ಎಂ.ಎಲ್.ರವಿಕುಮಾರ್ ಎಚ್.ಡಿ.ಕೋಟೆ
ಚಾಮಲಾಪುರ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಆತಂಕ ದೂರವಾಗಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಷ್ಟರಲ್ಲೇ, ಕೈಗಾರಿಕೆ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿ ಕಸಿದುಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ.
ಎಚ್.ಡಿ.ಕೋಟೆ ಮತ್ತು ಹುಣಸೂರು ತಾಲೂಕುಗಳ ಗಡಿಯಂಚಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಸುಮಾರು ೯ ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಮುಂದಾಗಿದ್ದು, ಇದರಿಂದ ಸಾವಿರಾರು ರೈತ ಕುಟುಂಬಗಳು ಬೀದಿಗೆ ಬೀಳಲಿವೆ.
ತಾಲೂಕಿನ ಹಂಪಾಪುರ ಹೋಬಳಿ, ಆಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳದ ಮನುಗನಹಳ್ಳಿ, ಶಂಖಹಳ್ಳಿ,ಆಲನಹಳ್ಳಿ ಮತ್ತು ಗಡಿ ಗ್ರಾಮದ ಕೆಲವು ಜಮೀನುಗಳು ಸೇರಿದಂತೆ ೯೯೦.೦೮ ಎಕರೆ ಮತ್ತು ಹುಣಸೂರು ತಾಲೂಕಿನ ಬೀಚನಹಳ್ಳಿ,ಹರದನಹಳ್ಳಿ, ದಳ್ಳಾಲಕೊಪ್ಪಲು ಸೇರಿದಂತೆ ೭ ಸಾವಿರ ಎಕರೆ , ಸಾಮಾಜಿಕ ಅರಣ್ಯ ವಲಯದ ೮೮೦ ಎಕರೆ ಪ್ರದೇಶವನ್ನು ಭೂ ಸ್ವಾಧೀನ ಪ್ರಕ್ರಿಯೆಗೆ ಗುರುತಿಸಲಾಗಿದೆ.
ಸರಕಾರವೇ ಜಮೀನು ಸ್ವಾಧೀನಕ್ಕೆ ಮುಂದಾಗಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಅನಕ್ಷರಸ್ಥರೇ ಹೆಚ್ಚಿರುವ ಗ್ರಾಮಸ್ಥರಿಗೆ ಮಂಡಳಿಯ ಭೂಸ್ವಾಧೀನ ಅಧಿಕಾರಿಗಳು ನೋಟಿಸ್ ನೀಡಿ ಮೂರು ತಿಂಗಳಾಗಿದೆ. ಇದರಲ್ಲಿ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಲಾಗುವುದು. ಆಕ್ಷೇಪಣೆ ಇದ್ದಲ್ಲಿ ೩೦ ದಿನದೊಳಗೆ ಲಿಖಿತ ರೂಪದಲ್ಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಕೆಲವು ರೈತರು ಜಮೀನನ್ನು ಕೊಡುವುದಿಲ್ಲ ಎಂಬುದನ್ನು ದಾಖಲೆಗಳ ಮೂಲಕ ವಿವರಿಸಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೆ ಕೆಲವರು ಎಕರೆಗೆ ೫೦ ರಿಂದ ೭೦ ಲಕ್ಷ ರೂ.ಕೊಡಬೇಕು ಜತೆಗೆ ಕುಟುಂಬಕ್ಕೆ ೧ ನಿವೇಶನ ಮತ್ತು ಒಬ್ಬರಿಗೆ ಕೆಲಸ ಕೊಡುವ ನಿಬಂಧನೆಯನ್ನು ಪತ್ರವನ್ನು ಸಲ್ಲಿಸಿದ್ದಾರೆ.
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಮೈಸೂರು ಪ್ಯಾಕೇಜ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

‘ಮೇವು’ ದಷ್ಟ ಪುಷ್ಟ
ಕುಂದೂರು ಉಮೇಶಭಟ್ಟ ಮೈಸೂರು
ರಾಸುಗಳಿಗೆ ನೀಡುವ ಮೇವನ್ನು ಪೌಷ್ಟಿಕಾಂಶವಾಗಿಸುವ ಜತೆಗೆ ಅದನ್ನು ವರ್ಷವಿಡೀ ಸಂಗ್ರಹಿಸಿಡುವ ವಿಶಿಷ್ಟ ಯೋಜನೆ ರೈತರ ಬಾಗಿಲಿಗೆ ಬಂದಿದೆ.
