ವಿಕ ಸುದ್ದಿಲೋಕ ಮೈಸೂರು
ದೇಶದಲ್ಲಿ ನಕಲಿ ಔಷಧ ಹಾವಳಿ ಹೆಚ್ಚಿದ್ದು,ಅಕ್ರಮ ತಡೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಕರೆ ನೀಡಿದ್ದಾರೆ.
ಜೆಎಸ್‌ಎಸ್ ವಿಶ್ವವಿದ್ಯಾನಿಲಯ ಮಂಗಳವಾರ ಆಯೋಜಿಸಿದ್ದ ಪ್ರಥಮ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ದೇಶದಲ್ಲಿ ಮಾರಾಟವಾಗುತ್ತಿರುವ ಶೇ.೪೦ ರಷ್ಟು ಔಷಧಗಳ ಗುಣಮಟ್ಟ, ನೈಜತೆಯ ಬಗ್ಗೆ ಅನುಮಾನಗಳಿವೆ. ತತ್ವರಹಿತ ಜನರು ನಕಲಿ ಔಷಧಗಳನ್ನು ವಾಮಮಾರ್ಗದಲ್ಲಿ ಪೂರೈಸುವ ಕಳ್ಳದಂಧೆ ನಡೆಸಿದ್ದಾರೆ ಎಂದು ಆಕ್ಷೇಪಿಸಿದರು.
ತಡೆ ಪ್ರತಿಜ್ಞೆ: ಔಷಧ, ಸೌಂದರ್ಯವರ್ಧಕ ಕಾಯಿದೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮರ್ಥವಾಗಿ ಜಾರಿಗೊಳಿಸಿ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು. ಮಾರಾಟಗಾರರೂ ಆಗಾಗ ಔಷಧಗಳ ಮೂಲವನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು. ಅಕ್ರಮ ತಡೆ ರೀತಿ ನೀತಿಗಳ ಕುರಿತು ಫಾರ್ಮಸಿ ವಿದ್ಯಾರ್ಥಿಗಳಿಗೆ ಅರಿವು ಮಾಡಿಸುವಂತ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಸಲಹೆ ನೀಡಿದರು. ‘ನಕಲಿ ಔಷಧ ಹಾವಳಿ ತಡೆಯಲು ಪ್ರಯತ್ನಿಸುತ್ತೇನೆ ’ ಎಂದು ನೂತನ ಪದವೀಧರರಿಂದ ಪ್ರತಿಜ್ಞೆಯನ್ನೂ ಮಾಡಿಸಿದರು.
ಭಾರತ ನಾಯಕನಾಗಲಿ: ಜಗತ್ತಿನ ಔಷಧ ಉದ್ಯಮದ ಒಟ್ಟು ವಹಿವಾಟು ೭೭೩ ಬಿಲಿಯನ್ ಡಾಲರ್. ಇದರಲ್ಲಿ ಭಾರತದ ಪಾಲು ೧೭ ಬಿಲಿಯನ್ ಡಾಲರ್ ಮಾತ್ರ. ೨೦೨೦ ರ ವೇಳೆಗೆ ೨೫ ಬಿಲಿಯನ್ ಯುಎಸ್ ಡಾಲರ್‌ಗೆ ಏರಿಸುವ ಗುರಿ ಇದೆ. ಈ ಪೈಕಿ ಶೇ. ೬೦ರಷ್ಟು ರಪ್ತು ಸಂಬಂಧಿ. ಈಗಲೂ, ಅಮೆರಿಕ ಉಪಯೋಗಿಸುವ ಸಸ್ಯಜನ್ಯ ಔಷಧದ ಶೇ.೪೦ ಭಾಗ ಭಾರತ ಮೂಲದ್ದು ಎಂದು ವಿವರಿಸಿದರು.
ಹತ್ತು ವರ್ಷದಲ್ಲಿ ದೇಶದ ಔಷಧ ಉದ್ಯಮದ ವಹಿವಾಟನ್ನು ನೂರು ಬಿಲಿಯನ್ ಡಾಲರ್‌ಗೆ ಏರಿಸಬೇಕು. ಪ್ರಪಂಚದ ಶೇ.೨೦ರಷ್ಟು ಉತ್ಪಾದನೆ ದೇಶದಲ್ಲಾಗುವಂತೆ ಗುರಿ ನಿಗದಿಪಡಿಸಬೇಕು.ಆ ಮೂಲಕ ಔಷಧ ಕ್ಷೇತ್ರದಲ್ಲಿ ಭಾರತ ನಾಯಕನಾಗಬೇಕು ಎಂದು ಆಶಿಸಿದರು. ಅಂಥ ಸಾಮರ್ಥ್ಯ ದೇಶಕ್ಕಿದೆ. ಕ್ಷೇತ್ರದಲ್ಲಿ ತೊಡಗಿಸಿಕೊಂಡ ಎಲ್ಲರೂ ಗುರಿ ಸಾಧನೆಗೆ ದುಡಿಯಬೇಕು. ಅಡ್ಡ ಪರಿಣಾಮ ಬೀರದ ಔಷಧ ತಯಾರಿಕೆಯತ್ತಲೂ ಗಂಭೀರ ಚಿಂತನೆ ಅಗತ್ಯ ಎಂದು ಕಿವಿಮಾತು ಹೇಳಿದರು.
