ಮೈಸೂರು
೩ ಬಾರಿ ಲಘು ಲಾಠಿ ಏಟು
ಗೆಲುವಿನ ಖುಷಿ ಅನುಭವಿಸಲು ಬಂದವರು, ಪೊಲೀಸರ ಬೆತ್ತದ ರುಚಿ ನೋಡಬೇಕಾಯಿತು.
ನಗರದ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕೇಂದ್ರದಲ್ಲಿ ಮಿತಿಮೀರಿ ಜಮಾಯಿಸಿದ್ದವರನ್ನು ಚದುರಿಸಲು ಪೊಲೀಸರು ಮೂರು ಬಾರಿ ಲಘುಲಾಠಿ ಪ್ರಹಾರ ನಡೆಸಬೇಕಾಯಿತು. ಇದರಿಂದ ಮೊದಲೇ ಪರಾಜಿತಗೊಂಡು ಕ್ರೋಧಗೊಂಡಿದ್ದ ವೆಂಕಟಲಕ್ಷ್ಮಿಸೇರಿದಂತೆ ಐದು ಮಂದಿಗೆ ಸಣ್ಣಪುಟ್ಟ ಪೆಟ್ಟಾಗಿದ್ದರಿಂದ ತಮ್ಮ ಆಕ್ರೋಶವನ್ನೆಲ್ಲಾ ಪೊಲೀಸರ ಮೇಲೆ ಪ್ರದರ್ಶಿಸಿದರು. ಬಳಿಕ ಅಕ್ಕ-ಪಕ್ಕ ನೆರೆದಿದ್ದವರು ಸಮಾಧಾನ ಪಡಿಸಿ ಕಳುಹಿಸಿದರು.
ಬೆಳಗ್ಗೆಯಿಂದಲೇ ಎಣಿಕೆ ಕೇಂದ್ರದ ಸುತ್ತ ಅಭ್ಯರ್ಥಿಗಳು, ಅವರ ಬೆಂಬಲಿಗರ ಜತೆಗೆ ವಿವಿಧ ಪಕ್ಷದ ಕಾರ‍್ಯಕರ್ತರು ಜಮಾ ಯಿಸಿದ್ದರು. ಮುಂಚಿತವಾಗಿ ಪಾಸ್‌ಹೊಂದಿದ್ದವರನ್ನು ಮಾತ್ರ ಒಳಗೆ ಬಿಡುತ್ತಿದ್ದರಿಂದ ಕಾಲೇಜಿನ ಎದುರು ಉಳಿದವರು ಫಲಿ ತಾಂಶಕ್ಕಾಗಿ ಕಾಯುತ್ತಾ ನಿಂತಿದ್ದರು. ಕೆಲವು ಸಮಯದ ನಂತರ ಪೊಲೀಸರು ನಿರ್ಮಿಸಿದ್ದ ತಡೆಗೋಡೆಯನ್ನು ಉಲ್ಲಂಘಿಸಿ ಒಳಗೆ ನುಗ್ಗಲು ಯತ್ನಿಸಿದಾಗ ಜನರನ್ನು ನಿಯಂತ್ರಿಸಲು ಲಘುಲಾಠಿ ಪ್ರಹಾರ ನಡೆಸಿದರು. ಇದು ಆಗಾಗ್ಗೆ ಪುನರಾರ್ವತನೆಗೊಳ್ಳುತ್ತಿತ್ತು.
ಅಂಚೆ ಮತ, ಲಾಟರಿ ಅದೃಷ್ಟ
ಇಬ್ಬರು ಲಾಟರಿ ಮೂಲಕದ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡರೆ ಮತ್ತೊಬ್ಬರಿಗೆ ಗೆಲುವು ತಂದಿದ್ದು ಅಂಚೆ ಮತ.
ಇಲವಾಲದ ಬಿ.ರೇಖಾ ಅವರಿಗೆ ಅಂಚೆ ಮೂಲಕ ಒಂದು ಮತದಿಂದ ವಿಜಯಲಕ್ಷ್ಮಿ ಒಲಿದಳು.
ಗ್ರಾಮ ಪಂಚಾಯಿತಿ ಎರಡನೇ ಬ್ಲಾಕ್‌ನಿಂದ ಸ್ಪರ್ಧಿಸಿದ್ದ ಬಿ.ರೇಖಾ ಹಾಗೂ ಇವರ ಪ್ರತಿಸ್ಪರ್ಧಿ ತಾರಾಮಣಿ ಅವರಿಗೆ ಚಲಾವಣೆಗೊಂಡು ಎಣಿಕೆ ಕಾಲಕ್ಕೆ ತಲಾ ೧೯೩ ಮತಗಳು ಬಂದು ಸಮಬಲ ಸಾಧಿಸಿದವು. ಈ ಸಮಯದಲ್ಲಿ ಅಂಚೆ ಮೂಲಕ ಮೂರು ಮತಗಳು ಚಲಾವಣೆಗೊಂಡಿದ್ದವು. ಇವುಗಳನ್ನು ಒಡೆದು ಎಣಿಕೆ ಮಾಡಿದಾಗ ರೇಖಾ ಅವರಿಗೆ ಎರಡು ಮತ ಹಾಗೂ ತಾರಾಮಣಿ ಅವರಿಗೆ ಒಂದು ಮತ ಬಂದಿದ್ದರಿಂದ ರೇಖಾ ಅವರು ಒಂದು ಮತದ ಅಂತರದಿಂದ ಗೆಲುವು ಕಂಡರು.
ಇದೇ ರೀತಿ ಬೋಗಾದಿಯ ಪುಟ್ಟೆಗೌಡ ಅವರು ಕಣ್ಣೇಗೌಡ ಅವರೊಂದಿಗೆ ಪಡೆದ ಮತಗಳು ೮೩೦. ಇವರಲ್ಲದೇ ಬೆಳವಾಡಿಯ ಮಹಾದೇವ ಅವರು ೪೩೦ ಮತ ಪಡೆದಿದ್ದರು. ಆಗ ಲಾಟರಿ ಮೂಲಕ ಜಯ ನಿರ್ಧರಿಸಲಾಯಿತು. ಪುಟ್ಟೇಗೌಡ, ಮಹಾದೇವ ಅವರು ಲಾಟರಿಯಿಂದ ಗೆದ್ದರು.
ಅಸಮಾಧಾನ
ಅಂಚೆ ಮತದ ಮೂಲಕ ಒಂದು ಮತದಿಂದ ಸೋಲುಂಡ ತಾರಾಮಣಿ, ಮರು ಎಣಿಕೆ ನಡೆಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಆದರೆ ಅಧಿಕಾರಿಗಳು ಇದಕ್ಕೆ ಅವಕಾಶ ನೀಡದಿದ್ದರಿಂದ ತಾರಾಮಣಿ ಅಸಮಾಧಾನದಿಂದಲೇ ಗೊಣಗುತ್ತಾ ಎಣಿಕೆ ಕೇಂದ್ರದಿಂದ ಹೊರ ನಡೆದರು. ದೂರ ಗ್ರಾಮ ಪಂಚಾಯಿತಿಯಿಂದ ಸ್ಪರ್ಧಿಸಿದ್ದ ಎಂ.ಕುಮಾರ್ ಎಂಬುವವರು ತನ್ನ ವಿಕಲಚೇತನದ ನಡುವೆಯೂ ಸತತ ಎರಡನೇ ಸಾರಿ ಜಯಗಳಿಸಿದರು.
ಸಿಬ್ಬಂದಿ ಹರತಾಳ
ಊಟದ ವ್ಯವಸ್ಥೆ ಮಾಡಲಿಲ್ಲ ಎಂದು ಸಿಬ್ಬಂದಿ ದಿಢೀರ್ ಪ್ರತಿಭಟನೆ ನಡೆಸಿದ್ದೂ ನಡೆಯಿತು. ೯ರ ಹೊತ್ತಿಗೆ ಊಟ ಬಂದಾಗ ಸಿಬ್ಬಂದಿ ಅಲ್ಲಿಗೆ ಆಗಮಿಸಿದರು. ಅಷ್ಟು ಹೊತ್ತಿಗೆ ಮಳೆ ಬಂದಿದ್ದರಿಂದ ಒಳಗಡೆ ಇದ್ದ ಅಭ್ಯರ್ಥಿಗಳ ಕಡೆಯವರು ಊಟ ಮುಗಿಸಿದರು. ಸಿಬ್ಬಂದಿಗೆ ಊಟ ಸಿಗಲೇ ಇಲ್ಲ. ಇದರಿಂದ ಬೇಸರಗೊಂಡ ಸಿಬ್ಬಂದಿ ಪ್ರತಿಭಟನೆಯನ್ನು ನಡೆಸಿದರು. ಆಗ ತಹಸಿಲ್ದಾರ್ ಮಂಜುನಾಥ್ ಮನ ಒಲಿಸಲು ಹರಸಾಹಸ ಪಡಬೇಕಾಯಿತು.
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಗ್ರಾ.ಪಂ. ಚುನಾವಣೆ ವಿಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ವೈಶಾಖದ ಶಾಖವನ್ನೂ ಮೆಟ್ಟಿ ನಿಂತ ಮತದಾನೋತ್ಸಾಹ !
ಚೀ. ಜ. ರಾಜೀವ ಮೈಸೂರು
ನೆತ್ತಿ ಸುಡುವ ಬಿಸಿಲನ್ನೂ ಮಣಿಸಿದ ಮತದಾರರ ಅತ್ಯುತ್ಸಾಹ... ಅಭ್ಯರ್ಥಿಗಳ ಮನೆಯಲ್ಲಿ ಬಾತು- ಮೊಸರನ್ನದ ಸಮಾರಾಧನೆ... ಬ್ಯಾಲೆಟ್ ಪೇಪರ್‌ನಲ್ಲಿ ಮತ ಚಲಾಯಿಸಲು ‘ಸಾಹಸ’ ಪಟ್ಟ ಮತದಾರರು....!
ಜಿಲ್ಲೆಯ ೨೩೫ ಗ್ರಾಮ ಪಂಚಾಯಿತಿಗಳ ೪೦೮೦ ಸ್ಥಾನಗಳಿಗೆ ಬುಧವಾರ ನಡೆದ ಮತದಾನ ಹೆಚ್ಚು-ಕಡಿಮೆ ಸಾಗಿದ್ದೇ ಹೀಗೆ.
