ಮತ್ತೀಕೆರೆ ಜಯರಾಮ್
ಅಪ್ಪಟ ಕೃಷಿ ಜಿಲ್ಲೆ ಮಂಡ್ಯದಲ್ಲೂ ರೇಷ್ಮೆ ನೂಲು ತೆಗೆಯುವ ಉದ್ಯಮ ಕಾಲೂರುತ್ತಿದೆ. ಸರಕಾರದ ಉತ್ತೇಜನದ ಲಾಭ ಪಡೆದು, ಜಿಲ್ಲೆಯ ೩೦ಕ್ಕೂ ಹೆಚ್ಚು ಮಂದಿ ಈ ಉದ್ಯಮದಲ್ಲಿ ತೊಡಗಿಸಿಕೊಂಡು ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ.
ಮುಚ್ಚಿರುವ ಆಲೆಮನೆಗಳನ್ನೇ ಮಾರ್ಪಡಿಸಿಕೊಂಡು ರೇಷ್ಮೆ ನೂಲು ತೆಗೆಯುವ ಉದ್ಯಮಕ್ಕೆ ತೊಡಗಿದವರು ಹಲವರಿದ್ದಾರೆ. ಇನ್ನೂ ಕೆಲವರು ಹೊಸದಾಗಿ ಶೆಡ್ ನಿರ್ಮಿಸಿ, ಈ ಗುಡಿ ಕೈಗಾರಿಕೆಯೊಂದಿಗೆ ಉದ್ದಿಮೆದಾರರಾಗಿದ್ದಾರೆ.
ಇಂಥದ್ದೊಂದು ಗುಡಿ ಕೈಗಾರಿಕೆ ಮಂಡ್ಯ ಸಮೀಪದ ಮರಲಿಂಗನದೊಡ್ಡಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಿದೆ. ಗ್ರಾಮದ ಯೋಗೇಶ್ ತಮ್ಮ ಆಲೆಮನೆಯನ್ನೇ ರೇಷ್ಮೆ ಪಿಲ್ಲಿಂಗ್(ನೂಲು ತೆಗೆಯುವ) ಕೇಂದ್ರ ಮಾಡಿಕೊಂಡಿದ್ದಾರೆ. ಅದರಿಂದ ಕಟ್ಟಡಕ್ಕೆ ತಗಲುವ ವೆಚ್ಚ ಉಳಿಸಿದ್ದಾರೆ.
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಸಕ್ಕರೆ ಜಿಲ್ಲೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬೆಲ್ಲ ಈ ಬಾರಿ ಕಹಿಯಲ್ಲ !
ಮತ್ತೀಕೆರೆ ಜಯರಾಮ್
ಕಬ್ಬು ಬೆಳೆಯುವ ರೈತನ ಬದುಕಿನಲ್ಲಿ ಇದೀಗ ಮತ್ತೆ ಭರವಸೆ. ಸಕ್ಕರೆ ಜತೆಗೆ ಬೆಲ್ಲಕ್ಕೂ ಬಂಪರ್ ಬೆಲೆ. ಪರಿಣಾಮ ಆಲೆಮನೆಗಳಲ್ಲಿ ಗಾಣಗಳ ಸದ್ದು.
ಐದು ವರ್ಷದ ಹಿಂದೆ ಕಬ್ಬು ಬೆಳೆ ಎಂದರೆ ರೈತರು ಮೂಗು ಮುರಿಯುತ್ತಿದ್ದರು. ವರ್ಷ ಉರುಳಿದಂತೆ ಸಕ್ಕರೆ ಮತ್ತು ಬೆಲ್ಲದ ಉದ್ಯಮ ಚೇತರಿಸಿಕೊಂಡಿದೆ. ಸ್ಥಗಿತಗೊಂಡು, ತುಕ್ಕು ಹಿಡಿಯುತ್ತಿದ್ದ ಆಲೆಮನೆ ಗಾಣಗಳು ಪುನರಾರಂಭ ಗೊಂಡಿವೆ.