ಫಾರ್ಮಸಿ ವಿಷನ್: ಕಲಾಂ ಅವರ ‘ಫಾರ್ಮಸಿ ವಿಷನ್ -೨೦೨೦’ರ ಸಲಹೆ ಸೂಚನೆಗಳ ಮುಖ್ಯಾಂಶ. ಎಚ್‌ಐವಿ, ಮಲೇರಿಯಾ, ಕ್ಯಾನ್ಸರ್‌ನಂತ ಕಾಯಿಲೆಗಳಿಗೆ ಕಡಿಮೆ ವೆಚ್ಚದ, ಗುಣಮಟ್ಟದ ಲಸಿಕೆ ತಯಾರಿಸಬೇಕು. ೪೭ ಬಿಲಿಯನ್ ಬೆಲೆಯ ೫೦ಕ್ಕೂ ಹೆಚ್ಚು ಜನಪರಿಚಿತ ಔಷಧಗಳು ೩ರಿಂದ ೫ ವರ್ಷಗಳಲ್ಲಿ ಪೇಟೆಂಟ್ ಕಳೆದಿದ್ದು, ಹೊಸ ಔಷಧಗಳ ಮೂಲಕ ಮಾರುಕಟ್ಟೆ ಪ್ರವೇಶಿಸ ಬಹುದಾದ ಸದವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು.
ದೇಶದಲ್ಲಿನ ಸಾಂಪ್ರದಾಯಿಕ ಔಷಧ ಪದ್ಧತಿ, ಗಿಡಮೂಲಿಕೆಗಳನ್ನು ಬಳಸಿ ಜಗತ್ತಿನ ಕಾಯಿಲೆಗಳಿಗೆ ಔಷಧ ಉತ್ಪಾದಿಸಲು ತೊಡಗಿಸಿಕೊಳ್ಳಬೇಕು. ಮೂಲ ಪರಿಕರಗಳನ್ನು ಬಳಸಿಕೊಂಡು ಅಧಿಕೃತ ಸಂಶೋಧನೆ ಗಳನ್ನು ನಡೆಸುವ ಮೂಲಕ ‘ನಾಯಕತ್ವ’ ಸಾಧಿಸಬೇಕು.
ಉಪದೇಶ: ಘಟಿಕೋತ್ಸವದಲ್ಲಿ ಪದವಿ ಪಡೆದ ಎಲ್ಲರೂ ‘ಎಂ.ಫಾರ್ಮ’ ವಿದ್ಯಾರ್ಥಿಗಳಾಗಿದ್ದರಿಂದ, ಔಷಧ ಉದ್ಯಮ ಮತ್ತು ವೈದ್ಯ ಕ್ಷೇತ್ರದತ್ತಲೇ ತಮ್ಮ ಭಾಷಣವನ್ನು ಕೇಂದ್ರೀಕರಿಸಿದ ಕಲಾಂ, ಜನರು ಬದುಕು,ಆರೋಗ್ಯವನ್ನು ನಿಮ್ಮ ನಂಬಿಕೆಗೆ ಒಪ್ಪಿಸುತ್ತಾರೆ. ಅವರ ಹಿತ ಕಾಯ್ದುಕೊಳ್ಳಲು ಶ್ರಮಿಸಿ. ಒಳ್ಳೆಯ ಆರೋಗ್ಯ ಸೇವೆ ನೀಡುವುದೇ ನಿಮ್ಮ ಆದ್ಯತೆಯಾಗಲಿ ಎಂದು ಕರೆ ನೀಡಿದರು.
