೦’ರ ಸಲಹೆ ಸೂಚನೆಗಳ ಮುಖ್ಯಾಂಶ. ಎಚ್‌ಐವಿ, ಮಲೇರಿಯಾ, ಕ್ಯಾನ್ಸರ್‌ನಂತ ಕಾಯಿಲೆಗಳಿಗೆ ಕಡಿಮೆ ವೆಚ್ಚದ, ಗುಣಮಟ್ಟದ ಲಸಿಕೆ ತಯಾರಿಸಬೇಕು. ೪೭ ಬಿಲಿಯನ್ ಬೆಲೆಯ ೫೦ಕ್ಕೂ ಹೆಚ್ಚು ಜನಪರಿಚಿತ ಔಷಧಗಳು ೩ರಿಂದ ೫ ವರ್ಷಗಳಲ್ಲಿ ಪೇಟೆಂಟ್ ಕಳೆದಿದ್ದು, ಹೊಸ ಔಷಧಗಳ ಮೂಲಕ ಮಾರುಕಟ್ಟೆ ಪ್ರವೇಶಿಸ ಬಹುದಾದ ಸದವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು.
ದೇಶದಲ್ಲಿನ ಸಾಂಪ್ರದಾಯಿಕ ಔಷಧ ಪದ್ಧತಿ, ಗಿಡಮೂಲಿಕೆಗಳನ್ನು ಬಳಸಿ ಜಗತ್ತಿನ ಕಾಯಿಲೆಗಳಿಗೆ ಔಷಧ ಉತ್ಪಾದಿಸಲು ತೊಡಗಿಸಿಕೊಳ್ಳಬೇಕು. ಮೂಲ ಪರಿಕರಗಳನ್ನು ಬಳಸಿಕೊಂಡು ಅಧಿಕೃತ ಸಂಶೋಧನೆ ಗಳನ್ನು ನಡೆಸುವ ಮೂಲಕ ‘ನಾಯಕತ್ವ’ ಸಾಧಿಸಬೇಕು.
ಉಪದೇಶ: ಘಟಿಕೋತ್ಸವದಲ್ಲಿ ಪದವಿ ಪಡೆದ ಎಲ್ಲರೂ ‘ಎಂ.ಫಾರ್ಮ’ ವಿದ್ಯಾರ್ಥಿಗಳಾಗಿದ್ದರಿಂದ, ಔಷಧ ಉದ್ಯಮ ಮತ್ತು ವೈದ್ಯ ಕ್ಷೇತ್ರದತ್ತಲೇ ತಮ್ಮ ಭಾಷಣವನ್ನು ಕೇಂದ್ರೀಕರಿಸಿದ ಕಲಾಂ, ಜನರು ಬದುಕು,ಆರೋಗ್ಯವನ್ನು ನಿಮ್ಮ ನಂಬಿಕೆಗೆ ಒಪ್ಪಿಸುತ್ತಾರೆ. ಅವರ ಹಿತ ಕಾಯ್ದುಕೊಳ್ಳಲು ಶ್ರಮಿಸಿ. ಒಳ್ಳೆಯ ಆರೋಗ್ಯ ಸೇವೆ ನೀಡುವುದೇ ನಿಮ್ಮ ಆದ್ಯತೆಯಾಗಲಿ ಎಂದು ಕರೆ ನೀಡಿದರು.
ಇಲ್ಲದವರಿಗೆ ಸ್ಪಂದಿಸಿ: ಆಂಧ್ರಪ್ರದೇಶದ ಭೀಮಾವರಂನ ಡಾ.ಸೋಮರಾಜು, ಬಿಳಿಗಿರಿರಂಗನಬೆಟ್ಟದ ವಿವೇಕಾ ನಂದ ಗಿರಿಜನ ಕಲ್ಯಾಣ ಕೇಂದ್ರದ ಡಾ.ಸುದರ್ಶನ್, ಬೆಂಗಳೂರು ಥ್ರೊಂಬೊಸಿಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಿರ್ದೇಶಕ ಡಾ.ವಿ.ವಿ.ಕಕ್ಕೇರ್, ಕಠ್ಮಂಡುವಿನ ಮುಖ್ಯ ಧರ್ಮಗುರು ಮತ್ತು ವೈದ್ಯ ಸಂಶೋಧಕ ಚೊಯ್ಕಿ ನೈಯ್ಮ ರಿಂಪೋಂಚಿ ಅವರು ಕಾರ‍್ಯಕ್ಷೇತ್ರದಲ್ಲಿ ಸಾಧಿಸಿದ ಯಶೋಗಾಥೆಗಳನ್ನು ಹೃದಯಂಗಮವಾಗಿ ವಿವರಿಸಿದ ಕಲಾಂ, ನೀವೂ ಅವರಂತೆಯೇ ಆಗಿ.ಗ್ರಾಮೀಣ ಮತ್ತು ಗಿರಿಜನರ ಸೇವೆಗೆ ಕಂಕಣಬದ್ಧರಾಗಿ,‘ಇಲ್ಲದವರ ’ ನೋವಿಗೆ ಸದಾ ಸ್ಪಂದಿಸಿ ಎಂದು ಸಲಹೆ ನೀಡಿದರು.
ನಿಮ್ಮ ಬುದ್ಧಿ ನಿವಾರಿಸಲಿ ನೋವು: ಬುದ್ಧಿವಂತಿಕೆ ಇನ್ನೊಬ್ಬರಿಗೆ ನೋವು ನೀಡಬಾರದು ಎನ್ನುವುದು ಅವರ ಮಾತಿನ ಪ್ರಧಾನ ಆಶಯವಾಗಿತ್ತು. ‘ನನ್ನ ಬು ನಿವಾರಿಸಲಿ ನೋವು’ ಎಂಬ ವಾಕ್ಯದೊಂದಿಗೆ ಭಾಷಣ ಆರಂಭಿಸಿದ ಅವರು,ಅದೇ ಆಶಯದೊಂದಿಗೆ ಮುಗಿಸಿದರು.
‘ಸಮಾಜ ಯಾವ ಕಾರಣಕ್ಕಾಗಿ ನಿಮ್ಮನ್ನು ನೆನಪಿಸಿ ಕೊಳ್ಳಲು ಬಯಸುತ್ತೀರಿ’ ಎಂದು ಪ್ರಶ್ನಿಸಿದ ಅವರು, ನಿಮ್ಮ ಗುರಿ ಇತಿಹಾಸ ನಿರ್ಮಿಸಬಲ್ಲದ್ದಾಗಬಹುದು. ಆದ್ದರಿಂದ, ಉತ್ತಮ ಗುರಿ ಸಾಧನೆಗೆ ನಿರಂತರವಾಗಿ ಶ್ರಮಿಸಿ.ಉದಾತ್ತ ಮನೋಭಾವ, ಮೌಲ್ಯಾಧಾರಿತ ಸೇವೆ, ಸಹಿಷ್ಣುತೆ, ನಿರಂತರತೆ, ಜ್ಞಾನ ವರ್ಧನೆ ಮತ್ತಿತರ ಗುಣಗಳು ವೃತ್ತಿಗೆ ಮಾನವೀಯ ಅಂತಃಕರಣದ ಸ್ಪರ್ಶ ನೀಡಲು ನೆರವಾಗುತ್ತವೆ ಎಂದು ಹೊಸ ಪದವೀಧರರನ್ನು ಹುರಿದುಂಬಿಸಿದರು.
೧೦ಮಂದಿಗೆ ಚಿನ್ನ: ವಿವಿ ಕುಲಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ, ೧೧೯ ಎಂ.ಫಾರ್ಮ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಪೈಕಿ ೬೫ ಮಂದಿ ಖುದ್ದು ಹಾಜರಿದ್ದು ಪ್ರತಿಜ್ಞೆ ಸ್ವೀಕರಿಸಿದರು.ಉನ್ನತ ಸಾಧನೆ ಮಾಡಿದ ೧೦ಮಂದಿಗೆ ಚಿನ್ನದ ಪದಕ,ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಸಮ ಕುಲಾಧಿಪತಿ ಡಾ.ಬಿ.ಎನ್. ಬೆಟ್ಕೆರೂರ್, ಕುಲಸಚಿವ ಡಾ.ಮೃತ್ಯುಂಜಯ ಪಿ.ಕುಳೇನೂರ್, ಪರೀಕ್ಷಾಂಗ ಕುಲಸಚಿವ ಡಾ.ಆರ್. ವಿಜಯಸಿಂಹ ಮತ್ತಿತರರು ಭಾಗವಹಿಸಿದ್ದರು. ಕುಲಪತಿ ಡಾ.ಬಿ.ಸುರೇಶ್ ಸ್ವಾಗತಿಸಿ,ವರದಿ ಮಂಡಿಸಿದರು.

ಜಿ.ಪಂ.ನಲ್ಲಿ ಕಾಂಗ್ರೆಸ್‌ಗೆ ಮುಖಭಂಗ
ವಿಕ ಸುದ್ದಿಲೋಕ ಮೈಸೂರು
ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದ್ದು, ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ವಾಗಿ ಕಣಕ್ಕಿಳಿದ ಎಸ್.ಎನ್.ಸಿದ್ಧಾರ್ಥ ಅಧ್ಯಕ್ಷರಾಗಿ ಆಯ್ಕೆಯಾದರು.
ಮಂಗಳವಾರ ಜಿಲ್ಲಾ ಪಂಚಾಯಿತಿಯಲ್ಲಿ ಪ್ರಾದೇಶಿಕ ಆಯುಕ್ತರಾದ ಎಂ.ವಿ.ಜಯಂತಿ ಅಧ್ಯಕ್ಷತೆಯಲ್ಲಿ ನಡೆದ ಕೊನೆ ೮ ತಿಂಗಳ ಅವಧಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿದ್ದ ಬಸವ ರಾಜಪುರ ಸಿದ್ದಪ್ಪ ೧೭ ಮತಗಳನ್ನು ಪಡೆದು ಪರಾಭವಗೊಂಡರೆ, ಜಾ.ದಳ-ಬಿಜೆಪಿ-ಪಕ್ಷೇತರ ಸದಸ್ಯರ ೧೯ ಮತಗಳ ಜತೆಗೆ ಕಾಂಗ್ರೆಸ್‌ನ ಏಳು ಸದಸ್ಯರ ಬೆಂಬಲ ಪಡೆದು ೨೬ ಸದಸ್ಯ ಬಲದೊಂದಿಗೆ ಸಿದ್ಧಾರ್ಥ ಚುನಾಯಿತರಾದರು.