ಮೈಸೂರು ಹಾಗೂ ಧಾರವಾಡ ಹಾಲು ಒಕ್ಕೂಟಗಳು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೇವು ಬಿಲ್ಲೆ ಘಟಕ ಸ್ಥಾಪನೆಗೆ ತಲಾ ೨.೫೦ ಕೋಟಿ ರೂ.ಗಳನ್ನು ಪಡೆದುಕೊಂಡಿವೆ. ಚಾಮರಾಜನಗರ ಹಾಗೂ ಹಾವೇರಿ ಜಿಲ್ಲೆಯಲ್ಲಿ ಇಂಥ ಘಟಕಗಳು ಮೊದಲು ಸ್ಥಾಪನೆಗೊಳ್ಳಲಿವೆ. ರೈತರೂ ತಮ್ಮ ಊರಲ್ಲಿ ಮಿನಿ ಘಟಕ ಸ್ಥಾಪಿಸಿಕೊಳ್ಳಲು ಯೋಜನೆ ಅವಕಾಶ ನೀಡಿದೆ. ಇಲ್ಲಿನ ರೈತರ ಪ್ರತಿಕ್ರಿಯೆ ಆಧರಿಸಿ ಇತರೆ ಒಕ್ಕೂಟಗಳಿಗೂ ಈ ನೆರವು ದೊರೆಯಲಿದೆ.
ಏನಿದು ಯೋಜನೆ: ರಾಸುಗಳ ಆರೋಗ್ಯ ಸುಧಾರಣೆ ಹಾಲು ಉತ್ಪಾದನೆ ಸಂತಾನಾ ಭಿವೃದ್ಧಿ ಹಾಗೂ ವಿಶೇಷವಾಗಿ ಹಾಲು ಉತ್ಪಾದನಾ ವೆಚ್ಚ ಕಡಿಮೆ ಮಾಡುವಲ್ಲಿ ಹಸಿರು ಹಾಗೂ ಒಣ ಮೇವಿನ ಪಾತ್ರವೇ ಪ್ರಮುಖ.
ಮಳೆಗಾಲದಲ್ಲಿ ಮಾತ್ರ ಹಸಿರು ಮೇವನ್ನು ರಾಸುಗಳಿಗೆ ನೀಡುತ್ತಿದ್ದು ಉಳಿದ ದಿನಗಳಲ್ಲಿ ಒಣ ಮೇವನ್ನೇ ಹೆಚ್ಚು ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ರೈತರು ಧಾನ್ಯ ಬೆಳೆ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಒಣ ಮೇವಿನ ಲಭ್ಯತೆಯೂ ಕಡಿಮೆಯಾಗುತ್ತಿದೆ. ಹಾಲು ಉತ್ಪಾದಕರು ಉತ್ಪಾದನೆ ಹೆಚ್ಚಿಸಲು ದುಬಾರಿ ಪಶು ಆಹಾರ ಅವಲಂಬಿಸಿದಾಗ ವೆಚ್ಚ ಅಧಿಕಗೊಂದು ರೈvರು ಹೈನೋದ್ಯಮದಲ್ಲಿ ಆಸಕ್ತಿ ಕಳೆದುಕೊಳ್ಳುವ ಸಂಧರ್ಭ ಹೆಚ್ಚು. ಇದಕ್ಕಾಗಿಯೇ ಹಸಿರು ಮೇವು ಲಭ್ಯತೆ ಕಡಿಮೆ ಇರುವ ಪ್ರದೇಶದ ರೈತರಿಗೆ ಹೆಚ್ಚು ಅನುಕೂಲ ಮಾಡಿ ಕೊಡಲು ಒಣಮೇವನ್ನು ಒತ್ತಡೀಕರಣ ತಂತ್ರಜ್ಞಾನ ದಿಂದ ಸಂಸ್ಕರಿಸಿ ಒಣ ಮೇವಿನಲ್ಲಿ ಇರುವ ಅತ್ಯಲ್ಪ ಪೌಷ್ಠಿಕಾಂಶ ವೃದ್ಧಿಸುವ ಘಟಕಗಳಿಗೆ ಕೇಂದ್ರ ಸರಕಾರ ನೆರವು ನೀಡುತ್ತಿದೆ. ವಾರ್ಷಿಕವಾಗಿ ಕೋಟ್ಯಾಂತರ ರೂ.ಗಳನ್ನು ಕೇಂದ್ರ ಸರಕಾರ ವೆಚ್ಚ ಮಾಡುತ್ತಿದ್ದು.ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಜಾರ್ಖಂಡ್ ರಾಜ್ಯಗಳು ಇದರ ಲಾಭ ಪಡೆಯುತ್ತಿವೆ.ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಇಂಥ ಘಟಕ ಸ್ಥಾಪನೆಗೆ ಕರ್ನಾಟಕಕಕ್ಕೆ ಅನುಮತಿ ನೀಡಿದೆ.
