ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಸಂಸ್ಕ್ರತಿ ಸಿಂಚನ ರಿ ಲಾಂಚ್
ಪ್ರತಿ ಶನಿವಾರ ಲವಲವಿಕೆಯಲ್ಲಿ ಮೂಡಿ ಬರುತ್ತಿದ್ದ ಸಂಸ್ಕ್ರತಿ ಸಿಂಚನಕ್ಕೆ ಹೊಸದೊಂದು ಸ್ಪರ್ಶ ನೀಡಲಾಗಿದೆ. ವಿಭಿನ್ನ ಲೇಖನ, ಏಕತಾನತೆ ಮುರಿದ ವಿನ್ಯಾಸ, ಮನಗೆಲ್ಲುವ ಚಿತ್ರಗಳು, ಉದಯೋನ್ಮುಖ ಹಾಗೂ ಖ್ಯಾತ ಕಲಾವಿದರ ಪರಿಚಯ ಮತ್ತಿತರ ವಿಷಯಗಳಿಂದ ಸಿಂಚನ ನೂತನ ಘಟ್ಟಕ್ಕೆ ಕಾಲಿರಿಸಿದೆ. ನೋಡಿ ಎಂಜಾಯ್ ಮಾಡಿ...
ದಸರಾ ಅದರ ಪ್ರಾಧಿಕಾರ
ದಸರಾ ಉತ್ಸವದ ವ್ಯವಸ್ಥಿತ ಸಂಘಟನೆಗೆ ನಿರಂತರ ಕಾರ್ಯಚಟುವಟಿಕೆ ನಡೆಸುವ ಪ್ರತ್ಯೇಕ ವ್ಯವಸ್ಥೆ ಅಗತ್ಯ. ಪ್ರಾಧಿಕಾರ ಮೈಸೂರಿನಲ್ಲೇ ಕಾರ್ಯನಿರ್ವಹಿಸಬೇಕು, ಅದರ ಎಲ್ಲಾ ಕಾರ್ಯಗಳು ಪಾರದರ್ಶಕವಾಗಿದ್ದು, ಉತ್ತರದಾಯಿತ್ವ ಹೊಂದಿರಬೇಕು ಎಂಬುದು ಗಣ್ಯರ ಅಭಿಮತ.
ಪ್ರಾಧಿಕಾರ ಅದರ ವಿಸ್ತಾರ
ಸಾಂಸ್ಕೃತಿಕ ಹಿನ್ನೆಲೆಯುಳ್ಳವರು ಹಾಗೂ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ಪರಂಪರೆಯನ್ನು ಮುಂದುವರಿಸುವುದರ ಜತೆಗೆ ಹಿರಿಯ ನಾಗರಿಕರನ್ನೊಳಗೊಂಡಂತೆ ದೇಸಿ ಸೊಗಡನ್ನು ಬಿಂಬಿಸುವ ದಸರಾ ಕಾರ್ಯಕ್ರಮಗಳನ್ನು ರೂಪಿಸುವಂತಹ ಮಾದರಿ ಪ್ರಾಧಿಕಾರ ರಚನೆಯಾಗಬೇಕು ಎಂಬುದು ಇಲ್ಲಿನ ಗಣ್ಯರ ಅಭಿಪ್ರಾಯ.
ವೈಶಿಷ್ಟ್ಯಪೂರ್ಣ ಅಕ್ಕಿ ಆಹಾರ ಸಂಸ್ಕೃತಿ ಮೇಳ
ವಿಕ ಸುದ್ದಿಲೋಕ ಮೈಸೂರು
ನಗರದ ಸಾವಯವ ಸಂಘಟನೆಗಳ ನೇತೃತ್ವದಲ್ಲಿ `ಕಿಸಾನ್ ಸ್ವರಾಜ್ ಯಾತ್ರೆ' ಅಂಗವಾಗಿ ಆಯೋಜಿಸಲಾಗಿದ್ದ `ಅಕ್ಕಿ ಆಹಾರ ಸಂಸ್ಕೃತಿ ಮೇಳ' ವೈಶಿಷ್ಟ್ಯ ಪೂರ್ಣ ವಾಗಿ ಮಂಗಳವಾರ ನಡೆಯಿತು.