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಎಚ್.ಸಿ.ಲಕ್ಷ್ಮಣ್ ಅವರ ಪರವಾಗಿ ಯಾವುದೇ ಮತ ಬರಲಿಲ್ಲ. ಸ್ವತಃ ಲಕ್ಷ್ಮಣ್ ಅವರು ಸಿದ್ಧಾರ್ಥ ಅವರ ಪರ ಕೈ ಎತ್ತಿದರು. ಚುನಾವಣೆಗೆ ಬಂದರೂ ಒಬ್ಬ ಸದಸ್ಯ ತಟಸ್ಥರಾಗಿ ಉಳಿದರೆ ಇಬ್ಬರು ಗೈರು ಹಾಜರಾಗಿದ್ದರು.
ಕಾಂಗ್ರೆಸ್ ಹರಸಾಹಸ: ಜಿಲ್ಲಾ ಪಂಚಾಯಿತಿಯ ಕೊನೆಯ ಅವಧಿಯ ಹೊತ್ತಿಗೂ ೩೨ ಸದಸ್ಯರೊಂದಿಗೆ ಬಹುಮತ ಹೊಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಾಮಪತ್ರ ಸಲ್ಲಿಕೆವರೆಗೂ ಕುತೂಹಲ ಏರ್ಪಟ್ಟಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಡಾ.ಎಚ್.ಸಿ.ಮಹಾದೇವಪ್ಪ ಅವರು ಹತ್ತು ತಿಂಗಳ ಹಿಂದೆ ನೀಡಿದ ಮಾತಿನಂತೆ ಸಿದ್ಧಾರ್ಥ ಪರವಾಗಿದ್ದರೆ, ಮತ್ತೊಬ್ಬ ಶಾಸಕ ವಿ.ಶ್ರೀನಿವಾಸ ಪ್ರಸಾದ್ ಹಾಗೂ ಸಂಸದ ಎಚ್.ವಿಶ್ವನಾಥ್ ಅವರು ಕೃಷ್ಣರಾಜನಗರ ಭಾಗದ ದಲಿತರಿಗೆ ಅವಕಾಶ ಸಿಗಬೇಕು ಎನ್ನುವ ಪಟ್ಟು ಹಿಡಿದು ಸಿದ್ದಪ್ಪ ಅವರ ಪರವಾಗಿ ನಿಂತರು. ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಅವರು ಪ್ರಸಾದ್ ಹಾಗೂ ವಿಶ್ವನಾಥ್ ಅವರ ಒತ್ತಾಯಕ್ಕೆ ಕಟ್ಟುಬಿದ್ದು ಸಿದ್ದಪ್ಪ ಅವರಿಗೆ ಬೆಂಬಲ ಸೂಚಿಸಿದರು.
ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇಲ್ಲದ್ದನ್ನು ಅರಿತ ಜಾ.ದಳ ಹಾಗೂ ಬಿಜೆಪಿ ಸದಸ್ಯರು ತಮ್ಮ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಗೆದ್ದು ಈಗ ಬಿಜೆಪಿ ಯಲ್ಲಿ ಗುರುತಿಸಿಕೊಂಡಿರುವ ಎಚ್.ಸಿ.ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಿ ದರು. ಮಧ್ಯಾಹ್ನ ೧ರವರೆಗೆ ನಾಮಪತ್ರ ವಾಪಸಿಗೆ ಅವಕಾಶವಿದ್ದರೂ ಕಾಂಗ್ರೆಸ್ ತನ್ನ ಅಭ್ಯರ್ಥಿ ಯನ್ನು ಬದಲಿಸುವ ನಿರ್ಧಾರ ಕೈಗೊಂಡಿದ್ದ ರಿಂದ ಸಿದ್ಧಾರ್ಥ ಹಾಗೂ ಲಕ್ಷ್ಮಣ್ ಕಣದಲ್ಲಿ ಉಳಿದರು. ಮಧ್ಯಾಹ್ನ ಮೂರಕ್ಕೆ ಚುನಾವಣೆ ನಡೆದಾಗ ಸಿದ್ದಪ್ಪ ಅವರ ಪರವಾಗಿ ೧೭ ಮತಗಳು ಬಂದವು. ಆನಂತರ ಸಿದ್ಧಾರ್ಥ ಅವರ ಪರವಾಗಿ ೨೬ ಸದಸ್ಯರು ಕೈ ಎತ್ತಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಕ್ಷ್ಮಣ್ ಅವರೂ ಸಿದ್ದಾರ್ಥ ಅವರಿಗೆ ಬೆಂಬಲ ಸೂಚಿಸಿದರು. ಇದರಿಂದ ಮುಖಭಂಗ ಅನುಭವಿಸಿದ ಕಾಂಗ್ರೆಸ್ ಸದಸ್ಯರು ಹೊರ ನಡೆದರೆ, ಬಂಡಾಯ ವಾಗಿಯೇ ಕಣಕ್ಕಿಳಿದ ಸಿದ್ಧಾರ್ಥ ಗೆಲುವಿನ ನಗೆ ಬೀರಿದರು. ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅವರು ಸಿದ್ಧಾರ್ಥ ಅವರ ಗೆಲುವನ್ನು ಪ್ರಕಟಿಸಿದರು.
ಸಿದ್ದು, ಮಹಾದೇವಪ್ಪ ಕೃಪಾಕಟಾಕ್ಷ: ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಅವರ ಆಶೀರ್ವಾದದಿಂದಲೇ ಅಧ್ಯಕ್ಷನಾಗಿದ್ದೇನೆ.
ಇದು ಜಿಲ್ಲಾಪಂಚಾಯಿತಿ ನೂತನ ಅಧ್ಯಕ್ಷ ಸಿದ್ಧಾರ್ಥ ಅವರ ಪ್ರತಿಕ್ರಿಯೆ.
ನಿನಗೆ ಅಧ್ಯಕ್ಷ ಸ್ಥಾನದ ಅವಕಾಶ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಅವರಿಬ್ಬರೂ ಹೇಳಿದ್ದರು. ಅವರ ಆಶೀರ್ವಾದ ಹಾಗೂ ಬಹುತೇಕ ಸದಸ್ಯರ ಬೆಂಬಲದಿಂದಲೇ ಅಧ್ಯಕ್ಷನಾದೆ ಎಂದು ಹೇಳಿದರು.
ಒಗ್ಗಟ್ಟಿನಿಂದ ನಾನು ಆಯ್ಕೆಯಾಗುತ್ತೇನೆ ಎಂದು ನಿರೀಕ್ಷಿಸಿದ್ದೆ. ಜತೆಗೆ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗುತ್ತೇನೆ ಎಂದುಕೊಂಡಿದ್ದೆ. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಇನ್ನು ಮುಂದೆ ಒಗ್ಗಟ್ಟಿನಿಂದಲೇ ಸದಸ್ಯರನ್ನು ಕೊಂಡೊಯ್ದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಕುಕ್ಕರಹಳ್ಳಿ ಕೆರೆಯಲ್ಲಿ ನಳನಳಿಸಲಿವೆ ಹಣ್ಣಿನ ಗಿಡಗಳು
ವಿಕ ಸುದ್ದಿಲೋಕ ಮೈಸೂರು
ಪ್ರೇಮಿಗಳ ತಾಣ, ಕವಿಗಳ ಸ್ಫೂರ್ತಿಯಾಗಿರುವ ಕುಕ್ಕರಹಳ್ಳಿಕೆರೆಯಲ್ಲಿ ಇನ್ನು ಮುಂದೆ ಹಕ್ಕಿಗಳ ಕಲರವ, ದುಂಬಿಗಳ ಝೇಂಕಾರ ನಿರಂತರವಾಗಿ ಕೇಳಿ ಬರಲಿದೆ.
ನಗರದ ಯಾಂತ್ರಿಕ ಜೀವನ, ಮರಗಳ ಹನನ, ಹೆಚ್ಚು ಉಪಯೋಗವಿಲ್ಲದ ಮರಗಳಿಂದ ಕೆರೆ ಅಂಗಳದಿಂದ ದೂರವಾಗುತ್ತಿರುವ ಹಕ್ಕಿ-ಪಕ್ಷಿಗಳನ್ನು ಮರಳಿ ಕರೆತರಲು ಮುಂದಾಗಿರುವ ಮೈಸೂರು ವಿಶ್ವವಿದ್ಯಾಲಯ, ಕೆರೆಯ ಅಂಗಳದಲ್ಲಿ ಹಣ್ಣಿನ ಗಿಡ ಬೆಳೆಸಲು ಮುಂದಾಗಿದೆ. ೧೪೯ ಎಕರೆಯ ಆಯ್ದ ಸ್ಥಳದಲ್ಲಿ ಈ ಹಣ್ಣಿನ ಗಿಡ ಬೆಳೆಸುವ ಪ್ರಯತ್ನಕ್ಕೆ ಅರಣ್ಯ ಇಲಾಖೆ, ನಗರ ಪಾಲಿಕೆ ಜತೆಗೆ ಇತರೆ ಸಂಘ, ಸಂಸ್ಥೆಗಳು ಸಹಕಾರ ನೀಡಿವೆ.
