ಸದೇಶ್ ಕಾರ್ಮಾಡ್
ಸದಾ ಸಸ್ಯರಾಶಿಯ ಮಧ್ಯೆ ಕಂಗೊಳಿಸುವ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಂಥೊರಿಯಂ ಹೂಗಳ ಸಾಮ್ರಾಜ್ಯ.
ಸಾಕಷ್ಟು ಮನೆಗಳಲ್ಲಿ ಅಲಂಕಾರಿಕ ಪುಷ್ಪವಾಗಿ ಅರಳಿದ ಆಂಥೊರಿಯಂ, ಉಳಿದೆಡೆ ವಾಣಿಜ್ಯ ಉದ್ದೇಶಕ್ಕೆ ಅರಳಿ ನಿಂತಿವೆ. ಕೇಂದ್ರ ಸರಕಾರವು ಕೊಡಗನ್ನು ಈ ಬೆಳೆಗೆ ಸೂಕ್ತ ಪ್ರದೇಶವೆಂದು ಗುರುತಿಸಿದೆ. ದೇಶದ ಯಾವುದೇ ಭಾಗದಲ್ಲೂ ಕೊಡಗಿನಲ್ಲಿ ಬೆಳೆಯುವಷ್ಟು ಉತ್ಕೃಷ್ಟ ಮಟ್ಟದ ಆಂಥೊರಿಯಂ ದೊರೆಯದು. ಇಲ್ಲಿನ ಫಲವತ್ತಾದ ಮಣ್ಣು ಹಾಗೂ ಹವಾಗುಣವೇ ಅದಕ್ಕೆ ಕಾರಣ.
ಆಂಥೊರಿಯಂ ಜನಪ್ರಿಯ ವಾಣಿಜ್ಯ ಪುಷ್ಪ ಬೆಳೆ. ನೆರಳು ಮನೆ ಅಥವಾ ಹಸಿರುಮನೆಗಳಲ್ಲಿ, ಪಾತಿ ಅಥವಾ ಕುಂಡಗಳಲ್ಲಿ ಬೆಳೆಯಲಾಗುತ್ತಿದೆ. ಇವುಗಳನ್ನು ಹೂದಾನಿಗಳಲ್ಲಿ ಇಡಲು, ಪುಷ್ಪಗುಚ್ಛ ತಯಾರಿಕೆಯಲ್ಲಿ ಹಾಗೂ ಹೂ ಜೋಡಣೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಆಂಥೊರಿಯಂ ಅನ್ನು ವರ್ಷವಿಡೀ ಬೆಳೆಯ ಬಹುದಾದರೂ ತಂಪಾದ ಹವಾಮಾನವಿರುವ ಮತ್ತು ಶೇ.೭೫ ರಿಂದ ೮೦ರಷ್ಟು ನೆರಳಿರುವ ೧೮ ರಿಂದ ೨೮ ಡಿಗ್ರಿ ಸೆ.ಉಷ್ಣಾಂಶ ಹಾಗೂ ಶೇ.೭೦ ರಿಂದ ೭೫ ರಷ್ಟು ಆರ್ದ್ರತೆಯಿಂದಿರುವ ಪ್ರದೇಶವೇ ಸೂಕ್ತ. ಜೂನ್‌ನಿಂದ ಅಕ್ಟೋಬರ್ ಸೀಸನ್.
ಮೈಸೂರು ದಸರಾ ಎಷ್ಟೊಂದು ಸುಂದರ ! ಸುಸ್ವಾಗತ : ವಿಕ ವೀಕ್ಷಣೆ - ದಸರಾ ೨೦೧೧
ಕಾಫಿ ನಾಡು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮನಸೆಳೆಯುತ್ತಿರುವ `ಹೋಂ ಮೇಡ್' ವೈನ್
ಅಜ್ಜಮಾಡ ರಮೇಶ್ ಕುಟ್ಟಪ್ಪ
ಬ್ರಿಟಿಷ್ ಆಳ್ವಿಕೆ ಕಾಲದಿಂದಲೂ ಕೂರ್ಗ್‌ನಲ್ಲಿ ಮನೆ- ಮನೆಗಳಲ್ಲಿಯೂ ವೈನ್ ಮೆರೆಯುತ್ತಿದೆ. ಮನೆಗಳಲ್ಲಿ ಮಾಡುವ ವೈವಿಧ್ಯಮಯ ವೈನ್‌ಗಳು ಮಹಿಳೆಯರು ಹಾಗೂ ಮಕ್ಕಳ ನೆಚ್ಚಿನ ಡ್ರಿಂಕ್. ಕೊಡಗಿನಲ್ಲಿ ನಡೆಯುವ ಬಹುತೇಕ ಶುಭ- ಅಶುಭ ಕಾರ್ಯಕ್ರಮಗಳಲ್ಲಿ ವೈನ್ ಇದ್ದೇ ಇರುತ್ತದೆ. ನಾಲ್ಕೈದು ವರ್ಷಗಳ ಹಿಂದೆ ವೈನ್ ಮಾರುಕಟ್ಟೆ ರಂಗ ಪ್ರವೇಶಿಸಿದೆ.