ಇಲ್ಲದವರಿಗೆ ಸ್ಪಂದಿಸಿ: ಆಂಧ್ರಪ್ರದೇಶದ ಭೀಮಾವರಂನ ಡಾ.ಸೋಮರಾಜು, ಬಿಳಿಗಿರಿರಂಗನಬೆಟ್ಟದ ವಿವೇಕಾ ನಂದ ಗಿರಿಜನ ಕಲ್ಯಾಣ ಕೇಂದ್ರದ ಡಾ.ಸುದರ್ಶನ್, ಬೆಂಗಳೂರು ಥ್ರೊಂಬೊಸಿಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಿರ್ದೇಶಕ ಡಾ.ವಿ.ವಿ.ಕಕ್ಕೇರ್, ಕಠ್ಮಂಡುವಿನ ಮುಖ್ಯ ಧರ್ಮಗುರು ಮತ್ತು ವೈದ್ಯ ಸಂಶೋಧಕ ಚೊಯ್ಕಿ ನೈಯ್ಮ ರಿಂಪೋಂಚಿ ಅವರು ಕಾರ‍್ಯಕ್ಷೇತ್ರದಲ್ಲಿ ಸಾಧಿಸಿದ ಯಶೋಗಾಥೆಗಳನ್ನು ಹೃದಯಂಗಮವಾಗಿ ವಿವರಿಸಿದ ಕಲಾಂ, ನೀವೂ ಅವರಂತೆಯೇ ಆಗಿ.ಗ್ರಾಮೀಣ ಮತ್ತು ಗಿರಿಜನರ ಸೇವೆಗೆ ಕಂಕಣಬದ್ಧರಾಗಿ,‘ಇಲ್ಲದವರ ’ ನೋವಿಗೆ ಸದಾ ಸ್ಪಂದಿಸಿ ಎಂದು ಸಲಹೆ ನೀಡಿದರು.
ನಿಮ್ಮ ಬುದ್ಧಿ ನಿವಾರಿಸಲಿ ನೋವು: ಬುದ್ಧಿವಂತಿಕೆ ಇನ್ನೊಬ್ಬರಿಗೆ ನೋವು ನೀಡಬಾರದು ಎನ್ನುವುದು ಅವರ ಮಾತಿನ ಪ್ರಧಾನ ಆಶಯವಾಗಿತ್ತು. ‘ನನ್ನ ಬು ನಿವಾರಿಸಲಿ ನೋವು’ ಎಂಬ ವಾಕ್ಯದೊಂದಿಗೆ ಭಾಷಣ ಆರಂಭಿಸಿದ ಅವರು,ಅದೇ ಆಶಯದೊಂದಿಗೆ ಮುಗಿಸಿದರು.
‘ಸಮಾಜ ಯಾವ ಕಾರಣಕ್ಕಾಗಿ ನಿಮ್ಮನ್ನು ನೆನಪಿಸಿ ಕೊಳ್ಳಲು ಬಯಸುತ್ತೀರಿ’ ಎಂದು ಪ್ರಶ್ನಿಸಿದ ಅವರು, ನಿಮ್ಮ ಗುರಿ ಇತಿಹಾಸ ನಿರ್ಮಿಸಬಲ್ಲದ್ದಾಗಬಹುದು. ಆದ್ದರಿಂದ, ಉತ್ತಮ ಗುರಿ ಸಾಧನೆಗೆ ನಿರಂತರವಾಗಿ ಶ್ರಮಿಸಿ.ಉದಾತ್ತ ಮನೋಭಾವ, ಮೌಲ್ಯಾಧಾರಿತ ಸೇವೆ, ಸಹಿಷ್ಣುತೆ, ನಿರಂತರತೆ, ಜ್ಞಾನ ವರ್ಧನೆ ಮತ್ತಿತರ ಗುಣಗಳು ವೃತ್ತಿಗೆ ಮಾನವೀಯ ಅಂತಃಕರಣದ ಸ್ಪರ್ಶ ನೀಡಲು ನೆರವಾಗುತ್ತವೆ ಎಂದು ಹೊಸ ಪದವೀಧರರನ್ನು ಹುರಿದುಂಬಿಸಿದರು.