ಮೈಸೂರು ವಿ.ವಿ. ವ್ಯಾಪ್ತಿಗೆ ಒಳಪಡುವ ಕುಕ್ಕರಹಳ್ಳಿ ಕೆರೆಯ ಅಂಗಳದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಜಂಗುಳಿಯಿಂದ ಏಕಾಂತತೆ ಕಳೆದುಕೊಳ್ಳುತ್ತಿದ್ದ ಪಕ್ಷಿಗಳು, ಹೆಚ್ಚು ಉಪಯೋಗವಿಲ್ಲದ ನೀಲಗಿರಿ ಮರಗಳಿಂದಾಗಿ ಜಾಗ ಖಾಲಿ ಮಾಡಲಾರಂಭಿಸಿದ್ದವು. ಇದನ್ನು ಮನಗಂಡು ‘ಕೆರೆಯ ತನ’ ಉಳಿಸುವ ಜತೆಗೆ ಹಕ್ಕಿ-ಪಕ್ಷಿಗಳು ಇಲ್ಲಿಯೇ ಇರುವಂತೆ ಮಾಡಲು ಕ್ರಮಕೈಗೊಳ್ಳಬೇಕೆಂಬ ಒತ್ತಾಯ ಪರಿಸರ ಪ್ರೇಮಿಗಳಿಂದ ಕೇಳಿ ಬಂದಿತ್ತಲ್ಲದೇ, ಇದೇ ಕಾಲಕ್ಕೆ ಸರಕಾರವೂ ಕುಕ್ಕರಹಳ್ಳಿಕೆರೆಯ ಜೀರ್ಣೋದ್ಧಾರಕ್ಕೆ ಯೋಜನೆ ಘೋಷಿಸಿದ್ದರಿಂದ ಯೋಜನೆಗೆ ಚಾಲನೆ ದೊರೆತಿದೆ.
ಕೆರೆ ಅಂಗಳದಲ್ಲಿ ಇರುವ ನೀಲಗಿರಿ ಮರಗಳಿಂದ ಪರಿಸರಕ್ಕೆ ಉಪಯೋಗ ಕಡಿಮೆಯಾಗುವುದಲ್ಲದೇ, ಆಮ್ಲಜನಕ ಸೂಸುವುದು ಅಷ್ಟಕ್ಕೆ ಅಷ್ಟೆ. ಇಂಥ ಮರಗಳಿಂದ ಪಕ್ಷಿಗಳಿಗೆ ಯಾವುದೇ ಪ್ರಯೋಜನ ಇಲ್ಲ ಎನ್ನುವುದನ್ನು ಮನಗಂಡ ಮೈಸೂರು ವಿ.ವಿ. ಇಂಥ ನೀಲಗಿರಿ ಮರಗಳನ್ನು ಬುಡ ಸಮೇತ ತೆರವುಗೊಳಿಸಿದೆ. ಈ ಜಾಗದಲ್ಲಿ ಪರಿಸರಕ್ಕೆ ಉಪಯುಕ್ತವಾಗುವ ಜತೆಗೆ ಪಕ್ಷಿಗಳಿಗೆ ಆಹಾರ ಮೂಲವಾಗುವ ಮಾವು, ನೇರಳೆ, ಬೇವು, ಹೊಂಗೆ, ಅತ್ತಿ, ಸಂಪಿಗೆ, ಹಲಸು, ಹಿಪ್ಪನೇರಳೆ ಮತ್ತಿತರರ ಮೂರು ಸಾವಿರ ಗಿಡಗಳನ್ನು ಬೆಳೆಸಲಾರಂಭಿಸಿದೆ. ಇಷ್ಟೆ ಅಲ್ಲದೇ ಪಕ್ಷಿಗಳಿಗೆ ಏಕಾಂತ ಸೃಷ್ಟಿಸುವ ಜತೆಗೆ ಕೆರೆಯ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಪುಟ್ಟ ದ್ವೀಪ ನಿರ್ಮಾಣಕ್ಕೆ ವಿ.ವಿ. ಮುಂದಾಗಿದೆ.
ಕಾರಂಜಿಕೆರೆಗೆ ಬರುವ ಪರ್ಪಲ್ ಸನ್‌ಬರ್ಡ್, ಇಗ್ರೆಟ್, ಕ್ಯಾಟಲ್ ಎಗ್ರೆಟ್, ಬ್ರಾಹ್ಮಿನಿ ಕೈಟ್, ಪಾರಿಯಾ ಕೈಟ್, ಮೂರ್ ಹೆನ್, ಸ್ಪಾಟ್ ಬಿಲ್ಲಡ್ಡ್‌ಕ್ಸ್, ಫ್ಲವರ್ ಪೆಕ್ಕರ್, ಗೋಲ್ಡನ್ ಓರಿಯಲ್, ಬಾರ್ಬೆಟ್, ಗ್ರೀನ ಬಾರ್ಬೆಟ್, ಕಾರ್ಮೊರಾಂಟ್ಸ್, ಕಿಂಗ್‌ಫಿಷರ್, ಇಂಡಿಯನ್‌ಶಾಗ್, ಸ್ಮಾಲ್ ಗ್ರೀನ್ ಬೀ ಈಟರ‍್ಸ್, ಬುಶ್‌ಲಾರ್ಕ್, ಪೈಂಟೆಡ್ ಸ್ಪಾರ್ಕ್, ಪೆಲಿಕನ್, ಕಾಮನ್ ಕ್ರೋ, ಮೈನಾ, ಔಲೆಟ್, ಗ್ರೇ ಹೆರಾನ್, ಸ್ನೇಕ್ ಬರ್ಡ್, ಸ್ಟ್ಯಾಂಡ್ ಪೈಪರ್, ಲ್ಯಾಪ್‌ವಿಂಗ್, ಈಗಲ್, ಟಾನಿಈಗಲ್, ವ್ಯಾಗ್‌ಟೈಲ್, ಚಿಟ್ಟೆಗಳು, ಮಿಡತೆ, ಕ್ಯಾಟರ್ ಪಿಲ್ಲರ್ ಮತ್ತಿತರ ಪಕ್ಷಿಗಳು ನಗರದಲ್ಲಿದ್ದ ಕುಕ್ಕರಹಳ್ಳಿ, ದಳವಾಯಿ, ಲಿಂಗಾಂಬುದಿ ಸೇರಿದಂತೆ ವಿವಿಧ ಕರೆಗಳಲ್ಲಿ ವಂಶಾಭಿವೃದ್ಧಿಯಲ್ಲಿ ತೊಡಗುತ್ತಿದ್ದವು. ಆದರೆ ಕಾರಂಜಿ ಹೊರತುಪಡಿಸಿ ಉಳಿದ ಕೆರೆಗಳು ಸೂಕ್ತ ನಿರ್ವಹಣೆ ಇಲ್ಲದೇ ಬಳಲಿರುವುದರಿಂದ ಪಕ್ಷಿಗಳ ಆಗಮನ ಕಡಿಮೆಯಾಗಿದ್ದವು.
ಹಣ್ಣಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಪಕ್ಷಿ ಸಂಕುಲದ ರಕ್ಷಣೆಗಾಗಿ ಕುಕ್ಕರಹಳ್ಳಿಕೆರೆ ಅಂಗಳದಲ್ಲಿ ಹಣ್ಣಿನ ಗಿಡ ಬೆಳೆಸುವ ಯೋಜನೆಗೆ ಸೋಮವಾರ ಚಾಲನೆ ನೀಡಲಾಯಿತು. ಕೆರೆ ಅಂಗಳದಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಮೇಯರ್ ಸಂದೇಶ್‌ಸ್ವಾಮಿ, ಗಿಡ ನೆಡುವ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಜಿ.ತಳವಾರ್, ಕುಲಪತಿ ಪ್ರೊ.ಈ.ಟಿ. ಪುಟ್ಟಯ್ಯ, ಡಿಸಿಎಫ್ ಶಾಶ್ವತಿ ಮಿಶ್ರಾ, ವಲಯಾಧಿಕಾರಿ ರಮೇಶ್, ವಿ.ವಿ. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೆಂಪಂಕೇಗೌಡ, ಕುಕ್ಕರಹಳ್ಳಿಕೆರೆ ಸಂರಕ್ಷಣೆ ಸಮಿತಿ ಸಂಚಾಲಕ ಪ್ರೊ.ಕೆ.ಎಂ.ಜಯರಾಮಯ್ಯ ಮತ್ತಿತರರು ಹಾಜರಿದ್ದರು.

ಉನ್ನತ ಶಿಕ್ಷಣ ಗುಣ, ಪ್ರಮಾಣ ವೃದ್ಧಿಗೆ ಕ್ರಮ
ವಿಕ ಸುದ್ದಿಲೋಕ ಮೈಸೂರು
ಹನ್ನೊಂದನೇ ಪಂಚವಾರ್ಷಿಕ ಯೋಜನೆ ಅಂತ್ಯ ದೊಳಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಪ್ರಮಾಣವನ್ನು ಶೇ.೧೦ರಿಂದ ೧೫ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಪ್ರೊ.ಸುಖದೇವ್ ಥೋರಟ್ ಹೇಳಿದ್ದಾರೆ.
ಜಿಲ್ಲಾ ಪತ್ರಕರ್ತರ ಸಂಘ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮ ಸಂವಾದ’ದಲ್ಲಿ ಪಾಲ್ಗೊಂಡಿದ್ದ ಅವರು, ಉನ್ನತ ಶಿಕ್ಷಣ ಸುಧಾರಣೆಗೆ ಹೇರಳ ಹಣ ಮೀಸಲಾಗಿದೆ. ಗುಣಮಟ್ಟ ಹೆಚ್ಚಳಕ್ಕೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
೨ನೇ ಅಲೆ: ೧೦ನೇ ಪಂಚವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣಕ್ಕೆ ದಕ್ಕಿದ ಅನುದಾನ ೪ ಸಾವಿರ ಕೋಟಿ ರೂ. ೧೧ನೇ ಪಂಚವಾರ್ಷಿಕ ಯೋಜನೆಗೆ (೨೦೦೭-೧೨) ಹತ್ತು ಪಟ್ಟು ಹೆಚ್ಚಿದ್ದು, ೪೮ ಸಾವಿರ ಕೋಟಿ ರೂ. ಅನುದಾನ ಮೀಸಲಾಗಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ೨ನೇ ಅಲೆ ಎದ್ದಿದೆ. ಶಿಕ್ಷಣದ ಗುಣಾತ್ಮಕತೆಗೆ ಬಾಧಕ ಆಗದಂತೆ ಗಮನ ವಹಿಸಲಾಗಿದೆ.