ಧಾರಾಕಾರ ಸುರಿಯುವ ಮಳೆ, ಬೆಚ್ಚಗಿನ ಆಹ್ಲಾದಕರ ಹವಾಮಾನ, ಗಿರಿಕಂದರಗಳ ನಾಡಾದ ಕೊಡಗಿನಲ್ಲಿ `ಮದ್ಯ' ಸಂಸ್ಕೃತಿಯ ಭಾಗವಾಗಿ ಗುರುತಿಸಲ್ಪಟ್ಟಿದೆ. ಬಹುತೇಕರು ತಪ್ಪಾಗಿ ಅರ್ಥೈಸಿಕೊಂಡಿರುವಂತೆ `ಮದ್ಯ' ಕೊಡಗಿನ ಸಂಪ್ರದಾಯವೂ ಅಲ್ಲ. ಸಂಸ್ಕೃತಿಯೂ ಅಲ್ಲ.
ಮದ್ಯ ಸೇವಿಸದವರು ವೈನ್ ಸೇವಿಸುವುದರ ಮೂಲಕ ಕಂಪನಿ ಕೊಡುತ್ತಾರೆ. ಕೂಲ್ ಡ್ರಿಂಕ್ಸ್ ಕುಡಿಯುವುದಕ್ಕಿಂತ ಒಂದಿಷ್ಟು ಹೆಚ್ಚಿನದ್ದನ್ನು ಕುಡಿಯಲು ಬಯಸುವವರು ಗ್ಲಾಸ್‌ಗೆ ಒಂದಿಷ್ಟು ವೈನ್‌ಹಾಕಿಕೊಂಡು ಮದ್ಯ ಸೇವಿಸುವವರೊಂದಿಗೆ ಕಂಪನಿ ಕೊಡುತ್ತಾರೆ.

ಮಡಿಕೇರಿ ಗಡಗಡ
ವಿಕ ವಿಶೇಷ
ಮಂಜಿನ ನಗರಿ ಮಡಿಕೇರಿ ಜನ ಈಗ ಚಳಿ ಹೊಡೆತಕ್ಕೆ ಅಕ್ಷರಶಃ ಥರಗುಟ್ಟಿ ಹೋಗಿದ್ದಾರೆ. ಪ್ರವಾಸಿಗರೂ ಇಳಿಮುಖಗೊಂಡ ಉಷ್ಣಾಂಶಕ್ಕೆ ಸಿಲುಕಿ ತತ್ತರಿಸಿದ್ದಾರೆ. ಮಡಿಕೇರಿ ಸದ್ಯಕ್ಕೆ ಗಡಗಡ. ಮುಂಜಾನೆ ಬೆಚ್ಚನೆ ಕಂಬಳಿ ಹೊದ್ದು ಮಲಗಿರಲು ಬಯಸುವವರೇ ಹೆಚ್ಚು. ತಣ್ಣಗೆ ಬೀಸುತ್ತಿರುವ ಕುಳಿರ್ಗಾಳಿ ಹಾಗೆ ಬಿಡದು. ಸೂರ್ಯನ ಬೆಳಕು ಮನೆ ಒಳಗೆ ಹೊಕ್ಕುವವರೆಗೂ ಬೆಚ್ಚನೆ ಕಂಬಳಿ ಯೊಳಗಿರಲು ಹೆಚ್ಚಿನವರು ಬಯಸುತ್ತಿ ದ್ದಾರೆ.
