ಚೀ. ಜ. ರಾಜೀವ ಮೈಸೂರು
ನಿಮ್ಮೂರಿನ ಇಲ್ಲವೇ ನಿಮ್ಮ ಭಾಗದ ಸರಕಾರಿ ಶಾಲೆಯಲ್ಲಿ ಯಾವುದಾದರೊಂದು ‘ಪರಿಣತ’ ವಿಷಯವನ್ನು ಬೋಧಿಸಲು ನೀವು ಆಸಕ್ತರಾಗಿರುವಿರಾ ?, ನೈಜ ಕಾಳಜಿ ಮತ್ತು ಸಾಮರ್ಥ್ಯ ಇದ್ದರೆ, ನಿಮ್ಮ ಬಯಕೆ ಈ ವರ್ಷದಿಂದಲೇ ಸಾಕಾರಗೊಳ್ಳಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯೇ ಇಂಥದ್ದೊಂದು ಬಯಕೆಗೆ ವೇದಿಕೆ ಕಲ್ಪಿಸಿಕೊಡುತ್ತಿದೆ.
ಸಮುದಾಯದ ಸಂಪನ್ಮೂಲ ವ್ಯಕ್ತಿಗಳ ಸೇವೆಯನ್ನು ಶಾಲಾ ಮಕ್ಕಳ ಪರಿಪೂರ್ಣ ವಿಕಸನಕ್ಕೆ ಬಳಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ೨೦೧೦-೧೧ನೇ ಸಾಲಿನಿಂದ ‘ಸಮುದಾಯ ದೀಪ ’ ಯೋಜನೆ ಜಾರಿಗೊಳಿಸುತ್ತಿದೆ.
‘ಮೈಸೂರು ಜಿಲ್ಲೆಯಲ್ಲೂ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆಸಕ್ತ ಸಂಪನ್ಮೂಲ ವ್ಯಕ್ತಿಗಳು ಸ್ಥಳೀಯ ಮುಖ್ಯೋಪಾಧ್ಯಾಯರ ಮೂಲಕ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಬಹುದು’ ಎಂದು ಯೋಜನೆ ಜಾರಿಯ ಉಸ್ತುವಾರಿ ಹೊತ್ತಿರುವ ಜಿಲ್ಲಾ ಡಯಟ್ ಪ್ರಾಂಶುಪಾಲ ಕೆಂಪರಾಜೇಗೌಡ ವಿಜಯ ಕರ್ನಾಟಕಕ್ಕೆ ತಿಳಿಸಿದರು.
ಏನಿದು ಯೋಜನೆ: ಮಕ್ಕಳಿಗೆ ಪಠ್ಯ ಬೋಧಿಸುವ ಜತೆಗೆ ಪಠ್ಯೇತರ ವಿಷಯಗಳನ್ನು ಬೋಧಿಸಬೇಕೆಂಬುದು ಅನೇಕ ಶಿಕ್ಷಣ ತಜ್ಞರ ಅಭಿಮತ. ಇದಕ್ಕಾಗಿ ಆಯಾ ಕ್ಷೇತ್ರದಲ್ಲಿ ಪರಿಣತಿ ಪಡೆದವರೇ ಇದ್ದರೆ ಹೆಚ್ಚು ಸೂಕ್ತ ಎಂಬುದು ಇಲಾಖೆಯ ಚಿಂತನೆ. ಸಾಮಾಜಿಕ ಮೌಲ್ಯ, ರೀತಿ-ನೀತಿ, ನಾಯಕತ್ವ ಗುಣ, ಪ್ರಾಮಾಣಿಕತೆ. ಸ್ಪರ್ಧಾ ಮನೋಭಾವ, ರಚನಾತ್ಮಕ ಕೌಶಲ್ಯ, ಬಿಡುವಿನ ವೇಳೆಯ ಸದ್ಬಳಕೆ, ದೈಹಿಕ ಸದೃಢತೆ, ಸೌಂದರ್ಯ ಪ್ರಜ್ಞೆ, ಸಾಂಸ್ಕೃತಿಕ ಮೌಲ್ಯಗಳನ್ನು ಸಹಪಠ್ಯ ಚಟುವಟಿಕೆಗಳ ಮೂಲಕ ಬೋಧಿಸಿದರೆ - ಅದು ಸಮಗ್ರ ಶಿಕ್ಷಣವಾಗಬಲ್ಲದು. ಈ ಎಲ್ಲ ವಿಷಯಗಳನ್ನು ಇಲಾಖೆಯ ಶಿಕ್ಷಕರು ಬೋಧಿಸಲು ಶಕ್ತರಾದರೂ, ಪರಿಣತರ ಮೂಲಕ ಹೇಳಿಸಿದರೆ ಹೆಚ್ಚು ಅರ್ಥಪೂರ್ಣ. ಹಾಗಾಗಿ ಸಮುದಾಯದ ವ್ಯಕ್ತಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
‘ಸ್ಥಳೀಯ ಸಮಸ್ಯೆಗಳು, ಅಲ್ಲಿನ ನಂಬಿಕೆ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಗಳ ಸ್ಪಷ್ಟವಾದ ಪರಿಕಲ್ಪನೆ ಮೂಡಿಸುವ ಸಲುವಾಗಿಯೂ ಯೋಜನೆಯನ್ನು ದುಡಿಸಿಕೊಳ್ಳಲಾಗುವುದು’ ಎಂದು ಕೆಂಪರಾಜೇಗೌಡ ತಿಳಿಸಿದರು.
ಯಾವ ವಿಷಯ ಬೋಧಿಸಬಹುದು
ಜಿಲ್ಲೆಯ ಎಲ್ಲ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲೂ ಈ ಯೋಜನೆ ಜಾರಿಗೆ ಬರಲಿದೆ. ೧೮ ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾವಂತ ಯುವಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಬಹುದು. ಪ್ರತಿ ತರಗತಿಗೆ ವಾರದಲ್ಲಿ ೨ ಅವಧಿಯನ್ನು ನೀಡಲಾಗುವುದು. ಸಮುದಾಯದ ಸಂಪನ್ಮೂಲ ವ್ಯಕ್ತಿ ಆಯ್ದ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಕನಿಷ್ಠ ಒಂದು ಸೆಮಿಸ್ಟರ್ ಅವಧಿಗೆ ಬೋಧಿಸಬೇಕು. ಆಯ್ಕೆಯಾದವರೊಂದಿಗೆ ಬಿಇಒ ಒಡಂಬಡಿಕೆ ಮಾಡಿಕೊಳ್ಳಬೇಕು ಎಂಬುದು ಇಲಾಖೆ ರೂಪಿಸಿರುವ ನೀತಿ.
ಕಲೆ ಹಾಗೂ ಕೌಶಲ, ವ್ಯಕ್ತಿತ್ವ ವಿಕಸನ, ಜನಪದ ಸೇರಿದಂತೆ ಎಲ್ಲ ರೀತಿಯ ಸಂಗೀತ ಮತ್ತು ನಾಟಕ, ಇಂಗ್ಲಿಷ್ ಸಂವಹನ ಕಲೆ, ಕಂಪ್ಯೂಟರ್ ಜ್ಞಾನ, ಕರಾಟೆ ಹಾಗೂ ಇತರೆ ಪ್ರಯೋಗ, ಯೋಗ ಮತ್ತು ಧ್ಯಾನ, ಕ್ರೀಡಾ ತರಬೇತಿ, ಭಾಷಣ, ಕಥೆ ಹೇಳುವುದು, ಜನಪದ ಗೀತೆ- ನೃತ್ಯ ವಿಷಯಗಳನ್ನು ಸಂಪನ್ಮೂಲ ವಿದ್ಯಾರ್ಥಿಗಳು ಬೋಧಿಸಬಹುದು.
ಈ ಯೋಜನೆಯಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳಿಗೆ ಇಲಾಖೆ ಯಾವುದೇ ರೀತಿಯ ಭತ್ಯೆ ಇಲ್ಲವೇ ಆರ್ಥಿಕ ಸೌಲಭ್ಯ ನೀಡುವುದಿಲ್ಲ. ಬದಲಿಗೆ ಅಭ್ಯರ್ಥಿಯ ತೃಪ್ತಿಕರ ಸೇವೆಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಡಯಟ್ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪರಿಶೋಧನಾ ಸಮಿತಿ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡುವುದು. ಡಯಟ್ ಉಪ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ, ತಾಲೂಕು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವರು.
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ವಿದ್ಯಾರ್ಥಿ ವಿಶೇಷ ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ

ಓ ಗುರುವೇ, ನೀನು ಗೆಳೆಯನಾಗು ಕಲಿಕೆಗೆ ಸಹಕರಿಸು !
ಚೀ. ಜ. ರಾಜೀವ ಮೈಸೂರು
ಮೊದಲಿದ್ದ ಪದವಿ ತರಗತಿಗಳನ್ನು ಈಗ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮ ತರಗತಿಗಳ ಸ್ವರೂಪವೇ ಬದಲಾಗಿದೆ. ಅಲ್ಲಿಗೆ ಬರುವ ವಿದ್ಯಾರ್ಥಿಗಳು, ಅವರ ಸಾಮಾಜಿಕ ಹಿನ್ನೆಲೆ-ಮುನ್ನೆಲೆ, ತಿಳಿವಳಿಕೆ-ಗ್ರಹಿಕೆಯ ಪ್ರಮಾಣ... ಹೀಗೆ ಎಲ್ಲವೂ ಬದಲಾಗಿದೆ. ಹಾಗಾಗಿ ಪಾಠ ಮಾಡುವ ಅಧ್ಯಾಪಕ ಬದಲಾಗಲೇಬೇಕು !
ನಿವೃತ್ತ ಪ್ರಾಧ್ಯಾಪಕ, ಚಿಂತಕ ಡಾ. ಕೆ. ವಿ. ನಾರಾಯಣ್ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕನ್ನಡ ಅಧ್ಯಾಪಕರ ಕಾರ್ಯಾ ಗಾರದಲ್ಲಿ ಇಂಥದ್ದೊಂದು ಅರ್ಥ ಬರುವ ಮಾತನಾಡಿದ್ದರು.
ಬಿಎಂಶ್ರೀ- ಕುವೆಂಪು, ತ. ಸು. ಶಾಮರಾಯ- ಜಿಎಸ್ಎಸ್, ಕುವೆಂಪು -ಪ್ರಭುಶಂಕರ್, ಪ್ರೊ. ಎಸ್. ವಿ. ರಂಗಣ್ಣ- ಸಿ. ಡಿ. ನರಸಿಂಹಯ್ಯ, ಜಿ. ಎಚ್. ನಾಯಕ್-ಎನ್.ಎಸ್.ತಾರಾನಾಥ್, ಡಾ. ದೇಜಗೌ- ಡಾ. ಸಿಪಿಕೆ ಅವರಂಥ ಗುರು-ಶಿಷ್ಯ ಪರಂಪರೆಯನ್ನು ಭವಿಷ್ಯದ ದಿನದಲ್ಲಿ ಕಾಣುವುದು ಕಷ್ಟ. ಈ ಜೋಡಿಯನ್ನು ಸೂಕ್ಷ್ಮವಾಗಿ ನೋಡಿ. ಎಲ್ಲರೂ ಬರಹಗಾರರೆ. ನಮ್ಮ ಕಾಲೇಜುಗಳು ಬಹುಕಾಲದವರೆಗೆ ಹೊತ್ತು ಮೆರೆಸಿದ್ದು ಇಂಥ ಪ್ರತಿಭೆಗಳನ್ನೇ. ಆದರೆ, ಈಗ ಬರೆಯುವವನಷ್ಟೇ ಪ್ರತಿಭಾನ್ವಿತನಲ್ಲ, ಕುಂಚ ಹಿಡಿಯುವವನು, ಕುಸ್ತಿ ಮಾಡುವವನು, ಕಂಸಾಳೆ ಬಾರಿಸುವವನು, ಕೊಳಲು ನುಡಿಸುವವನು,
ಕಬಡ್ಡಿ ಆಡುವವನು... ಹೀಗೆ ಎಲ್ಲರೂ ಪ್ರತಿಭಾನ್ವಿತರೆ. ಹಾಗಾಗಿ ತರಗತಿಗಳು ವೈವಿಧ್ಯಮಯಗೊಂಡಿವೆ. ವಿದ್ಯಾರ್ಥಿ ಕಲಿತರಷ್ಟೇ ಸಾಲದು, ಕೌಶಲ್ಯವನ್ನೂ ಮೈಗೂಡಿಸಿಕೊಂಡಿರಬೇಕು ಎಂಬುದು ಆಧುನಿಕ ಸಮಾಜದ ಅಪೇಕ್ಷೆ . ಮಾಹಿತಿ ತಂತ್ರಜ್ಞಾನದ ಪರಿಣಾಮದಿಂದಲೂ ತರಗತಿಗಳು ಮಾರ್ಪಾಟಾಗಿವೆ. ಯಾವುದೇ ವಿಷಯವನ್ನು ಪರಾಮರ್ಶೆ ಮಾಡಲು ವಿದ್ಯಾರ್ಥಿ ಈಗ ಗ್ರಂಥಾಲಯಕ್ಕೆ ಹೋಗಬೇಕೆಂದಿಲ್ಲ. ಕಂಪ್ಯೂಟರ್ನ ಗೂಗಲ್ ಆ ಪಾತ್ರವನ್ನು ನಿರ್ವಹಿಸುತ್ತಿದೆ. ಕಪ್ಪು ಹಲಗೆ- ಸೀಮೆಸುಣ್ಣ ಜಾಗದಲ್ಲಿ ಬಿಳಿ ಹಲಗೆ- ಹಸಿರು ಮಾರ್ಕರ್, ನೋಟ್ಸ್ ಬದಲು ಸಿಡಿ ಬಂದು ಕುಳಿತಿವೆ.
ಇಂಥ ಹೊತ್ತಲ್ಲಿ, ಗುರು ಹೇಗಿರಬೇಕು ?. ಇದು ನೈಜ ಅಧ್ಯಾಪಕರ ಮುಂದಿರುವ ಸವಾಲು. ಬಹುದೊಡ್ಡ ಗುರು-ಶಿಷ್ಯ ಪರಂಪರೆಯನ್ನು ಹೊಂದಿರುವ ಇತಿಹಾಸವಿರುವ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ತಮ್ಮ ಕನಸಿನ ೨೧ನೇ ಶತಮಾನದ ಗುರುವನ್ನು ವಿದ್ಯಾರ್ಥಿ ವಿಶೇಷದಲ್ಲಿ ಕಡೆದಿದ್ದಾರೆ. ಅವರ ಕನಸಿನಲ್ಲಿ ವಾಸ್ತವದ ಶಿಕ್ಷಕರೂ ಇದ್ದಾರೆ, ಅವರ ಗುಣ-ಅವಗುಣಗಳೂ ವ್ಯಕ್ತಗೊಂಡಿವೆ. ಮಹಾರಾಜ ಕಾಲೇಜಿನ ವರ್ತಮಾನದ ಸ್ಥಿತಿ-ಗತಿಯ ಮೇಲೂ ಪ್ರತಿಕ್ರಿಯೆಗಳು ಬೆಳಕು ಚೆಲ್ಲಿವೆ !

೨ ಲಕ್ಷ ಕಲಿಕಾರ್ಥಿಗಳನ್ನು ಸೆಳೆಯಲು ಗುರಿ
ಚೀ. ಜ. ರಾಜೀವ ಮೈಸೂರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಹೊಸ ಹೆಜ್ಜೆಯೆಂದರೆ ರಾಜ್ಯದ ೧೦ ಕಡೆ ಮಿನಿ ಮುಕ್ತ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದು.
‘ಮುಕ್ತ ವಿವಿ ಈಗಾಗಲೇ ಆರು ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದ್ದು, ಬಹಳ ಹಿಂದಿನಿಂದಲೇ ಕಾರ್ಯನಿರ್ವಹಿಸುತ್ತಿವೆ. ಇದರ ಜತೆಗೆ ಈ ವರ್ಷ ಹೊಸದಾಗಿ ಇನ್ನೂ ನಾಲ್ಕು ಪ್ರದೇಶಿಕ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಒಂದೊಂದು ಪ್ರಾದೇಶಿಕ ಕೇಂದ್ರವೂ ಒಂದೊಂದು ಮಿನಿ ವಿವಿ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು’ ಎನ್ನು ತ್ತಾರೆ ವಿವಿ ಕುಲಪತಿ ಪ್ರೊ. ಕೆ. ಎಸ್. ರಂಗಪ್ಪ .
ಹಾಗೆ ನೋಡಿದರೆ, ಪ್ರಾದೇಶಿಕ ಕೇಂದ್ರಗಳ ಕಲ್ಪನೆ ಹೊಸದೇನಲ್ಲ. ಆದರೆ, ಅವುಗಳ ಕಾರ್ಯವೈಖರಿ ಮಾತ್ರ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಒಬ್ಬ ಬೋಧಕೇತರ ವರ್ಗದ ಸಿಬ್ಬಂದಿಯನ್ನು ಇಂಥ ಕೇಂದ್ರಗಳ ಉಸ್ತುವಾರಿಗೆ ನೇಮಿಸಲಾಗಿತ್ತು. ಮೂಲ ಸೌಕರ್ಯಗಳ ಕೊರತೆಯೂ ಇತ್ತು. ಹಾಗಾಗಿ ವಿವಿ ಆಡಳಿತ ಎಲ್ಲ ಹಳೆ ಕೇಂದ್ರಗಳಿಗೆ ಕಾಯಕಲ್ಪ ನೀಡಲು ನಿರ್ಧರಿಸಿದೆ. ಒಂದು ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಸೇವಾ ಶಿಸ್ತನ್ನು ನಿಗದಿ ಪಡಿಸಿ, ಹೊಸ ನಾಲ್ಕು ಹೊಸ ಕೇಂದ್ರಗಳನ್ನು ಆರಂಭಿಸುತ್ತಿದೆ. ಈ ಎಲ್ಲವೂಮಿನಿ ಮುಕ್ತ ವಿಶ್ವವಿದ್ಯಾನಿಲಯಗಳಂತಾಗಲಿವೆ. ಅದಕ್ಕಾಗಿ ಎಲ್ಲ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಕೊಡಲು ವಿವಿ ನಿರ್ಧರಿಸಿದೆ.
ನಾಲ್ಕು ಹೊಸ ಕೇಂದ್ರಗಳು: ಮೊದಲ ಹೆಜ್ಜೆಯಾಗಿ ಬೆಂಗಳೂರು, ಶಿವಮೊಗ್ಗ, ಧಾರವಾಡ, ದಾವಣಗೆರೆ, ಗುಲ್ಬರ್ಗಾ, ಮಂಗಳೂರು ಕೇಂದ್ರಗಳನ್ನು ಶಕ್ತಿಯುತ ಗೊಳಿಸಬೇಕು. ಈ ವರ್ಷದಿಂದ ಹಾಸನ, ಚಾಮರಾಜ ನಗರ, ಬಳ್ಳಾರಿ ಮತ್ತು ತುಮಕೂರಿನಲ್ಲಿ ಕೇಂದ್ರ ಗಳನ್ನು ತೆರೆಯಲಾಗಿದೆ. ಎಲ್ಲ ಕೇಂದ್ರಗಳಿಗೂ ಪೂರ್ಣಾವಧಿ ನಿರ್ದೇಶಕ ಹಾಗೂ ಸಹಾಯಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ಈ ಪೈಕಿ ೯ ಜನ ಪಿಎಚ್.ಡಿ ಪೂರ್ಣಗೊಳಿಸಿ ರುವ ಪ್ರಾಧ್ಯಾಪಕರು.
‘ಪ್ರಾದೇಶಿಕ ನಿರ್ದೇಶಕರ ಸ್ಥಾನಗಳಿಗೆ ಒಂದು ಶೈಕ್ಷಣಿಕ ಘನತೆಯನ್ನು ತುಂಬಲು ಹಾಗೂ ಕೇಂದ್ರಗಳನ್ನು ಮಿನಿ ವಿವಿಗಳನ್ನಾಗಿ ರೂಪಿಸಲು ಇಂಥ ಶಕ್ತಿಯುತ ಅಭ್ಯರ್ಥಿಗಳನ್ನು ನೇಮಿಸಲಾಗಿದೆ. ಇನ್ಮುಂದೆ, ಇಲ್ಲಿಯೇ ವಿವಿಯ ವಿವರಣಾ ಪುಸ್ತಕ, ಬೋಧನಾ ಸಾಮಗ್ರಿಯನ್ನು ನೀಡಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮೀಣ ವಿದ್ಯಾರ್ಥಿಗಳು ಮೈಸೂರಿಗೆ ಬರುವುದು ತಪ್ಪುತ್ತದೆ’ ಎನ್ನುತ್ತಾರೆ ರಂಗಪ್ಪ.
ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿರುವವರ ಸಂಖ್ಯೆ ಬಹಳ ಕಡಿಮೆ. ಈಗಿರುವ ಶೇ. ೧೨ರಷ್ಟು ಪ್ರಮಾಣವನ್ನು ೨೦೨೦ರ ವೇಳೆಗಾದರೂ ಶೇ.೩೦ಕ್ಕೆ ತರಬೇಕು ಎಂಬುದು ಕೇಂದ್ರ ಸರಕಾರದ ಕನಸು. ನಮ್ಮ ದೇಶದ ಸಾಂಪ್ರದಾಯಿಕ ವಿವಿಗಳಿಂದ ಈ ಕನಸು ನನಸು ಅಸಾಧ್ಯ. ಮುಕ್ತ ವಿವಿಗಳು ಚಟುವಟಿಕೆ ವಿಸ್ತರಿಸಬೇಕು. ೨೦೦೯-೧೦ನೇ ಸಾಲಿನಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ೧ ಲಕ್ಷಕ್ಕೂ ಹೆಚ್ಚಿತ್ತು. ಈ ವರ್ಷ ೨ ಲಕ್ಷ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಕೆಂಬುದು ವಿವಿ ಗುರಿ. ೧೮ ರಿಂದ ೮೦ರ ವಯೋಮಾನದವರನ್ನು ಸೆಳೆಯಲು ವಿವಿ ಸನ್ನದ್ಧವಾಗಿದೆ ಎಂದು ವಿವಿ ಈ ವರ್ಷದ ವಿವರಣಾ ಪುಸ್ತಕದಲ್ಲಿ ಹೇಳಿಕೊಂಡಿದೆ.
ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರಕಾರ ಬಯಸುವಷ್ಟು ವಿದ್ಯಾರ್ಥಿಗಳನ್ನು ಸೆಳೆಯಲು ಜಿಲ್ಲೆಗೊಂದು ಮುಕ್ತ ವಿವಿ ಬೇಕು ಎಂದು ಇದೇ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಸುಧಾರಾವ್ ತಮ್ಮ ಅಧಿಕಾರವಧಿಯ ಕಡೆ ದಿನಗಳಲ್ಲಿ ಸಲಹೆ ನೀಡಿದ್ದರು. ಅದು ಸಾಧ್ಯವಾಗದ ಮಾತು ಎಂದು ಅಂದಿನ ಉನ್ನತ ಶಿಕ್ಷಣ ಸಚಿವ ನಕ್ಕು ಸುಮ್ಮನಾಗಿದ್ದರು. ಆದರೆ, ಈಗ ಪ್ರಾದೇಶಿಕ ಕೇಂದ್ರಗಳನ್ನೇ ಮಿನಿ ಮುಕ್ತ ವಿವಿ ಮಾದರಿಯಲ್ಲಿ ರೂಪಿಸಲಾಗುತ್ತಿದೆ.

ಪ್ಲಾಸ್ಟಿಕ್ ಫ್ರೀ ಕ್ಯಾಂಪಸ್
ಚೀ. ಜ. ರಾಜೀವ ಮೈಸೂರು
ಈ ಕ್ಯಾಂಪಸ್ಗೆ ಪ್ಲಾಸ್ಟಿಕ್ನಿಂದ ತಯಾರಿಸಿದ, ರೂಪಿತವಾದ, ಅಲಂಕೃತವಾದ ಯಾವುದೇ ರೀತಿಯ ಪಠ್ಯ-ಪಠ್ಯೇತರ ಸಾಮಗ್ರಿಗಳನ್ನು ತರುವಂತಿಲ್ಲ !
ಜೆಎಸ್ಎಸ್ ಕಾನೂನು ಕಾಲೇಜಿಗೆ ಪ್ರವೇಶಿಸಿದ ತಕ್ಷಣ, ಇಂಥದ್ದೊಂದು ‘ಕಾನೂನ’ನನ್ನು ಹೊತ್ತ ಭಿತ್ತಿಬರಹಗಳು ಗಮನಸೆಳೆಯುತ್ತವೆ. ಇದರಲ್ಲೇನಾದರೂ ತಿರುಳು ಇರಬಹುದೇ ಎಂದು ಕ್ಯಾಂಪಸ್ ಸುತ್ತು ಹಾಕಿದರೆ, ಎಲ್ಲಿಯೂ ಪ್ಲಾಸ್ಟಿಕ್ನ ಸುಳಿವು ಸಿಗದು !
‘ಪ್ಲಾಸ್ಟಿಕ್ ಪ್ರವೇಶ’ ನಿರ್ಬಂಧಿಸಿದ ಈ ನಿಯಮವನ್ನು- ಕಾಲೇಜಿನ ಆಡಳಿತ ಮಂಡಳಿಯಾಗಲೀ, ಪ್ರಾಂಶುಪಾಲರಾಗಲಿ, ಆಡಳಿತಾಧಿಕಾರಿಯಾಗಲಿ ವಿಧಿಸಿಲ್ಲ. ಬಣ್ಣ-ಬಣ್ಣದ ಕಾಗದ ಪೇಪರ್ನಲ್ಲಿ ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರೇ ‘ಪ್ಲಾಸ್ಟಿಕ್ ವಿರೋಧಿ’ ಹೇಳಿಕೆಗಳನ್ನು ಬರೆದು, ಕಂಬ-ಕಂಬಗಳಿಗೆ ಅಂಟಿಸಿದ್ದಾರೆ.
ನೋ ಟು ಪ್ಲಾಸ್ಟಿಕ್, ಯಸ್ ಟು ಪೇಪರ್, ಸೇ ಟಾಟಾ, ಬೈ ಟು ಪ್ಲಾಸ್ಟಿಕ್... ಎಂದು ಸರಳವಾಗಿಯೇ ಪ್ಲಾಸ್ಟಿಕ್ನ ದುರ್ಗಣಗಳನ್ನು ಸಾರುವ ಹತ್ತಾರು ಬರಹ ಕಾಣಬಹುದು. ಒಂದರ್ಥದಲ್ಲಿ ಇದು ವಿದ್ಯಾರ್ಥಿ ಸಮುದಾಯ ವಿಧಿಸಿಕೊಂಡಿರುವ ಸ್ವಯಂ ‘ಶಾಸನ’.
ಈ ಕಾಲೇಜಿನಲ್ಲಿ ಈಗ ‘ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ನಿರ್ಮಾಣ’ ಸಪ್ತಾಹ ಶುರುವಾಗಿದೆ. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಎಸ್. ಸುರೇಶ್, ಪ್ರಾಧ್ಯಾಪಕ ಪ್ರೊ. ವೇಣುಗೋಪಾಲ್, ಉಪನ್ಯಾಸಕ ಜಗದೀಶ್ ಅವರ ಮಾರ್ಗದರ್ಶನದಲ್ಲಿ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರು ಪಾಲ್ಗೊಳ್ಳುತ್ತಿದ್ದಾರೆ.
ಭಾವನೆಗಳನ್ನು ಕೆರಳಿಸುವ ಇಲ್ಲವೇ ಪ್ರಚೋದಿಸುವ ವಸ್ತ್ರ ಧರಿಸುವಂತಿಲ್ಲ, ಸೆಲ್ ತರುವಂತಿಲ್ಲ, ಬೈಕ್ ತರುವಂತಿಲ್ಲ, ರ್ಯಾಗಿಂಗ್ ಮಾಡುವಂತಿಲ್ಲ, ತಂಬಾಕು ಉತ್ಪನ್ನಗಳಿಗೆ ಅವಕಾಶವಿಲ್ಲ ... ಎಂಬಂಥ ನಾನಾ ‘ಇಲ್ಲಗಳ ಕ್ಯಾಂಪಸ್’ ನಿರ್ಮಾಣ ಮಾಲಿಕೆಯ ಮುಂದುವರಿದ ಭಾಗವಿದು.
ಲಂಚ್ ಬಾಕ್ಸ್ ಇಲ್ಲವೇ ಬೇರೆ ಯಾವುದಾದರೂ ಪರಿಕರಕ್ಕೆ ಹೊದಿಸಿದ ಕವರ್ ಆಗಿ, ಚಾಕೋಲೇಟ್ ರ್ಯಾಪರ್ ರೂಪದಲ್ಲಿ, ಪ್ಲಾಸ್ಟಿಕ್ ಶೀಟ್ಸ್, ಫೈಲ್ಸ್ ಆಕಾರ ಸೇರಿದಂತೆ ವಿವಿಧ ರೂಪದಲ್ಲಿ ಪ್ಲಾಸ್ಟಿಕ್ ಕ್ಯಾಂಪಸ್ಗಳನ್ನು ಪ್ರವೇಶಿಸುತ್ತದೆ. ಬಳಸುವ ಪೆನ್-ಪೆನ್ಸಿಲ್, ಧರಿಸುವ ಕನ್ನಡಕಗಳು ಪ್ಲಾಸ್ಟಿಕ್ನಿಂದಲೇ ರೂಪಿತ. ಈ ಎಲ್ಲವನ್ನೂ ಸಾಧ್ಯವಾದಷ್ಟು ಮಟ್ಟಿಗೆ ಒಳ ತರುವುದನ್ನು, ಬಳಸುವುದನ್ನು ಕಡಿಮೆ ಮಾಡಬೇಕೆಂಬುದು ಸಪ್ತಾಹದ ವಾಸ್ತವ ನೀತಿ.
‘ಆ. ೧೬ ರಿಂದ ೨೧ರವರೆಗೆ ನಮ್ಮ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಫ್ರೀ ಕ್ಯಾಂಪಸ್ ಸಪ್ತಾಹ ಕೈಗೊಂಡಿದ್ದಾರೆ. ಈ ದಿನಗಳಲ್ಲಿ ಪ್ಲಾಸ್ಟಿಕ್ನಿಂದ ರೂಪಿತವಾದ ಯಾವುದೇ ಸಾಮಗ್ರಿಯನ್ನು ವಿದ್ಯಾರ್ಥಿಗಳು ಕ್ಯಾಂಪಸ್ ಒಳಗೆ ತರುವುದಿಲ್ಲ’ ಎನ್ನುತ್ತಾರೆ ಕಾಲೇಜಿನ ರೀಸರ್ಚ್ ಗ್ರೂಪ್ನ ಸಂಚಾಲಕ, ಉಪನ್ಯಾಸಕ ಎ.ಟಿ. ಜಗದೀಶ್.
‘ಸಾಂಕೇತಿಕವಾಗಿ ಆರಂಭವಾದ ಈ ಸಪ್ತಾಹ, ತನ್ನ ಅವಧಿಯ ಬಳಿಕ ವಿದ್ಯಾರ್ಥಿಗಳ ದೈನಂದಿನ ಚಟುವಟಿಕೆಯ ಭಾಗವಾಗಬೇಕು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕಾದ ಪ್ಲಾಸ್ಟಿಕ್ ವಿರೋಧಿ ಮನೋಭಾವಕ್ಕೆ ಇದೂ ಒಂದು ಹೆಜ್ಜೆಯಾಗಲಿ’ ಎನ್ನುತ್ತಾರೆ ಪ್ರಾಂಶುಪಾಲ ಪ್ರೊ. ಸುರೇಶ್.
‘ನಿತ್ಯದ ಬದುಕಿನಿಂದ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ದೂರವಿಡುತ್ತೇವೆ ಎಂದರೆ, ಯಾರೂ ಅದನ್ನು ನಂಬುವುದಿಲ್ಲ. ಅಷ್ಟರ ಮಟ್ಟಿಗೆ ಪ್ಲಾಸ್ಟಿಕ್ ಎಂಬುದು ಅನಿವಾರ್ಯ. ಈ ಸಪ್ತಾಹದಿಂದ ನಾಳೆಯೇ, ನಮ್ಮ ವಿದ್ಯಾರ್ಥಿಗಳು ಪ್ಲಾಸ್ಟಿಕ್ ತೊರೆಯುತ್ತಾರೆ ಎಂದೇನಲ್ಲ. ಆದರೆ, ಯಾವುದೇ ಸಮಸ್ಯೆಯ ಸೃಷ್ಟಿಯ ಹಿಂದೆ, ಪರಿಹಾರವೂ ಇರುತ್ತದೆ. ಇಂಥ ಸಪ್ತಾಹಗಳು ಪರ್ಯಾಯ ಗಳನ್ನು ಹುಡುಕಲು ಪ್ರೇರಕವಾದೀತು’ ಎನ್ನುತ್ತಾರೆ ಪ್ರೊ. ವೇಣು ಗೋಪಾಲ್.
ತಾವೇ ಜಾರಿಗೆ ತಂದಿರುವ ಶಾಸನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಂತಸವಿದೆ. ‘ಈ ಬಗ್ಗೆ ನಾವು ಕಾಲೇಜಿನ ಸುತ್ತ ಮುತ್ತಲಿನ ಪ್ರದೇಶಗಳಿಗೆ ತೆರಳಿ, ಜಾಥಾದ ಮೂಲಕ ಅರಿವು ಮೂಡಿಸು ತ್ತೇವೆ. ಇಲ್ಲಿಯೇ ಪೇಪರ್ ಬ್ಯಾಗ್ಗಳನ್ನು ತಯಾರಿಸುತ್ತೇವೆ’ ಎಂದು ಅತ್ಯುತ್ಸಾಹದಲ್ಲಿ ಮಾತನಾಡುತ್ತಾರೆ. ಒಟ್ಟಾರೆ -ಜೆಎಸ್ಎಸ್ ಕಾಲೇಜಿನ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ಯನ್ನು ಕಡಿಮೆ ಮಾಡಲು ಪಣ ತೊಟ್ಟಿದ್ದಾರೆ. ಇದು ಇತರ ಕಾಲೇಜಿನ ವಿದ್ಯಾರ್ಥಿಗಳಿಗೂ ಮಾದರಿಯಾಗಬೇಕಷ್ಟೇ.
ಮಹಿಳಾ ಕಾಲೇಜಿನಲ್ಲಿ ವಿಜ್ಞಾನ ಪದವಿ ಆರಂಭ
ವಿಜಯನಗರದಲ್ಲಿರುವ ಸರಕಾರಿ ಮಹಿಳಾ ಕಾಲೇಜಿನಲ್ಲಿ ೨೦೧೦-೧೧ನೇ ಶೈಕ್ಷಣಿಕ ಸಾಲಿನಿಂದ ಅಧಿಕೃತವಾಗಿ ವಿಜ್ಞಾನ ಪದವಿ ಆರಂಭವಾಗಿದೆ.
ವಿವಿ ಸಿಂಡಿಕೇಟ್ ಸದಸ್ಯ ಪ್ರೊ. ಎ. ನಾಗೇಂದ್ರರಾವ್ ಅವರು ಬಿಎಸ್ಸಿ ಪದವಿ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಇತರೆ ವಿಷಯಗಳಿಗಿಂತ ವಿಜ್ಞಾನದ ಕಲಿಕೆ ಅವಶ್ಯಕತೆ ಹೆಚ್ಚಿದೆ. ವಿದ್ಯಾರ್ಥಿನಿಯರು ವಿಜ್ಞಾನ ಪದವಿ ಕಲಿಯುವ ಮೂಲಕ, ಮೂಲ ವಿಜ್ಞಾನಕ್ಕೆ ಒತ್ತು ನೀಡಬೇಕಿದೆ ಎಂದರು. ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಕೆ. ಶ್ರೀಹರಿ, ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯು ವಂತಾಗಬೇಕು ಎಂದರು. ಪ್ರಾಂಶು ಪಾಲ ಪ್ರೊ. ಕೆ. ಎಸ್. ಲಕ್ಷ್ಮಣ ಗೌಡ ಅಧ್ಯಕ್ಷತೆ ವಹಿಸಿದ್ದರು.

ಮುಚ್ಚುವ ಹಾದಿಯಲ್ಲಿದೆ ಲಕ್ಷ್ಮೀಪುರಂ ಶಾಲೆ
ವಿಕ ವಿಶೇಷ ಮೈಸೂರು
ಲಕ್ಷ್ಮೀಪುರಂ ಶಾಲೆಗೆ ಸೇರಲು ಮಕ್ಕಳೇ ಬರುತ್ತಿಲ್ಲ !
ಆರು ವರ್ಷ ಉರುಳಿದರೆ ಶತಮಾನೋತ್ಸವ ಆಚರಣೆಯ ಸಡಗರ - ಸಂಭ್ರಮವನ್ನು ಕಾಣಬೇಕಿರುವ ನಗರದ ಅತ್ಯಂತ ಹಳೆಯ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ೨೦೧೦-೧೧ನೇ ಸಾಲಿಗೆ ವ್ಯಾಸಂಗ ಮಾಡಲು ಉಳಿದ ಮಕ್ಕಳ ಸಂಖ್ಯೆ ಕೇವಲ ೫. ತರಗತಿಗಳು ೭, ಮಕ್ಕಳು ೫ ಎಂಬ ವಿಚಿತ್ರ ಸನ್ನಿವೇಶ !
ಹಾಗಾಗಿ ಒಂದಷ್ಟು ದಿನ ಕಾಯ್ದು ನೋಡಿ, ತಾತ್ಕಾಲಿಕವಾಗಿ ಶಾಲೆ ಯನ್ನು ಮುಚ್ಚಲು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ.
ಲಕ್ಷ್ಮೀಪುರಂನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಇಷ್ಟುದ್ದದ ಹೆಸರಿನಲ್ಲಿ ಕರೆದರೆ, ತಕ್ಷಣ ಯಾರಿಗೂ ಈ ಶಾಲೆಯ ನೆನಪು ಬಾರದು. ಅದೇ ಲಕ್ಷ್ಮೀಪುರಂ ಶಾಲೆ ಎನ್ನಿ ! ತಕ್ಷಣ, ಓ ಅದ... ಸಂಸದ ಎಚ್.ವಿಶ್ವನಾಥ್, ನಟ ಅಂಬರೀಷ್ ಓದಿದ ಶಾಲೆ ಎಂದು ನೆನಪು ಮಾಡಿಕೊಳ್ಳುವವರೇ ಹೆಚ್ಚು.
ಸ್ಥಳೀಯ ಶಾಸಕ ಎಸ್. ಎ. ರಾಮದಾಸ್ ಹಾಗೂ ನಂಜನಗೂಡು ಶಾಸಕ ವಿ. ಶ್ರೀನಿವಾಸಪ್ರಸಾದ್ ಅವರಿಗೂ ಈ ಶಾಲೆ ಅಂದ್ರೆ ಅಚ್ಚು ಮೆಚ್ಚು. ೧೯೧೬ರಲ್ಲಿ ಮೈಸೂರು ಮಹಾರಾಜರಿಂದ ಸ್ಥಾಪನೆಯದ ಈ ಶಾಲೆ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದೆ. ಇಲ್ಲಿ ತಯಾರಾದ ಅಸಂಖ್ಯಾತ ಮಕ್ಕಳು ಸಮಾಜದ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸು ತ್ತಿದ್ದಾರೆ. ಅರಮನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಸಿಬ್ಬಂದಿಗಳ ಮಕ್ಕಳಿಗೂ ಲಕ್ಷ್ಮೀಪುರಂ ಶಾಲೆಯೇ ಸರಸ್ವತಿ ಮಂದಿರ.
ಅಶೋಕಪುರಂ, ಕೃಷ್ಣಮೂರ್ತಿಪುರಂ, ಜಯನಗರ, ಲಕ್ಷ್ಮೀಪುರಂ, ನಂಜುಮಳಿಗೆ ಸೇರಿದಂತೆ ಹೃದಯ ಭಾಗದಲ್ಲಿರುವ ಬಹುತೇಕ ಎಲ್ಲ ನಿವಾಸಿಗಳ ಮಕ್ಕಳು ಹಿಂದೊಮ್ಮೆ ‘ಅ,ಆ,ಇ.ಈ...’-ಕಲಿತಿದ್ದು ಇಲ್ಲಿಯೇ. ಇಂಥ ಶಾಲೆ ಸೇರಲು ಈಗ ಮಕ್ಕಳೇ ಬರುತ್ತಿಲ್ಲ ಎಂಬುದು ಮಾತ್ರ ಸೋಜಿಗದ ಸಂಗತಿ. ಹಿಂದೊಮ್ಮೆ ಈ ಶಾಲೆಯಲ್ಲಿ ೬೦೦ ರಿಂದ ೮೦೦ ಮಕ್ಕಳು ಕಲಿಯುತ್ತಿದ್ದರು, ಅಂಗಳದಲ್ಲಿ ನಿಂತು ಜನಗಣ ಮನ ಹಾಡುವುದನ್ನು ನೋಡುವುದೇ ಒಂದು ಭಾಗ್ಯ ಎಂಬ ದಿನಗಳು ಈಗ ನೆನಪು ಮಾತ್ರ.