‘ಪ್ರಸ್ತುತ‘ ಶಿಕ್ಷಣ: ದೇಶದಲ್ಲಿ ೩೦ ಹೊಸ ಕೇಂದ್ರೀಯ ವಿವಿಗಳು ಆರಂಭವಾಗುತ್ತಿದ್ದು, ಈ ಪೈಕಿ ೧೫ ಚಟುವಟಿಕೆ ಆರಂಭಿಸಿವೆ. ೭ ಐಐಟಿ, ೭ ಐಐಎಂ, ೧ ಸಾವಿರ ಪಾಲಿಟೆಕ್ನಿಕ್‌ಗಳು ಸೇರಿ ೧,೪೬೨ ಹೊಸ ವಿದ್ಯಾಕೇಂದ್ರಗಳು ಪ್ರಾರಂಭವಾಗುತ್ತಿವೆ. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿಗೆ ಅಗತ್ಯ ಶಿಕ್ಷಣ ನೀಡಲು ಒತ್ತು ನೀಡಲಾಗುತ್ತಿದೆ.
ಹೊಣೆ ನಿಗದಿ: ಬೋಧಕರಿಗೆ ಆರಂಭದಲ್ಲೇ ಅತ್ಯುತ್ತಮ ವೇತನ (ಐಎಎಸ್ ಅಧಿಕಾರಿಗಳಿಗಿಂತ ಹೆಚ್ಚು ) ನೀಡಲಾಗುತ್ತಿದೆ. ಆಯ್ಕೆಯ ಮಾನದಂಡ ಗಳನ್ನು ಬಿಗಿಗೊಳಿಸಿದ್ದು, ಹೆಚ್ಚು ವೇತನ ನೀಡು ವುದಲ್ಲದೇ ಅದಕ್ಕೆ ತಕ್ಕಂತೆ ಕೆಲಸವನ್ನೂ ತೆಗೆಸಲಾಗುತ್ತಿದೆ. ಎಲ್ಲರಿಗೂ ಅವರದ್ದೇ ಹೊಣೆಗಾರಿಕೆ ನಿಗದಿ ಪಡಿಸಿ ಚಟುವಟಿಕೆಗಳ ಮೇಲೂ ವಿವಿ ಕಣ್ಗಾವಲು ಇಡಲಿದೆ. ಬೋಧನೆ, ಸಂಶೋಧನೆ, ಶೈಕ್ಷಣಿಕ ಆಡ ಳಿತದ ಪ್ರಗತಿ ಆಧರಿಸಿಯೇ ಬಡ್ತಿ ಮತ್ತಿತರ ಸೌಲಭ್ಯ ಕಲ್ಪಿಸಲಾಗುವುದು. ಸಂಶೋಧನೆಗಳ ಗುಣಮಟ್ಟ ವೃದ್ಧಿಗೂ ಅಗತ್ಯ ಮಾನದಂಡಗಳನ್ನು ರೂಪಿಸಲಾಗಿದೆ.
ಕೊಡುಕೊಳ್ಳುವಿಕೆ ಓಕೆ: ವಿದೇಶಿ ವಿವಿಗಳ ಪ್ರವೇಶ ಪ್ರಸ್ತಾಪ ಸಂಸತ್ ಸ್ಥಾಯಿ ಸಮಿತಿ ಮುಂದಿದೆ. ತೊಂದರೆ ಆಗುತ್ತದೆಯೋ ಇಲ್ಲವೋ ಎನ್ನುವ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ಆದರೂ, ವಿದೇಶಿ ವಿವಿಗಳ ಜತೆ ಒಡಂಬಡಿಕೆ, ಉತ್ಕೃಷ್ಟ ಜ್ಞಾನದ ಕೊಡುಕೊಳ್ಳುವಿಕೆ ಅಪಾಯವೇನಲ್ಲ.
ಆಮಿಷವಲ್ಲವೇ: ಮೈಸೂರು ವಿವಿ ನೀಡಿದ ಗೌರವ ಡಾಕ್ಟರೇಟ್ ಸ್ವೀಕರಿಸಲು ನಗರಕ್ಕೆ ಆಗಮಿ ಸಿದ್ದ ಥೋರಟ್, ಈ ಕುರಿತ ಪ್ರಶ್ನೆಯಿಂದ ಮುಜುಗರಕ್ಕೆ ಒಳಗಾದರು.ಯುಜಿಸಿ ಅಧ್ಯಕ್ಷರು- ಸದಸ್ಯರಿಗೆ ವಿವಿಗಳು ಗೌರವ ಡಾಕ್ಟರೇಟ್ ನೀಡುವುದು ‘ಆಮಿಷ’ ಒಡ್ಡಿದಂತಲ್ಲವೇ? ಎನ್ನುವುದು ಪ್ರಶ್ನೆ.
‘ವಿವಿಗಳು ಸ್ವಾಯತ್ತ ಸಂಸ್ಥೆಗಳು. ಅವುಗಳಿಗೆ ಆಯ್ಕೆಯ ಸ್ವಾತಂತ್ರ್ಯವಿದೆ. ಆಯ್ಕೆ ಸಮಿತಿ ಅರ್ಹರನ್ನು ಆರಿಸುತ್ತದೆ. ಯಾವುದೋ ಒಂದೆರಡು ಉದಾಹರಣೆಗಳನ್ನು ಮುಂದಿಟ್ಟುಕೊಂಡು ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಲಾಗದು’ ಎನ್ನುವುದು ಥೋರಟ್ ಸಮಜಾಯಿಷಿ.
ರಾಜ್ಯ ಅನುದಾನ ಹೆಚ್ಚಿಸಲಿ: ಕೆಲ ವಿವಿಗಳು ರ‍್ಯಾಂಕ್ ವಿಜೇತರಿಗೆ ಚಿನ್ನದ ಪದಕದ ಬದಲು ೬೦ ರೂ.ಗಳ ಚೆಕ್ ನೀಡುತ್ತಿವೆ. ಇದು ವಿವಿಗಳ ಆರ್ಥಿಕ ಸಂಕಷ್ಟಕ್ಕೆ ನಿದರ್ಶನವೇ ಎಂಬ ಪ್ರಶ್ನೆಗೆ, ‘ವಿವಿಗಳಿಗೆ ಯುಜಿಸಿ ಶೇ.೪೦,ರಾಜ್ಯ ಸರಕಾರ ಶೇ.೬೦ ಅನುದಾನ ನೀಡುತ್ತಿದೆ. ಯುಜಿಸಿ ಅನುದಾನ ಪ್ರಮಾಣವನ್ನು ೩ ಪಟ್ಟು ಹೆಚ್ಚಿಸಿದೆ. ಅಂತೆಯೇ ರಾಜ್ಯ ಸರಕಾರವೂ ತನ್ನ ಪಾಲನ್ನು ಹೆಚ್ಚಿಸಬೇಕು’ಎಂದು ಸಲಹೆ ನೀಡಿದರು.
ಮೂಗು ತೂರಿಸುವುದಿಲ್ಲ: ಖಾಸಗಿ ವಿವಿಗಳು ಮೀಸಲು ನಿಯಮ ಪಾಲಿಸದ ಕುರಿತ ಪ್ರಶ್ನೆಗೆ, ‘ ಖಾಸಗಿ ವಲಯ ಮೀಸಲು ನಿಯಮ ಪಾಲಿಸ ಬೇಕೆನ್ನುವ ಕುರಿತು ಯಾವುದೇ ಕಾನೂನು ಇಲ್ಲ. ಆದ್ದರಿಂದ ಈ ವಿಷಯದಲ್ಲಿ ಯುಜಿಸಿ ಮೂಗು ತೂರಿಸದು’ ಎಂದು ಪ್ರತಿಕ್ರಿಯಿಸಿದರು. ಸಂಘದ ಅಧ್ಯಕ್ಷ ಕೆ.ಶಿವಕುಮಾರ್, ಪ್ರಧಾನ ಕಾರ‍್ಯದರ್ಶಿ ಬಿ.ಎಸ್.ಪ್ರಭುರಾಜನ್, ಉಪಾಧ್ಯಕ್ಷ ರಾಜೇಶ್ವರ್ ಹಾಜರಿದ್ದರು.

ರಂಗಾಯಣದಲ್ಲಿ ‘ಮಕ್ಕಳ ಮೇಳ’ದ ಕೊನೇ ದಿನ
ವಿಕ ಸುದ್ದಿಲೋಕ ಮೈಸೂರು
ನಾಟಕ, ಸಂಗೀತ, ಗೀತೆಗಳ ಗುಂಗಿನಲ್ಲಿ ಮುಳುಗೇಳುವ ರಂಗಾಯಣ, ಕಲಾಮಂದಿರದ ಹೊರ ಅಂಗಳ ಭಾನುವಾರ ದಂದು ಎಂದಿನಂತಿರಲಿಲ್ಲ. ಇಡೀ ಆವರಣದಲ್ಲಿ ಹಳ್ಳಿ ಸಂತೆ ವಾತಾವರಣ ಯಥಾವತ್ ಅನಾವರಣಗೊಂಡಿತು !
ಮಕ್ಕಳ ಗಲಗಲ ಸದ್ದು... ಗಿಜಿಗಿಜಿ ಗಲಾಟೆ... ಕಾಲುಗಳಿಗೆ ತೊಡರುವ ಮಕ್ಕಳ ನಡುವೆಯೇ ದಾರಿ ಮಾಡಿಕೊಂಡು ಸಂತೆ ಬೀದಿಯಲ್ಲಿ ನಗು ನಗುತ್ತಲೇ ಸಾಗಿದ ಹಿರಿಯರು... ಕುಳಿತ ಲ್ಲಿಂದ ಎದ್ದು ಬಂದು ಗಿರಾಕಿಗಳಿಗೆ ಮುಗಿಬಿದ್ದ ಪುಟಾಣಿ ವ್ಯಾಪಾರಿಗಳು... ಎತ್ತ ಹೋಗುವುದೆಂದು ಅರಿಯದೇ ದಿಕ್ಕೆಟ್ಟು ನಿಂತ ಗ್ರಾಹಕರು... ಆ ಅಪ್ರಬುದ್ಧ ವ್ಯಾಪಾರಿಗಳ ಹಿಂದೆ ನಿಂತು ವ್ಯಾಪಾರದ ಒಳಗುಟ್ಟು ಹೇಳಿಕೊಡುತ್ತಿದ್ದ ಹೆತ್ತವರು...
