ಮೈಸೂರು ಭಾಗದ ಬಜೆಟ್ ವಿಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮೈಸೂರು ಭಾಗದ ಬಜೆಟ್ ವಿಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಕಾಳುಗಟ್ಟದ ಕಣಿವೆ ಕನಸು

ಮುಖ್ಯಮಂತ್ರಿ ಮಂಡಿಸಿದ ರಾಜ್ಯ ಆಯವ್ಯಯದಲ್ಲಿ ಕಾವೇರಿ ಕಣಿವೆಗೆ  ಹಲವು ಕೋಟಿಗಳು ಹರಿದಿರುವುದು ಸುಳ್ಳಲ್ಲ.ನಾಲ್ಕು ಜಿಲ್ಲೆಗಳ ಬಾಬ್ತಿನಲ್ಲಿ ದಕ್ಕಿದ ಕೆಲ ಯೋಜನೆಗಳು ಹಿಂದಿನವು, ಇನ್ನು ಕೆಲವು ಎಂದಿನ ವಿಸ್ತರಣೆಗಳು,ಹೊಸದರತ್ತ ನೋಟ ಬೆರಳೆಣಿಕೆಯಷ್ಟು ಮಾತ್ರ ಎನ್ನುವುದೂ ಸುಳ್ಳಲ್ಲ.ಹಿಂದಿನ  ಸತತ ಐದು ವರ್ಷದ  ಹಲವು ಬಜೆಟ್ ಘೋಷಣೆಗಳು `ಗಾಳಿಪಟ'ವಾಗಿ ರಾರಾಜಿಸಿದ್ದೂ  ಖಂಡಿತಾ ಸುಳ್ಳಲ್ಲ. ನಿಜ ! ಮೈಸೂರು ಭಾಗದ ಜನ ಕೇಳುತ್ತಿದ್ದಾರೆ...`ಹೊಸ ಕನಸು ಅರಳಿಲ್ಲ. ಆದದ್ದಾಯಿತು,ಹಳೆಯ ಭರವಸೆಗಳನ್ನಾದರೂ ಈಡೇರಿಸಿ' ಎಂದು.