೨೦ ವಿದ್ಯಾರ್ಥಿಗಳಿಗೆ ಹುಡುಕಾಟ: ಶಿಕ್ಷಣ ಇಲಾಖೆ ಮೂಲಗಳು ಹೇಳುವ ಪ್ರಕಾರ- ೨೦೦೯-೧೦ನೇ ಸಾಲಿನಲ್ಲಿ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಕ್ಕಳ ಸಂಖ್ಯೆ ಕೇವಲ ೧೫ರ ಆಸು-ಪಾಸಿನಲ್ಲಿ ಇತ್ತು. ಇವರ ಪೈಕಿ ೧೦ ಮಕ್ಕಳು ಏಳನೇ ತರಗತಿ ಉತ್ತೀರ್ಣರಾಗಿ, ಪ್ರೌಢಶಾಲೆ ಸೇರಲು ಟಿಸಿ ಪಡೆದುಕೊಂಡು ಹೋದರು. ಹಾಗಾಗಿ ಈಗ ಉಳಿದಿರುವವರು ಐವರು ಮಾತ್ರ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಂದನ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.
‘ಈ ಶಾಲೆಯ ಆಸುಪಾಸಿನಲ್ಲಿ ಇಲಾಖೆ ನಡೆಸಿದ ಗಣತಿ ಪ್ರಕಾರ ಶಾಲೆ ಬಿಟ್ಟ ಮಕ್ಕಳು ಇದ್ದಾರೆ. ಅವರೆಲ್ಲರನ್ನೂ ಶಾಲೆಗೆ ಕರೆತರಲಾಗು ವುದು. ಜೂ. ೩೦ರ ತನಕವೂ ಪ್ರವೇಶಕ್ಕೆ ಅವಕಾಶವಿದೆ. ಒಟ್ಟು ಮಕ್ಕಳ ಸಂಖ್ಯೆ ೨೦ ಆದರೂ ಶಾಲೆಯನ್ನು ಮುಂದುವರಿಸಲಾಗುವುದು’ ಎಂದು ತಿಳಿಸಿದರು.
ಖಾಸಗಿ ಶಾಲೆಗಳ ಆಕರ್ಷಣೆ : ಲಕ್ಷ್ಮೀಪುರಂ ಸುತ್ತ-ಮುತ್ತ ಖಾಸಗಿ ಶಾಲೆಗಳು ಹೆಚ್ಚಾಗಿದ್ದೇ ಲಕ್ಷ್ಮೀಪುರಂ ಶಾಲೆ ಸೊರಗಲು ಕಾರಣ ವಾಯಿತು. ಈ ನಡುವೆ ಶಾಲೆಯನ್ನು ಸುಧಾರಿಸಿ, ಮಕ್ಕಳನ್ನು ಸೆಳೆ ಯಲು ಶಾಲೆಯನ್ನು ರೋಟರಿ ಸಂಸ್ಥೆಯವರಿಗೆ ದತ್ತು ನೀಡಲಾಯಿತು. ಇದಲ್ಲದೆ, ಮಕ್ಕಳನ್ನು ಸೆಳೆಯಲು, ತಮ್ಮಲ್ಲಿಯೇ ಹಿಡಿದಿಟ್ಟುಕೊಳ್ಳಲು ಇಲಾಖೆ ಹತ್ತಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಲೇ ಇದೆ. ಆದರೂ ಮಕ್ಕಳು ಸರಕಾರಿ ಶಾಲೆಗೆ ಬರುತ್ತಿಲ್ಲ. ಹಾಗಾಗಿ, ಇದಕ್ಕೇನು ಪರಿಹಾರ ಎಂಬುದು ಇಲಾಖೆಗೂ ಹೊಳೆಯುತ್ತಿಲ್ಲ. ಆದರೂ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚದೇ, ಉಳಿಸಿಕೊಳ್ಳಲು ಪ್ರಯತ್ನ ಸಾಗಿದೆ. ಸಂಸದ ಎಚ್. ವಿಶ್ವನಾಥ್, ಸ್ಥಳೀಯ ಶಾಸಕ ಎಸ್. ಎ. ರಾಮದಾಸ್, ವಿ. ಶ್ರೀನಿವಾಪ್ರಸಾದ್ ಶಾಲೆಗೊಮ್ಮೆ ಬಂದು ಹೋಗಬೇಕಿದೆ !

‘ಮಾರ್ಸ್’ ನಿಂದ ಆಕಾಶಕಾಯ ಪರಿಚಯ
ವಿಕ ಸುದ್ದಿಲೋಕ ಮೈಸೂರು
‘ದೇವರ ಪೆಪ್ಪರಮೆಂಟೇನಮ್ಮ ಗಗನದಳೊಳೆ ಯುವ ಚಂದಿರನು...?’ ಎಂದು ರಸಋಷಿ ಕುವೆಂಪು ಮಗುವಿನ ಮುಗ್ಧ ಮನಸ್ಸಿನ ಕುರಿತು ಬರೆದರೆ, ‘ತಾರೆಗಳ ಜರತಾರಿ ಅಂಗಿ ತೊಡಿಸು ವರಂತೆ, ಚಂದಿರನ ತಂಗಿ ಯರು ನಿನ್ನ ಕರೆದು...’ ಎಂದು ಮಗುವನ್ನು ಸಂತೈಸಲು ಕವಿ ಕೆ.ಎಸ್. ನರಸಿಂಹ ಸ್ವಾಮಿ ಕವನ ಬರೆದಿದ್ದಾರೆ.
ಮಕ್ಕಳ ಪಾಲಿನ ಚಂದ ಮಾಮನೇ ಹಾಗೆ. ಭೂಮಿಯ ಉಪಗ್ರಹವೂ ಆಗಿರುವ ಚಂದ್ರ ಕವಿಗಳಷ್ಟೇ ಅಲ್ಲ, ವಿಜ್ಞಾನಿ-ಸಂಶೋಧಕರು, ಖಗೋಳ ವಿಜ್ಞಾನಿಗಳು ಸೇರಿದಂತೆ ಎಲ್ಲರ ಪಾಲಿಗೂ ಯಾವತ್ತೂ ಆಕರ್ಷಣೆಯ ತಾರೆ. ಇಂಥ ಚಂದ್ರ ವಾಸ್ತವವಾಗಿ ಹೇಗಿರುತ್ತಾನೆ ?, ಆತನಷ್ಟೇ ಅಲ್ಲ. ಸೌರವ್ಯೂಹದಲ್ಲಿರುವ ಇತರೆ ಆಕಾಶಕಾಯಗಳು, ಅವುಗಳ ಉಪಗ್ರಹಗಳು ಹೇಗಿರುತ್ತವೆ ?, ಅವುಗಳನ್ನು ವೈಜ್ಞಾನಿಕ ನೆಲೆಯಲ್ಲಿ ಗ್ರಹಿಸಿಕೊಳ್ಳುವುದು, ಅರ್ಥಮಾಡಿಕೊಳ್ಳುವುದು ಹೇಗೆ ?, ಅವುಗಳ ರಚನೆ ಹೇಗಿರುತ್ತದೆ ?, ಸೌರಗ್ರಹಗಳ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಹೇಗೆ ...?
ಇಂಥ ಕುತೂಹಲ ಭರಿತ ಹತ್ತಾರು ಪ್ರಶ್ನೆಗಳು ಮಕ್ಕಳ ಮನಸ್ಸಿನಲ್ಲಿ ಮೂಡುವುದು ಸಹಜ. ನಗರ ಪ್ರದೇಶದಲ್ಲಿ ಕಲಿಯುವವರಿಗೆ ಯಾರಾದರೂ ಉತ್ತರ ಹೇಳಿಯಾರು. ಆದರೆ, ಗ್ರಾಮೀಣ ಮಕ್ಕಳಿಗೆ, ಶಾಲೆಯಿಂದ ಹೊರಗುಳಿದ ಚಿಣ್ಣರಿಗೆ ತಿಳಿಸುವವರು ಯಾರು? ಈ ನೆಲೆಯಲ್ಲೇ ೧೪ ತಿಂಗಳ ಹಿಂದೆ ಆರಂಭವಾಗಿದ್ದು ‘ಮೈಸೂರು ಅಸ್ಟ್ರಾನಮಿಕಲ್ ರೀಸರ್ಚ್ ಸೊಸೈಟಿ(ಮಾರ್ಸ್ )’ ಸಂಸ್ಥೆ, ಸುಮಾರು ೪೫ ಸಾವಿರ ಮಕ್ಕಳಿಗೆ ಆಕಾಶಕಾಯಗಳನ್ನು ಪರಿಚಯಿಸಿದೆ.
ರೋಟರಿ ಮೈಸೂರು ಮಿಡ್ಟೌನ್ನ ೨೫ ಲಕ್ಷ ರೂ. ಪ್ರಾಯೋಜಕತ್ವದ ನೆರವಿನೊಂದಿಗೆ ಮಾರ್ಸ್ ತನ್ನಲ್ಲಿಗೆ ಬರುವ ಮಕ್ಕಳಿಗೆ ಆಕಾಶಕಾಯಗಳನ್ನು ತೋರಿಸುವ ಕಾಯಕದಲ್ಲಿ ನಿರತವಾಗಿದೆ. ಇದಕ್ಕಾಗಿ ಹೂಟಗಳ್ಳಿಯಲ್ಲಿರುವ ರೋಟರಿ ಮಿಡ್ಟೌನ್ ಅಕಾಡೆಮಿ ಸ್ಕೂಲ್ನ ಆವರಣದಲ್ಲಿ ಎರಡು ಟೆಲಿಸ್ಕೋಪ್ಗಳ (ದೂರದರ್ಶಕ)ನ್ನ ಅಳವಡಿಸಲಾಗಿದೆ. ಸುಸಜ್ಜಿತ ವಾಹನವೂ ಇದೆ. ಮಾರ್ಸ್ ನ ಈ ಯೋಜನೆಯಲ್ಲಿ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಚಿರಂಜೀವಿ, ಅಧ್ಯಾಪಕ ಎಸ್.ಎ. ಮೋಹನ್ಕೃಷ್ಣ, ಅಜೀಜ್ ಉಲ್ಲಾ ಸಂಪನ್ಮೂಲ ವ್ಯಕ್ತಿಗಳು. ೨೦೦೯ನೇ ಇಸ್ವಿ ಯನ್ನು ಅಂತಾರಾಷ್ಟ್ರೀಯ ಖಗೋಳ ವರ್ಷ ಎಂದು ಘೋಷಿಸಲಾಯಿತು. ಇದನ್ನು ಅರ್ಥ ಪೂರ್ಣವಾಗಿ ಆಚರಿಸಲೆಂದೇ ಈ ಸಂಸ್ಥೆ ಜನ್ಮತಾಳಿತು. ಆಕಾಶಕಾಯಗಳ ಬಗ್ಗೆ ಟೆಲಿಸ್ಕೋಪ್ ಮೂಲಕ ಅವುಗಳನ್ನು ತೋರಿಸಿ ಜಾಗೃತಿ ಮೂಡಿಸುವುದು, ಸೌರವ್ಯೂಹದ ಬಗ್ಗೆ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ರೀತಿಯ ಚಟುವಟಿಕೆ ಇದರ ಜೀವಾಳ.
ಮಕ್ಕಳಿಗೆ ಮುಕ್ತ ಆಹ್ವಾನ
ಆಸಕ್ತರು ಮಾರ್ಸ್ ಸಂಪರ್ಕಿಸಬಹುದು. ರೋಟರಿ ಮಿಡ್ಟೌನ್ ಅಕಾಡೆಮಿ ಸ್ಕೂಲ್ನಲ್ಲಿರುವ ೧೪ ಇಂಚು ಮತ್ತು ೮ ಇಂಚಿನ ಎರಡು ಸೆಲೆಸ್ಟ್ರಾನ್ ಟೆಲಿಸ್ಕೋಪ್ಗಳ ಮೂಲಕ, ಆಕಾಶ ಕಾಯಗಳನ್ನು ತೋರಿಸಲಿದೆ. ವಾರದಲ್ಲಿ ಎರಡು ಬಾರಿ ಇದರ ಲಾಭ ಪಡೆಯಬಹುದು. ಕೆಲವೊಮ್ಮೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ತೆರಳಿ, ಅಲ್ಲಿಯೇ ಸ್ಥಳೀಯರಿಗೆ ಆಕಾಶಕಾಯಗಳನ್ನು ತೋರಿಸಲಿದೆ. ಸಂಸ್ಥೆಯ ಚಿಕ್ಕ ಅಳತೆಯ ಟೆಲಿಸ್ಕೋಪ್, ಪ್ರೊಜೆಕ್ಟರ್ ತೆಗೆದು ಕೊಂಡು ಹೋಗಿ, ಹಳ್ಳಿಯ ಜನರಿಗೆ ಸೌರವ್ಯೂಹದ ನೈಜ ಸೌಂದರ್ಯವನ್ನು ತೋರಿಸುತ್ತಿದೆ.
ಸಂಪರ್ಕಿಸಿ- ೯೪೮೦೪೭೭೭೭೬, ೯೬೨೦೧೯೫೧೯೨ (ಚಿರಂಜೀವಿ).
ಯುಜಿಸಿಗೆ ‘ಲೆಕ್ಕ’ ನೀಡಲು ಸೆಮಿನಾರ್ಗಳೆಂಬ ಪ್ರಹಸನ !
ಚೀ. ಜ. ರಾಜೀವ ಮೈಸೂರು
‘ಆ ಪ್ರೊಫೆಸರ್ ಏನು ಮಾತನಾಡಿದ್ರು ಅಂಥ ನನಗೆ ನಿಜಕ್ಕೂ ಗೊತ್ತಾಗಲಿಲ್ಲ. ಪ್ರಬಂಧ ಮಂಡಿಸಲು ನೀಡಿದ ವಿಷಯವನ್ನು ಯಾಕೆ ಅಷ್ಟೊಂದು ಕ್ಲಿಷ್ಟವಾಗಿ, ಗಹನವಾಗಿ ಹೇಳಿದ್ರೂ ಅನ್ನೋದು ಕೂಡ ತಿಳೀಲಿಲ್ಲ. ಎಷ್ಟೇ ಆದ್ರೂ ಇದು - ರಾಷ್ಟ್ರೀಯ ವಿಚಾರ ಸಂಕಿರಣ ಅಲ್ವಾ. ಅದಕ್ಕೆ ಅವರು ಯಾರಿಗೂ ಅರ್ಥವಾಗ ದಂತೆ ಮಾತನಾಡಿದ್ರೂ ಅಂಥ ಕಾಣುತ್ತೆ.... !’
‘ಇಂಗ್ಲಿಷ್ ಸಾಹಿತ್ಯ ವಿಮರ್ಶೆಯ ಇತ್ತೀಚಿನ ಬೆಳವಣಿಗೆ’ ಕುರಿತು ನಗರದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಇಂಗ್ಲಿಷ್ ಅಧ್ಯಾಪಕರೊಬ್ಬರ ಅನಿಸಿಕೆ ಇದು. ‘ಈ ವಿಚಾರ ಸಂಕಿರಣದಿಂದ ನಿಮಗೆಷ್ಟು ಲಾಭವಾಯಿತು ?’ ಎಂಬ ಪ್ರಶ್ನೆಗೆ ಅವರು ನೀಡಿದ ಹೇಳಿಕೆಯಲ್ಲಿ ಪ್ರಶ್ನೆ, ಅನುಮಾನ, ಕುತೂಹಲ, ವ್ಯಂಗ್ಯ ಮತ್ತು ವಿಷಾದ ಎಲ್ಲವೂ ಇತ್ತು, ಸಮರ್ಪಕ ಉತ್ತರವೊಂದನ್ನು ಬಿಟ್ಟು .
ಎರಡು ವರ್ಷದ ಹಿಂದೆಯಷ್ಟೇ ನೌಕರಿ ಹಿಡಿದು, ವೃತ್ತಿಯ ಬಗ್ಗೆ ಅತ್ಯುತ್ಸಾಹ ಹೊಂದಿರುವ ತರುಣ ಅಧ್ಯಾಪಕನ ಪಾಡು ಹೀಗಿರುವಾಗ, ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಸ್ಥಿತಿ ಏನಾಗಿರಬೇಡ ?
ನಮ್ಮ ಕಾಲೇಜುಗಳಲ್ಲಿ ನಡೆಯುವ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಯುಜಿಸಿ ಪ್ರಾಯೋಜಿತ ಪ್ರಾದೇಶಿಕ/ ರಾಷ್ಟ್ರೀಯ/ ಅಂತಾರಾಷ್ಟ್ರೀಯ ವಿಚಾರಸಂಕಿರಣ ಮತ್ತು ಕಾರ್ಯಾಗಾರಗಳ ಗುಣಮಟ್ಟದ ಬಗ್ಗೆ ಶೈಕ್ಷಣಿಕ ವಲಯ ಕಂಡುಕೊಂಡಿರುವ ಸತ್ಯವಿದು !
ದೇಶ-ವಿದೇಶದ ಶಿಕ್ಷಣ ತಜ್ಞರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಪರಸ್ಪರ ಜ್ಞಾನ ವಿನಿಮಯಕ್ಕೆ ದಾರಿ ಮಾಡಿಕೊಡುವ ಮೂಲಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಅರಿವಿನ ಮಟ್ಟವನ್ನು ವಿಸ್ತರಿಸುವ ಮಹತ್ತರ ಉದ್ದೇಶದಿಂದ ಯುಜಿಸಿ ಆರಂಭಿಸಿರುವ ‘ಸೆಮಿನಾರ್/ವರ್ಕ್ಶಾಪ್’ಗಳು ತಲುಪಿರುವ ಸ್ಥಿತಿ ಇದು.
ಶೈಕ್ಷಣಿಕ ಬೇಸರಕ್ಕೆ ಬ್ರೇಕ್ ಸಿಗಲಿಲ್ಲ: ಈ ಹಿಂದೆ ಪದವಿಯ ಬಹುತೇಕ ವಿದ್ಯಾರ್ಥಿಗಳ ಪಾಲಿಗೆ ಶೈಕ್ಷಣಿಕ ವರ್ಷ ಎಂದರೆ ತರಗತಿ, ಪ್ರಯೋಗಾಲಯ, ಪರೀಕ್ಷೆಗಳು, ವರ್ಷದ ಆರಂಭದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ, ಅಂತ್ಯದಲ್ಲಿ ಸಮಾರೋಪಕ್ಕೆ ಹೊಂದಿಕೊಂಡಂತೆ ಒಂದಿಷ್ಟು ಶಿಕ್ಷಣೇತರ ಕಾರ್ಯಕ್ರಮ.... ಇಷ್ಟೇ ಆಗಿರುತ್ತಿದ್ದವು. ಈ ಶೈಕ್ಷಣಿಕ ವೇಳಾಪಟ್ಟಿ ಸಹಜವಾಗಿಯೇ ವಿದ್ಯಾರ್ಥಿ ಗಳು ಮತ್ತು ಬೋಧಕರ ಪಾಲಿಗೆ ನೀರಸ ಹಾಗೂ ನಿರಾಶದಾಯಕವಾಗಿರುತ್ತಿತ್ತು. ಈ ಬೇಸರ, ಏಕತಾನತೆಯನ್ನು ಹೊಡೆದೋಡಿಸಲು ಯುಜಿಸಿ ಎರಡು ವರ್ಷಗಳಿಂದ ವಿಚಾರ ಸಂಕಿರಣ ಮತ್ತು ಕಾರ್ಯಾಗಾರ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿದೆ.