ಅದು ‘ದೇಸಿ ಚಿಣ್ಣರ ಮೇಳ’ದ ಕೊನೇ ದಿನದ ಸಂಭ್ರಮ. ಮಕ್ಕಳಿಗೇ ಮೀಸಲಾದ ‘ಚಿಣ್ಣರ ಸಂತೆ’. ಅಲ್ಲಿ ಅವರೇ ವ್ಯಾಪಾರಿಗಳು. ಮಕ್ಕಳೊಡನೆ ಪೋಷಕರೂ ಗ್ರಾಹಕರಾಗಿ ದ್ದರು. ಮರದ ನೆರಳಿನಲ್ಲಿ ವ್ಯಾಪಾರ ಭರಾಟೆ ಸಾಗಿತ್ತು.
ಅಂಕಲ್, ಆಂಟಿ... ಗರ‍್ಮಗರ‍್ಮ ಕಡ್ಲೆಪುರಿ ತಗೊಳ್ಳಿ, ನಾಲಗೆ ಚಪ್ಪರಿಸುವ ಚಕ್ಕುಲಿ, ಕೋಡುಬಳೆ, ರೊಟ್ಟಿ ಚೆಟ್ನಿ ತಗೊಳ್ಳಿ, ನಿಂಬೆ ಜ್ಯೂಸ್ ತುಂಬಾ ಚೆನ್ನಾಗಿದೆ, ಬಟ್ಟೆ ಬ್ಯಾಗ್ ಕೇವಲ ೧೫ ರೂ... ಇಲ್ ಬನ್ನಿ ಅಂಕಲ್... ಎನ್ನುತ್ತಾ ಕೂಗಿ ಕರೆದದ್ದೇ ಕರೆದದ್ದು. ಸ್ಯಾರಿ ಉಟ್ಟ ಪುಟ್ಟ ಪೋರಿ ಸೊಪ್ಪೋ ಸೊಪ್ಪೋ.. ಎಂದು ಸಾರುತ್ತಾ ಮಾರುತ್ತಿದ್ದದ್ದು ಗಮನ ಸೆಳೆಯಿತು. ಕಡ್ಲೇಕಾಯಿ ಮಾರಾಟವೂ ಜೋರಿತ್ತು. ತಮ್ಮ ಮಕ್ಕಳೊಳಗಿನ ‘ವ್ಯಾಪಾರಿ’ಯ ಕಂಡು ಅಚ್ಚರಿ, ಖುಷಿ ಹೆತ್ತವರಿಗೆ.
ಈ ಸಂತೆಯೊಳಗೆ ಏನಿಲ್ಲ: ನೀರು ಮಜ್ಜಿಗೆ, ಕೋಸುಂಬರಿ, ಸೌತೆಕಾಯಿ, ಪಾನಿಪೂರಿ, ಕಡ್ಲೆಪುರಿ, ಚುರುಮುರಿ, ಮಂಡಕ್ಕಿ, ಅಕ್ಕಿರೊಟ್ಟಿ, ಮಸಾಲೆ ಮಾವಿನಕಾಯಿ, ಕೊಬ್ಬರಿ ಮಿಠಾಯಿ, ಚಾಕಲೇಟ್, ಕೋಡುಬಳೆ, ಚಕ್ಕುಲಿ, ನಿಪ್ಪಟ್ಟು, ರವೆಉಂಡೆ, ಪ್ರೂಟ್ ಸಲಾಡ್, ತೆಂಗಿನಕಾಯಿ, ಸೊಪ್ಪು-ತರಕಾರಿ, ಮಾವು, ಹಲಸು, ಬಾಳೆ ಹಣ್ಣು, ಹೂವು, ಆಟಿಕೆಗಳು, ಪುಸ್ತಕಗಳು, ಬಳೆ, ರಿಬ್ಬನ್, ಕೊರಳ ಸರಗಳು, ಮಣ್ಣಿನ ಹಣತೆಗಳು, ಮಣ್ಣಿನ ಗೊಂಬೆ ಗಳು... ಹೀಗೆ ತರೇಹವಾರಿ ವಸ್ತುಗಳ ಅಲ್ಲಿ ಲಭ್ಯವಿದ್ದವು.
ಕೆಲ ಮಕ್ಕಳು ರೆಡಿಮೇಡ್ ತಿನಿಸುಗಳನ್ನು ಅಂಗಡಿಯಿಂದ ತಂದು ಮಾರಾಟಕ್ಕಿಟ್ಟಿದ್ದರೆ, ಇನ್ನು ಹಲವರು ಮನೆಯಲ್ಲಿ ಅಮ್ಮ ತಯಾರಿಸಿಕೊಟ್ಟಿದ್ದ ತಿನಿಸುಗಳನ್ನು ಮಾರುತ್ತಿದ್ದರು. ಮಕ್ಕಳು ಗಿರಾಕಿಗಳನ್ನು ಕಾಡಿ, ಬೇಡಿ, ಕೈಹಿಡಿದು ಎಳೆದೊಯ್ದು ವ್ಯಾಪಾರ ಮಾಡಿಸಿದ್ದು ಕಂಡು ಬಂದಿತು. ಬಿದಿರಿನ ಬುಟ್ಟಿ ಯಲ್ಲಿ ಸ್ಕೆಚ್ ಪೆನ್ನು, ಪೆನ್ಸಿಲ್, ರಬ್ಬರ್ ಇಟ್ಟುಕೊಂಡು ಮಾರುತ್ತಿದ್ದಳು ಪುಟಾಣಿಯೊಬ್ಬಳು. ತಮ್ಮ ಪದಾರ್ಥಗಳು ಮಾರಾಟವಾಗಿ ಕೈಗೆ ಕಾಸು ಬರುತ್ತಿದ್ಧಂತೆ ಮುಖವರಳಿಸಿ ನಿಲ್ಲುವ ಅವರ ಸಂಭ್ರಮ ಅವರ್ಣೀಯ.
‘ಅಮ್ಮ ತಾಯಿ...’ ಭಿಕ್ಷುಕರು: ಭಿಕ್ಷೆ ಬೇಡುವ ಆಧುನಿಕ ಭಿಕ್ಷುಕರೂ ಅಲ್ಲಿದ್ದರು. ಹರಕಲು ಪ್ಯಾಂಟ್, ಟೀ ಶರ್ಟ್ ತೊಟ್ಟ ಅನನ್ಯ ಮತ್ತವನ ಗೆಳೆಯ ಭಿಕ್ಷೆಗಿಳಿದಿದ್ದರು. ಎರಡೂ ಕಾಲಿಲ್ಲದ (ನಕಲಿ)ವಿಕಲಚೇತನನೊಬ್ಬ ಪುಟ್ಟ ನಾಲ್ಕು ಚಕ್ರ ಗಳಿದ್ದ ಹಲಗೆಯ ಮೇಲೆ ತೆವಳುತ್ತಲೇ ಸಾಗಿ, ವ್ಯಾಪಾರಿಗಳು ಕನಿಕರ ತೋರುವಂತೆ ಮಾಡಿದ. ಪಕ್ಕದಲ್ಲೇ ಮುತ್ತುರಾಜ್ ಟೂರಿಂಗ್ ಟಾಕೀಸ್‌ನ ಟೆಂಟ್ ತಲೆಎತ್ತಿ ಸಿನಿಮಾ ಪ್ರದರ್ಶಿಸಿತು. ಶಿಬಿರದ ಮಕ್ಕಳ ಆಟೋಟಗಳನ್ನು ಚಿತ್ರದಲ್ಲಿ ತೋರಿಸಲಾಯಿತಲ್ಲದೇ, ನಡುವೆ ರಾಜಕುಮಾರ್ ಚಿತ್ರದ ತುಣುಕುಗಳೂ ಪ್ರದರ್ಶನಗೊಂಡಿತು. ಅಪ್ಪ, ಅಮ್ಮ ನಿಂದ ಕಾಸು ಪಡೆದ ಮಕ್ಕಳು ಸಿನಿಮಾ ನೋಡಿ ಖುಷಿಪಟ್ಟರು.
ರಂಗಾಯಣದ ಪ್ರಭಾರ ನಿರ್ದೇಶಕ ಕಾ.ತ. ಚಿಕ್ಕಣ್ಣ, ಜಾನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇಗೌಡರು ಸಂತೆಯಲ್ಲೊಂದು ಸುತ್ತು ಬಂದು ಮಕ್ಕಳ ವ್ಯಾಪಾರ ವೈಖರಿಗೆ ತಲೆದೂಗಿದರು. ‘ಮುರ್ಖರ ಪೆಟ್ಟಿಗೆಯೊಳಗೆ ಕಳೆದು ಹೋಗ ಬಹುದಾಗಿದ್ದ ಸಮಯವನ್ನು ಮಕ್ಕಳು ಈ ರೀತಿಯ ಕ್ರಿಯಾ ಶೀಲ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದು ಖುಷಿಯಾ ಗಿದೆ’ ಎನ್ನುವುದು ಪೋಷಕರ ಅನಿಸಿಕೆಯಾಗಿತ್ತು.
ಅಂಬಾರಿ ಆನೆ ಸವಾರಿ
ಬೆನ್ನ ಮೇಲೆ ಚಿನ್ನದಂಬಾರಿ ಹೊತ್ತ ಆನೆ ವೇಷಧಾರಿಗಳು ಸಂತೆಗೆ ಬಂದು ವ್ಯಾಪಾರಿಗಳು ನೀಡುವ ತಿಂಡಿ ತಿನಿಸುಗಳಿಗಾಗಿ ಸೊಂಡಿಲಿನಲ್ಲಿ ಚಾಚಿದರು. ಸಿಕ್ಕಿದ್ದನ್ನು ಬಾಚಿ ದರು. ಮಕ್ಕಳು ಕಣ್ಣರಳಿಸಿ ನೋಡು ವಂತೆ ಮಾಡಿತು. ಮೈಮ್ ರಮೇಶ್ ನೇತೃತ್ವದ ತಂಡ ವೊಂದು ನವಿಲು, ಕುಕ್ಕುಟ, ಆನೆ ಮುಖವಾಡ ತೊಟ್ಟು, ಪುರಾಣದ ಮಂತ್ರಿ ಮಹೋದಯರ ಧಿರಿಸು ಉಟ್ಟು, ಭಾಜಾ ಭಜಂತ್ರಿ ಹಿಡಿದು ತಮಟೆ ಬಾರಿಸುತ್ತಾ ಸಂತೆ ಸುತ್ತಿ ರಂಜಿಸಿತು.