೧೦ಮಂದಿಗೆ ಚಿನ್ನ: ವಿವಿ ಕುಲಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ, ೧೧೯ ಎಂ.ಫಾರ್ಮ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಪೈಕಿ ೬೫ ಮಂದಿ ಖುದ್ದು ಹಾಜರಿದ್ದು ಪ್ರತಿಜ್ಞೆ ಸ್ವೀಕರಿಸಿದರು.ಉನ್ನತ ಸಾಧನೆ ಮಾಡಿದ ೧೦ಮಂದಿಗೆ ಚಿನ್ನದ ಪದಕ,ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಸಮ ಕುಲಾಧಿಪತಿ ಡಾ.ಬಿ.ಎನ್. ಬೆಟ್ಕೆರೂರ್, ಕುಲಸಚಿವ ಡಾ.ಮೃತ್ಯುಂಜಯ ಪಿ.ಕುಳೇನೂರ್, ಪರೀಕ್ಷಾಂಗ ಕುಲಸಚಿವ ಡಾ.ಆರ್. ವಿಜಯಸಿಂಹ ಮತ್ತಿತರರು ಭಾಗವಹಿಸಿದ್ದರು. ಕುಲಪತಿ ಡಾ.ಬಿ.ಸುರೇಶ್ ಸ್ವಾಗತಿಸಿ,ವರದಿ ಮಂಡಿಸಿದರು.
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
‘ಬಾವಲಿ’ಗಳ ಬದುಕಿಗೆ ಕುತ್ತಾದ ಅರಣ್ಯ ಇಲಾಖೆ
ಪಿ.ಓಂಕಾರ್ ಮೈಸೂರು
ಸಾವಿರಾರು ಬಾವಲಿಗಳು ನೆಲೆ ತಪ್ಪಿವೆ. ನೂರಾರು ಮರಿಗಳು ಕಣ್ಣು ಬಿಡುವ ಮೊದಲೇ, ಅಮ್ಮನ ಮಡಿಲಲ್ಲೇ ಪ್ರಾಣ ಬಿಟ್ಟಿವೆ. ಹತ್ತಾರು ವರ್ಷಗಳಿಂದ ಬದುಕಿಗೆ ರಕ್ಷೆಯಾಗಿದ್ದ ಕಬಿನಿ ಹಿನ್ನೀರು ಪ್ರದೇಶವೇ ಅಮಾಯಕ ಬಾವಲಿಗಳ ಬದುಕಿಗೆ ಮುಳುವಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರು ಪ್ರದೇಶದ ೫ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಇಲಾಖೆ ಬೆಳೆಸಿ, ಈಗ ಕಟಾವು ಮಾಡಿಸಿರುವ ಸರ್ವೇ (ಗಾಳಿ ಮರ) ತೋಪಿನಲ್ಲಿ ‘ಸಾವಿನ ವಾಸನೆ’ ಮಡುಗಟ್ಟಿದೆ ಯಾದರೂ, ಅರಣ್ಯಾಧಿಕಾರಿಗಳ ಮೂಗಿಗೆ ಬಡಿದಿಲ್ಲ. ಬಡಿದರೂ ಬಾವಲಿಗಳ ಸಾವು ಮುಖ್ಯ ಎನಿಸಿಲ್ಲ !
೩೦ ವರ್ಷದ ಹಿಂದೆ: ಕಬಿನಿ ಜಲಾಶಯ ನಿರ್ಮಿಸಲು ಈ ಪ್ರದೇಶದಲ್ಲಿ ರೈತರ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ೧೯೭೪ರಲ್ಲಿ ಕಾಮಗಾರಿ ಮುಗಿದು, ಹಿನ್ನೀರಿನಿಂದ ಆಚೆಗೂ ನೂರಾರು ಎಕರೆ ಭೂಮಿ ಉಳಿಯಿತು. ಇಲ್ಲಿ ಉಳುಮೆ ಮಾಡಿದರೆ ಜಲಾಶಯಕ್ಕೆ ‘ಹೂಳು’ ಹರಿಯಬಹುದು ಎನ್ನುವ ಕಾರಣಕ್ಕೆ ರೈತರಿಗೆ ಹಿಂತಿರುಗಿಸಲಿಲ್ಲ.
ಬಾವಲಿ ಕಾಡು: ಹೀಗೆ ಉಳಿದ ಭೂಮಿಯಲ್ಲಿ ೧೯೮೨ ರಲ್ಲಿ ಅರಣ್ಯ ಬೆಳೆಸಲೆಂದು ನೀರಾವರಿ ಇಲಾಖೆ ಅರಣ್ಯ ಇಲಾಖೆಗೆ ವಹಿಸಿತು. ಇಲಾಖೆ ಸರ್ವೇ, ನೀಲಗಿರಿ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಟ್ಟಿದ್ದು, ಅವೆಲ್ಲ ಕಾಡಿನ ಸ್ವರೂಪದಲ್ಲಿ ಬೆಳೆದು ನಿಂತಿತ್ತು. ಜಲಾಶಯ ಸಮೀಪದ ಹಿನ್ನೀರು ಪ್ರದೇಶದ ಸರ್ವೇ ತೋಪಿನಲ್ಲಿ ಸಾವಿರಾರು ಬಾವಲಿ ಗಳು ಆಶ್ರಯ ಪಡೆದಿದ್ದವು. ಇದೇ ಕಾರಣಕ್ಕೆ ಈ ಪ್ರದೇಶವನ್ನು ಸ್ಥಳೀಯರು ‘ಬಾವಲಿ ಕಾಡು’ ಎಂದೇ ಕರೆಯುತ್ತಿದ್ದರು. ಒಮ್ಮೆಗೆ ಎಲ್ಲವೂ ಗರಿಬಿಚ್ಚಿ ಹಾರಿದರೆ ‘ಮೋಡಕವಿದ ವಾತಾವರಣ’ ನಿರ್ಮಾಣ ವಾಗುತ್ತಿತ್ತು ಎನ್ನುವುದು ಗ್ರಾಮಸ್ಥರ ಹೇಳಿಕೆ.