ಕಲಿಯುವ ವಿಷಯದಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆ ಮೇಲೆ ಬೆಳಕು ಚೆಲ್ಲುವುದು, ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಜ್ಞಾನದ ಮಟ್ಟ ಕಾಲಕ್ಕೆ ತಕ್ಕಂತೆ ಪರಿಷ್ಕೃತವಾಗಬೇಕು ಎಂಬುದು ಯುಜಿಸಿಯ ಇನ್ನೊಂದು ಮಹದಾಸೆ. ಈ ಉದ್ದೇಶ ಗಳು ಒಳ್ಳೆಯದೇ ಆಗಿ ದ್ದರೂ, ಅದನ್ನುಕಾಲೇಜು ಗಳು ಬಳಸಿಕೊಳ್ಳುತ್ತಿ ರುವ ರೀತಿ- ನೀತಿಯಲ್ಲಿ ಮಾತ್ರ ಸದುದ್ದೇಶ ಕಾಣಿಸುತ್ತಿಲ್ಲ. ನಮ್ಮ ಕಾಲೇಜಲ್ಲೂ ಇಂತಿಷ್ಟು ಸೆಮಿನಾರ್ ಆದವು ಎಂದು ಲೆಕ್ಕ ಹಿಡಿಯ ಲೆಂದೇ ಬಹಳಷ್ಟು ಕಾಲೇಜುಗಳು ಕಾಟಾಚಾರಕ್ಕೆ ಕಾರ್ಯಾಗಾರ ನಡೆಸುತ್ತಿವೆ ಎಂಬುದು ಸಾಮಾನ್ಯ ಆರೋಪ.
ಹೆಸರು ಹೇಳಲು ಇಚ್ಛಿಸದ ಪ್ರಾಂಶುಪಾಲ ರೊಬ್ಬರು ಹೇಳುವ ಪ್ರಕಾರ, ‘ಕಾಲೇಜು ಗಳ ನಿರ್ವಹಣೆಗೆ ಮಾನ್ಯತೆ ನೀಡುವ ಪದ್ಧತಿಯನ್ನು ನ್ಯಾಕ್ ಜಾರಿಗೆ ತಂದ ಬಳಿಕ, ಸಂಘಟಿಸುವ ಕಾರ್ಯಾಗಾರ, ಸೆಮಿನಾರ್ಗಳ ‘ಅಂಕಿ-ಸಂಖ್ಯೆಗೆ’ ಮೌಲ್ಯ ಬಂದಿದೆ. ಹಾಗಾಗಿ ಶಾಸ್ತ್ರಕ್ಕೆ ಸೆಮಿನಾರ್ ಎಂಬಂತಾಗಿದೆ. ಗುಣಮಟ್ಟವನ್ನು ಮತ್ತು ಅದರ ಪರಿಣಾಮವನ್ನು ಅಳೆದು ಕಾರ್ಯಾಗಾರಕ್ಕೆ ಮೌಲ್ಯ ನೀಡುವ ವ್ಯವಸ್ಥೆ ಇದ್ದಿದ್ದರೆ, ಚೆನ್ನಾಗಿರುತ್ತಿತ್ತು’
‘ಇಲ್ಲಿಗೆ ಬರುವ ಅಧ್ಯಾಪಕರಿಗೆ ರಜೆ ಸೌಲಭ್ಯ, ಸಾರಿಗೆ ಭತ್ಯೆ ನೀಡಲಾಗುವುದು. ಇಲ್ಲಿ ಪ್ರಬಂಧ ಮಂಡಿಸುವ ಅಧ್ಯಾಪಕರಿಗೆ ಭಾಗವಹಿಸುವಿಕೆ ಪ್ರಮಾಣ ಪತ್ರ ಉಂಟು. ಅಧ್ಯಾಪಕರು ಸ್ವಂತದ್ದೆಂದು ಖರ್ಚು ಮಾಡುವುದು ನೋಂದಣಿ ಶುಲ್ಕ ಮಾತ್ರ. ಅದರ ಬಾಬ್ತಿಗೆ ಊಟ, ಬ್ಯಾಗ್ ನೀಡುತ್ತೇವೆ. ಕೆಲ ಅಧ್ಯಾಪಕರು ವಿಚಾರ ಸಂಕಿರಣದ ಲಾಭ-ನಷ್ಟವನ್ನು ಈ ಮಟ್ಟದಲ್ಲಿ ಅಳೆಯುತ್ತಿದ್ದಾರೆ’ ಎಂದು ಪ್ರಾಂಶುಪಾಲರು ಬೇಸರ ವ್ಯಕ್ತಪಡಿಸುತ್ತಾರೆ.
‘ಯಾವಾಗಲೂ ತರಗತಿಯಲ್ಲಿ ಕುಳಿತು ಪಾಠ ಕೇಳಿ-ಕೇಳಿ ಬೋರ್ ಆಗಿರುತ್ತದೆ. ಹಾಗಾಗಿ, ನಮ್ಮ ಅಧ್ಯಾಪಕರು ಇಂಥ ವಿಚಾರ ಸಂಕಿರಣಗಳಿಗೆ ನಮ್ಮನ್ನೂ ಕಳುಹಿಸುತ್ತಾರೆ. ಆದರೆ, ಈ ಗೋಷ್ಠಿಗಳು ತರಗತಿಗಳಿಗಿಂತ ಬೋರ್ ಆಗುತ್ತವೆ. ನಮ್ಮ ತಿಳಿವಳಿಕೆ ಮಟ್ಟಕ್ಕೆ ಮೀರಿದ ಸಂಗತಿಯನ್ನೇ ಸಂಪನ್ಮೂಲ ವ್ಯಕ್ತಿಗಳು ಮಾತನಾಡುತ್ತಾರೆ. ಹಾಗಾಗಿ, ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ’ ಎಂಬುದು ಜೆಎಸ್ಎಸ್ ಕಾಲೇಜಿನ ವಿದ್ಯಾರ್ಥಿಯೊಬ್ಬರ ಅನಿಸಿಕೆ.
ಒಟ್ಟಾರೆ- ಯುಜಿಸಿ ನೀಡುತ್ತಿರುವ ಸೌಲಭ್ಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಒಂದು ಮೌಲಿಕ ವಿಚಾರ ಸಂಕಿರಣ ಇಲ್ಲವೇ ಕಾರ್ಯಾಗಾರವನ್ನು ನಡೆಸಬೇಕಿದೆಯಷ್ಟೇ !
ಸ್ವಲ್ಪ ಪ್ರಯೋಜನವೂ ಆಗಿದೆ...!
ಎಲ್ಲ ಕಾಲೇಜುಗಳು ಕಾಟಾಚಾರಕ್ಕೆ ನಡೆಸುತ್ತವೆ ಎಂದೇನಿಲ್ಲ. ಕೆಲವು ಕಡೆ ಗುಣಮಟ್ಟದ ವಿಚಾರಸಂಕಿರಣಗಳು/ಕಾರ್ಯಾಗಾರಗಳು ನಡೆದಿವೆ. ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಜೆಎಸ್ಎಸ್ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ(ಸ್ವಾಯತ್ತ) ಪ್ರಾಂಶುಪಾಲ ಪ್ರೊ. ಬಿ. ವಿ. ಸಾಂಬಶಿವಯ್ಯ.
ನಮ್ಮ ಕಾಲೇಜಿನಲ್ಲೇ ೨೦೦೯-೧೦ನೇ ಸಾಲಿನಲ್ಲಿ ನಾಲ್ಕು ಕಾರ್ಯಾಗಾರ, ಎರಡು ವಿಚಾರ ಸಂಕಿರಣ ಆಯೋಜಿಸಿದ್ದೇವೆ. ಗ್ರಾಹಕ ಚಳವಳಿ, ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್, ಉದ್ಯಮಶೀಲತೆ, ತ್ರೈಯೋಗ ಕುರಿತು ನಾಲ್ಕು ಕಾರ್ಯಾಗಾರ, ಕೃಷ್ಣದೇವರಾಯ ಮತ್ತು ಬುದ್ಧನ ವಿಚಾರ ಕುರಿತು ವಿಚಾರ ಸಂಕಿರಣ ಆಯೋಜಿಸಿದ್ದೆವು. ಎಲ್ಲವೂ ಎಲ್ಲರಿಗೂ ಅರ್ಥವಾಗಿದೆ, ಪ್ರಯೋಜನವಾಗಿದೆ ಎಂದು ಪತ್ರಿಕೆಗೆ ತಿಳಿಸಿದರು. ವಿಷಯ ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆಯಲ್ಲಿ ಜಾಣ್ಮೆ, ಶ್ರದ್ಧೆ ತೋರಿಸಿದರೆ ಯುಜಿಸಿ ಕಾರ್ಯಕ್ರಮ ಎಲ್ಲರಿಗೂ ಪ್ರಯೋಜನಕಾರಿ ಎಂಬುದು ಅವರ ಅನಿಸಿಕೆ.

‘ಚಿಣ್ಣರ ಅಂಗಳ’ದಲ್ಲಿ ೩ ಸಾವಿರ ಮಕ್ಕಳು !
ಚೀ.ಜ.ರಾಜೀವ ಮೈಸೂರು
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶೈಕ್ಷಣಿಕ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುತ್ತಿರುವ ‘ಚಿಣ್ಣರ ಅಂಗಳ’ ಕಾರ್ಯಕ್ರಮಕ್ಕೆ ಈ ಬಾರಿ ದಶಕದ ಸಂಭ್ರಮ, ಅಂತೆಯೇ ಹೊಸ ಸವಾಲು ಕೂಡ !
ಏಕೆಂದರೆ ಈ ಬಾರಿ ಅಂಗಳಕ್ಕೆ ೧೪ ವರ್ಷದ ಶಾಲಾ ಮಕ್ಕಳು ಕೂಡ ಬಂದು ಕೂರುವವರಿದ್ದಾರೆ. ಇಲ್ಲಿಯವರೆಗೆ ೧೩ ವರ್ಷ ದೊಳಗಿನ ಸೋರಿಕೆ ಮಕ್ಕಳನ್ನು ಮಾತ್ರ ಶಾಲೆಗೆ ಆಕರ್ಷಿಸಲು ಇಲಾಖೆ ಬೆವರು ಸುರಿಸಿದೆ. ಆದರೆ, ಈ ವರ್ಷ ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಗೆ ಬಂದಿದೆ. ೬ ರಿಂದ ೧೪ ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ ನೀಡಲೇಬೇಕಾದ ಮಹತ್ವದ ಜವಾಬ್ದಾರಿಯನ್ನು ಸರಕಾರಗಳು ಹೊತ್ತಿವೆ. ಈ ವಯೋಮಾನದ ಶಾಲೆಗೆ ಸೇರದೆ ಇರುವ ಹಾಗೂ ಅರ್ಧಕ್ಕೆ ಶಾಲೆ ಬಿಟ್ಟ ಎಲ್ಲ ಮಕ್ಕಳನ್ನು ಶಾಲೆಗೆ ತರಬೇಕಿದೆ. ಪ್ರೌಢ ಶಿಕ್ಷಣದ ಸಾರ್ವತ್ರೀಕರಣಕ್ಕೆ ದೇಶವೇ ಸಿದ್ಧವಾಗಿದೆ. ಹಾಗಾಗಿ, ಶಿಕ್ಷಣ ಇಲಾಖೆ ಕಾಯ್ದೆಗೆ ಪೂರಕವಾಗಿ ಈ ಸಾಲಿನ ಚಿಣ್ಣರ ಅಂಗಳದ ಸ್ವರೂಪವನ್ನು ಸ್ವಲ್ಪ ಬದಲಿಸಿಕೊಂಡಿದೆ.
೨೦೧೦- ಜನವರಿಯಲ್ಲಿ ನಡೆಸಿದ ಸಮಗ್ರ ಮಕ್ಕಳ ಗಣತಿ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ೭ರಿಂದ ೧೪ ವರ್ಷ ವಯೋಮಾನದ ೩೬೨೩ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಪೈಕಿ ೭೪೫ ಮಕ್ಕಳು ಇನ್ನೂ ಶಾಲೆಗೆ ಸೇರಿಲ್ಲ. ಉಳಿದ ೨೮೭೮ ಮಕ್ಕಳು ಶಾಲೆಯ ದಾಖಲೆಗೆ, ಹೊರಗುಳಿದಿವೆ. ಈ ಮಕ್ಕಳ ಪೈಕಿ ೨೯೫೭ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ಕರೆತರಲು ಚಿಣ್ಣರ ಅಂಗಳದ ಮೂಲಕ ಪ್ರಯತ್ನಿಸಲಾಗುವುದು. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಉಪ ನಿರ್ದೇಶಕ ಪುರುಷೋತ್ತಮ್ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
ರಾಜ್ಯಾದ್ಯಂತ ಏ.೧೬ ರಿಂದ ಮೂರು ತಿಂಗಳ ಕಾಲ ಚಿಣ್ಣರ ಅಂಗಳ ಕಾರ್ಯಕ್ರಮ ನಡೆಯಲಿದೆ. ಮೈಸೂರು ಜಿಲ್ಲೆಯಲ್ಲಿ ಒಂದು ದಿನ ತಡವಾಗಿ, ಅದರೆ ಏ. ೧೭ರಿಂದ ಆರಂಭವಾಗಿ ಜು. ೧೬ರ ವರೆಗೆ ೧೧೨ ಕೇಂದ್ರಗಳಲ್ಲಿ ಚಿಣ್ಣರ ಅಂಗಳ ನಡೆಯ ಲಿದೆ. ೧೧೨ ಶಿಕ್ಷಕರು, ಅಷ್ಟೇ ಸಂಖ್ಯೆಯ ಸ್ವಯಂ ಸೇವಕರು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುವರು.
ಮೂರು ಪಟ್ಟು ಹೆಚ್ಚಾಗಿದೆ: ಚಿಣ್ಣರ ಅಂಗಳಕ್ಕೆ ಈಗ ೧೦ ವರ್ಷ. ಯೋಜನೆ ಆರಂಭವಾದ ೨೦೦೧ರಲ್ಲಿ ರಾಜ್ಯದಲ್ಲಿ ೯.೮೬ ಲಕ್ಷ ವಿದ್ಯಾರ್ಥಿಗಳು ಶಾಲೆಯಿಂದ ಹೊರಗಿದ್ದರು. ಈ ಪ್ರಮಾಣ ೨೦೦೯ರ ವೇಳೆಗೆ ೩೫ ಸಾವಿರಕ್ಕೆ ಇಳಿಯಿತು. ಆದರೆ, ಈ ಬಾರಿ ೧೪ ವರ್ಷದ ಮಕ್ಕಳನ್ನು ಪರಿಗಣಿಸಿರುವುದರಿಂದ ಈ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಲಿದೆ. ಮೈಸೂರು ಜಿಲ್ಲೆಯಲ್ಲಿಯೇ ಕಳೆದ ವರ್ಷ ಕೇವಲ ೮೫೦ ಮಕ್ಕಳಿಗೆ ಮಾತ್ರ ಕಾರ್ಯಕ್ರಮ ನಡೆದಿತ್ತು. ಈ ಬಾರಿ ೩೦೦೦ ಮಕ್ಕಳು ಅಂಗಳಕ್ಕೆ ಕಲಿಯಲು ಬರಲಿದ್ದಾರೆ. ಹೆಚ್ಚಾಗಿರುವ ಎಲ್ಲ ಮಕ್ಕಳು ೮ನೇ ತರಗತಿ ಹಂತದಲ್ಲಿ ಸೋರಿಕೆಯಾದವರು ಎಂಬುದು ಗಮನಾರ್ಹ.
ಎಂಟನೇ ತರಗತಿ ಮಕ್ಕಳೇ ಹೆಚ್ಚು: ಶಾಲೆ ಬಿಟ್ಟಿರುವ ಮಕ್ಕಳ ಪೈಕಿ ೧೪ ವರ್ಷ ತುಂಬಿದ ಮಕ್ಕಳು ಹೆಚ್ಚಿರುವುದು ಮಕ್ಕಳ ಗಣತಿಯಲ್ಲಿ ವ್ಯಕ್ತವಾಗಿದೆ. ಕಳೆದ ಸಾಲಿನ ತನಕ ಇಂಥ ಮಕ್ಕಳನ್ನು ಅಂಗಳದ ವ್ಯಾಪ್ತಿಗೆ ತಂದಿರಲಿಲ್ಲ. ಶಿಕ್ಷಣ ಕಾಯ್ದೆ ಜಾರಿಗೆ ಬಂದಿದೆ. ಇದಲ್ಲದೆ, ಪ್ರೌಢ ಶಿಕ್ಷಣದ ಸಾರ್ವತ್ರೀಕರಣಕ್ಕೂ ನಾವು ಸಜ್ಜಾಗಬೇಕಿದೆ. ಹಾಗಾಗಿ ೧೪ ವರ್ಷದ ಮಕ್ಕಳನ್ನು ಮತ್ತೆ ಶಾಲೆಗೆ ಆಕರ್ಷಿಸಬೇಕಿದೆ. ಇದು ಚಿಣ್ಣರ ಅಂಗಳದಲ್ಲಿ ಕೆಲಸ ಮಾಡಲಿರುವ ಶಿಕ್ಷಕರ ಮುಂದಿರುವ ಹೊಸ ಸವಾಲು ಎನ್ನುತ್ತಾರೆ ಯೋಜನೆಯ ಸಹಾಯಕ ಸಮನ್ವಯಾಧಿಕಾರಿ ಎಸ್. ರೇವಣ್ಣ .
ಸಾಮಾನ್ಯವಾಗಿ ೧೦ ವರ್ಷದೊಳಗಿನ ಮಕ್ಕಳು ಶಾಲೆಗೆ ಬರದಿದ್ದರೆ ಅವರನ್ನು ಮನವೊಲಿಸಿ ಕರೆತರುವುದು ಸುಲಭ. ಆದರೆ. ೧೦ ರಿಂದ ೧೪ ವರ್ಷದ ಮಕ್ಕಳನ್ನು ಆಕರ್ಷಿಸುವುದು ಸ್ವಲ್ಪ ಕಷ್ಟ. ಬಡತನ, ಪೋಷಕರ ನಿರಾಸಕ್ತಿ. ವಲಸೆ, ವಿವಿಧ ಬಗೆಯ ಶೋಷಣೆಗಳಿಂದ ಮಕ್ಕಳು ಶಾಲೆಗೆ ಬೆನ್ನು ತೋರಿಸಿರುತ್ತಾರೆ. ಈ ಮಕ್ಕಳನ್ನು ಸೆಳೆಯುವುದು ನಿಜವಾದ ಸವಾಲು.
ಸೇತುಬಂಧದ ಗೊತ್ತು-ಗುರಿ !
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ನೇರವಾಗಿ ಶಾಲೆಗೆ ದಾಖಲಿಸಿದರೆ, ಅವರು ಶಾಲೆಯ ಚಟುವಟಿಕೆ ಮತ್ತು ಕಲಿಕಾ ವಿಧಾನಗಳಿಗೆ ಹೊಂದಿಕೊಳ್ಳುವುದು ಕಷ್ಟ. ಇಂಥ ಸಂದರ್ಭದಲ್ಲಿ ಅವರಿಗೆ ಶಾಲೆ ಆಕರ್ಷಣೆಯ ಕೇಂದ್ರವಾಗುವುದಿಲ್ಲ. ಇಂಥ ಮಕ್ಕಳಲ್ಲಿ ಶಾಲೆಯ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ನಿರಂತರವಾಗಿ ಅವರನ್ನು ಸೆಳೆಯಲು ಚಿಣ್ಣರ ಅಂಗಳ ನಡೆಸಲಾಗುವುದು.
ಆಸಕ್ತಿದಾಯಕ ಆಟ, ಹಾಡು, ಕಥೆಗಳು, ಸೃಜನಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಕಲಿಯುವ ಪ್ರೀತಿ ಬೆಳೆಸುವುದು ಹಾಗೂ ಔಪಚಾರಿಕೆ ಶಾಲೆಗೆ ಸೇರಲು ಇರುವ ಹಿಂಜರಿಕೆಯನ್ನು ಹೋಗಲಾಡಿಸುವುದು ಪ್ರಮುಖ ಉದ್ದೇಶ.
ವಸತಿ ರಹಿತ ಮತ್ತು ವಸತಿ ಸಹಿತ ಚಿಣ್ಣರ ಅಂಗಳ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಂದು ಕ್ಲಸ್ಟರ್ ವ್ಯಾಪ್ತಿಯಲ್ಲಿ ಒಂದು ಕೇಂದ್ರ ಸ್ಥಾಪಿಸಿ, ೨೫ ಮಕ್ಕಳಿಗೆ ಅವಕಾಶ ನೀಡಲಾಗುವುದು. ಹೆಚ್ಚು ಸೋರಿಕೆ ಮಕ್ಕಳು ಕಂಡು ಬಂದರೆ, ಅವರಿಗೆ ಸಮೀಪದ ಶಾಲೆಯಲ್ಲಿ ವಸತಿ ರಹಿತವಾಗಿ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಸಂಖ್ಯೆ ಬಿಡಿ-ಬಿಡಿಯಾಗಿದ್ದರೆ, ೨೫ ಮಕ್ಕಳನ್ನು ಸೇರಿಸಿ, ಅವರಿಗೆ ವಸತಿ ಸಹಿತವಾಗಿ ಯಾವುದಾದರೊಂದು ಹಾಸ್ಟೆಲ್ನಲ್ಲಿ ವಸತಿ ಸಹಿತವಾಗಿ ಅಂಗಳ ಕೇಂದ್ರ ತೆರೆಯಲಾಗಿದೆ.