ಮೂರು ಸ್ತರದ ಪಂಚಾಯತ್ ರಾಜ್ ವ್ಯವಸ್ಥೆಯ ಮುಖ್ಯ ಬುನಾದಿ ಎನ್ನಬಹುದಾದ ಗ್ರಾಮ ಪಂಚಾಯಿತಿ ‘ಮೆಂಬರ್‌ಗಳ’ ಆಯ್ಕೆ ಪ್ರಕ್ರಿಯೆ ಒಂದರ್ಥದಲ್ಲಿ ಜನರ ರಣೋತ್ಸಾಹ ವರ‍್ಸಸ್ ರಣಬಿಸಿಲು ಎಂಬಂತಿತ್ತು. ಮತದಾನ ಪ್ರಕ್ರಿಯೆ ವೀಕ್ಷಣೆಗೆಂದು ಮೈಸೂರು, ಕೆ.ಆರ್. ನಗರ, ಹುಣಸೂರು, ಪಿರಿಯಾಪಟ್ಟಣ ಮತ್ತು ಎಚ್.ಡಿ.ಕೋಟೆ ತಾಲೂಕಿನ ಕೆಲವು ಗ್ರಾಮಗಳಿಗೆ ತೆರಳಿದ್ದ ಮೈಸೂರು ಪತ್ರಕರ್ತರ ತಂಡ ಸಾಮಾನ್ಯವಾಗಿ ಗಮನಿಸಿದ ಅಂಶ- ರೈತಾಪಿ ಜನರ ಮಿತಿ ಮೀರಿದ ಉತ್ಸಾಹ !
ಹೇಳಿ-ಕೇಳಿ ಚುನಾವಣೆ ನಡೆಯುತ್ತಿರುವುದೇ ಅಧಿಕ ವೈಶಾಖ ಮಾಸದಲ್ಲಿ. ಹಾಗಾಗಿ ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೂ ಎಲ್ಲ ಕಡೆಯೂ ಬಿಸಿಲೋ ಬಿಸಿಲು. ಮತದಾನ ಆರಂಭವಾದ ಮೊದಲ ಮೂರು ಗಂಟೆ ಹೊರತು ಪಡಿಸಿ, ಉಳಿದ ೭ ಗಂಟೆ ಕಾಲ ಬಿಸಿಲಿನದ್ದೇ ಆಟ. ಹೀಗಿದ್ದರೂ ಮತದಾನ ಮಾಡುವವರ ಉತ್ಸಾಹಕ್ಕೆ ಕೊನೆ ಇರಲಿಲ್ಲ. ಬಹಳಷ್ಟು ಕಡೆ ಹೊಲ-ಗದ್ದೆಯ ಕೆಲಸಕ್ಕೆ ರಜೆ ನೀಡಿ, ಚುನಾವಣೆ ಊರ ಹಬ್ಬವೇನೋ ಎಂಬಂತೆ ಸಂಭ್ರಮಿಸುತ್ತಿದ್ದರು.
ಹುಣಸೂರು ತಾಲೂಕು ಗೋವಿಂದನಹಳ್ಳಿ ಗ್ರಾ. ಪಂ. ವ್ಯಾಪ್ತಿಯ ಆಜಾದ್ ನಗರದಲ್ಲಿ ಮಟಮಟ ಮಧ್ಯಾಹ್ನ ಮತದಾನ ಕೇಂದ್ರದ ಬಳಿಗೆ ನಡೆದು ಕೊಂಡು ಬರುತ್ತಿದ್ದ ೭೫ರ ವೃದ್ಧೆಗೆ, ಬಿಸಿಲಿನಲ್ಲೂ ಓಟ್ ಮಾಡಲು ಬಂದಿರುವೆಯಾ ಅಜ್ಜಿ ಎಂದು ಪ್ರಶ್ನಿಸಿದರೆ- ‘ಅಯ್ಯೋ, ಯಾವ ಬಿಸಿಲು ಮಗ. ನಮ್ಮ ಮೊಮ್ಮಗನೇ ಮೆಂಬರ್ ಆಗೋಕೆ ನಿಂತಿದ್ದಾನೆ. ನಾನು ಓಟ್ ಕೇಳದಿದ್ರೆ ಹೇಗೆ ?, ಮನೆಯ ಎಲ್ಲರೂ ಇಲ್ಲಿ ನಿಂತಿದ್ದೇವೆ...!’ ಎಂದು ನಮಗೆ ದಂಡು ಬಡಿಸಿದರು. ಬಹಳಷ್ಟು ಜನ ತಲೆಗೆ ಕರ್ಚಿಫ್ ಇಲ್ಲವೇ ಟವೆಲ್ ಸುತ್ತಿಕೊಂಡು ಕಡೆ ಕ್ಷಣದ ರಾಜಕೀಯದಲ್ಲಿ ನಿರತರಾಗಿ ದ್ದರು. ಕೆಲವರನ್ನು ಛತ್ರಿಯ ಆಸರೆಯಲ್ಲಿ ಕರೆತರುತ್ತಿದ್ದರು.
ಮತಕೇಂದ್ರದಿಂದ ೧೦೦ ಮೀಟರ್ ವ್ಯಾಪ್ತಿಯಲ್ಲಿ ಮತಯಾಚಿಸುವಂತಿಲ್ಲ, ಗುಂಪು-ಗುಂಪಾಗಿ ನಿಲ್ಲುವಂತಿಲ್ಲ ಎಂಬ ಸೂಚನೆಯನ್ನು ಎಲ್ಲ ಕಡೆಯೂ ಅಂಟಿಸಲಾಗಿತ್ತು. ಆದರೆ ಬಹುತೇಕ ಕಡೆ ಅಂಟಿಸಿದ ನೋಟಿಸಿನ ಕೆಳಗೆ ನೂರಾರು ಜನ ಕುಳಿತುಕೊಂಡೇ ಇದ್ದರು. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಶಾಲಾ ಆವರಣದೊಳಗಿನ ಮರಗಳನ್ನು ಜನ ಅಶ್ರಯಿಸಿದ್ದೇ - ೧೦೦ ಮೀಟರ್ ನಿಯಮದ ಉಲ್ಲಂಘನೆಗೆ ಕಾರಣವಾಗಿತ್ತು. ಹಾಗಾಗಿ ಪೊಲೀಸರು ಕೂಡ ಪ್ರಜ್ಞಾಪೂರ್ವಕವಾಗಿ ನಿಯಮವನ್ನು ಮರೆತು ಕರ್ತವ್ಯದಲ್ಲಿದ್ದರು.
ಪತ್ರಕರ್ತರ ತಂಡ ಪ್ರವಾಸ ನಡೆಸಿದ ಇಲವಾಲ, ಹಿನಕಲ್, ಬಿಳಿಕೆರೆ, ಬೋಳನಹಳ್ಳಿ, ಗಾವಡಗೆರೆ, ಕಟ್ಟೆಮಳಲವಾಡಿ, ಉಮ್ಮತ್ತೂರು, ಚಿಲ್ಕುಂದ, ಗೋವಿಂದನಹಳ್ಳಿ, ಜಯಪುರ, ಡಿ. ಸಾಲುಂಡಿ ಸೇರಿದಂತೆ ಎಲ್ಲ ಕಡೆಯೂ ಮತಕೇಂದ್ರಗಳ ಬಳಿ ಸಾಲು-ಸಾಲು ಜನರೇ ಕಂಡು ಬಂದರು.
ಬಾತು-ಮೊಸರನ್ನದ ಸಮಾರಾಧನೆ: ಅಭ್ಯರ್ಥಿಗಳು ಮತದಾರರಿಗೆ ಯಾವುದೇ ರೀತಿಯ ಆಸೆ- ಆಮಿಷವನ್ನು ಒಡ್ಡುವಂತಿಲ್ಲ ಎನ್ನುತ್ತದೆ ಸದಾಚಾರ ಸಂಹಿತೆ. ಹಾಗಾಗಿ ಆಯೋಗದ ಮಂದಿ ಚುನಾವಣೆಗಳ ಸಂದರ್ಭದಲ್ಲಿ ಈ ಬಗ್ಗೆ ಕಣ್ಗಾವಲು ಹಾಕಿರು ತ್ತದೆ. ಆದರೆ, ಗ್ರಾಮ ಪಂಚಾಯಿತಿ ಮತದಾನ ದಿನದಂದು ಅಭ್ಯರ್ಥಿಗಳ ಮನೆಗಳಲ್ಲಿ ನಡೆಯುವ ಅನ್ನ ಸಂತಾರ್ಪಣೆಯನ್ನು ಏನೂ ಮಾಡಿದರೂ ತಪ್ಪಿಸಲು ಆಗುವುದಿಲ್ಲ. ಬಹುತೇಕ ಎಲ್ಲ ಕಡೆಯೂ ಅಭ್ಯರ್ಥಿಗಳ ಮನೆಯವರೇ ‘ತಮ್ಮ ಕಡೆಯವರಿಗೆ’ ಬೆಳಗಿನ ತಿಂಡಿ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು. ಕೆಲವು ಕಡೆ ಇಂಥ ಮನೆಗಳಿಂದಲೇ ಚುನಾವಣೆ ಸಿಬ್ಬಂದಿಗೆ ಊಟೋಪಾಚರದ ವ್ಯವಸ್ಥೆ ಆಗಿತ್ತು.
‘ಇದನ್ನು ತಪ್ಪಿಸುವುದು ಬಹಳ ಕಷ್ಟ ಸಾರ್. ಹಳ್ಳಿಯ ಜನರ ದೃಷ್ಟಿಯಲ್ಲಿ ಇದು ಆಮಿಷವಲ್ಲ. ಚುನಾವಣೆಗೆ ನಿಂತವನು ಮತದಾರರಿಗೆ ಮಾಡ ಬಹುದಾದ, ಮಾಡಲೇ ಬೇಕಾದ ಕನಿಷ್ಠ ಕರ್ತವ್ಯ’ ಎಂದು ಕಟ್ಟೆಮಳಲವಾಡಿಯಲ್ಲಿ ಚುನಾವಣಾ ಸಿಬ್ಬಂದಿಯೊಬ್ಬರು ಪತ್ರಿಕೆಗೆ ಪ್ರತಿಕ್ರಿಯಿಸಿದರು.