ಎರಡು ವಿಧಾನಗಳು: ಲಾಭದಾಯಕ ಹೈನುಗಾರಿಕೆಯಲ್ಲಿ ಮೇವಿನ ಪಾತ್ರ ಮಹತ್ವದ್ದು. ಹಸಿರು ಮೇವಿನ ಬೆಳೆಗಳಾದ ಹೈಬ್ರಿಡ್ ನೇಪಿಯರ್, ಗಿನಿ, ಮುಸುಕಿ ನ ಜೋಳ, ಹೈಬ್ರಿಡ್ ಜೋಳ ಹಾಗೂ ಒಣಮೇವನ್ನು ಹಾಗೆಯೇ ಸಹಜವಾಗಿ ನೀಡಿದಾಗ ಮೃದುವಾದ ಭಾಗ ತಿಂದು ಗಡಸಾಗಿರುವ ಭಾಗ ತಿನ್ನದೇ ಇರಬಹುದು. ಇದರಿಂದ ಮೇವು ಪೋಲಾಗಿ ರೈತರಿಗೆ ನಷ್ಟ ಸಂಭವಿಸುವ ಸಾಧ್ಯತೆ ಹೆಚ್ಚು. ಇದಕ್ಕಾಗಿಯೇ ಮೇವು ಸಂಸ್ಕೃರಣೆಯ ೨ ವಿಧಾನ ಬಳಸಬಹುದು.
ಕತ್ತರಿಸುವ ಯಂತ್ರ-ಇದಕ್ಕಾಗಿಯೇ ಮೇವು ತುಂಡರಿಸುವ ಯಂತ್ರ ಬಳಸಿ ಮೇವನ್ನು ಸಣ್ಣದಾಗಿ ಕತ್ತರಿಸಿ ನೀಡಿದಾಗ ನಷ್ಟ ತಗ್ಗಲಿದೆ.ಯಂತ್ರ ಬಳಕೆಗೆಂದೇ ಶೇ ೭೫ ರ ಅನುದಾನದಲ್ಲಿ ಕೇಂದ್ರ ಸರಕಾರ ನೆರವು ನೀಡಲಿದೆ. ಕೇಂದ್ರ ಸರಕಾರದ ಮೇವು ಮತ್ತು ಪಶು ಆಹಾರ ಯೋಜನೆ ಅಡಿಯಲ್ಲಿ ದೊರೆಯುವ ಅನುದಾನಕ್ಕಾಗಿ ೫೦೫ ಮೇವು ತುಂಡರಿಸುವ ಯಂತ್ರಗಳ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ. ರಸಮೇವು ತಯಾರಿಕಾ ಘಟಕ ಸ್ಥಾಪನೆಗೂ ಸಹ ಶೇ ೧೦೦ ಅನುದಾನದಲ್ಲಿ ೮೦ ಘಟಕ ಸ್ಥಾಪನೆಗೂ ಅನುಮೋದನೆ ದೊರೆತಿದೆ. ಇದಕ್ಕಾಗಿ ಕೇಂದ್ರ ಸರಕಾರ ೧.೬೦ ಕೋಟಿ ರೂ.ಗಳನ್ನು ಮೈಮುಲ್‌ಗೆ ಒದಗಿಸಿದೆ.