ಕ್ಯಾಂಪಸ್ಗಳಲ್ಲಿ ಸಂದರ್ಶನ ಸಂಚಲನ
ಚೀ. ಜ. ರಾಜೀವ ಮೈಸೂರು
ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಇದೊಂದು ಸಮಾಧಾನಕರ ಸಮಾಚಾರ. ಪರೀಕ್ಷೆ ಮುಗಿದ ತಕ್ಷಣ ಉದ್ಯೋಗ ಹಿಡಿಯಬೇಕೆಂದಿರುವ ಭಾವೀ ಉದ್ಯೋಗಾರ್ಥಿಗಳ ಪಾಲಿಗಂತೂ ಇದು ಸಂತಸದ ಸುದ್ದಿಯೇ !
ವಿಷಯ ಏನು ಅಂದ್ರೆ-ಉದ್ಯೋಗ ನೀಡುವುದಕ್ಕಾಗಿ ಪ್ರತಿಭಾನ್ವಿತ ಯುವ ಪದವೀಧರರನ್ನು ಅರಸುತ್ತಾ ಕಾಲೇಜುಗಳ ಪ್ರಾಂಶುಪಾಲರ ಬಾಗಿಲು ಹುಡುಕಿಕೊಂಡು ಬರುತ್ತಿದ್ದ ಪ್ರತಿಷ್ಠಿತ ಕಂಪನಿಗಳು ಈಗ ಮತ್ತೊಮ್ಮೆ ಕ್ಯಾಂಪಸ್ ಕಡೆ ಮುಖ ಮಾಡಿವೆ.
ನಗರದ ಎನ್ಐಇ, ಎಸ್ಜೆಸಿಇ, ವಿದ್ಯಾವಿಕಾಸ್ ಎಂಜಿನಿಯ ರಿಂಗ್ ಕಾಲೇಜುಗಳು, ಮಹಾಜನ, ಜೆಎಸ್ಎಸ್ನಂಥ ಬಿಬಿಎಂ ಕಾಲೇಜುಗಳಲ್ಲಿ ಅರ್ಹ ಅಭ್ಯರ್ಥಿಗಳಿಗಾಗಿ ಶೋಧ ಆರಂಭಿಸಿವೆ. ಕ್ಯಾಂಪಸ್ ಇಂಟರ್ವ್ಯೂಗೆ ಈಗ ಶುಕ್ರದೆಸೆ.
ಜಾಗತಿಕವಾಗಿ ಕಾಣಿಸಿಕೊಂಡ ಆರ್ಥಿಕ ಹಿಂಜರಿತದ ಪರಿಣಾಮ, ನೂರಾರು ಕಂಪನಿಗಳು ತಮ್ಮಲ್ಲಿನ ಸಾವಿರಾರು ನೌಕರರಿಗೆ ಸ್ಯಾಲರಿ ಸ್ಲಿಪ್(ವೇತನ ಚೀಟಿ) ಬದಲು, ಪಿಂಕ್ ಸ್ಲಿಪ್(ಕೆಲಸದಿಂದ ತೆಗೆಯುವುದು) ನೀಡಿ ಮನೆಗೆ ಕಳುಹಿಸಿದ್ದೇ ಹೆಚ್ಚು. ಈ ಹಿನ್ನೆಲೆಯಲ್ಲಿ ಮೂರು ವರ್ಷಗಳಿಂದೀಚೆಗೆ ಎಲ್ಲ ಕಡೆಯೂ ‘ಹಿಂಜರಿತದ ಹುಚ್ಚಿ’ (ರಿಸೆಷನ್ ಮೇನಿಯಾ)ನದ್ದೇ ಕಾರುಬಾರು ನಡೆದಿತ್ತು. ಇರುವ ನೌಕರಿಗಳೇ ಕರಗುತ್ತಿದ್ದರಿಂದ, ಹೊಸ ನೌಕರಿ ಸದ್ಯಕ್ಕಂತೂ ಸೃಷ್ಟಿಯಾಗುವುದಿಲ್ಲ ಎಂಬ ಭಾವನೆಯೇ ಎಲ್ಲ ಕ್ಯಾಂಪಸ್ಗಳ ಕಾರಿಡಾರ್ಗಳಲ್ಲಿ, ನೋಟಿಸ್ ಬೋರ್ಡ್ಗಳಲ್ಲಿ ಬೇರೂರಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಪ್ರತಿಭಾನ್ವಿತರಿಗಾಗಿ ಕ್ಯಾಂಪಸ್ ತನಕ ಬರುವ ಆಚರಣೆಯನ್ನು ಕಂಪನಿಗಳು ಕೂಡ ನಿಲ್ಲಿಸಿದ್ದವು.
ಆದರೆ, ಆರ್ಥಿಕ ಹಿಂಜರಿಕೆಯ ಸ್ಥಿತಿಯಿಂದ ಜಾಗತಿಕ ಮಾರುಕಟ್ಟೆ ಬಚಾವ್ ಆಗಿದೆ. ಹಾಗಾಗಿ ಭಾರತದ ಸೇವಾ ಹಾಗೂ ಉತ್ಪಾದನಾ ವಲಯದ ಖಾಸಗಿ ಉದ್ಯಮಗಳು ಚೇತರಿಸಿಕೊಂಡಿವೆ. ಐಟಿ, ಬಿಪಿಒ, ಕೆಪಿಒಗಳಲ್ಲಿ ದುಡಿಯಲು ಮಾನವ ಸಂಪನ್ಮೂಲ ಬೇಕಿದೆ. ಹಾಗಾಗಿ, ಮತ್ತೊಮ್ಮೆ ಪ್ರತಿಭಾನ್ವಿತ ಉದ್ಯೋಗಾರ್ಥಿ ಗಳಿಗಾಗಿ ಖಾಸಗಿ ಕಂಪನಿಗಳು ಬೇಟೆ ಆರಂಭಿಸಿವೆ.
ಎನ್ಐಇ ಬಾಗಿಲಲ್ಲಿ ೨೮ ಕಂಪನಿ
ನಗರದ ಪ್ರತಿಷ್ಠಿತ ದಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್(ಎನ್ಐಇ) ಕಾಲೇಜಿನ ತರಬೇತಿ ಮತ್ತು ಉದ್ಯೋಗ ನೀಡಿಸುವ(ಪ್ಲೇಸ್ಮೆಂಟ್) ಘಟಕಕ್ಕೆ ಈ ವರ್ಷ ಕೈ ತುಂಬಾ ಕೆಲಸ. ಉದ್ಯೋಗಕ್ಕೆ ಹೋಗ ಬಯಸುವ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳ ಆಕಾಂಕ್ಷೆ ಈ ಬಾರಿ ಯ ಕ್ಯಾಂಪಸ್ ಸಂದರ್ಶನದಲ್ಲಿಯೇ ಸಾಕಾರಗೊಳ್ಳಬಹುದು ಎಂಬುದು ಎನ್ಐಇ ಲೆಕ್ಕಾಚಾರ.
‘ಆರ್ಥಿಕ ಹಿಂಜರಿಕೆ ಕಾಲದಲ್ಲೂ ನಮ್ಮ ಸಂಸ್ಥೆಯ ಪ್ಲೇಸ್ಮೆಂಟ್ ಘಟಕ ಒಂದಿಷ್ಟು ಸಾಧನೆ ತೋರಿಸಿತ್ತು. ಈಗ ಪರಿಸ್ಥಿತಿ ಸುಧಾರಿಸುವ ಶುಭ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಸಾಲಿಗಿಂತ ದುಪ್ಪಟ್ಟು ಕಂಪನಿಗಳು ನಮ್ಮಲ್ಲಿಗೆ ಬರುವ ಸಾಧ್ಯತೆ ಇದೆ’ ಎಂದು ಘಟಕದ ಅಧಿಕಾರಿ ಡಾ. ಬಿ. ಕೆ. ಶ್ರೀಧರ್ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
‘ಇದುವರೆಗೆ ನಮ್ಮ ಕಾಲೇಜಿಗೆ ೨೮ ಕಂಪನಿಗಳು ಭೇಟಿ ನೀಡಿ, ಕ್ಯಾಂಪಸ್ ಸಂದರ್ಶನ ನಡೆಸಿವೆ. ಈ ಪೈಕಿ ೧೪ ಕೋರ್ ಎಂಜನಿಯ ರಿಂಗ್ಗೆ ಸಂಬಂಧಿಸಿದ್ದು, ಉಳಿದ ೧೪ ಐಟಿ ವಲಯದ ಕಂಪನಿ ಗಳು. ಅಂತಿಮ ಪದವಿಯಲ್ಲಿ ಕಲಿಯುತ್ತಿರುವ ೨೬೦ ವಿದ್ಯಾರ್ಥಿ ಗಳು ಆಯ್ಕೆಯಾಗಿದ್ದಾರೆ. ಜುಲೈ/ಆಗಸ್ಟ್ ಬಳಿಕ ಈ ಎಲ್ಲರೂ ಉದ್ಯೋಗಾರ್ಥಿಗಳಾಗಿ ನೌಕರಿ ಹಿಡಿಯಲಿದ್ದಾರೆ’ ಎಂದು ಸಂತಸದಿಂದ ವಿವರಿಸಿದರು.
ಇನ್ಫೋಸಿಸ್ ಟೆಕ್ನಾಲಜಿಸ್, ಫಿಲಿಪ್ಸ್ ಇಂಡಿಯಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಐಬಿಎಂ ಇಂಡಿಯಾ, ಹ್ಯುಲೆಟ್ ಪ್ಯಾ ಕಾರ್ಡ್, ಐ ಗೇಟ್ ಸಲೂಷನ್ಸ್, ನ್ಯಾಷನಲ್ ಇನ್ಷ್ಟ್ರುಮೆಂಟ್ಸ್, ಎಲ್ ಅಂಡ್ ಟಿ, ಎಸ್ಸಾರ್ ಗ್ರೂಪ್, ಎಲ್ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ, ಮರ್ಸಿಡೆಜ್ ಬೆನ್ಜ್ ಆರ್ ಅಂಡ್ ಡಿ, ಟಿವಿಎಸ್ ಮೋಟಾರ್ ಕಂಪನಿ ಸೇರಿದಂತೆ ೨೮ ಕಂಪನಿಗಳ ಮಾನವ ಸಂಪ ನ್ಮೂಲ ಶಾಖೆಯ ಅಧಿಕಾರಿಗಳು ಎನ್ಐಇಗೆ ಬಂದು ಹೋಗಿದ್ದಾರೆ.
ವಿಶೇಷ ಎಂದರೆ ಈ ಎಲ್ಲ ಕಂಪನಿಗಳು ಕೈ ತುಂಬಾ ವೇತನ ನೀಡುವ ಭರವಸೆ ನೀಡಿ ಹೋಗಿವೆ. ವಾರ್ಷಿಕ ೩.೨ ಲಕ್ಷ ರೂ. ಗಳಿಂದ ೬.೫೪ಲಕ್ಷ ರೂ.ಗಳವರೆಗೆ ವಿದ್ಯಾರ್ಥಿಗಳ ಯೋಗ್ಯತೆಗೆ ಅನುಸಾರವಾಗಿ ಸಂಬಳ ಪಡೆಯಲಿದ್ದಾರೆ.
ಪದವಿ ಅಭ್ಯರ್ಥಿಗಳಿಗೂ ಬೇಡಿಕೆ
ಎಂಜನಿಯರಿಂಗ್ ಮಾತ್ರವಲ್ಲ, ಪದವಿ ವಿದ್ಯಾರ್ಥಿಗಳಿಗೂ ಬೇಡಿಕೆ ಹೆಚ್ಚಿದೆ. ಉತ್ತಮ ಸಂವಹನ ಕೌಶಲ್ಯ, ಕೈನಲ್ಲೊಂದು ಪದವಿ ಇದ್ದರೆ ಬಿಪಿಒ ಮತ್ತು ಕೆಪಿಒಗಳಲ್ಲಿ ಉದ್ಯೋಗ ನಿಶ್ಚಿತ.
‘ಅಕೌಂಟಿಂಗ್ ಮತ್ತು ಆಡಿಟಿಂಗ್ನಂಥ ಜ್ಞಾನ ಆಧರಿತ ವಲಯದಲ್ಲಿ ಕೆಲಸ ಮಾಡಲು ಬಿಬಿಎಂ ಇಲ್ಲವೇ ವಾಣಿಜ್ಯ ಪದವಿ ಪಡೆದಿರುವ ವಿದ್ಯಾರ್ಥಿಗಳು ಬೇಕಿದ್ದಾರೆ ಎಂಬುದು ಕೆಲವು ಖಾಸಗಿ ವಲಯದ ಸಂಸ್ಥೆಗಳ ಬೇಡಿಕೆ. ಈ ಬಾರಿ ನಮ್ಮ ಕಾಲೇಜಿಗೆ ಸಾಕಷ್ಟು ಸಂಸ್ಥೆಗಳು ಕ್ಯಾಂಪಸ್ ಸಂದರ್ಶನಕ್ಕಾಗಿ ಬರುತ್ತಿವೆ’ ಎನ್ನುತ್ತಾರೆ ಮಹಾಜನ ಪದವಿ ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿ ಪ್ರೊ.ಜಿ. ಬಿ. ಆರವಿಂದ್.
‘ಕಳೆದ ವರ್ಷ ನಮ್ಮಲ್ಲಿ ೧೨೦ ವಿದ್ಯಾರ್ಥಿಗಳಿಗೆ ಮಾತ್ರ ನೌಕರಿ ಸಿಕ್ಕಿತ್ತು. ಈ ಬಾರಿ ಈ ಸಂಖ್ಯೆ ದುಪ್ಪಟ್ಟು ಇಲ್ಲವೇ ಮೂರು ಪಟ್ಟು ಹೆಚ್ಚುವ ನಿರೀಕ್ಷೆ ಇದೆ. ಕಂಪನಿಗಳ ಬಯಕೆಗೆ ತಕ್ಕಂತೆ ನಮ್ಮ ವಿದ್ಯಾರ್ಥಿಗಳನ್ನು ರೂಪಿಸುತ್ತಿದ್ದೇವೆ’ ಎಂದು ಪತ್ರಿಕೆಗೆ ವಿವರಿಸಿದರು.

ಹೃದಯದ ಆರೋಗ್ಯ ಕಾಪಾಡಿಕೊಂಡವರೇ ಗಟ್ಟಿ-ಗುಂಡಿಗೆಯವರು
ವಿಕ ಸುದ್ದಿಲೋಕ ಮೈಸೂರು
‘ಎದೆನೋವು’ ಎಂದಾಕ್ಷಣ ಎಲ್ಲವೂ ಹೃದಯ ಸಂಬಂಧಿ ಕಾಯಿಲೆ ಅಲ್ಲ. ತಕ್ಷಣವೇ ಇದು ‘ಹೃದಯಾಘಾತ’ ಇರಬಹುದೇ ಎಂದುಕೊಳ್ಳುವುದು ಸರಿಯಲ್ಲ.
ಇದು ಕೆ.ಆರ್.ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ.ಕೆ.ಎಸ್. ಸದಾನಂದ ಅವರ ಸಲಹೆ.
ವಿಜಯ ಕರ್ನಾಟಕ ಪತ್ರಿಕೆ ಕಚೇರಿಯಲ್ಲಿ ಶನಿವಾರ ನಡೆದ ‘ಯೋಗಕ್ಷೇಮ-ವಿಕ ಫೋನ್ಇನ್’ ಕಾರ್ಯಕ್ರಮದಲ್ಲಿ ದೂರವಾಣಿ ಕರೆ ಹೊತ್ತು ತಂದ ಹೃದಯ ಸಂಬಂಧಿ ಸಮಸ್ಯೆಗಳಿಗೆ ಉತ್ತರಿಸಿದ ಅವರು, ಅದು ಮಾಂಸಖಂಡದ ನೋವಿರಬಹುದು, ಮೂಳೆ ನೋವು, ನಡೆದಾಗ, ಹತ್ತುವಾಗ, ಬಗ್ಗಿದಾಗ, ಆಮ್ಲತೆ (ಅಸಿಡಿಟಿ) ಯಿಂದಲೂ ನೋವು ಕಾಣಿಸಿಕೊಳ್ಳಬಹುದು. ಶ್ವಾಸಕೋಶ ಸಮಸ್ಯೆಗಳೂ ಎದೆನೋವಿಗೆ ಕಾರಣವಾಗಬಹುದು. ವೈದ್ಯಕೀಯ ಪರೀಕ್ಷೆಯಿಂದ ಮಾತ್ರ ನೋವಿನ ಮೂಲ ಪತ್ತೆ ಸಾಧ್ಯ ಎಂದರು.
ಹೃದಯಾಘಾತ ಕಾಣಿಸಿಕೊಳ್ಳುವ ಮುನ್ನ ಎದೆಯ ಮಧ್ಯೆ ಭಾಗದಲ್ಲಿ ಹಿಂಡಿದಂತೆ ನೋವು ಕಾಣಿಸಿಕೊಳ್ಳುತ್ತದೆ. ಆನೆ ಕಾಲಿಟ್ಟಂತೆ ಯಾತನೆಯಾಗುತ್ತದೆ. ದಮ್ಮು, ತಲೆಸುತ್ತ ಇತ್ಯಾದಿ ಮುನ್ಸೂಚನೆ ಕಾಣಿಸಿಕೊಳ್ಳುತ್ತದೆ. ನಡೆದಾಗ, ಮಲಗಿದಾಗ ದಮ್ಮು ಬರುವುದು, ತಲೆಸುತ್ತು, ಕಾಲು ಊದಿಕೊಳ್ಳುವುದು ಆಗುತ್ತದೆ. ಹಾಗಾಗಿ ‘ಎದೆನೋವು’ ಯಾವ ಕಾರಣಕ್ಕೆ ಬಂದಿರಬಹುದೆನ್ನುವು ದನ್ನು ದೃಢಪಡಿಸಿಕೊಂಡು, ವೈದ್ಯರ ಸಲಹೆ ಅನುಸಾರ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದರು.
ಎದೆನೋವು ಕಾಣಿಸಿಕೊಂಡಾಗ ನಿರ್ಲಕ್ಷ್ಯ ವಹಿಸದೇ ವೈದ್ಯರನ್ನು ಕಂಡು ಪರೀಕ್ಷಿಸಿಕೊಳ್ಳಬೇಕು. ಹೃದಯ ಕಾಯಿಲೆಗಳ ಪತ್ತೆಗೆ ಇಸಿಜಿ,ಟ್ರೆಡ್ಮಿಲ್, ಎಕೋಕಾರ್ಡಿಯೋಗ್ರಫಿ, ಸ್ಕ್ಯಾನಿಂಗ್, ಎಕ್ಸರೇ ಮೊದಲಾದ ಪರೀಕ್ಷೆಗಳ ಮೂಲಕ ದೃಢಪಡಿಸಿಕೊಳ್ಳಬಹುದು. ಮಾಂಸಖಂಡ, ಮೂಳೆ ನೋವು ಇತ್ಯಾದಿಗಳು ಎದೆನೋವಿಗೆ ಕಾರಣವಾದರೆ ಭೀತಿ ಅನಗತ್ಯ ಎಂದು ತಿಳಿಸಿದರು.
ಬಹುತೇಕ ಕರೆಗಳಲ್ಲಿ ಎದೆನೋವಿನ ಬಗ್ಗೆ ಅತಂಕವ್ಯಕ್ತವಾಯಿತು. ಕುವೆಂಪುನಗರದ ವೇಣುಗೋಪಾಲ್, ಕುಶಾಲನಗರದ ವಿನೋದ್, ಚಳ್ಳಕೆರೆ ನಿರಂಜನಗೌq, ಚಾಮರಾಜನಗರದ ಮಹದೇವಸ್ವಾಮಿ,ಗುಂಡೂರಾವ್ನಗರ ಸನತ್ಕುಮಾರ್ ಮೊದಲಾದವರು ಇದೇ ಪ್ರಶ್ನೆ ಎತ್ತಿದರು. ರಕ್ತದೊತ್ತಡ, ತೀವ್ರವಾಗಿ ಎದೆಬಡಿತ, ಯುವಕರಲ್ಲೂ ಹೆಚ್ಚು ಹೃದಯಾಘಾತಕ್ಕೆ ಕಾರಣ ಇತ್ಯಾದಿ ಪ್ರಶ್ನೆಗಳು ಕೇಳಿಬಂದವು.