ಕಷ್ಟ ಕೊಟ್ಟ ಬ್ಯಾಲೆಟ್ ಪೇಪರ್: ಸತತ ಮೂರನೇ ವರ್ಷ ಮೇನಲ್ಲಿ ಚುನಾವಣೆ ಕಾಣುತ್ತಿರುವ ಜಿಲ್ಲೆಯ ಮತದಾರರು, ೨೦೦೮ರಲ್ಲಿ ವಿಧಾನ ಸಭೆ, ೨೦೦೯ನೇ ಇಸ್ವಿಯಲ್ಲಿ ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದ್ದಾರೆ. ಆ ಎರಡೂ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್‌ನಲ್ಲಿ ಗುಂಡಿ ಒತ್ತಿದ್ದರು. ಆದರೆ ಈ ಬಾರಿ ಮತ್ತದೇ ಬ್ಯಾಲೆಟ್ ಪೇಪರ್ ಬಂದು ಕುಳಿತಿದೆ. ಹಾಗಾಗಿ ಹೊಸ ತಲೆಮಾರಿನ ಮತದಾರರಿಗೆ ಬ್ಯಾಲೆಟ್ ಪೇಪರ್ ತೀರಾ ಹೊಸತು. ಹಳಬರಿಗಷ್ಟೇ ಪರಿಚಿತ. ಇದರ ನಡುವೆ ಇದು ಊರಿನ ಎಲೆಕ್ಷನ್ ಆದ್ದರಿಂದ ಕಣದಲ್ಲಿ ವಿಪರೀತ ಮಂದಿ. ಕಟ್ಟೆಮಳಲವಾಡಿಯಲ್ಲಿ ನಾಲ್ಕು ಸ್ಥಾನಕ್ಕೆ ೩೦ ಮಂದಿ ಸ್ಪರ್ಧಿ ಸಿದ್ದರು. ಅಷ್ಟೂ ಜನರ ಹೆಸರನ್ನು ಒಂದೇ ಬ್ಯಾಲೆಟ್‌ನಲ್ಲಿ ಮುದ್ರಿಸಲಾಗಿತ್ತು. ಇಂಥ ಬ್ಯಾಲೆಟ್‌ನಲ್ಲಿರುವ ಅಭ್ಯರ್ಥಿಗಳನ್ನು ಹುಡುಕುವುದೇ ಒಂದು ದೊಡ್ಡ ಕೆಲಸವಾಗಿತ್ತು. ‘೩೦ ಜನರ ಬ್ಯಾಲೆಟ್ ಪೇಪರ್ ನ್ಯೂಸ್ ಪೇಪರ್ ತರ ಇದೆ. ಅದನ್ನು ಮಡುಚುವುದೇ ಮತದಾರರಿಗೆ ದೊಡ್ಡ ಕೆಲಸ. ಒಬ್ಬ ಮತದಾರನಿಗೆ ಕನಿಷ್ಠ ೧೦ ನಿಮಿಷ ಬೇಕು’ ಎಂದು ಮತಗಟ್ಟೆಯ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು. ಯಾವ ಊರಲ್ಲೂ ಫ್ಲಕ್ಸ್, ಬ್ಯಾನರ್‌ಗಳ ಸುಳಿವೇ ಇರಲಿಲ್ಲ. ಅಭ್ಯರ್ಥಿಗಳು ಕರಪತ್ರವೊಂದನ್ನೇ ಪ್ರಚಾರಕ್ಕೆ ಬಳಸುತ್ತಿದ್ದರು.

ದಲಿತರಲ್ಲಿ ಹೆಚ್ಚಿದ ರಾಜಕೀಯ ಪ್ರಜ್ಞೆ
ವಿಕ ವಿಶೇಷ ಮೈಸೂರು
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿಹೆಚ್ಚು ಸ್ಪರ್ಧೆ ಏರ್ಪಟ್ಟಿರುವುದು ಎಲ್ಲಿ ಗೊತ್ತೆ ? ಪರಿಶಿಷ್ಟ ಜಾತಿಯ ಸಾಮಾನ್ಯ ವರ್ಗದಲ್ಲಿ !
ಸಾಮಾನ್ಯ ಸೇರಿದಂತೆ ಎಲ್ಲ ರೀತಿಯ ಮೀಸಲು ವರ್ಗದಲ್ಲಿ ಒಂದು ಸ್ಥಾನಕ್ಕೆ ಸರಾಸರಿ ಮೂವರು ಸ್ಪರ್ಧೆಯಲ್ಲಿದ್ದರೆ, ಪರಿಶಿಷ್ಟ ಜಾತಿಯ ಸಾಮಾನ್ಯ ವರ್ಗದಲ್ಲಿ ಮಾತ್ರ ಒಂದು ಸ್ಥಾನಕ್ಕೆ ನಾಲ್ವರು !
ಮೇ ೧೨ರಂದು ನಡೆಯಲಿರುವ ಮೈಸೂರು ಜಿಲ್ಲೆಯ ಎಲ್ಲ ಗ್ರಾ. ಪಂ. ಸದಸ್ಯ ಸ್ಥಾನಗಳ ಚುನಾವಣೆಯ ಅಂತಿಮ ಹಣಾಹಣಿ ಪಟ್ಟಿಯನ್ನು ನೋಡಿದರೆ- ಪರಿಶಿಷ್ಟ ಜಾತಿ ಬಂಧುಗಳಲ್ಲಿ ರಾಜಕೀಯ ಆಸಕ್ತಿ ಹೆಚ್ಚಿರುವುದು ಕಂಡು ಬರುತ್ತದೆ.
ಗ್ರಾ. ಪಂ. ಚುನಾವಣೆಯಲ್ಲಿ ಮೀಸಲು ನೀತಿಯನ್ನು ಅರ್ಹ ಎಲ್ಲ ಜಾತಿ-ಜನಾಂಗಗಳಿಗೆ, ಅದರಲ್ಲೂ ಮಹಿಳೆಯರಿಗೆ ವೈಜ್ಞಾನಿಕವಾಗಿ ಸಲ್ಲುವಂತೆ ಜಾರಿಗೊಳಿಸಲಾಗಿದೆ. ಪರಿಶಿಷ್ಟ ಜಾತಿ (ಸಾಮಾನ್ಯ), ಪರಿಶಿಷ್ಟ ಜಾತಿ(ಮಹಿಳೆ); ಪರಿಶಿಷ್ಟ ಪಂಗಡ(ಸಾ), ಪರಿಶಿಷ್ಟ ಪಂಗಡ(ಮ); ಬಿಸಿಎ(ಸಾ), ಬಿಸಿಎ(ಮ); ಬಿಸಿಬಿ(ಸಾ), ಬಿಸಿಬಿ(ಮ); ಸಾಮಾನ್ಯ(ಸಾ), ಸಾಮಾನ್ಯ(ಮ) ಎಂಬ ವರ್ಗೀಕರಣದಲ್ಲಿ ಬ್ರಾಹ್ಮಣರನ್ನು ಹೊರತು ಪಡಿಸಿ ಜಿಲ್ಲೆಯ ಎಲ್ಲ ಜಾತಿ, ಜನಾಂಗಗಳ ಅರ್ಹರು ರಾಜಕೀಯ ಮೀಸಲು ವ್ಯಾಪ್ತಿಗೆ ಬರುತ್ತಾರೆ. (ಬಿಸಿಬಿಗೆ ಬರುವ ಒಕ್ಕಲಿಗರು, ಲಿಂಗಾಯತರು, ಕ್ರೈಸ್ತರನ್ನು ಹೊರತು ಪಡಿಸಿ, ಉಳಿದ ಎಲ್ಲ ಹಿಂದುಳಿದ ಜಾತಿಗಳು ಬಿಸಿಎ ವ್ಯಾಪ್ತಿಗೆ ಬರುತ್ತವೆ. ಈ ವರ್ಗದಲ್ಲೂ ಯಾರಿಗಾದರೂ ಐದು ಎಕರೆಗಿಂತ ಹೆಚ್ಚು ಜಮೀನು, ೨ ಲಕ್ಷ ರೂ. ಗಿಂತ ಅಧಿಕ ಆದಾಯ ಇದ್ದು, ಆದಾಯ ತೆರಿಗೆದಾರರು ಇದ್ದರೆ, ಅಂಥವರಿಗೆ ಮೀಸಲು ಇರುವುದಿಲ್ಲ)
ಒಂದು ಸ್ಥಾನಕ್ಕೆ ನಾಲ್ವರು ಆಕಾಂಕ್ಷಿಗಳು: ಜಿಲ್ಲೆಯ ೨೩೫ ಗ್ರಾ. ಪಂ. ಗಳ ೪೩೦೦ ಸ್ಥಾನಗಳ ಪೈಕಿ ೪೦೮೦ ಸದಸ್ಯ ಸ್ಥಾನಗಳಿಗೆ ೧೩,೨೯೮ ಮಂದಿ ಸ್ಪರ್ಧಿಸಿದ್ದಾರೆ. (ಒಟ್ಟು ಸ್ಥಾನಗಳ ಪೈಕಿ ೯ ಸ್ಥಾನಗಳು ಖಾಲಿ ಉಳಿದಿದ್ದು, ೨೧೧ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ)
ಈ ಪೈಕಿ ಪರಿಶಿಷ್ಟ ಜಾತಿ ಸಾಮಾನ್ಯ ವರ್ಗದ ೫೨೨ ಸ್ಥಾನಗಳಿಗೆ ೧೮೮೮ ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅಂದರೆ ಸರಾಸರಿ ಒಂದು ಸ್ಥಾನಕ್ಕೆ ನಾಲ್ವರು ಆಕಾಂಕ್ಷಿಗಳು. ಉಳಿದಂತೆ ಪರಿಶಿಷ್ಟ ಜಾತಿಯ ಮಹಿಳೆಯರ ಸ್ಥಾನಗಳಿಗೆ ಹೊರತು ಪಡಿಸಿ ಉಳಿದ ಎಲ್ಲ ವರ್ಗಗಳಲ್ಲಿಯೂ ಒಂದು ಸ್ಥಾನಕ್ಕೆ ಮೂವರು ಕಣದಲ್ಲಿ ಇದ್ದಾರೆ. ಪರಿಶಿಷ್ಟ ಪಂಗಡದ (ಮಹಿಳೆ ) ವರ್ಗದಲ್ಲಿ ಒಂದು ಸ್ಥಾನಕ್ಕೆ ಸರಾಸರಿ ಇಬ್ಬರು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.
ಇಲ್ಲೆಲ್ಲಾ ಇದೇ ಕೊನೆಯ ಪಂಚಾಯಿತಿ ಚುನಾವಣೆ
ಆರ್. ಕೃಷ್ಣ ಮೈಸೂರು
ಈ ಗ್ರಾಮ ಪಂಚಾಯಿತಿಗಳಿಗೆ ಇದೇ ಕೊನೆ ಚುನಾವಣೆ.
