'ದಕ್ಷಿಣ ಪ್ರಯಾಗ' ಎಂದೇ ಖ್ಯಾತಿ ಪಡೆದಿರುವ ತಿರುಮಕೂಡಲು ನರಸೀಪುರದ ಕುಂಭಮೇಳಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದ ತ್ರಿವೇಣಿ ಸಂಗಮದ ಮರಳು ರಾಶಿಯನ್ನು ಬಗೆದಿರುವುದರಿಂದ ಪ್ರಕೃತಿ ಸಮತೋಲನದ ಮೇಲೆ ದುಷ್ಪರಿಣಾಮ ಬೀರಿದೆ.
ತಲಕಾಡಿಗೆ ಬರುವ ಪ್ರವಾಸಿಗರಿಗೆ ಸುಸಜ್ಜಿತ ವಸತಿ ಸೌಲಭ್ಯ ಒದಗಿಸಲು ಮುಡುಕುತೊರೆ ಕಾವೇರಿ ನದಿ ದಂಡೆಯಲ್ಲಿ ನಿರ್ಮಿಸಿರುವ 'ಯಾತ್ರಿ ನಿವಾಸ್'ಆರಂಭವಾಗದೇ ಮೂರು ವರ್ಷಗಳಿಂದ ಅನಾಥವಾಗಿದೆ. ಇದರಿಂದ ಪ್ರವಾಸಿಗರಿಗೆ ಅನನುಕೂಲ ಉಂಟಾಗುತ್ತಿದೆ.