ಪರಿಸರ ಪ್ರೇಮ
ಬಟ್ಟೆ ಬ್ಯಾಗ್ ಮಾರುತ್ತಿದ್ದ ಸಂಜಯ್ ಪರಿಸರ ಉಳಿಸುವಂತೆ ಮನವಿ ಮಾಡುವ ಕರಪತ್ರಗಳನ್ನು ಹಂಚುತ್ತಾ ತನ್ನ ಪರಿಸರ ಪ್ರೇಮ ಮೆರೆದ. ಪ್ಲಾಸ್ಟಿಕ್ ಕೈಚೀಲ ತ್ಯಜಿಸಿ -ಬಟ್ಟೆ ಚೀಲ ಬಳಸಿ, ಪ್ಲಾಸ್ಟಿಕ್ ಕೈಚೀಲ ತ್ಯಜಿಸಿ- ಪರಿಸರ ಉಳಿಸಿ... ಇತ್ಯಾದಿ ನೀತಿಪಾಠವಿದ್ದ ಕರ ಪತ್ರದ ಕೊನೆಯಲ್ಲಿ -‘ಈ ಸುದ್ದಿ ಯನ್ನು ಓದಿ ೯ ಜನಕ್ಕೆ ಕೊಡಿ. ಸದ್ಯದಲ್ಲೇ ನಿಮಗೆ ಭೂಮಾತೆ ಒಳ್ಳೆಯದನ್ನು ನೀಡುತ್ತಾಳೆ. ತಪ್ಪಿದ್ದಲ್ಲಿ ತೊಂದರೆ ಖಚಿತ, ಎಚ್ಚರವಾಗಿರಿ’ ಎನ್ನುವ ಒಕ್ಕಣೆಯೂ ಇದ್ದದ್ದು ಗಮನಾರ್ಹ.

ಮೊಸಳೆ ಸಂತಾನ ‘ಹರಣ’
ವಿಕ ಸುದ್ದಿಲೋಕ ಮೈಸೂರು
‘ಆತುರಗೆಟ್ಟ’ ಜನರ ಅನಗತ್ಯ ಆತಂಕದಿಂದ ಮೊಸಳೆ ಸಂತಾನ ವೃದ್ಧಿಗೆ ಕಂಟಕ !
ಹೌದು,ಕುಕ್ಕರಹಳ್ಳಿ ಕೆರೆ ಅಂಗಳದಲ್ಲಿ ಹಲವು ‘ಮೊಸಳೆ ’ಗಳು ಮೊಟ್ಟೆಯಿಂದ ಹೊರ ಬರುವ ಮೊದಲೇ ಮಣ್ಣು ಪಾಲಾಗಿವೆ. ಕಳೆದ ವಾರ ಕೆರೆ ಅಂಗಳದಲ್ಲಿ ವಾಯು ವಿಹಾರಿಗಳು ‘ಸೃಷ್ಟಿಸಿದ’ ಆತಂಕದ ‘ಗಾಳಿ’ ಇದಕ್ಕೆ ಕಾರಣ.
ಸೋಮವಾರ ಮತ್ತು ಮಂಗಳ ವಾರ ಕೆರೆ ಅಂಗಳದಲ್ಲಿ ಏಳೆಂಟು ಮೊಟ್ಟೆಗಳು ಒಡೆದ ಸ್ಥಿತಿಯಲ್ಲಿ ಕಾಣಿಸಿವೆ. ಇನ್ನೂ ಹಲವು ಮಣ್ಣಿನೊಳಗೆ ಇರುವ ಸಾಧ್ಯತೆಯೂ ಇದೆ. ಕಳೆದ ಗುರು ವಾರ ಬೆಳಗ್ಗೆ ಕಾಣಿಸಿಕೊಂಡಿದ್ದ ಮೊಸಳೆ ಮೊಟ್ಟೆ ಇಡಲು ದಂಡೆಗೆ ಬಂದಿತ್ತು ಎನ್ನುವುದು ಇದರಿಂದ ಖಚಿತವಾಗಿದೆ.
ಉಪಟಳ: ಮೊಟ್ಟೆ ಇಟ್ಟು, ತನ್ನ ಪಾಡಿಗೆ ಮಲಗಿದ್ದ ಮೊಸಳೆಯನ್ನು ಕಂಡ ಬೆಳಗಿನ ವಾಯು ವಿಹಾರಿಗಳು ‘ಪ್ರಾಣವೇ ಹೋದಂತೆ ’ವರ್ತಿಸುವ ಮೂಲಕ ಅದರ ಸಂತಾನಕ್ಕೆ ಸಂಚಕಾರ ತಂದಿದ್ದಾರೆ. ಕುತೂಹಲಿ ಜನ ಮತ್ತು ಕಿಡಿಗೇಡಿಗಳ ೨ ತಾಸಿನ ‘ಉಪಟಳ ’ದ ನಂತರ ಕೆರೆಯ ನೀರಿಗೆ ಮರಳಿದ್ದ ಮೊಸಳೆ ಮತ್ತೆ ಮೇಲೆ ಬರುವ ಧೈರ್ಯ ತೋರಿದಂತಿಲ್ಲ.
ಬೇಲಿ,ರಕ್ಷಣೆ: ಅದಾಗಿ ಮೂರು ದಿನಕ್ಕೆ, ಈ ಪ್ರದೇಶದಲ್ಲಿ ಏಳೆಂಟು ಮೊಟ್ಟೆಗಳು ಒಡೆದ ಸ್ಥಿತಿಯಲ್ಲಿ ಗೋಚರಿಸಿವೆ.ವಾಸನೆ ಹಿಡಿದ ಮುಂಗುಸಿಗಳು ಮಣ್ಣಿನಿಂದ ಕೆಲ ಮೊಟ್ಟೆಗಳನ್ನು ಹೊರಗೆಳೆದು ತಿಂದಿರಬಹುದು ಎನ್ನಲಾಗಿದೆ. ಎಚ್ಚೆತ್ತ ಮೈಸೂರು ವಿವಿ ಆಡಳಿತ,‘ಮೊಸಳೆ ಜಾಡಿನ ’ಸುತ್ತ ತಂತಿ ಬೇಲಿ ನಿರ್ಮಿಸಿ ಉಳಿದ ಮೊಟ್ಟೆಗಳನ್ನು ಸಂರಕ್ಷಿ ಸುವ ಪ್ರಯತ್ನ ಆರಂಭಿಸಿದೆ.
ನಿಗಾವಹಿಸುವಂತೆ, ಹುಲ್ಲು ಕತ್ತರಿಸಲು ಕೆರೆಗೆ ಇಳಿ ಯುವ ಜನರಿಗೆ ಎಚ್ಚರಿಕೆ ನೀಡುವಂತೆ ಕಾವಲು ಗಾರರಿಗೆ ನಿರ್ದೇಶನ ನೀಡಲಾಗಿದೆ.
ಕೆರೆಯ ಸಮಗ್ರ ಅಭಿವೃದ್ಧಿ ಸಂದರ್ಭ ‘ಮೊಸಳೆ ಪಾರ್ಕ್’ ನಿರ್ಮಿಸುವ ಇಂಗಿತ ವನ್ನೂ ವಿವಿ ವ್ಯಕ್ತಪಡಿಸಿದೆ.

ಎಲ್ಲೆಲ್ಲೂ ಬೆಂಕಿ
ನೂರಾರು ಎಕರೆ ಕುರುಚಲು ಕಾಡು ಬೆಂಕಿಗೆ ಆಹುತಿ
ವಿಕ ಸುದ್ದಿಲೋಕ ಯಳಂದೂರು
ಬಿಳಿಗಿರಿರಂಗನಬೆಟ್ಟದ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ವ್ಯಾಪಿಸಿದ್ದು, ನೂರಾರು ಎಕರೆ ಕುರುಚಲು ಕಾಡು ಬೆಂಕಿಗೆ ಆಹುತಿಯಾ ಗಿದೆ.
ಬಿಆರ್‌ಟಿ ವನ್ಯಧಾಮದ ಕೃಷ್ಣಯ್ಯನಕಟ್ಟೆ ಹಾಗೂ ಸಾಲುಬೆಟ್ಟ, ಜೇನುಗುಡ್ಡ ಪ್ರದೇಶ ದಲ್ಲಿ ಏಕ ಕಾಲದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಂದೇ ವೇಳೆ ಮೂರು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದರಿಂದ ಇದು ಕಿಡಿಗೇಡಿ ಕೃತ್ಯವೆಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾಳ್ಗಿಚ್ಚು ಸ್ವಾಭಾವಿಕವಾಗಿದ್ದರೆ ಒಂದೇ ಪ್ರದೇಶದಿಂದ ಹರಡುತ್ತಿತ್ತು. ಆದರೆ ಈಗ ಮೂರು ಕಡೆಗಳಿಂದ ಬೆಂಕಿ ವ್ಯಾಪಿಸಿಕೊಂಡು ಬರುತ್ತಿದೆ. ಹೀಗಾಗಿ ಇದು ಕಿಡಿಗೇಡಿಗಳ ಕೃತ್ಯ. ಬೆಂಕಿ ಕಾಣಿಸಿಕೊಂಡ ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಿಆರ್‌ಟಿ ವನ್ಯಧಾಮದ ಎಲ್ಲ ಸಿಬ್ಬಂದಿಯನ್ನು ಕರೆಸಿಕೊಂಡು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುಮಾರು ೨೦೦ಕ್ಕೂ ಹೆಚ್ಚು ಮಂದಿಯನ್ನು ಬೆಂಕಿ ನಂದಿಸುವ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ.