ಮಂಡ್ಯ ಜಿಲ್ಲೆಯು ಬೆಲ್ಲ ಉತ್ಪಾದನೆಗೆ ಪ್ರಸಿದ್ಧಿ. ಮಂಡ್ಯದ ಬೆಲ್ಲಕ್ಕೆ ದಕ್ಷಿಣ ಭಾರತದಲ್ಲಷ್ಟೇ ಅಲ್ಲದೇ ಉತ್ತರ ಭಾರತದ ದಿಲ್ಲಿ, ಕೋಲ್ಕೊತಾ, ಲಕ್ನೋ, ಗುಜರಾತ್ ಸೇರಿದಂತೆ ನಾನಾ ಕಡೆ ಬೇಡಿಕೆ ಇದೆ. ಹಾಗಾಗಿ ರೈತರು ಮತ್ತೆ ಬೆಲ್ಲ ಉತ್ಪಾದನೆಯತ್ತ ಮುಖ ಮಾಡಿದ್ದಾರೆ. ಮಂಡ್ಯದ ಎಪಿಎಂಸಿ ಬೆಲ್ಲದ ಮಾರುಕಟ್ಟೆಯೆಂದೇ ಪ್ರಖ್ಯಾತಿ. ಇಲ್ಲಿ ಬೆಲ್ಲವಲ್ಲದೆ ಬೇರೆ ವಹಿವಾಟು ನಡೆಯೋದಿಲ್ಲ. ನಿತ್ಯವೂ ಸರಾಸರಿ ೧೨೦೦-೧೫೦೦ ಕ್ವಿಂಟಾಲ್ ವಹಿವಾಟು ನಡೆಯುತ್ತಿದೆ. ಸಕ್ಕರೆ ಕಾರ್ಖಾನೆಗಳ ನಿರ್ಲಕ್ಷ್ಯ ಮತ್ತು ಅಸಡ್ಡೆಯಿಂದ ಬೇಸತ್ತ ರೈತರ ಪಾಲಿಗೆ ಈ ಬೆಳವಣಿಗೆ ಖುಷಿ ತಂದಿದೆ. ಸಕ್ಕರೆ ಕಾರ್ಖಾನೆಗಳಷ್ಟೇ ಧಾರಣೆ ನೀಡಿ ಆಲೆಮನೆಗಳವರು ಕಬ್ಬು ಖರೀದಿಸುತ್ತಿದ್ದಾರೆ. ಬಕೆಟ್, ಅಚ್ಚು, ಬಾಕ್ಸ್ ಬೆಲ್ಲ ತಯಾರಿಕೆ ಹೇರಳ. ಸ್ಥಳೀಯವಾಗಿ ಕುರಿಕಾಲು ಅಚ್ಚು ಬೆಲ್ಲಕ್ಕೆ ಬೇಡಿಕೆ. ಜಿಲ್ಲೆ ಮತ್ತು ರಾಜ್ಯದ ಹೊರಗೆ ಬಾಕ್ ಹಾಗೂ ಬಕೆಟ್ ಬೆಲ್ಲಕ್ಕೆ ಸಾಕಷ್ಟು ಬೇಡಿಕೆ ಇದೆ.
೧೫ ಸಾವಿರ ಗಾಣಗಳು: ಜಿಲ್ಲೆಯಲ್ಲಿ ಬೆಲ್ಲ ಉತ್ಪಾದನೆ ಏಳೂವರೆ ದಶಕದಿಂದಲೂ ನಡೆಯುತ್ತಿದೆ. ೧೦ ವರ್ಷದ ಹಿಂದಿನ ಮಾಹಿತಿ ಗಮನಿಸಿದರೆ, ೧ ಲಕ್ಷ ಗಾಣಗಳಿದ್ದವು. ಬೆಲ್ಲದ ವ್ಯಾಪಾರ ಮತ್ತು ವಹಿವಾಟು ಕುಸಿದಿದ್ದರಿಂದ ಸಾವಿರಾರು ಆಲೆಮನೆಗಳು ಸ್ಥಗಿತಗೊಂಡವು. ಧಾರಣೆ ಏರಿರುವ ಹಿನ್ನೆಲೆಯಲ್ಲಿ ೧೫ ಸಾವಿರಕ್ಕೂ ಹೆಚ್ಚು ಆಲೆಮನೆಗಳಲ್ಲಿ ಗಾಣಗಳು ಪುನರಾರಂಭಗೊಂಡಿವೆ. ಸುಮಾರು ೩೫ ಆಲೆಮನೆಗಳಲ್ಲಿ ಕೆಲವರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು, ದೊಡ್ಡ ಪ್ರಮಾಣದಲ್ಲಿ ಬೆಲ್ಲ ಉತ್ಪಾದಿಸುತ್ತಿದ್ದಾರೆ. ಸಾಧಾರಣ ಆಲೆಮನೆಗಳಿಗಿಂತ ಹತ್ತು ಪಟ್ಟು ಅಧಿಕ ಬೆಲ್ಲ ಅಲ್ಲಿ ಉತ್ಪಾದನೆ ಸಾಧ್ಯ.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)