ಮೈಸೂರು ಮಗ್ಗುಲಲ್ಲೇ ಇರುವ ೧೫ ಗ್ರಾಮ ಪಂಚಾಯಿತಿಗಳಿಗೆ ಇದೇ ಕೊನೆ ಚುನಾವಣೆ ಆಗಲಿದ್ದು, ಮುಂದೆ ಇವು ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆ. ಬೃಹತ್ ನಗರವಾಗಲು ಹೊರಟಿರುವ ಮೈಸೂರು ನಗರಪಾಲಿಕೆ ಯೊಳಗೆ ೧೫ ಗ್ರಾ. ಪಂ. ವ್ಯಾಪ್ತಿಯ ೪೨ ಗ್ರಾಮಗಳು ಸೇರ್ಪಡೆ ಗೊಳ್ಳುವುದರಿಂದ ಈ ಗ್ರಾಮಗಳಲ್ಲಿ ಮುಂದೆಂದೂ ಪಂಚಾಯಿತಿ ಚುನಾವಣೆ ನಡೆಯುವುದಿಲ್ಲ.
ಮೈಸೂರು ಹೆಸರಿನೊಂದಿಗೆ ಬೆಸೆದುಕೊಂಡಿರುವ ಚಾಮುಂಡಿ ಬೆಟ್ಟ ಇಷ್ಟು ವರ್ಷ, ಮೂರು ಸದಸ್ಯರನ್ನು ಹೊಂದಿದ್ದ ರಾಜ್ಯದ ಅತಿ ಚಿಕ್ಕ ಗ್ರಾಮ ಪಂಚಾಯಿತಿಯಾ ಗಿಯೇ ಕಾರ‍್ಯ ನಿರ್ವಹಿಸಿತ್ತು. ಇದು ಬೃಹತ್ ನಗರಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳ್ಳಲಿದೆ. ಇದರೊಂದಿಗೆ ನಗರಕ್ಕೆ ಹೊಂದಿಕೊಂಡಂತಿರುವ ಶ್ರೀರಾಂಪುರ, ಹಿನಕಲ್, ಆಲನಹಳ್ಳಿ, ಉತ್ತನ ಹಳ್ಳಿ, ಬೋಗಾದಿ, ರಮ್ಮನಹಳ್ಳಿ, ಹಂಚ್ಯಾ, ಬೆಳವಾಡಿ ಗ್ರಾಮ ಪಂಚಾಯಿತಿಗಳು ಬೃಹತ್ ನಗರಪಾಲಿಕೆ ವ್ಯಾಪ್ತಿಗೆ ಒಳಪಡಲು ಸಿದ್ಧತೆ ನಡೆಸಲಾಗಿದೆ. ಹೀಗಾಗಿ ಈ ಗ್ರಾಮಗಳಿಗೆ ಕೊನೆಯ ಗ್ರಾ.ಪಂ. ಚುನಾವಣೆ ಅಗಲಿದೆ.
ನರ್ಮ್ ಯೋಜನೆಯ ಷರತ್ತಿನ ಪ್ರಕಾರ ಮುಂದಿನ ೪೦-೫೦ ವರ್ಷದ ಮುಂದಾಲೋಚನೆಯ ಯೋಜನೆ ಹಮ್ಮಿ ಕೊಳ್ಳಬೇಕಿರು ವುದರಿಂದ ಪಾಲಿಕೆಯನ್ನು ಬೃಹತ್ ನಗರಪಾಲಿಕೆ ಯನ್ನಾಗಿ ಮಾರ್ಪಾಡು ಮಾಡುವುದು ಅನಿವಾರ್ಯ. ಈಗಾಗಲೇ ಬೆಂಗಳೂರು ಬೃಹತ್ ನಗರಪಾಲಿಕೆಯಾಗಿ ಮಾರ್ಪಾಡಾಗಿದ್ದು, ಈಗಷ್ಟೆ ಚುನಾವಣೆ ಮುಗಿಸಿದೆ. ನರ್ಮ್ ಯೋಜನೆ ಜಾರಿಗೊಂಡ ಕೊಯಮತ್ತೂರು, ವಿಜಯವಾಡ, ವಿಶಾಖಪಟ್ಟಣ ಗಳು ಬೃಹತ್‌ನಗರವಾಗಿವೆ.
ಇದೇ ಮಾದರಿಯನ್ನು ಮೈಸೂರು ನಗರಪಾಲಿಕೆಯೂ ಅನುಸರಿಸ ಬೇಕಿದ್ದು, ‘ಬೃಹತ್‌ನಗರ’ ಯೋಜನೆಯನ್ನು ಸಿದ್ಧ ಪಡಿಸಿದೆ. ಯೋಜನೆಯನ್ನು ರಾಜ್ಯ ಸರಕಾರದ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದು, ಅನುಮತಿ ನೀಡುವುದಷ್ಟೇ ಬಾಕಿ ಉಳಿದಿದೆ. ಬೃಹತ್‌ನಗರವಾಗದಿರುವುದರಿಂದ ಎರಡನೇ ಹಂತದ ನರ್ಮ್ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂಬ ಷರತ್ತು ವಿಧಿಸಿ ರುವುದರಿಂದ ಮೈಸೂರು ಅನಿವಾರ್ಯವಾಗಿ ಬೃಹತ್ ನಗರವಾಗ ಬೇಕಿದೆ. ಈ ಬಗ್ಗೆ ಪಾಲಿಕೆ, ಈಗಾಗಲೇ ಸಾಮಾನ್ಯ ಸಭೆಯಲ್ಲಿ ತನ್ನ ಸರಹದ್ದು ವಿಸ್ತರಿಸುವ ಕುರಿತು ಒಂದು ವರ್ಷದ ಹಿಂದೆಯೇ (೨೦೦೯ರ ಮೇ ೨೯) ಚರ್ಚಿಸಿದ್ದು, ಅನುಮೋದನೆ ಪಡೆಯಲಾಗಿದೆ.
೨೦೧೧ರಲ್ಲಿ ನಡೆಯುವ ಜನಗಣತಿ ವೇಳೆ , ನಗರದ ಹೊರ ವಲಯದಲ್ಲಿರುವ ಬಡಾವಣೆಗಳು ಎಂದು ಗುರುತಿಸಿ ಗಣತಿ ನಡೆಸು ವಂತೆ ಸರಕಾರವನ್ನು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಲಿ ೮೯ ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಮೈಸೂರ ನಗರಪಾಲಿಕೆ ೬೫ ವಾರ್ಡ್‌ಗಳನ್ನು ಹೊಂದಿದೆ. ಇದನ್ನು ೨೧೦ ಚದರ ಕಿ.ಮೀ.ಗೆ ವಿಸ್ತರಿಸಿಕೊಂಡು ನೂರಕ್ಕೂ ಹೆಚ್ಚು ವಾರ್ಡ್ ಗಳನ್ನು ಹೊಂದಲು ಯೋಜನೆ ರೂಪುಗೊಂಡಿದೆ. ಪಾಲಿಕೆಗೆ ಮೂರು ವರ್ಷದಲ್ಲಿ ಸಾಮಾನ್ಯ ಚುನಾವಣೆ ನಡೆಯಲಿದ್ದು, ಆ ವೇಳೆಗೆ ಬೃಹತ್ ನಗರಪಾಲಿಕೆಗೆ ಸ್ಪಷ್ಟ ರೂಪು ದೊರೆಯಲಿದೆ.

ಪೂರ್ಣ ನನಸಾಗದ‘ಸುವರ್ಣ’ ಕನಸು
ವಿಕ ಸುದ್ದಿಲೋಕ ಮೈಸೂರು
ಸುವರ್ಣ ಗ್ರಾಮೋದಯ. ವಿಶಾಲ ಕರ್ನಾಟಕದ ಸುವರ್ಣ ಮಹೋ ತ್ಸವ ಪ್ರಯುಕ್ತ ೨೦೦೬ರ ಅಕ್ಟೋಬರ್‌ನಲ್ಲಿ ಕರ್ನಾಟಕ ಸರಕಾರ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆ. ಸಮರ್ಪಕವಾಗಿ ಅನುಷ್ಠಾನವಾಗಿ ದ್ದರೆ ಮೈಸೂರು ಜಿಲ್ಲೆ ಏಳು ತಾಲೂಕು ವ್ಯಾಪ್ತಿಯ ೪೫ ಗ್ರಾಮಗಳೂ ಸೇರಿ ಕರ್ನಾಟಕದ ಸಾವಿರ ಹಳ್ಳಿಗಳು ‘ಸುವರ್ಣ’ ಕಳೆ ಪಡೆಯಬೇಕಿತ್ತು.
ಆದರೆ,ಹಲವು ಕೋಟಿಗಳು ಖರ್ಚಾದರೂ ‘ಇದು ಸುವರ್ಣ ಗ್ರಾಮ, ಯೋಜನೆಗಿದು ಮಾದರಿ’ ಎಂದು ಹೇಳಿಕೊಳ್ಳುವಂಥ ಒಂದೇ ಒಂದು ಗ್ರಾಮ ರೂಪುಗೊಂಡಿಲ್ಲ. ಬಹುತೇಕ ಯೋಜನೆ ಗಳಂತೆ ಇಲ್ಲೂ ‘ಆಗಬಾರದ್ದೇ’ ಹೆಚ್ಚಾಗಿದ್ದರಿಂದ ಸುವರ್ಣ ಕನಸು ಹಾಗೇ ಉಳಿದಿದೆ. ಮೊದಲ ಹಂತಕ್ಕೆ ಆಯ್ಕೆಯಾದ ಜಿಲ್ಲೆಯ ಗ್ರಾಮಗಳಲ್ಲಿ ಸುತ್ತು ಹೊಡೆದರೆ ಎಲ್ಲೂ ಅಭಿವೃದ್ಧಿ ಮಂತ್ರ ಪೂರ್ಣ ಅನುರಣಿಸಿದ ಉದಾಹರಣೆ ಇಲ್ಲ.