ವರಮಾನದ ಮೇಲೆ ಕಣ್ಣು: ಬೆಳೆದು ನಿಂತ ಈ ಮರಗಳನ್ನು ಕಡಿದು, ಹರಾಜಿಗಿಟ್ಟರೆ ಬರಬಹುದಾದ ವರಮಾನದ ಮೇಲಷ್ಟೇ ಕಣ್ಣಿಟ್ಟ ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಎಫ್‌ಐಸಿ)ಕಟಾವು ಹೊಣೆ ವಹಿಸಿತು. ನಂತರ, ನಿಯೋಜಿತ ಕಾರ್ಮಿಕರು ಯಾಂತ್ರಿಕ ಗರಗಸಗಳಿಂದ ಕತ್ತರಿಸಿ ಲಾರಿಗಳಿಗೆ ತುಂಬಿ ಸಾಗಿಸಿದರು.
ಮನುಷ್ಯ ಯಂತ್ರಗಳು: ಇಂಥ ಮರಗಳನ್ನು ನಿಗದಿತ ಸಮಯ ಮುಗಿದ ನಂತರ ಕಟಾವು ಮಾಡಿಸಿ ಮಾರು ವುದು ಅಕ್ರಮವೇನಲ್ಲ. ಆದರೆ ಕಡಿಯುವ ಮುನ್ನ ಅಲ್ಲಿದ್ದ ಬಾವಲಿಗಳ ಆವಾಸ ಕ್ರಮವನ್ನು ಇಲಾಖೆ ಅರಿಯಲಿಲ್ಲ. ಹಾಗಾಗಿ ಸಾವಿರಾರು ಬಾವಲಿಗಳ ಆವಾಸ ಮತ್ತು ಜೀವಕ್ಕೆ ಆಪತ್ತು ತಂದೊಡ್ಡಿಯೂ ‘ಸಾಮೂಹಿಕ ಹತ್ಯೆ’ಯ ಸುಳಿವೇ ಇಲ್ಲದಂತಿದೆ. ಕಡಿ ಯುವ ‘ಕಾಮಗಾರಿ’ಯಲ್ಲಿ ತೊಡಗಿದ ಮನುಷ್ಯರೂ ಯಂತ್ರಗಳಂತಾಗಿದ್ದ ರಿಂದ, ಮರಗಳಿಗೆ ಜೋತು ಬಿದ್ದ ಬಾವಲಿಗಳು, ಅವುಗಳ ಬಿಸಿ ಅಪ್ಪುಗೆಯಲ್ಲಿದ್ದ ಕಣ್ಣು ಬಿಡದ ಮರಿಗಳು ಸತ್ತು ಬೀಳುತ್ತಿದ್ದುದನ್ನು ಗಮನಿಸಲಿಲ್ಲ ಅಥವಾ ಮನಸ್ಸಿನ ಕಣ್ಣು ಕುರುಡಾಗಿ ದ್ದರಿಂದ ಕಂಡೂ ಕಾಣಿಸದಂತಿದ್ದರು.