ಒಳಗೊಂದು... ಅದರ ಮೇಲೊಂದು... ಅಲ್ಲಿಂದ ಸ್ವೆಟರ್... ಮಫ್ಲರ್... ಕೈ- ಕಾಲಿಗೆ ಗವುಸುಗಳನ್ನು ಧರಿಸಿದರೂ ಚಳಿ ಬಿಡದು. ಕೊಡಗಿನ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಈ ವರ್ಷ ಡಿಸೆಂಬರ್ ೧೪ ರಂದು ಅತ್ಯಂತ ಕಡಿಮೆ ಉಷ್ಣಾಂಶ ೧೧.೬ ಡಿಗ್ರಿ ಸೆ. ದಾಖಲಾಗಿದೆ. ೨೦೦೬ ರ ಫೆಬ್ರವರಿ ೮ ರಂದು ದಾಖಲಾದ ೫.೧ ಡಿಗ್ರಿ ಸೆ. ಇದುವರೆಗಿನ ದಾಖಲೆ. ಪ್ರಸ್ತುತ ೧೨-೧೩ ಡಿಗ್ರಿ ಸುತ್ತಮುತ್ತಲೇ ಗಿರಕಿ.
ನಿತ್ಯದ ವಾಕಿಂಗ್‌ಗೂ ಸದ್ಯಕ್ಕೆ ಬ್ರೇಕ್. ದೇಹ ದಂಡನೆಗಿಂತ ಚಳಿ ಹೊಡೆತದಿಂದ ತಪ್ಪಿಸಿ ಕೊಂಡರೆ ಸಾಕೆಂಬ ನಿಲುವು. ಅನಿವಾರ್‍ಯವಾಗಿ ವಾಯುವಿಹಾರಕ್ಕೆ ಹೊರಡುವವರು ಗಾಳಿ ಒಳಪ್ರವೇಶಿಸದಂತೆ ಫುಲ್ ಬಂದೋಬಸ್ತ್.
ಒಲೆ ಇರುವ ಮನೆಗಳಲ್ಲಿ ಬೆಚ್ಚನೆ ಬೆಂಕಿ ಕಾಯಿಸಿಕೊಳ್ಳಲು ಈಗ ಪೈಪೋಟಿ. ಉಳ್ಳವರು ಹೀಟರ್, ಆಗಸ್ಟಿಕ್ ಬಳಸುತ್ತಿ ದ್ದಾರೆ. ಮುಸ್ಸಂಜೆ ವೇಳೆಯಲ್ಲಿ `ಗರಂ' ಆಗಿ ಚಳಿಯನ್ನು ದೂರ ಮಾಡಲು ಹಲವರು ಮೈ ಮರೆಯುತ್ತಿದ್ದಾರೆ. ಭುವಿಯೇ ಮಂಚ, ಆಗಸವೇ ಹೊಂದಿಕೆ ಅನ್ನುವ ಪರಿಸ್ಥಿತಿಯಲ್ಲಿರುವ ಬಯಲು ವಾಸಿಗಳು, ಗುಡಿಸಲು ವಾಸಿಗಳು ವಾಸ್ತವ್ಯ ಹೂಡಿರುವ ಸ್ಥಳದ ಪಕ್ಕ `ಕ್ಯಾಂಪ್ ಫೈಯರ್' ಹಾಕಿಕೊಂಡು ಸದ್ಯಕ್ಕೆ ಮುಕ್ತಿ.

ಕೊಡಗಿನಲ್ಲೇ ಕಾಫಿ ಇಲ್ಲ !
ಅಜ್ಜಮಾಡ ರಮೇಶ್ ಕುಟ್ಟಪ್ಪ
ಹವಾಮಾನ ವೈಪರೀತ್ಯದಿಂದ ಬರೀ ಮಳೆ ಸುರಿದಿಲ್ಲ, ಕಾಫಿ ಇಳುವರಿ ಕುಸಿದಿದೆ. ಕೊಡಗಿನ ವಾಣಿಜ್ಯ ಬೆಳೆ ಕಾಫಿ. ಅದಕ್ಕೀಗ ಉತ್ತಮ ಧಾರಣೆಯಿದೆ, ವಿಚಿತ್ರವೆಂದರೆ ತೋಟದಲ್ಲಿ ಕಾಫಿ ಬೆಳೆ ಇಲ್ಲ !