ಯೋಜನೆಯ ರೂವಾರಿ, ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ‘ರಾತ್ರಿ ವಾಸ್ತವ್ಯ’ಮಾಡಿ ಹೋದ ಹಳ್ಳಿ ಗಳಲ್ಲೂ ಶೇ.೧೦೦ ಗುರಿ ಸಾಧನೆ ಸಾಧ್ಯವಾಗಿಲ್ಲ.ಕೆಲವು ಕಾಮಗಾರಿ ಗಳು ಅಪೂರ್ಣ,ಕೆಲವು ಇನ್ನೂ ಅನುಷ್ಠಾನ ಹಂತದಲ್ಲಿವೆ. ಆರಂಭವೇ ಆಗದವು ಕೆಲವು. ಮಾತ್ರವಲ್ಲ, ಯಾವ ಗ್ರಾಮಕ್ಕೂ ಮಂಜೂರಾದ ಪೂರ್ತಿ ಹಣ ಬಿಡುಗಡೆಯಾಗಿಲ್ಲ.
‘ಹಳ್ಳಿ ರಾಜಕೀಯ’ದಿಂದಲೂ ಯೋಜನೆ ಹೊರತಾಗಿಲ್ಲ. ರಾಜ ಕೀಯ ‘ಪ್ರಬಲ’ರ ಮನೆಗಳಿರುವ ಕಡೆ ಹೆಚ್ಚು ಹಣ ಹರಿಸಿ, ಬಡವರು, ದನಿ ಇಲ್ಲದವರ ಬಗ್ಗೆ ನಿರ್ಲಕ್ಷ್ಯ ತಳೆದದ್ದಕ್ಕೂ ನಿದರ್ಶನ ಗಳಿವೆ. ಯಾವುದೇ ಅಭಿವೃದ್ಧಿ ಯೋಜನೆಗಳ ಫಲ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮಟ್ಟದಲ್ಲೇ ಹೆಚ್ಚು ‘ಹಂಚಿ’ ಹೋಗಿ ಫಲಾನುಭವಿಗಳಿಗೆ ‘ಕಾಲು ಭಾಗ’ಮಾತ್ರ ತಲುಪುತ್ತದೆ ಎನ್ನುವ ವಾಸ್ತವ ಇಲ್ಲಿಯೂ ಪುನರಾವರ್ತನೆಯಾಗಿದೆ. ಗ್ರಾ.ಪಂ. ಸದಸ್ಯರೂ ತಮ್ಮ ಊರಿನ ಉದ್ಧಾರಕ್ಕೆ ‘ಸಂಪೂರ್ಣ’ ತೊಡಗಿಸಿಕೊಂಡಂತಿಲ್ಲ.
ಹಿಂದಿನ ವರ್ಷದ ‘ಬಾಕಿ’ ಉಳಿಸಿಕೊಂಡೇ ಈಗ ಮತ್ತಷ್ಟು ಗ್ರಾಮ ಗಳಲ್ಲಿ ‘ಸುವರ್ಣ’ಕನಸು ಬಿತ್ತಲಾಗಿದೆ. ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಿ,ಆಡಳಿತಾತ್ಮಕ ಅನುಮೋದನೆಗೆ ಕಾಯಲಾಗು ತ್ತಿದೆ. ಈ ಮಧ್ಯೆ, ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಭರಾಟೆ ಆರಂಭವಾಗಿದೆ. ಊರಿನ ಉದ್ಧಾರದ ಕನಿಷ್ಠ ಕಾಳಜಿ ಹೊಂದಿರ ದವರು ಪಕ್ಷಾತೀತ ರಾಜಕೀಯ ಅಂಗಳದಲ್ಲಿ ತೊಡೆತಟ್ಟಲು ಸಜ್ಜಾಗುತ್ತಿದ್ದಾರೆ. ಈ ಸಂದರ್ಭ ಸುವರ್ಣ ಕನಸಿನ ಅನುಷ್ಠಾನ ಕುರಿತಂತೆ ತಾಲೂಕುವಾರು ನೋಟ.
ಮೈಸೂರು
೨೦೦೬-೦೭ರಲ್ಲಿ ಮೊದಲ ಹಂತಕ್ಕೆ ಇಲವಾಲ, ವರುಣಾ ಹೋಬಳಿ ಹಾರೋ ಹಳ್ಳಿ, ದಡದಕಲ್ಲಹಳ್ಳಿ, ಉದ್ಬೂರು, ಜೈಪುರ ಮತ್ತು ಚಿಕ್ಕಕಾನ್ಯ (೬ ಗ್ರಾಮ) ಆಯ್ಕೆ. ಒಟ್ಟು ಮಂಜೂರಾಗಿದ್ದು ೫.೯೩ ಕೋಟಿ ರೂ. ಬಿಡುಗಡೆ ೪.೩೨ ಕೋಟಿ ರೂ. ಈವರೆಗೆ ಖರ್ಚಾಗಿರುವುದು ೩.೯೧ ಕೋಟಿ ಮಾತ್ರ.
ಈ ಪೈಕಿ ದಡದಕಲ್ಲಹಳ್ಳಿ ಮತ್ತು ಚಿಕ್ಕಕಾನ್ಯ ಗ್ರಾಮಗಳು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘ರಾತ್ರಿ ವಾಸ್ತವ್ಯ’ದಿಂದ ಗಮನಸೆಳೆದಿದ್ದವು. ಆದರೆ, ಇಲ್ಲಿಗೂ ಮಂಜೂರಾದಷ್ಟು ಹಣ ಬಿಡುಗಡೆ ಆಗಿಲ್ಲ. ಬಿಡುಗಡೆಯಾದ ಹಣವೂಪೂರ್ತಿ ಖರ್ಚಾಗಿಲ್ಲ.
ಜನಸಂಖ್ಯೆ ಆಧರಿಸಿ ದಡದಕಲ್ಲಹಳ್ಳಿಗೆ ಮಂಜೂರಾಗಿದ್ದು ೨೭.೫೦ ಲಕ್ಷ ರೂ. ಬಿಡುಗಡೆ ೨೫ ಲಕ್ಷ ರೂ. ಖರ್ಚಾಗಿದ್ದು ೧೬.೫೦ ಲಕ್ಷ ರೂ.ಮಾತ್ರ. ಚಿಕ್ಕಕಾನ್ಯದ್ದೂ ಇದೇ ಕತೆ. ಮಂಜೂರಾದ ಮೊತ್ತದ ಪೈಕಿ (೧೨.೭೫ ಲಕ್ಷ ರೂ.) ೫೦ ಸಾವಿರ ಬರಲಿಲ್ಲ. ಬಂದದ್ದರಲ್ಲೂ ೨ಲಕ್ಷ ರೂ.ಬಳಸಿಕೊಂಡಿಲ್ಲ. ಬಹುತೇಕ ಕಡೆ ಚರಂಡಿ, ರಸ್ತೆ, ಮೆಟ್ಲಿಂಗ್, ಅಂಗನವಾಡಿ, ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಆದ್ಯತೆ. ಇಲವಾಲ (೧.೨೩ ಕೋಟಿ ರೂ.), ಹಾರೋಹಳ್ಳಿ (೧.೦೫ಕೋಟಿ ರೂ.), ಉದ್ಬೂರು (೧೦೫.೫೮ಕೋಟಿ ರೂ.) ಗ್ರಾಮಗಳಲ್ಲಿ ಹೆಚ್ಚು ಹಣ ಬಳಸಿಕೊಳ್ಳಲಾಗಿದೆ ಯಾದರೂ ‘ಸಮಸ್ಯೆಗಳ ಬೇತಾಳ’ ಬೆನ್ನು ಬಿಟ್ಟಿಲ್ಲ.
ಪಶುಸಂಗೋಪನಾ ಇಲಾಖೆ ಒಂದೆರಡು ಕಡೆ ಹೊಂದಾಣಿಕೆ ಮೊತ್ತದಲ್ಲಿ ಸವಲತ್ತು ನೀಡಿದೆಯಾದರೂ, ಉಳಿದ ಇಲಾಖೆಗಳು ಸ್ಪಂದಿಸಿದ್ದಕ್ಕೆ ಉದಾಹರಣೆ ಇಲ್ಲ. ಭೂ ಮಾಫಿಯ ಸಕ್ರಿಯವಾಗಿ ರುವ ಕಾರಣಕ್ಕೆ ಯಾವುದೇ ಗ್ರಾಮದಲ್ಲಿ ಒಂದೇ ಒಂದು ನಿವೇಶನ ವಿತರಣೆ ಸಾಧ್ಯವಾಗಿಲ್ಲ. ಈಗ ಮತ್ತೆ, ೯ ಗ್ರಾಮಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸಲು ಕ್ರಿಯಾಯೋಜನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ.
ಕೃಷ್ಣರಾಜನಗರ
ತಾಲೂಕಿನ ಭೇರ್ಯ, ಸಾಲಿಗ್ರಾಮ, ಮಿರ್ಲೆ, ಹೆಬ್ಬಾಳು, ಹಳೆಯೂರು ಗ್ರಾಮಗಳು ಯೋಜನೆಗೆ ಒಳಪಟ್ಟಿದ್ದು, ಸುಮಾರು ೫ ಕೋಟಿ ರೂ. ಬಿಡುಗಡೆಯಾಗಿದೆ. ಎಲ್ಲೂ ಪೂರ್ಣ ಕಾಮಗಾರಿ ನಡೆದಿಲ್ಲ. ಭೇರ್ಯ ಮತ್ತಿತರ ಕಡೆ ಕಳಪೆ ಕೆಲಸ. ಪ್ರತಿಭಟನೆ ನಡೆದು, ಸ್ವತಃ ಶಾಸಕರೇ ಕಾಮಗಾರಿ ನಿಲ್ಲಿಸಿದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ಸಾಲಿಗ್ರಾಮಕ್ಕೆ ೨.೧೫ ಕೋಟಿ ರೂ., ಭೇರ್ಯಕ್ಕೆ ೭೫ಲಕ್ಷ ರೂ., ಮಿರ್ಲೆಗೆ ೧೧೫ ಲಕ್ಷ ರೂ., ಹೆಬ್ಬಾಳಿಗೆ ೮೬ಲಕ್ಷ ರೂ. ಬಿಡುಗಡೆಯಾಗಿದೆ. ಕೆಲವೆಡೆ ಹಣ ಉಳಿದು ವಾಪಸ್ ಹೋದ ಉದಾಹರಣೆಯೂ ಇದೆ. ಬಹುತೇಕ ಕಡೆ ರಸ್ತೆ ಬದಿಯ ತಿಪ್ಪೆಗುಂಡಿ ತೆರವಾಗಿಲ್ಲ. ನಿವೇಶನಗಳು ಉಳ್ಳವರ ಪಾಲಾಗಿರುವ ಉದಾಹರಣೆಗಳೇ ಹೆಚ್ಚು. ತ್ಯಾಜ್ಯ ವಿಲೇವಾರಿ ಮರೀಚಿಕೆ. ಯಾವುದೇ ಗ್ರಾಮ ಪೂರ್ಣ ‘ಸುವರ್ಣ’ವಾದ ಉದಾಹರಣೆ ಇಲ್ಲ.