ರಸಮೇವು ಘಟಕ ಸ್ಥಾಪನೆ-ಹೆಚ್ಚು ರಾಸುಗಳನ್ನು ಹೊಂದಿರುವ ರೈತರು ಮಳೆಗಾಲದಲ್ಲಿ ಹೆಚ್ಚಿನ ಹಸಿರು ಮೇವು ಬೆಳೆಸಿ ವೈಜ್ಞಾನಿಕವಾಗಿ ಸಂಗ್ರಹಿಸಿ ವರ್ಷವಿಡಿ ಉಪಯೋಗಿಸುವ ವಿಧಾನವೇ ರಸ ಮೇವು. ಇದರಲ್ಲಿ ಭೂಮಿ ಮೇಲೆ ಅಥವಾ ಒಳಗಡೆ ವೃತ್ತಾಕರ ಅಥವ ಚೌಕಾಕರದಲ್ಲಿ ಗುಂಡಿ ತೆಗೆದು ಸಿಮೆಂಟ್ ತೊಟ್ಟಿ ನಿರ್ಮಿಸ ಬೇಕು. ಬೆಳೆದ ಹಸಿರು ಮೇವನ್ನು ತುಂಡರಿಸಿ ಕಾಕಂಬಿ, ಉಪ್ಪು, ಖನಿಜದೊಂದಿಗೆ ಮಿಶ್ರಣ ಮಾಡಬೇಕು. ಜೈವಿಕ ಕಲ್ಚರನ್ನು ಸಿಂಪಡಿಸಿ, ತೊಟ್ಟಿಯಲ್ಲಿ ಮೇವನ್ನು ತುಂಬಿಸಿ ಗಾಳಿ ಹೋಗದ ಹಾಗೆ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿ ಭಾರ ಹೇರಬೇಕು, ೧೫ ದಿನಗಳ ನಂತರ ಮೇವು ರಸಮೇವಾಗಿ ಪರಿವರ್ತನೆ ಗೊಂಡು ಉತ್ತಮ ಸುವಾಸನೆ ಹಾಗೂ ಮೆದುವಿನಿಂದ ರಸಮೇವಾಗಿ ಪರಿವರ್ತನೆ ಗೊಳ್ಳುತ್ತದೆ.
ಪ್ರತಿ ನಿತ್ಯ ೨೦-೨೫ ಕೆ.ಜಿ. ರಸ ಮೇವಿನ ಜತೆ ಕಡ್ಡಾಯವಾಗಿ ೫ ಕೆ.ಜಿ.ದ್ವಿದಳ ಮೇವಾದ ಕುದುರೆ ಮಸಾಲೆ ಸೊಪ್ಪು ನೀಡಿದಲ್ಲಿ ರಾಸುಗಳಿಗೆ ಅವಶ್ಯವಿರುವ ಪೌಷ್ಠಿಕಾಂಶವೂ ಸಿಕ್ಕಂತಾಗುತ್ತದೆ. ಇಂಥ ಮೇವು ಹಾಲು ಉತ್ಪಾದನೆ ಹೆಚ್ಚಿಸುವಲ್ಲಿ ಸಹಕಾರಿ. ಪಶು ಆಹಾರ ಬಳಕೆ ಶೇ ೬೦-೮೦ರಷ್ಟು ತಗ್ಗಲಿದೆ.
ಘಟಕದ ಸುತ್ತ ಮುತ್ತ: ಘಟಕ ದಿನ ಒಂದಕ್ಕೆ ೧೦-೧೨ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು ಪ್ರತಿ ಬ್ಲಾಕ್ ಗಳು ಅಂದಾಜು ೧೦ ಕೆ.ಜಿ. ತೂಕದ್ದು.