ತಿಮ್ಮೇಗೌಡ ಎಂಬುವವರ ಕರೆಗೆ ಉತ್ತರಿಸಿದ ಡಾ.ಸದಾನಂದ ಅವರು, ಮಧುಮೇಹ ಇರುವವರಿಗೆ ತೀವ್ರ ಸ್ವರೂಪದ ಹೃದಯಾಘಾತ ಹೆಚ್ಚು. ೩೦-೪೦ ವಯಸ್ಸಿನವರಲ್ಲೂ ಹೃದಯಾಘಾತ ಹೆಚ್ಚು, ಮಧುಮೇಹಿಗಳು ಮುಂಚಿತವಾಗಿ ಇಸಿಜಿ, ಟ್ರೆಡ್ಮಿಲ್ ಪರೀಕ್ಷೆ ಮಾಡಿಸಬೇಕು. ಬಿ.ಪಿ., ಸಕ್ಕರೆ ಅಂಶ ಪರೀಕ್ಷಿಸಿ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.
ಬೈಪಾಸ್ ಸರ್ಜರಿ ಆದ ಬಳಿಕವೂ ನೋವು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಆತಂಕ ತೋಡಿಕೊಂಡ ಮಂಡ್ಯದ ನಾಗರತ್ನ ಅವರಿಗೆ, ಟ್ರೆಡ್ಮಿಲ್ ಪರೀಕ್ಷೆ ಜತೆಗೆ ವೈದ್ಯರ ಸಲಹೆ ಪಡೆದು ನೋವು ನಿವಾರಕ ಔಷಧ ತೆಗೆದುಕೊಳ್ಳುವುದು ಸೂಕ್ತ ಎಂದರು.
ಕೆ.ಆರ್.ನಗರ ಶಾರದಾ ಅವರು ವೇಗವಾಗಿ ಹೃದಯ ಬಡಿದುಕೊಳ್ಳುವ ಬಗ್ಗೆ ಕೇಳಿದ ಪ್ರಶ್ನೆಗೆ, ಹೃದಯ ವೇಗವಾಗಿ ಬಡಿದುಕೊಳ್ಳಲು ಉದ್ವೇಗ ಕಾರಣವಿರಬಹುದು. ಬಡಿತ ಹೆಚ್ಚಿದ ತಕ್ಷಣವೇ ಇಸಿಜಿ ಪರೀಕ್ಷೆ ಮಾಡಿಸಬೇಕು. ಇದು ಅಸಾಧ್ಯವಾದ್ದರಿಂದ ಹೋಲ್ಟರ್ ಅಳವಡಿಸಿ ೨೪ ಗಂಟೆಗಳು ನಿಗಾ ವಹಿಸಲಾಗುವುದು. ಸಾಮಾನ್ಯವಾಗಿ ಹೃದಯ ಬಡಿತ ನಿಮಿಷಕ್ಕೆ ೬೦-೧೦೦ ಬಾರಿ ಇರುತ್ತೆ. ೪೦-೫೦ ವರ್ಷದವರೆಗೆ ಮಹಿಳೆಯರಲ್ಲಿ ಹೃದಯಾಘಾತ ಪುರುಷರಿಗಿಂತ ಕಡಿಮೆ. ಅದಕ್ಕೆ ಈಸ್ಟ್ರೋಜನ್ ಕಾರಣ. ಆದರೆ ೫೦ ಬಳಿಕ ಮಹಿಳೆಯರಲ್ಲಿ ತೀವ್ರ ಸ್ವರೂಪದಲ್ಲಿ ಹೃದಯಾಘಾತ ಕಾಣಿಸಿಕೊಳ್ಳುತ್ತದೆ ಎಂದರು.
ಲಿಂಗರಾಜು ಅವರ ದಿಢೀರ್ ಸಾವಿಗೆ ಕಾರಣವೇನು ಎನ್ನುವ ಆತಂಕಕ್ಕೆ ಪ್ರತಿಕ್ರಿಯಿಸಿ, ರಕ್ತನಾಳಗಳು ಕಟ್ಟಿಕೊಂಡು ಬಡಿತದಲ್ಲಿ ಏರುಪೇರಾಗಿ ಹೃದಯ ಸ್ತಂಭನ (ಕಾರ್ಡಿಯಾಕ್ ಅರೆಸ್ಟ್) ಉಂಟಾಗುತ್ತದೆ. ಇದರಿಂದ ಶೇ.೨೦ ರಷ್ಟು ಮಂದಿ ನಿಂತಲ್ಲೆ, ಕುಳಿತಲ್ಲೆ, ಮಲಗಿದಲ್ಲೇ ಸಾವನ್ನಪ್ಪುತ್ತಾರೆ. ವೈದ್ಯರಿಂದ ಪರೀಕ್ಷಿಸಿ ನಾಳದ ಕವಾಟು ಮರುಜೋಡಣೆ ಶಸ್ತ್ರಚಿಕಿತ್ಸೆ ಮಾಡಬೇಕು. ಹೃದ್ರೋಗ ಕಾಯಿಲೆಗಳಿಗೆ ಅಂಜಿಯೋಪ್ಲಾಸ್ಟಿ ಇತ್ಯಾದಿ ಹೊಸ ಶಸ್ತ್ರಚಿಕಿತ್ಸಾ ವಿಧಾನಗಳು ಬಂದಿವೆ ಎಂದು ತಿಳಿಸಿದರು.
ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣ ಜಾಸ್ತಿಯಾದಾಗ ನಾಳಗಳಲ್ಲಿ ಶೇಖರಗೊಂಡು ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ಹಾಗಾಗಿ ಬೆಣ್ಣೆ, ತುಪ್ಪ ಬಳಕೆಯಲ್ಲಿ ಮಿತಿ ಇರಬೇಕು, ಮನುಷ್ಯನ ತೂಕ, ಎತ್ತರಕ್ಕೆ ಅನುಗುಣವಾಗಿ ಶೇ.೩೦ ರಷ್ಟು ಕೊಬ್ಬು, ಶೇ.೨೦ ಪ್ರೋಟೀನ್, ಶೇ.೫೦ ರಷ್ಟು ಕಾರ್ಬೋಹೈಡ್ರೇಟ್ಸ್ ಅವಶ್ಯ ಎಂದು ಮಾಹಿತಿ ನೀಡಿದರು.
ಹೃದಯಾಘಾತ ಕಾರಣಗಳೇನು ? :
ಬದಲಾದ ಜೀವನ ಶೈಲಿ, ಧೂಮಪಾನ, ಬೊಜ್ಜು, ದೇಹ ದಂಡಿಸದಿರುವುದು (ವ್ಯಾಯಾಮ ಮಾಡದಿರುವುದು), ಸಕ್ಕರೆ ಕಾಯಿಲೆ, ಕೊಲೆಸ್ಟರಾಲ್, ರಕ್ತದೊತ್ತಡ (ಬಿಪಿ) ಇತ್ಯಾದಿ ಹೃದಯಾಘಾತಕ್ಕೆ ಪ್ರಮುಖ ಕಾರಣಗಳು. ಜತೆಗೆ ಅನುವಂಶಿಕವಾಗಿಯೂ ಬರುವ ಸಾಧ್ಯತೆಯಿದೆ. ಯುವಕರಲ್ಲಿ ಕೇವಲ ೩೦-೩೫ ವರ್ಷದವರಲ್ಲಿ ಹೃದಯಾಘಾತ ಹೆಚ್ಚಾಗಿರಲು ಮುಖ್ಯ ಕಾರಣ ಧೂಮಪಾನ.
ಹೃದಯಾಘಾತ ತಡೆ ನಿಮ್ಮ ಕೈಲಿದೆ
ಕನಿಷ್ಠ ವರ್ಷಕ್ಕೊಮ್ಮೆಯಾದರೂ ವೈದ್ಯರಲ್ಲಿ ನಿಯಮಿತವಾಗಿ ತಪಾಸಿಸಿಕೊಳ್ಳಿ. ಬಿಪಿ, ಮಧುಮೇಹ, ಕೊಲೆಸ್ಟರಾಲ್ ನಿಯಂತ್ರಣದಲ್ಲಿಟ್ಟುಕೊಂಡು ಆಗಾಗ್ಗೆ ಪರೀಕ್ಷಿಸಿಕೊಳ್ಳಬೇಕು. ನಿಯಮಿತವಾಗಿ ವಾಕಿಂಗ್, ಕನಿಷ್ಠ ೩೦ ನಿಮಿಷಗಳ ವ್ಯಾಯಾಮ, ಸದಾ ಚಟುವಟಿಕೆಯಿಂದಿರುವುದು, ವಾಹನ ಬಳಕೆಗಿಂತ ನಡೆಯುವುದು, ಲಿಫ್ಟ್ಗಿಂತ ಮೆಟ್ಟಿಲು ಹತ್ತುವುದು, ಅಹಾರದಲ್ಲಿ ಪಥ್ಯ, ಎಣ್ಣೆಜಿಡ್ಡು ಮತ್ತು ಕೊಬ್ಬಿನಾಂಶವಿರುವ ಆಹಾರ ಪದಾರ್ಥಗಳು, ಮಾಂಸಾಹಾರಕ್ಕಿಂತ ಸಸ್ಯಾಹಾರ ಒಳ್ಳೆಯದು. ಹಣ್ಣು, ತರಕಾರಿ, ಕಾಳುಗಳು, ಒಣಹಣ್ಣುಗಳ ಸೇವನೆ ಉತ್ತಮ.
ನೀವು ಮಾಡಬೇಕಾದ್ದೇನು ?
ನಿಮಗೋ ಅಥವಾ ನಿಮ್ಮ ಮನೆಯವರಿಗೋ ಹೃದಯಾಘಾತವಾದ ಕೂಡಲೇ ಕ್ಷಣವನ್ನು ವ್ಯರ್ಥಗೊಳಿಸದೆ ಹತ್ತಿರದ ಆಸ್ಪತ್ರೆಗೆ ದೌಡಾ ಯಿಸಿ. ಎಷ್ಟು ಬೇಗನೆ ಚಿಕಿತ್ಸೆ ದೊರೆಯುವುದೋ ಅಷ್ಟೂ ಅಪಾಯ ಕಡಿಮೆ. ಹೃದಯಕ್ಕಾಗುವ ಹಾನಿಯನ್ನು ಆದಷ್ಟು ತಡೆಗಟ್ಟ ಬಹುದು. ಈ ಸಮಯವನ್ನು ‘ಗೋಲ್ಡನ್ ಹವರ್‘ ಎನ್ನುತ್ತಾರೆ.
‘ಕಾರ್ಡಿಯಾಕ್ ಆಂಬ್ಯುಲೆನ್ಸ್’ಗೆ ಕರೆ ಮಾಡಿ. ಆಸ್ಪತ್ರೆ ಮುಟ್ಟುವ ಮುನ್ನ ಅಂಬ್ಯುಲೆನ್ಸ್ನಲ್ಲೇ ಒಂದಷ್ಟು ಚಿಕಿತ್ಸೆ ಸಾಧ್ಯವಾಗುವುದರಿಂದ ರೋಗಿ ಸುರಕ್ಷತೆ ದುಪ್ಪಟ್ಟು ಸಾಧ್ಯವಿದೆ. ಮಿಷನ್ ಆಸ್ಪತ್ರೆ, ವಿಕ್ರಂ ಆಸ್ಪತ್ರೆ, ಗೋಪಾಲಗೌಡ ಶಾಂತವೇರಿ ಆಸ್ಪತ್ರೆ ಸೇರಿದಂತೆ ಕೆಲವೆಡೆ ‘ಕಾರ್ಡಿಯಾಕ್ ಆಂಬ್ಯುಲೆನ್ಸ್’ ಹೊಂದಿವೆ. ಒಂದೂವರೆ ಗಂಟೆಯಲ್ಲಿ ಆಂಜಿಯೋಪ್ಲಾಸ್ಟಿ, ಇಸಿಜಿ ಮಾಡಿದರೆ ಹೃದಯಾಘಾತದಿಂದ ಬಚಾವ್ ಮಾಡಬಹುದು.
ಎಲ್ಲರೂ ಮದುವೆ, ಮುಂಜಿ, ಶಿಕ್ಷಣ ಇತ್ಯಾದಿಗಳಿಗೆ ಮುಂದಾಲೋಚನೆಯೊಂದಿಗೆ ಪಕ್ಕಾ ಪ್ಲಾನ್ ಮಾಡಿರುತ್ತಾರೆ. ಆದರೆ ಕಾಯವನ್ನು ಕಾಡುವ ಕಾಯಿಲೆಗಳಿಗೆ ಯಾರಲ್ಲೂ ಪ್ಲಾನ್ ಎಂಬುದಿಲ್ಲ. ಅಪಾಯ ಎದುರಾದಾಗಲೇ ಎಚ್ಚೆತ್ತುಕೊಳ್ಳುವುದು. ಅದರಲ್ಲೂ ಹೃದಯಾಘಾತ ನಿರ್ಲಕ್ಷಿಸಬಾರದು. ಅದಕ್ಕಾಗಿ ನೀವು ಮಾಡಬೇಕಾದಿಷ್ಟೇ - ವೈದ್ಯರು, ಆಸ್ಪತ್ರೆ, ಆಂಬ್ಯುಲೆನ್ಸ್ ದೂರವಾಣಿ ಸಂಖ್ಯೆ ಹೊಂದಿರುವುದು, ಆರೋಗ್ಯ ವಿಮೆ ಮಾಡಿಸುವುದು, ಎಲ್ಲಕ್ಕಿಂತ ಹೆಚ್ಚಾಗಿ ಹಣ ಹೊಂದಿಸಿಟ್ಟುಕೊಳ್ಳುವುದು ಅಗತ್ಯ. ಪ್ರಸ್ತುತ ಹೃದಯ ಚಿಕಿತ್ಸೆ ಅತ್ಯಂತ ದುಬಾರಿ. ಹೃದಯ ಶಸ್ತ್ರಚಿಕಿತ್ಸೆಗೆ ಕನಿಷ್ಠ ೧-೧.೫ ಲಕ್ಷ ರೂ. ವೆಚ್ಚ ತಗಲುತ್ತದೆ. ಹಾಗಾಗಿ ದುಡ್ಡು ಹೊಂದಿಸಿಟ್ಟುಕೊಳ್ಳುವುದು ಒಳಿತು.
ಇವರು ನಿಮ್ಮ ವೈದ್ಯರು
ಸಣ್ಣ ವಯಸ್ಸಿನಲ್ಲೇ ದೊಡ್ಡ ಹುದ್ದೆಗೆ ಏರಿದ್ದಾರೆ ಡಾ.ಕೆ.ಎಸ್. ಸದಾನಂದ್. ಮೈಸೂರು ಮೂಲದ ಸದಾನಂದ್ ಎಂಬಿಬಿಎಸ್ ಬಳಿಕ ಎಂಡಿಯನ್ನು ಮೈಸೂರು ವೈದ್ಯಕೀಯ ಕಾಲೇಜಿನಲ್ಲೇ ಪೂರೈಸಿದರು. ಬಳಿಕ ಜಯದೇವ ಹೃದ್ಯೋಗ ಸಂಸ್ಥೆಯಿಂದ ಡಿಎಂ ಪದವಿಯನ್ನು ಪಡೆದು ಈಗ ಕೆ.ಆರ್. ಆಸ್ಪತ್ರೆಯ ಹೃದ್ರೋಗ (ಕಾರ್ಡಿಯಾಲಜಿ) ವಿಭಾಗದ ಮುಖ್ಯಸ್ಥರು. ಹೃದಯಕ್ಕೆ ಸಂಬಂಧಿಸಿ ವೈದ್ಯಕೀಯ ಪರಿಭಾಷೆ ಯಲ್ಲಿ ಖಚಿತವಾಗಿ ಮಾತನಾಡುವ ಸಾಮರ್ಥ್ಯ ಸದಾನಂದ್ ಅವರಿಗಿದೆ. ಅವರ ಮೊಬೈಲ್ ನಂಬರ್- ೯೪೪೮೭ ೪೧೧೧೭.
ಇದು ಸಲಹೆ ಮಾತ್ರ. ಅನುಷ್ಠಾನಕ್ಕೆ ಮುನ್ನ ವೈದ್ಯರನ್ನು ಸಂಪರ್ಕಿಸಿ
ನಿರ್ವಹಣೆ: ಜೆ. ಶಿವಣ್ಣ,

ಕಾಲೇಜು ಅಂಗಳದಲ್ಲಿ ಚುನಾವಣೆಯ ಸದ್ದು !

ವಿಕ ಸುದ್ದಿಲೋಕ ಮೈಸೂರು
ಡಾ. ಎನ್. ಆರ್. ಶೆಟ್ಟಿ ಅವರ ಸಮಿತಿಯ ಶಿಫಾರಸುಗಳನ್ನು ಸರಕಾರ ಒಪ್ಪಿದ್ದೇ ಆದರೆ, ಮುಂಬರುವ ದಿನಗಳಲ್ಲಿ ಎಲ್ಲ ಕಾಲೇಜು ವಿದ್ಯಾರ್ಥಿಗಳು ಮತದಾನಕ್ಕೆ ಸಿದ್ಧವಾಗಬೇಕಾಗುತ್ತದೆ.
ಏಕೆಂದರೆ- ಶೆಟ್ಟಿ ಸಮಿತಿ ವಿಶ್ವವಿದ್ಯಾನಿಲಯದ ಆಡಳಿತದಲ್ಲಿ ಸೆನೆಟ್ ಮರುಸ್ಥಾಪಿಸಬೇಕು ಎಂದಿದೆಯಲ್ಲದೆ, ಅಲ್ಲಿ ವಿದ್ಯಾರ್ಥಿಗಳ ಪ್ರಾತಿನಿಧ್ಯ ಇರಬೇಕು ಎಂದು ಹೇಳಿದೆ. ವಿದ್ಯಾರ್ಥಿ ಸಂಘಗಳ ಚುನಾವಣೆ ಮೂಲಕ ಕಾಲೇಜು ಕ್ಯಾಂಪಸ್ನೊಳಗೆ ರಾಜಕೀಯ ಶಕ್ತಿಗಳು ನುಗ್ಗಲು ಸೆನೆಟ್ ಒಂದು ಹೆಬ್ಬಾಗಿಲು. ವಿದ್ಯಾರ್ಥಿಗಳ ಮಧ್ಯೆ ಕೆಟ್ಟ ರಾಜಕೀಯ ಹರಡಲು ಸೆನೆಟ್ ಮೂಲ ಎಂಬ ಕಾರಣದಿಂದ ಎಸ್. ಎಂ. ಕೃಷ್ಣ ಸರಕಾರದ ಅವಧಿಯಲ್ಲಿ ಸೆನೆಟ್ನಲ್ಲಿ ವಿದ್ಯಾರ್ಥಿಗಳ ಪ್ರಾತಿನಿಧ್ಯ ರದ್ದಾಯಿತು. ಇದಾದ ಬಳಿಕ ಹಲವು ವಿದ್ಯಾರ್ಥಿ ಸಂಘಟನೆಗಳು ಸೆನೆಟ್ನಲ್ಲಿ ಪ್ರಾತಿನಿಧ್ಯ, ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ಬೇಕೆಂದು ಆಗ್ರಹಿಸುತ್ತಲೇ ಇವೆ. ಈ ಎಲ್ಲದರ ಮಧ್ಯೆಯೇ ಸರಕಾರ - ಕರ್ನಾಟಕ ವಿಶ್ವವಿದ್ಯಾನಿಲಯಗಳ ಕಾಯ್ದೆ ೨೦೦೦ಕ್ಕೆ ಕೆಲವು ತಿದ್ದುಪಡಿ ತರಲು ಚಿಂತನೆ ನಡೆದಿದೆ. ಇದಕ್ಕಾಗಿ ಎನ್. ಆರ್. ಶೆಟ್ಟಿ ನೇತೃತ್ವದಲ್ಲಿ ಪರಿಣತರ ಸಮಿತಿಯನ್ನು ರಚಿಸಿತ್ತು. ಸಮಿತಿ ಎರಡು ದಿನಗಳ ಹಿಂದೆಯಷ್ಟೆ ಕಾಯ್ದೆಯಲ್ಲಿ ಬದಲಾಗಬೇಕಿರುವ ಕೆಲವು ಸಂಗತಿಗಳ ಕುರಿತು ಸರಕಾರಕ್ಕೆ ಶಿಫಾರಸು ಮಾಡಿದೆ.