ಎಚ್.ಡಿ.ಕೋಟೆ
ಹಿರೇಹಳ್ಳಿ, ಅಂತರಸಂತೆ, ಹೈರಿಗೆ, ಪಡುಕೋಟೆ ಗಾಂಧಿನಗರ, ಸಾಗರೆ, ಕೊತ್ತೇಗಾಲ, ಕಂದಲಿಕೆ ಮತ್ತು ಹಂಪಾಪುರ ಗ್ರಾಮಗಳು ಮೊದಲ ಹಂತಕ್ಕೆ ಆಯ್ಕೆಯಾದವು. ೨೦೦೯-೧೦ನೇ ಸಾಲಿಗೆ ಕ್ಯಾತನಹಳ್ಳಿ, ಆಲನಹಳ್ಳಿ. ಚಾಮಲಾಪುರ, ನಂದಿನಾಥಪುರ, ಜಿ.ಬಿ. ಸರಗೂರು, ಆಗತ್ತೂರು, ಕಾಟ ವಾಳು, ಬಿ.ಮಟಕೆರೆ, ರಾಮೇನಹಳ್ಳಿ, ಇಟ್ನ, ಹೆಬ್ಬಲಗುಪ್ಪೆ ಗ್ರಾಮಗಳು ಸೇರಿವೆ.
ಹೆಬ್ಬಲಗುಪ್ಪೆಯಲ್ಲಿ ಸಾಕಷ್ಟು ಕೆಲಸ ನಡೆದಿದ್ದು, ಇನ್ನೂ ೪೨ ಲಕ್ಷ ರೂ.ಗೆ ಬೇಡಿಕೆ ಸಲ್ಲಿಸಲಾಗಿದೆ. ಕೊತ್ತೇಗಾಲ,ಸಾಗರೆ, ಹಂಪಾಪುರ ಮತ್ತು ಪಡು ಕೋಟೆ ಕಾವಲ್ ಗಾಂಧಿನಗರ ಗ್ರಾಮಗಳಲ್ಲಿ ರಸ್ತೆ ಸಂಪೂರ್ಣ. ಹೈರಿಗೆ, ಅಂತರಸಂತೆ, ಆಲನಹಳ್ಳಿ, ಕ್ಯಾತನಹಳ್ಳಿ ಗ್ರಾಮಗಳಲ್ಲಿ ಕೆಲ ರಸ್ತೆಗಳು ಕಾಂಕ್ರೀಟ್ ಭಾಗ್ಯ ಕಂಡಿವೆ. ಚರಂಡಿ ಕಾಮಗಾರಿ ಎಲ್ಲೂ ನಡೆದಿಲ್ಲ. ಹಣ ವನ್ನು ‘ರಸ್ತೆ’ಗೆ ಹಾಕಲು ತೋರಿದ ಆಸಕ್ತಿಯನ್ನು ಉಳಿದ ಸವಲತ್ತು ನೀಡಿಕೆಗೆ ತೋರದ ಕಾರಣ ಗ್ರಾಮಗಳು ಎಂದಿನಂತೆ ಸಮಸ್ಯೆ ಹೊದ್ದು ಮಲಗಿವೆ.
ಪಿರಿಯಾಪಟ್ಟಣ
ಯೋಜನೆಗೆ ಆಯ್ಕೆಯಾದ ಬೆಟ್ಟದಪುರ, ದೊಡ್ಡಹರವೆ, ಮಾಕೋಡು, ಕಂಪಲಾಪುರ, ಹಲಗನಹಳ್ಳಿ ಗ್ರಾಮಗಳಲ್ಲಿ ರಸ್ತೆ, ಚರಂಡಿ ಮತ್ತಿತರ ಸಿವಿಲ್ ಕಾಮಗಾರಿಗೆ ಒತ್ತು. ಒಟ್ಟು ೪೫೩.೬೪ ಲಕ್ಷ ರೂ.ಗಳ ಅನುದಾನ. ಕೆಲವೆಡೆ ಅಂಗನವಾಡಿ,ಸಮುದಾಯ ಭವನ ಕಟ್ಟಡ ನಿರ್ಮಿಸಲಾಗಿದೆ.ತೋಟಗಾರಿಕೆ, ಕೃಷಿ ಉತ್ಪಾದನೆ, ಭೂ ಆಧರಿತ ಚಟುವಟಿಕೆ, ಶೌಚಾಲಯ, ಕೃಷಿ ಅರಣ್ಯೀಕರಣ, ಹೈನುಗಾರಿಕೆ ಮತ್ತಿತರ ಅಭಿವೃದ್ಧಿ ಸಾಧ್ಯತೆಗಳತ್ತ ಮುಖವನ್ನೇ ತೋರಿಸಿಲ್ಲ.
ಕಂಪಲಾಪುರದಲ್ಲಿ ಕೆರೆ ಬಳಿ ಕಸದತೊಟ್ಟಿ ನಿರ್ಮಾಣ, ಅಂಗನವಾಡಿ ಕಟ್ಟಡ ದುರಸ್ತಿ. ದೊಡ್ಡರವೆ, ಹಲಗನಹಳ್ಳಿ ಗ್ರಾಮ ಗಳಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ. ಬೆಟ್ಟದಪುರದಲ್ಲಿ ಸಿಮೆಂಟ್‌ರಸ್ತೆ, ಸಮುದಾಯ ಭವನ ನಿರ್ಮಾಣ. ಮಾಕೋಡಿನಲ್ಲೂ ಸಿಮೆಂಟ್ ರಸ್ತೆ ಆಗಿದೆ. ಆದರೆ, ಇಲ್ಲಿ ನಿರ್ಮಿಸಿರುವ ಚರಂಡಿ ಅತ್ಯಂತ ಕಿರಿದು. ಕಂಪಲಾಪುರದಲ್ಲಿ ಕೆಲವೆಡೆ ಮನೆಗಳಿಲ್ಲದ ಕಡೆ ಚರಂಡಿ ನಿರ್ಮಿಸಿರುವುದು ನಿರ್ಲಕ್ಷ್ಯಕ್ಕೆ ಸಾಕ್ಷಿ. ಗ್ರಾಮ ಮಧ್ಯದಲ್ಲೇ ತಿಪ್ಪೆಗುಂಡಿ ಗಳು ರಾರಾಜಿಸುತ್ತಿದ್ದು, ಸ್ಥಳಾಂತರಕ್ಕೆ ಕ್ರಮ ಕೈಗೊಂಡಿಲ್ಲ.
ದೊಡ್ಡಹರವೆಗೆ ೧೭.೩೮ ಲಕ್ಷ ರೂ.ಕೊರತೆ. ೧ ಕಿ.ಮೀ. ರಸ್ತೆ ಮತ್ತು ಚರಂಡಿ ಕಾಮಗಾರಿ ಬಾಕಿ. ಬೆಟ್ಟದಪುರ, ಹಲಗನಹಳ್ಳಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಕೆಲವೆಡೆ ಚರಂಡಿ ಅಂಚುಕಿತ್ತು ಬರುತ್ತಿದ್ದು, ಕಳಪೆ ಕಾಮಗಾರಿಗೆ ನಿದರ್ಶನ. ಮಾಕೋಡು ಗ್ರಾಮದಲ್ಲಿ ಸಮುದಾಯ ಭವನ ಇನ್ನ್ನೂ ತಳಪಾಯ ಹಂತದಲ್ಲಿದೆ. ಅಂಗನವಾಡಿಗೆ ಕಾಂಪೌಂಡ್ ನಿರ್ಮಾಣ ಯೋಜನೆ ರೂಪಿಸಿದ್ದರೂ ಕಾರ್ಯಗತವಾಗಿಲ್ಲ.

ಒಂದೇ ಜಾತಿಯ ದಂಪತಿ ಚುನಾವಣೆಯಲ್ಲಿ ಅಂತರ್ಜಾತಿ !
ವಿಕ ವಿಶೇಷ ಮೈಸೂರು
ತಾಲೂಕಿನ ಪ್ರತಿಷ್ಠಿತ ಗ್ರಾ. ಪಂ.ಯ ವ್ಯಾಪ್ತಿಗೆ ಬರುವ ಕುಟುಂಬದಲ್ಲಿ ಗಂಡ ಹೆಂಡತಿ ಇಬ್ಬರೂ ರಾಜಕಾರಣಿಗಳು. ಕಳೆದ ಚುನಾವಣೆಯಲ್ಲಿ ಗಂಡ ಬಿಸಿಎಂ(ಎ) ಅಡಿ ಆಯ್ಕೆಯಾಗಿದ್ದರು. ಈಗ ಅವರ ಪತ್ನಿ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಡಿ ನಾಮಪತ್ರ ಸಲ್ಲಿಸಿದ್ದಾರೆ !
ಒಂದೇ ಕುಟುಂಬದಲ್ಲಿ ಗಂಡ ಒಂದು ಜಾತಿ, ಹೆಂಡತಿ ಇನ್ನೊಂದು ಜಾತಿ. ಇದರರ್ಥ ಅಂತರ್ಜಾತಿ ವಿವಾಹಿತರೇನಲ್ಲ. ಇಬ್ಬರೂ ರಾಜ ಪರಿವಾರ ಜಾತಿಗೆ ಸೇರಿದವರು, ಪರಸ್ಪರ ನೆಂಟ ರಿಷ್ಟರು. ಹೀಗಿದ್ದರೂ ಇದ್ಹೇಗೆ ಎಂದರೆ ಉತ್ತರ ಸರಳ- ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಲು ಮೀಸಲಿನ ದುರ್ಬಳಕೆ !
ಗ್ರಾ. ಪಂ. ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಹಾಗೂ ಬಿಸಿಎಂ (ಎ) ವರ್ಗದ ಮೀಸಲು ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಸಮಯಕ್ಕೆ ತಕ್ಕಂತೆ ಜಾತಿಗಳನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿರುವುದು ವರದಿಯಾಗುತ್ತಿದೆ.