ಮಳೆ ಏರುಪೇರಿನಿಂದ ತೋಟದಲ್ಲಿ ಬೆಳೆದ ಫಸಲು ಕೈಸೇರಲಿಲ್ಲ, ನೆಲ ಸೇರಿತು. ಅರೇಬಿಕಾ ಕಾಫಿ ಕೊಯ್ಲು ವೇಳೆಯಲ್ಲೇ ಮಳೆ ಸುರಿದದ್ದಕ್ಕೆ ಶೀತವಾಗಲಿಲ್ಲ, ನಷ್ಟದಿಂದ ಕೈ ಸುಟ್ಟು ಹೋಯಿತು. ಹೆಚ್ಚು ಕಾಫಿ ಬೆಳೆಯುವ ಸೋಮವಾರಪೇಟೆಯಲ್ಲಿ ಈಗ ಕಳೆಯೇ ಇಲ್ಲ.
ಕಳೆದ ವರ್ಷಕ್ಕಿಂತ ೭ ಸಾವಿರ ಮೆಟ್ರಿಕ್ ಟನ್‌ಗಳಷ್ಟು ಕಡಿಮೆ ಕಾಫಿ ಉತ್ಪಾದನೆ ಆಗಲಿದೆ ಎಂಬುದು ಭಾರತೀಯ ಕಾಫಿ ಮಂಡಳಿ ಅಂದಾಜು, ಬೆಳೆಗಾರರಿಗೆ ಮಾರಕವಾಗುವಂಥ ಹವಾಮಾನ ವೈಪರೀತ್ಯ ಮುಂದುವರಿದದ್ದಕ್ಕೆ ಇನ್ನಷ್ಟು ಇಳುವರಿ ಕಡಿಮೆಯಾಗುವ ಸಂಭವವೂ ಇದೆ.
ರೋಬಸ್ಟಾ ಇಳುವರಿ ಮೇಲೆ ದೊಡ್ಡ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಿಲ್ಲ ಎಂಬುದೇ ಸಮಾಧಾನ. ಆದರೆ ಭವಿಷ್ಯದ ಇಳುವರಿ ಮೇಲೆ ಈ ವರ್ಷದ ಹವಾಮಾನ ಹೊಡೆತ ನೀಡುವುದು ಖಚಿತ. ವರ್ಷಪೂರ್ತಿ ಮೋಡ ಮುಸುಕಿದ ವಾತಾವರಣ ಮತ್ತು ಆಗಾಗ ಮಳೆ ಸುರಿಯುವುದರಿಂದ ತೋಟ ಒಣಗದು. ಇದರಿಂದ ಮೊಗ್ಗು ಬಿಡುವಲ್ಲಿ ಚಿಗುರು ಮೂಡುತ್ತದೆ. ಇದು ಮುಂದಿನ ವರ್ಷದ ಇಳುವರಿ ಕುಸಿತಕ್ಕೆ ಕಾರಣವಾಗಲಿದೆ.
ಅಷ್ಟಕ್ಕೇ ಮುಗಿಯಲಿಲ್ಲ. ಈ ವಾತಾವರಣ ಗುಣಮಟ್ಟದ ಕಾಫಿ ಉತ್ಪಾದನೆ ಮೇಲೂ ಪರಿಣಾಮ ಬೀರಲಿದೆ. ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಸಾಧ್ಯವಾಗದು. ಇದರಿಂದ ಗುಣಮಟ್ಟ ಕೇಳುವಂತಿಲ್ಲ. ಹಾಗಾಗಿ ವ್ಯಾಪಾರಿ ಗಳು ಮಾರುಕಟ್ಟೆಯಲ್ಲಿ ಉತ್ತಮ ದರವಿದ್ದರೂ ಬೆಳಗಾರರ ಬೆಳೆಗೆ ಏನಾದರೂ ಕೊಂಕು ಹೇಳಿ ಕೈ ಕೊಡುತ್ತಾರೆ.
ಅರೇಬಿಕಾ ಮತ್ತು ರೋಬಸ್ಟಾ ಎರಡು ಕಾಫಿಗಳಿಗೂ ಕಳೆದ ಹಲವು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ದರ. ೫೦ ಕೆ.ಜಿ. ಚೀಲ (ಚೆರಿ) ಕ್ಕೆ ಪ್ರಸ್ತುತ ಅರೇಬಿಕಾ- ೪,೨೦೦ ರೂ. ಹಾಗೂ ರೋಬಸ್ಟಾ- ೨,೩೫೦ ರೂ. ಸಿಗುತ್ತದೆ. ಇದು ಒಳ್ಳೆಯ ಧಾರಣೆ.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)