ದಿನವೊಂದಕ್ಕೆ ಒಂದು ಬ್ಲಾಕ್ ಅನ್ನು ರಾಸಿಗೆ ನೀಡಿ ಮೇವಿನ ಅವಶ್ಯಕತೆ ನೀಗಿಸಬಹುದು. ಈ ತಾಂತ್ರಿಕತೆ ಬರ ಜಿಲ್ಲೆಯಲ್ಲಿ ನಷ್ಟವಾಗುತ್ತಿರುವ ವಿವಿಧ ಬೆಳೆಗಳ ಒಣಮೇವನ್ನು ಸಮರ್ಪಕ ಬಳಕೆ ಮಾಡಿ ಹೈನೋದ್ಯಮದಲ್ಲಿ ಹಾಲು ಉತ್ಪಾದನಾ ವೆಚ್ಚ ಕಡಿಮೆ ತಗ್ಗಿಸಿ ಜನರ ಆರ್ಥಿಕ ಪರಿಸ್ಥಿತಿ ಹೆಚ್ಚಿಸಲಿದೆ. ಪಶು ಆಹಾರಕ್ಕೆ ಉಪಯೋಗಿಸುವ ಹಾಗೂ ಸ್ಥಳೀಯವಾಗಿ ಸಿಗುವ ಕಚ್ಚಾ ಪದಾರ್ಥಗಳಾದ ಹಿಂಡಿ, ತೌಡು, ಕಾಕಂಬಿ, ಉಪ್ಪು, ಲವಣಾಂಶಗಳನ್ನು ನಿಗದಿತ ಪ್ರಮಾಣಗಳಲ್ಲಿ ಮಿಶ್ರಣ ಮಾಡಬೇಕು. ಒಣ ಮೇವನ್ನು ಅರ್ಧ ಇಂಚಿಗಿಂತ ಕಡಿಮೆ ಅಳತೆಯಲ್ಲಿ ತುಂಡರಿಸಿ ಕಚ್ಚಾ ಪದಾರ್ಥಗಳನ್ನು ಸೇರಿಸಿ ಒತ್ತಡೀಕರಣ, ಯಂತ್ರಗಳ ಸಹಾಯದಿಂದ ಮೇವಿನ ಬಿಲ್ಲೆಗಳನ್ನು ತಯಾರಿಸಬಹುದು. ಘಟಕಗಳ ಸಾiರ್ಥ ದಿನ ಒಂದಕ್ಕೆ ೧೦-೩೦ ಟನ್ ವರೆಗೆ ವಿವಿಧ ಮಾಡಲ್‌ಗಳಲ್ಲಿ ಯಂತ್ರಗಳು ಲಭ್ಯವಿದ್ದು, ಒಣ ಮೇವು ಹೆಚ್ಚಾಗಿ ಸಿಗುವ ಪ್ರದೇಶಗಳಲ್ಲಿ ಅಳವಡಿಸಿ, ಹಸಿರು ಮೇವು ಲಭ್ಯವಿಲ್ಲದಿರುವ ಪ್ರದೇಶಗಳಿಗೆ ಸರಬರಾಜು ಮಾಡಬಹುದು. ಇದರ ಬಗ್ಗೆ ಮಾಹಿತಿ ಬೇಕೆಂದರೆ ಕರೆ ಮಾಡಿ
ದೂ: ೯೭೪೧೧೨೮೨೭೭, ೦೮೨೧-೨೪೭೩೮೩೭

ಆಸ್ಪತ್ರೆಗಳ ಕಥೆ-ವ್ಯಥೆ
ಜೆ.ಶಿವಣ್ಣ ಮೈಸೂರು
ಸರಕಾರಿ ಆಸ್ಪತ್ರೆಗಳೆಂದರೆ ಇವತ್ತಿಗೂ ಜನ ಜನ ಮೂಗು ಮುರಿಯುತ್ತಾರೆ. ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆ, ಅನೈರ್ಮಲ್ಯ, ಮೂಲ ಸೌಲಭ್ಯಗಳ ಕೊರತೆ, ವೈದ್ಯ-ಸಿಬ್ಬಂದಿಗಳ ಅವಜ್ಞೆ, ಸುಲಿಗೆ... ಇತ್ಯಾದಿಗಳು ಇದಕ್ಕೆಲ್ಲಾ ಪ್ರಮುಖ ಕಾರಣ.
ಇದರಿಂದ ಬಡವರಿಗೆ ಮಾತ್ರ ಸರಕಾರಿ ಆಸ್ಪತ್ರೆ ಮೀಸಲು ಎನ್ನುವ ಸ್ಥಿತಿಯಾಗಿದೆ. ಅನಕ್ಷರಸ್ಥರು, ಪ್ರಶ್ನಿಸುವ, ತಮ್ಮ ಹಕ್ಕನ್ನು ಪ್ರತಿಪಾದಿ ಸುವ ಕಸುವು ಕಳೆದುಕೊಂಡವರಷ್ಟೇ ಇದರ ಫಲಾನುಭವಿಗಳು. ಇದನ್ನೇ ಬಂಡವಾಳ ಮಾಡಿಕೊಂಡು ವೈದ್ಯ -ಸಿಬ್ಬಂದಿ ಸೇವೆ ಬಿಟ್ಟು ಸುಲಿಗೆ ಆರಂಭಿಸುತ್ತಾರೆ. ಅರೋಗ್ಯ ಇಲಾಖೆಯಿಂದ ಆರಂಭವಾಗಿ ಆಸ್ಪತ್ರೆವರೆಗೂ ಭ್ರಷ್ಟಾಚಾರದ ಕಬಂಧಬಾಹು ವ್ಯಾಪಿಸಿದೆ.