ಕಡಕೊಳ ಗ್ರಾ. ಪಂ. ನ ಬಿಸಿಎಂ(ಎ) ಮೀಸಲು ಸ್ಥಾನಕ್ಕೆ ರಾಜ ಪರಿವಾರ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಅವರ ತಾಯಿ ಅದೇ ಗ್ರಾ. ಪಂ. ಯಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಪರಿಶಿಷ್ಟ ಪಂಗಡ ಎಂದು ಘೋಷಿಸಿಕೊಂಡು, ಆ ಜಾತಿಯ ಸವಲತ್ತು ಪಡೆದಿದ್ದಾರೆ. ಚುನಾವಣೆಗೆ ನಿಲ್ಲಲು ಮಗ ಬಿಸಿಎಂ(ಎ) ಆದ್ರೆ, ಸವಲತ್ತು ಪಡೆಯುವ ತಾಯಿ ಎಸ್ಟಿ .
ಜಿಲ್ಲೆಯ ೨೩೫ ಗ್ರಾಮ ಪಂಚಾಯಿತಿಗಳ ೪೩೦೦ ಸ್ಥಾನಗಳಿಗೆ ಮೇ ೧೨ರಂದು ಚುನಾವಣೆ ನಡೆಯುತ್ತಿದ್ದು, ಈ ಪೈಕಿ ಪರಿಶಿಷ್ಟ ಪಂಗಡಕ್ಕೆ ೬೨೦ ಹಾಗೂ ಬಿಸಿಎಂ(ಎ)ಗೆ ೧೧೬೭ ಸ್ಥಾನಗಳು. ಪರಿಶಿಷ್ಟ ಪಂಗಡದಡಿ ಜಿಲ್ಲೆಯಲ್ಲಿ ಪ್ರಮುಖವಾಗಿ ಬೇಡ, ವಾಲ್ಮೀಕಿ, ನಾಯಕ ಜನಾಂಗದವರು ಸ್ಪರ್ಧಿಸಲು ಅರ್ಹರು. ಒಕ್ಕಲಿಗರು, ಲಿಂಗಾಯಿತರು, ಕ್ರೈಸ್ತರನ್ನು ಹೊರತು ಪಡಿಸಿ ಉಳಿದ ಎಲ್ಲ ಹಿಂದುಳಿದ ಜಾತಿಗಳು ಬಿಸಿಎಂ(ಎ) ಮೀಸಲಿನಡಿ ಸ್ಪರ್ಧಿಸಬಹುದು. ಹೀಗಿದ್ದರೂ ಬಹಳಷ್ಟು ಕಡೆ ರಾಜ ಪರಿವಾರ ಹಾಗೂ ಕಾಡು ಕುರುಬ ಕೋಮಿನವರು ಈ ಮೀಸಲು ಬಳಸುತ್ತಿದ್ದಾರೆ ಎಂಬ ದೂರುಗಳು ಜಿಲ್ಲಾಧಿಕಾರಿ ಕಚೇರಿಗೆ ಮುಟ್ಟಿವೆ.
ಕಡಕೊಳ, ಸಿಂಧುವಳ್ಳಿ, ಉದ್ಬೂರು, ರಮ್ಮನಹಳ್ಳಿ, ಕಳಲೆ, ಇಲವಾಲ, ಗಾಡವಗೆರೆ, ತಲಕಾಡು, ಬೆಟ್ಟದಪುರ, ಭೇರ್ಯ, ಮಿರ್ಲೆ ಸೇರಿದಂತೆ ಬಹಳಷ್ಟು ಕಡೆ ಜಾತಿ ದುರ್ಬಳಕೆಯ ದೂರುಗಳು ಕೇಳಿ ಬರುತ್ತಿವೆ. ಕೆಲವೆಡೆ ಗ್ರಾಮ ಪಂಚಾಯಿತಿ ಸ್ಥಾನಗಳ ಮೀಸಲಷ್ಟೇ ಬದಲಾಗಿಲ್ಲ. ಕೆಲವರ ಜಾತಿಯೂ ಬದಲಾಗಿದೆ !
ಮೀಸಲು ದುರ್ಬಳಕೆ ಇತಿಹಾಸ: ೧೯೭೧ರ ಜನಗಣತಿವರೆಗೆ ರಾಜ್ಯ ದಲ್ಲಿರುವ ಮೂಲನಿವಾಸಿಗಳು, ಗಿರಿಜನರು ಮತ್ತು ಬೆಳಗಾವಿ, ಕೊಡಗು ಜಿಲ್ಲೆಯ ಕೆಲ ನಾಯಕರು ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರು. ಒಟ್ಟೂ ಜನಸಂಖ್ಯೆ ೩.೯೦ ಲಕ್ಷ. ೧೯೮೧ರ ಜನಗಣತಿ ವೇಳೆಗೆ, ಇತರೆ ಜಿಲ್ಲೆಗಳ ನಾಯಕರು ಕೂಡ ತಮ್ಮನ್ನು ಪರಿಶಿಷ್ಟ ಪಂಗಡ ಎಂದು ಸ್ವಯಂ ಘೋಷಿಸಿಕೊಂಡು, ಗಣತಿಯಲ್ಲಿ ದಾಖಲಿಸಿದರು. ಅಲ್ಲಿಯವರೆಗೆ ನಾಯಕರು ಬಿಸಿಎಂ(ಎ) ವರ್ಗಕ್ಕೆ ಸೇರಿದ್ದರು. ಗಣತಿ ಬಳಿಕ ರಾಜಕೀಯ ಕಾರಣಕ್ಕಾಗಿ ಈ ಎಲ್ಲರನ್ನೂ ಪರಿಶಿಷ್ಟ ಪಂಗಡ ಎಂದೇ ಪರಿಗಣಿಸಲಾಯಿತು. ೧೯೯೧ರ ಜನಗಣತಿಯಲ್ಲೂ ಪುನರಾವರ್ತನೆ ಆಯಿತು.
ಪರಿಣಾಮ-ಗಿರಿಜನೇತರ ಕೋಮಿಗೆ ಸೇರಿದ ಹತ್ತಾರು ಜಾತಿಗಳು ‘ಪರಿಶಿಷ್ಟ ಪಂಗಡ’ದಡಿ ಆಶ್ರಯ ಪಡೆದು, ಮೀಸಲಿನ ಲಾಭ ಪಡೆದವು. ಈ ಮಧ್ಯೆ ಮೈಸೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿದ್ದ ಪರಿವಾರದವರು ಪರಿಶಿಷ್ಟ ಪಂಗಡಕ್ಕೆ ಸೇರಲು ಪ್ರಯತ್ನಿಸಿ ವಿಫಲರಾದರು. ಹೀಗಿದ್ದರೂ ಕೆಲವರು ಶಾಲೆಗೆ ದಾಖಲಾಗುವಾಗ ತಮ್ಮ ಜಾತಿ ಕಾಲಂನಲ್ಲಿ ಪರಿವಾರ ನಾಯಕರು ಎಂದು ಬರೆಸಿ ಕೊಳ್ಳುವುದು ತಪ್ಪಿಲ್ಲ.
ದುರ್ಬಳಕೆ ಹೇಗೆ ? ಸಾಮಾನ್ಯವಾಗಿ ಶಾಲೆಗೆ ಸೇರುವಾಗ ಪರಿವಾರ ಕೋಮಿನ ವರು ಹಾಗೂ ಕಾಡು ಕುರುಬರು ತಮ್ಮ ಜಾತಿಯನ್ನು ಪರಿಶಿಷ್ಟ ಪಂಗಡ ಎಂದು ಬರೆಸಿಕೊಳ್ಳುತ್ತಾರೆ. ಇದನ್ನು ತೋರಿಸಿಯೇ ಮುಂದೆ ತಾವು ಪರಿಶಿಷ್ಟ ಪಂಗಡ ಎಂದು ಪ್ರಮಾಣ ಪತ್ರ ಪಡೆಯುತ್ತಾರೆ. ಒಂದು ವೇಳೆ ಬಿಸಿಎಂ(ಎ)ನಡಿ ಲಾಭ ಪಡೆಯ ಬೇಕಾದಲ್ಲಿ ಬೇರೊಂದು ದಾಖಲೆಯನ್ನು ತೋರಿಸು ತ್ತಾರೆ. ನಾವು ಪರಿವಾರದವರಷ್ಟೆ, ಪರಿವಾರ ನಾಯಕರಲ್ಲ. ಹಾಗಾಗಿ ಬಿಸಿಎಂ(ಎ) ಎಂದು ಬಿಂಬಿಸಿಕೊಳ್ಳುತ್ತಾರೆ. ಒಟ್ಟಾರೆ ಎರಡು ಮೀಸಲುಗಳನ್ನು ಸಂದರ್ಭಕ್ಕೆ ತಕ್ಕಂತೆ ದುರುಪಯೋಗಪಡಿಸಿ ಕೊಳ್ಳುವುದು !
ಪಂಚಾಯಿತಿ ಚುನಾವಣೆಗೆ ಏಕಿಷ್ಟು ರಶ್...?
ಚೀ. ಜ. ರಾಜೀವ ಮೈಸೂರು
ತಾಲೂಕಿನ ಕಡಕೊಳ ಗ್ರಾಮ ಪಂಚಾಯಿತಿಯ ೨೨ ಸ್ಥಾನಗಳಿಗೆ ಮೇ ೧೨ರಂದು ನಡೆಯಲಿ ರುವ ಚುನಾವಣೆಗೆ ನಾಮಪತ್ರಗಳ ಸಂಖ್ಯೆ ೭೪. ಇದರಲ್ಲಿ ಯುವಕರ ಸಂಖ್ಯೆಯೇ ಅಧಿಕ !
ಈ ಅಂಕಿ-ಸಂಖ್ಯೆ ಮತ್ತು ಯುವಕರ ಚುನಾವಣೆ ಪ್ರೀತಿ ಗ್ರಾಮದ ಹಿರಿಯರು ಮತ್ತು ಯಜಮಾನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಮಾತ್ರವಲ್ಲ, ಕಾಲ ಕೆಟ್ಟು ಹೋಯಿತು ಎಂಬ ‘ಸ್ಥಾಪಿತ ಹಳಹಳಿಕೆ’ ಅವರನ್ನು ಚಿಂತೆಗೀಡು ಮಾಡಿದೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದವರ ಸಂಖ್ಯೆ ೩೫ರ ಗಡಿ ದಾಟಿರಲಿಲ್ಲ. ಈ ಬಾರಿ ದ್ವಿಗುಣ. ಇದು ಒಂದರ ಕಥೆಯಲ್ಲ. ಜಿಲ್ಲೆಯ ಬಹುತೇಕ ಕಡೆ ಇದೇ ರೀತಿಯ ಬೆಳವಣಿಗೆ. ಇದರ ಹಿನ್ನೆಲೆ ಶೋಧನೆಗೆ ಕಡಕೊಳ ಸುತ್ತಮುತ್ತಲಿನ ಗ್ರಾಮಗಳನ್ನು ಸುತ್ತಾಡಿದರೆ, ಸಿಗುವ ಉತ್ತರಗಳು ಸ್ವಾರಸ್ಯಕರ.
