ಚುನಾವಣಾ ವಿಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚುನಾವಣಾ ವಿಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಇದು ಬಿಜೆಪಿ ಸಾಧನೆಯೋ?, ಕುಗ್ಗಿದ ಕೈ, ಗಟ್ಟಿಯಾದ ತೆನೆ

ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬಲ ಕುಸಿದಿದೆ. ದಳ ಬಲಗೊಂಡಿದೆ. ಬಿಜೆಪಿ ಸಾಧನೆಯಲ್ಲಿ ಹೆಮ್ಮೆಪಡುವಂಥದ್ದೇನೂ ಇಲ್ಲ ಎನ್ನುವುದು ಗಮನಾರ್ಹ .

ಹೊಸ್ತಿಲಲ್ಲಿ ಮುಗ್ಗರಿಸಿದ ಸಿದ್ದು ಪ್ರತಿಷ್ಠೆ

ಪಿ.ಓಂಕಾರ್ ಮೈಸೂರು
ಪ್ರತಿಪಕ್ಷ ನಾಯಕ ಸಿದ್ದ ರಾಮಯ್ಯ ತವರು ನೆಲದಲ್ಲಿ ಗೆದ್ದೂ ಸೋತಿದ್ದಾರೆ. `ತೆನೆ ಹೊತ್ತ ಮಹಿಳೆ'ಯನ್ನು ಮಿಂಚಿಸಿದ `ದಳ'ಪತಿಗಳಿಗೆ ಇಷ್ಟಾರ್ಥ ಈಡೇರಿದ ಖುಷಿ.`ಕಮಲ'ಅರಳದಿದ್ದರೂ ಸಿದ್ದು ವರ್ಚಸ್ಸನ್ನು ಕುಂದಿಸಿದ ಸಂತಸ ಬಿಜೆಪಿಗೆ.
-ಪಂಚಾಯಿತಿ ಚುನಾವಣಾ ಫಲಿತಾಂಶದ ನಂತರ ಮೈಸೂರು ಜಿಲ್ಲೆ ಯಲ್ಲಿ ಮೂರು ಪಕ್ಷಗಳ ಸ್ಥಿತಿ-ಗತಿಯ ಸ್ಥೂಲ ಚಿತ್ರಣವಿದು.
ಬಲಾಬಲ: ಒಟ್ಟು ೪೬ ಸಂಖ್ಯಾಬಲದ ಜಿ.ಪಂ.ಅತಂತ್ರ ಸ್ಥಿತಿಗೆ ಜಾರಿದೆ. ೨೧ ಸ್ಥಾನ ಗಿಟ್ಟಿಸಿದ ಕಾಂಗ್ರೆಸ್ ಸರಳ ಬಹು ಮತದ ಹೊಸ್ತಿಲಿನಲ್ಲಿ ಎಡವಿದ್ದು, ೧೬ ಸ್ಥಾನ ಪಡೆದ ಜಾ.ದಳ ಜತೆ `ಸಂಬಂಧ' ಕುದುರಿಸುವುದು ಅನಿವಾರ್‍ಯ.ಬಿಜೆಪಿ ೮ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.