ಹತ್ತು ಹಲವು ಆರೋಗ್ಯ ಯೋಜನೆಗಳ ಮೂಲಕ ಎಷ್ಟೇ ಪ್ರಮಾಣದಲ್ಲಿ ಹಣ ಪೂರೈಸಿದರೂ ಭ್ರಷ್ಟ ಕೈಗಳ ಕೈಚಳಕದಿಂದ ನುಂಗಣ್ಣರ ಜೇಬು ಸೇರುತ್ತಿದೆ. ಜೀವ ರಕ್ಷಕ ಔಷಧಗಳು, ಚುಚ್ಚುಮದ್ದು, ವೈದ್ಯಕೀಯ ಸೌಲಭ್ಯಗಳಲ್ಲೂ ವಂಚನೆ ನಡೆಸುವ ದುರುಳರು ಹಿಂದೆಯೂ ಇದ್ದರು, ಇವತ್ತೂ ಇದ್ದಾರೆ. ಯಾವುದೇ ಸರಕಾರಿ ಯೋಜನೆಗಳ ಲಾಭ ಮೊದಲು ತಲುಪುವುದು ಭ್ರಷ್ಟರ ಕೈಗೇ. ಹಾಗಾಗಿಯೇ ಇಂದಿಗೂ ಗ್ರಾಮೀಣ ಭಾಗಗಳು ಆರೋಗ್ಯ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಡೇಂಗ್ಯು, ಚಿಕುನ್‌ಗುನ್ಯಾ, ಮಲೇರಿಯಾ, ಹಂದಿಜ್ವರ ಮೊದಲಾದ ಮಾರಕ ಕಾಯಿಲೆಗಳು ಇವತ್ತಿಗೂ ದಿಢೀರ್ ಕಾಣಿಸಿಕೊಂಡು ದಂಗು ಬಡಿಸುತ್ತವೆ.
ಇದರಿಂದ ಗ್ರಾಮೀಣ ಜನರಿಗೆ ಅರೋಗ್ಯ ಸೇವೆ ಒದಗಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಂ) ಹೊರತಾ ಗಿಲ್ಲ. ನುಂಗಿ ನೊಣೆಯುವವರಿಗೆ ಹುಂಡಿ ಮುಂದಿಟ್ಟಂತಾಗಿದೆ.
ಎನ್‌ಆರ್‌ಎಚ್‌ಎಂ ಅಡಿಯಲ್ಲಿ ಮೈಸೂರು ಜಿಲ್ಲೆಯ ೭ ತಾಲೂಕು ಗಳ ಗ್ರಾಮೀಣ ಭಾಗದ ೨೫ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಇದಕ್ಕಾಗಿ ಲಕ್ಷಾಂತರ ರೂ. ವ್ಯಯಿಸಲಾಗಿದೆ. ಇಲ್ಲಿ ೨೪ ಗಂಟೆಯೂ ಆರೋಗ್ಯ ಸೇವೆ ಲಭ್ಯ. ಆದರೆ ೨೪ ಗಂಟೆ ಆಸ್ಪತ್ರೆ ಎನ್ನುವ ಲೇಬಲ್ ಹಚ್ಚಲಾಗಿದೆಯೇ ಹೊರತು ಸರಕಾರಿ ಆಸ್ಪತ್ರೆಗಳೆಂದರೆ ಕೊರತೆಗಳ ಕೂಪ ಎನ್ನುವ ಅಪವಾದದಿಂದ ಮುಕ್ತ ವಾಗಿಲ್ಲ. ಇಲ್ಲಿ ಸೌಲಭ್ಯಗಳು ಸಿಗುತ್ತಿವೆಯೇ ? ಇಲ್ಲ. ಇಲ್ಲವೇ ಇಲ್ಲ. ಅದಕ್ಕೆ ಅನೇಕ ಆಸ್ಪತ್ರೆಗಳನ್ನು ಉದಾಹರಣೆಯಾಗಿ ನೀಡಬಹುದು.