ಪಂಚಾಯಿತಿ ವ್ಯವಸ್ಥೆಯ ಮೂರನೇ ಸ್ತರದಲ್ಲಿ ಅರಳುತ್ತಿರುವ ರಾಜಕೀಯ ಪ್ರಜ್ಞೆ, ಗ್ರಾಮೀಣ ಉದ್ಯೋಗ ಖಾತ್ರಿಯಂಥ ಯೋಜನೆಗಳ ಮೂಲಕ ಗ್ರಾ. ಪಂ. ಗಳಿಗೆ ಹರಿದು ಬರುತ್ತಿರುವ ಲಕ್ಷಾಂತರ ರೂ. ಅನುದಾನ, ಬಿಜೆಪಿಯ ಆಪರೇಷನ್ ಕಮಲ...ಹೀಗೆ ತರಹೇವಾರಿ ಉತ್ತರಗಳು.
ರಾಜಕೀಯ ಅರಿವು: ‘ಮೊದಲೆಲ್ಲಾ ಊರಲ್ಲಿ ಯಜಮಾನ ಮನುಷ್ಯರಿಗೆ, ಅವರ ಮಾತಿಗೆ ಬೆಲೆ-ಗೌರವ ಇರುತ್ತಿತ್ತು. ಈಗ ಹಾಗಿಲ್ಲ. ಯಾವು ದಾದರೂ ಊರಿನ ಕೆಲಸದ ಬಗ್ಗೆ ಸಲಹೆ-ಸೂಚನೆ ನೀಡಲು ಹೋದರೆ, ನೀನೇನೂ ಎಲೆಕ್ಟೆಡ್ ಮೆಂಬ್ರಾ ಎಂದು ಪ್ರಶ್ನಿಸುತ್ತಾರೆ. ಅವ್ರು ಕೇಳೋದ್ರಲ್ಲೂ ತಪ್ಪಿಲ್ಲ. ಅದಕ್ಕಾಗಿ ನಾಮಪತ್ರ ಸಲ್ಲಿಸಿದ್ದೇನೆ’ ಎನ್ನು ತ್ತಾರೆ ಕಡಕೊಳದ ಮಹೇಶ್ ಎಂಬ ಯುವಕ.
‘ಐದು ವರ್ಷದ ಹಿಂದೆ ಚುನಾವಣೆಗೆ ೪೦ ಜನ ನಿಂತಿದ್ರು. ಊರಿನ ಯಜಮಾನ್ರಾದ ರಂಗ ನಾಯ್ಕ, ವಜ್ರ ನಾಯ್ಕ್ ಅವರು ಎಲ್ರನ್ನೂ ಕರ‍್ಸೆ ಮಾತಾಡಿದ್ದಕ್ಕೆ ೧೦ ಜನ ವಾಪಸ್ ತೆಗೆದುಕೊಂಡ್ರು. ಮೂರು ಜನರ ಅವಿರೋಧ ಆಯ್ಕೆ ಆಗಿತ್ತು’ ಎನ್ನುವ ಗ್ರಾಮದ ಸಿದ್ದನಾಯಕ ಅವರಿಗೆ ಈಗಿನ ಬೆಳವಣಿಗೆಗಳು ಬೇಸರ ತಂದಿವೆ. ‘ಈಗ ನಮ್ಮೂರಲ್ಲಿ ರಂಗನಾಯ್ಕರು ಇಲ್ಲ. ಯಾರೂ ಯಾರ ಮಾತನ್ನು ಕೇಳೋದಿಲ್ಲ. ನಾಮಪತ್ರ ಸಲ್ಲಿಸಿರುವವರದ್ದು ನಾವು-ನಮ್ಮಿಷ್ಟ ಅನ್ನೋ ಧೋರಣೆ. ಎಲ್ರೂ ರಾಜಕಾರಣಿಗಳೇ. ಕಾಲ ಕೆಟ್ಟು ಹೋಯಿತು’ ಎಂದು ಹಳಹಳಿಸುತ್ತಾರೆ.
ಖಾತ್ರಿ ಯೋಜನೆ ಆಕರ್ಷಣೆ: ಚುನಾವಣೆಗೆ ನಾಮಪತ್ರ ಸಲ್ಲಿಸಿರುವವರ ಪೈಕಿ ೩೦ ರಿಂದ ೫೦ ವರ್ಷದೊಳಗಿನವರು ಹೆಚ್ಚಿದ್ದಾರೆ. ಬಹುತೇಕ ಹೊಸ ಮುಖಗಳು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸುವರ್ಣ ಗ್ರಾಮದಂಥ ಯೋಜನೆ ಗಳು ಕೆಲವರನ್ನು ಆಕರ್ಷಿಸಿವೆ. ‘ಖಾತ್ರಿ ಯೋಜನೆ ಯಲ್ಲಿ ಏನು ಕೆಲಸ ಇದೆ, ಏನು ಮಾಡಬಹುದು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಆದರೆ, ಖಾತ್ರಿ ಯೋಜನೆ ದೆಸೆಯಿಂದ ಕೆಲ ತಿಂಗಳಲ್ಲೇ ದುಂಡುಗಾದವರು (ಹಣ ಮಾಡಿಕೊಂಡ ಜನ) ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾರೆ. ಇದರಿಂದಲೂ ಬಹಳಷ್ಟು ಜನ ಸ್ಪರ್ಧೆಗಿಳಿದಿದ್ದಾರೆ’ ಎನ್ನುತ್ತಾರೆ ಕಡಕೊಳ ಕನ್ನಡ ಗೆಳೆಯರ ಬಳಗದ ಉಪಾಧ್ಯಕ್ಷ ಕುಮಾರಸ್ವಾಮಿ.
ಸಾಮಾನ್ಯವಾಗಿ ಗ್ರಾ.ಪಂ. ಕಾಮಗಾರಿಗಳ ಗುತ್ತಿಗೆಯನ್ನು, ಅಲ್ಲಿನ ಸದಸ್ಯರೇ ತಮ್ಮ ಬಂಧು- ಬಾಂಧವರ ಹೆಸರಿನಲ್ಲಿ ಪಡೆಯುವುದು ಹೊಸ ದೇನಲ್ಲ. ಜಾತಿ, ಹಣದ ಪ್ರಭಾವ ಇದ್ದ ಸದಸ್ಯರು ಮಾತ್ರ ಕಾಮಗಾರಿ ಮಾಡಿಸಿ, ಒಂದಿಷ್ಟು ದುಡ್ಡು ಮಾಡಿಕೊಳ್ಳುತ್ತಿದ್ದರು. ಆದರೆ, ಖಾತ್ರಿ ಹಾಗೂ ಸುವರ್ಣ ಗ್ರಾಮ ಯೋಜನೆ ಜಾರಿಗೆ ಬಂದ ಬಳಿಕ ಪಂಚಾಯಿತಿಯ ಬಹುತೇಕ ಸದಸ್ಯರ ಸ್ಥಿತಿ-ಗತಿ ಸುಧಾರಿಸಿದೆ ಎಂದು ಹೇಳುತ್ತಾರೆ.
ಆಪರೇಷನ್ ಕಮಲದ ಪ್ರಭಾವ !: ಸಾಮಾನ್ಯ ವಾಗಿ ನಾಮಪತ್ರ ಸಲ್ಲಿಸಿದವರೆಲ್ಲರಿಗೂ ಚುನಾವಣೆಗೆ ಸ್ಪರ್ಧಿಸಲೇಬೇಕೆಂಬ ಆಗ್ರಹವೇನಿ ರದು. ಸ್ಪರ್ಧಿಸಲೇಬೇಕೆಂದು ಹಠ ತೊಟ್ಟ ಅಭ್ಯರ್ಥಿ ರಾಜಿಗೆ ಕರೆದರೆ, ಒಂದು ಆಟ ಆಡಿ ಬಿಡೋಣ ಎಂಬ ಮನೋಭಾವ. ಇಂಥವರು ಎಲ್ಲ ಕಾಲದಲ್ಲೂ ಎಲ್ಲ ಚುನಾವಣೆ ಸಂದರ್ಭದಲ್ಲೂ ಇರುತ್ತಾರೆ. ಆದರೆ, ಈ ಬಾರಿ ಇಂಥವರು ಹೆಚ್ಚು. ಚುನಾಯಿತ ಪ್ರತಿನಿಧಿಗಳನ್ನು ಖರೀದಿಸುವ ಆಪರೇಷನ್ ಕಮಲ ಎಂಬ ಕಾರ‍್ಯಾಚರಣೆ ತಮ್ಮ ಬಾಗಿಲಿಗೂ ಬಂದೀತೆಂಬ ಆಲೋಚನೆ.
‘ಅವಿರೋಧ ಆಯ್ಕೆಗೆ ಸಹಕರಿಸಿದರೆ, ಬಿಜೆಪಿ ಯವ್ರು ಉಳಿದ ಕ್ಯಾಂಡಿಡೇಟ್‌ಗಳಿಗೆ ದುಡ್ಡು ಕೊಡ್ತಾರಂತೆ. ಇದಕ್ಕಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳಿಗೆ ಈಗಾಗ್ಲೆ ನೋಟಿನ ಕಂತೆ ಬಂದಿದೆಯಂತೆ. ಹಾಗಾಗಿ ನಾನೂ ನಾಮ ಪತ್ರಸಲ್ಲಿಸಿದ್ದೇನೆ. ನನಗೂ ಒಂದಿಷ್ಟು ಹಣ ನೀಡಲಿ’ ಎಂದವರು ಹೆಸರು ಬಹಿರಂಗ ಪಡಿಸಲು ಬಯಸದ ಅಭ್ಯರ್ಥಿಯೊಬ್ಬ. ಬಿಜೆಪಿ ಮುಖಂಡರು ಹಣ ಹಂಚಿ ದ್ದಾರೋ ಇಲ್ಲವೋ, ಇಂಥದೊಂದು ವದಂತಿ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿರುವುದಂತೂ ಸತ್ಯ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)