ಕುರುಚಲು ಕಾಡು ಮಾತ್ರ: ಬೆಂಕಿ ಭಾರಿ ಗಾತ್ರದ ಮರಗಳಿಗೆ ವ್ಯಾಪಿಸಿಲ್ಲ. ಒಣಗಿರುವ ಹುಲ್ಲು, ಲಾಂಟೆನಾ ಸೇರಿದಂತೆ ಕುರುಚಲು ಗಿಡಗಳು ಮಾತ್ರ ಹೊತ್ತಿ ಉರಿಯುತ್ತಿವೆ. ಮರಗಳು ಇನ್ನೂ ಹಸಿರಿರುವ ಕಾರಣ ಬೆಂಕಿ ಮೇಲ್ಭಾಗಕ್ಕೆ ವ್ಯಾಪಿಸಿಲ್ಲ. ಒಟ್ಟಾರೆ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಹರಡಿ ಕೊಂಡಿದೆ. ಸಿಬ್ಬಂದಿ ನಿರಂತರವಾಗಿ ಹಸಿ ಸೊಪ್ಪಿನಿಂದ ಬೆಂಕಿಯನ್ನು ಬಡಿದು ನಂದಿಸುವ ಕಾರ್ಯದಲ್ಲಿ ನಿರತರಾಗಿರುವ ಕಾರಣ ಕ್ರಮೇಣ ಹತೋಟಿಗೆ ಬರುತ್ತಿದೆ.
ಅಪರೂಪದ ಸಂಕುಲ: ಬಿಆರ್‌ಟಿ ವನ್ಯಧಾಮ ದಲ್ಲಿ ಅಪರೂಪದ ಸಸ್ಯ ಹಾಗೂ ಪ್ರಾಣಿ ಸಂಕುಲವಿದೆ. ಔಷಧ ಗುಣದ ಸಸ್ಯಗಳಿವೆ. ಅದೃಷ್ಟವಶಾತ್ ಬೆಂಕಿ ಪ್ರಾಣಿಗಳು ಹಾಗೂ ಅಪರೂಪದ ಸಸ್ಯ ಸಂಕುಲ ಇರುವ ಕಡೆಗೆ ವ್ಯಾಪಿಸಿಲ್ಲ. ಅಲ್ಲಿಗೆ ಹರಡುವುದನ್ನು ತಡೆಯಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿಶ್ವಜಿತ್ ಮಿಶ್ರಾ, ಕೆ. ಗುಡಿ ಆರ್‌ಎಫ್‌ಒ ಶಶಿಧರ್ ಸೇರಿದಂತೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ತಾವು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹಾಲ್ತಿ ಬೆಟ್ಟದಲ್ಲೂ ಮರಗಳು ಭಸ್ಮ
ಸಿ.ಎನ್. ಮಂಜುನಾಥ್ ನಾಗಮಂಗಲ
ಬೇಸಿಗೆಯಲ್ಲಿ ಕಾಳ್ಗಿಚ್ಚು ಹರಡುವುದನ್ನು ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲಗೊಂಡ ಪರಿಣಾಮ ತಾಲೂಕು ವ್ಯಾಪ್ತಿಯ ಬಹುತೇಕ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗುತ್ತಿದೆ. ಬೆಲೆ ಬಾಳುವ ಮರಗಳು, ಅಪರೂಪದ, ಔಷಧೀಯ ಗುಣವುಳ್ಳ ಸಸ್ಯಗಳು ಹಾಗೂ ಪ್ರಾಣಿ ಪಕ್ಷಿಗಳು ಸಿಲುಕಿ ದಹನವಾಗುತ್ತಿವೆ.
ಹಾಲ್ತಿ ಬೆಟ್ಟದ ಅರಣ್ಯ ಪ್ರದೇಶ, ಎಚ್.ಎನ್. ಕಾವಲ್, ನಾಗನಕೆರೆ, ಬಸವನಕಲ್ಲು ಅರಣ್ಯ ಸೇರಿದಂತೆ ನಾನಾ ಕಡೆ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಈ ಬಾರಿ ಬೆಂಕಿ ಕಾಣಿಸಿ ಕೊಂಡಿದೆ. ಕುರುಚಲು ಗಿಡಗಳು ಹಾಗೂ ಪೊದೆಗಳು ಸಂಪೂರ್ಣ ಸುಟ್ಟು ಹೋಗಿವೆ. ನೀಲಗಿರಿ, ಹರ್ಕ್ಯೂಲೆಸ್ ಮರಗಳು ಬಹುತೇಕ ಸುಟ್ಟು ಹೋಗಿವೆ. ಕಾಳ್ಗಿಚ್ಚು ಹರಡು ವುದನ್ನು ತಡೆಗಟ್ಟವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಈ ಅವಘಡಕ್ಕೆ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ. ಒಂದೆಡೆ ಕಾಡುಗಳ್ಳರ ಹಾವಳಿ, ಮತ್ತೊಂದೆಡೆ ಬೆಂಕಿಯಿಂದ ನಾಶವಾಗುತ್ತಿರುವ ಕಾಡಿನಿಂದಾಗಿ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಜತೆಗೆ, ಅರಣ್ಯ ಇಲಾಖೆಗೆ ಲಕ್ಷಾಂತರ ರೂ. ನಷ್ಟ ವಾಗುತ್ತಿದೆ.
ಬೆಂಕಿಗೆ ಕಾರಣವೇನು: ಅರಣ್ಯ ಪ್ರದೇಶದ ಬಹುತೇಕ ಭಾಗ ಅಂಚಿಹುಲ್ಲು ಹಾಗೂ ಕುರುಚಲು ಗಿಡಗಳಿಂದ ಆವೃತವಾಗಿದೆ. ಇದಕ್ಕೆ ಸಣ್ಣ ಬೆಂಕಿ ಕಿಡಿ ತಗುಲಿದರೂ ಬಹುಬೇಗ ಬೆಂಕಿಗೆ ಜ್ವಾಲೆಗಳು ವ್ಯಾಪಿಸು ತ್ತವೆ. ಆ ಪರಿಸ್ಥಿತಿಯಲ್ಲಿ ಬೆಂಕಿ ಆರಿಸುವುದು ತುಂಬಾ ಕಷ್ಟ. ಇದನ್ನು ಅರಣ್ಯ ಇಲಾಖೆ ಸಿಬ್ಬಂದಿಯೇ ಒಪ್ಪಿಕೊಳ್ಳುತ್ತಾರೆ.ಅಂಚಿಹುಲ್ಲು ಹಾಗೂ ಕುರುಚಲು ಗಿಡಗಳಿಂದ ಕೂಡಿರುವ ತಾಲೂಕಿನ ಅರಣ್ಯದಲ್ಲಿ ಬೇಸಿಗೆ ವೇಳೆ ನೈಸರ್ಗಿಕವಾಗಿ ಬೆಂಕಿ ಹೊತ್ತಿಕೊಳ್ಳುವುದು ಸ್ವಲ್ಪ ಕಡಿಮೆ. ಆದರೆ, ಕಾಡಿನಲ್ಲಿ ಅಡ್ಡಾಡುವ ವರು, ದನಗಾಹಿಗಳು ಬೀಡಿ, ಸಿಗರೇಟ್ ಸೇದಿ ಎಸೆಯುವ ಬೆಂಕಿ ಕಿಡಿ ಅನಾಹುತಕ್ಕೆ ಕಾರಣವಾಗುತ್ತದೆ. ಕೆಲವು ಕಿಡಿಗೇಡಿಗಳು ಬೇಕೆಂದೇ ಬೆಂಕಿ ಹಚ್ಚುತ್ತಾರೆ.
ತಡೆ ಹೇಗೆ: ಬೇಸಿಗೆಯಲ್ಲಿ ಅರಣ್ಯ ಪ್ರದೇಶಕ್ಕೆ ಜಾನುವಾರುಗಳನ್ನು ಮೇಯಿಸಲು ಹೋಗುವ ದನಗಾಹಿಗಳಿಗೆ ತಡೆಯೊಡ್ಡ ಬೇಕು.ಬೆಂಕಿ ಕಂಡ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಬೇಕು. ಅರಣ್ಯ ವ್ಯಾಪ್ತಿಯ ಹಳ್ಳ-ಕೊಳ್ಳಗಳಿಗೆ ನೀರು ಪೂರಣೆ ಮತ್ತು ಸಂಗ್ರಹ ವ್ಯವಸ್ಥೆ ಮಾಡಬೇಕು. ಇದರಿಂದ ಬೆಂಕಿ ಬಿದ್ದಾಗ ಆ ನೀರನ್ನು ಬಳಸಿಕೊಳ್ಳಬಹುದು.
ಛಬ್ಬಿ ಗುಡ್ಡದಲ್ಲೂ ಅಗ್ನಿ
ವಿಕ ಸುದ್ದಿಲೋಕ ಶಿರಹಟ್ಟಿ
ತಾಲೂಕಿನ ಅರಣ್ಯ ವ್ಯಾಪ್ತಿ ಛಬ್ಬಿ ಮತ್ತು ಕುಂದ್ರಳ್ಳಿ ಗ್ರಾಮಗಳ ಬಳಿಯ ಗುಡ್ಡದಲ್ಲಿ ಸೋಮವಾರ ಬೆಳಗ್ಗೆ ಹತ್ತಿದ ಬೆಂಕಿ ಪಕ್ಕದ ಗುಡ್ಡಕ್ಕೂ ಪಸರಿಸಿ ಕೆನ್ನಾಲಿಗೆ ಚಾಚಿದ್ದರಿಂದ ಛಬ್ಬಿ ಗ್ರಾಮಸ್ಥರಿಗೆ ಆಘಾತ ತಂದೊಡ್ಡಿದೆ.
ಸಸ್ಯಕಾಶಿ ಮತ್ತು ಖನಿಜ ಸಂಪತ್ತಿನ ಆಗರವಾಗಿ ರುವ ಕಪ್ಪತ್ತಗುಡ್ಡ ಪಕ್ಕದ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಮತ್ತು ನಾರಾಯಣಪುರ ಅಲ್ಲದೇ ಶಿರಹಟ್ಟಿ ತಾಲೂಕಿನ ಛಬ್ಬಿ, ಕುಂದ್ರಳ್ಳಿ ಮತ್ತು ಶೆಟ್ಟಿಕೇರಿ ಅರಣ್ಯ ವ್ಯಾಪ್ತಿಯ ಗುಡ್ಡಕ್ಕೆ ಪ್ರತಿ ವರ್ಷ ಬೇಸಿಗೆಯ ದಿನಗಳಲ್ಲಿ ಬೆಂಕಿ ಹಚ್ಚುವುದರಿಂದ ನೂರಾರು ಹೆಕ್ಟೇರ್ ಪ್ರದೇಶದ ಅರಣ್ಯ ಸಂಪತ್ತು ಸುಟ್ಟು ಕರಕಲಾಗುತ್ತಿದೆ. ಬೆಂಕಿ ಇನ್ನೂ ಧಗಧಗಿಸು ತ್ತಿರುವುದರಿಂದ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಗುಡ್ಡವೀಗ ಕರಿ ಮಣ್ಣಿನ ಗುಂಪೆಯಂತೆ ಕಾಣುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ಏನಾದರೂ ಕ್ರಮ ಕೈಗೊಂಡಿ ದ್ದರೆ ಅರಣ್ಯ ಸಂಪತ್ತು ರಕ್ಷಿಸಬಹುದಾಗಿತ್ತು.