ತಾಜಾ ಉದಾಹರಣೆ ಎಂದರೆ ಎಚ್.ಡಿ.ಕೋಟೆಯ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರ. ಕೇವಲ ೨೪ಗಿ೭ ಎಂದು ನಮೂದಿಸಿದಷ್ಟೇ ಹೊಸತು, ಅದೇ ಹಳತು ವ್ಯವಸ್ಥೆ . ಜಿ.ಪಂ. ಉಪಾಧ್ಯಕ್ಷೆ ನಂದಿನಿ ಚಂದ್ರಶೇಖರ್ ಅಣ್ಣೂರು ಕೇಂದ್ರಕ್ಕೆ ೧೭.೨.೧೦ ರಂದು ದಿಢೀರ್ ಭೇಟಿ ನೀಡಿದ್ದಾಗ ೨೪ಗಿ೭ ಆಸ್ಪತ್ರೆ ಬಣ್ಣ ಬಯಲಾಯಿತು. ವೈದ್ಯರಿಲ್ಲ. ಔಷಧ ಇಲ್ಲ. ಕೇಳಿದರೆ ಹೊರಗಿನಿಂದ ತನ್ನಿ ಎನ್ನುತ್ತಾರೆ. ಆದರೆ ಜನಪ್ರತಿನಿಧಿಗಳು ಬಂದಾಗ ಎಲ್ಲಾ ಔಷಧಗಳು ಇವೆ ಎನ್ನುತ್ತಾರೆ. ವಾರದಲ್ಲಿ ೩ ದಿನಕ್ಕೆ ಒಬ್ಬರಂತೆ ಇಬ್ಬರು ವೈದ್ಯರನ್ನು ನೇಮಿಸಿದ್ದು, ಈ ದಿನ ಕರ್ತವ್ಯದಲ್ಲಿರಬೇಕಾದ ವೈದ್ಯರು ಬಂದಿಲ್ಲ. ಈ ಬಗ್ಗೆ ಕೇಳಿದರೆ ಸಬೂಬು ಹೇಳುತ್ತಾರೆ. ೨೪ಗಿ೭ ಆಸ್ಪತ್ರೆಯಾದರೂ ಒಂದು ದಿನವೂ ವೈದ್ಯರು ವಾಸ್ತವ್ಯ ಹೂಡಿಲ್ಲ ಎನ್ನುವ ದೂರುಗಳ ಸುರಿಮಳೆಯನ್ನೇ ಗ್ರಾಮಸ್ಥರಿಂದ ಎದುರಿಸುವಂತಾಯಿತು.
ಇದು ಕೇವಲ ಒಂದು ಉದಾಹರಣೆ ಅಷ್ಟೇ. ಅಣ್ಣೂರು ಸೇರಿದಂತೆ ಹಂಪಾಪುರ, ಬಿ.ಮಟಕೆರೆ, ಮುಳ್ಳೂರು. ಹುಣಸೂರಿನ ಬಿಳಿಕೆರೆ, ಗಾವಡಗೆರೆ ಸೇರಿದಂತೆ ಬಹುತೇಕ ಕೇಂದ್ರಗಳಲ್ಲಿ ೨೪ ಗಂಟೆ ವೈದ್ಯರು ಸಿಗುವುದಿಲ್ಲ. ಹಾಗಾಗಿ ೨೪ ಗಂಟೆ ಸೇವೆ ಎನ್ನುವ ಉದ್ದೇಶವೇ ವಿಫಲವಾಗಿದೆ. ಈ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿದ್ದರೂ ಪ್ರಯೋಜನವಿಲ್ಲ. ೮.೧.೨೦೧೦ ರಲ್ಲಿ ಯೋಜನೆಯ ಸಾಧನೆಯನ್ನು ತೋರಲು ಅಚ್ಚುಕಟ್ಟಾಗಿ ಸಜ್ಜುಗೊಳಿಸಿದ್ದ ಕಡಕೊಳ ಮತ್ತು ಹುಲ್ಲಹಳ್ಳಿಯ ಕೇಂದ್ರಗಳ ದರ್ಶನ ಮಾಡಿಸಲಾಗಿತ್ತು. ಆದರೆ ಒಟ್ಟಾರೆಯಾಗಿ ಗಮನಿಸಿದಾಗ ಅವುಗಳ ಸ್ಥಿತಿ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ ಎನ್ನುವುದಕ್ಕೆ ಅನೇಕ ನಿದರ್ಶನಗಳನ್ನು ನೀಡಬಹುದು.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)