ರಂಗಾಯಣದ ವನರಂಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸಿರು ವಸ್ತ್ರದಲ್ಲಿ ದೇಸಿ ಕೆಂಪಕ್ಕಿಯನ್ನು ನೀಡುವ ಮೂಲಕ ಅತಿಥಿ ಗಳನ್ನು ಸ್ವಾಗತಿಸಲಾಯಿತು. ಬತ್ತದ ತೆನೆಯ ತೋರಣದಿಂದ ಸಿಂಗರಿಸಿದ್ದ ವೇದಿಕೆಯ ರಂಗವಲ್ಲಿ ಇಟ್ಟ ಅಂಗಳದಲ್ಲಿ ಪುಟ್ಟ ಬತ್ತದ ರಾಶಿಯ ನಡುವೆ ಕೊಳಗದಲ್ಲಿ ತುಂಬಿಟ್ಟ ಬತ್ತವನ್ನು ಒನಕೆಯಿಂದ ಕುಟ್ಟುವ ಮೂಲಕ ರಾಜ್ಯ ರೈತ ಸಂಘದ ಮುಖಂಡ ನಂಜುಂಡೇಗೌಡ ಮೇಳ ಉದ್ಘಾಟಿಸಿದರು. ಉಗ್ರನರಸಿಂಹೇಗೌಡ, ಗುರುಪ್ರಸಾದ್, ಬರ್ಟಿ ಒಲಿವರಾ ಹಾಜರಿದ್ದರು.

ಪ್ರವಾಸೋದ್ಯಮ ಸದೃಢತೆಗೆ ದಸರೆಯೇ ವೇದಿಕೆ
ಮೈಸೂರು ದಸರೆ ಹಾಗೂ ಪ್ರವಾಸೋದ್ಯಮ...
ಈ ಎರಡು ಒಂದನ್ನು ಬಿಟ್ಟು ಇನ್ನೊಂದಿಲ್ಲ. ಪ್ರವಾಸೋದ್ಯಮದ ಅಭಿವೃದ್ಧಿ ಯಲ್ಲಿ ಮೈಸೂರು ದಸರೆಯ ಪಾತ್ರ ಪ್ರಮುಖವಾದದ್ದು. ದಸೆರೆಗೆ ಪ್ರವಾ ಸೋದ್ಯಮವೇ ಚಿಮ್ಮು ಹಲಗೆ. ದಸರೆ ಎಂದರೆ ಅದೊಂದು ಧಾರ್ಮಿಕ, ಪಾರಂಪರಿಕ, ಸಾಂಸ್ಕೃತಿಕ ಉತ್ಸವ ಎನ್ನುವ ಪರಿಕಲ್ಪನೆ ಈಗಲೂ ಜನಮಾನಸ ದಲ್ಲಿ ಉಳಿದಿದೆ.ಆಯಾ ಸಾಲಿನ ದಸರೆ ಆರಂಭವಾಗಬೇಕು ಎನ್ನುವ ಮಾತು ಕೇಳಿಬರುತ್ತಿದ್ದಂತೆ ಒಂದೆರಡು ತಿಂಗಳು ಮುಂಚೆ ಸಭೆ, ಸಿದ್ಧತೆ ಚಟುವಟಿಕೆ ಗಳು ಆರಂಭವಾಗುತ್ತವೆ. ಇದು ಮೊದಲಿನಿಂದ ನಡೆದುಕೊಂಡು ಬಂದಿದೆ. ಸ್ಥಳೀಯವಾಗಿ ಅಧಿಕಾರಿಗಳು ದಸರೆಯನ್ನು ಯಶಸ್ವಿಯಾಗಿ ನಿಭಾಯಿಸಲು ಶ್ರಮಿಸಬಹುದೇ ಹೊರತು ವರ್ಷವಿಡೀ ದಸರೆಯ ಕುರಿತೇ ಚಿಂತಿಸುತ್ತಾ ಕೂರಲು ಆಗುವುದಿಲ್ಲ.ಇದಕ್ಕಾಗಿ ಪ್ರಾಧಿಕಾರ ರೂಪದ ಒಂದು ಸಂಸ್ಥೆ ಬೇಕು. ನಾನಾ ಕ್ಷೇತ್ರಗಳ ತಜ್ಞರನ್ನೊಳಗೊಂಡ ಸಮಿತಿಗಳನ್ನು ರಚಿಸಿ ಅವರಿಂದ ಸೂಕ್ತ ಸಲಹೆ, ಸಹಕಾರ ಪಡೆದುಕೊಳ್ಳಬೇಕು. ದಸರೆಯ ಸಾಂಸ್ಕೃತಿಕ ಕಾರ್‍ಯಕ್ರಮಗಳಿಗೆ ಯಾವ್ಯಾವ ಕಲಾವಿದರು ಆಗಮಿಸಲಿದ್ದಾರೆ. ಈ ವರ್ಷದ ದಸರೆ ವಿಶೇಷತೆ ಏನು ಎನ್ನುವ ಸ್ಪಷ್ಟ ಮಾಹಿತಿ ಮೂರ್‍ನಾಲ್ಕು ತಿಂಗಳು