ನಗರ ಬಸ್ ನಿಲ್ದಾಣವೇ ಎತ್ತಂಗಡಿ !

ವಿಕ ಸುದ್ದಿಲೋಕ ಮೈಸೂರು
‘ಕೋಟ್ಯಂತರ ರೂ. ವೆಚ್ಚದಲ್ಲಿ ಇದೀಗ ತಾನೇ ನಿರ್ಮಾಣಗೊಂಡಿರುವ ನಗರ ಬಸ್ ನಿಲ್ದಾಣ ಸದ್ಯವೇ ಜಟಕಾ, ಸೈಕಲ್ ಸ್ಟ್ಯಾಂಡ್ ಅಗಲಿದೆ!’.
ಆಶ್ಚರ್ಯವಾದರೂ ಇದು ಸತ್ಯ. ನರ್ಮ್ ಯೋಜನೆಯಡಿ ಒಟ್ಟು ೧೪.೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು, ಉದ್ಘಾಟನೆಗಾಗಿ ಮೇಯರ್ ಹಾಗೂ ಸರಕಾರದ ಮಧ್ಯೆ ಬಹಿರಂಗ ಕದನಕ್ಕೆ ಕಾರಣವಾಗಿದ್ದ ನಗರ ಬಸ್ ನಿಲ್ದಾಣ ಸದ್ಯವೇ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ.
ನಗರದ ಹೃದಯ ಭಾಗಕ್ಕೆ ಹೊಂದಿಕೊಂಡ ಕೆ.ಆರ್.ವೃತ್ತದಲ್ಲಿರುವ, ನಗರ ಬಸ್ ನಿಲ್ದಾಣದಿಂದ ಅರಮನೆ ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಅಗುತ್ತಿರುವುದರಿಂದ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಮುಡಾದಲ್ಲಿ ಬುಧವಾರ ನಡೆದ ಸಂಚಾರಿ ಸಮನ್ವಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಇನ್ನೊಂದು ವರ್ಷದಲ್ಲಿ ನೂತನ ನಗರ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಅವರಿಗೆ ಜಿಲ್ಲಾಧಿಕಾರಿ ಪಿ.ಮಣಿವಣ್ಣನ್, ಕಟ್ಟು ನಿಟ್ಟಿನ ಆದೇಶ ನೀಡಿದರು.
ನರ್ಮ್‌ನಡಿ ೧೦.೪ ಕೋಟಿ ರೂ. ವೆಚ್ಚದಲ್ಲಿ ಈಗ ತಾನೇ ಬಸ್ ನಿಲ್ದಾಣ ನಿರ್ಮಿಸಿ, ಹೆಚ್ಚುವರಿಯಾಗಿ ೪ ಕೋಟಿ ರೂ. ಖರ್ಚು ಮಾಡಲಾಗಿದೆ. ಈಗ ಏಕಾಏಕಿ ಸ್ಥಳಾಂತರ ಮಾಡುವುದರಿಂದ ತೊಂದರೆ ಅಗಲಿದೆ ಎಂದು ಶ್ರೀನಿವಾಸ್ ಸಮಂಜಾಯಿಷಿ ನೀಡಿದರು.
ಆದರೆ ಇದಕ್ಕೆ ಒಪ್ಪದ ಮಣಿವಣ್ಣನ್, ಅರಮನೆ ಸುತ್ತ ಪಾರಂಪರಿಕತೆ ಉಳಿಸಲು ನಗರ ಬಸ್ ನಿಲ್ದಾಣವನ್ನು ಸ್ಥಳಾಂತರಿಸಬೇಕು. ಅರಮನೆ ಸುತ್ತ ಸೈಕಲ್ ಹಾಗೂ ಜಟಕಾ ಬಂಡಿಗಳಿಗೆ ಅವಕಾಶ ಕಲ್ಪಿಸಲಿದ್ದು, ವಾಹನ ಸಂಚಾರವನ್ನು ನಿಷೇಧಿಸಲಾಗುವುದು. ಅದಕ್ಕಾಗಿ ಕೆ.ಆರ್.ವೃತ್ತದ ಬಳಿಯ ನಗರ ಬಸ್ ನಿಲ್ದಾಣವನ್ನು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಬೇಕು. ಗ್ರಾಮಾಂತರ ಬಸ್ ನಿಲ್ದಾಣವನ್ನು ನಗರದ ನಾಲ್ಕು ಕಡೆ ಉಪ ಬಸ್ ನಿಲ್ದಾಣಕ್ಕೆ ವರ್ಗಾಯಿಸಬೇಕೆಂದರು.
ಇನ್ನೊಂದು ವರ್ಷದಲ್ಲಿ ಪೂರ್ಣವಾಗಿ ಬಸ್ ನಿಲ್ದಾಣ ಸ್ಥಳಾಂತರಿಸಬೇಕು. ಈ ಕುರಿತು ನಗರ ಸಾರಿಗೆಯವರಿಗೆ ನೋಟಿಸ್ ಜಾರಿ ಮಾಡಬೇಕು. ಒಂದೊಮ್ಮೆ ಅವಧಿಯೊಳಗೆ ಬಸ್ ನಿಲ್ದಾಣ ಸ್ಥಳಾಂತರಿಸದಿದ್ದರೆ ಬಸ್‌ಗಳನ್ನು ವಶಪಡಿಸಿಕೊಳ್ಳಲು ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಅವರಿಗೆ ಮಣಿವಣ್ಣನ್ ತಿಳಿಸಿದರು.
ಬಹುಮಹಡಿ ಪಾರ್ಕಿಂಗ್
ಪಾರಂಪರಿಕತೆಗೆ ಧಕ್ಕೆ ಅಗುತ್ತದೆ ಎಂದು ನೂತನ ಬಸ್ ನಿಲ್ದಾಣ ಸ್ಥಳಾಂತರಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ ಮಣಿವಣ್ಣನ್, ಅರಮನೆಯ ದಕ್ಷಿಣ ದ್ವಾರದಲ್ಲಿ ಬಳಿ ಎರಡು-ಮೂರು ಅಂತಸ್ತಿನ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಸಮ್ಮತಿಸಿದರು.
ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿಲ್ಲ. ಆದ್ದರಿಂದ ಅರಮನೆ ದಕ್ಷಿಣ ದ್ವಾರ ಸೇರಿದಂತೆ ನಂಜರಾಜಬಹದ್ದೂರ್ ಛತ್ರ, ದೇವರಾಜ ಸಂಚಾರಿ ಪೊಲೀಸ್ ಠಾಣೆ, ಗ್ರಾಮಾಂತರ ಬಸ್ ನಿಲ್ದಾಣದ ಎದುರು ಸೇರಿದಂತೆ ವಿವಿಧೆಡೆ ಬಹುಮಹಡಿ ಪಾರ್ಕಿಂಗ್ ಅವಶ್ಯವಿದೆ ಎಂದು ಸಂಚಾರಿ ವಿಭಾಗದ ಎಸಿಪಿ ಶಂಕರೇಗೌಡ ಸಭೆಯಲ್ಲಿ ಪ್ರಸ್ತಾವನೆ ಇಟ್ಟರು.
ಇದಕ್ಕೆ ಸಮ್ಮತಿಸಿದ ಮಣಿವಣ್ಣನ್, ನಂಜರಾಜ ಬಹದ್ದೂರ್ ಛತ್ರದಲ್ಲಿ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಬೇಕು. ಅರಮನೆ ಬಳಿ ತಕ್ಷಣ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ರೂಪುರೇಷೆ ತಯಾರಿಸಬೇಕು. ನಿರ್ಮಾಣದ ಹೊಣೆಯನ್ನು ಪಾಲಿಕೆ ವಹಿಸಿಕೊಳ್ಳಬೇಕು ಎಂದು ಸೂಚಿಸಿದರು.
ರಾರಾಜಿಸಲಿವೆ ಗೋಡೆ ಚಿತ್ರಕಲೆ
ಪಾರಂಪರಿಕ ಕಟ್ಟಡಗಳ ಬಳಿ ಇರುವ ಕಟ್ಟಡಗಳ ಗೋಡೆಗಳ ಮೇಲೆ ಚಿತ್ರಕಲೆ ರಾರಾಜಿಸಲಿವೆ. ಪಾರಂಪರಿಕ ಕಟ್ಟಡಗಳ ಬಳಿ ಇರುವ ಕಟ್ಟಡಗಳಲ್ಲಿ ಖಾಲಿ ಗೋಡೆ ಇದ್ದು, ಸೌಂದರ್ಯಕ್ಕೆ ಧಕ್ಕೆ ಅಗಲಿದೆ. ಆದ್ದರಿಂದ ಇಂಥ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸುವ ಚಿಂತನೆ ಇದೆ. ಈ ಕುರಿತು ಕಾವಾ ಡೀನ್ ದೇಶಪಾಂಡೆ ಅವರೊಂದಿಗೆ ಚರ್ಚಿಸಿದ್ದು, ಫೆ.೧೬ರಂದು ಸಭೆ ಕರೆಯಲಾಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ತಿಳಿಸಿದರು.
ಗೋಡೆ ಬರಹ, ಪೋಸ್ಟರ್ ಅಳವಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ೩೫ ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಅಂದಗೆಡಿಸುವವರ ವಿರುದ್ಧ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ನಗರದ ಎಲ್ಲೆಡೆ ಅನಧಿಕೃತ ಜಾಹೀರಾತು ಫಲಕವನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.
ಮೈಸೂರಿನಲ್ಲಿ ಆರ್ಎಸ್ಎಸ್ ತರುಣ ಸಮಾವೇಶ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)