ವಿಶ್ವವಿದ್ಯಾನಿಲಯಗಳ ನೀತಿ ರೂಪಕ ಸಂಸ್ಥೆಗಳಲ್ಲಿ ಕುಲಪತಿ, ಕುಲಸಚಿವರು, ಡೀನ್ಗಳು, ಪೋಷಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಶೈಕ್ಷಣಿಕ ಪರಿವಾರದ ಎಲ್ಲ ಸದಸ್ಯರು ಇರಬೇಕು ಎಂಬುದು ಕೆಲವರ ಆಶಯ. ಪಠ್ಯ, ಪಠ್ಯೇತರ, ಸಾಂಸ್ಕೃತಿಕ, ಕ್ರೀಡೆ, ಹಾಸ್ಟೆಲ್ ಸೇರಿದಂತೆ ವಿದ್ಯಾರ್ಥಿ ತನಗೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಆಡಳಿತದ ಗಮನಸೆಳೆಯಲು ವಿದ್ಯಾರ್ಥಿಗಳು ಇರಬೇಕು ಎಂಬ ಕಾರಣ ನೀಡುತ್ತಾರೆ.
ಆದರೆ, ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯ ಮಂಡಿಸುವವರು ಇದ್ದಾರೆ. ವಿವಿ ಆವರಣದೊಳಗೆ, ಕಾಲೇಜು ಕ್ಯಾಂಪಸ್ನೊಳಗೆ ರಾಜಕೀಯ ಪ್ರವೇಶಿಸಿದರೆ, ಅಲ್ಲಿನ ಶೈಕ್ಷಣಿಕ ವಾತಾವರಣವೇ ಕಲುಷಿತವಾಗುತ್ತದೆ. ರಾಜಕೀಯದ ಹೆಸರಿನಲ್ಲಿ ದುಷ್ಟಶಕ್ತಿಗಳು ಆವರಣದೊಳಗೆ ಪ್ರವೇಶಿಸಿ, ಹಿಂಸಾತ್ಮಕ ಪ್ರತಿಭಟನೆಗೆ ನಾಂದಿಯಾಡುತ್ತಿವೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ ಎಂಬುದು ಸೆನೆಟ್ನಲ್ಲಿ ವಿದ್ಯಾರ್ಥಿ ಪ್ರಾತಿನಿಧ್ಯ ವಿರೋಧಿಸುವವರ ವಾದ. ಈಗ ಶೆಟ್ಟಿ ಸಮಿತಿ ಮತ್ತೊಮ್ಮೆ ವಿದ್ಯಾರ್ಥಿಗಳ ಪ್ರಾತಿನಿಧ್ಯದ ಅಗತ್ಯದ ಬಗ್ಗೆ ಹೇಳಿದೆ. ಹಾಗಾಗಿ ಈ ವಿಷಯ ಕುರಿತು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ವಿಜಯ ಕರ್ನಾಟಕಕ್ಕೆ ನೀಡಿರುವ ಪ್ರತಿಕ್ರಿಯೆ.
ರಾಜಕೀಯದ ಬಗ್ಗೆ ತಾತ್ಸಾರ; ಮತದಾನ ವ್ಯವಸ್ಥೆಯಲ್ಲಿನ ಲೋಪ-ದೋಷಗಳು ಸೇರಿದಂತೆ ಬಹಳಷ್ಟು ಸಂಗತಿಗಳ ಕಾರಣದಿಂದ, ನಮ್ಮದು ಇನ್ನೂ ಪರಿಪಕ್ವ ಆಗುತ್ತಿರುವ ಪ್ರಜಾಪ್ರಭುತ್ವ ದೇಶ ಎಂಬುದು ಕೆಲವರ ಗೊಣಗಾಟ. ಇದರಲ್ಲಿ ಸತ್ಯವಿರಬಹುದು. ಆದರೆ, ಈ ಸವಾಲನ್ನು ಎದುರಿಸಲು, ಗೊಣಗಾಡುವವರು ಎತ್ತಿದ ಅಭಿಪ್ರಾಯದಲ್ಲಿಯೇ ಉತ್ತರವಿದೆ. ರಾಜಕೀಯ ಒಳ್ಳೆಯವರಿಗಲ್ಲ , ವಿದ್ಯಾರ್ಥಿಗಳಿಗಲ್ಲ, ಅವರಿಗಲ್ಲ-ಇವರಿಗಲ್ಲ, ಅದು ಕಳ್ಳ-ಕಾಕರಿಗೆ ಎಂದು ಹೇಳುತ್ತಾ, ಎಷ್ಟು ವರ್ಷ ಕಾಲ ಕಳೆಯುವುದು. ರಾಜಕೀಯ ಕ್ಷೇತ್ರವನ್ನು ಸುಧಾರಣೆ ಮಾಡಬೇಕೆಂದರೆ, ಎಲ್ಲರೂ ಇಲ್ಲಿಗೆ ಬರಬೇಕು. ಅಂತೆಯೇ, ಕಾಲೇಜು ವಿದ್ಯಾರ್ಥಿಗಳು ಕೂಡ. ಅದಕ್ಕಾಗಿ ಅವರಿಗೆ ಒಂದು ತರಬೇತಿ ಸಿಗಬೇಕು. ಇದು ಸಾಧ್ಯವಾಗುವುದು ಸೆನೆಟ್ ಮತ್ತು ಸಿಂಡಿಕೇಟ್ನಲ್ಲಿ ವಿದ್ಯಾರ್ಥಿ ಪ್ರಾತಿನಿಧ್ಯ ಇದ್ದಾಗ ಮಾತ್ರ. ಹಾಗಾಗಿ- ಸಮಿತಿಯ ಶಿಫಾರಸು ಸ್ವಾಗತಾರ್ಹ. ಹಾಗೆ ನೋಡಿದರೆ, ಕೇಂದ್ರ ಸರಕಾರ ನೇಮಿಸಿದ ಲಿಂಗ್ಡೋ ಸಮಿತಿ ಕೂಡ ಇದೇ ರೀತಿ ಶಿಫಾರಸ್ ಮಾಡಿದೆ. ಕಾಲೇಜಿನಲ್ಲಿ ನಡೆಯುವ ಚುನಾವಣೆಗಳಿಂದ ಗಲಾಟೆ ನಡೆಯುತ್ತಿದೆ ಎಂದರೆ, ಅದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆ ಹೊರತು, ಚುನಾವಣೆಯನ್ನು ರದ್ದು ಪಡಿಸುವುದು ಸರಿಯಲ್ಲ. ನೆಗಡಿ ಎಂದು ಯಾರೂ ಮೂಗನ್ನು ಕೊಯ್ದುಕೊಳ್ಳುವುದಿಲ್ಲ. ರಾಜಕೀಯ ಪಕ್ಷಗಳು ಕ್ಯಾಂಪಸ್ಗೆ ನುಸುಳದಂತೆ ಕ್ರಮ ಕೈಗೊಳ್ಳಲಿ. ರಾಜಕೀಯ ತರಬೇತಿಗಾಗಿ ಇದು ಅತ್ಯಗತ್ಯ.
- ನವೀನ್, ಮೈಸೂರು ವಿಭಾಗ ಸಂಘಟನೆ ಕಾರ್ಯದರ್ಶಿ, ಎಬಿವಿಪಿ
ವಿದ್ಯಾರ್ಥಿ ಪ್ರಾತಿನಿಧ್ಯವುಳ್ಳ ಸೆನೆಟ್-ಸಿಂಡಿಕೇಟ್ ರದ್ದು ಪಡಿಸಿದ ದಿನದಿಂದಲೇ ನಮ್ಮ ಸಂಘಟನೆ, ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಿ ಎಂದು ಆಗ್ರಹಿಸುತ್ತಲೇ ಬಂದಿದೆ. ಹಾಗಾಗಿ- ನಾವು ಶೆಟ್ಟಿ ಸಮಿತಿಯ ಬಹಳಷ್ಟು ಶಿಫಾರಸುಗಳ ಬಗ್ಗೆ ತಕರಾರು ಇಟ್ಟುಕೊಂಡೇ, ವಿದ್ಯಾರ್ಥಿ ಪ್ರಾತಿನಿಧ್ಯ ಕುರಿತು ಸಲಹೆಯನ್ನು ಬೆಂಬಲಿಸುತ್ತೇವೆ.
ನಮ್ಮ ವಿವಿಗಳ ಈಗಿನ ಆಡಳಿತ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ ದನಿಗಳೇ ಇಲ್ಲವಾಗಿದೆ. ನೀತಿ-ನಿರೂಪಣೆ ಮಾಡುವಂಥ ವಿವಿಯ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳೇ ಇದ್ದರೆ, ಅವರ ಸಮಸ್ಯೆ ಸುಲಭವಾಗಿ ಅಧಿಕಾರಿಗಳ ಕಿವಿಗೆ ತಲುಪುತ್ತದೆ. ವಿದ್ಯಾರ್ಥಿ ಸಂಘಟನೆಗಳು ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಬಹುದಷ್ಟೆ. ಆದರೆ, ಆಡಳಿತ ಅಧಿಕೃತ ಪಾಲ್ಗೊಳ್ಳುವಿಕೆಗೆ ಸೆನೆಟ್ ಬೇಕೆ-ಬೇಕು.
ಚುನಾವಣೆ ವ್ಯವಸ್ಥೆಯಿಂದ ಸೆನೆಟ್ನಲ್ಲಿ ರಾಜಕೀಯ ನುಸುಳಿ ಬಿಡುತ್ತದೆ ಎಂಬುದೇನೋ ಸರಿ. ಆದರೆ ಚುನಾವಣೆ ಇರದಿದ್ದರೂ, ವಿದ್ಯಾರ್ಥಿ ಪ್ರತಿನಿಧಿಗಳ ನೇಮಕದ ಮೂಲಕ ರಾಜಕೀಯ ನುಸುಳುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಧಿಕಾರದಲ್ಲಿದ್ದ ಪಕ್ಷ, ತನ್ನ ರಾಜಕೀಯ ಕಾರ್ಯಕರ್ತರನ್ನೇ ನೇಮಿಸುತ್ತದೆ. ಇಂಥ ಪ್ರತಿನಿಧಿಗಳು ವಿದ್ಯಾರ್ಥಿ ಸಮಸ್ಯೆ ಎತ್ತಿಹಿಡಿಯುವ ಬದಲು, ಅವರ ರಾಜಕೀಯ ಅಜೆಂಡಾಗಳ ಜಾರಿಗೆ ಸಹಕರಿಸುತ್ತಾರೆ. ಇದಕ್ಕಿಂತ ಸೆನೆಟ್ಗೆ ಚುನಾವಣೆಯೇ ವಾಸಿ. ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಬುದ್ಧತೆ ಅರಳಲು ಕೂಡ ಇದು ಸಹಕಾರಿ.
- ರವಿ, ರಾಜ್ಯ ಉಪಾಧ್ಯಕ್ಷರು, ಎಐಡಿಎಸ್ಒ
ಸಾರ್ವಜನಿಕ ಹಾಗೂ ಶೈಕ್ಷಣಿಕ ಬದುಕಿನ ಎಲ್ಲ ವಲಯದಲ್ಲೂ ವಿದ್ಯಾರ್ಥಿಗಳ ಪ್ರಾತಿನಿಧ್ಯ ಇರಬೇಕು ಹಾಗೂ ಅವರ ಪ್ರಜಾತಾಂತ್ರಿಕ ಹಕ್ಕನ್ನು ಕಾಪಾಡಬೇಕು ಎಂಬುದು ನಮ್ಮ ಸಿದ್ಧಾಂತ. ಹಾಗಾಗಿ- ಸಹಜವಾಗಿಯೇ ಶೆಟ್ಟಿ ಸಮಿತಿ ಶಿಫಾರಸ್ ನಮ್ಮ ಅಭಿಪ್ರಾಯವೇ ಆಗಿದೆ. ಕೇರಳ ಹೈ ಕೋರ್ಟ್ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನೇ ರದ್ದು ಪಡಿಸಿದ ಸಂದರ್ಭದಲ್ಲಿ, ಸುಪ್ರೀಂಕೋರ್ಟ್ ಇದರ ಸಾಧಕ-ಬಾಧಕ ಅಧ್ಯಯನ ನಡೆಸಲು ಲಿಂಗ್ಡೋ ಸಮಿತಿ ರಚಿಸಿತ್ತು. ಆ ಸಮಿತಿ ಕೂಡ ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣೆಗೆ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ಅಗತ್ಯ ಎಂದು ಹೇಳಿದೆ. ಇದನ್ನು ಗಮನಿಸಬೇಕು. ಕೆಲವರು ವಿದ್ಯಾರ್ಥಿಗಳಿಗೇಕೆ ರಾಜಕೀಯ ಎನ್ನುತ್ತಾರೆ. ಆದರೆ, ರಾಜಕೀಯ ಇಲ್ಲದ ಕ್ಷೇತ್ರ ಯಾವುದಿದೆ ಹೇಳಿ ?, ಬದುಕಿನ ಎಲ್ಲವನ್ನೂ ನಿರ್ಧರಿಸುವುದು ರಾಜಕೀಯ. ಇಂಥ ಮಹತ್ವ ಪಡೆದಿರುವ ವಲಯ ವಿದ್ಯಾರ್ಥಿಗಳಿಗೆ ಏಕೆ ಬೇಡ. ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗಲಾಟೆ ಆಗುತ್ತೆ, ಜಾತಿ ನಡೆಯುತ್ತೇ ಅನ್ನೋ ಕಾರಣಕ್ಕೆ, ಇಡೀ ಪದ್ಧತಿಯನ್ನು ರದ್ದು ಪಡಿಸುವುದು ಸರಿಯಲ್ಲ. ಸಾರ್ವತ್ರಿಕ ಚುನಾವಣೆಯಲ್ಲೂ ಗಲಾಟೆ ಆಗುತ್ತದೆ ಎಂದು, ಅದನ್ನೇ ರದ್ದು ಪಡಿಸಲು ಆಗದು.
- ನವೀನ್ಕುಮಾರ್, ಅಧ್ಯಕ್ಷರು, ಎಸ್ಎಫ್ಐ
ಮೈಸೂರು ವಿವಿಯಲ್ಲಿ ಮತ್ತೆ ದೂರಶಿಕ್ಷಣ
ವಿಕ ಸುದ್ದಿಲೋಕ, ಮೈಸೂರು
ತೆರಪಿನ(ಬಿಡುವು) ವೇಳೆಯಲ್ಲಿ ಮನೆಯಲ್ಲಿಯೇ ಕುಳಿತು ಅಂಚೆ ಮೂಲಕ ಬರುವ ಪಠ್ಯವನ್ನು ಕಲಿತು ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪಡೆಯಲು ಬಯಸುವವರಿಗೆ ಇದೊಂದು ಸಿಹಿ ಸಮಾಚಾರ.
ಎಲ್ಲವೂ ‘ಕ್ರಾಫರ್ಡ್ ಭವನ’ ಅಂದುಕೊಂಡಂತೆ ನಡೆದರೆ ೨೦೧೦-೧೧ನೇ ಶೈಕ್ಷಣಿಕ ಸಾಲಿನಿಂದಲೇ ಅಂಚೆ ಮತ್ತು ತೆರಪಿನ ಶಿಕ್ಷಣ ಕೋರ್ಸ್ಗಳು ಮೈಸೂರು ವಿವಿಯಲ್ಲಿ ಪುನರಾ ರಂಭವಾಗಲಿವೆ. ಮಾನಸ ಗಂಗೋತ್ರಿಯಲ್ಲಿ ಅಂಚೆ ಮತ್ತು ತೆರಪಿನ ಶಿಕ್ಷಣ ನಿರ್ದೇಶನಾಲಯ (ಕರೆಸ್ಪಾಂಡೆನ್ಸ್ ಕೋರ್ಸ್ ಅಂಡ್ ಕಂಟಿನ್ಯೂಯಿಂಗ್ ಡೈರೆಕ್ಟೋರೇಟ್) ಸ್ಥಾಪಿಸುವ ಸಂಬಂಧ ತಜ್ಞರ ಸಮಿತಿ ರಚಿಸಿರುವ ಕರಡು ನಿಯಮಾವಳಿಗಳಿಗೆ ಮೈಸೂರು ವಿವಿ ಸಿಂಡಿಕೇಟ್ ಸಭೆ ಸಮ್ಮತಿ ಸೂಚಿಸಿದೆ.
ಉನ್ನತ ಶಿಕ್ಷಣವನ್ನು ಮನೆ ಬಾಗಿಲಿಗೆ ತಲುಪಿಸುವ ಹಾಗೂ ಅದನ್ನು ಹೆಚ್ಚು ಸಾರ್ವತ್ರೀಕರಣಗೊಳಿಸುವ ನಿಟ್ಟಿನಲ್ಲಿ ಅಂಚೆ-ತೆರಪಿನ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಿದ ದೇಶದ ಮೊತ್ತ ಮೊದಲ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆ ಮೈಸೂರು ವಿಶ್ವವಿದ್ಯಾನಿಲಯದ್ದು. ದೇ. ಜವರೇಗೌಡರ ವಿಶೇಷ ಆಸಕ್ತಿಯ ಪರಿಣಾಮ ೧೯೬೯ರಲ್ಲಿ ಈ ಶಿಕ್ಷಣ ಪದ್ಧತಿ ಆರಂಭವಾಯಿತು. ಬಳಿಕ ದೇಶದ ಇತರೆ ಎಲ್ಲ ವಿವಿಗಳು ಕೂಡ ಈ ಪದ್ಧತಿಯನ್ನು ಆರಂಭಿಸಿದವು.
ದೂರ ಶಿಕ್ಷಣದ ಮೂಲಕ ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲಿಸುತ್ತಿರುವ ಹೊಸದಿಲ್ಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯಕ್ಕೂ (ಇಗ್ನೋ) ಮೈಸೂರು ವಿವಿಯ ಅಂಚೆ-ತೆರಪಿನ ಶಿಕ್ಷಣ ಕ್ರಮವೇ ಸ್ಫೂರ್ತಿ.
ಸುಮಾರು ೨೮ ವರ್ಷಗಳ ಕಾಲ ಈ ಶಿಕ್ಷಣ ಪದ್ಧತಿಯಡಿ ಸಾವಿರಾರು ವಿದ್ಯಾರ್ಥಿಗಳಿಗೆ ಪದವಿ ನೀಡಿದ ಮೈಸೂರು ವಿವಿ, ೧೯೯೮ರಲ್ಲಿ ತಾತ್ಕಾಲಿಕವಾಗಿ ಈ ಪದ್ಧತಿಗೆ ವಿರಾಮ ನೀಡಿತು. ಏಕೆಂದರೆ- ವರ್ಷದಿಂದ ವರ್ಷಕ್ಕೆ ಈ ಪದ್ಧತಿ ಜನಪ್ರಿಯವಾಗಲಾರಂಭಿಸಿದ್ದನ್ನು ಗಮನಿಸಿದ ಕರ್ನಾಟಕ ಸರಕಾರ, ಮೈಸೂರು ವಿವಿಯ ನೆರಳಿನಲ್ಲಿಯೇ ಅಂಚೆ- ತೆರಪಿನ ಶಿಕ್ಷಣ ನೀಡಲು ಪ್ರತ್ಯೇಕ ವಿವಿಯೊಂದನ್ನು ಸ್ಥಾಪಿಸಿತು. ಹಾಗೆ ಆರಂಭವಾದ ವಿವಿಯೇ ಗಂಗೋತ್ರಿಯ ಅಂಗಳದಲ್ಲಿ ಸ್ವಾತಂತ್ರ್ಯವಾಗಿ ಬೆಳೆದು ನಿಂತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ !
೨೦೦೫ರಲ್ಲಿ ಮರು ಪ್ರಯತ್ನ : ಮುಕ್ತ ವಿವಿ ಸ್ಥಾಪನೆ ಬಳಿಕ ನಿಲ್ಲಿಸಿದ ಅಂಚೆ-ತರೆಪಿನ ಶಿಕ್ಷಣ ಕ್ರಮವನ್ನು ೨೦೦೫ರಲ್ಲಿ ಪುನರಾರಂಭಿಸಲು ಮೈಸೂರು ವಿವಿ ಪ್ರಯತ್ನ ನಡೆಸಿತು. ಆ ವೇಳೆಗೆ ಕರ್ನಾಟಕ ರಾಜ್ಯ ವಿವಿಗಳ ಕಾಯ್ದೆ -೨೦೦೨ ಜಾರಿಗೆ ಬಂದಿದ್ದು; ದೂರ ಶಿಕ್ಷಣ ಪದ್ಧತಿಯಡಿ ಪದವಿ ಬಯಸುವವರು ಬೇಡಿಕೆ ಹೆಚ್ಚಿದ್ದು ಹಾಗೂ ಸಂಪನ್ಮೂಲ ಕ್ರೋಢಿಕರಣ ಸಾಧ್ಯ ಎಂಬುದನ್ನು ಕೆಲವು ವಿವಿಗಳು ಮಾಡಿ ತೋರಿಸಿದ್ದು- ಸೇರಿದಂತೆ ನಾನಾ ಕಾರಣಗಳನ್ನು ಗಮನಿಸಿಯೇ ಮೈಸೂರು ವಿವಿ ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿತು. ಕುವೆಂಪು ವಿವಿ, ಕರ್ನಾಟಕ ವಿವಿ, ಬೆಂಗಳೂರು ವಿವಿ ಸೇರಿದಂತೆ ಇತರೆ ಸಾಂಪ್ರದಾಯಿಕ ವಿವಿಗಳು ವಿವಿಯ ಹೊಸ ಕಾಯ್ದೆಯ ಪ್ರಯೋಜನ ಪಡೆದು, ದೂರ ಶಿಕ್ಷಣವನ್ನು ಆರಂಭಿಸಿದ್ದವು. ಈ ಧೈರ್ಯದ ಮೇಲೆ ಮೈಸೂರು ವಿವಿ ನಡೆಸಿದ ಪ್ರಯತ್ನಕ್ಕೆ ಅಂದಿನ ಕುಲಾಧಿಪತಿ ಟಿ. ಎನ್. ಚತುರ್ವೇದಿ ಮಾನ್ಯ ಮಾಡಲಿಲ್ಲ. ಮೈಸೂರು ವಿವಿ ಅಂಗಳದ ಪಕ್ಕದಲ್ಲಿಯೇ, ದೂರ ಶಿಕ್ಷಣ ನೀಡುವುದಕ್ಕಾಗಿಯೇ ಇರುವ ಮುಕ್ತ ವಿವಿ ಕಾರ್ಯ ನಿರ್ವಹಿಸುತ್ತಿದೆ. ನೆರೆ-ಹೊರೆಯ ಎರಡು ವಿವಿಗಳು ಒಂದೇ ರೀತಿಯ ಶಿಕ್ಷಣ ಪದ್ಧತಿ ಅನುಸರಿಸುವುದು ಸಲ್ಲದು ಎಂದು ರಾಜ್ಯಪಾಲರು ಬುದ್ಧಿಮಾತು ಹೇಳಿದ್ದರು.
ವಸ್ತ್ರ ಸಂಹಿತೆ ಬದಲು: ಘಟಿಕೋತ್ಸವದ ವಸ್ತ್ರ ಸಂಹಿತೆ ಬದಲಿಸಬೇಕೆಂಬ ವಿವಿಯ ಅಪೇಕ್ಷೆ ವರ್ಷದ ಮಟ್ಟಿಗೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಿರುವ ಪದ್ಧತಿಯನ್ನು ಕೈ ಬಿಟ್ಟು, ಮೈಸೂರು ಪೇಟ ಮತ್ತು ಭಾರತೀಯ ಸರಳು ಉಡುಪನ್ನೇ ಘಟಿಕೋತ್ಸವದ ‘ವೇಷ-ಭೂಷಣ’ವಾಗಿ ಬಿಂಬಿಸಬೇಕು ಎಂದು ವಿವಿ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಕುಲಪತಿ ಪ್ರೊ. ತಳವಾರ್ ವಿಶೇಷ ಆಸಕ್ತಿ ವಹಿಸಿ ಉಪ ಸಮಿತಿಯನ್ನು ರಚಿಸಿದ್ದರು. ಸಮಿತಿ ಹಲವು ಸಭೆಗಳನ್ನೂ ನಡೆಸಿ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸಮಿತಿಯಲ್ಲಿರುವ ಪರೀಕ್ಷಾಂಗ ಕುಲಸಚಿವ ಬಿ. ರಾಮು ಅವರು ವಸ್ತ್ರ ಸಂಹಿತೆ ಬದಲಿಸಲು ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗಿದೆ.
ಮತ್ತೆ ಚಿಗುರಿದ ಕನಸು
ಈಗ ಉನ್ನತ ಶಿಕ್ಷಣದ ಆಸೆ-ಆಕಾಂಕ್ಷೆಗಳು ಇನ್ನಷ್ಟು ಹೆಚ್ಚಿವೆ. ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಬರುತ್ತಿರುವವರ ಸಂಖ್ಯೆ ಕೇವಲ ಶೇ. ೧೩.೭ರಷ್ಟಿದೆ. ಈ ಪ್ರಮಾಣವನ್ನು ೨೦೨೦ರ ವೇಳೆಗೆ ಶೇ. ೨೫ರಷ್ಟು ಮುಟ್ಟಿಸಬೇಕು ಎಂಬುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬಯಕೆ. ಈ ಹಿನ್ನೆಲೆಯಲ್ಲಿ ಎಲ್ಲ ಸಾಂಪ್ರದಾಯಿಕ ವಿವಿಗಳು ದೂರ ಶಿಕ್ಷಣ ಆರಂಭಿಸಲು ಯುಜಿಸಿ ಮತ್ತು ದೂರ ಶಿಕ್ಷಣ ಮಂಡಳಿಗಳೇ ಪ್ರೋತ್ಸಾಹ ನೀಡುತ್ತಿವೆ. ಇದನ್ನು ಗ್ರಹಿಸಿರುವ ಮೈಸೂರು ವಿವಿ ಈಗ ಅಂಚೆ-ತೆರಪಿನ ಶಿಕ್ಷಣ ನೀಡಲು ಪ್ರಯತ್ನ ಆರಂಭಿಸಿದೆ. ಬದಲಾದ ಸನ್ನಿವೇಶದಲ್ಲಿ ಈಗಿನ ಕುಲಾಧಿಪತಿ ಹನ್ಸ್ರಾಜ್ ಭಾರದ್ವಾಜ್ ವಿವಿಯ ಪ್ರಯತ್ನಕ್ಕೆ ಬೆಂಬಲ ನೀಡುವ ಸಾಧ್ಯತೆಯೇ ಹೆಚ್ಚಿದೆ. ಇದಲ್ಲದೆ, ವಿಶ್ವವಿದ್ಯಾನಿಲಯದ ೨೦೦೦ರ ಕಾಯ್ದೆ ಎಲ್ಲೂ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿದೆ. ಕಾಯ್ದೆಯ ಪ್ರಕಾರ ಸಾಂಪ್ರದಾಯಿಕ ವಿವಿಗಳು ‘ದೂರ ಶಿಕ್ಷಣ’ ಪದ್ಧತಿ ಆರಂಭಿಸುವಂತಿಲ್ಲ. ಆದರೆ, ಕರೆಸ್ಪಾಂಡೆನ್ಸ್ (ಅಂಚೆ)ಕೋರ್ಸ್ ನಡೆಸಲು ಯಾವುದೇ ಅಡ್ಡಿ ಇಲ್ಲ. ಈ ನಿಯಮವನ್ನೇ ಮೈಸೂರು ವಿವಿ ಗಟ್ಟಿಯಾಗಿ ಹಿಡಿದುಕೊಂಡಿದೆ. ಹಾಗಾಗಿಯೇ ವಿವಿ ಕೋರ್ಸ್ಗೆ ಹೆಸರಿಡುವ ಯತ್ನದಲ್ಲಿಯೇ ಬುದ್ಧಿವಂತಿಕೆ ಪ್ರದರ್ಶಿಸಿದೆ. ನೆನಪಿರಲಿ- ವಿವಿ ಆರಂಭಿಸುತ್ತಿರುವುದು ದೂರ ಶಿಕ್ಷಣವಲ್ಲ. ಅಂಚೆ ಮತ್ತು ತೆರಪಿನ ಶಿಕ್ಷಣ !

ಜೀವಜಾಲ ಸಂಶೋಧನೆಯತ್ತ ವಿವಿ ಚಿತ್ತ
ಚೀ. ಜ. ರಾಜೀವ ಮೈಸೂರು
‘ಜೀವ ವೈವಿಧ್ಯ, ಜೀವ ಸಂಪನ್ಮೂಲಗಳ ಅನ್ವಯಿಕ ಉಪಯುಕ್ತತೆ ಮತ್ತು ಸುಸ್ಥಿರ ಅಭಿವೃದ್ಧಿ’ ಕುರಿತ ಬೃಹತ್ ಸಂಶೋಧನಾ ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಕಡೆಗೂ ಮೈಸೂರು ವಿಶ್ವವಿದ್ಯಾನಿಲಯ ಅಣಿಗೊಂಡಿದೆ.
ಯಾವುದಾದರೊಂದು ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಜ್ಞಾನದ ಉತ್ಕೃಷ್ಟ ಮಂದಿರವಾಗಿ(ಇನ್ಸುಟಿಟ್ಯೂಷನ್ ಆಫ್ ಎಕ್ಸಲೆನ್ಸ್) ರೂಪುಗೊಳ್ಳಬೇಕೆಂಬುದು ಕೇಂದ್ರ ಸರಕಾರದ ಆಶಯ. ಹಾಗಾಗಿ ಎರಡು ವರ್ಷಗಳ ಹಿಂದೆ ವಿವಿಗೆ ೧೦೦ ಕೋಟಿ ರೂ. ವಿಶೇಷ ಅನುದಾನ ಘೋಷಿಸಿ, ಐದು ತಿಂಗಳ ಹಿಂದೆಯಷ್ಟೇ ಅದರ ಬಾಬ್ತಿನ ಹಣ ಬಿಡುಗಡೆ ಮಾಡಿದೆ. ತಾನು ನೀಡುವ ಅನುದಾನದ ಪೈಕಿ ಒಂದಿಷ್ಟು ಹಣವನ್ನು ವಿವಿಯ ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ಗಣಕೀಕರಣದಂಥ ಉನ್ನತೀಕರಣ ಕಾರ್ಯಕ್ಕೆ ಬಳಸಿಕೊಂಡು, ಕನಿಷ್ಠ ಶೇ. ೫೦ರಷ್ಟು ಅನುದಾನದಲ್ಲಿ ವಿಶಿಷ್ಟ ರೀತಿಯ ಸಂಶೋಧನಾ ಚಟುವಟಿಕೆ ಕೈಗೊಳ್ಳಬೇಕು ಎಂಬುದು ಕೇಂದ್ರದ ಕಟ್ಟುಪಾಡು. ಈ ಹಿನ್ನೆಲೆಯಲ್ಲಿ ಸಕಲ ಜೀವ ಚರಾಚರಗಳ ಪ್ರವರವನ್ನು ಶೋಧಿಸಿ, ವಿಶ್ಲೇಷಿಸಿ ಅವುಗಳ ವಾಣಿಜ್ಯ ಉಪಯುಕ್ತತೆಯ ಸಾರವನ್ನು ಸಮಾಜಕ್ಕೆ ಉಣ ಬಡಿಸುವುದಾಗಿ ಹೇಳಿದ್ದ ವಿ ವಿ ಯ ಯೋಜನೆಗೆ, ಕೇಂದ್ರ ಭೇಷ್ ಎಂದಿತ್ತು. ವಿವಿಯ ಪಂಡಿತರ ತಲೆಯಲ್ಲಿರುವ ಈ ಯೋಜನೆ-ಯೋಚನೆ, ಅಕ್ಷರಶಃ ಈಗ ಕಾರ್ಯರೂಪಕ್ಕೆ ಇಳಿಯಲಿದೆ.
ವಿಶ್ವವಿದ್ಯಾನಿಲಯ ಸಂಶೋಧನಾ ಚಟುವಟಿಕೆಗಾಗಿ ಆಯ್ದು ಕೊಂಡಿರುವ ವಿಷಯದ ಕುರಿತು ೪೩ಕ್ಕೂ ಹೆಚ್ಚು ಪ್ರಸ್ತಾವನೆಗಳನ್ನು ವಿವಿಯ ಸಂಶೋಧಕರು ಸಲ್ಲಿಸಿದ್ದಾರೆ. ಶೇ. ೯೯ರಷ್ಟು ಈ ಎಲ್ಲವೂ ಸ್ವೀಕರಿಸಲು ಅರ್ಹವಾಗಿವೆ. ವಿವಿಯ ಅಧ್ಯಾಪಕ ವರ್ಗದಲ್ಲಿಯೇ ಇರುವ ಸಂಶೋಧಕರು, ಕಿರಿಯ ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ೧೦೦ಕ್ಕೂ ಹೆಚ್ಚು ಪರಿಣತರು ೧೦ ಗುಂಪುಗಳಲ್ಲಿ ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ, ವಿವಿ ಈ ಯೋಜನೆಗಾಗಿ ೫೭ ಕೋಟಿ ರೂ. ಗಳನ್ನು ಮೀಸಲಿರಿಸಲಿದೆ ’ ಎಂದು ಯೋಜನೆಯ ನಿರ್ವಹಣಾ ಹಾಗೂ ಸಮನ್ವಯ ಸಮಿತಿಯ ಸಂಚಾಲಕ ಡಾ. ಎಸ್. ಆರ್. ನಿರಂಜನ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.
‘ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಸೇರಿದಂತೆ ರಾಜ್ಯದಲ್ಲಿ ಹಾದು ಹೋಗಿರುವ ೯ ಜಿಲ್ಲೆಗಳ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಮ್ಮ ಕೆಲಸ ನಡೆಯಲಿದೆ.
ಕ್ಷೇತ್ರ ಕಾರ್ಯದ ಬಳಿಕ, ಅಲ್ಲಿನ ಎಲ್ಲ ಸಂಗತಿಗಳ ಕುರಿತು ಸಂಶೋಧನೆ ನಡೆಸಲೆಂದೇ, ಮಾನಸ ಗಂಗೋತ್ರಿಯ ಆವರಣದಲ್ಲಿ ಅತ್ಯಾಧುನಿಕ ಸಂಶೋಧನಾಲಯವನ್ನು ನಿರ್ಮಿಸಲಾಗುವುದು’ ಎಂದು ವಿವರಿಸಿದರು. ಜೈವಿನ ತಂತ್ರಜ್ಞಾನ, ರಸಾಯನ, ಭೌತ, ಜೀವ ವಿಜ್ಞಾನ, ಸಸ್ಯ ಶಾಸ್ತ್ರ, ಪ್ರಾಣಿ ಶಾಸ್ತ್ರ, ಭೂಗೋಳ ಶಾಸ್ತ್ರ, ಭೂ ಗರ್ಭ ಶಾಸ್ತ್ರ, ಮಾನವ ಶಾಸ್ತ್ರ, ಸಮಾಜ ವಿಜ್ಞಾನ ಶಾಸ್ತ್ರ ಸೇರಿದಂತೆ ವಿವಿಧ ಅಧ್ಯಯನ ವಿಭಾಗಗಳು ಈ ಕಾರ್ಯದಲ್ಲಿ ಭಾಗವಹಿಸಲಿವೆ. ಏನೀ ಸಂಶೋಧನೆ
ಪಶ್ಚಿಮ ಘಟ್ಟಗಳ ಸಕಲ ಜೀವವೈವಿಧ್ಯ, ಮಾನವ ಸಂಪನ್ಮೂಲ, ಸಾಂಪ್ರದಾಯಿಕ ಜ್ಞಾನ ಪರಂಪರೆ ಹಾಗೂ ನಿರ್ಜೀವ ಸಂಪನ್ಮೂಲಗಳನ್ನು ಗುರುತಿಸುವುದು ಮತ್ತು ದಾಖಲೆ ಮಾಡುವುದು; -ಅವನತಿಯ ಅಂಚಿನಲ್ಲಿರುವ ಎಲ್ಲ ಔಷಧೀಯ ಸಸ್ಯಗಳನ್ನು ಸಂರಕ್ಷಿಸುವ ಬಗೆ ಕುರಿತು ಅಧ್ಯಯನ ನಡೆಸುವುದು; ಜನಪದ ಮತ್ತು ಆಯುರ್ವೇದ ವೈದ್ಯ ಪದ್ಧತಿಯ ವೈಜ್ಞಾನಿಕ ಮೌಲ್ಯವನ್ನು ನಿರ್ಧರಿಸುವುದು; ಜೀವವೈವಿಧ್ಯತೆಯ ಅಳಿವು-ಉಳಿವಿನಲ್ಲಿ ಸಮಾಜೋ ಆರ್ಥಿಕ ನೆಲೆಯ ಸಂಬಂಧಗಳ ಅಧ್ಯಯನ ಮತ್ತು ಸುಸ್ಥಿರ ಅಭಿವೃದ್ಧಿ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಂಶೋಧನೆ,ವಿಶ್ಲೇಷಣೆ ನಡೆಯಲಿದೆ.
ಸಂಶೋಧನಾ ಕಾರ್ಯದ ಬಳಿಕ ವಿವಿಯಲ್ಲೇ ಪ್ರಯೋಗಾಲಯ ಸ್ಥಾಪಿಸುವುದು ಮತ್ತು ಅಲ್ಲಿಯೇ ಸಂಶೋಧನಾ ತರಬೇತಿ ನೀಡುವುದು; ಬೌದ್ಧಿಕ ಹಕ್ಕು ಸ್ವಾಮ್ಯತೆ ಪಡೆಯಲು ಸಹಕಾರ ; ಸಂಶೋಧನೆಯ ಫಲ ಕೈಗಾರಿಕೆಗೆ ತಲುಪುವಂತೆ ಮಾಡುವುದು ಸೇರಿದಂತೆ ನಾನಾ ರೀತಿಯ ರಚನಾತ್ಮಕ ಕಾರ್ಯಗಳ ಕನಸು ಕಂಡಿದೆ ಮೈಸೂರು ವಿವಿ. ಎಲ್ಲವೂ ನನಸಾಗುವ ಹಾದಿ ಹಿಡಿಯಬೇಕಷ್ಟೆ !
ಕೋಟ್
ನಮ್ಮ ಸುತ್ತಮುತ್ತಲಿನ ನೈಸರ್ಗಿಕ ಸಂಪನ್ಮೂಲವನ್ನು ಮಾನವ ಕಲ್ಯಾಣಕ್ಕೆ, ಆರೋಗ್ಯ ಕ್ಷೇತ್ರಕ್ಕೆ ಸದ್ವಿನಿಯೋಗ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಶೋಧನೆ ನಡೆಸಲೆಂದೇ ವಿವಿ ಈ ಯೋಜನೆ ಕೈಗೆತ್ತಿಕೊಂಡಿದೆ. ಸಮಾಜಕ್ಕೆ ಇದರ ಗರಿಷ್ಠ ಹಾಗೂ ಶಾಶ್ವತ ಪ್ರಯೋಜನ ದೊರೆಯಬೇಕು. ಈ ನಿಟ್ಟಿನಲ್ಲಿ - ಒಂದು ಸುಸಜ್ಜಿತ ಜೀವ ಸಂಪನ್ಮೂಲಗಳ ನಿರ್ವಹಣಾ ಸಂಸ್ಥೆಯನ್ನು ವಿವಿ ಸ್ಥಾಪಿಸಲಿದೆ. ಈ ಸಂಸ್ಥೆ ಜಗತ್ತಿನಲ್ಲಿಯೇ ಉತ್ಕೃಷ್ಟ ಸಂಶೋಧನಾ ಕೇಂದ್ರವಾಗಬೇಕೆಂಬುದು ನಮ್ಮ ಆಸೆ.
- ಪ್ರೊ. ವಿ. ಜಿ. ತಳವಾರ್, ಕುಲಪತಿ.
------------

ಘಟಿಕೋತ್ಸವ: ಇನ್ಮುಂದೆ ಕಪ್ಪು ಗೌನ್ ಗೆ ಟಾಟಾ
ವಿದ್ಯಾರ್ಥಿ ಶಕ್ತಿ ಗುಡುಗಿದರೆ ವಿಧಾನಸೌಧ ನಡುಗಲೇ ಬೇಕು !
ಆನ್ ಡಿಮ್ಯಾಂಡ್ ಎಕ್ಸಾಮ್
ವಿಶ್ವಕಪ್ ಓಕೆ; ಪೋಷಕರಿಗೆ ಜ್ವರ ಏಕೆ ?
ಬಡವರಿಗೆ ಬರಲಿದೆ ಜಿಎಂ ಸೋವಿ ಕಾರು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)