ಮೊದಲೇ ಜಾಗತಿಕ ಮಟ್ಟದಲ್ಲೂ ತಿಳಿಯುವಂತಾಗ ಬೇಕು. ಪ್ರವಾಸೋದ್ಯಮದ ನೆಪದಲ್ಲಿ ಮೂಲ ಸೌಕರ್‍ಯ ಕಲ್ಪಿಸುವಲ್ಲಿ ದಸರೆಯೂ ವೇದಿಕೆಯಾಗಬೇಕು. ದಸರೆಗೆ ನೀಡುವ ಅನುದಾನದಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಮೂಲ ಸೌಕರ್‍ಯ ಕಲ್ಪಿಸುವ ಕೆಲಸವಾದರೆ ನಿಜಾರ್ಥದಲ್ಲಿ ಪ್ರವಾಸೋದ್ಯಮ ಬೆಳವಣಿಗೆಯಾಗುತ್ತದೆ.
ದಸರೆಗೆ ನವನವೀನತೆ ತರುವ ಜತೆಯಲ್ಲಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಸಮಯ ಬೇಕು. ಅವಸರ ದಲ್ಲಿಯೇ ದಸರೆಗೆ ತಯಾರಿ ಮಾಡಿಕೊಂಡಾಗ ಪ್ರವಾಸೋದ್ಯಮಕ್ಕೆ ಸದೃಢತೆಯೇ ಬರುವುದಿಲ್ಲ. ಅದರ ಬದಲು ದೀರ್ಘಾವಧಿಯ ಯೋಜನೆಗಳನ್ನು ಹಾಕಿಕೊಂಡು ಅದನ್ನು ಹಂತ ಹಂತವಾಗಿ ಅನುಷ್ಠಾನ ಗೊಳಿಸಲು ಪ್ರಾಧಿಕಾರದ ಅಗತ್ಯ ಇದ್ದೇ ಇದೆ.
-ಜಿ.ಕುಮಾರನಾಯಕ್, ಹಿರಿಯ ಐಎಎಸ್ ಅಧಿಕಾರಿ, ಮೈಸೂರು ಹಿಂದಿನ ಜಿಲ್ಲಾಧಿಕಾರಿ

ಯೋಜನಾ ಆಯೋಗದ ಮರ್ಜಿಯಲ್ಲಿ ಶಾಸ್ತ್ರೀಯ ಕನ್ನಡ
ಅರವಿಂದ ನಾವಡ ಮೈಸೂರು
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಹಿನ್ನೆಲೆಯಲ್ಲಿ ರೂಪುಗೊಂಡ `ಸವಿವರ ಯೋಜನಾ ವರದಿ' ಕೇಂದ್ರ ಯೋಜನಾ ಆಯೋಗದ ಅಂಕಿತಕ್ಕೆ ಕಾಯುತ್ತಿದೆ.
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ `ಶಾಸ್ತ್ರೀಯ ಭಾಷೆ ಅಭಿವೃದ್ಧಿ ಮಂಡಳಿ' ವಿಭಾಗವು ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾನಾ ವಿದ್ವಾಂಸರ ಸಭೆ ನಡೆಸಿ ಪಡೆದ ಶಿಫಾರಸುಗಳನ್ನು ಆಧರಿಸಿ ಯೋಜನಾ ವರದಿಯನ್ನು ತಯಾರಿಸಿತ್ತು. ಆಗಸ್ಟ್‌ನಲ್ಲಿ ದಿಲ್ಲಿಯ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಭಾಷಾ ವಿಭಾಗಕ್ಕೆ ಕಳುಹಿಸಲಾಗಿದೆ. ಅದೀಗ ಯೋಜನಾ ಆಯೋಗದ ಪರಿಶೀಲನೆಯ ನಿರೀಕ್ಷೆಯಲ್ಲಿದೆ.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)