ಬಾವಲಿ ವಿಶೇಷ: ಬಾವಲಿಗಳು ಮರಿಹಾಕುವುದು ವರ್ಷಕ್ಕೊಮ್ಮೆ ಮೇ, ಜೂನ್ ತಿಂಗಳಲ್ಲಿ. ಪೋಷಿಸಲು ಗೂಡನ್ನು ಕಟ್ಟುವುದಿಲ್ಲ. ಮರಕ್ಕೆ ತಲೆ ಕೆಳಗಾಗಿ ಜೋತು ಬಿದ್ದ ಅಮ್ಮನ ತೆಕ್ಕೆಯಲ್ಲೇ ಮರಿಗಳು ಬೆಳೆಯುತ್ತವೆ. ತಾಯಿ ಬಾವಲಿ ರೆಕ್ಕೆಗಳನ್ನು ಬುಟ್ಟಿಯಂತೆ ಮಾಡಿ ಕರುಳ ಕುಡಿಗಳನ್ನು ರಕ್ಷಿಸುತ್ತದೆ. ಹುಟ್ಟಿದ ೯ ದಿನ ಮರಿ ಕಣ್ಣು ಬಿಡು ವುದಿಲ್ಲ. ತಿಂಗಳವರೆಗೆ ಹಾರುವುದೂ ಸಾಧ್ಯವಿಲ್ಲ. ಅಷ್ಟು ಕಾಲ ತಾಯಿ ಮೊಲೆ ಹಾಲೇ ಅವುಗಳಿಗೆ ಆಹಾರ.
ಸೂಕ್ಷ್ಮಗಳ ಅರಿವಿಲ್ಲ: ಪ್ರಾಣಿ ಲೋಕದ ಇಂಥ ಸೂಕ್ಷ್ಮಗಳು ಮರ ಕಡಿಯುವ ವರಿಗೆ ಗೊತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳೂ ಅವರಂತೆಯೇ ಆಗಿದ್ದು ಬಾವಲಿಗಳ ಪಾಲಿನ ದುರದೃಷ್ಟ. ಇಲಾಖೆ ‘ಬಾವಲಿ ಕಾಡಿನ’ ಸಂಹಾರಕ್ಕೆ ‘ಸುಪಾರಿ’ ಕೊಟ್ಟಿದ್ದು, ನಿಯೋಜಿತ ಕಾರ್ಮಿಕರು ಗರಗಸ ಹಚ್ಚಿದ್ದು ‘ಸಂತಾನಾಭಿವೃದ್ಧಿ’ ಕಾಲದಲ್ಲೇ ಆಗಿದ್ದರಿಂದ ನೂರಾರು ಬಾವಲಿಗಳ ಸಂಹಾರ ನಡೆದಿದೆ ಎನ್ನುವುದು ಪರಿಸರ ಪ್ರಿಯರ ಆಕ್ಷೇಪ.

ಎಚ್ಚರ...! ನಿಮ್ಮ ಆರೋಗ್ಯಕ್ಕೆ ಮುನ್ನೆಚ್ಚರಿಕೆ ಅಗತ್ಯ
ಜೆ.ಶಿವಣ್ಣ, ಮೈಸೂರು
ಸದ್ದಿಲ್ಲದೇ ಕಾಲಿಡುತ್ತಿವೆ ಸಾಂಕ್ರಾಮಿಕ ಕಾಯಿಲೆಗಳು. ನಗರದ ಹಲವೆಡೆ ಈಗಾಗಲೇ ತಮ್ಮ ಇರುವಿಕೆಯನ್ನು ಪ್ರಚುರಪಡಿಸುತ್ತಿವೆ.
ಕುವೆಂಪುನಗರ ಸೇರಿದಂತೆ ವಿವಿಧೆಡೆ ವೈರಾಣು ಜ್ವರ (ವೈರಲ್ ಫೀವರ್), ವಾಂತಿ ಭೇದಿ ದಾಂಗುಡಿ ಇಟ್ಟಿದ್ದು, ಮುಂಗಾರು ಅಡಿಯಿಡುತ್ತಿರುವ ಬೆನ್ನಲ್ಲೇ ತಮ್ಮ ಪ್ರತಾಪ ಪ್ರದರ್ಶಿಸಲಾರಂಭಿಸಿವೆ. ಈಗಾಗಲೇ ಅನೇಕರು ಹಾಸಿಗೆ ಹಿಡಿದಿದ್ದಾರೆ. ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ದೌಡಾಯಿಸಿದ್ದು, ಕಾಯಿಲೆ ಉಲ್ಭಣಿಸುತ್ತಿದೆ.
ಆಸ್ಪತ್ರೆಗಳಲ್ಲಿ ವೈದ್ಯರಿಂದ ಹಾಸಿಗೆ ಖಾಲಿ ಇಲ್ಲ ಎನ್ನುವ ಉತ್ತರದೊಂದಿಗೆ ಮನೆಯಲ್ಲೇ ವಿಶ್ರಮಿಸಲು ಸಲಹೆ ಸಿಗುತ್ತಿದೆ. ಮನೆಯಲ್ಲಿ ಒಬ್ಬರಿಗೆ ಜ್ವರ ಬಂದಿದ್ದೇ ತಡ ಕುಟುಂಬದ ಇತರರೂ ಜ್ವರ ಬಾಧೆಗೆ ಸಿಲುಕುತ್ತಿದ್ದಾರೆ. ಈಗ ಖಾಸಗಿ ಚಿಕಿತ್ಸಾ ಕೇಂದ್ರಗಳು, ಕ್ಲಿನಿಕ್‌ಗಳಲ್ಲಿ ಜನದಟ್ಟಣೆ. ಈಗಾಗಲೇ ಕುವೆಂಪುನಗರ, ರಾಮಕೃಷ್ಣನಗರ, ಜನತಾನಗರ, ಶಾರದಾದೇವಿ ನಗರ, ಜಯಲಕ್ಷ್ಮಿಪುರಂ, ಜಲಪುರಿ ಮೊದಲಾ ದೆಡೆ ವೈರಾಣು ಜ್ವರ ಪ್ರಕರಣಗಳು ದಾಖಲಾಗಿವೆ.
ಅಲ್ಲಲ್ಲಿ ಚಿಕೂನ್‌ಗುನ್ಯಾ, ಡೆಂಗೆ ರೋಗ ಲಕ್ಷಣ ಕಾಣಿಸಿಕೊಂಡಿದ್ದು, ಯಾವುವೂ ದೃಢಪಟ್ಟಿಲ್ಲ. ಕಾಯಿಲೆ ಉಲ್ಬಣಿಸಿದ ರೋಗಿಗಳು ಆಸ್ಪತ್ರೆಗಳ ಕದ ತಟ್ಟುತ್ತಿದ್ದು, ಚಿಕಿತ್ಸೆ ಲಭಿಸುವುದಾದರೂ ಹಾಸಿಗೆ ಸಿಗುತ್ತಿಲ್ಲ. ಕಳೆದ ವರ್ಷ ಡೆಂಗೆ, ಚಿಕ್ಯೂನ್‌ಗುನ್ಯಾ, ಹಂದಿ ಜ್ವರ ದಾಂಧಲೆ ನಡೆಸಿ ನಡುಕ ಹುಟ್ಟಿಸಿದ್ದಿನ್ನೂ ಮರೆತಿಲ್ಲ. ಪಾಲಿಕೆ, ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ವರ್ಷವೂ ಅದು ಮರುಕಳಿಸುವ ಆತಂಕ ಹೆಚ್ಚಾಗಿದೆ.
ಕಳೆದ ವರ್ಷದ ಮಾಹಿತಿ: ಮುಂಗಾರು ಪೂರ್ವ ಮತ್ತು ಬಳಿಕ ಸಾಂಕ್ರಾಮಿಕ ರೋಗ ಗಳು ಹೆಚ್ಚು. ೨೦೦೯ ನೇ ಸಾಲಿನಲ್ಲಿ ಜನವರಿ ಯಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ ದೃಢೀ ಕೃತ ಡೆಂಗೆ ಪ್ರಕರಣಗಳ ಸಂಖ್ಯೆ ೪೨. ಚಿಕೂನ್‌ಗುನ್ಯಾ - ೪೬, ಕರುಳು ಬೇನೆ- ೮೯೯, ಕಾಲರಾ- ೨೭ ಹಾಗೂ ಮಲೇರಿಯಾ ೪೧ ಪ್ರಕರಣ.
ಮನೆ ಮನೆ ತಪಾಸಣೆ: ನಗರಪಾಲಿಕೆ ಈಗಾಗಲೇ ರೋಗವಾಹಕವಾದ ಸೊಳ್ಳೆಗಳ ವಿರುದ್ಧ ಸಮರ ಸಾರಿದ್ದು, ನಿರ್ಮೂಲನೆಗೆ ಬಳಸಬಹುದಾದ ಎಲ್ಲಾ ವಿಧಾನಗಳನ್ನು ಕಾರ್ಯರೂಪಕ್ಕೆ ತರಲಿದೆ. ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಚಿಕೂನ್‌ಗುನ್ಯಾ, ಡೆಂಗೆ ಜ್ವರ ಶಂಕಿತ ಪ್ರದೇಶಗಳಲ್ಲಿ ಮನೆ ಮನೆ ತಪಾಸಣಾ ಕಾರ್ಯ ಆರಂಭವಾಗಿದೆ.
ನಗರದ ವಿವಿಧ ನರ್ಸಿಂಗ್ ಕಾಲೇಜುಗಳ ಸುಮಾರು ೩೦೬ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಆರೋಗ್ಯ ತಪಾಸಣೆ, ಕರಪತ್ರಗಳ ಮೂಲಕ ಆರೋಗ್ಯ ಜಾಗೃತಿ, ನೀರು ಸಂಗ್ರಹಾಗಾರಗಳ ಸ್ವಚ್ಛತೆ ಕೈಗೊಂಡಿದ್ದಾರೆ. ಜಯನಗರ, ಜನತಾನಗರ, ಕುವೆಂಪುನಗರ, ರಾಮಕೃಷ್ಣನಗರ, ಸರಸ್ವತಿಪುರಂ, ಉದಯಗಿರಿ ಮುಂತಾದೆಡೆ ಮನೆ ಮನೆ ತಪಾಸಣೆ ನಡೆಸಿ ಡೆಮಿಫೋಸ್ ದ್ರಾವಣವನ್ನು ಸೊಳ್ಳೆಗಳ ಲಾರ್ವಾಗಳನ್ನು ನಿರ್ಜೀವಗೊಳಿಸಲು ಸಿಂಪಡಿಸಲಾಗಿದೆ.
ಸಂಪರ್ಕ ಸಾಧನಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ನಿರ್ಧರಿಸಿರುವ ಪಾಲಿಕೆ ಎಸ್‌ಎಂಎಸ್ ಮೂಲಕ ಜನರಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲಿದೆ. ಆಕಾಶವಾಣಿ, ಎಫ್‌ಎಂ ರೇಡಿಯೋನಲ್ಲಿ ಪ್ರಚಾರ, ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ಮಕ್ಕಳಿಗೆ ತಿಳಿವಳಿಕೆ ನೀಡುವ ಕಾರ್ಯವೂ ನಡೆದಿದೆ. ಜಿಲ್ಲಾ ಆರೋಗ್ಯ ಇಲಾಖೆಯೂ ಮಲೇರಿಯಾ ಮಾಸಾಚರಣೆ ಆರಂಭಿಸಿದ್ದು, ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ನಿರಂತರ ಸಮೀಕ್ಷಾ ಕಾರ್ಯ ನಡೆದಿದೆ.
ಮೀನು ಅಸ್ತ್ರ: ಸೊಳ್ಳೆಗಳ ಆಶ್ರಯ ತಾಣವಾದ ಕೆರೆಗಳಲ್ಲಿ ಅವುಗಳ ಸಂಹಾರಕ್ಕೆ ಮೀನುಗಳನ್ನು ಪ್ರಯೋಗಿಸಲಾಗುತ್ತಿದೆ. ಮಲೇರಿಯಾ, ಡೆಂಗೆ ಮತ್ತು ಚಿಕೂನ್‌ಗುನ್ಯಾ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಲಾರ್ವಾ ತಿಂದು ಹಾಕುವ ಗ್ಯಾಂಬೂಸಿಯಾ ಮತ್ತು ಗಪ್ಪಿ ಮೀನಿನ ಮರಿಗಳನ್ನು ಮೀನುಗಾರಿಕೆ ಇಲಾಖೆ ಸಹಭಾಗಿತ್ವ ದಲ್ಲಿ ಪಾಲಿಕೆಯು ನಗರದ ಎಲ್ಲ ಕೆರೆಗಳಿಗೆ ಬಿಡುತ್ತಿದೆ.
ನೀರಿನ ತೊಟ್ಟಿಗಳು, ಕಾರಂಜಿ ಮತ್ತಿತರ ನೀರಿನ ಸ್ಥಳಗಳಲ್ಲಿ ಈ ಮೀನುಗಳನ್ನು ಬಿಡಬಹುದು. ಚಿಕೂನ್ ಗುನ್ಯಾ, ಡೆಂಗೆ ಮೊದಲಾದ ರೋಗಗಳನ್ನು ಹರಡುವ ಈಡಿಸ್ ಈಜಿಪ್ಟಸ್ ಜಾತಿಯ ಸೊಳ್ಳೆಗಳು ಸ್ವಚ್ಛ ನೀರಿನಲ್ಲೇ ಮೊಟ್ಟೆ ಹಾಕಿ ಮರಿ ಮಾಡುತ್ತವೆ.
ಈ ಹೊಸ ವಿಧಾನದ ಮೂಲಕ ನಿಯಂತ್ರಿಸಲಾಗುತ್ತಿದೆ. ಸಾರ್ವ ಜನಿಕರೂ ಕೈಜೋಡಿಸಿದರೆ ಮಾತ್ರ ಸಾಂಕ್ರಾಮಿಕ ರೋಗಗಳ ತಡೆ ಸಾಧ್ಯ ಎನ್ನುತ್ತಾರೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)